ಭಾನುವಾರ, ಡಿಸೆಂಬರ್ 18, 2011

ಹೊಸ ವರುಷ ಅಂದರೇ...

ಒಂದು ಸಂವತ್ಸರ ಎಂದರೇನು ಅಂತಾ ಒಂದು ವರ್ಷ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಯನ್ನು ಕೇಳಬೇಕಂತೆ. ಅವನ ಕಠಿಣ ಪ್ರರಿಶ್ರಮದ ವಿದ್ಯಾಭ್ಯಾಸವೇ ವರುಷದ ಕೊನೆಯಲ್ಲಿ ಬರುವ ಪರೀಕ್ಷೆಯ ಪಲಿತಾಂಶವನ್ನು ಪ್ರತಿಪಲಿಸುತ್ತದೆ. ಮುನ್ನೂರು ಅರವತೈದು ದಿನಗಳನ್ನು ವ್ರತದಂತೆ ಕಳೆದವರು ನಮ್ಮ ಸುತ್ತ ಮುತ್ತಲಲ್ಲಿ ಬಹಳಷ್ಟು ಜನಗಳ ಸಿಗಬಹುದು.

ಒಬ್ಬೊಬ್ಬರೂ ಒಂದೊಂದು ರೀತಿಯಲ್ಲಿ ದಿನಗಳನ್ನು, ತಿಂಗಳುಗಳನ್ನು ದೂಡುತ್ತಿರುತ್ತರೆ. ದೂಡುವುದೇನೂ ಏನು ಮಾಡದಿದ್ದರೂ ಕಾಲಾಯ ತಸ್ಮಯಾ ನಮಾಃ ಎಂಬ ರೀತಿಯಲ್ಲಿ ಬೆಳಗಾಗುವುದು, ರಾತ್ರಿಯಾಗುವುದು ಗೊತ್ತಾಗದ ರೀತಿಯಲ್ಲಿ ಎಷ್ಟೊಂದು ವೇಗವಾಗಿ ದಿನಗಳು ಕಳೆದು ಪುನಃ ಹೊಸ ವರುಷದ ಹೊಸ್ತಿನಲ್ಲಿ ಬಂದು ನಿಂತಿರುತ್ತೇವೆ.

ವರುಷದ ಕೊನೆಯಲ್ಲಿ ಬಂದು ನಿಂತು ಹಿಂತಿರುಗಿ ನೋಡಿದಾಗ ನಾವುಗಳು ಒಂದು ವರುಷದಲ್ಲಿ ಏನೇನು ಮಾಡಿದೇವು, ಏನೇನು ನೋವು, ಸುಖದ, ಸಂತೋಷದ ಕ್ಷಣಗಳನ್ನು ಅನುಭವಿಸಿದೆವು. ಎಷ್ಟು ಎಷ್ಟು ಗಳಿಸಿದೆವು ಸಂಪತ್ತನ್ನು, ಗೆಳೆತನವನ್ನು, ಙ್ಞಾನವನ್ನು, ಒಳ್ಳೆತನವನ್ನು, ತಿಳುವಳಿಕೆಯನ್ನು, ಸಹಕಾರವನ್ನು ಇತ್ಯಾದಿ ಸಕರಾತ್ಮಕ ವಿಷಯಗಳ ಪಟ್ಟಿಯನ್ನು ಹಾಗೆಯೇ ನಮ್ಮ ಕಣ್ಣ ಮುಂದೆ ತಂದು ನೋಡಬಹುದು.

ಹಾಗೆಯೇ ವೃಥಾ ಕಾಲಹರಣವನ್ನು ಮಾಡಿದ ನೇಗೆಟಿವ್ ಅಂಶಗಳನ್ನು ನಮ್ಮ ನಮ್ಮಲ್ಲಿ ಕಾಣಬಹುದು. ಎಷ್ಟನ್ನು ನಷ್ಟ ಮಾಡಿಕೊಂಡೇವು ಎಂಬುದನ್ನು ಅದೇ ಪುನಃ ಸಂಪತ್ತು, ಗೆಳೆತನ, ಮೋಸ, ಸುಳ್ಳು, ಅವಮಾನ.. ಇತ್ಯಾದಿ. ಆದರೇ ನಮಗೆ ನಾವುಗಳು ಅನುಭವಿಸಿದ ನೋವು, ದುಃಖದ ಕ್ಷಣಗಳ ನೆನಪು ಖಾತ್ರಿಯಾಗಿ ನೆನಪಿನಲ್ಲಿ ಇರುತ್ತೇವೆ. ಅದೇ ನಾವುಗಳು ನಮಗೆ ತಿಳಿಯದೇ ಬೇಕಂತಲೇ ಬೇರೆಯವರಿಗೆ ಮಾಡಿದ ಅದೇ ನೋವು,ದುಃಖ ಅಪಕಾರಗಳು ನೆನಪಿನಲ್ಲಿ ಏನಂದರೂ ಇರುವುದಕ್ಕೆ ಸಾಧ್ಯವಿಲ್ಲ. ಅದುವೆ ಮನಸ್ಸಿನ ಮರ್ಮ. ಅದರ ಹೊಣೆ ಅನುಭವಿಸಿದವರಿಗೆ ಮಾತ್ರ!

ವ್ಯಾಪಾರಸ್ಥರುಗಳಿಗೆ ಪ್ರತಿ ವರ್ಷವು ಒಂದೊಂದು ಮೈಲುಗಲ್ಲೆ ಸರಿ. ಇಂದಿನ ವರುಷಕ್ಕಿಂತ ಮುಂದಿನ ವರುಷದಲ್ಲಿ ಹೆಚ್ಚಿನ ದುಡಿಮೆಯನ್ನು ಮಾಡಲು ವಿವಿಧ ಯೋಜನೆಗಳನ್ನು ಹುಟ್ಟಿ ಹಾಕಿಕೊಂಡಿರುತ್ತಾರೆ. ಹಿಂದಿನ ವರುಷದ ಪಾಠಗಳನ್ನು ಗಮನಿಸುತ್ತಾ ಮುಂದಿನ ವ್ಯಾಪಾರವನ್ನು ಜಾಗರೂಕತೆಯಲ್ಲಿ ಹೆಜ್ಜೆ ಇಡುತ್ತಾರೆ.

ಸಾಮಾನ್ಯ ಜನಗಳಿಗೆ ಪ್ರತಿಯೊಂದು ವರುಷವು ಒಂದೇ ಅನಿಸಬಹುದು. ಅದು ಆಯಾ ಆ ವ್ಯಕ್ತಿಗೆ ಸಂಬಂಧಿಸಿದ್ದು. ಅವನು ಹೇಗೆ ಅದನ್ನು ಸ್ವೀಕಾರ ಮಾಡುತ್ತಾನೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.

ಒಬ್ಬೊಬ್ಬರದು ಒಂದೊಂದು ಕನಸಿರುತ್ತದೆ. ಅದರ ಸಾಕಾರಕ್ಕೆ ಮುಂದೆ ಬರುವ ಹೊಸ ಮುನ್ನೂರ ಅರವತೈದು ದಿನಗಳೇ ಆಶಾಕಿರಣ. ಆದರೇ ನಾಳೆ ನಾಳೆ ಎಂದು ಹೇಳಿಕೊಂಡು ತನ್ನ ಹೊಣೆಯನ್ನು ಮುಂದೂಡಿಕೊಂಡರೇ ಆ ದೇವರು ಸಹಾಯ ಮಾಡಲಾರ. ಆದರೇ ನಮ್ಮ ಈ ಮನಸ್ಸಿಗೆ ನಾಳೆ ಅಂದರೇ ಅದೇನೋ ತುಂಬ ಆಕರ್ಷಣೇ?

ತಿಂಗಳ ಕೆಲಸ ಮಾಡುವ ಮಂದಿಗೆ ಹೊಸ ವರುಷವೆಂದರೇ ಹುದ್ದೆಯಲ್ಲಿ ಪ್ರಮೋಶನ್, ಸಂಬಳ ಬಡ್ತಿಯ ಕನಸು. ಕಳೆದ ವರುಷದಲ್ಲಿ ಅಂದುಕೊಂಡಂತಹ ಯಾವುದೇ ಕಾರ್ಯಗಳು ಕೈಗೆ ಸಿಗದಿದ್ದವುಗಳನ್ನು ಮುಂದಿನ ವರುಷದಲ್ಲಿ ದಕ್ಕಿಸಿಕೊಳ್ಳಬೇಕು ಎಂಬ ನಿರ್ಧಾರದ ಮನಸ್ಸು!

ರಾಜಕೀಯದಲ್ಲಿ ಇರುವವರಿಗೆ..ಓ ಚುನಾವಣೆಯ ದಿನಗಳು ಹತ್ತಿರ ಬರುತ್ತಿವೆ ಮತ್ತೇ ಜನಗಳ ಮುಂದೆ ಹೋಗಿ ಮತ ಕೇಳಬೇಕಲ್ಲಪ್ಪಾ ಎಂಬ ಭಯ.. ಯಾಕಾದರೂ ಈ ವರುಷಗಳು ಕಳೆದು ಐದು ವರುಷಗಳಾಗುತ್ತಾವೋ ಎಂಬ ಭಯ! ಅವರುಗಳ ಕೈಯಲ್ಲಿ ಏನಾದರೂ ಈ ವರುಷದ ಚಕ್ರ ಇದ್ದಿದ್ದರೆ ಏನೇನು ಅನಾಹುತ ಮಾಡಿಬಿಟ್ಟಿರುವರೇನೋ?

ನಟ, ನಟಿಯರುಗಳಿಗೆ ಹೊಸ ವರುಷ ಅಂದರೇ ಭಯವಂತೂ ಇರಬಹುದು...ಯಾಕೆಂದರೇ ಒಂದು ವರುಷ ದೊಡ್ಡವರಾಗುತ್ತಾರೆ.. ವಯಸ್ಸಾದಷ್ಟು ಬೇಡಿಕೆ ಕಡಿಮೆ ಎಂಬ ಭಾವನೆ ಬಂದರೂ ಬರಬಹುದೇನೋ.. ಅವರ ಮಾರ್ಕೇಟ್ ಎಲ್ಲಿ ಬಿದ್ದು ಹೋಗುತ್ತೋ ಮುಂದಿನ ವರುಷದಲ್ಲಿ ಎಲ್ಲಿಂದ ಹೊಸಬರ ಎಂಟ್ರೀ ಸಿಕ್ಕಿ ನಮ್ಮನ್ನು ಕೇಳದಂತಾಗುತ್ತೋ? ಎಂದು.




ಹೀಗೆ ಪ್ರತಿಯೊಂದು ರಂಗದಲ್ಲಿರುವವರ ಮಂಡಿಯನ್ನು ಹೊಸದಿನಗಳು, ತಿಂಗಳುಗಳು ಮತ್ತು ವರುಷಗಳು ತಿಂದಿರುತ್ತಲೇ ಇರುತ್ತವೆ.

ದಿನಗಳು ಯಾವುದೋ ಮಾಯದಲ್ಲಿ ಉರುಳುತ್ತಲೇ ಇರುತ್ತವೆ. ಅದರೇ ಅವುಗಳನ್ನು ಹೇಗೆ ಗಟ್ಟಿಯಾಗಿ ಉಪಯೋಗಿಸಿಕೊಳ್ಳುತ್ತೇವೆ ಎಂಬುದರ ಮೇಲೆ ನಮ್ಮೆಲ್ಲಾರ ಏಳ್ಗೆ ಮತ್ತು ಉನ್ನತಿ ಅವಲಂಬಿಸಿರುತ್ತದೆ.

ಸಮಯ, ದಿನ, ತಿಂಗಳು ಮತ್ತು ವರುಷಗಳು ಮಾತ್ರ ಅನಿಸುತ್ತದೆ ಪ್ರತಿಯೊಬ್ಬರಿಗೂ ಯಾವುದೇ ತಾರತಮ್ಯವಿಲ್ಲದೇ ಸರಿಸಮನಾಗಿ ಕೈಗೆ ಸಿಗುವುದು ಮತ್ತು ಪಡೆಯುವುದು. ಕಾಲ ಮಾತ್ರ ಯಾರನ್ನೂ ಎಂದೂ ಬೇದ ಭಾವದಿಂದ ಕಂಡ ಉದಾಹರಣೆಗಳು ನಮ್ಮ ಮುಂದೆ ಇಲ್ಲ.

ಸಮಯದ ಮಹತ್ವವೆನ್ನುವುದು ಸಾಧಕರಿಗೆ ಮಾತ್ರ ಗೊತ್ತು ಎಂದು ತಿಳಿದವರು ಹೇಳುತ್ತಿರುತ್ತಾರೆ. ಅವರಿಗೆ ಪ್ರತಿ ನಿಮಿಷವು ಫಲವತ್ತಾಗಿರುವಂತಹದ್ದು.

ಕಾಲ ಕೆಟ್ಟು ಹೋಯ್ತು ಅನ್ನುತ್ತೇವೆ. ಆದರೆ ಕಾಲ ಯಾವಾಗಲೂ ಒಂದೇ ಜನಗಳು ಬದಲಾಗಿರುವುದು.

ವರುಷ ವರುಷಕ್ಕೂ ವಿಪರೀತವಾದ ಬದಲಾವಣೆಗಳನ್ನು ಜನ ಜನರ ಮಧ್ಯೆ ಕಾಣಬಹುದಾಗಿದೆ. ಮುಂದುವರಿದ ಈ ದಿನಮಾನಗಳಲ್ಲಿ ಎಲ್ಲದಕ್ಕಿಂತ ಸಮಯಕ್ಕೆ ಬಹು ಮುಖ್ಯ ಬೆಲೆ ಬಂದಿದೆ. ಪ್ರತಿಯೊಬ್ಬರೂ ವೇಗವಾದ ಜೀವನವನ್ನು ನಡೆಸುತ್ತಿದ್ದರೆ. ಬೆರಳ ತುದಿಯಲ್ಲಿ ಜಗತ್ತನ್ನು ಕಾಣುವಂತಾಗಿದೆ.

ಮಾನವನ ಮಾನವರ ನಡುವಿನ ಜೀವಂತ ಜೀವ ಸೆಲೆ ಬತ್ತಿಹೋದಂತಾಗಿದೆ. ಅಲ್ಲಿ ಇರುವುದೇಲ್ಲಾ ಕೇವಲ ಹಳೆಯ ಕಲೆ ಮಾತ್ರ. ಇದು ಹೀಗೆ ಬಿಟ್ಟರೆ ಮನುಷ್ಯ ಮತ್ತು ನಾವು ಉಪಯೋಗಿಸುತ್ತಿರುವ ಈ ಎಲೆಕ್ಟ್ರಾನಿಕ್ಸ್ ವಸ್ತುಗಳಿಗೆ ಇರುವಂತಹ ವ್ಯತ್ಯಾಸ ಏನೂ ಇಲ್ಲಾ ಎನ್ನುವಂತಾಗುತ್ತದೆ.

ಗಮನಿಸಿ ಇಂದು ಪ್ರತಿಯೊಬ್ಬ ಮನುಷ್ಯ ತನ್ನ ಅತಿ ಮುಖ್ಯ ಓಡನಾಡಿಯಾಗಿ ಕೈಯಲ್ಲಿ ಸೇಲ್, ಕಿವಿಯಲ್ಲಿ ಈಯರ್ ಫೋನ್, ಬಾಯಲ್ಲಿ ಮೈಕ್ರೋ ಫೋನ್ ಕಣ್ಣಲ್ಲಿ ಟಚ್ ಸ್ಕ್ರೀನ್ ಜೊತೆಯಲ್ಲಿ ಸವಿಯಾಗಿ ಕಳೆಯುತ್ತಾನೆ.

ಇಂದು ನಿಧಾನ ಎಂಬುದೇ ಅರ್ಥವನ್ನು ಕಳೆದುಕೊಳ್ಳುತ್ತಿದೆ. ಪ್ರತಿಯೊಂದು ಪಾಸ್ಟ್, ಜಗತ್ತೇ ವೇಗದ ಜೊತೆಗೆ ಪೂರ್ಣವಾಗಿ ಸಮಾಗಮವಾಗಿಬಿಟ್ಟಿದೆ... ದೇವರೇ!

ಇದು ಎಷ್ಟರ ಮಟ್ಟಿಗೆ ಮಾರ್ಪಾಡಾಗಿ ಮುಂದುವರಿಯುತ್ತಿದೆ ಅಂದರೇ ಇಂದು ಇದ್ದುದ್ದೂ ಮುಂದೆ ಇಲ್ಲದಾಗುತ್ತಿದೆ. ಕಾಲದ ಜೊತೆಯಲ್ಲಿ ಇದರ ನಡೆ ಉಹಿಸಲು ಅಸಾಧ್ಯವಾದ ರೀತಿಯಲ್ಲಿ ದಾಪುಗಾಲು ಇಡುತ್ತಿದೆ.

ಇದಕ್ಕೆ ಕಡಿವಾಣ ನಮ್ಮ ನಿಮ್ಮಗಳ ಕೈಯಲ್ಲಿ ಮಾತ್ರ ಇದೆ.

ಬುಧವಾರ, ಡಿಸೆಂಬರ್ 14, 2011

ಕಷ್ಟಗಳನ್ನು ಹೀರಿಕೊಂಡು ಬದುಕುವ ಚೈತನ್ಯ

ಪೇಸ್ ಬುಕ್ ನಲ್ಲಿ ನಾನು ಒಂದು ಸುಂದರವಾದ ಸಂದೇಶವನ್ನು ಓದಿದೆ "ಯಶಸ್ಸು ತಲೆಗೆ ಏರಬಾರದು, ಸೋಲನ್ನು ಹೃದಯಕ್ಕೆ ತೆಗೆದುಕೊಳ್ಳಬಾರದು".

ಹೌದು ನಮಗೆ ಗೊತ್ತಿಲ್ಲದೆ ಏನಾದರೊಂದು ನೋವು, ಅವಮಾನ, ಸೋಲು, ದುಃಖ, ಪ್ರೀತಿಪಟ್ಟದ್ದನ್ನು/ಪಟ್ಟವರನ್ನು ಕಳೆದುಕೊಳ್ಳುವುದು ನಮ್ಮ ಮನಸ್ಸನ್ನು ತುಂಬ ಚಿಕ್ಕದಾಗಿ ಮಾಡಿ ಬರಿಸಲಾರದ ನೋವನ್ನುಂಟು ಮಾಡುತ್ತದೆ. ಇದು ಸರ್ವೇಸಾಮಾನ್ಯವಾದ ಸಂಗತಿಯಾಗಿದೆ.

ಮನುಷ್ಯನಿಗೆ ಮಾತ್ರ ಈ ರೀತಿಯ ಭಾವನೆಗಳಾಗುತ್ತವೆ ಅನಿಸುತ್ತದೆ. ಪ್ರಾಣಿಗಳಿಗೂ ಸಹ ಈ ರೀತಿಯ ಅನುಭವವುಂಟಾಗುತ್ತಿರುತ್ತದೆ, ಆದರೇ ಅವುಗಳು ಎಲ್ಲಿ ವ್ಯಕ್ತಪಡಿಸಬೇಕು. ಕಣ್ಣಿನಲ್ಲಿ ಒಂದು ಹನಿ ನೀರು ಒರಸಬಹುದೇನೋ ಅದು ಪ್ರಾಣಿಗಳ ಪ್ರಪಂಚ. ಆದರೆ ನಿಜವಾಗಿಯೋ ಅವುಗಳಿಗೂ ಈ ನೋವಿನ ಅನುಭವ ಆಗೇ ಆಗಿರುತ್ತದೆ.

ನಮಗೆ ಬಾಲ್ಯದಿಂದ ಒಂದು ಕಲ್ಪನೆಯಿರುತ್ತದೆ. ಯಾವೊಂದು ಕಷ್ಟದ ಬದುಕು ಬೇಡದ ಮನಸ್ಸು. ಕಷ್ಟ ಅಂದರೇ ಮಾರು ದೂರ ಓಡಿ ಹೋಗುವ ಮನಸ್ಸು. ಸುಖ ಎಂದರೇ ಕೇಳುವುದೇ ಬೇಡ ಮನತುಂಬ ಸಂಭ್ರಮವೇ ಸಂಭ್ರಮ ಅದೇ ಬದುಕು.

ನಮ್ಮ ಹೆತ್ತವರು ಸಹ ಅದೇ ರೀತಿಯಲ್ಲಿ ತಮ್ಮ ಮಕ್ಕಳನ್ನು ಬೆಳಸಿ ಪೋಷಿಸುತ್ತಾರೆ. ತಾವು ಅನುಭವಿಸಿದ ಯಾವುದೇ ಕಷ್ಟ ಕಾರ್ಪಣ್ಯಗಳು ತನ್ನ ಮಗ/ಮಗಳು ಎಂದು ಅನುಭವಿಸುವುದು ಬೇಡ ಎಂದು. ಆದಷ್ಟು ಹೆಚ್ಚು ಸುಖವಾಗಿ ಬೆಳಸುವ ಆಕಾಂಕ್ಷೆ. ಅದು ಹೆತ್ತವರ ಕರುಳಿನ ಪ್ರೀತಿಯ ಕನವರಿಕೆ.

ಹಸಿವಿನ ಅನುಭವವಾದರೇ ತಾನೇ ಅನ್ನದ ರುಚಿ ಗೊತ್ತಾಗುವುದು.ಕಷ್ಟಪಟ್ಟರೇ ತಾನೇ ಸುಖದ ಮಹತ್ವ ಗೊತ್ತಾಗುವುದು.

ಆದರ ಅನುಭವವಕ್ಕೆ ಅಸ್ಪದ ಕೊಡದ ರೀತಿಯಲ್ಲಿ ನಮ್ಮ ಹೆತ್ತವರು ನಮ್ಮನ್ನು ಸಾಕುತ್ತಾರೆ. ಬರೀ ಸುಖದ ಕತೆಗಳನ್ನು ಹೇಳುತ್ತಾರೆ. ನೀನು ಹಾಗೇ ಓದಿದರೇ ಹೀಗೆ ಇರಬಹುದು.. ಅವನಂತೆ ನೀವು ಹಣ ಸಂಪಾದಿಸಬಹುದು.. ಅವನಂತೆ ಮಜಾ ಉಡಾಯಿಸಬಹುದು.... ಇದೆ ನಿತ್ಯ ಕತೆ.

ಕಷ್ಟಪಟ್ಟು ಜೀವನದಲ್ಲಿ ನರಳುವವರ ಮತ್ತು ಅದನ್ನು ದಾಟಿ ಉನ್ನತವಾದ ಸಾಧನೆಯನ್ನು ಮಾಡಿರುವವರ ಕಥೆಗಳನ್ನು ಕಿವಿಗೂ ಸಹ ಹಾಕಲು ಮನಸ್ಸು ಮಾಡುವುದಿಲ್ಲ.

ಒಂದು ಸುಂದರ ಆಶಾ ಗೋಪುರದಲ್ಲಿ ಇಂದಿನ ಪೀಳಿಗೆಯನ್ನು ಇಟ್ಟುಬಿಡುತ್ತಾರೆ ಅನಿಸುತ್ತದೆ. ಯಾವುದಕ್ಕೂ ಕೂರತೆಯಿಲ್ಲದ ಜೀವನ. ವಿದ್ಯಾರ್ಥಿ ಜೀವನ ಎಂದರೇ ಅಕ್ಷರಶಃ ಚಿನ್ನದ ಜೀವನವಾಗಿ ಪರಿವರ್ತಿಸಿರುತ್ತಾರೆ. ಮಗುವಿಗೆ ಕಷ್ಟ ಎಂದರೇ ಅದರ ಹೋಂ ವರ್ಕ್, ಪರೀಕ್ಷೆ, ನೋಟ್ಸ್ ಬರೆಯುವುದು, ಸರಿಯಾದ ಸಮಯಕ್ಕೆ ಶಾಲೆಗೆ ಹೋಗುವುದು.. ಇತ್ಯಾದಿ ಮಾತ್ರ. ಇದನ್ನು ಬಿಟ್ಟು ಬೇರೆ ಬದುಕು ಇಲ್ಲವೆಂಬಂತೆ ಮಾಡಿಬಿಡುತ್ತೇವೆನೋ ಅಲ್ಲವಾ?

ನಾವುಗಳು ಆ ವಯಸ್ಸಿನಲ್ಲಿ ಯಾವುದನ್ನು ಮನಸ್ಸಿಗೆ ಹಚ್ಚಿಕೊಳ್ಳದಂತಹ ಬದುಕು. ಏನಕ್ಕೂ ಕೊರತೆಯಿಲ್ಲದಂತಹದು.. ಇದೇ ನಮ್ಮ ಜೀವನ ಅನಿಸುತ್ತದೆ. ಆದರೇ ಇನ್ನೂಂದು ಮಗ್ಗುಲಿನ ನಮ್ಮ ಜೊತೆಯಲ್ಲಿಯೇ ಇರುವ ನಿಕೃಷ್ಟವಾದ ಪ್ರಪಂಚವನ್ನು ಕಾಣದವಾಗಿರುತ್ತೇವೆ.




ನಮ್ಮ ಎಲ್ಲಾ ಶಿಕ್ಷಣದ ಬದುಕನ್ನು ಪೂರ್ತಿ ಮಾಡಿ ದುಡಿಮೆಯ ರಂಗಕ್ಕೆ ಬಂದಾಗ ನೋಡಿ, ಒಂದು ಅರ್ಧ ನಿಜವಾದ ಜೀವನವನ್ನು ಮನುಷ್ಯ ನೋಡಲು ಶುರುಮಾಡುತ್ತಾನೆ. ಅಲ್ಲಿಯು ಸಹ ಅವನಿಗೆ ಅವನ ಹಿಂದಿನ ಹೆತ್ತವರು ಕೊಟ್ಟಂತಹ ಸೇಫ್ ಜೋನ್ ಪರಿಧಿಗೆ ಹೋಗಲು ಯಾವಾಗಲೂ ತವಕಿಸುತ್ತಾನೆ. ಅದೇ ಮನುಷ್ಯನ ಮನಸ್ಸು ಮತ್ತು ಹೃದಯ ಅಲ್ಲವಾ.. ತಾನು ಕಲಿತ ಮತ್ತು ಅನುಭವಿಸಿದ ೨೦ ವರ್ಷದ ಸುಖದ ಯಾವುದೇ ಅಪಮಾನ, ನೋವು, ಸೋಲುಗಳ ಕನಸು ಸಹ ಇಲ್ಲದ ಜೀವನ ಗಾಥೆಯೇ ಪುನಃ ಪುನಃ ನೆನಪಾಗುತ್ತಿರುತ್ತದೆ.

ಒಂದು ಚಿಕ್ಕ ಸೋಲು ನಮ್ಮನ್ನು ದಿಗ್ಬ್ರಮೆಗೆ ದೂಡುತ್ತದೆ. ಯಾರೊಬ್ಬರ ಒಂದು ಮಾತು ನಮ್ಮನ್ನು ನಿಷ್ಠುರನ್ನಾಗಿ ಮಾಡುತ್ತದೆ. ನಮ್ಮ ಅಹಂಗೆ ಪೆಟ್ಟು ಕೊಡುತ್ತದೆ. ಆಗಲೇ ಏನೇನೂ ಯೋಚನೆಗಳು ಮನದ ಮೊಲೆಯಿಂದ ಪ್ರದರ್ಶನಗೊಳ್ಳುತ್ತವೆ.

ಐಯಮ್ ರೀಯಲೀ ಡಿಸ್ಟರ್ಬ್ಡ್!

ಟೋಟಲಿ ಡಿಪ್ರೇಸ್ಡ್!

ಪುಲ್ ಪರ್ಸ್ ನಲ್ ಪ್ರಾಬ್ಲಮ್!

ಹೀಗೆ ನಮ್ಮ ಬಾಯಿಂದ ನಿತ್ಯ ಬರಲು ಶುರುವಾಗುತ್ತವೆ... ಇದಕ್ಕೆಲ್ಲಾ ಕಾರಣ ಗೊತ್ತಿರುವ ವಿಚಾರವೇ..

ಮನುಷ್ಯ ಯಾವಾಗಲೂ ಯಶಸ್ಸಿನಲ್ಲಿಯೇ ತೇಲುತ್ತಿರುವಾಗ ನೋವಿನ,ಸೋಲಿನ ಜಳವನ್ನು ಹೇಗೆ ತಡೆದುಕೊಳ್ಳಬೇಕು ಎಂಬುದೇ ಗೊತ್ತಾಗದಂತಾಗಿರುತ್ತದೆ. ಅದರೇ ಅದೇ ನಿಜವಾದ ಜೀವನ ಅಲ್ಲಿ ನಮ್ಮ ಜೊತೆ ನಮ್ಮ ಹೆತ್ತವರುಗಳು ಇರುವುದಿಲ್ಲ.. ಆ ಸುಖವದ ಮನೆಯ ಬೆಚ್ಚನೆಯ ಅಸರೆಯಿರುವುದಿಲ್ಲ.

ಹೊರಗಡೆಯ ಈ ಕೆಟ್ಟ ಪ್ರಪಂಚದಲ್ಲಿ ನಾವುಗಳು ಸಹ ಸತ್ಯಸಂಧರಾಗಿ ಬದುಕಬಹುದೇ ಎಂಬ ಒಂದು ದೊಡ್ಡ ಪ್ರಶ್ನೇ ದುತ್ತನೆ ನಿಂತುಬಿಡುತ್ತದೆ. ಇದು ಯಾಕೆ ನನಗೆ ಮಾತ್ರ ಎಂಬ ನಿರಾಸೆಯ ಕೂಗು ಮನದಲ್ಲಿ ಮೂಡುತ್ತದೆ.

ಆದರೇ ಇದು ಪ್ರತಿಯೊಬ್ಬರಿಗೂ ಬರುವಂತಹ ಸಾಮಾನ್ಯ ಅಡ್ಡಿ ಅಡಚಣೆಗಳು. ಕೇಲವರು ತುಂಬ ಸಲಿಸಾಗಿ ಅವುಗಳನ್ನು ದಾಟುತ್ತಾರೆ. ಗೊತ್ತಿಲ್ಲದವರು ಅದರಲ್ಲಿಯೇ ನರಳುತ್ತಾ ತಮ್ಮ ಅದೃಷ್ಟ, ಅಸರೆಗಾಗಿ ಒಂದು ದಿಕ್ಕಿಗೆ ದೃಷ್ಟಿ ಹರಿಸುತ್ತಾರೆ.

ನೋಡಿ ನಮ್ಮ ಈ ನಗರದಲ್ಲಿ ಯಾವುದೇ ಪತ್ರಿಕೆಯ ಎರಡನೇಯ ಮತ್ತು ಮೂರನೇಯ ಪುಟವನ್ನು ತಿರುವಿದರೇ.. ಎಷ್ಟೋ ಯುವ ಜೀವಗಳು ನಿತ್ಯ ಆತ್ಮಹತ್ಯೆಗೆ ತುತ್ತಾದ.. ನಿತ್ಯ ಅಸ್ವಭಾವಿಕವಾದ ಅವಘಡಗಳು. ಈ ಮುಂದುವರಿದ ಎಲ್ಲಾ ರೀತಿಯ ಸೌಕರ್ಯವಿರುವ ಹೈಟೆಕ್ ಪಟ್ಟಣದ ಈ ನಿತ್ಯ ಸ್ಮಶಾನ ವಾರ್ತೆಗಳು ಯಾಕೆ.. ?

ನನಗೆ ಅನಿಸುತ್ತದೆ ನಾವುಗಳು ಕಲಿಯುವ ಬಾಲ್ಯದ ದಿನಗಳ ಶಿಕ್ಷಣ ವ್ಯವಸ್ಥೆಯಲ್ಲಿ ಇವುಗಳ ಬಗ್ಗೆ ನಿಜವಾದ ಜೀವನದ ಪಾಠಗಳನ್ನು ತಿಳಿಪಡಿಸುವ ಅವಶ್ಯಕತೆ ಇಂದು ಹೆಚ್ಚಾಗಿದೆ ಅನಿಸುತ್ತದೆ. ಪ್ರತಿಯೊಬ್ಬರನ್ನು ವ್ಯಕ್ತಿತ್ವವನ್ನು ದಿಟ್ಟವಾಗಿ ದೃಢವಾಗಿ ಬೆಳಸುವಂತಹ ಪಾಠ ಬೇಕಾಗಿದೆ. ಪ್ರತಿಯೊಂದು ಚಿಕ್ಕ ಚಿಕ್ಕ ನೋವು, ಅವಮಾನಗಳನ್ನು ಸೈರಿಸಿ ಮನುಷ್ಯನ ಮನಸ್ಸನ್ನು ಗಟ್ಟಿ ಮಾಡುವ ನೀತಿ ಪಾಠಗಳು ನಮಗೆ ಬೇಕಾಗಿದೆ ಅನಿಸುತ್ತದೆ.

"ಸೋಲು ಗೆಲುವಿಗೆ ಸೋಪಾನ" ಎಂಬ ಗಾದೆಯ ಮಾತನ್ನು ಪ್ರತಿಯೊಬ್ಬರು ನಂಬುವಂತಹ ಸಮಾಜವನ್ನು ಕಟ್ಟುವ ಕೆಲಸವನ್ನು ಪ್ರತಿಯೊಬ್ಬರೂ ಮಾಡಬೇಕಾಗಿದೆ. ಬರೀ ಹಣವೊಂದನ್ನೇ ಸಂಪಾದಿಸುವುದೇ ಜೀವನವಲ್ಲ ಎಂಬುದು ಪ್ರತಿಯೊಬ್ಬರಿಗೂ ತಿಳಿಯಬೇಕಾಗಿದೆ.

ಮನುಷ್ಯ ಭಾವನಾತ್ಮಕ ಜೀವಿ.. ಅದಕ್ಕೆ ಹಣ, ವಸ್ತುಗಳ ಸೌಕರ್ಯಕ್ಕಿಂತಹ ವ್ಯಕ್ತಿ ವ್ಯಕ್ತಿ ಸಂಬಂಧಗಳ ಸಹ ಬಾಳ್ವೆ ಮತ್ತು ಅಸರೆಯ ಸುಂದರ ಕೈ ಬೇಕು.. ಆಗ ಆ ಮನಗಳ ಬಾಳ್ವೆ, ಬದುಕು ಕಷ್ಟಗಳನ್ನು ಹೀರಿಕೊಂಡು ಬದುಕುವ ಚೈತನ್ಯ ಪ್ರತಿಯೊಬ್ಬರದಾಗುತ್ತದೆ..

ಅಲ್ಲವಾ?

ಗುರುವಾರ, ಡಿಸೆಂಬರ್ 8, 2011

ಕೇಳುವವರು ಯಾರೂ..

ಮಾಗಿಯ ಕಾಲ ಅಂದರೇ ಇದೇ ಅನ್ನುವ ರೀತಿಯಲ್ಲಿ ಬೆಂಗಳೂರಿನ ಕೊರೆಯುವ ಚಳಿ ಮೈ ಮನಸ್ಸನ್ನೇಲ್ಲಾ ಬೆಚ್ಚಗೆ ಇಟ್ಟುಕೊಳ್ಳುವಂತೆ ಪ್ರೇರಪಿಸುತ್ತಿದೆ.

ಮುಂಜಾನೆ ಎದ್ದೇಳುವ ಸಮಯವನ್ನು ಏರುಪೇರು ಮಾಡುತ್ತಿದೆ. ಎದ್ದೇಳಲು ಮನಸ್ಸೇ ಬರುವುದಿಲ್ಲ. ಬೆಚ್ಚಗೆ ಮುಖ ತುಂಬ ಹೊದ್ದುಕೊಂಡು ಮಲಗೋಣ ಅನಿಸುತ್ತದೆ.

ಆದರೂ ಕೆಲಸ ಕಾರ್ಯ ಅಂತ ಎದ್ದೇಳಲೇ ಬೇಕು ನಮ್ಮ ಬದುಕು ಜಟಕಾ ಬಂಡಿಯನ್ನು ನೆಡಸಲೇ ಬೇಕು. ಇದು ಹೊಟ್ಟೆಪಾಡು ಏನು ಮಾಡಬೇಕು ಅಲ್ಲವಾ?

ವರ್ಷವೀಡಿ ಕರ್ನಾಟಕದಲ್ಲಿ ಎಲ್ಲೂ ಮಳೆಯಾಗದಿದ್ದರೂ ನಮ್ಮ ಬೆಂಗಳೂರಿನಲ್ಲಿ ಮಾತ್ರ ನಿತ್ಯ ಮಳೆಯಾಗಿ ಜನರ ಮನ ಮತ್ತು ಭೂಮಿಯನ್ನು ತಂಪು ಮಾಡಿರುತ್ತದೆ.. ಅದರ ಮುಂದುವರಿಕೆಯೇನೋ ಎಂಬ ರೀತಿಯಲ್ಲಿ ಡಿಸೆಂಬರ್ ಚಳಿಯು ಜನರನ್ನು ಎಚ್ಚರಿಸುತ್ತದೆ.

ಈ ಬದಲಾದ ಏರುಪೇರಾದ ಹವಮಾನದಿಂದ ನೆಗಡಿ, ತಲೆನೋವು, ಶೀತ ಮುಂತಾದ ಚಿಕ್ಕ ಪುಟ್ಟ ಕಾಯಿಲೆಗಳನ್ನು ಸಾಮಾನ್ಯವಾಗಿ ಎರಡು ದಿನಗಳಾದರೂ ಅನುಭವಿಸಬೇಕಾಗುತ್ತದೆ ನಗರದ ಮಂದಿ.

ಇಂಥ ಚಿಕ್ಕ ಕಾಯಿಲೆಗಳು ನಮ್ಮ ದೇಹದ ಪುನರ್ ನವೀಕರಣಕ್ಕೆ ಬೇಕೇನೋ.. ಯಾಕೆಂದರೇ ವರ್ಷವೀಡಿ ದುಡಿ ದುಡಿ ಎಂಬ ನಿತ್ಯ ಕಾಯಕದಲ್ಲಿ ನಿರತನಾದ ಮನುಷ್ಯನಿಗೆ ಒಂದಷ್ಟು ದಿನ ರೇಸ್ಟ್ ಮತ್ತು ರೀ ಎನರ್ಜಿಗೆ ಏರಲು ಸಹಾಯಕವಾಗುತ್ತದೆ.

ಇನ್ನೂ ಏನೂ ಕೇವಲ ೨೩ ದಿನಗಳು ಬಾಕಿ ಇವೆ ೨೦೧೧ ವರ್ಷಕ್ಕೆ ಗುಡ್ ಬಾಯ್ ಹೇಳಲು..

ನಿಜವಾಗಿಯೂ ಆಶ್ಚರ್ಯವಾಗುತ್ತದೆ.. ದಿನಗಳು ಎಷ್ಟೊಂದು ವೇಗವಾಗಿ ಇತಿಹಾಸವನ್ನು ಸೇರುತ್ತವೆ ಎಂದು. ಮನ್ನೆ ಮನ್ನೆ ಹೊಸ ವರ್ಷವನ್ನು ಆಚರಿಸಿದೆವು ಅನಿಸುತ್ತಿದೆ... ಆದರೇ ಕಾಲವನ್ನು ತಡೆಯುವವರು ಯಾರು ಇಲ್ಲ ಅಲ್ಲವಾ? ನಾವುಗಳು ನಮ್ಮ ನಮ್ಮ ಪಾಡಿಗೆ ಕಾಲಕ್ಕೆ ಹೊಂದಿಕೊಂಡು ಮುಂದುವರೆಯಬೇಕು. ಅದೇ ಬದುಕು.




ಈಗಾಗಲೇ ನಮ್ಮ ಬೆಂಗಳೂರು ಮೆಟ್ರೋ ಹೈಟೆಕ್ ಮಂದಿ ಹೊಸ ವರ್ಷದ ಡ್ಯಾಷಿಂಗ್ ಸೇಲಬ್ರೇಷನ್ ಗೆ ಅಲ್ಲಿ ಇಲ್ಲಿ ಹೋಟೆಲ್, ರೇಸಾರ್ಟ್, ತಿಂಡಿ, ತೀರ್ಥ, ಸ್ನೇಹಿತರುಗಳು ಮಸ್ತಿ ಮುಂತಾದ ಯೋಜನೆಗಳನ್ನು ಹಾಕುತ್ತಿದ್ದಾರೆ. ೩೧ರ ರಾತ್ರಿಯನ್ನು ಅತ್ಯಂತ ಅದ್ಧೂರಿಯಿಂದ ೨೦೧೨ ವರ್ಷವನ್ನು ಸ್ವಾಗತ ಮಾಡಲು ಕಾತುರರಾಗಿದ್ದಾರೆ.

ನಾಳೆಯಿಂದ ೭೮ನೇ ಕನ್ನಡ ಸಾಹಿತ್ಯ ಸಮ್ಮೇಳನ ಗಂಗಾವತಿಯಲ್ಲಿ ಶುರುವಾಗುತ್ತಿದೆ. ಅದರೇ ಇಲ್ಲಿ ಅದರ ಅಬ್ಬರವೇನೂ ಕಾಣಿಸುತ್ತಿಲ್ಲ. ಗಂಗಾವತಿಯಲ್ಲಿ ಇರಬಹುದೇನೋ..? ಸಾಹಿತ್ಯ ಅಭಿಮಾನಿಗಳಲ್ಲಿ ಇರಬಹುದೇನೋ.. ಅದರೇ ಇಲ್ಲಿಯ ಐ.ಟಿ ಬಿ.ಟಿ ಮಂದಿಗೆ ಅದರ ನೆನಪು ಸಹ ಇಲ್ಲ. ಅದು ಒಂದು ಕೇವಲ ಸುದ್ಧಿಯ ವರದಿಯಾಗಿ ಪತ್ರಿಕೆ ಮತ್ತು ಟಿ.ವಿ ನ್ಯೂಸ್ ನಲ್ಲಿ ನೋಡುತ್ತಾರೇನೋ..

ಎಷ್ಟೊಂದು ವಿಪರ್ಯಾಸ ಅಲ್ಲವಾ? ಸ್ಥಳಕ್ಕೆ ತಕ್ಕಂತೆ ಬದುಕು.. ಜಾಗ ಜಾಗಗಳಿಗೂ ಹೊಂದಿಕೊಂಡ ಭಾವನೇ, ಸಂಸ್ಕೃತಿ.. ಇದರಲ್ಲಿಯೇ ವೈವಿಧ್ಯತೆಯನ್ನು ಕಾಣಬಹುದು.

ನಾಡು ನುಡಿಯ ಪ್ರೇಮ ಆ ರಾಜ್ಯದ ಜನತೆಗೆ ಮಾತ್ರ ಸೀಮಿತವೇನೋ ಗೊತ್ತಾಗುತ್ತಿಲ್ಲ. ಕನ್ನಡ ಜನಗಳು ನಮ್ಮ ಕನ್ನಡತನವನ್ನು ಎಂದು ಮರೆಯಬಾರದು.. ಎಲ್ಲಿ ಎಲ್ಲಿ ಅದನ್ನು ಎತ್ತಿ ಹಿಡಿಯಲು ಸಾಧ್ಯವೋ ಅಲ್ಲಿ ಎಲ್ಲಾ ಅದರ ಕನ್ನಡ ಬಾವುಟವನ್ನು ಹಾರಿಸಬೇಕು ಕನ್ನಡ ಮನವನ್ನು ಹರಿಸಬೇಕು..

ಈ ವರ್ಷವಂತೋ ಕನ್ನಡ ಸಾಂಸ್ಕೃತಿಕ ಲೋಕ ಸಂಭ್ರಮ ಪಡಲು ಡಬಲ್ ಧಮಾಕ! ಯಾಕೆಂದರೇ ೮ನೇ ಙ್ಞಾನಪೀಠ ಪ್ರಶಸ್ತಿ, ಮೊದಲ ಸರಸ್ವತಿ ಸಮ್ಮಾನ ಪ್ರಶಸ್ತಿಯನ್ನು ಪಡೆದುಕೊಂಡು ಭಾರತದಲ್ಲಿಯೇ ಕನ್ನಡದ ಹಿರಿಮೆಯನ್ನು ಮತ್ತೋಮ್ಮೆ ಸಾಭಿತುಮಾಡಿದ್ದೇವೆ.

ಇದರ ಪ್ರಾಮುಖ್ಯತೆ ಮತ್ತು ಮಹತ್ವವನ್ನು ಯುವಪೀಳಿಗೆಗೆ ತಲುಪಿಸುವ ಕೆಲಸವನ್ನು ಸರ್ಕಾರ ಮತ್ತು ಸಂಸ್ಥೆಗಳು ಮಾಡಬೇಕು. ಯುವಕರಿಗೆ ಕನ್ನಡದ ಸಾಹಿತ್ಯ ಪರಿಚಯವನ್ನು ಚಿಕ್ಕ ವಯಸ್ಸಿನಲ್ಲಿಯೇ ಯೋಜಿತ ರೀತಿಯ ಮಾಡಿದರೇ ನಮ್ಮ ಕನ್ನಡ ಕಂದಮ್ಮಗಳ ಬಾಯಿಯಲ್ಲಿ ಹ್ಯಾರಿಪಾಟರ್,ಜಾಕ್ಸನ್,ರಾಕ್.. ಮುಂತಾದ ಇಂಗ್ಲೀಷ್ ಮಾತುಗಳನ್ನು ಸ್ವಲ್ಪಮಟ್ಟಿಗಾದರೂ ನಿಲ್ಲಿಸಬಹುದೇನೋ...

ಕನ್ನಡವೆಂದರೇ ಹಿಂದಿನ ಪೀಳಿಗೆಗೆ ಮಾತ್ರ ಎಂಬ ಧೋರಣೆಯನ್ನು ಸಾಕಷ್ಟು ಕಡಿಮೆ ಮಾಡಬಹುದು ಏನಂತೀರಿ?

ನನಗೆ ಅನಿಸುತ್ತದೆ ನಮ್ಮದು ಅಭಿವೃದ್ಧಿ ಹೊಂದುತ್ತಿರುವ ದೇಶ ಎಂಬ ಒಂದು ಮಾತಿಗೆ ನಿಯತ್ತನ್ನುತೋರಿಸುತ್ತಾರೇನೋ ಎಂಬ ರೀತಿಯಲ್ಲಿ ನಮ್ಮ ನಗರದ ಯಾವುದೇ ರಸ್ತೆಗಳಿಗೆ ಇಳಿದರೂ ಯಾವುದಾದರೂ ಒಂದು ರಿಪೇರಿ ನಡೆಯುತ್ತಿರುತ್ತದೆ. ಮೆಟ್ರೋ ಬಂದ ಮೇಲಂತೂ ಕೇಳುವುದೇ ಬೇಡ ಎಲ್ಲಿ ನೋಡಿದರೂ ದೂಳ್! ದೂಳ್! ಅದು ಯಾವುದೋ ಒಂದು ಸಮೀಕ್ಷೆ ಹೇಳುತ್ತಿದೆ ಬೆಂಗಳೂರು ಜಗತ್ತಿನಲ್ಲಿಯೇ ಅತ್ಯಂತ ವೇಗವಾಗಿ ಮಾಲಿನ್ಯತೆಗೆ ಒಗ್ಗಿಕೊಂಡಿರುವ ಸಿಟಿಯಂತೇ.. ಶಿವನೇ ಕಾಪಾಡಬೇಕು..

ಉದ್ಯಾನ ನಗರಿ ಎಂಬ ಹಣೆಪಟ್ಟಿ ಸ್ವಲ್ಪದಿನಗಲ್ಲಿಯೇ ಸ್ಯಾಂಕಿ ಟ್ಯಾಂಕ್ ಹೂಳು ಮಣ್ಣಿನಲ್ಲಿ ಸೇರಿ ಹೋಗಬಹುದೇನೋ.. ಹಸಿರು ಇದ್ದರೇ ಉಸಿರು!

ಇಲ್ಲಿನ ಜನಗಳಿಗೆ ಗೊತ್ತಿಲ್ಲಾ.. ನಿತ್ಯ ಎಷ್ಟು ಎಷ್ಟು ರೋಗಗಳಿಗೆ ಬಲಿಯಾಗುತ್ತಿದ್ದಾರೂ ದೇವರೇ ಬಲ್ಲ.

ನಮಗೆ ಗೊತ್ತಿಲ್ಲದ ರೀತಿಯಲ್ಲಿ ಯಾರೋ ಯಾರೂ ತಮಗೆ ಅನೂಕೂಲವಾಗಲಿಯಂತೋ ಅಥಾವ ಜನಕ್ಕೆ ಅನುಕೂಲವಾಗಲಿ ಎಂದೋ ನಿತ್ಯ ಏನಾದರೂ ಕೆಲಸ ಕಾರ್ಯಗಳು ಸಾಗುತ್ತಲೇ ಇರುತ್ತವೆ. ಆದರೇ ಏನೂ ಮಾಡಿದರೂ ಇಲ್ಲಿನ ರಸ್ತೆಗಳಲ್ಲಿರುವ ಗುಂಡಿಗಳ ಸಂಖ್ಯೆ ಮಾತ್ರ ನಿತ್ಯ ಜ್ವರ ಏರಿದ ರೀತಿಯಲ್ಲಿ ಏರುತ್ತಿವೆ.. ಇಲ್ಲಿನ ರಸ್ತೆಗಳಲ್ಲಿ ಓಡಾಡುವುದೇ ಒಂದು ಅಪಾಯಕಾರಿಯಾಗುವ ದಿನಗಳು ದೂರವಲ್ಲ.

ಯಾವುದೇ ಸ್ಥಳವನ್ನು ಸೇರಬೇಕೆಂದರೂ ೨-೩ ಗಂಟೆ ಮುಂಚೆಯೇ ಮನೆಯನ್ನು ಬಿಡಬೇಕು. ಬಿಟ್ಟರು ಸರಿಯಾದ ಸಮಯಕ್ಕೆ ಸೇರುವೆವು ಎಂಬ ಬಗ್ಗೆ ನಂಬಿಕೆ ಇಲ್ಲ ಸ್ವಾಮಿ.. ಇದು ಬೆಂಗಳೂರು ಸಿಲಿಕಾನ್ ಸಿಟಿಯ ನಿತ್ಯ ಮಹಿಮೆ.. ಕೇಳುವವರು ಯಾರೂ..

"ಯಾವುದೇ ಒಂದು ನಗರ, ರಾಜ್ಯ, ದೇಶದ ಅಭಿವೃದ್ಧಿಯನ್ನು ಆ ಜಾಗಗಳ ರಸ್ತೆಗಳಲ್ಲಿ ಕಾಣಿ" ಎಂದರೇ ನಮ್ಮ ನಗರ, ರಾಜ್ಯ.... ಯೋಚಿಸಲು ಸಾಧ್ಯವಿಲ್ಲ ಬಿಡಿ..

ಇದರ ತಂತು ತಪ್ಪಿ ಹೋಗುತ್ತಿರುವುದು ಎಲ್ಲಿ ಎಂದರೇ ಮತ್ತೆ ಅದೇ ಬಗೆಹರಿಯದ ಕೊಂಡಿ ಕೊಂಡಿ ತಪ್ಪಿನ ಸರಮಾಲೆ.. ಜನ,ಅಧಿಕಾರಿಗಳು,ನಾಯಕಮಣಿಗಳ ಜವಾಬ್ದಾರಿ ಇಲ್ಲದ ಯೋಜನೆ, ಯೋಚನೆಗಳು.. ನಿತ್ಯ ಏನಾದರೂ ಒಂದು ಕಾಮಗಾರಿ ಸಾಗುತ್ತಿರಬೇಕು.. ನಿತ್ಯ ಸರ್ಕಾರದಿಂದ ಹಣ ಹರಿಯುತ್ತಿರಬೇಕು.. ಅದರ ಬಳಕೆ ಹೇಗೋ ಹೇಗೆ ಬಳಸುವುದು.. ಅಲ್ಲಿನ ಕ್ವಾಲೀಟಿ, ಮೌಲ್ಯತೆಗೆ ಗೋಲಿ ಮಾರೋ.. ಎಂಬ ಮನಸ್ಸು ಇದಕ್ಕೆ ಕೊನೆ ಎಂಬುದು ಯಾವಾಗ ನಿಮಗೆ ಏನಾದರೂ ತಿಳಿದಿದೆಯೇ?

ಯಾರು ಯಾರಿಗೆ ಸಂಬಂಧವಿಲ್ಲದ ರೀತಿಯ ಬದುಕು ಇದಾಗುತ್ತಿದೆಯೇ ಅನ್ನಿಸುತ್ತಿದೆ. ಕೇವಲ ಸಮಯಕ್ಕೆ ತಕ್ಕ ಹಾಗೆ ಬದುಕುವುದು. ಇರುವಷ್ಟು ದಿನ ಆಗೂ ಇಗೂ ಏನಾದರೂ ತಂತ್ರ ಮಾಡುವುದು.. ಹಣ ಮಾತ್ರ ಪ್ರಾಮುಖ್ಯವಾಗುವುದು.. ವ್ಯಕ್ತಿ ಮತ್ತು ವಸ್ತು ನಗಣ್ಯವಾಗುತ್ತಿರುವುದು.. ತಾವು ಮಾತ್ರ ಬದುಕಬೇಕು ಎಂಬ ತಾತ್ಕಾಲಿಕ ಯೋಚನೆಯಿಂದ ಈ ವ್ಯವಸ್ಥೆ ಒಂದು ರೀತಿಯಲ್ಲಿ ಹಳ್ಳ ಹಿಡಿಯುತ್ತಿದೆ ಅನಿಸುತ್ತಿದೆ.

ಪುನಃ ಅದೇ ನೈತಿಕತೆಯ ಪ್ರಶ್ನೇ ಬೃಹದಾಕಾರವಾಗಿ ನಮ್ಮ ಮುಂದೆ ದುತ್ತನೇ ಎದುರಾಗುತ್ತದೆ... ನಾವು ಆರಿಸಿ ಕಳಿಸಿದ ಪ್ರಜಾಪ್ರಭುತ್ವ ಸ್ತಂಭದ ನಾಯಕರುಗಳು ಅನಿಸಿಕೊಂಡ ನಾಯಕ ಮಣಿಗಳ ದುರಾಸೆ ಅವರ ನೀಚತನವನ್ನು ಕಂಡಾಗ ಭಾರತಾಂಭೆಯ ಭರವಸೆಯನ್ನು ಯಾರೂ ಯಾರೋ ಏನೂ ಏನೋ ಮಾಡುತ್ತಿದ್ದಾರೆ ಅನಿಸುತ್ತಿದೆ....

ಯೋಚಿಸುವಂತಾಗುತ್ತದೆ!!

ಮಂಗಳವಾರ, ನವೆಂಬರ್ 29, 2011

ಯು ಆರ್ ವೆರೀ ಮಚ್ ಪೂರ್ ಪೆಲೋ

ಹೊರಗಡೆ ತುಂತುರು ಮಳೆ, ಜೋರಾಗಿ ಬರುತ್ತಾನು ಇಲ್ಲ, ಪೂರ್ತಿ ನಿಲ್ಲುತ್ತಲೂ ಇಲ್ಲ. ಹೊರಗಡೆ ಹೆಜ್ಜೆ ಇಡಲು ಸಂಕೋಚ. ಏನೋ ಒಂದು ರೀತಿಯ ಬೇಜಾರು.

ಏನು ಮಾಡುವುದು? ಹಸಿ ಹಸಿ ಮಣ್ಣು ಕೊಂಚ ಕೊಂಚ ನೆನದ ನುಣ್ಣನೆಯ ಮಣ್ಣು ಚಪ್ಪಲಿಯ ಹಟ್ಟೆಗೆ ಪೂರ್ತಿ ಮೆತ್ತಿಕೊಂಡಿದೆ. ಇನ್ನೂ ಸುಮಾರು ದೂರ ನಡೆದರೆ ಮಾತ್ರ ಶೇರ್ಡ್ ಆಟೋ ಸಿಗುವುದು. ತಣ್ಣನೆಯ ಗಾಳಿ ಮೈಗೆ ಬೀಸುತ್ತಿದೆ. ಗಾಳಿಯಲ್ಲಿ ಚಿಕ್ಕ ಚಿಕ್ಕ ಹನಿಗಳನ್ನು ಸಾಗಿಸುತ್ತಿದೆ. ಮುಖಕ್ಕೆ ಚಿಕ್ಕ ಚಿಕ್ಕ ನುಣ್ಣನೆಯ ಹನಿಗಳ ಸ್ಪರ್ಶ. ದಾರಿಯನ್ನು ನೋಡುತ್ತಾ ನೋಡುತ್ತಾ ಯಾವುದಾದರೂ ಆಟೋ ಬರಬಹುದೇನೂ ಎಂಬ ಆಸೆಯ ಕಣ್ಣಿನ ನಿರೀಕ್ಷೆ.

ನಗರದ ಹೊರ ಭಾಗದಿಂದ ಸಿಟಿಯನ್ನು ತಲುಪಲು ಏನೂ ತೊಂದರೆಯಿಲ್ಲ. ಸುಂದರ ಸಂಜೆಯ ದಿನಗಳಲ್ಲಿ ಕಾಲಿಗೆ ಹಿತವಾದ ಒಂದು ನಡೆಯನ್ನು ಒದಗಿಸುತ್ತದೆ. ೪೫ ನಿಮಿಷಗಳ ನಡೆಯಲ್ಲಿ ಏಕಾಂತವಾಗಿ ದಾರಿಯನ್ನು ಸುತ್ತ ಮುತ್ತಾ ಗಮನಿಸುತ್ತಾ ಸುಲಭವಾಗಿ ನಗರವನ್ನು ಸೇರಿಬಿಡಬಹುದು. ಆದರೇ ಇಂದು ಯಾಕೋ ಮನಸ್ಸಿಗೆ ಮಂಕು ಕವಿದಂತೆ ಮಾಡಿದೆ ಈ ಮೋಡಕವಿದ ತುಂತುರು ಜಿಗುಟು ಮಳೆ.

ನಾ ಸೇರುವ ಮುಖ್ಯ ರಸ್ತೆಯವರೆಗೂ ಯಾವುದೇ ಒಂದು ಆಟೋ ಬರಲಿಲ್ಲ. ಸ್ವಲ್ಪ ಹೊತ್ತು ಅಲ್ಲಿಯೇ ಕಾದೇ. ಮಳೆಯಲ್ಲಿ ಸ್ವಲ್ಪ ಸ್ವಲ್ಪ ತಲೆ ನೆನೆಯುತ್ತಿತ್ತು. ಛತ್ರಿಯನ್ನು ಹಿಡಿದುಕೊಂಡು ಹೋಗಬೇಕು ಎನಿಸುವಂತಹ ಮಳೆಯಲ್ಲ ಇದು.

ಅಂತೋ ಗಾಂಧಿ ನಗರದಿಂದ ಒಂದು ಆಟೋ ನಗರದ ಕಡೆಗೆ ಸಾಗುತ್ತಾ ಬಂತು.




ನಾನು ಕೈ ಅಡ್ಡ ಹಿಡಿದ ತಕ್ಷಣ ನಿಂತಿತು. ಡ್ರೈವರ್ ಕೇಳಿದ "ಎಲ್ಲಿಗೆ ಹೋಗಬೇಕು ಸಾರ್?" ನಾನು "ಸರ್ಕಲ್ ಗೆ ಹೋಗಬೇಕು ಹೋಗುತ್ತಿರಾ?" ಅಂದೆ. "ಹೋ ನಾವು ಅಲ್ಲಿಯವರೆಗೂ ಹೋಗುವುದಿಲ್ಲಾ, ಅಸ್ಪತ್ರೆಯವರೆಗೂ ಹೋಗುತ್ತಿವಿ" ಅಂದಾ. "ಅಲ್ಲಿಂದ ಮುಂದಕ್ಕೆ ಹೋಗಿ" ಅಂದೆ. "ಇಲ್ಲ ಇದು ಶೇರ್ಡ ಅಲ್ಲಾ. ಆಸ್ಪತ್ರೆಯ ಹತ್ತಿರ ಬೇರೆಕಡೆ ಹೋಗುತ್ತೆ" ಅಂದಾ. "ಸರಿ!" ಅಂದೆ. "ಅಲ್ಲಿಯವರೆಗೂ ಬನ್ನಿ" ಅಂದಾ. ನನಗೋ ಆಗಲೆ ಐದು ನಿಮಿಷಗಳಿಂದ ಕಾದು ಕಾದು ಈ ಮಳೆಯ ಹನಿಗಳ ಕವನವನ್ನು ನೋಡಿದ್ದು ಸಾಕು ಅನಿಸಿರಬೇಕು. ಮತ್ತೇ ಕಾದರೆ ಯಾವ ಹೊಸ ಆಟೋಗಳು ಬರುವ ಸೂಚನೆಗಳೆ ಕಾಣದಂತಾಗಿತ್ತು. ಆದ್ದರಿಂದ ಆಟೋವನ್ನು ಹತ್ತಲು ಶುರುಮಾಡಿ ಹಿಂದೆ ಹೋಗಿ ಕುರಲು ತಯಾರಿ ನಡೆಸಿದೆ. ಹಿಂದೆ ಹೀಗಾಗಲೆ ಕುಳಿತವರು ಜಾಗವನ್ನು ಕೂಡಲು ಕೂಂಚ ಬಲಕ್ಕೆ ಸರಿದು ಕುಳಿತರು. "ಬೇಡ, ಇಲ್ಲೇ ಮುಂದೆ ನನ್ನ ಪಕ್ಕ ಕುಳಿತುಕೊಳ್ಳಿ ಸಾರ್" ಅಂದಾ. ನಾನು ಅವನ ಜೋತೆ ಕುಳಿತೆ.

ಆಟೋ ಸಾಗಿತು. ನಾನು ಯೋಚಿಸಲು ಪ್ರಾರಂಭಿಸಿದೆ. ಆಸ್ಪತ್ರೆಯವರೆಗೆ ಸಾಗಬೇಕು ಅಲ್ಲಿಂದ ಮತ್ತೇ ಇನ್ನೊಂದು ಆಟೋ ಹಿಡಿಯಬೇಕು. ನೋಡು ಏನು ಬುದ್ಧಿವಂತಿಕೆ ಬಾಡಿಗೆ ದುಡ್ಡು ಮತ್ತೇ ನನ್ನ ಬಳಿಯಿಂದ ಎಕ್ಸ್ ಟ್ರಾ ದುಡ್ಡು ಬೇರೆ. ಸ್ವಲ್ಪ ಹೆಚ್ಚಿಗೆ ಸಂಪಾದಿಸಿಕೊಳ್ಳಬಹುದು ಅಂತಾ ನನ್ನ ಹತ್ತಿಸಿಕೊಂಡಿದ್ದಾನೆ. ಹೊಟ್ಟೆ ಪಾಡು!

ಮತ್ತೇ ನನ್ನ ಯೋಚನೆಯ ದಿಕ್ಕು....ಈಗ ಇವನಿಗೆ ಎಷ್ಟು ದುಡ್ಡು ಕೊಡಬೇಕು. ನೇರವಾದ ಆಟೋ ಆಗಿದ್ದರೆ, ಐದು ರೂಪಯಿಗಳಿಗೆ ಸರ್ಕಲ್ ವರೆಗೆ ಕರೆದುಕೊಂಡು ಹೋಗುತ್ತಿದ್ದಾ. ಈಗ ಇವನು ಆಸ್ಪತ್ರೆಯವರೆಗೆ ಕರೆದುಕೊಂಡು ಹೋಗುತ್ತಿದ್ದಾನೆ. ಅರ್ದ ಚಾರ್ಜು ಕೊಟ್ಟರೆ ನನ್ನ ಮುಖ ನೋಡಬಹುದು. ಏನ್ ಕಂಜ್ಯೂಸ್ ಜನ ಎನ್ನಬಹುದು. ಇಲ್ಲಾ ಪೂರ್ತಿ ಹತ್ತು ರೂಪಾಯಿಗಳನ್ನೇ ಕೊಡೊಣಾ. ಅವನೇ ಎಷ್ಟು ಜಾರ್ಜು ಮುರಿದುಕೊಂಡು ಹಿಂತಿರುಗಿಸುತ್ತಾನೋ ತಿರುಗಿಸಲಿ ಎಂದು ಮನದಲ್ಲೇ ನಿರ್ಧರಿಸಿದೆ. ತಣ್ಣನೆಯ ಗಾಳಿ ಮುಖಕ್ಕೆ ಬೀಸುತ್ತಿತ್ತು. ಒಂದು ಎರಡು ಹನಿಗಳು ಮುಖಕ್ಕೆ ಬೀಳುತ್ತಿದ್ದವು. ಆಟೋ ಪುಲ್ ನಿಶಬ್ಧ ಕೇವಲ ಆಟೋ ಇಂಜೀನ್ ಶಬ್ಧ ಮಾತ್ರ ಕೇಳಿಸುತ್ತಿತ್ತು.

ಆಸ್ಪತ್ರೆ ಹತ್ತಿರ ಬಂದಂತಾಯಿತು. ನಾನು "ನೀವು ಎಡಗಡೆ ಆಸ್ಪತ್ರೆ ಮುಂದೆ ಹೋಗುತ್ತಿರಾ?" ಎಂದೆ. "ಹೌದು!" ಎಂದಾ. "ಇಲ್ಲಿಯೇ ನಿಲ್ಲಿಸಿ" ಅಂದೆ.

ಆಟೋ ನಿಂತಿತು. ನಾನು ಆಟೋ ಇಳಿಯುವ ಸಮಯದಲ್ಲಿಯೇ ಜೇಬಿಗೆ ಕೈ ಹಾಕಿ ಹತ್ತು ರೂಪಾಯಿಯನ್ನು ತೆಗೆಯುತ್ತಾ ಇಳಿದೆ. ಹತ್ತು ರೂಪಾಯಿ ನೋಟ್ ನ್ನು ತೆಗೆದು, "ತಗೋಳ್ಳಿ" ಅಂದೆ. ಆದರೇ ಆಟೋ ಡ್ರೈವರ್ ನಗುತ್ತಾ "ಪರವಾಗಿಲ್ಲಾ ಬೇಡ" ಅನ್ನುತ್ತಾ ಆಟೋದ ಎಕ್ಸ್ ಲೇಟರ್ ನ ಕಿವಿ ಹಿಂಡುತ್ತಾ ಮುಂದೆ ಸಾಗಿಬಿಟ್ಟ.

ನನಗೆ ಶಾಕ್! ಏನೂ ಇವನು ನನ್ನ ಮನದ ಮಣ್ಣಿಗೆಯನ್ನು ಕಂಡುಬಿಟ್ಟನೇ? ಮತ್ತು ಇರಲಿಕ್ಕಿಲ್ಲಾ. ಏನೋ ಒಂದು ಸಹಾಯವನ್ನು ಮಾಡಿರಬೇಕು. ಮಳೆಯಲ್ಲಿ ನೆನೆಯುತ್ತಾ ನಿಲ್ಲುವಬದಲು ಮುಖ್ಯ ರಸ್ತೆಗೆ ಇವರುಗಳನ್ನು ಬಿಟ್ಟರೆ ಬೇರೊಂದು ವಾಹನದಲ್ಲಿ ಇವರುಗಳು ಸೇರುವ ಜಾಗ ಸೇರಬಹುದು ಎಂಬ ಉಯೆಯಿಂದ? ಗೊತ್ತಿಲ್ಲಾ.

ನಾನು ಅಯ್ಯೋ ಒಂದು ಥ್ಯಾಂಕ್ಸ್ ಆದರೂ ಹೇಳಬಹುದಾಗಿತ್ತು. ಅವನು ಅದು ಯಾವುದಕ್ಕೂ ಅಸ್ಪದ ಕೊಡದೆ ನನ್ನ ಎಲ್ಲಾ ಲೆಕ್ಕಚಾರವನ್ನೆ ಒಂದೇ ಕ್ಷಣದಲ್ಲಿ ಉಲ್ಟಾ ಮಾಡಿಬಿಟ್ಟು ದೊಡ್ಡ ವ್ಯಕ್ತಿ ಅನಿಸಿಕೊಂಡುಬಿಟ್ಟನಲ್ಲಾ ಅನಿಸಿತು.

ನನಗೆ ನಾನೇ ನಗುತ್ತಾ ಅಲ್ಲಿಂದ ಇಲ್ಲಿಯವರೆಗೂ ಎಷ್ಟೊಂದು ಲೆಕ್ಕಚಾರ ಹಾಕಿಕೊಂಡು ಬಂದೆನಲ್ಲಾ. "ಯು ಆರ್ ವೆರೀ ಮಚ್ ಪೂರ್ ಪೆಲೋ" ಅಂದುಕೊಂಡೆ.

ಇದೆ ಅಲ್ಲವಾ ವಿಪರ್ಯಾಸ ಅನ್ನುವುದು. ಏನೂ ಏನೋ ಮನದಲ್ಲಿ ಮಣ್ಣಿಗೆಯನ್ನು ಬೇರೆಯವರ ಬಗ್ಗೆ ತಿನ್ನುತ್ತಿರುತ್ತೇವೆ. ಅದರೆ ಸಾಮಾನ್ಯ ಜನಗಳು ಅಸಾಮಾನ್ಯವಾಗಿ ವರ್ತಿಸುತ್ತಾರೆ. ಆಟೋದವರೂ ಅಂದರೇ ಸುಲಿಯುವವರು ಅಂಥಾ ನಾವುಗಳು ದೂರುತ್ತೇವೆ. ಎಲ್ಲಾ ರಂಗಗಳಲ್ಲೂ ಅಂಥವರು ಇರುತ್ತಾರೆ, ಇಂಥವರುಗಳು ಇರುತ್ತಾರೆ.

ಸೋಮವಾರ, ನವೆಂಬರ್ 21, 2011

ಬದಲಾವಣೆಗೆ ಮುಂದಾಗಬೇಕು!

ಜೀವನವೇ ಹೀಗೆ ಅನಿಸುತ್ತದೆ. ನಾವು ಕೆಲಸ ಮಾಡುವ ಜಾಗ, ನಾವು ಇರುವ ತಾಣಗಳು ಒಂದು ರೀತಿಯಲ್ಲಿ ನಮ್ಮಗಳ ಅಲ್ಲಿನ ಪರಿಸರಕ್ಕೆ ತಕ್ಕಂತೆ ನಮ್ಮ ಮೇಲೆ ಪರಿಣಾಮ ಬೀರುತ್ತವೆ.

ಆ ಜಾಗಗಳಲ್ಲಿ ಅವುಗಳಿಗೆ ಒಪ್ಪುವಂತೆ ನಾವುಗಳು ವರ್ತಿಸಬೇಕಾಗುತ್ತದೆ. ಮತ್ತು ಅದಕ್ಕಾಗಿಯೇ ನಮ್ಮ ನಡವಳಿಕೆಯ ಶೈಲಿಯೇ ಬದಲಾವಣೆಯಾಗುತ್ತದೆ. ಇದು ಜಾಗದ ಮಹಿಮೆಯಾ? ನಮ್ಮಗಳ ಆ ರೀತಿಯ ಭಾವನೆಯಾ? ಗೊತ್ತಿಲ್ಲ!

ಅದಕ್ಕೆ ಹೇಳುವುದು ಚಿಕ್ಕವರಾಗಿದ್ದಾಗ ಒಳ್ಳೆ ಪರಿಸರದಲ್ಲಿ ಮಕ್ಕಳನ್ನು ಬೆಳಸಬೇಕು. ಪರಿಸರದ ಕೂಸುಗಳೇ ನಾವುಗಳು ಅನಿಸುತ್ತದೆ?

ನಿಮಗೆ ಗೊತ್ತು. ಕಾಲೇಜು ರಂಗದಲ್ಲಿ ಓದುವಂತಹ ಹುಡುಗ ಹುಡುಗಿಯರ ಜೀವನ ಶೈಲಿ ಅವರುಗಳ ಮಾತು, ವರಸೆಯೇ ವಿಭಿನ್ನ.

ಅದು ಕಾಲೇಜು ಡೇಸ್ ಅನ್ನಬಹುದು. ಅವರುಗಳ ಮಾತಿನ ದಾಟಿಯೇ ಡಿಪರೇಂಟ್! ಆ ವಾತವರಣದಲ್ಲಿ ನಿತ್ಯ ಅವರುಗಳು ಮಾತನಾಡುವುದು ಅದೇ ಸಾಮಾನ್ಯವಾಗಿ ಪುನಃ ಪುನಃ ಪುನವರ್ತನೆಯಾಗುವ ಒಂದಷ್ಟು ಶಬ್ಧಾಭಂಡಾರವನ್ನೆ ಬಳಸುತ್ತಾರೆ.

ಅದೇ ಕಾಲೇಜು, ಕ್ಲಾಸ್, ಲೇಕ್ಚರ್, ಪ್ರೀನ್ಸಿಪಾಲ್, ಹುಡುಗಿಯರು, ಡ್ರೇಸ್, ಮೋವಿ, ಹಾಡು, ತಿಂಡಿ ಇತ್ಯಾದಿಗಳಿಗೆ ಸೀಮಿತವಾದ ಪದಗಳ ಬಳಕೆಯಿರುತ್ತದೆ.

ಅವುಗಳನ್ನು ನಾವುಗಳು ನಾವು ಸೇರಿ ಕೆಲಸ ಮಾಡುವ ಜಾಗದವರೆಗೂ ತಂದು, ಒಂದಷ್ಟು ವರ್ಷ ಬಳಸುತ್ತಲೇ ಇರುತ್ತೇವೆ. ಅದು ಸವಕಲಾಗುವುದು ಪುನಃ ಹೊಸ ಪರಿಸರದ ಪರಿಣಾಮದಿಂದ.

ಗಮನಿಸಿ ನಮ್ಮ ನಡಾವಳಿಯ ಮೇಲೆ ಪರಿಸರಕ್ಕಿಂತ ಅಲ್ಲಿ ನಮ್ಮಗಳಿಗೆ ಜೊತೆಯಾಗುವ ನಮ್ಮ ಆತ್ಮೀಯರ ನಡಾವಳಿಯೇ ನಮ್ಮ ಮೇಲೆ ಪರಿಣಾಮ ಬೀರಿರುತ್ತದೆ. ಅವರುಗಳು ಮಾತನಾಡುವ ಮಾತುಗಳು, ಧರಿಸುವ ಬಟ್ಟೆ, ಬರಿ, ತಿನ್ನುವ ತಿಂಡಿ, ತೀರ್ಥ ಮತ್ತು ಅವರುಗಳ ಯೋಚನಾ ಲಹರಿ ನಮ್ಮನ್ನು ಅದೇ ಚಾನಲ್ ನಲ್ಲಿ ಯೋಚಿಸುವಂತೆ ಮಾಡಿ ನಮ್ಮನ್ನು ಬದಲಾವಣೆಗೆ ಒಡ್ಡುತ್ತದೆ.

ಬದಲಾವಣೆಯೇ ಜೀವನ! ಎನ್ನುವಂತೆ ಮನುಷ್ಯ ತಾನು ಇರುವ ಜಾಗಗಳಲ್ಲಿ ಹೊಸ ಹೊಸತನಕ್ಕೆ ತೆರೆದುಕೊಳ್ಳುತ್ತಲೇ ಸಾಗುತ್ತಾನೆ.

ನಮ್ಮ ಐ.ಟಿ-ಬಿ.ಟಿ ಮಂದಿಯನ್ನು ಕೇಳುವುದೇ ಬೇಡ. ಅದು ಅದರದೇಯಾದ ಒಂದು ಪ್ರಪಂಚ. ಅದನ್ನು ಬಿಟ್ಟು ಹೊರ ಜಗತ್ತಿನ ಪರಿವೇ ಇಲ್ಲದ ರೀತಿಯ ಧ್ಯಾನಸ್ಥ ಸಮಾಧಿ?

ಕೆಲವೊಂದು ಮಂದಿಯಿದ್ದಾರೆ ನಮ್ಮ ಸುತ್ತಲಿನ ಪರಿಸರದಲ್ಲಿ ಏನೂ ಏನಾಗುತ್ತಿದೆ ಎಂಬುದು ಸಹ ಗೊತ್ತಿಲ್ಲದ ಗಾವಿದರ ರೀತಿಯಲ್ಲಿ ತಮ್ಮ ಕೆಲಸದಲ್ಲಿ ಮುಳುಗಿ ಹೋಗಿಬಿಟ್ಟಿರುತ್ತಾರೆ. ಅದು ಕೆಲಸದ ಒತ್ತಡ ಎಂದು ನಾವುಗಳು ನೀವುಗಳು ಹೇಳಬಹುದು ಅದರೂ ಏನೇ ಕೆಲಸದ ಒತ್ತಡವಿದ್ದರೂ ಇಂಟರಸ್ಟ್ ಎಂಬುದು ಇಲ್ಲದಿದ್ದರೇ ಏನು ಮಾಡಲಾಗುವುದಿಲ್ಲ.

ಕೆಲವೊಂದು ಮಂದಿ ಚಿಕ್ಕ ನ್ಯೂಸ್ ಪೇಪರ್ ಓದಲಾರದಷ್ಟು ತಮ್ಮ ಕೆಲಸದಲ್ಲಿ ನಿರತರಾಗಿರುತ್ತಾರೆ. ಆದರೆ ಅದೇ ಅವರ ಕೆಲಸಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿ ಅವರಲ್ಲಿ ಇರುತ್ತದೆ. ಮತ್ತೇ ಅದೇ ಟೆಕ್ನಾಲಜಿ, ಕಾಲು, ಮೀಟಿಂಗು, ಹೈಕು, ಮಾರ್ಕೆಟ್ ಅಪಡೇಟ್ಸ್ ಇತ್ಯಾದಿಯಲ್ಲಿಯೇ ಮುಳುಗಿ ಹೋಗಿರುತ್ತಾರೆ.





ನಾವು ಕೆಲಸ ಮಾಡುವ ಜಾಗಗಳು ಹಾಗೆಯೇ ಫುಲ್ ಪ್ಯಾಕ್. ಒಳಗಡೆ ಬಂದು ಕಂಪ್ಯೂಟರ್ ಮುಂದೆ ನಾವುಗಳು ಸ್ಥಾಪಿತವಾದರೇ ಮುಗಿಯಿತು ಹೊರಗಡೆ ದೋ......! ಎಂದು ಮಳೆ ಬಂದರೂ ಒಳಗಡೆ ಫುಲ್ ಎ.ಸಿ ಪ್ಲೋರ್ ಆಗಿರುವುದರಿಂದ ಯಾವೊಂದು ಪರಿವೆಯೇ ಇರುವುದಿಲ್ಲ. ಆ ರೀತಿಯ ವಾತವರಣದ ಕೊಡಗೆ ಐ.ಟಿ ಕಡೆಯಿಂದ. ಒಂದು ವಾರದ ಐದು ದಿನಗಳಲ್ಲಿ ಏನೊಂದನ್ನು ಚಿಂತಿಸುವುದಕ್ಕೆ ಬಿಡುವುದಿಲ್ಲ.

ಮನೆಗೆ ಹೊತ್ತಲ್ಲಾ ಹೊತ್ತಿನಲ್ಲಿ ಬಂದು.. ಯಾವುದೋ ಸಮಯದಲ್ಲಿ ಮಲಗಿ ಪುನಃ ಆಫೀಸ್ ಕಡೆ ಮುಖ ಮಾಡುವುದು.. ಮನೆಯಲ್ಲಿ ಯಾರೊಂದಿಗೂ ಒಂದು ಕ್ಷಣ ಸಮಧಾನದ ಮಾತುಗಳನ್ನು ಮಾತನಾಡಲು ಆಗುವುದಿಲ್ಲ. ಅದೇ ಮನದ ತುಂಬ ಆ ಲಾಜಿಕ್, ಆ ಕಾಲು, ಆ ಕ್ಲೈಂಟ್ ಯಸ್ಕಾಲೇಶನ್, ಆ ಕೋಡಿಂಗ್, ಆ ಮ್ಯಾನೇಜರ್ ಕಿರಿಕ್.. ಇತ್ಯಾದಿ ಇತ್ಯಾದಿಗಳ ಚಿತ್ತಾರವೇ ತುಂಬಿರುತ್ತದೆ. ಅದನ್ನು ಬಿಟ್ಟು ಬೇರೆಯದನ್ನು ಚಿಂತಿಸಿದರೇ ಕೇಳಿ!

ಪಾಪ ಅನಿಸುತ್ತಿದಿಯೇ?

ಹೌದು! ಇದೇ ನಮ್ಮಗಳ ಕೆಲಸ. ಇಲ್ಲವೆಂದರೇ ನಮ್ಮಗಳ ಬದುಕು ಸಾಗುವುದು ದುರ್ಲಬ ಸ್ವಾಮಿ!

ಯಾಕೆಂದರೇ ಅಷ್ಟೊಂದು ಸಂಬಳ ಕೊಟ್ಟು ಸುಮ್ಮನೇ ಕೂರಿಸುವುದಕ್ಕೆ ಅವರೇನೂ ನಮ್ಮ ಮಾವಂದಿರೇ? ಅದು ವ್ಯಾಪಾರದ ಜೀವನ. ಹಣಕ್ಕೆ ತಕ್ಕ ಹಾಗೆ ಸೇವೆ ನೀಡಬೇಕು. ಅದಕ್ಕೆ ತಕ್ಕಂತೇ ನೀವು ವೇಗವಾಗಿ ಓಡಬೇಕು..ಅದು ಸಮಯ ಗೀಮಯದ ಎಲ್ಲೆ ಮೀರಿ.

ಇಂಥ ಪರಿಸರದಲ್ಲಿ ದಿನದ ಹೆಚ್ಚು ಸಮಯ ಜೀವಿಸುವ ಮಂದಿಯ ನಡಾವಳಿಯನ್ನು ಯಾವ ರೀತಿಯಲ್ಲಿ ಕಾಣಬೇಕೋ... ಅದು ತುಂಬ ಕ್ಲೀಷ್ಟಕರವಾದ ಸಂಗತಿ.

ನೋಡುವುದಕ್ಕೆ ಪಳ ಪಳ ಬಟ್ಟೆಗಳನ್ನು ಹಾಕಿಕೊಂಡಿರುತ್ತಾರೆ ಅಷ್ಟೇ. ಮನದ ತುಂಬ ಅತಿಯಾದ ಧಾವಂತ.. ಕೆಲಸದ ಬಗ್ಗೆ ಮಾತ್ರ ಯೋಚನೆ.. ತೃಪ್ತಿ ಅನ್ನುವುದು ಪದ ಮಾತ್ರವೇ ಸರಿ.

ಅಷ್ಟೊಂದೂ ಸಂಬಳ ಪಡೆದಿರುತ್ತಾರೆ. ಮಜಾ ಮಾಡಲು ಜಗತ್ತೇ ಕಾದಿರುತ್ತದೆ. ಆದರೇ ಎಲ್ಲಿ ಮಜಾ ಮಾಡಲಾಗುತ್ತದೆ? ಸಾಧ್ಯವಿಲ್ಲದ ಮಾತು ಅನಿಸುತ್ತದೆ. ಯಾಕೆಂದರೇ ಯಾವಗಲೂ ಧಾವಂತದ ಬದುಕು ಮಾತ್ರ. ಬರೀ ರನ್ನಿಂಗ ರೇಸ್ ಅಷ್ಟೇ...........?

ಬಾಯಿಬಿಡುವುದು ಸಹ ಕಷ್ಟಕರವಾದ ಸಂಗತಿ. ಯಾವಾಗಲೂ ಏನೋ ಗಾಡವಾದ ಯೋಚನೆಯಲ್ಲಿ ಮಗ್ನ. ತಿನ್ನುವಾಗಲೂ ಅದು ಹೀಗೆ, ನಮ್ಮ ಟೀಂ ಸರಿಯಿಲ್ಲ ಗುರು.. ಎಲ್ಲಿಂದ ಬಂದಿದಾರೋ......? ಡೇಡ್ ಲೈನ್ ಬೇರೆ ಬರುತ್ತಿದೆ.. ವಿಕೇಂಡ್ ವರ್ಕ ಮಾಡಬೇಕು.. ಉಫ್!

ಎದುರಿಗೆ ಬಂದವರಿಗೆ ಹಾಯ್! ಎನ್ನಲಾರದಷ್ಟು ಸಂಕೋಚ. ಹಾಯ್ ಎಂದರೂ ಅದೇ ಕೇವಲ ಎರಡೇ ಎರಡು ಸವಕಲಾದ ಮಾತುಗಳು.

ಹೌ ಆರ್ ಯು?

ಹೌ ಇಸ್ ಯುವರ್ ವರ್ಕ್?

ವಿಚ್ ಟೆಕ್ನಾಲಜಿ ಯು ಆರ್ ವರ್ಕಿಂಗ್?

ಕೆಲಸ ಚೇಂಜ್ ಮಾಡ್ತಾ ಇದ್ದೀಯ?

ಪೇಪರ್ ಹಾಕಿದ್ಯಾ? ಇತ್ಯಾದಿ..

ಬೇರೆ ವಿಷಯಗಳೇ ಬಾಯಿಗೆ ಬರುವುದಿಲ್ಲ. ನನಗೆ ಅನಿಸುತ್ತದೆ ಸ್ವಲ್ಪ ದಿನಗಳಲ್ಲಿ ಈ ಮಂದಿ ಒಂದಷ್ಟು ಪದಗಳನ್ನು ಇತಿಹಾಸ ಸೇರಿಸಿಬಿಡುತ್ತಾರೆ.

ಇದು ನಮ್ಮ ಕೇವಲ ಐ.ಟಿ ರಂಗದಲ್ಲಿ ಮಾತ್ರವಲ್ಲಾ ಮಾರಾಯ್ರೆ ಪ್ರತಿಯೊಂದು ರಂಗದಲ್ಲೂ ಅದರದೇಯಾದ ಒಂದು ಪರಿಸರ ಪರಿಣಾಮವನ್ನು ಗೊತ್ತಿಲ್ಲದ ರೀತಿಯಲ್ಲಿ ಬಿತ್ತಿರುತ್ತದೆ. ಬಿತ್ತುವವರು ಮತ್ಯಾರೂ ಅಲ್ಲ. ನಾವುಗಳು ನೀವುಗಳು!

ಇದು ಯಾಕೇ?

ಇದನ್ನು ಸ್ವಲ್ಪ ಬದಲಾಯಿಸಿಕೊಂಡು, ಇಂಥ ಬಿಗಿಯಾದ ವಾತಾವರಣವನ್ನು ಸುಲಲಿತವಾದ ಸಂತಸ ನೀಡುವಂತಹ ಜಾಗಗಳನ್ನಾಗಿ ಮಾಡಿಕೊಂಡು ಬದುಕಲು ಸಾಧ್ಯವಿಲ್ಲವೇ?

ಕೆಲಸ ಎಂಬುದು ಜೀವನದ ಒಂದು ಭಾಗ ಮಾತ್ರ. ಅದೇ ಪೂರ್ತಿ ಜೀವನವಲ್ಲ ಅಲ್ಲವೇ? ಅದನ್ನು ಬಿಟ್ಟು ಸಾವಿರ ಸಾವಿರ ವಿಷಯ ವಿಶೇಷಗಳು ನಮ್ಮ ನಿಮ್ಮಗಳ ಮಧ್ಯ ಇವೆ.

ಇಂದಿನ ಈ ದಿನಗಳಲ್ಲಿ ನಾವುಗಳು ತುಂಬ ಯಾಂತ್ರಿಕವಾಗಿ ಬದುಕುವುದು ಬೇಡ ಅನ್ನಿಸುತ್ತದೆ.

ಎಲ್ಲಾ ನಮ್ಮಗಳ ಕೈಯಲ್ಲಿ ಇರುವಾಗ ನಾವುಗಳು ಸ್ವಲ್ಪ ಬದಲಾವಣೆಗೆ ಮುಂದಾಗಬೇಕು. ಯಾಕೆಂದರೇ ಯಾವುದನ್ನು ನಾವುಗಳು ಸೃಷ್ಟಿಸಿರುವೆವೋ ಅದಕ್ಕೆ ಇತಿ ಮೀತಿಗಳನ್ನು ನಾವುಗಳೇ ಹಾಕಿಕೊಳ್ಳಬೇಕು.. ಆಗ ಮಾತ್ರ ಇನ್ನೂ ಹೆಚ್ಚು ಅರ್ಥಪೂರ್ಣವಾಗಿ ಸಮರಸದಿಂದ ಜೀವಿಸಲು ಸಾಧ್ಯ!

ಸೋಮವಾರ, ನವೆಂಬರ್ 14, 2011

ಮಕ್ಕಳಿರಲವ್ವಾ ಮನೆ ತುಂಬ..

ಬಾಲ್ಯ ಯಾರೂ ಯಾವತ್ತಿಗೂ ಮರೆಯಲಾರದಂತ ದಿನಗಳು. ಅವುಗಳ ಪುನರ್ ಮೆಲುಕು ನಮ್ಮ ವಯಸ್ಸು ಕಳೆದ ಈ ದಿನಗಳಲ್ಲಿ ಬಹಳ ಹಿತವಾಗಿರುವಂತಹ ನೆನಪುಗಳಾಗಿರುತ್ತವೆ. ನವಮಾಸಗಳನ್ನು ಕಳೆದು ತಾಯಿಯ ಗರ್ಭದಿಂದ ಭೂಮಿಗೆ ಅವತರಿಸಿದ ದಿನಗಳಿಂದ ಪ್ರಾರಂಭವಾಗುವ ಮೊದಲ ದಿನಗಳೇ ಬಾಲ್ಯ.

ಮಕ್ಕಳಿರಲವ್ವಾ ಮನೆ ತುಂಬ ಎಂಬ ಜನಪದರ ಹಾಡಿನ ರೀತಿಯಲ್ಲಿ ಬಾಲ್ಯದಲ್ಲಿ ಮಾಡುವ ಪ್ರತಿಯೊಂದು ಆಟ-ಪಾಠಗಳು, ರೀತಿ ನೀತಿಗಳು ಮನೆಮಂದಿಯನ್ನೆಲ್ಲಾ ಮೆಚ್ಚಿಸುತ್ತದೆ. ಮಕ್ಕಳ ಅಳು, ಕೇಕೆ, ಕೂಗು, ಹಠಮಾರಿತನ, ರಂಪಾ ರಾಡಿ ಪ್ರತಿಯೊಂದು ಕಲಾತ್ಮಕವಾಗಿ ಎಲ್ಲರನ್ನು ರಂಜಿಸುತ್ತದೆ.

ಹೆತ್ತವರ ಕರುಳು ಆ ಸಮಯದಲ್ಲಿ ಸಂಭ್ರಮಿಸುವುದನ್ನು ಏನೂ ಕೊಟ್ಟಾಗಲು ಕಾಣುವುದಿಲ್ಲ. ಬಳ್ಳಿಗೆ ಕಾಯಿ ಭಾರವಲ್ಲ ಎಂಬ ರೀತಿಯಲ್ಲಿ ಎಷ್ಟೇ ಮಕ್ಕಳಿದ್ದರೂ ಹೆತ್ತ ತಾಯಿಗೆ ಕಷ್ಟ ಅನಿಸುವುದಿಲ್ಲ. ಯಾಕೆಂದರೇ ಅವು ಕರುಳ ಬಳ್ಳಿಗಳು.

ಒಂದೂ ಐದು ವರ್ಷದವರೆಗೆ ನಾವುಗಳು ಮಾಡಿದ ಯಾವೊಂದು ಚಟುವಟಿಕೆಗಳು ನಮ್ಮ ಮನಸ್ಸಿನಲ್ಲಿ ನೆನಪಾಗಿ ನಿಂತಿರುವುದಿಲ್ಲ. ಆ ವಯಸ್ಸೇ ಹಾಗೆ ಯಾವುದನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದಿಲ್ಲ. ಆದರೇ ನಾವುಗಳು ಇಂದು ನಮ್ಮ ಮುಂದೆ ಇರುವ ಅದೇ ವಯಸ್ಸಿನ ಮಕ್ಕಳನ್ನು ನೋಡಿಕೊಂಡು ಅವರುಗಳು ಮಾಡುವ ತುಂಟಾಟವನ್ನು,ಹೆತ್ತವರಿಗೆ ಕೊಡುವ ತೊಂದರೆಯನ್ನು ಕಂಡು ನಾವುಗಳು ಹೀಗೆ ಚಿಕ್ಕವರಾಗಿದಾಗ ನಕ್ಕು, ನಲಿದಿರಬಹುದು, ಗೋಳು ಹೊಯ್ದುಕೊಂಡಿರಬಹುದು ಎಂದುಕೊಳ್ಳಬಹುದು.



ಗಮನಿಸಿ ಅತಿ ಚಿಕ್ಕ ಮಕ್ಕಳನ್ನು ಸಾಕಿ ಸಲುಹಿದ ತಂದೆ-ತಾಯಿ, ಅಜ್ಜ - ಅಜಿಗಳೇ ಗ್ರೇಟ್ ಅವರುಗಳ ಸಂಬಾಳಿಕೆ ಇಲ್ಲದಿದ್ದರೇ ನಾವುಗಳು ಈ ರೀತಿ ಬೆಳೆದು ದೊಡ್ಡವರಾಗುತ್ತಿರಲೇ ಇಲ್ಲ. ಅವರ ಹಾರೈಕೆಯ ಫಲವೇ ಇಂದಿನ ನಾವುಗಳು. ನಮ್ಮ ಸಮಾಜದ ಈ ಒಂದು ಬಿಡಿಸಿಲಾರದ ಕೌಟಂಬಿಕ ನಂಟನ್ನು ಎಷ್ಟು ಕೊಂಡಾಡಿದರೂ ಕಡಿಮೆಯೆ.

ಹಾಲು ಕುಡಿಯು ಹಸುಳೆಯಿಂದ ಈ ಮಟ್ಟಗೆ ಬೆಳೆದು ದೊಡ್ಡವರಾಗಲು ಸಹಕರಿಸಿದ ಮನೆಯ ಮಂದಿಯ ಹಿರಿಯರ ಸೇವೆಯ ಹಿರಿಮೆ ದೊಡ್ಡದು. ಹೇಗೆ ಹೇಗೆ ನಮ್ಮ ಹೆತ್ತವರನ್ನು ಗೋಳು ಹೋಯ್ದು ಕೊಂಡಿರುವೆವು ಎಂಬುದನ್ನು ತಿಳಿಯಲು, ನಾವುಗಳು ಯಾವುದಾದರೂ ಒಂದು ಚಿಕ್ಕ ಮಗುವನ್ನು ಒಂದು ದಿನದ ಮಟ್ಟಿಗೆ ಸಂಬಾಳಿಸಿಕೊಂಡು ಇಟ್ಟುಕೊಂಡರೆ ಗೊತ್ತಾಗುತ್ತದೆ.

ಆದರೇ ಹಾಗೆ ನಾವುಗಳು ನಮ್ಮ ಬಾಲ್ಯದಲ್ಲಿ ನಮ್ಮ ಮನೆಯವರಿಗೆಲ್ಲಾ ಯಾವುದೇ ಒಂದು ರೀತಿಯಲ್ಲಿ ಮಾಡಿದ್ದರೂ ಅದಕ್ಕೆ ಮನ್ನಣೆ ಇರುತ್ತದೆ. ಯಾಕೆಂದರೇ "ಮಗು ಕಣಮ್ಮಾ ಅದಕ್ಕೆ ಏನೂ ಗೊತ್ತಾಗುತ್ತದೆ. ಹಠ ಮಾಡುತ್ತದೆ". ಹೀಗೆ ನಮ್ಮ ಅಜ್ಜ-ಅಜ್ಜಿಯರಿಂದ ನಮ್ಮಗಳಿಗೆ ಅಸರೆಯ ಕಕ್ಕುಲಾತಿಯ ಮಾತು ಸಿಕ್ಕಿರುತ್ತದೆ. ಅಪ್ಪ -ಅಮ್ಮ ಹೊಡೆಯಲು ಬಂದಾಗ ಅಜ್ಜಿಯ ಸೆರಗಿನಲ್ಲಿ ಹುದುಗಿಕೊಂಡ ಕ್ಷಣ. ಅಂಗಡಿಯಿಂದ ಅಜ್ಜ ತಂದುಕೊಟ್ಟ ಪೇಪ್ಪರಮೆಂಟು ತಿಂದ ದಿನಗಳ ಮೆಲುಕು.. ಇಂದು ನೆನಪಿಸಿಕೊಂಡರೂ ಅದರ ಸವಿಯ ರಸ ಬಾಯಲ್ಲಿ ಎಲ್ಲೂ ಇನ್ನೂ ನಿಂತಿದೆ ಅನ್ನಿಸುತ್ತದೆ.

ಮೊದಲ ಸಲ ಶಾಲೆಗೆ ಹೋಗಲು ಸುತಾರಾಮ್ ಒಪ್ಪದೆ ಕೊಂಟಾಟವಾಡಿದ್ದು.. ಶಾಲೆಯ ಮೇಸ್ಟರ್ ಭಯದಲ್ಲಿ ನಡುಗಿದ ಅಳುವಿನ ಕಣ್ಣೀರು ಇಂದು ಸಹ ನೆನಪಿದೆ. ಅಲ್ಲಿ ಆಟವಾಡುತ್ತಾ ಎಡವಿ ಬಿದ್ದು ಕಾಲಿನ ಉಗರನ್ನು ಕಳೆದುಕೊಂಡು ನೋವಿನಲ್ಲಿ ಒಂದು ವಾರ ಅತ್ತು ಕರೆದದ್ದು.

ಅಜ್ಜಿಯ ಅನುಭವದ ಮೂಸೆಯಲ್ಲಿ ಒಡಮೂಡಿದ ಸಣ್ಣ ಸಣ್ಣ ಕಥೆಗಳು, ಅದನ್ನು ಕೇಳಲೆಬೇಕೆಂಬ ರೀತಿಯಲ್ಲಿ ರಾತ್ರಿಯೀಡಿ ಅಜ್ಜಿಯ ಮಗ್ಗುಲಲ್ಲಿ ಮಲಗಲು ಅತ್ತಿದ್ದು.

ಅಮ್ಮ ಎಲ್ಲಾದರೂ ಹೋಗಲು ತಯಾರಿ ನಡೆಸಿದರೇ ನಾನು ನಿನ್ನ ಜೊತೆಯಲ್ಲಿ ಬರುವೆನೆಂದು ದಂಬಾಲು ಬೀಳುತ್ತಿದ್ದದ್ದು.

ಮೊದಲ ರೂಪಾಯಿಯನ್ನು ಮಾವನಿಂದ ಪಡೆದದ್ದು. ಅದನ್ನು ಕೊಟ್ಟು ಅಂಗಡಿಯಲ್ಲಿ ಮೀಠಾಯಿ ಖರೀದಿ ಮಾಡಿದ್ದು. ಅದನ್ನೇ ಜೇಬಿನಲ್ಲಿ ದಿನವೀಡಿ ಇಟ್ಟುಕೊಂಡು ಸ್ವಲ್ಪ ಸ್ವಲ್ಪವೇ ಕಡಿದುಕೊಂಡು ಸವಿದಿದ್ದು. ಗೆಳೆಯರಿಗೆ ಅದನ್ನು ತೋರಿಸಿಕೊಂಡು ನಿಮಗೆ ಬೇಕಾ? ಎಂದು ಕೇಳಿ ಕೇಳಿ ಕೊಡಲ್ಲಪ್ಪಾ ಎಂದು ಹೇಳುತ್ತಾ ಹೇಳುತ್ತಾ ಕೊಟ್ಟಿದ್ದು... ಜೊತೆಯಲ್ಲಿ ಕಳ್ಳಿ ಸಾಲೆ ಸುತ್ತಿದ್ದು.. ಹೊಲದಲ್ಲಿ ಬೆಳೆದ ಕಾಯಿ ಕಸರನ್ನು ಕದ್ದು ತಿಂದಿದ್ದು..

ಮೊದಲ ಸಲ ನಗರಕ್ಕೆ ಬಂದಿದ್ದು.. ಅಚ್ಚರಿ ಪಟ್ಟಿದ್ದು.. ಮೊದಲ ಸಲ ಬಸ್ಸನ್ನು ನೋಡಿದ್ದು.. ಮೊದಲಸಲ ಸೈಕಲ್ ಮೇಲೆ ಕುಳಿತುಕೊಂಡಿದ್ದು... ಮೊದಲ ಸಲ ಮರವೇರಿದ್ದು.. ಅಯ್ಯೋ ಆ ದಿನಗಳ ಒಂದು ಒಂದು ಕ್ಷಣಗಳು ಹೀಗೆ ರಂಗು ರಂಗಾಗಿ ಮನದ ಮೂಲೆಯಿಂದ ಇಣಿಕಿ ಇಣಿಕಿ ನೋಡುತ್ತಿವೇ...

ಚಿಕ್ಕ ಮನಸ್ಸಿನಲ್ಲಿ ಹಗಲು ಕನಸುಕಂಡಿದ್ದು. ಮುಂದೆ ಅದನ್ನು ಮಾಡಬೇಕು. ಅದನ್ನು ತಿನ್ನಬೇಕು. ಅಲ್ಲಿ ಹೋಗಬೇಕು. ಅಲ್ಲಿ ಹೋಗಿ ಹಾಗೆ ಸಂಭ್ರಮಿಸಬೇಕು. ಹೊಸ ಬಟ್ಟೆಯನ್ನು ಧರಿಸಿ ಎದುರು ಮನೆಯ ಗೆಳೆಯನಿಗೆ ತೋರಿಸಬೇಕು..

ಹೀಗೆ..ಅ ದಿನಗಳ ಸಂಭ್ರಮಕ್ಕೆ ಇಂದಿನ ಈ ಯಾವ ದಿನಗಳು ಎಂದೂ ಸರಿಸಾಟಿ ಇಲ್ಲ ಬಿಡಿ...

ಕೇವಲ ಸವಿ ಸವಿ ನೆನಪು ಮಾತ್ರ.. ಮಕ್ಕಳ ದಿನವೆಂದರೇ ಯಾವುದೇ ಜಂಜಾಟವಿಲ್ಲದ ಕೇವಲ ಸಂತಸವಾದ ಆಟವಾಡುವ ದಿನಗಳು.. ಮತ್ತೇ ಆ ದಿನಗಳಿಗೆ ಹೋಗಲಾರದಷ್ಟು ದೂರ ಬಂದಿರುವೆವು ಅಲ್ಲವಾ?

ಜೀವನದಲ್ಲಿ ಒಮ್ಮೆ ಮಾತ್ರ ಬರುವ ಈ ದಿನಗಳ ಸಂಭ್ರಮಕ್ಕೆ ನಾವುಗಳು ನಮ್ಮ ಮಕ್ಕಳನ್ನು ಅವರ ಪಾಡಿಗೆ ಅವರನ್ನು ಅನುಭವಿಸಲು ಬಿಡುವ ಜರೂರತು ಇಂದು ಅತ್ಯವಶ್ಯಕವಾಗಿದೆ. ಹಕ್ಕಿ ಪಕ್ಷಿಗಳಾಗಿ ಸ್ವತಂತ್ರವಾಗಿ ನಲಿಯುವಂತಹ ದಿನಗಳನ್ನು ಇಂದಿನ ಈ ಮುಂದುವರೆದ ಯಾಂತ್ರಿಕ ದಿನಮಾನದಲ್ಲಿ ನಮ್ಮ ಚಿಕ್ಕವರಿಗೆ ಪ್ರತಿಯೊಬ್ಬರೂ ಕೊಡಬೇಕಾಗಿದ್ದು ನಮ್ಮ ಕರ್ತವ್ಯ.

ಆದರೂ ಅದೇಷ್ಟೋ ಮಕ್ಕಳು ಈ ಒಂದು ಸುಂದರ ದಿನಗಳನ್ನು ನಿತ್ಯ ಮೀಸ್ ಮಾಡಿಕೊಳ್ಳುತ್ತಿದ್ದಾರೆ. ಅದಕ್ಕೆ ಕಾರಣಗಳು ಹಲವಾರು ಇವೆ. ಅದರೇ ಅವರ ಬಾಲ್ಯದ ಈ ದಿನಗಳನ್ನು ಯಾರೂ ಕದಿಯಬಾರದು. ಅದು ಅವರುಗಳಿಗೆ ಮಾತ್ರ ಮೀಸಲು. ನಾವುಗಳು ದೂರದಿಂದ ನಿಂತು ನೋಡಿ ನಲಿಯುದುದೊಂದೇ ನಮ್ಮ ಸೌಭಾಗ್ಯ!

ಮಕ್ಕಳ ದಿನಾಚರಣೆಯ ಶುಭಾಶಯಗಳು!

ಗುರುವಾರ, ನವೆಂಬರ್ 3, 2011

ಕಾಲದ ರೇಖೆಯ ಮೇಲೆ..

ಕಾಲವೇ ಎಲ್ಲಾ ಅನಿಸುತ್ತದೆ. ದಿನಗಳು ಕಳೆದಂತೆ ಎಲ್ಲವೂ ಬದಲಾಗುತ್ತವೆ. ಎಲ್ಲವನ್ನು ಮರೆಸುತ್ತವೆ.. ಎಲ್ಲವನ್ನು ಕೊಡುತ್ತದೆ.. ಎಲ್ಲವನ್ನು ಕಿತ್ತುಕೊಳ್ಳುತ್ತದೆ..

ಕಾಲದ ಮೇಲೆ ನಮ್ಮ ನಿಮ್ಮೆಲ್ಲಾರ ಪಯಣ. ಕಾಲದ ರೇಖೆಯ ಮೇಲೆ ನಮ್ಮಗಳ ಸುಖ, ನಲಿವು, ನೆನವು, ಸಾಧನೆ, ದ್ವೇಷ, ಪ್ರೀತಿ, ಅಸೂಯೆ ಇತ್ಯಾದಿ ಇತ್ಯಾದಿ ಕೃತ್ಯಗಳ ಕಲಸುಮೆಲೋಗರ.. ಇದೇ ಜೀವನ ಅನಿಸುತ್ತದೆ.

ದಿನಗಳು ಉರುಳಿದಂತೆ ವ್ಯಕ್ತಿಯ ಪ್ರಯಾರಿಟಿಗಳಲ್ಲಿ ಸಣ್ಣ ಪಲ್ಲಟಗಳು. ಆ ಸಮಯಕ್ಕೆ ಆ ದಿನಕ್ಕೆ ಬಹುಮುಖ್ಯ ಎನಿಸಿದ ವಿಷಯ ವಿಶೇಷಗಳು ಇಂದಿನ ಸಮಯಕ್ಕೆ ನಗಣ್ಯವೆನಿಸುತ್ತವೆ. ಅಂದು ಮುಖ್ಯ ಎಂದು ಕಷ್ಟಪಟ್ಟು ಸಂಪಾದಿಸಿದ ವಿಧ್ಯೆ, ಬುದ್ಧಿ, ಹಣ, ಸ್ನೇಹಿತರು, ಆಸ್ತಿ ಮುಂತಾದವುಗಳು ಇಂದಿನ ನಮ್ಮ ಬದುಕುವ ಜೀವನಕ್ಕೆ ಬೇಕೇ ಆಗಿಲ್ಲವೆನೋ ಅನಿಸುತ್ತದೆ.

ಎಷ್ಟು ವಿಚಿತ್ರ ಅನಿಸಿದರೂ ಇದು ಸತ್ಯವಾದದ್ದು. ಬದಲಾದ ಪರಿಸ್ಥಿತಿಗಳಿಗೆ ವ್ಯಕ್ತಿ ಹೊಂದಿಕೊಂಡು ಹೊಸ ಹೊಸ ದಿಕ್ಕಿನ ಕಡೆ ಮುಖ ಮಾಡಲೇ ಬೇಕು. ತನ್ನನ್ನು ತಾನು ಹತ್ತು ಹಲವು ಹೊಸತನಗಳಿಗೆ ತೆರೆದುಕೊಂಡು ಮುಂದುವರಿಯಲೇಬೇಕು.

ಪುನಃ ಕಾಲಾಯಾ ತಸ್ಮಯಾ ನಮಃ ಎಂಬ ಗೂಣಗಿನಿಂದ ಏನೂ ಮಾಡಲಾರದಂತಹ ಮನಸ್ಸಿನಿಂದ ಏನೋ ಮಾಡಬೇಕು ಮತ್ತು ಏನನ್ನಾದರೂ ಸಾಧಿಸಬೇಕು ಎಂಬ ಹಂಬಲವೆ ಈ ಜೀವನ.




ಯೋಚಿಸಿ ಇಂದು ನಾವುಗಳು ಎಷ್ಟೊಂದು ವಿಷಯಗಳನ್ನು ಹಿಂದೆ ಗಮನಿಸದಂತೆ, ಪ್ರಾಮುಖ್ಯ ಕೊಟ್ಟಂತೆ ಇಂದು ಕೊಡಲಾರೆವು. ಯಾಕೆಂದರೇ ನಮ್ಮ ಅಸಕ್ತಿ ಮತ್ತು ಖುಷಿಯ,ಅವಶ್ಯಕತೆಯ ಪ್ರಯಾರೀಟಿಗಳು ಬೇರೆಯಾಗಿವೆ.

ನಾವುಗಳು ಚಿಂತಿಸುವ ವಿಷಯಗಳು, ಬಳಸುವ ದಾರಿಗಳು,ಪದಗಳು,ಮಾತನಾಡಿಸುವ ವ್ಯಕ್ತಿಗಳು, ಸ್ನೇಹಿತರುಗಳು, ನೋಡುವ ನೋಟಗಳೆ ಹಿಂದೆ ಇದ್ದಂತೆ ಈ ಸಮಯಕ್ಕೆ ಇಲ್ಲವೇ ಇಲ್ಲ.

ಎಷ್ಟೋ ಹಳೆಯ ಪದಗಳು ಇಂದು ನೆನಪಿಗೆ ಬರುತ್ತಿಲ್ಲ. ಮರತೇ ಹೋದಂತೆ ಅನಿಸುತ್ತಿದೆ. ಎಲ್ಲಾವೂ ಇತಿಹಾಸ ಸೇರಿದಂತಹ ಅನುಭವ. ಹಳೆಯ ಮಾತುಗಳು, ಹಳೆಯ ಪದಗಳನ್ನು ಕೇಳಿದರೇ ಬೆರಗಾಗಿ ನೋಡುವಂತಾಗಿದೆ.

ನಮ್ಮ ಇಂದಿನ ಪ್ರಸ್ತುತ ಸಮಯದಲ್ಲಿ ಪದಗಳ ಬಳಕೆಯನ್ನು ಗಮನಿಸಿದರೂ ಕೇವಲ ಕೆಲವೇ ಕೆಲವು ಪದಗಳ ಜೋತೆಯ ಜುಗಲ್ ಬಂದಿ. ಇದು ನಾವುಗಳು ಬಳಸುವ ಭಾಷೆಗೆ ಅನ್ವಯಿಸಿದರೇ. ನಮ್ಮಗಳ ಸಂಬಂಧಗಳ ಅನುಭಾವದ ತಂತುಗಳು ಬಹಳ ಕಿರಿದಾಗಿದೆ ಅಂತಾ ಅನ್ನಿಸುವುದಿಲ್ಲವಾ?

ಇದು ಯಾಕೆ ಎಂದರೇ ಪುನಃ ಅದೇ ಸಾಮಾನ್ಯ ಉತ್ತರಾ! "ಮುಂದುವರಿಯಬೇಕೆಂದರೇ ಕೆಲವೊಂದನ್ನೂ ಕಳಚಿಕೊಳ್ಳಬೇಕು ಮಗಾ" ಅಂತಾ. ಆದರೂ ಒಮ್ಮೊಮ್ಮೆ ನಮಗೆಲ್ಲಾರಿಗೂ ಅನಿಸುತ್ತಿರುತ್ತದೆ ಏನೋ ಒಂದನ್ನು ಮಿಸ್ ಮಾಡಿಕೊಳ್ಳುತ್ತಿದ್ದಿವಿ ಅಂತಾ. ಆದರೂ ಹೀಗೆ ಒಂದೊಂದನ್ನು ಪಡೆಯುವುದಕ್ಕೋಸ್ಕರ ಮತ್ತೊಂದನ್ನು ದಿಕ್ಕರಿಸುತ್ತಾ ಬದುಕು ಸಾಗಿಸಬೇಕಾಗುತ್ತದೆ?

ಇದು ಒಂದು ರೀತಿಯಲ್ಲಿ ಯಾರ ಅರಿವಿಗೂ ಬಾರದ ರೀತಿಯಲ್ಲಿ ಎಲ್ಲರಲ್ಲೂ ಸಾಮಾನ್ಯವಾಗಿ ಸಂಭವಿಸುವ ಸಾಮಾನ್ಯ ಘಟನೆ ಅನಿಸುತ್ತದೆ.

ಇದು ಎಲ್ಲದಕ್ಕೂ ಸಂಬಂಧಿಸಿದಾಗಿದೆ. ಅಂದು ಚಿನ್ನಾ ರನ್ನಾ ಎಂದೂ ಮುದ್ದಾಡಿದವರು.. ಮುದ್ದಾಡಿಸಿಕೊಂಡವರು.. ಇಂದು ಕಾಲ ಕಸವಾಗಿ ಕಾಣುವಂತಾಗುವುದು. ಅಂದು ಇವರೇ ನಮ್ಮಗಳ ದೀಪ ಎಂದುಕೊಂಡವರು ಇಂದು ಏನೂ ಅಲ್ಲವೇ ಅಲ್ಲ ಅಂತಾ ಅನಿಸುವುದು. ಇದೇ ಜೀವನವಾ?

ತರ್ಕಕ್ಕೂ ನಿಲುಕಲಾರದಂತಹ ತುಂಬ ಸಂಕೀರ್ಣಮಯವಾದ ಈ ಯೋಚನೆಗಳು ಎಲ್ಲರಿಗೂ ಕಾಡುತ್ತವಾ ಎಂಬುದು ಬಹು ಮುಖ್ಯ ಪ್ರಶ್ನೆ.

ಕಾಡಲೇ ಬೇಕು ಅಲ್ಲವಾ.. ಇಂದಿನ ಕಾಲದ ಮಿತಿಯಲ್ಲಿ, ಒಂದು ನಿರ್ಧಿಷ್ಟವಾದ ಕಾಲದ ನಿಲ್ದಾಣದಲ್ಲಿ ಎಲ್ಲವನ್ನೂ ಒಮ್ಮೆ ನೋಡಿಕೊಳ್ಳುವ ಮನಸ್ಸು ಪ್ರತಿಯೊಬ್ಬರಿಗೂ ಬಂದೇ ಬಂದಿರುತ್ತದೆ.

ಹಾಗೆಯೇ ಹಳೆಯ ಸಿಹಿ, ಕಹಿ ಅನುಭವಗಳ ಮೇಲೆಯೆ ಅಲ್ಲವಾ ಮುಂದಿನ ಅಥವಾ ಪ್ರಸ್ತುತ ನಮ್ಮ ಬದುಕನ್ನು ರೂಪಿಸಿಕೊಳ್ಳುವಂತಾಗುವುದು. ಕಳೆದ ಗಳಿಗೆ, ವ್ಯಕ್ತಿಗಳ ಒಡನಾಟ, ಕೇಳಿದ ನೋಡಿದ ಬೆಡಗು ಮುಂದಿನ ಬದುಕಿಗೆ ಸ್ಫೂರ್ತಿ.

ಯಾವುದನ್ನು ಇದು ಹೀಗೆ ಎಂದು ಎಲ್ಲೂ ಹೇಳಿಲ್ಲ. ಅದು ಆ ಆ ಸಮಯಕ್ಕೆ ಸರಿಯಾಗಿ ಹೇಗೆ ಹೇಗೆ ನಾವುಗಳು ನಮ್ಮ ನಮ್ಮಲ್ಲಿ ತೆಗೆದುಕೊಳ್ಳುತ್ತೇವೋ ಹಾಗೆ ಆ ಕ್ಷಣಕ್ಕೆ ಅದು ಸತ್ಯವಾಗಿರುತ್ತದೆ. ಆ ಪರಿಧಿಯಲ್ಲಿ ಸಾಗುವುದು ನಮ್ಮಗಳ ಬದುಕು ಅಲ್ಲವಾ?

ಮಂಗಳವಾರ, ನವೆಂಬರ್ 1, 2011

ಕನ್ನಡವೆನೆ ಮನ ಕುಣಿದಾಡುವುದು!!



"ಕನ್ನಡ..." ಹೀಗೆ ಅಂದರೇ ಏನೋ ನೆಮ್ಮದಿ. ಆ ಶಬ್ಧವನ್ನು ಕೇಳಿದರೇ ಒಂದು ಕ್ಷಣ ಮೈ ರೋಮಾಂಚನವಾಗುವುದು ಮತ್ತು ನಮ್ಮದೇ ಭಾಷೆ ಎಂಬ ದೈರ್ಯ ಬರುವುದು. ಕನ್ನಡ ಮಾತನ್ನಾಡುವ ಇಡಿ ಸಮೊಹವನ್ನು ಕಂಡರಂತೂ ಇನ್ನೂ ಖುಷಿ ಯಾಕೆಂದರೇ ಎಲ್ಲರೂ ನಮ್ಮವರೇ ಎಂಬ ಸಂತಸ. ಮಾತೃ ಭಾಷೆಗೆ ಇರುವಂತಹ ಜಾದು ಈ ರೀತಿಯದು.

ಅದು ಬಿಸಿಲಿನ ಜಳದಲ್ಲಿ ನಮ್ಮ ದಾಹವನ್ನು ಹಿಂಗಿಸಿಕೊಳ್ಳಲು ನೀರಿಲ್ಲದ ಜಾಗದಲ್ಲಿ ಏನೂ ಏನೋ ತಂಪಾದ ಪಾನಿಯಗಳನ್ನು ಲೀಟರ್ ಗಟ್ಟಲೆ ಕುಡಿದರೂ ಹಿಂಗದ ದಾಹ ಅದೇ ಸಾಮಾನ್ಯವಾದ ಒಂದು ಲೋಟ ನೀರನ್ನು ಕುಡಿದಾಗ ಸಿಗುವಂತಹ ಮನಸ್ಸ್ ತೃಪ್ತಿ ಮಾತೃ ಭಾಷೆಯನ್ನು ಮಾತನಾಡಿದಾಗ, ಬರೆದಾಗ, ನುಡಿದಾಗ, ಓದಿದಾಗ ಸಿಗುವುದು.

ಯಾವುದೇ ನೋವುಂಟಾದಾಗ, ಬೇಸರವಾದಾಗ,ಖುಷಿಯಾದಾಗ ಮನದಲ್ಲಿ ಮೊದಲು ಮೂಡುವ ಮಾತೇ ಕನ್ನಡ ಪದ. ನಮ್ಮ ಮನದ ಭಾವನೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಯಾರಿಗಾದರೂ ಹೇಳಬೇಕು ಅಂದಾಗ ಬರುವಂತಹ ನುಡಿ ಶಬ್ಧವೇ ಕನ್ನಡ. ಕನ್ನಡ ಬಿಟ್ಟು ಯಾವುದೇ ಬೇರೆ ಭಾಷೆಯಲ್ಲಿ ಮಾತನಾಡಿದರೂ ಏನೋ ಒಂದು ಸ್ವಲ್ಪ ಕೂರತೆಯನ್ನು ಅನುಭವಿಸುವೆವು.

ಗೊತ್ತಿರಬಹುದು ಯಾವುದೇ ಭಾಷೆಯ ಸಿನಿಮಾವನ್ನು ನೋಡಿದರೂ ನಮ್ಮ ಭಾಷೆಯ ಚಲನಚಿತ್ರವನ್ನು ನೋಡುವಾಗ ಅನುಭವಿಸುವ ಸಂಭ್ರಮ ಸಂತಸವನ್ನು ನಿಜವಾಗಿ ಅನುಭವಿಸಲು ಸಾಧ್ಯವಿಲ್ಲ.

ಬಾಲ್ಯದಲ್ಲಿ ಮಗುವಿನ ಓ ನಾಮ ಪ್ರಾರಂಭವಾಗುವುದೇ ಅದರ ಮಾತೃ ಮತ್ತು ಮನೆಯ ಆಡು ಭಾಷೆಯಿಂದ. ನಾವುಗಳು ದಾರಿ ತಪ್ಪಿದಾಗ ನಮ್ಮಗಳಿಗೆ ಅಸರೆಯ ದಾರಿ ದೀಪವಾಗುವುದು ನಮ್ಮ ಕನ್ನಡ ಮಾತ್ರ.

ಕನ್ನಡ ಅಂದರೇ ಅದು ಎಲ್ಲಾ ಎಂದು ಮಾತ್ರ ಹೇಳಬಹುದೇನೊ. ಭಾಷೆಯಲ್ಲಿಯೇ ಸಂಸ್ಕೃತಿ, ಚರಿತ್ರೆ, ಪರಂಪರೆ ಅಡಗಿದೆ. ಅದು ಒಂದು ಭವ್ಯ ಭವಿಷ್ಯ ಮತ್ತು ಉನ್ನತವಾದ ಗಿರಿ ಶಿಖರವೇ ಸರಿ. ಇದು ನಮ್ಮನ್ನು ಬೆಳೆಸುತ್ತಾ ಅದು ಬೆಳೆಯುತ್ತಾ ಇದೆ. ಹಿಂದಿನಿಂದ ಇಂದಿನವರೆಗೂ ನೂರಾರು ಮಹನೀಯರುಗಳು ತಮ್ಮ ಜೀವನವನ್ನು ಅದರ ಏಳ್ಗೆ ಮತ್ತು ಬೆಳವಣಿಗೆಗೆ ಮುಡಿಪಿಟ್ಟು ತಾವುಗಳು ಅತಿ ಎತ್ತರದ ಸ್ಥಾನಕ್ಕೆ ಏರಿದ್ದಾರೆ.

ಸಾವಿರಾರು ವರುಷಗಳ ಇತಿಹಾಸವನ್ನು ಹೊಂದಿರುವ ಪ್ರಾಚೀನ ದ್ರಾವಿಡ ಭಾಷೆಗಳಲ್ಲಿ ಒಂದಾದ ಕನ್ನಡ ಲಿಪಿಯಂತೂ ಮುತ್ತು ಪೋಣಿಸಿದ ರೀತಿಯಲ್ಲಿ. ಕಲಿಯುವುದಂತೂ ಅತಿ ಸುಲಭ. ಸುಲಿದ ಬಾಳೆ ಹಣ್ಣಿನೋಪಾದಿಯಲ್ಲಿ. ಕನ್ನಡಾಂಭೆಯ ಸರಸ್ವತಿಯ ಪುತ್ರರ ಕಾಣಿಕೆಯನ್ನು ನಮ್ಮ ಜೀವನ ಪೂರ್ತಿ ಓದಿ ಅಭ್ಯಾಸಿಸಿದರೂ ಎಂದಿಗೂ ಮುಗಿಯಲಾರದಂತಹ ಅಗಾಧ ಸಮುದ್ರದೋಪಾದಿ, ಅಳತೆಗೂ, ಮಿತಿಗೂ ಸಿಗಲಾರದಂತಹದ್ದು.

ಮನ್ನೆ ಮನ್ನೇ ೮ನೇ ಙ್ಞಾನಪೀಠ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು ಕನ್ನಡಾಂಭೆ ತನ್ನ ಹಿರಿಮೆಯನ್ನು ಪುನಃ ಕನ್ನಡ ಜನಪದಕ್ಕೇ ತನ್ನ ಉತ್ಕೃಷ್ಟತೆಯನ್ನು ಮನನ ಮಾಡಿಕೊಟ್ಟಿದೆ. ಭಾರತೀಯ ಯಾವೊಂದು ಭಾಷೆಗೂ ಇಷ್ಟೊಂದು ಪ್ರಶಸ್ತಿಗಳ ಗೌರವ ಸಿಕ್ಕಿರದೇ ಇರುವುದು ಕನ್ನಡವನ್ನು ಪ್ರತಿಯೊಬ್ಬರೂ ಬೆರಗುಗಣ್ಣಿನಿಂದ ನೋಡುವಂತೆ ಮಾಡಿದೆ.

ಆದರೂ ಹಿತ್ತಲ ಗಿಡ ಮದ್ದು ಅಲ್ಲ! ಎಂಬ ರೀತಿಯಲ್ಲಿ ನಮ್ಮ ಕನ್ನಡ ಜನಗಳಿಗೆ ಅದೂ ನಗರ ಪ್ರದೇಶದ ಮಂದಿಗೊಂತೂ ಇಂಗ್ಲೀಷ್ ವ್ಯಾಮೋಹ ಹೇಳತಿರದು. ಕನ್ನಡ ಎಂದರೇ ಬೇಡದ್ದು. ಅದು ಕೀಳುಹಿರಿಮೆ ಎಂಬ ರೀತಿಯಲ್ಲಿ ನೋಡುತ್ತಿದ್ದಾರೆ. ನಮ್ಮ ಮಕ್ಕಳೆಲ್ಲಾ ಟಸ್ಸು ಪುಸ್ಸು ಇಂಗ್ಲೀಷ್ ಮಾತನ್ನಾಡಬೇಕು ಎಂಬ ಮಹಾತ್ವಕಾಂಕ್ಷಿತನದಿಂದ ಕಾನ್ವೇಂಟೇ ನಮ್ಮ ಪೀಳಿಗೆಗಳಿಗೆ ಭವಿಷ್ಯ ಎಂಬ ರೀತಿಯ ಬದಲಾವಣೆಯ ಗಾಳಿ ಎಲ್ಲಾ ಕಡೆ ಬಿಸುತ್ತಿದೆ. ಕನ್ನಡ ಮಾದ್ಯಮದ ಸರ್ಕಾರಿ ಶಾಲೆಗಳನ್ನು ಕೇಳುವವರು ಇಲ್ಲದಂತಾಗುವ ಪರಿಸ್ಥಿತಿ ಬರುತ್ತಿದೆ. ಬಡವರ ಭಾಷೆ ಕನ್ನಡ ಎಂಬಂತಾಗಿದೆ.ಬಡವರ ಮಕ್ಕಳಿಗೆ ಮಾತ್ರ ಕನ್ನಡ ಮಾಧ್ಯಮ ಶಿಕ್ಷಣ ಎಂಬಂತಾಗಿರುವುದು ಯಾವುದರ ಪ್ರತೀಕ?

ಈ ರೀತಿಯ ಬದಲಾವಣೆಯನ್ನು ನಿಲ್ಲಿಸಬೇಕಾಗಿದ್ದು ಸರ್ಕಾರ ಮತ್ತು ಸಂಘ ಸಂಸ್ಥೆಗಳ ಕರ್ತವ್ಯ. ಕನ್ನಡದಲ್ಲಿ ಕಲಿತರೂ ಏನಾದರೂ ದೊಡ್ಡದಾಗಿ ಸಾಧಿಸಬಹುದು ಎಂಬ ಒಂದು ಭರವಸೆಯನ್ನು ಎಳೆಯರಲ್ಲಿ ಬಿತ್ತಬೇಕಾಗಿದ್ದು ಹಿರಿಯರ ಕೆಲಸ.

ಹೈ ಟೆಕ್ ಅಂದರೇ ಇಂಗ್ಲೀಷ್ ಮಾತ್ರ ಎಂಬ ದೋರಣೆ ಹೋಗಲಾಡಿಸಬೇಕು. ಮಾತೃ ಭಾಷೆಯಲ್ಲಿಯೇ ದೊಡ್ಡ ದೊಡ್ಡ ಪದವಿಗಳು ಸಿಗುವಂತಹ ಕಾಲ ಬರಬೇಕು. ಅದನ್ನು ಪರಿಣಾಮಕಾರಿಯಾಗಿ ಎಲ್ಲಾ ರಂಗದಲ್ಲೂ ಉಪಯೋಗಿಸುವಂತಾಗಬೇಕು. ಇಂಗ್ಲೀಷ್ ಎಂಬುದು ಒಂದು ಭಾಷೆಯಾಗಿರಬೇಕು. ಅದು ಬಿಟ್ಟು ಅದೇ ಒಂದು ಸಂಸ್ಕೃತಿಯನ್ನು ದಮನಾಕಾರಿಯಾಗಿ ತುಳಿಯುವಂತಾಗಬಾರದು.

ಈ ದಿಕ್ಕಿನಲ್ಲಿ ಪ್ರತಿಯೊಬ್ಬರೂ ಚಿಂತಿಸುವ ಸಮಯ ಇಂದು ಬಂದಿದೆ. ಕೇವಲ ನವಂಬರ್ ೧ ರಂದು ವೀರಾವೇಷದ ಕನ್ನಡ ಪರ ಮಾತುಗಳು ಎಲ್ಲಾ ಕಡೆಯಿಂದ ಬರದೇ, ಆ ಮಾತುಗಳು ಬಲಿಷ್ಟವಾದ ಕನ್ನಡ ಸಂಸ್ಕೃತಿಯನ್ನು ಉಳಿಸಿ - ಬೆಳೆಸುವಂತಾಗಿ ಪ್ರತಿಯೊಬ್ಬರೂ ಪ್ರೀತಿಪಟ್ಟು, ಇಷ್ಟಪಟ್ಟು ಕಲಿಯುವಂತಾಗಬೇಕು. ಆಗಲೇ ಯಾವುದೇ ಭಾಷೆಯ ಅಳಿವು ಉಳಿವು ನಿರ್ಧರವಾಗುವುದು.

ಅದು ಕೇವಲ ಹಳ್ಳಿಯವರ ಭಾಷೆ ಮಾತ್ರ ಆಗಬಾರದು. ಕನ್ನಡ ಮಾತನ್ನಾಡಲು ಹೆಮ್ಮೆ ಪಡುವಂತಹ ಕಾಲವಾಗಬೇಕು. ಇದು ಎಂದು ಬರುವುದೋ? ಆ ಕನ್ನಡಾಂಭೆಯೇ ಹೇಳಬೇಕು!

ಶುಕ್ರವಾರ, ಅಕ್ಟೋಬರ್ 21, 2011

ಭೈರಪ್ಪ ಮತ್ತು others

ನಮ್ಮ ದೇಶದಲ್ಲಿ ವಿವಾದಗಳು ಇಲ್ಲದ ಜಾಗ, ವಿಚಾರ, ವ್ಯಕ್ತಿಗಳು ಯಾವುದೂ ಇಲ್ಲ ಅನಿಸುತ್ತಿದೆ. ಪ್ರತಿಯೊಂದಕ್ಕೂ ಒಂದಲ್ಲಾ ಒಂದು ವಿವಾದವೆಂಬ ಅಂಟು ಜಾಡ್ಯ ಅಮರಿಕೊಂಡಿರುತ್ತದೆ. ಪ್ರತಿಯೊಬ್ಬರೂ ಗುಲಗಂಜಿಯಲ್ಲಿ ಬಣ್ಣ ಕಪ್ಪನ್ನು ಹುಡುಕುತ್ತಿರುತ್ತಾರೆ.

ಪ್ರಸ್ತುತವಾಗಿ ವಿವಾದದ ಭುಗಿಲು ಎದ್ದದ್ದು ಙ್ಞಾನಪೀಠ ಪ್ರಶಸ್ತಿಗೆ. ಕನ್ನಡಕ್ಕೆ ಎಂಟನೇಯ ಅಪರೂಪದ ಪ್ರಶಸ್ತಿ ಹದಿನೇಳು ವರುಷಗಳಾದ ಮೇಲೆ ಸಿಕ್ಕಿದ ಸಂದರ್ಭದಲ್ಲಿ ಎಲ್ಲರೂ ಎಲ್ಲವನ್ನು ಮರೆತು ಸಂಭ್ರಮಪಡಬೇಕಾಗಿತ್ತು. ಆದರೇ ಮನುಷ್ಯರು ಅ(ಲ್ಪ) ತೃಪ್ತ? ಎಂಬ ರೀತಿಯಲ್ಲಿ ಯಾರೊ ಒಬ್ಬರೂ ಯಾರ ಮೇಲೆ ಮಾತಿನ ಕೆಸರು ಎರಚಿ ಇಡೀ ಕನ್ನಡ ಸಾಂಸ್ಕೃತಿಕ ವಾತವರಣವನ್ನು ಕಲುಷಿತ ಮಾಡಿಬಿಟ್ಟರು. ಇದು ನಿಜವಾಗಿಯೂ ಬೆಸರದ ಸಂಗತಿ.

ಆ ವ್ಯಕ್ತಿ ಮೊಕ ಪ್ರೇಕ್ಷಕನಾಗಿ ಇದ್ದಾನೆ. ಆದರೆ ಬೆರೆಯವರು ಅಲ್ಲಿ ಇಲ್ಲಿ ಕೆಸರನ್ನು ಎರಚಿಕೊಂಡು ಅವರಿಗೂ ಸಹ ಅಗೌರವವನ್ನು ಮಾಡಿದ್ದಾರೆ. ಪ್ರಶಸ್ತಿ ಯಾರಿಗೆ ಕೊಡಬೇಕು ಎಂಬುದು ಆ ಪ್ರಶಸ್ತಿ ಸಮಿತಿ ನಿರ್ಧರಿಸುವಂತಹದ್ದು. ಅದು ನಮ್ಮ ನಿಮ್ಮಂತಹ ಸಾಮಾನ್ಯರ ಮಾತು ಕತೆಗಳನ್ನು ಕೇಳಲಾರದು ಅಲ್ಲವಾ? ಪ್ರಶಸ್ತಿ ಕೇವಲ ವ್ಯಕ್ತಿಯನ್ನು ಮಾತ್ರ ಪರಿಗಣಿಸಿ ನೀಡಲಾರದಂತಹದ್ದು. ಅದು ಆ ವ್ಯಕ್ತಿಯ ಆ ರಂಗದ ಸಾಧನೆಯ ಮೇಲೆ ಅವಲಂಬಿತವಾಗಿರುತ್ತದೆ. ಅವರ ಅಪಾರವಾದ ಉತ್ತಮ ಕೊಡುಗೆಗೆ ಸಲ್ಲುವಂತಹದ್ದು.

ಹಾಗಾಗಿ ನಾವುಗಳು ಸುಖ ಸುಮ್ಮನೇ ಗಂಟಲು ಹರಿದುಕೊಂಡು ಕೊಗುವುದು ಯಾವ ಸುಖವನ್ನು ಕೊಡಲಾರದು ಅಲ್ಲವಾ?

ಇಲ್ಲಿ ಕಂಬಾರರು ಮತ್ತು ಭೈರಪ್ಪನವರ ಮಧ್ಯೆ ಯಾರು ಶ್ರೇಷ್ಠರು ಎಂದು ಚರ್ಚೆ ಮಾಡುತ್ತಿರುವುದು ಇಬ್ಬರೂ ಮಹನೀಯರುಗಳನ್ನು ನಾವುಗಳು ತೀರಸ್ಕರಿಸಿ ಅವರ ಕೊಡುಗೆಗಳನ್ನು ಗಾಳಿಗೆ ತೂರಿದಂತೆ. ಅದು ಹಾಗೇ ಆಗಬಾರದು.

ನಾವುಗಳು ಎಷ್ಟರ ಮಟ್ಟಿಗೆ ಇಬ್ಬರ ಕೊಡುಗೆಗಳಾದ ಅವರ ಕನ್ನಡ ಸಾಹಿತ್ಯದ ಪುಸ್ತಕಗಳನ್ನು ಅಭ್ಯಾಸ ಮಾಡಿದ್ದೇವೆ? ಎಷ್ಟರ ಮಟ್ಟಿಗೆ ಅವುಗಳನ್ನು ಮನನ ಮಾಡಿಕೊಂಡಿದ್ದೇವೆ ಎಂಬುದು ಮುಖ್ಯ. ಆಗ ಮಾತ್ರ ನಿಜವಾದ ನಮ್ಮ ಸಾಂಸ್ಕೃತಿಕ ನಾಯಕರುಗಳಿಗೆ ಗೌರವವನ್ನು ನೀಡಿದಂತೆ.




ನೀವು ಗಮನಿಸಿರಬಹುದು.. ಒಬ್ಬರ ಮೇಲೆ ಒಬ್ಬರೂ ಅಪಾದನೆಯನ್ನು ಮಾಡುತ್ತಾ.. ಪತ್ರಿಕೆಗಳಲ್ಲಿ ಸಭೆ ಸಮಾರಂಭಗಳಲ್ಲಿ ಅವರ ಕೃತಿಗಳನ್ನು ಓದಬೇಡಿ ,ಅದು ಹೀಗೆ ಅದು ಹಾಗೇ ಎಂದು ಹೇಳಿದರೇ ಸಾಮಾನ್ಯ ಓದುಗ ಕೇಳುವುದಂತು ಸುಳ್ಳು. ಅವನಿಗೆ ಯಾವುದು ಇಷ್ಟ ಮತ್ತು ಮೆಚ್ಚುಗೆಯಾಗುತ್ತದೋ ಅದನ್ನೇ ಆರಿಸಿಕೊಂಡು ಓದುತ್ತಾನೆ.

ಆ ಲೇಖಕನಿಂದ ಯಾವಾಗ ಹೊಸ ಪುಸ್ತಕಗಳು ಹೊರ ಬರುತ್ತದೆ ಎಂದು ಕಾದಿದ್ದುಕೊಂಡು ಖರೀದಿಸಿ ಓದಿ ಸುಖಪಡುತ್ತಾನೆ. ಅವನಿಗೆ ಯಾವುದೇ ಪಂಥ, ವಿಮರ್ಶೆ, ಷರಾ ಬೇಕಾಗಿಲ್ಲ. ಅವನಿಗೆ ಆ ಕ್ಷಣಕ್ಕೆ ಬೇಕಾಗಿರುವುದು ಆ ಕ್ಷಣದ ಏನೋ ಒಂದು ಅನುಭೂತಿ ಮತ್ತು ಮನಸ್ಸಂತೋಷ ಅವೆರಡು ಇಲ್ಲದಿದ್ದರೆ ಯಾರೂ ಯಾಕೆ ಯಾರ ಬರಹವನ್ನು ಓದುವಂತಹ ಕೆಲಸಕ್ಕೆ ಕೈ ಹಾಕುತ್ತಾನೆ?

ಆದರೇ ನಾವು ತಿಳುದುಕೊಂಡಿರುವವಂತಹ ಹಿರಿಯರುಗಳು ಚಿಕ್ಕವರಾಗಿ ಒಬ್ಬರ ಮೇಲೆ ಒಬ್ಬರೂ ಹೀಗೆ ಹಿಯಾಳಿಸುವುದು.. ಅದು ಅವರ ಬರಹವೇ ಅಲ್ಲ. ಅದು ಕೇವಲ ಬೂಸಾ.. ಅನೈತಿಕ.. ಅಮಾನವೀಯ.. ಬರಹ ಎಂದು ಗಂಟಲು ಕಿತ್ತುಕೊಂಡರೇ.. ಸಾಮಾನ್ಯ ಓದುಗ ಕೇವಲ ಒಂದು ಕಿರುನಗೆಯನ್ನು ಬೀರಿ ಅವನಿಗೆ ಯಾವುದು ಬೇಕೊ ಅದನ್ನು ಮಾತ್ರ ಸ್ವೀಕರಿಸುತ್ತಾನೆ ಅಲ್ಲವೇ?

ಲೇಖಕನೇನೂ ಯಾವುದೇ ಒಂದು ಅಗಾಧವಾದ ಹಂಬಲವಿಟ್ಟುಕೊಂಡು ಕೃತಿಯನ್ನು ಅಷ್ಟೊಂದು ಹುಡುಕಾಡಿ, ಸಂಶೋದಿಸಿ ರಚಿಸಿ ಯಾವುದೋ ಒಂದೇ ಒಂದು ಸಮೊಹ, ಓದುಗ ವರ್ಗಕ್ಕಾಗಿ ರಚಿಸಲಾರ ಅಲ್ಲವಾ? ಅದು ಹೇಗಾದರೂ ಅವನಿಗೆ ಹಾಗೇ ಮನಸ್ಸು ಬರುತ್ತದೆ? ಅದು ಕೇವಲ ಒಂದು ದಿನದ ಪತ್ರಿಕೆಯಲ್ಲಾ. ಅದು ಕಾಂದಂಬರಿ ಅಲ್ಲಿ ಪಾತ್ರಗಳೇ ಸನ್ನಿವೇಶಕ್ಕೆ ತಕ್ಕಾ ಹಾಗೆ ಮಾತನ್ನಾಡುತ್ತವೆ ಅಲ್ಲವಾ? ನನಗೆ ಅನಿಸುವುದು ಇಷ್ಟು ಮಾತ್ರ.

ಲೇಖಕ ಯಾರಿಗೂ ನನ್ನ ಕೃತಿಗಳನ್ನು ಕಾದಿದ್ದು ಓದಿ ಎಂದು ಯಾವಾಗಲೂ ಎಲ್ಲೂ ಲಾಬಿ ಮಾಡಲಂತೂ ಸಾಧ್ಯವಿಲ್ಲ. ಅದು ಇಂದಿನ ಮುಂದುವರಿದ ಜಮಾನದಲ್ಲಿ ಎಂದು ನಡೆಯಲಾರದು. ಓದುಗ ಎಲ್ಲಾ ವಿಮರ್ಶಕರಿಗಿಂತ ಮೀಗಿಲಾದವನು. ಪ್ರತಿಯೊಬ್ಬ ಲೇಖಕ ಕೃತಿ ರಚಿಸುವುದು ನೆಚ್ಚಿನ ಓದುಗನಿಗಾಗಿ ವಿನಾಃ ವಿಮರ್ಶಕರಿಗಾಗಿ ಎಂದು ಅಲ್ಲಾ ಅಲ್ಲವಾ?

ಪ್ರಶಸ್ತಿ ಪುರಾಸ್ಕರಗಳು ಸಿಗುವುದು ಒಂದು ಸಿದ್ಧಾಂತ ಮತ್ತು ನೀಲುವುಗಳ ಮೇಲೆ ಅಲ್ಲಿಯು ಸಹ ಯಾವ ಕೃತಿ, ಲೇಖಕ ಅವರ ಮಾನದಂಡದೊಳಗೆ ಬರುವವನೋ ಅವನಿಗೆ ಪ್ರಶಸ್ತಿ ಸಿಗುತ್ತದೆ. ಪ್ರಶಸ್ತಿಗಾಗಿ ಕೃತಿಗಳನ್ನು ರಚಿಸಿ ಕಾಯುವುದು ಅಸಾಧ್ಯ! ಅದು ಎಂದು ಆಗದ ಮಾತು.

ಒಬ್ಬರನ್ನೂ ಹೀಗೆ ಹೀಗೆ ಅಂಥ ಹೇಳಲು ಪತ್ರಿಕೆಗಳ ಸಂಪಾದಕರು ಇಡೀ ಸಂಚಿಕೆಯನ್ನು ಮೀಸಲು ಇಟ್ಟು ಏನೇ ಬರೆದರೂ ಓದುಗ ತನಗೆ ಯಾವುದು ಬೇಕೋ ಅದನ್ನೇ ಆರಿಸಿಕೊಳ್ಳುವುದು ಅಂಥ ಅನ್ನಿಸುತ್ತದೆ.

ಭೈರಪ್ಪರಂತೂ ಈ ಯಾವ ಚರ್ಚೆ, ಖಂಡನೆಗಳನ್ನು ಕಂಡು ಕಾಣದ ರೀತಿಯಲ್ಲಿ, ಯಾವುದೇ ಪ್ರಶಸ್ತಿ ಪುರಾಸ್ಕಾರ ಸಿಕ್ಕಿದರೂ ಸಿಗದಿದ್ದರೂ ಅವರ ನೆಚ್ಚಿನ ಓದುಗನಿಗೆ ಏನೂ ಕೊಡಬೇಕೋ ಅದನ್ನು ಉತ್ತಮವಾಗಿ ಊಣಬಡಿಸುತ್ತಿರುತ್ತಾರೆ ಅಲ್ಲವಾ?

ಬುಧವಾರ, ಅಕ್ಟೋಬರ್ 12, 2011

ನಮ್ಮ ಪ್ರೇಮ ದೇವರಿಗೆ

ಹಾಯ್ ಸ್ಥಾಯಿ,

ಬಹಳ ದಿನಗಳಾಯಿತು ಅನಿಸುತ್ತಿದೆ. ನಿನ್ನ ನನ್ನ ಮಾತುಕತೆಯ ಜೀವನ ಪಯಣ.

ಎಲ್ಲಾ ಕೆಲಸದಲ್ಲಿ ಕಳೆದು ಹೋಗಿ ಬಿಟ್ಟಿರುವಂತಿದೆ. ಹೋಗಲಿ ಒಂದು ಚಿಕ್ಕ ಪೋನ್ ಕರೆ, ಕೊಂಚ ಮೆಸೆಜ್ ನೋ ವೇ.. .ಜೀವನವೇ ಹೀಗೆ ಅನಿಸುತ್ತಿದೆ ಅಲ್ಲವಾ? ನಮಗೆ ಬೇಕಾದವರನ್ನು ಬೇಕಾದ ಸಮಯದಲ್ಲಿ ವಿಚಾರಿಸಿಕೊಳ್ಳುವಷ್ಟು ಸಮಯದ ಅಭಾವ ನಮಗೆಲ್ಲಾರಿಗೂ... ಏನೂ ಮಾಡವುದಕ್ಕೂ ಆಗಲ್ಲ.

ಜೀವನ ಮುಖ್ಯ ಅಂತಾ ನಾನೇ ನೀನಗೆ ಹೇಳಿದ್ದು. ಅನುಭವಿಸಬೇಕು. ಹತ್ತಿರವಿದ್ದು ದೂರ ನಿಲ್ಲುವೇವು ನಮ್ಮ ನಮ್ಮ ಜವಾಬ್ದಾರಿಯೆಂಬ ನಮ್ಮಗಳ ಕೋಟೆಯಲ್ಲಿ ಅಲ್ಲವಾ?

ಯಾಕೋ ಕಳೆದ ಹಲವು ದಿನಗಳಿಂದ ನಿನ್ನ ನೆನಪು ತುಂಬ ಬರುತ್ತಿದೆ.. ನನಗೆ ಗೊತ್ತು ಅಲ್ಲಿ ನಿನಗೂ ಇದೆ ರೀತಿಯ ಹಂಬಲದ ಕೂಸು ಮನದಲ್ಲಿ ಮೂಡುತ್ತಿದೆ ಅಂತಾ.. ಇರಲಿ ಅದರೂ ಇಂದಿನ ದಿನಗಳಲ್ಲಿ ನಮ್ಮ ಮನದ ಭಾವನೆಗಳನ್ನು ಪತ್ರಿಸುವಂತಹ ಜರೂರತು ಯಾರಿಗೂ ಬರುತ್ತಿಲ್ಲ. ಅದು ಸುಮ್ಮನೇ ಟೈಮ್ ವೇಸ್ಟ್ ಅನಿಸುತ್ತದೆ. ಬರವಣಿಗೆ, ಪೇಪರ್, ಪೇನ್ನು ಇತಿಹಾಸ ಸೇರಿಬಿಟ್ಟಿದೆ ಅನಿಸುತ್ತಿದೆ. ಎಲ್ಲಾ ಡೀಜಿಟಲ್ ಯುಗ ಮತ್ತು ಮಾಯೇ!

ಯೋಚಿಸು ನೀನು ಪತ್ರ ಬರೆದದ್ದು ಯಾವಾಗ ಎಂದು? ಅದು ಪರೀಕ್ಷೆಯ ಅಂಕಗಳಿಗಾಗಿ ನಿನ್ನ ಹತ್ತನೇ ತರಗತಿಯಲ್ಲಿ ಅನಿಸುತ್ತದೆ. ಅದು ಪ್ರಾರಂಭವಾಗುವುದು... ತೀರ್ಥರೂಪ ಸಮನಾದ... ಪ್ರಿಯ ಸ್ನೇಹಿತ/ತೆ ಹೀಗೆ..

ಪರಿಚಯವಾಗುವುದಕ್ಕೆ ಮೊದಲು ನೀನ್ನನ್ನು ಹೇಗೆ ಮಾತನಾಡಿಸಲಿ ಎಂದು ಯೋಚಿಸುತ್ತಿದ್ದಾಗ.. ಹಾಗೆಯೇ ಟೀಪಿಕಲ್ ಸಿನಿಮಾ ಪ್ರೇಮಿಗಳ ರೀತಿಯಲ್ಲಿ ನಿನಗೆ ಒಂದು ಪ್ರೇಮ ಪತ್ರ ಬರೆದು ಅದನ್ನು ನಿನಗೆ ಅದೇ ನಿನ್ನ ಗೆಳತಿ ಸೇವಂತಿಯ ಮೊಲಕನೂ ಅಥವಾ ನಿನ್ನ ಮನೆಯ ವಿಳಾಸಕ್ಕೆ ತಲುಪಿಸಬೇಕೆಂಬ ಕನಸು ಕಂಡಿದ್ದೇ. ಆದರೆ ಅದು ಯಾವುದೂ ಬೇಕಾಗದೇ ನಿನ್ನ ನನ್ನ ಪರಿಚಯವಾಯ್ತು. ಹಾಗೆ ಹಾಗೆ ಸಾಗಿ ಇಂದಿನ ನನ್ನ ಪ್ರೇಯಸಿ ಕಮ್ ದಂ(ಪತಿ) ಮಟ್ಟಕ್ಕೆ ಬಂದು ನಿಂತಿತು.

ಎಷ್ಟೂ ವಿಚಿತ್ರ ಅಲ್ಲವಾ? ನಾನು ಯಾರೋ ನೀನು ಯಾರೋ ಎಂಬ ರೀತಿಯಲ್ಲಿ ನಮಗೆ ಪ್ರತಿಯೊಬ್ಬರೂ ಹೊಸದಾಗಿ ಪರಿಚಯವಾಗುತ್ತಾರೆ. ಅನಂತರ ಅವರನ್ನು ಬಿಡಲಾರದ ಮಟ್ಟಿಗೆ ನಾವುಗಳು ನಮ್ಮ ನಮ್ಮ ಸಂಬಂಧಗಳನ್ನು ಸೃಷ್ಟಿ ಮಾಡಿಕೊಂಡು ಅದು ನಮ್ಮ ಜೀವಕ್ಕೆ ಮತ್ತು ಜೀವನಕ್ಕೆ ಅತಿ ಅನಿವಾರ್ಯ ಎಂಬ ರೀತಿಯಲ್ಲಿ ನಡೆಸಿಕೊಂಡು ಹೋಗುತ್ತೇವೆ. ಜರೂರತುಗಳು ಹತ್ತು ಹಲವು ಇರಬಹುದು, ಅದರೇ ಜೀವನದ ಜೀವಂತಿಕೆಗೆ ಈ ಎಲ್ಲಾ ಸೆಳತಗಳು ಬೇಕೆ ಬೇಕು ಅನಿಸುತ್ತದೆ.




ಯಾರನ್ನೊ ಇಷ್ಟಪಡುತ್ತೀವಿ.. ಯಾರನ್ನೊ ತುಂಬ ಹತ್ತಿರದವರನ್ನಾಗಿ ಮಾಡಿಕೊಳ್ಳುತ್ತೇವೆ.. ಯಾರೊಂದಿಗೊ ನಮ್ಮ ಎಲ್ಲಾ ಮನದಾಳದ ನೋವು ಸಂತೋಷಗಳನ್ನು ತೋಡಿಕೊಳ್ಳುತ್ತೇವೆ.. ಅವರಿಂದ ಒಂದು ನಾಲ್ಕು ಹನಿ ನಗುವನ್ನು ಮಾತನ್ನು ಅಪೇಕ್ಷಿಸಿ ನಮ್ಮನ್ನು ನಾವುಗಳು ಖುಷಿಯಾಗಿ ಇಟ್ಟುಕೊಳ್ಳಲು ಬಯಸುತ್ತೇವೆ.

ಕೇವಲ ಒಂದು ವಾರ ನಿನ್ನ ಜೊತೆಯಲ್ಲಿ ಮುಖಾತಃ ಮಾತನ್ನಾಡದಿದ್ದಕ್ಕೆ ಈ ರೀತಿಯ ಮನದ ತುಮುಲಗಳು, ಯೋಚನೆಗಳು ನನ್ನನ್ನು ಬಾಧಿಸುತ್ತಿವೆ. ಇದೇ ಅಲ್ಲವಾ ಪ್ರೇಮ ಎಂಬುದು.. ಯಾವನಿಗ್ಗೆ ಗೊತ್ತೂ ಎಂದು "ಪರಮಾತ್ಮ" ಮೋವಿ ಸ್ಟೈಲ್ ನಲ್ಲಿ ಹೇಳುವಂತಾಗುತ್ತದೆ.

ಹೇ ರೀಯಲ್ಲಿ ಐ ಮೀಸ್ ಯೂ "ಪರಮಾತ್ಮ" ಸಿನಿಮಾ ನೋಡುವಾಗ!

ಸಿನಿಮಾ ನೋಡಿದ ಅನಂತರ ಅನಿಸಿತು ನಿನ್ನ ಜೊತೆಯಲ್ಲಿ ಅದನ್ನು ನೋಡಬೇಕಾಗಿತ್ತು ಅಂತಾ.

ಗೊತ್ತಾ ಅದರ ಒಂದು ಹಾಡಿನಲ್ಲಿ ಹೇಳುತ್ತಾರೆ "ಅನುಮಾನವಿಲ್ಲದ ಅನುರಾಗವಿಲ್ಲಾ" ನಿಜನಾ?

ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಹೇಗೆ ಅತಿ ಉತ್ತಮವಾಗಿ ತಮ್ಮ ಪ್ರೀತಿ ಪಾತ್ರರನ್ನು ಪ್ರೀತಿಸುವುದು ಎಂಬುದನ್ನು ಕಲಿಯುವುದಕ್ಕಾಗಿಯೇ ಈ ರೀತಿಯ ಸಿನಿಮಾಗಳನ್ನು ನೋಡುತ್ತಾರೆ ಅಂತೇ.. ಇದ್ದರೂ ಇರಬಹುದು!!

ಸಿನಿಮಾ ಮುಗಿಯವರೆಗೂ ಆ ಪಾತ್ರಗಳೇ ನಾವುಗಳು ಆಗಿರುತ್ತೇವೆ. ಸಿನಿಮಾ ಮುಗಿದ ಅನಂತರ ಬದುಕಿನ ಕಠೋರ ಸತ್ಯಗಳ ಅನಾವರಣ ನಮ್ಮ ಮುಂದೆ ಇರುತ್ತದೆ. ಆ ಕೆಲವೊಂದು ಸಮಯದಲ್ಲಾದರೂ ನಾವುಗಳು ಸಂತಸಗೊಳ್ಳುವಂತೆ ಮಾಡುತ್ತಾರಲ್ಲಾ ಅದಕ್ಕೆ ಎಷ್ಟೂ ಧನ್ಯವಾದಗಳನ್ನು ಹೇಳಿದರೂ ಕಡಿಮೆಯೇ.

ಬೇಗ ಬಂದು ನನ್ನ ಸೇರು ಚಿನ್ನ.. ಯಾಕೋ ಜೀವನದ ಬದುಕು ಬಂಡಿಯನ್ನು ಎರಡು ಗಾಲಿಗಳಿಲ್ಲದೇ ನಡೆಸುವುದು ಅಸಾಧ್ಯ ಅನಿಸುತ್ತಿದೆ.

ನಾವಂದುಕೊಂಡ ಅಂದಿನ ಎಲ್ಲಾ ಕನಸುಗಳ ನನಸು ಕಾಣುವ ದಿನಗಳೂ ಇವು ಆಗಿವೆ ಎಂದು ಈಗ ಅನಿಸುತ್ತಿದೆ. ಹೀಗೆ ಆಗಬೇಕು ಎಂಬ ನಿರ್ಧರ ಮೊದಲೇ ಇರುತ್ತದೆ ಎಂಬುದರಲ್ಲಿ ನನಗೆ ನಂಬಿಕೆಯಿಲ್ಲಾ.. ಅದರೇ ನಮ್ಮಗಳ ಪ್ರಯತ್ನ ಆ ದಿಸೆಯಲ್ಲಿ ಇರುವುದರಿಂದ ಯಾವ ಭಯವಂತೂ ಇಲ್ಲ.

ಬದುಕು ಹಸನಾಗಲು ನಿರಂತರ ಪರಿಶ್ರಮ ಮತ್ತು ಒಂದು ಸುಂದರ ಹಸಿ ನೋಟ ಇದ್ದಾರೆ ಸಾಕು ಅಂತ ನಿನಗೂ ಸಹ ಇಂದು ಅನಿಸಿರಬೇಕು. ಎಲ್ಲರೂ ಹೀಗೆ ನಿತ್ಯ ದುಡಿಯುತ್ತಿರುವುದು ಜೀವನ ಸುಂದರವಾಗಿ ಯಾವುದಕ್ಕೂ ಕೂರತೆಯಿರದ ರೀತಿಯಲ್ಲಿ ಸಂಸಾರವೆಂಬ ದೋಣಿಯನ್ನು ಸಾಗಿಸಲು. ಎಲ್ಲಾರೂ ಅವರವರ ದಡವನ್ನು ಸೇರೆ ಸೇರುತ್ತಾರೆ. ಅದಕ್ಕೆ ಒಂದು ದೃಡ ನಂಬಿಕೆಯಿರಬೇಕಾಗುತ್ತದೆ ಅಷ್ಟೇ.

ಆ ದಿನಗಳಲ್ಲಿ ನಾವುಗಳು ಕಂಡ ಕನಸುಗಳು.. ಜೊತೆಯಲ್ಲಿ ಹಂಚಿಕೊಂಡ ಸವಿನೆನಪುಗಳ ಸರಮಾಲೆ.. ಹರೆಯದ ಹೊಳೆಯಲ್ಲಿ ಮುಂದಿನ ಬದುಕಿನ ಬಗ್ಗೆ ಯಾವ ಒಂದು ಭಯವೇ ಇರಲಿಲ್ಲ ಬಿಡು. ಅದು ಪ್ರೀತಿ ಪ್ರೇಮದ ವಯಸ್ಸು. ಆದರೂ ಇವತ್ತಿಗೂ ನನಗೆ ನೀನು ಅಂದಿನ ಏನೂ ಹರಿಯದಂತೆ ಮೋಡಿ ಮಾಡಿದ ಪಸ್ಟ್ ಪಿ.ಯೂ.ಸಿ ಬಿ ಸೇಕ್ಷನ್ ಸ್ಥಾಯಿ ಮಾತ್ರ.

ಯಾರ್ಯಾರನ್ನೂ ಎದುರು ಹಾಕಿ ಕೊಂಡು ಈ ಮಟ್ಟಕ್ಕೆ ಬಂದು ನಿಂತಿರುವುದಕ್ಕೆ ನನಗಂತೂ ತುಂಬ ಖುಷಿ ಅನಿಸುತ್ತದೆ. ನಿನ್ನ ಮನೆಯವರೂ ನನ್ನ ಮನೆಯವರೂ ನಮ್ಮಿಬ್ಬರನ್ನು ಇಂದು ಒಪ್ಪಿಕೊಂಡಿರುವುದಕ್ಕೆ ನಿನ್ನ ನೆರವಿನ ಪಾಲು ಅಪಾರ!

ನೀನೂ ಗಮನಿಸಿರಬೇಕು ಇತ್ತೀಚಿನ ನಮ್ಮ ಕನ್ನಡ ನಟನ ದಾಂಪತ್ಯದ ಕಲಹ ಮತ್ತು ಅನಂತರ ದಂಪತಿಗಳು ಮಾಧ್ಯಮಗಳ ಮೊಲಕ ಹೇಳಿಕೆ ಕೊಟ್ಟಿದ್ದು.. ಇದು ಎಲ್ಲಾರ ಮನೆಯ ದೋಸೆಯನ್ನು ನೆನಪು ಮಾಡಿಕೊಟ್ಟಂತಾಯಿತು. ಅದರೂ ನನಗೆ ಅನಿಸುತ್ತದೆ.. ಯಾಕೇ ಪ್ರೀತಿಪಟ್ಟು ಮದುವೆಯಾದವರೂ ತಮ್ಮ ಸಂಗಾತಿಗಳನ್ನು ಅಷ್ಟರ ಮಟ್ಟಿಗೆ ದ್ವೇಷಿಸುವಂತಹ ಮನಸ್ಸು ಅದು ಹೇಗಾದರೂ ಮತ್ತು ಎಲ್ಲಿಂದ ಬರುತ್ತದೆ ಅಂತಾ.. ನೀನೂ ಮಾತ್ರ "ಯಾವನಿಗ್ಗೆಗೊತ್ತು" ಅಂತಾ ಮಾತ್ರ ಹೇಳಬೇಡ ಡೀಯರ್!!

ಜೀವನ ಒಂದು ದಿನದ ಮ್ಯಾಚ್ ಅಲ್ಲಾ ಅಲ್ಲವಾ! ಅದು ನಿರಂತರವಾಗಿ ಜಾರಿ ಇರಬೇಕಾದ ಸವಿಸವಿ ಸಂಬಂಧದ ಕೊಂಡಿ. ನಿತ್ಯ ಹೊಸತನವನ್ನು ನಮ್ಮಿಬ್ಬರ ಮದ್ಯದಲ್ಲಿ ಇಟ್ಟುಕೊಂಡಿರುವುದಕ್ಕೆ ಏನೋ ನನಗೆ ಇಂದಿಗೂ ಸಹ ನೀನು ನನಗೆ ಪರಿಚಯವಾದ ಆ ದಿನಗಳ ನನ್ನ ಹುಡುಗಿಯ ಬಗ್ಗೆ ಇದ್ದಂತಾಹ ಕುತೂಹಲವೇ ಇನ್ನೂ ನಿನ್ನ ಮೇಲೆ ಇದೆ.

ಅದಕ್ಕೆ ನಮ್ಮ ಪ್ರೇಮ ದೇವರಿಗೆ ಸಾವಿರ ಸಾವಿರ ಥ್ಯಾಂಕ್ಸ್!

ಹೇ ಬೇಗ ನನ್ನ ಬಂದು ಸೇರು.. ಈ ಪತ್ರ ನಿನ್ನ ಸೇರುವುದುಕ್ಕೂ ಮುನ್ನಾ... ಆದರೇ!

ಬುಧವಾರ, ಸೆಪ್ಟೆಂಬರ್ 21, 2011

ಹೊಸಬೆಳಕಿನ ಹೊಸ ಜ್ಯೋತಿಯ ಉಗಮ

ಇಂದು ನಾವು ನೋಡುತ್ತಾ ಇದ್ದೇವೆ ತಪ್ಪು ಮಾಡಿದವರೆಲ್ಲರಿಗೂ ಶಿಕ್ಷೆಯಾಗುತ್ತಿದೆ. ಒಬ್ಬರ ಹಿಂದೆ ಒಬ್ಬರು ಜೈಲು ಪಾಲಾಗುತ್ತಿದ್ದಾರೆ.

ಇದು ಏನನ್ನು ಸೂಚಿಸುತ್ತದೆ ಎಂಬುದು ಪ್ರತಿಯೊಬ್ಬರಿಗೂ ಗೊತ್ತು. ನಾನು ಯೋಚಿಸುತ್ತೇನೆ ಇದು ಜೈಲು ಪಾಲಾದ ಎಲ್ಲಾ ಮಹನೀಯರಿಗಳಿಗೂ ಸತ್ಯವಾಗಿ ಗೊತ್ತು. ಮತ್ತೇ ಗೊತ್ತಿದ್ದು ಯಾಕೆ ಹೀಗೆ ತಪ್ಪು ಮಾಡುತ್ತಾರೆ. ಮುಂದೆ ನಾವೊಂದು ದಿನ ಕಾನೂನು ಎಂಬ ಕಾವಲುಗಾರನ ಕೈಯಲ್ಲಿ ಸಿಕ್ಕೆ ಸಿಗುತ್ತೇವೆ ಎಂಬುದು ತಿಳಿಯರಲಾರದ ಗಾವಿದರೇನಲ್ಲ.

ಆದರೂ ಯಾಕೆ ಈ ರೀತಿ ಗೊತ್ತಿರುವಂತಹ ತಪ್ಪುಗಳನ್ನು ಮಾಡಿ ಸಮಾಜದಲ್ಲಿ ಕೆಟ್ಟ ವ್ಯಕ್ತಿಗಳು ನಾವುಗಳು ಎಂಬುದನ್ನು ಜಗಜ್ಜಾಹೀರುಮಾಡಿಕೊಂಡು ಜೈಲ್ ಪೇರೆಡ್ -ಕೋರ್ಟ್ ಪೇರೆಡ್ ಮಾಡುತ್ತಿದ್ದಾರೆ?

ಉತ್ತರ ನಿಜವಾಗಿಯೂ ಗೊತ್ತಿಲ್ಲ ಅಲ್ಲವಾ?

ಪ್ರತಿಯೊಬ್ಬರೂ ಸ್ವಾರ್ಥದ ಆಸೆಯ ಮೋಡಿಗೆ ಬಲಿಯಾಗಿ ಈ ರೀತಿಯಲ್ಲಿ ನಗ್ನರಾಗಿ ನಿಂತಿರುವಂತೆ ಬಾಸವಾಗುತ್ತಿದ್ದಾರೆ. ಮನುಷ್ಯನ ಮನಸ್ಸೆ ಆ ರೀತಿ ಇರಬೇಕು. ಸಿಗುವಂತಹ ಅವಕಾಶ ಮತ್ತು ಯಾರೂ ಪ್ರಶ್ನೆ ಮಾಡದಂತಹ ಸನ್ನಿವೇಶ ವ್ಯಕ್ತಿಯ ಮನಸ್ಸನ್ನು ಎಲ್ಲಿ ಎಲ್ಲಿಗೋ ತೆಗೆದುಕೊಂಡು ಹೋಗಿಬಿಡುತ್ತದೆ ಅನ್ನಿಸುತ್ತದೆ.

ತನಗೆ ಎಷ್ಟು ಬೇಕು ಜೀವಿಸಲು, ಸಂತೋಷವಾಗಿರಲು ಮತ್ತು ಅದಕ್ಕೂ ಮೀರಿದ ಸಂಪತ್ತು, ಸುಪ್ಪತ್ತಿಗೆ,ಆಸ್ತಿ, ವೈಡೂರ್ಯಗಳ ದಣಿಯಾಗಬೇಕು ಎಂಬ ಮಹನ್ ಹಂಬಲಕ್ಕೆ ಅದೂ ಹೇಗೆ ಮರಳಾಗುತ್ತಾರೂ ದೇವರೇ ಬಲ್ಲ.

ಅದಕ್ಕಾಗಿ ತಾನು ಏನನ್ನಾದರೂ ಮಾಡಲೂ ಸಿದ್ಧನಾಗುತ್ತಾನೆ. ಏನ್ನನ್ನಾದರೂ ದಕ್ಕಿಸಿಕೊಳ್ಳಲು ತೊಡಗುತ್ತಾನೆ. ಅವನ ಮನಸ್ಸಿನಲ್ಲಿ ಒಂದೇ ಒಂದು ದುರಾಸೆಯೆಂದರೆ ಎಲ್ಲವನ್ನು ತನ್ನದು ಮಾಡಿಕೊಳ್ಳಬೇಕು. ಅದು ಅನ್ಯಾಯ ಮಾರ್ಗವಾಗಿರಲಿ, ದುರ್ಮಾರ್ಗವಾಗಿರಲಿ, ಏನಾದರಾಗಿರಲಿ ತಾನು ಮಾತ್ರ, ತನಗೆ ಮಾತ್ರ ಎಲ್ಲಾ ಸುಖಗಳು ಸಿಗಬೇಕು ಎಂಬ ದುರಾಸೆಯ ಕೂಪದಲ್ಲಿ ಬಿದ್ದು ಬಿಡುತ್ತಾನೆ ಅನ್ನಿಸುತ್ತದೆ.

ಅಲ್ಲಿ ಅವನಿಗೆ ಯಾವೊಂದು ಪಾಪ, ಪುಣ್ಯದ, ಧರ್ಮದ ಅಲೆಗಳು ಕಾಣಿಸುವುದಿಲ್ಲ. ಅಷ್ಟಕ್ಕೂ ಅಂದು ಸುಖದ ಸುಪ್ಪತ್ತಿಗೆಯಲ್ಲಿ ತೆಲಿದಂತಹ ಮಂದಿ ಇಂದು ಸರ್ಕಾರದ ದೃಷ್ಟಿಯಲ್ಲಿ, ಜನರ ದೃಷ್ಟಿಯಲ್ಲಿ ಯಾವ ರೀತಿ ಕಾಣುತ್ತಾರೆ ಎಂದು ಪ್ರತಿಯೊಬ್ಬರಿಗೂ ಅರ್ಥವಾಗಬೇಕು.

ಎಲ್ಲದಕ್ಕೂ ಒಂದು ಕೂನೆಯೆಂಬುದು ಇದ್ದೇ ಇರುತ್ತದೆ. ಈ ಒಂದು ಸಿದ್ಧಾಂತವನ್ನು ಮನಗತ ಮಾಡಿಕೊಳ್ಳಬೇಕಾದದ್ದು ಪ್ರತಿಯೊಬ್ಬರಿಗೂ ಅವಶ್ಯ. ನಾವುಗಳು ಮೂಕ ಪ್ರಾಣಿ ಪಕ್ಷಿಗಳನ್ನು ನೋಡಿ ಕಲಿಯಬೇಕು. ಅವುಗಳ ಜೀವನ ಧರ್ಮ, ಸಹ ಬಾಳ್ವೆಯ ಸರಳ ಪಾಠವನ್ನು ನಿತ್ಯ ನೋಡಿದರೂ ನೋಡದ ರೀತಿಯಲ್ಲಿ ನಾವುಗಳೇ ಅತಿ ಬುದ್ಧಿವಂತ ಪ್ರಾಣಿ ಎಂಬ ದೋರಣೆಯಲ್ಲಿ ಸಿಕ್ಕಿದ್ದನ್ನೇಲ್ಲಾ ಬಾಚಿಕೊಳ್ಳಲು ಮುಂದಾಗುವುದು ಯಾವ ನ್ಯಾಯ.

ಅದು ಸರಿ. ಆಸೆ ಬೇಕು ಮನುಷ್ಯನ ಜೀವನಕ್ಕೆ, ಉತ್ತಮ ಅಭಿವೃದ್ಧಿಗೆ ಅನ್ನುತ್ತಾರೆ. ಆದರೇ ದುರಾಸೆಯನ್ನು ಇಟ್ಟುಕೊಳ್ಳಿ ಎಂದು ಯಾರು ಹೇಳುವುದಿಲ್ಲ. ಇದೇ ಇಂದು ಪ್ರತಿಯೊಂದು ರಂಗದಲ್ಲೂ ಅಪನಂಬಿಕೆಯನ್ನು, ಬಿನ್ನಾಭಿಪ್ರಾಯಗಳನ್ನು, ಅಶಾಂತಿ, ಅಸಹಜ ನಡವಳಿಕೆಗೆ ದಾರಿ ಮಾಡಿಕೊಟ್ಟಿದೆ.

ಸಿ.ಬಿ.ಐ ಯರವರು ಇಂಥ ವ್ಯಕ್ತಿಗಳ ಸಂಪತ್ತನ್ನು ವಶಪಡಿಸಿಕೊಂಡಾಗ ನೀಡುವ ವರದಿಯನ್ನು ಗಮನಿಸಿದರೇ ಒಬ್ಬನೇ ಒಬ್ಬ ವ್ಯಕ್ತಿಗೆ ಇಷ್ಟೇಲ್ಲಾ ವಸ್ತು, ಹಣ, ಆಸ್ತಿ ಬೇಕಾ ಗುರೂ? ಎಂದು ಯೋಚಿಸುವಂತಾಗುತ್ತದೆ. ಒಬ್ಬನ ಬಳಿಯಲ್ಲೇ ಇಡೀ ರಾಜ್ಯದ ಸಂಪತ್ತು ಕೊಳೆತು ಬಿದ್ದಿದೆ ಎಂದಾಗ ಮನಸ್ಸಿಗೆ ಬೇಜಾರಾಗುತ್ತದೆ. ಅಸಹಜವಾಗಿ ಬಂದಂತಹ ಸಂಪತ್ತು ಎಂದಿಗೂ ಶಾಶ್ವತವಲ್ಲ ಎಂಬುದು ಎಲ್ಲಾರಿಗೂ ತಿಳಿದಿರುವ ವಿಚಾರ.

ಇಲ್ಲಿ ಯಾರೂ ಶಾಶ್ವತವಲ್ಲ! ಹಾಗಂತ ಪೂರ್ತಿ ಸನ್ಯಾಸಿಯಾಗಿ ಜೀವಿಸಬೇಕಾಗಿಲ್ಲ.

ನಿಸರ್ಗ,ದೇಶ ಸಂಪತ್ತು ಎಲ್ಲಾರಿಗೂ ಸೇರಿದ್ದು. ಅದನ್ನು ಅನ್ಯ ಮಾರ್ಗದಲ್ಲಿ ತಾನೊಬ್ಬನೇ ಅನುಭವಿಸುದು ದೇವರಿಗೆ ಮಾಡಿದ ದ್ರೋಹದಂತೆ ಅಲ್ಲವಾ?

ಗಣಿ ದಣಿ ದೋಳಿನಲ್ಲಿ ಇಡಿ ಕರ್ನಾಟಕವೇ ಮುಚ್ಚಿ ಹೋಗಿರುವಂತಹ ಅನುಭವವನ್ನು ಕಳೆದ ದಿನಗಳಿಂದ ನೋಡುತ್ತಿದ್ದೇವೆ. ಇದರ ಕಾರಣದಿಂದ ಸರ್ಕಾರವೇ ಬೀಳುವ ಮಟ್ಟಕ್ಕೆ ಹೋಗಿದ್ದು, ಮುಖ್ಯಮಂತ್ರಿ, ಮಂತ್ರಿಗಳ ಅಧಿಕಾರದ ಖುರ್ಚಿ ಬಿದ್ದು ಹೋಗಿದ್ದು. ಯಾವುದರ ಮುನ್ಸೂಚನೆ ದೇವರೇ ಬಲ್ಲ.

ಮಾತು ಎತ್ತಿದರೇ ಸಾಕು ಲಂಚಾ.. ಲಂಚಾ... ಭ್ರಷ್ಟಾಚಾರ ಉಫ್!

ಸಾವಿಲ್ಲದ ಮನೆಯ ಸಾಸಿವೆಯಂತೆ, ನಂಬುವಂತಹ ಒಬ್ಬನೇ ಒಬ್ಬ ವ್ಯಕ್ತಿ(ಗಳು) ಸಿಗುವಂತಹ ಕಷ್ಟ ಈ ದಿನಮಾನಗಳಲ್ಲಿರುವುದು ನಿಜವಾಗಿಯೋ ವಿಪರ್ಯಾಸದ ವಿಚಾರ. ಯಾರೊಬ್ಬರನ್ನು ಅನುಮಾನದ ದೃಷ್ಟಿಯಲ್ಲಿ ನೋಡುವಂತಹ ದಿನಗಳು ಬರುತ್ತ ಇವೆಯೇನೂ ತಿಳಿಯದಾಗಿದೆ.

ಎಲ್ಲಿ ನೋಡಿದರೂ ಅಕ್ರಮ ಸಕ್ರಮಗಳ ಕಾರುಬಾರೂ ಇದು ಎಲ್ಲಿಗೆ ಹೋಗಿ ನಿಲ್ಲುತ್ತದೂ ಗೊತ್ತಿಲ್ಲಾ ಬಿಡಿ.

ಶಕ್ತನಾಗಿದ್ದಾನೇ ಅಷ್ಟು ಮಾಡಿದ್ದಾನೆ. ದಕ್ಕಿಸಿಕೊಳ್ಳುವ ತಾಕತ್ತು ಇದೆ ಅವನಿಗೆ ಬಿಡಿ! ಎಂಬ ಮಾತುಗಳು ಸಹಜವಾಗಿ ಕೇಳಿ ಬರುತ್ತ ಇವೆ.

ನಿನ್ನ ಕೈಲಿ ಆಗುತ್ತಿಲ್ಲ ಅದಕ್ಕೆ ನೀತಿ ಧರ್ಮದ ಮಾತನ್ನಾಡುತ್ತಾ ಇದ್ದೀಯ... ಮರಿ ಗಾಂಧಿ! ಎಂಬ ಹಿಯಾಳಿಕೆಯ ಮಾತುಗಳು ಸಭ್ಯರನ್ನು ಚುಚ್ಚುತ್ತ ಇವೆ.

ಯಾವುದು ಸರಿ? ಯಾವುದು ತಪ್ಪು? ಯಾರು ನಿರ್ಧಾರ ಮಾಡಿಕೊಡಬೇಕೋ ತಿಳಿಯದಾಗಿದೆ.

ಪ್ರತಿಯೊಂದು ರಂಗದಲ್ಲೂ ಮನುಷ್ಯರೇ ತಾನೇ ಇರುವವರು.. ಅದ್ದರಿಂದ ಪ್ರತಿಯೊಂದು ರಂಗವು ಎಷ್ಟು ಸಾಧ್ಯವೋ ಅಷ್ಟರ ಮಟ್ಟಿಗೆ ಅದ್ವಾನವಾಗಿ ಹೋಗುತ್ತಿದೆ. ಬಡ ವ ಬಲ್ಲಿದನ ನಡುವಿನ ಅಂತರ ದಿನೇ ದಿನೇ ಅತ್ಯಂತ ವೇಗವಾಗಿ ಹೆಚ್ಚಾಗುತ್ತಿದೆ.

ಅವರನ್ನೂ ನೋಡಿ, ಇವರು ಇವರನ್ನಾ ನೋಡಿ ಅವರು ತಮ್ಮ ಅಭಿವೃದ್ಧಿಯ ಕರ್ಮದಲ್ಲಿ ನಿರತರಾಗುತ್ತಾ ಇದ್ದಾರೆ ಅನ್ನಿಸುತ್ತಿದೆ. ಕರುಣೆ, ಧಯೆಯ ಮಾತು ಕೇಳುವುದೇ ಬೇಡವೇನೂ ಎಂಬ ಕಾಲ ಬಂದರೂ ಆಶ್ಚರ್ಯವಿಲ್ಲ ಅನಿಸುತ್ತಿದೆ.

ಈ ಎಲ್ಲಾ ಅಮೊಲಾಗ್ರ ಬದಲಾವಣೆಯ ಹರಿಕಾರನಿಗಾಗಿ ನಾಡು ಕಾಯುತ್ತಿದೆ ಅನಿಸುತ್ತಿದೆ. ಹೊಸಬೆಳಕಿನ ಹೊಸ ಜ್ಯೋತಿಯ ಉಗಮವಾಗಬೇಕಾದ ಜರೂರತು ಇಂದು ಅತ್ಯವಶ್ಯವಾಗಿದೆ. ಎಲ್ಲಾದರಲ್ಲೂ ನಂಬಿಕೆಯನ್ನು ಕಳೆದುಕೊಳ್ಳುತ್ತಿರುವ ಜನತೆಗೆ ಹೊಸ ಭರವಸೆಯ ಹೊಸತನದ ನಾಯಕತ್ವದ ಅಗತ್ಯತೆ ಇಂದು ಹೆಚ್ಚಾಗಿದೆ ಅಂತಾ ನಿಮಗೆ ಅನಿಸುತ್ತಿಲ್ಲಾವಾ ಗೆಳೆಯರೇ.....

ಯೋಚಿಸಿ ಒಮ್ಮೆ ಫ್ಲೀಜ್!!!!!!!!!!!

ಶನಿವಾರ, ಸೆಪ್ಟೆಂಬರ್ 17, 2011

ಅನಾವರಣ ಒಂದು ಮೆಲುಕು............

ನಮ್ಮ ಮದ್ಯಮ ವರ್ಗದ ಒಂದು ಇಡೀ ಸಮೋಹ ತಮ್ಮ ಬಿಡುವಿನ ವೇಳೆಯನ್ನು ಮನೆಯಲ್ಲಿ ಹೇಗಾಪ್ಪ ಕಳೆಯುವುದು ಅಂದರೇ.. "ಅದೇ ಟಿ.ವಿ ಮೂರ್ಖರ ಪೆಟ್ಟಿಗೆ ಮುಂದೆ.." ಎಂದು ಏನಂದರೂ ಅದು ಇಂದು ಅತಿ ಅವಶ್ಯಕವಾದ ಒಂದು ವಸ್ತುವಾಗಿದೆ. ಅದು ಇಲ್ಲದ ಮನೆಯೇ ಮನೆಯಲ್ಲಾ.. ಅದೇ ಎಲ್ಲಾ ಎನ್ನುವಷ್ಟರ ಮಟ್ಟಿಗೆ.

ಮನೆಯಲ್ಲಿ ಕಾಲ ಕಳೆಯುವ ವಯಸ್ಸಾದ ಮುದುಕ ಮುದುಕಿಯರಿಗೆ, ಮನೆಕೆಲಸ ಮಾಡುವ ಗೃಹಿಣಿಯರಿಗೆ ಹೀಗೆ ಅದು ಒಂದು ಮನರಂಜನೆಯನ್ನು ಒದಗಿಸುವ ಒಂದು ಸೃಜನ ಶೀಲ ವಸ್ತುವಾಗಿದೆ.

ಚಿಕ್ಕ ಪರದೆಯ ಮೇಲೆ ಇಡೀ ಜಗತ್ತನ್ನೇ ಕಾಣಬಹುದಾಗಿದೆ. ಚಿಕ್ಕ ಪರದೆಯ ಮೇಲೆ ಬೇಕು ಬೇಡವಾದ ಎಲ್ಲದನ್ನೂ ನೋಡಬಹುದಾಗಿದೆ.

ಇದು ಎಲ್ಲಾ ವಯೋಮಾನದ ಮನುಷ್ಯರನ್ನು ಒಂದು ರೀತಿಯಾದ ಬದಲಾವಣೆಗೆ ಈಡೂ ಮಾಡಿರುವ ಮೋಡಿಗಾರ.

ಅಲ್ಲಿ ಒಳ್ಳೆಯದು ಇದೆ. ಕೆಟ್ಟದು ಇದೆ. ಅದರ ಆಯ್ಕೇ ಪುನಃ ನಮ್ಮ ನಿಮ್ಮಗಳ ಕೈಯಲ್ಲಿ ಮಾತ್ರ.

ಗಮನಿಸದರೆ ಇಲ್ಲೂ ಅತ್ಯುತ್ತಮವಾದ ಕಾರ್ಯಕ್ರಮಗಳು ಪ್ರಸಾರವಾಗುತ್ತ ಇರುತ್ತವೆ.

ಇಲ್ಲೂ ಸಹ ಒಂದು ಪುಸ್ತಕವನ್ನು ಓದಿದಾಗ ಸಿಗುವಂತಹ ಚಿಂತನೆ, ನೀತಿ, ಬದುಕಿನ ನೋಟವನ್ನು ಪ್ರಸಾರವಾಗುವ ದಾರವಾಹಿಗಳಲ್ಲಿ, ಕಾರ್ಯಕ್ರಮಗಳಲ್ಲಿ ಕಾಣಬಹುದಾಗಿದೆ. ಕೆಲವೊಂದು ಕಾರ್ಯಕ್ರಮಗಳು ಎಷ್ಟರಮಟ್ಟಿಗೆ ಜನಮನ ಗೆದ್ದಿದ್ದಾವೆ ಎಂದರೇ ಪ್ರತಿಯೊಂದು ಮನೆಯಲ್ಲಿ ಆ ಸಮಯಕ್ಕೆ ಸರಿಯಾಗಿ ಪ್ರತಿಯೊಬ್ಬರೂ ಕಾದು ಕುಳಿತು ಕಾರ್ಯಕ್ರಮಗಳನ್ನು ವೀಕ್ಷಿಸುವಷ್ಟರ ಮಟ್ಟಿಗೆ ಜನಪ್ರಿಯತೆಯನ್ನು ಗಳಿಸಿವೆ.

ಹೀಗೆ ಬಹಳ ದಿನಗಳಾದ ಮೇಲೆ ಕನ್ನಡದಲ್ಲಿ ವಿಭಿನ್ನವಾಗಿ ದಾರವಾಹಿಯನ್ನು ನಿರ್ದೇಶಿಸುವುದರಲ್ಲಿ ಎತ್ತಿದ ಕೈಯಾಗಿರುವ ಹಿರಿಯರಾದ ಎಸ್. ಎನ್. ಸೇತೂರಾಮ್ ರವರ "ಅನಾವರಣ" ನಿಜವಾಗಿಯೂ ನಮ್ಮ ದಿನ ನಿತ್ಯದ ಬದುಕು, ಪ್ರಸ್ತುತತವಾದ ಜನ ಮನಗಳ ನಗ್ನ ಸತ್ಯದ ಅನಾವರಣವಾಗಿದೆ.

ವಯಸ್ಸಾದ ತಂದೆ-ತಾಯಿ ಮತ್ತು ಅವರ ನಾಲ್ಕು ಜನ ಮಕ್ಕಳುಗಳ ಸಂಸಾರವನ್ನು ಇಟ್ಟುಕೊಂಡು ಹೆಣೆದಿರುವ ಕಥೆ ಸಹಜವಾಗಿ ತೀರ ಮಾಮೊಲಾದ ಕಥೆ ಮತ್ತು ವೇರಿ ಸಿಂಪಲ್ ಅನಿಸುತ್ತದೆ.

ಆದರೆ! ವ್ಯಕ್ತಿ ವ್ಯಕ್ತಿಗಳ ಸಂಬಂಧ, ಮಾನವನ ಜೀವ/ಜೀವನಗಳ ತಂತು, ವ್ಯಕ್ತಿಗಳ ಅಸ್ವಾಭಾವಿಕ ನಡಾವಳಿ, ಇಂದಿನ ಮುಂದುವರೆದ ದಿನಮಾನಗಳಲ್ಲಿ ದುಡ್ಡೇ ಎಲ್ಲಾ ಎನ್ನುವ ಯಾಂತ್ರಿಕವಾದ ನಗರ ಜೀವನದಲ್ಲಿನ ತಲ್ಲಣಗಳು, ಬದಲಾದ ಜೀವನ ಶೈಲಿಯ ಒಂದು ವಿಮರ್ಶೆಯೇ ಈ ಅನಾವರಣವಾಗಿದೆ.

ಸೇತೂರಾಮ್ ಕಣ್ಣಲ್ಲಿ ಬದುಕಿನ ನಿಜವಾದ ಅರ್ಥವಂತಿಕೆಯ ಒಂದು ಜೀವಂತ ದರ್ಶನವಾಗಿದೆ.

ಅವರು ರಚಿಸಿರುವ ಪಾತ್ರ ಪೋಷಣೆಯಲ್ಲಿ ಕಾಣಿಸಿಕೊಂಡಿರುವ ಪ್ರತಿಯೊಬ್ಬ ನಟ-ನಟಿಯರ ಮಾತು, ಅಭಿನಯಕ್ಕೆ ಪ್ರತಿಯೊಬ್ಬ ಕನ್ನಡಿಗನ ಸಲ್ಯೂಟ್! ಇಟ್ಸ್ ಸಿಂಪ್ಲಿ ಕ್ಲಾಸ್ ಅನ್ನಬಹುದು.

ಪಾತ್ರಗಳ ಮಾತುಗಳು, ಅವರ ಕನ್ನಡ ಉಚ್ಛಾರಣೆ, ಪೋಟೂಗ್ರಫಿ ತುಂಬ ಉನ್ನತವಾಗಿದೆ.

ಪ್ರತಿಯೊಂದು ಎಪಿಸೋಡ್ ನ್ನು ಹಾಗೆಯೇ ಯಾವುದೇ ಕಂಟ್ಯೂನಿಟಿ ಇಲ್ಲದೇ ನೋಡಬಹುದಾಗಿದೆ. ಹಾಗೆ ಕಥೆಯನ್ನು ಎಣಿದಿದ್ದಾರೆ.

ಇಲ್ಲಿ ನನಗೆ ಇಷ್ಟವಾಗಿದ್ದು, ಎಲ್ಲಾ ಪಾತ್ರಗಳ ಮಾತುಗಳು. ಸಾಮಾನ್ಯವಾಗಿ ಎಲ್ಲರೂ ಮಾತನ್ನಾಡುವವರು ಅದರೇ ಜೀವನದ ಸತ್ಯವಾದಂತ ಮಾತುಗಳು ಮತ್ತು ಅದು ಇಂದಿನ ಜೀವನದ ದುಡಿಮೆಯಲ್ಲಿ ಎಷ್ಟು ಅರ್ಥಗರ್ಭಿತ ಎನ್ನುವಂತಾಗುತ್ತದೆ.

ನಾವುಗಳು ಯಾವುದಾದರೂ ಒಂದು ಉತ್ತಮವಾದ ಕನ್ನಡ ಕಾದಂಬರಿಯನ್ನು ಓದಿದಾಗ ಹೇಗೆ ಒಂದು ಸುಂದರ ಅನುಭವವನ್ನು ಅನುಭವಿಸುವೆವೋ ಆ ರೀತಿಯ ಅನುಭವವನ್ನು ಪ್ರತಿಯೊಬ್ಬ ವೀಕ್ಷಕನು ಕಾಣುವವನು. ಮತ್ತು ಈ ದಾರವಾಹಿ ನಮ್ಮನ್ನು ಆ ದಿಕ್ಕಿನಲ್ಲಿ ಚಿಂತನೆಗೆ ಹಚ್ಚುವ ಕೆಲಸವನ್ನು ಮಾಡುತ್ತಿದೆ.

ನೈತಿಕತೆ, ಕೆಟ್ಟತನ, ಬದುಕಿನ ಜಂಜಾಟ, ದುಡಿಮೆ, ಗುರಿ, ಸಂಬಂಧಗಳ,(ಅ)ಸ್ವಾಭಾವಿಕತೆ ಪುನರನವೀಕರಣದ ಹಾದಿಯ ಹುಡುಕಾಟವಾಗಿದೆ ಎಂದರೇ ಅತಿಶಯೋಕ್ತಿಯಲ್ಲ.

ಇಂಥ ಒಂದು ಸುಂದರ ದೃಶ್ಯ ಕಾವ್ಯವನ್ನು ಕನ್ನಡದಲ್ಲಿ ಟಿ.ವಿ ದಾರವಾಹಿಯಾಗಿ ಮನೆ ಮನೆ ತಲುಪಿಸುವಲ್ಲಿ ನಿಂತಿರುವ ಸೇತೂರಾಮ್ ಅವರಿಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಕಡಿಮೆಯೇ....

ಅದರ ಝಲಕುಗಳ ಅನಾವರಣ ಇಲ್ಲಿ............






೧. ಗಂಡಸರು ಸುಖಕ್ಕಾಗಿ ಸಂಬಂಧಗಳನ್ನು ಹುಡುಕುತ್ತಾರೆ. ಆದರೆ ಹೆಂಗಸರು ಸಂಬಂಧದಲ್ಲಿಯೇ ಸುಖವನ್ನು ಹುಡುಕುತ್ತಾರೆ.

೨. ಮಗ ಎಂಬುದು ಭಾವ, ಅಂಕೆ ಸಂಖ್ಯೆ ಆಗಬಾರದು ಅಲ್ಲವಾ?

೩. ಹೆಂಗಸರು ಅವಶ್ಯಕತೆಗಳಿಗೆ ಸಂಬಂಧ ಹುಡುಕುತ್ತಾರೆ. ಇಲ್ಲ ಅಂದರೆ ಬಿಟ್ಟುಬಿಡುತ್ತಾರೆ.

೪. ಹೆತ್ತವರು ಮಕ್ಕಳ ಸಂಬಂಧ ಭಾವನ್ಮಾತಕವಾದದ್ದು, ವ್ಯವಹಾರವಲ್ಲ.

೫.ಮಕ್ಕಳಿಗೆ ತಂದೆ ತಾಯಿ ಮನೆ ಯಾವತ್ತೂ ಸ್ವಂತ, ಹೆತ್ತವರಿಗೆ ಮಕ್ಕಳ ಮನೆಯಲ್ಲ.

೬. ಭಾಷೆ ಕಲಿತಿದ್ದಾನೆ. ಭಾವ ಸತ್ತಿದೆ.

೭. ಬದುಕಿಗೋಸ್ಕರ ಕೆಲಸ. ಕೆಲಸಕ್ಕೊಸ್ಕರ ಬದುಕಾದಾ?

೮. ಬದುಕಿಗೆ ಹಣ. ಹಣಕ್ಕಾಗಿ ಬದುಕಾ?

೯.ಮಕ್ಕಳ ತರಾ ಉಳಿಯಬೇಕು ಎಂದರೇ, ದೊಡ್ಡವರು ದೊಡ್ಡವರ ತರಾ ಇರಬೇಕು.

೧೦. ಪಾಪಿಗಳ ಪ್ರಪಂಚದಲ್ಲಿ ಸತ್ತವರೇ ಪುಣ್ಯವಂತರು.

೧೧. ಕೆಟ್ಟ ಮಕ್ಕಳು ಹೃದಯಕ್ಕೆ ಹತ್ತಿರ.

೧೨. ಗಂಡಸರು ಕೆಟ್ಟವರು ಅಂತಹ ಗೊತ್ತಿದ್ದು ಸಂಪರ್ಕ ಬೆಳೆಸಿದರೆ ಹಾದರ ಅನಿಸುತ್ತದೆ. ಯಾವ ಹೆಣ್ಣು ಗೊತ್ತಿದ್ದು ಹಾದರಕ್ಕೆ ಇಳಿಯಲ್ಲಾ ಗಂಡಸರು ಇಳಿಸುತ್ತಾರೆ.

೧೩. ಹೆತ್ತರೆ, ಹೊತ್ತರೆ ವ್ಯಾಮೋಹ ಬರಲ್ಲ. ಸಾಕಬೇಕು.

೧೪. ಹಗಲು ಮರೆತು ಕಾಡುತ್ತೀರಿ. ರಾತ್ರಿ ನೆನಪಿಸಿ ಕಾಡುತ್ತೀರಿ.

೧೫. ಮದುವೆಗೆ ಮೊದಲು ಇದ್ದಲನ್ನು ವಜ್ರ ಅನ್ನುತ್ತೇವೆ, ಹೊಳೆಯುತ್ತದೆ ಅನ್ನುತ್ತೇವೆ. ಮದುವೆ ಆದಮೇಲೆ ವಜ್ರವನ್ನು ಇದ್ದಲು ಅನ್ನುತ್ತೇವೆ.

೧೬. ಮೆದುಳನ್ನು ಸರಿಯಾಗಿ ಇಟ್ಟುಕೊಂಡು ಹೆಣ್ಣನ್ನು ಆರಿಸಬೇಕು. ಹೃದಯದ ಮೀಡಿತ ಇಟ್ಟುಕೊಂಡು ಸಂಸಾರವನ್ನು ನಡೆಸಬೇಕು. ಹೃದಯ ಬಡಿತು ಅಂತಹ ಆರಿಸಿಕೊಳ್ಳುತ್ತಾರೆ. ಜೀವನಪರ್ಯಾಂತ ಮೆದುಳನ್ನು ಉಪಯೋಗಿಸಿ ಕಷ್ಟಪಡುತ್ತಾರೆ.

೧೭. ಬಾಲ್ಯಕ್ಕೆ ಯೌವನ, ಬಯಕೆ ಅರ್ಥವಾಗುತ್ತದೆ. ಆದರೆ ವೃದ್ಧಾಪ್ಯಕ್ಕೆ ಇದು ಅರ್ಥವಾಗುವುದಿಲ್ಲ.

೧೮. ಕೆಟ್ಟ ಗಂಡನನ್ನು ಬಿಡಬಹುದು. ಕೆಟ್ಟ ಮಕ್ಕಳನ್ನು ಓಡಿಸಬಹುದು. ಆದರೆ ಕೆಟ್ಟ ಅಪ್ಪನನ್ನು ಬಿಡಕ್ಕೆ ಆಗಲ್ಲ.

೧೯. ಹಕ್ಕು ಇರಕಡೆ ಸ್ವಾತಂತ್ರ್ಯ ಬದುಕಲ್ಲಾ.

೨೦. ನೋವು ಮಿತಿಮೀರಿದಾಗ ಕೀಚಕ ಕೊಡಾ ಅಮ್ಮ ಅನ್ನುತ್ತಾನೆ. ಆಗಲೇ ಹೆಣ್ಣನ್ನು ಗುರುತಿಸಬಲ್ಲ.

೨೧.ಎಲ್ಲೇ ಇಲ್ಲದ ಸ್ವಾತಂತ್ರ್ಯ ಸ್ವೇಚ್ಛೆ.

೨೨. ಸ್ನೇಹಿತರು ಒಳ್ಳೆ ಸುದ್ಧಿ ಹುಡುಕುತ್ತಾರೆ. ನೆಂಟರು ಕೆಟ್ಟ ಸುದ್ಧಿ ಹುಡುಕುತ್ತಾರೆ.

೨೩. ಹತ್ತಿರದವರು ಮುಚ್ಚಿಡುತ್ತಾರೆ; ಹಿತೈಷಿಗಳು ಬಿಚ್ಚಿಡುತ್ತಾರೆ.

೨೪. ಚಟ ಇರುತ್ತೇ ಹೋಗುತ್ತೆ.ಆದರೆ ರೂಡಿಸಿಕೊಂಡ ಭಾವ ಸ್ಥಿರ ಅಲ್ಲವಾ?

೨೫. ಆಳೋ ಚೈತನ್ಯ ಇರುವ ಗಂಡಸು ಶೀಲದ ಬಗ್ಗೆ ಮಾತನ್ನಾಡಲ್ಲ. ಷಂಡರೇ ಶೀಲದ ಬಗ್ಗೆ ಮಾತನಾಡುವುದು.

೨೬. ಸ್ವಾತಂತ್ರ್ಯ ಭಾವದಲ್ಲಿ ತಿಳಿಯಬೇಕು.

೨೭. ತಾಯಿಗೆ ಮಗಳು ಕರಳು. ಮಗಳಿಗಲ್ಲಾ ಅಲ್ಲವಾ?

೨೮. ಮರೆತಿದ್ದರೆ ಅಲ್ಲವಾ ನೆನಪು ಆಗುವುದು.

೨೯. ಅವಶ್ಯಕ ಅನಿಸದ ಸಂಬಂಧಗಳು ಉಳಿಯುವುದಿಲ್ಲ.

೩೦. ಕಣ್ಣುಗಳಿಗೆ ಬಿಳದಿದ್ದರೆ ದೇವರನ್ನೇ ಮರೆಯುತ್ತಾನೆ ಅಂತೆ ಮನುಷ್ಯ. ಇನ್ನೂ ಮನುಷ್ಯರನ್ನ ಬಿಡುತ್ತಾನಾ..

೩೧. ಸುಖಕ್ಕೆ ಗಂಡು ಸಾಕು. ಆದರೆ ಸಂಸಾರಕ್ಕೆ ಗಂಡ ಬೇಕು.

೩೨. ಗಂಡಸು ಎಂಬ ಅಹಂಕಾರ ಇರಬೇಕಾದರೆ ಗುಲಾಮಗಿರಿ ಇರಬಾರದು.

೩೩. ಜಗತ್ತಿನಲ್ಲಿ ಗಂಡು ಹೆಣ್ಣು ಅಂತ ಆಗಿದ್ದು ಸೃಷ್ಟಿಗಾಗಿ. ಸುಖಕ್ಕಾಗಿ ಅಲ್ಲಾ.

೩೪. ಪ್ರಕೃತಿ ಸೃಷ್ಟಿಸುವುದರಲ್ಲಿ ಸುಖ ಕಾಣುತ್ತದೆ. ಮನುಷ್ಯ ಸ್ವಂತ ಸ್ವಾರ್ಥಕ್ಕಾಗಿ ಸೃಷ್ಟಿಸುವುದರಲ್ಲಿ ಸುಖ ಕಾಣುತ್ತಾನೆ.

೩೫. ಹರಿದು ಹಂಚಿಕೊಳ್ಳುವರನ್ನೇ ಅಲ್ಲವಾ ಮಕ್ಕಳು ಅನ್ನುವುದು.

೩೬. ವಿಷಯ ಚರ್ಚೆಗೆ ಬರದಿದ್ದರೆ ಅರ್ಥವಾಗುವುದಾದರೂ ಹೇಗೆ.

೩೭. ಮಕ್ಕಳ ನೆನಪಲ್ಲಿ ಇಲ್ಲದ ಹೆತ್ತವರು ಇದ್ದು ಇಲ್ಲದ ಹಾಗೆ. ಇದ್ದು ಸತ್ತಾ ಹಾಗೆಯೇ.

೩೮. ಮಕ್ಕಳು ಕೆಡಕ್ಕೂ ಮೊದಲು ಯಮ ಬಂದರೇ ಧರ್ಮ!

೩೯. ಮುಂದೆ ಬದುಕು ಚೆನ್ನಾಗಿರಲಿ ಎಂದು ಹೆಂಗಸರು ದೇವಸ್ಥಾನಕ್ಕೆ ಹೋಗುತ್ತಾರೆ. ಆದರೆ ಗಂಡಸರು ಹಿಂದೆ ಮಾಡಿದ ಪಾಪಗಳನ್ನು ಕ್ಷಮೀಸು ಅಂತಾ ದೇವಸ್ಥಾನಕ್ಕೆ ಹೋಗುತ್ತಾರೆ.

೪೦. ಬದುಕಿಗೆ ಮನುಷ್ಯರನ್ನು ನೆಚ್ಚಿಕೊಂಡರೇ ದಾಸ್ಯ. ಭಗವಂತನನ್ನು ನೆಚ್ಚಿಕೊಂಡರೇ ಸ್ವಾತಂತ್ರ್ಯ.

೪೧. ಗಂಡಸರಿಗೆ ಕನಸು ಗ್ರಾಸ. ಹೆಂಗಸರಿಗೆ ಕನಸು ಗ್ರಾಸ.

೪೨. ಪಾಪದ್ದು ಭಿಕ್ಷೆ. ಪುಣ್ಯದ್ದು ಪ್ರಸಾದ.

೪೩. ಬದುಕು ಕಲೆ ಅಲ್ಲ, ಸ್ವಾಭಾವಿಕ. ಬದುಕದನೇ ಬದುಕುತ್ತಾ ಇರುವೇವು ಎಂಬುದು ಕಲೆ.

೪೪. ಕಳ್ಳ ಲೋಕದಲ್ಲಿ ಕಾನೂನಿಗೆ ಜಾಗವಿಲ್ಲ.

೪೫. ಸುಖವಿಲ್ಲದಿದ್ದರೇ ಮಕ್ಕಳು ಹೆತ್ತವರನ್ನು ಸಾಕುವುದಿಲ್ಲ.

೪೬. ಬದುಕಿನಲ್ಲಿ ಸ್ನೇಹಿತರನ್ನು ಮರೆಯಬಹುದಂತೆ, ಶತ್ರುಗಳನಲ್ಲಾ. ಸ್ನೇಹಿತರನ್ನ ದೂರ ಇಟ್ಟರು ತೊಂದರೆಯಿಲ್ಲ. ಅವರು ಹಿತಕಾಂಕ್ಷಿಗಳು.

೪೭. ಸ್ವಂತಹ ಸಮಸ್ಯೆಗಳು ಗಟ್ಟಿ ಮಾಡುತ್ತವೆ. ಆದರೆ ಮಕ್ಕಳಗಳದು ಮೆತ್ತಗೆ ಮಾಡುತ್ತವೆ.

೪೮. ಪ್ರೀತಿಯಲ್ಲಿ ಸುಖವಿರುತ್ತದೆ. ಉಪೇಕ್ಷೆಯಲ್ಲಿ ನೋವು.ದ್ವೇಷ ಶಕ್ತಿ ಕೊಡುತ್ತದೆ.

೪೯. ಹಣ ಯಾವತ್ತೂ ತೃಪ್ತಿಕೊಟ್ಟಿಲ್ಲ. ಅದು ಯಾವತ್ತೂ ಅತೃಪ್ತಿ.

೫೦. ಗಾಳಿಯಲ್ಲಿ ತೇಲುವ ಕಸಕ್ಕೆ ಗುರಿ ಏನೂ ಇರುತ್ತೇ?

೫೧. ಬದುಕಿಗೆ ಭೂತದ ನೆನಪು ಇರಬೇಕು. ವರ್ತಮಾನದಲ್ಲಿ ಸುಖವಿರುಬೇಕು. ಭವಿಷ್ಯತನಲ್ಲಿ ಕನಸು ಇರಬೇಕು.

೫೨. ಮನುಷ್ಯ ಅಂದರೇ ಅಷ್ಟೇ, ಅಪರಾಧಗಳ ಮೂಟೆ.

೫೩. ಇಷ್ಟ ಬಂದಾಗ ಸಾಯಬಹುದು. ಆದರೆ ಇಷ್ಟ ಬಂದಂಗೇ ಬದುಕಕಾಗಲ್ಲ.

೫೪. ಗಂಡಸರು ಬದುಕದು ಹಕ್ಕಿನ ಮೇಲೆ. ಹೆಂಗಸರು ಬದುಕದು ಜವಬ್ದಾರಿಯ ಮೇಲೆ.

೫೫. ವಯಸ್ಸಿನಲ್ಲಿ ಬದುಕಿಗೆ ಹೆದರಬಾರದು. ವಯಸ್ಸಾದ ಮೇಲೆ ಸಾವಿಗೆ ಹೆದರಬಾರದು.

ಭಾನುವಾರ, ಸೆಪ್ಟೆಂಬರ್ 11, 2011

ಇದಕ್ಕೆ ಕೊನೆಯಾದರೂ ಹೇಗೆ? ಎಂದು?

ಹೆಸರು, ಹಣ ಮಾಡಬೇಕು ಎಂದು ನಮ್ಮ ಜನಗಳು ಯಾಕೆ ಪರಿತಪಿಸುವವರು ಎಂಬುದು ಕಳೆದ ದಿನಗಳಲ್ಲಿ ಘಟಿಸಿದ ಮತ್ತು ಓದಿದ ವರದಿಗಳಿಂದ ಪುಷ್ಟಿ ದೊರೆತಂತಾಯಿತು. ಯಾವುದೇ ದೊಡ್ಡ ಅಧಿಕಾರ, ಸ್ಥಾನವನ್ನ ಮತ್ತು ಸಮಾಜದಲ್ಲಿ ದೊಡ್ಡ ಗೌರವವನ್ನು ಹೊಂದಿರುವ ವ್ಯಕ್ತಿ ತನಗೆ ಗೊತ್ತಿರುವವಂತೆ ತನ್ನನ್ನು ಪಾಲೋ ಮಾಡುವ ಒಂದು ಸಮೊಹವನ್ನು ಹೊಂದಿರುತ್ತಾನೆ. ಸಮಾಜದ ಜನಗಳು ಸಹ ಅವನನ್ನು ತನ್ನ ಆರಾಧ್ಯ ದೈವ ಎಂಬ ರೀತಿಯಲ್ಲಿ ನೋಡಿ ಆನಂದಿಸುತ್ತಾರೆ.

ಅದು ಅವನ ಕಲೆ, ಮಾತು, ಹಣ, ಅಧಿಕಾರ, ಸಮಾಜದ ಕಡೆಗೆ ಇರುವ (ಪ್ರೀತಿ?) ಏನಾದರೂ ಇರಬಹುದು ತುಂಬ ಹಚ್ಚಿಕೊಂಡುಬಿಟ್ಟು ಬಿಡುತ್ತಾರೆ. ಅದು ಆ ವ್ಯಕ್ತಿಗಳ ಅಹಂ ನ್ನು ಒಂದು ಮಟ್ಟದಲ್ಲಿ ಮೇಲಕ್ಕೆ ಏರಿಸಿಬಿಡುತ್ತದೆ. ಅವರುಗಳಿಗೆ ಒಂದು ಸಂಘ, ಬೆಂಬಲ, ಅವರಿಗಾಗಿ ಕಾರ್ಯಕ್ರಮಗಳು ಇತ್ಯಾದಿ ಇತ್ಯಾದಿ.

ಅವರುಗಳು ಮಾಡುವುದೆಲ್ಲಾ ಸರಿ ಎಂಬ ನಂಬಿಕೆ ನಮ್ಮ ಜನಗಳದಾಗಿರುತ್ತದೆ. ಆ ವ್ಯಕ್ತಿಗಳು ಮಾತನಾಡುವ ಪ್ರಜಾ ಕಾಳಜಿ ಮಾತುಗಳು, ಅವರುಗಳ ಹೇಳಿಕೆಗಳು ಟಿ.ವಿ, ಪತ್ರಿಕೆಗಳಲ್ಲಿ, ಸಿನಿಮಾಗಳಲ್ಲಿ ತೋರಿಸುವ ಕಾಳಜಿಗಳೆಲ್ಲಾ ಆ ವ್ಯಕ್ತಿಯ ವ್ಯಕ್ತಿತ್ವದ ನಿಜ ಸ್ವರೂಪ ಎಂಬ ರೀತಿಯಲ್ಲಿ ಎಂದು ಕೊಂಡಿರುತ್ತಾರೆ.

ಅವನು ಸಹ ನಡೆದಾಡುವ ಸಾಮಾನ್ಯ ಮನುಷ್ಯ ಎಂಬುದನ್ನೇ ಮರೆತುಬಿಟ್ಟಿರುತ್ತಾರೆ. ಅದು ಯಾವ ಪರಕಾಷ್ಠೇಯೊ ದೇವರಿಗೆ ಪ್ರೀತಿ. ಇಷ್ಟೊಂದು ರೀತಿಯಲ್ಲಿ ವ್ಯಕ್ತಿಗಳನ್ನು ಆರಾಧಿಸುವ ಜನಗಳು ನಮ್ಮ ಭಾರತದಲ್ಲಿ ಸಿಗುವಂತೆ ಬೇರೆಲ್ಲೂ ಸಿಗಲಾರರು ಏನೋ.

ಯಾರೇ ಆಗಿರಲಿ ಅತಿ ಕಡಿಮೆ ದಿನಗಳಲ್ಲಿ ಹೀಗೆ ನಮ್ಮ ಜನಮಾನಸದಲ್ಲಿ ಸ್ಥಾಪಿತರಾಗಿಬಿಡುತ್ತಾರೆ. ಕೇವಲ ಒಂದು ಪಂದ್ಯದಲ್ಲಿ ಒಂದು ಸೆಂಚುರಿ, ಒಂದು ಮೋವಿಯ ೧೦೦ ದಿನಗಳು, ಒಂದು ಭಾರಿ ಚುನಾವಣೆಯಲ್ಲಿ ಗೆದ್ದು ಬಂದು ಒಂದು ಮಂತ್ರಿಗಿರಿ, ಒಂದು ಆಶ್ರಮದ/ಸಂಘ/ಸೇವಾ ಮುಖ್ಯಸ್ಥನಾಗಿ, ಒಂದೇರಡು ಮನ ಕರಗುವ ಪ್ರವಚನಗಳು ಇತ್ಯಾದಿ ಏನಾದರೂ ಒಂದನ್ನು ಸಾರ್ವಜನಿಕವಾಗಿ ಕೊಟ್ಟು ಬಿಟ್ಟರೇ ಸಾಕು... ನಂತರದ ದಿನಗಳಲ್ಲಿ ಅವನು ಏನೂ ಮಾಡಿದರೂ ದೇವರಾಣೆ ನಮ್ಮ ಜನ ಯಾಕಪ್ಪಾ ಅವನು ತಪ್ಪು ಮಾಡಿದಾ ಎಂದು ಕೇಳುವುದಿಲ್ಲ.

ಜನಗಳು ಕೊಡುವ ಸಮಜಾಯಿಷಿ ನೀವುಗಳು ನೋಡಬೇಕು. ಇಲ್ಲಾ ಬಿಡಿ ಅವರುಗಳು ಆ ರೀತಿಯಲ್ಲಿ ಮಾಡಿರುವುದಕ್ಕೆ ಸಾಧ್ಯವಿಲ್ಲ. ಅವರುನಮ್ಮ ಗುರು.. ಅವನು ನಮ್ಮ ಸ್ಟಾರ್, ಅವನು ನಮ್ಮ ನಾಯಕ, ಅವನು ನಮ್ಮ ಜಾತಿಯವನೇ ಕಣ್ರೀ.. ಅದೇಗೆ ಸಾಧ್ಯ? ಎಂಬ ಸಮರ್ಥನೆಯ ಸರಮಾಲೆಯನ್ನೇ ಕೊಡುತ್ತಾರೆ.

ಇದೇ ಅಲ್ಲವಾ ಮಹಿಮೆ!

ಅದೇ ನೀವು ನೋಡಿರಬೇಕು. ಅಪ್ಪಿ ತಪ್ಪಿ ಚಿಕ್ಕ ಜೇಬು ಕಳ್ಳ ನಮ್ಮ ಜನಗಳ ಕೈಗೆ ಸಿಕ್ಕಿ ಬಿದ್ದರೇ ದೇವರಿಗೆ ಪ್ರೀತಿಯಾಗಬೇಕು ಅಷ್ಟರ ಮಟ್ಟಿಗೆ ಧರ್ಮದೇಟು ಕೊಡಲು ನಾನು ಮುಂದು ತಾನು ಮುಂದು ಎಂದು ಎಲ್ಲಾ ಸೇರಿ ಹಾಕುತ್ತಾರೆ.

ಅದೇ ನಮ್ಮ ದೊಡ್ಡ ದೊಡ್ಡ ಸ್ಟಾರಗಳು, ನಾಯಕರುಗಳು, ದೇವ ಮಾನವರುಗಳು ಮಾಡುವ ದೊಡ್ಡ ತಪ್ಪುಗಳಿಗೆ ತೆಪ್ಪಗೆ ಇದ್ದು.. ಮರುಗುತ್ತಾ ಯಾಕೆ ಹೀಗೆ ಆಯ್ತಾಪ್ಪ? ದೇವರೇ ಅವರುಗಳು ಕ್ಷೇಮವಾಗಿ ಮನೆಗಳಿ ಹಿಂದಿರುಗಿ ಯಾವುದೇ ಕಳಂಕರಹಿತರಾಗಿ ತ(ನ)ಮ್ಮ ಸೇವೆ, ಸಹಾಯ, ರಂಜನೆಯನ್ನು ಜನರ ಮಾನಸಕ್ಕೆ ಕೊಡಲಿ ಎಂದು ನಾಡಿನ ಎಲ್ಲಾ ದೇವಸ್ಥಾನಗಳಲ್ಲಿ ಹೋಮ, ಹವನ, ಪೂಜೆಗಳನ್ನು, ಅನ್ನ ಸಂತಾರ್ಪಣೆಗಳನ್ನು ಅವರ ಭಕ್ತ ಸಮೊಹ ಹಮ್ಮಿಕೊಳ್ಳುತ್ತದೆ ಯಾಕೆ?

ನಮ್ಮ ಜನಗಳು ಯಾವುದಕ್ಕೆ ಬೆಲೆ ಕೊಡುತ್ತ ಇದ್ದಾರೆ ಎಂದು ನಮಗೆ ಒಂದು ಕ್ಷಣ ಗೊಂದಲ ಆಗುವುದಿಲ್ಲವೇ?

ದೊಡ್ಡವರು, ಉಳ್ಳವರು, ಪ್ರಸಿದ್ಧವರಿಗೆ ಮಾತ್ರ ಒಂದು ನ್ಯಾಯಾ. ಏನೂ ಇಲ್ಲದ ಸಾಮಾನ್ಯ ಪ್ರಜೆಗೆ ಒಂದು ನ್ಯಾಯವಾ? ನೀವೆ ಹೇಳಿ.

ಯಾಕೆ ನಾವುಗಳು ಅವರುಗಳನ್ನು ಒಬ್ಬ ಸಾಮಾನ್ಯ ಮನುಷ್ಯನಂತೆ ನೋಡಲಾಗುವುದಿಲ್ಲ. ಅವನು ಮಾಡುವ ಸಾವಿರ ತಪ್ಪುಗಳು, ತಪ್ಪು ಎಂದು ನಿರೂಪಿತವಾಗಿದ್ದರೂ ಒಂದು ಕೊದಲು ಎಳೆಯಷ್ಟು ಸಂಶಯಗಳು ಬರುವುದಿಲ್ಲ.

ಅವರುಗಳು ಜೈಲು, ಕಟೆಕಟೆಯಲ್ಲಿ ನಿಂತರು, ಪತ್ರಿಕೆಗಳು ಅಷ್ಟು ದುಡ್ಡು ಹೊಡೆದ ಇಷ್ಟು ಭ್ರಷ್ಟಾಚಾರ ಮಾಡಿದ ಎಂದು ಪುಟ ಪುಟಗಟ್ಟಲೇ ಓದಿದರೂ ನಾವುಗಳು ಯಾಕೆ ಅವರುಗಳನ್ನು ಅಷ್ಟೊಂದು ಸಾಪ್ಟ್ ಆಗಿ ಕಾಣುತ್ತೇವೆ? ಸಣ್ಣ ತಪ್ಪು, ದೊಡ್ಡ ತಪ್ಪು ಎಂಬ ರೀತಿಯ ತಪ್ಪುಗಳು ಇರುವುವೆ?

ಅದೇ ಸಾಮಾನ್ಯ ಮನುಷ್ಯ ಒಂದು ಸಣ್ಣದಾಗಿ ಎಡವಿದರು ಸಾಕು ಹೇಗೆಲ್ಲಾ ಆಡಿಕೊಂಡು ಅವನ ಮನಸ್ಸನ್ನು ನೋಯಿಸುವ ನಾವುಗಳು ಕೋಟಿಗಟ್ಟಲೆ ತಿಂದಿರುವ ಆ ಮುಖಗಳಲ್ಲಿರುವ ಝಲಕು, ಒಂದೀಷ್ಟು ಬತ್ತಿರದ ರೀತಿಯಲ್ಲಿ ಟಿ.ವಿ ಯಲ್ಲಿ ವಿನ್ನರ್ ಸೈನ್ ನ್ನು ತೋರಿಸಿಕೊಳ್ಳುತ್ತಾ ಕೋರ್ಟಿಗೆ ಹೋಗುತ್ತಿರುವ ನಾಯಕರ ದೃಶ್ಯ ಏನನ್ನು ನಿದರ್ಶಿಸುತ್ತದೆ?

ನಿಜವಾಗಿಯು ನೈತಿಕತೆ ಎಂದರೇ ಏನೂ ಎಂಬ ಹೊಸ ಪರಿಭಾಷೆಯನ್ನು ಹುಡುಕುವಂತಾಗಿದೆ.

ಹೆಚ್ಚಾಗಿ ದುಡ್ಡು ಮಾಡಿದರೇ ಸಾಕು ಮಗ ಎಲ್ಲವನ್ನು ಜಯಿಸಬಹುದು ಎನ್ನುವಂತಾಗಿದೆ. ಪಾಪ ಪುಣ್ಯವನ್ನು ಮೋಟೆ ಕಟ್ಟಿ ಮಾರಾಟಕ್ಕೆ ಇಟ್ಟು ಬಿಟ್ಟಿದ್ದಾರೇನೂ ಎನಿಸುತ್ತಿದೆ.

ಮೊನ್ನೆಯ ದಿನಪತ್ರಿಕೆಯಲ್ಲಿ ಓದಿದ ಒಂದು ವರದಿ ಮನಕರಗಿಸಿ ನಾವು ಯಾವ ಲೋಕದಲ್ಲಿ ಇದ್ದೇವೆ ಎನ್ನುವಂತಾಯಿತು.

ದೆಹಲಿಯಲ್ಲಿ ಭಯೋತ್ಪಾದಕರ ಬಾಂಬ್ ಗೆ ಬಲಿಯಾದವರ ಶವಗಳನ್ನು ಅವರ ಸಂಬಂಧಿಕರುಗಳು ತಮ್ಮ ಜಾಗಗಳಿಗೆ ಸಾಗಿಸುವಾಗ ಶವಗಳನ್ನು ಇಟ್ಟಿರುವ ಆಸ್ಪತ್ರೆಯಲ್ಲಿ ಶವಗಳನ್ನು ಮುಚ್ಚಿಕೊಂಡುಹೋಗಲು ಪ್ಲಾಸ್ಟಿಕ್ ಕವರಗಳನ್ನು ಬೇಡಿದ್ದಾರೆ. ಅವುಗಳ ನಿಜವಾದ ಬೆಲೆ ೩೦೦ ರೂಗಳು. ಆದರೇ ಅಲ್ಲಿನ ಸಿಬ್ಬಂಧಿ ದುಃಖತಪ್ತ ಮನೆಯವರುಗಳಿಂದ ಹೆಚ್ಚಿನ ಬೆಲೆಯನ್ನು ಕೇಳಿ ಮಾರಾಟ ಮಾಡಿರುವುದು ಯಾವುದರ ಸಂಕೇತ?

ನಿಜವಾಗಿಯು ನಾವುಗಳು ಏನೆಲ್ಲಾ ಆದರ್ಶ, ನೈತಿಕತೆ, ದೇಶ ಪ್ರೇಮ ಇತ್ಯಾದಿ ದೊಡ್ಡ ಮಾತುಗಳು ನಮ್ಮ ನಾಡಿನ ಯಾವ ಜನಗಳಿಗೋಸ್ಕರ. ನಿತ್ಯ ಭ್ರಷ್ಟಾಚಾರ ತೂಲಗಲಿ, ಸುರ‍ಕ್ಷತೆಯ ಸ್ವರಾಜ್ಯ ಸ್ಥಾಪಿತವಾಗಲಿ ಎಂದು ಕೆಲವೊಂದು ಮಂದಿ ತಮ್ಮ ಜೀವವನ್ನೆ ಪಣವಾಗಿಟ್ಟು ಹೋರಾಡುತ್ತಾರೆ. ಆದರೇ ಕೆಲವೊಂದು ಮಂದಿ ತಮ್ಮ ನೀಚತನವನ್ನು, ತಮ್ಮ ದುರಾಸೆಯನ್ನು ಸಮಯ ಸಂದರ್ಭ,ಸ್ಥಳ ಎನಿಸದೇ ಹೆಗ್ಗಿಲ್ಲದೇ ಕಿತ್ತು ತಿನ್ನಲು ಮಣೆ ಹಾಕಿಕೊಂಡು ಕುಳಿತಿರುವವರಲ್ಲ!

ಇದಕ್ಕೆ ಕೊನೆಯಾದರೂ ಹೇಗೆ ಮತ್ತು ಎಂದು?

ಸೋಮವಾರ, ಸೆಪ್ಟೆಂಬರ್ 5, 2011

ಗುರುವೇ ನಮಃ..



ಗುರು ಬ್ರಹ್ಮ, ಗುರು ವಿಷ್ಣು ಗುರುದೇವಾ ಮಹೇಶ್ವರ.. ಈ ಶ್ಲೋಕವನ್ನು ಅಕ್ಷರ ಕಲಿತ ಪ್ರತಿಯೊಬ್ಬರೂ ಒಮ್ಮೆ ತಮ್ಮ ಮನದಲ್ಲಿ ಹೇಳಿಕೊಂಡಿರಲೇ ಬೇಕು. ಇದರ ಹೇಳಿಕೆ ಹೀಗೆ ಗುರುವೆ ಎಲ್ಲಾ. ಗುರು ಮುಟ್ಟಿದ್ದು ಗುಡ್ಡ ಎಂಬ ನಮ್ಮ ಹಳ್ಳಿಯ ಗಾದೆಯಂತೆ ಗುರು ದೊಡ್ಡವನು. ಅದು ನಿಜವೂ ಹೌದು.

ನಾವುಗಳು ಏನಾದರೂ ಒಂದಿಷ್ಟು ಕಲಿತಿರುವೆವು ಅಂದರೇ ಅದು ನಮ್ಮ ಟೀಚರ್, ಮೇಸ್ಟರ್ ಗಳ ಬೋಧನೆಯಿಂದ ಮಾತ್ರ. ನಮ್ಮ ಬಾಲ್ಯದಲ್ಲಿ ಅವರೇ ಎಲ್ಲಾ. ಅವರು ಹೇಳಿದ ಪ್ರತಿಯೊಂದು ಮಾತು ನಮಗೆಲ್ಲಾ ವೇದ ವಾಕ್ಯ. ಅವರು ಏನೂ ಹೇಳಿದರೂ ಪ್ರಶ್ನೇ ಮಾಡದೆ ಒಪ್ಪಿಕೊಂಡು ಸಾಗುವ ಹಂಬಲ. ಅಷ್ಟೊಂದು ಭರವಸೆ ನಮ್ಮ ಮೇಡಮ್, ಮಾಸ್ತರ್ ಗಳ ಮೇಲೆ.

ಅಂದಿನ ದಿನಗಳಲ್ಲಿ ನಮ್ಮಗಳಿಗೆ ಅವರುಗಳೇ ರೋಲ್ ಮಾಡಲ್, ಆದರ್ಶ ವ್ಯಕ್ತಿಗಳು.

ಯಾರಾದರೂ ಮುಂದೆ ನೀನು ಏನಾಗಲು ಬಯಸುವೆ? ಎಂದು ಕೇಳಿದರೇ ಹಿಂದೆ ಮುಂದೆ ನೋಡದೆ ನಾನು ಮಾಸ್ತರ್/ಟೀಚರ್ ಆಗುವೆ ಎಂದು ಜಂಬದಿಂದ ಹೇಳಿಕೊಂಡಿರುತ್ತೇವೆ.

ಮನೆಯೇ ಮೊದಲ ಪಾಠಶಾಲೆ ತಾಯಿಯೆ ಮೊದಲ ಗುರುವಾದರು.. ನಮಗೆ ಗುರುಗಳು ಎಂದರೇ ನಮ್ಮ ಶಾಲೆಗಳಲ್ಲಿ ನಮ್ಮನ್ನು ಒಂದು ಅದ್ದು ಬಸ್ತಿನಲ್ಲಿ ಇಟ್ಟು ಅ, ಆ, ಇ, ಈ.. ಕಲಿಸಿದ ಮೊದಲ ಮೇಷ್ಟ್ರು. ಅಲ್ಲಿ ನಮ್ಮ ತಪ್ಪುಗಳಿಗೆ ಶಿಕ್ಷೆ ಇರುತ್ತದೆ, ನಮ್ಮ ಗೆಲುವಿಗೆ ಒಳ್ಳೆಯತನಕ್ಕೆ ಮೆಚ್ಚುಗೆಯಿರುತ್ತದೆ, ದಾರಿ ತಪ್ಪಿದಾಗ ಮಾರ್ಗದರ್ಶನ ಮಾಡುವವರಾಗಿರುತ್ತಾರೆ.

ಗುರುವೇ ಎಲ್ಲಾ ಎಂಬ ಭಾವನೆಯನ್ನು ನಾವುಗಳು ಹೊಂದಿರುತ್ತೇವೆ. ಅಂದಿನ ದಿನಗಳಲ್ಲಿ ನಾವುಗಳು ಏನೂ ಅಂದುಕೊಂಡಿರುತ್ತೇವೆ ಅಂದರೇ ನಮ್ಮ ಟೀಚರ್ ದೊಡ್ಡ ಙ್ಞಾನಿಗಳು ಅವರಿಗೆ ತಿಳಿಯದ ವಿಷಯಗಳೇ ಇಲ್ಲಾ.. ಅವರು ಹೇಳಿದರೇ ಮುಗಿಯಿತು.. ನಮ್ಮ ಹೆತ್ತವರಿಗಿಂತ ಹೆಚ್ಚಿಗೆ ಅವರುಗಳಿಗೆ ಗೊತ್ತು ಎಂಬ ಒಂದು ಗೌರವಾಯುತವಾದ ಅಭಿಪ್ರಾಯ ನಮ್ಮ ಮುಗ್ಧ ಮನಸ್ಸುಗಳಲ್ಲಿ ಸ್ಥಾಪಿತವಾಗಿರುತ್ತದೆ.

ನಾವುಗಳು ಇಂದು ಹೀಗೆ ಇರುವೆವು ಎಂದರೇ ಅದು ನಮ್ಮ ಗುರುಗಳು ನಮ್ಮನ್ನು ರೂಪಿಸಿದ್ದರಿಂದ. ಅವರುಗಳು ನಮ್ಮ ಚಿಕ್ಕ ಚಿಕ್ಕ ಮನಸ್ಸಿನಲ್ಲಿ ಬಿತ್ತಿದ ಕನಸಿನ ಬೀಜಗಳಿಂದ.

ಯಾರೊಬ್ಬರಾದರೂ ಗುರುವಿಲ್ಲದೆ ಯಾವುದೇ ಒಂದು ಸಾಧನೆಯನ್ನು ಮಾಡಿದ ಉದಾಹರಣೆ ತೀರಾ ಕಡಿಮೆ. ನಮ್ಮ ಬಾಲ್ಯದ ಶಾಲಾ ದಿನಗಳಿಂದ ಹಿಡಿದು.. ಇಂದು ನಾವುಗಳು ನಮ್ಮ ಕಾಲ ಮೇಲೆ ಇಂದು ನಿಂತುಕೊಂಡು ಎಲ್ಲಾದರೂ ಒಂದು ಕಾರ್ಯವನ್ನು ನಡೆಸುತ್ತಿದ್ದೇವೆ ಎಂದರೇ ಅಲ್ಲಲ್ಲಿ ನಮಗೆ ಗೊತ್ತಿಲ್ಲದ ರೀತಿಯಲ್ಲಿ ಯಾರಾದರೊಬ್ಬ ಗುರುವಿನ ಮಾರ್ಗದರ್ಶನ ದೊರಕಿದೆ ಅಂತ ಅರ್ಥ.

ಯೋಚಿಸಿ ನಮ್ಮಗಳ ಕಗ್ಗಲ್ಲಿನ ರೀತಿಯ ವ್ಯಕ್ತಿತ್ವಕ್ಕೆ ಒಂದು ಮೆರಗು ಯಾವಾಗ ಸಿಕ್ಕಿತು?. ಏನೊಂದು ಗೊತ್ತಿಲ್ಲದ ದಿನಗಳಿಂದ ಇಂದು ಸ್ವಲ್ಪ ಏನಾದರೂ ತಿಳಿದಿದೆ ಎಂದು ಬೀಗುವಂತಾಗಿರುವುದರ ಪ್ರೇರಣೆ ಯಾರು? ಅದು ಸರಿ ಇದು ತಪ್ಪು ಎಂಬ ನಿಷ್ಕರ್ಷವನ್ನು ಮಾಡುವಂತೆ ಮಾಡಿದವರು ಯಾರು? ಹೀಗೆ ನಮ್ಮ ಬದುಕಿಗೆ ಒಂದು ಅರ್ಥವನ್ನು ಕೊಟ್ಟವರು ಅವರುಗಳೇ ಅಲ್ಲವಾ?

ಯಾವುದೇ ಕ್ಷೇತ್ರದಲ್ಲಿ ಇಂದು ಒಂದು ದೊಡ್ಡ ಸಾಧನೆಗಳನ್ನು ಮಾಡಿರುವ ವ್ಯಕ್ತಿಗಳನ್ನು ಕೇಳಿ ನೋಡಿ ಅವರುಗಳ ಇಂದಿನ ಸ್ಥಿತಿಗೆ ಅವರುಗಳು ನೆನಪು ಮಾಡಿಕೊಳ್ಳಲು ತವಕಿಸುವ ಹೆಸರುಗಳೆಂದರೇ ಅವೇ ಅವರ ಸಾಮಾನ್ಯ ಗುರುಗಳು ಮಾತ್ರ. ಗುರುವಿನ ಗುರಿ ಅಷ್ಟು ಮಾತ್ರ ಅವರುಗಳು ಏನೊಂದು ಅಪೇಕ್ಷೆ ಪಡದೆ ತನ್ನ ಶಿಷ್ಯ ಕೋಟಿಯ ಒಂದು ಸಜ್ಜನಿಕೆಯ ಉದ್ಧಾರವೇ ಮೊಲ ಮಂತ್ರವಾಗಿರುತ್ತದೆ. ತನ್ನ ಶಿಷ್ಯ ತನ್ನನ್ನು ಮೀರಿಸಿದಾಗ ಗುರುವಿಗೆ ಸಿಗುವ ಆನಂದ ವರ್ಣಿಸಲು ಅಸಾಧ್ಯ.

ಒಳ್ಳೆಯ ತನಕ್ಕೆ ಮತ್ತೊಂದು ಹೆಸರು ಗುರು ಮಾತ್ರ. ನೀವು ನೋಡಬೇಕು ಹಳ್ಳಿಗಳಲ್ಲಿ ಶಿಕ್ಷಕರನ್ನು ಅಲ್ಲಿನ ಜನಗಳು ಗೌರವಿಸುವ ರೀತಿ. ಬಾಯಿ ತುಂಬ ಮಾಸ್ತರ್ ಎಂದು ಅವರನ್ನು ತುಂಬ ಗೌರವದಿಂದ ಕಾಣುತ್ತಾರೆ. ಯಾಕೆಂದರೇ ತಮ್ಮ ಮಕ್ಕಳಿಗೆ ಸರಿಯಾದ ದಾರಿಯನ್ನು, ನಾಲ್ಕು ಅಕ್ಷರವನ್ನು ಕಲಿಸಿ ಅವರ ಬಾಳನ್ನು ಬಂಗಾರ ಮಾಡುತ್ತಿರುವ ಮೊಲ ಕತೃವೇ ಅವನಾಗಿರುತ್ತಾನೆ ಎಂದುಕೊಂಡು.

ಪ್ರತಿಯೊಂದು ಹೊಸ ಕಲಿಕೆಗೂ ಗುರು ಬೇಕೆ ಬೇಕು ಎಂಬುದನ್ನು ನಾವು ನಮ್ಮ ಹಿಂದಿನ ಪುರಾಣ ಕಥೆಗಳಲ್ಲಿಯೇ ಕೇಳಿದ್ದೇವೆ. ನೋಡಿ ಏಕಲವ್ಯನ ಸಾಧನೆ. ಗುರುಗಳು ತನಗೆ ಕಲಿಸಲಾಗದು ಎಂಬ ಕ್ಷಣದಲ್ಲಿಯು.. ತನಗೆ ಒಬ್ಬ ಗುರುವು ಬೇಕು ಎಂದು ನಿರ್ಧರಿಸಿ ದ್ರೋಣಾಚಾರ್ಯರ ಮಣ್ಣಿನ ಪ್ರತಿಮೆಯನ್ನು ಪ್ರತಿಷ್ಠಾಪಿಸಿ ಆ ಮೊರ್ತಿಯ ಮುಂದೆ ತನ್ನ ಕಲಿಕೆಯನ್ನು ಮಾಡುತ್ತಾ ಎಲ್ಲಾ ವಿದ್ಯೆಗಳನ್ನು ಕಲಿಯುತ್ತಾ.. ಶಬ್ದವೇದಿ ವಿದ್ಯೆಯಲ್ಲಿ ಅರ್ಜುನನ್ನೇ ಮೀರಿಸಿಬಿಡುತ್ತಾನೆ. ಹಾಗೆಯೇ ದ್ರೋಣಾಚಾರ್ಯರು ತಮ್ಮ ಗುರುದಕ್ಷಿಣೆಯಾಗಿ ಅವನ ಬಲಗೈ ಹೆಬ್ಬೆರಳನ್ನು ಕೇಳಿದಾಕ್ಷಣ ಹಿಂದೆ ಮುಂದೆ ನೋಡದೇ ಬೆರಳನ್ನು ಕತ್ತರಿಸಿ ಗುರು ಕಾಣಿಕೆಯಾಗಿ ಅರ್ಪಿಸಿಬಿಡುತ್ತಾನೆ.

ಗುರು - ಶಿಷ್ಯ ರ ಸಂಬಂಧಕ್ಕೆ ಒಂದು ನಿದರ್ಶನವಾಗಿ ಏಕಲವ್ಯ ನಮ್ಮ ಮುಂದೆ ಇಂದಿಗೂ ಪ್ರಸ್ತುತವಾಗಿದ್ದಾನೆ.

ಅಂದು ನಮ್ಮಗಳಿಗೆ ಅವರಿಂದ ಏಟು ತಿಂದ ಕ್ಷಣಗಳು ಇಂದು ನೆನಸಿಕೊಂಡರೇ ಅದೇ ಒಂದು ಸವಿನೆನಪು.

ನಿನ್ನೇ ಕೊಟ್ಟ ಹೊಡೆತದಂತೆ ಸವಿಯಾದ ನವೆಯನ್ನು ಇಂದು ಕಾಣುವಂತಾಗುತ್ತದೆ. ಆ ದಂಡನೆ ಪ್ರೀತಿಯ ಕಕ್ಕುಲಾತಿಯು ಒಂದು ಎಚ್ಚರಿಕೆಯ ಭಯವನ್ನು...ಸರಿಯಾಗಿ ಕಲಿಯಲಿ.. ಎಂಬುದಾಗಿತ್ತು ಎಂದು ಈಗ ಅನಿಸುತ್ತದೆ. ಆದರೆ ಅಂದು ನಾವುಗಳು ನಮ್ಮ ಗುರುಗಳ ಮೇಲೆ ಮುನಿಸಿಕೊಂಡಿದ್ದೇನೂ.. ಅವರನ್ನು ಮನದಲ್ಲಿಯೇ ಬೈದುಕೊಂಡಿದ್ದೇನೂ.. ಅವರು ಮಾತು ಎತ್ತಿದರೇ ಹೊಡೆಯುತ್ತಾರೆ ಕಣಾಮ್ಮ ಎಂದು ಅಮ್ಮನ ಮುಂದೆ ದೂರು ಕೊಟ್ಟಿದ್ದೇನೂ.. ಒಂದು ದಿನವವು ಕೋಲನ್ನೇ ಮುಟ್ಟದೆ ಮುದ್ದಿನಿಂದ ಪಾಠ ಕಲಿಸಿದ ಮಿಸ್ ಗಳನ್ನು ಕೊಂಡಾಡಿದ ದಿನಗಳೇನೂ.. ಅಬ್ಬಾ ಎಷ್ಟೊಂದು ರೋಮಾಂಚನವನ್ನುಂಟು ಮಾಡುವ ಆ ದಿನಗಳು ಗತಕಾಲಕ್ಕೆ ಸರಿದಿವೆ.

ಇಂದು ಕೇವಲ ನೆನಪುಗಳು ಮಾತ್ರ.

ಅದರೇ ಇಂದು ಎಷ್ಟು ಮಂದಿ ಅಂಥ ಒಂದು ಉನ್ನತವಾದ ಉದ್ಯೋಗವನ್ನು ಆರಿಸಿಕೊಳ್ಳುವವರು? ಅಂದಿನ ನಮ್ಮ ಬಾಲ್ಯದಲ್ಲಿ ನಮ್ಮ ಕನಸು ಮತ್ತೊಬ್ಬ ಒಳ್ಳೆಯ ಮೆಸ್ಟರ್ ಆಗುವುದಾಗಿತ್ತು. ಆದರೆ ಬದಲಾದ ಕಾಲಮಾನ ನಮ್ಮ ಸಮಾಜ, ನಮ್ಮ ಹೆತ್ತವರ ಹಂಬಲದೊಂದಿಗೆ ನಾವುಗಳು ನಮ್ಮ ಉದ್ಯೋಗವನ್ನು ಬೇರೊಂದು ರಂಗದಲ್ಲಿ ಸ್ಥಾಪಿಸಿಕೊಂಡುಬಿಟ್ಟಿದ್ದೇವೆ. ಯಾಕೆ?

ನನಗಂತೋ ಆ ಭಯವಿದೆ. ಉಪನ್ಯಾಸಕನಾಗುವುದಕ್ಕೆ ನನಗೆ ಆ ಅರ್ಹತೆಯಿದೆಯೇ ಎಂಬ ಅನುಮಾನ. ಅಲ್ಲವಾ? ನನಗೆ ಅಷ್ಟು ಗೊತ್ತಿದೆಯೇ? ಮಕ್ಕಳು, ವಿದ್ಯಾರ್ಥಿಗಳು ಕೇಳುವ ಪ್ರಶ್ನೆಗಳಿಗೆ ಸಮಾಂಜಸವಾದ ಉತ್ತರವನ್ನು ನೀಡಲು ಶಕ್ತನೇ?

ಹೌದಲ್ಲವಾ ಆ ಒಂದು ಜವಾಬ್ದಾರಿಯುತವಾದ ಶಿಕ್ಷಕನ ಸ್ಥಾನವನ್ನು ಅಲಂಕರಿಸಲು ಮನಸ್ಸಿನಲ್ಲಿ ಪ್ರೀತಿಯಿರಬೇಕು. ನಿತ್ಯ ಹೊಸದನ್ನು ಕಲಿಯುವ ಮನೋಭಾವವಿರಬೇಕು. ನಿತ್ಯ ತನ್ನ ವಿದ್ಯಾರ್ಥಿಗಳಿಗೆ ಅಧಿಕಾರಿಯುತವಾಗಿ ಯಾವುದೇ ಒಂದು ವಿಷಯದಲ್ಲಿ ಪರಿಪೂರ್ಣವಾಗಿ ತಿಳಿಹೇಳುವ ಙ್ಞಾನವನ್ನು ಹೊಂದಿರಬೇಕು. ವಿದ್ಯಾರ್ಥಿಯನ್ನು ಹೊಸ ಚಿಂತನೆಗೆ ಹಚ್ಚಿಸುವಂತಹ ಶಿಕ್ಷಣವನ್ನು ನೀಡುವಂತನಾಗಿರಬೇಕು.

ಈ ರೀತಿಯಲ್ಲಿ ನಮ್ಮನ್ನೇಲ್ಲಾ ಪರಿವರ್ತಿಸಿದ ನಮ್ಮ ಎಲ್ಲಾ ಸಮಸ್ತ ಶಿಕ್ಷಕ ಕುಲಕ್ಕೆ ನಮೋ ನಮಃ ಅಂತ ಮಾತ್ರ ನಾನು ಹೇಳುತ್ತೇನೆ. ನೆನಸಿಕೊಂಡರೇ ಇಂದಿಗೂ ನನ್ನ ಮೈನವಿರೇಳಿಸುತ್ತದೆ. ನಾವೇನು ಅಲ್ಲಾ ಎಂಬುದರಿಂದ ಹಿಡಿದು ನೀನು ಹೀಗೆ ಎಂಬುದನ್ನು ತಿಳಿಸಿಕೊಡುವಂತಹ ಶಿಕ್ಷಕ ಸಮೋಹವೇ ಎಂದೆಂದಿಗೂ ಗ್ರೇಟ್.

ಉತ್ತಮ ಶಿಕ್ಷಕರಿಗೆ ಶಿಷ್ಯರಾಗಿರುವುದು ಒಂದು ಪುಣ್ಯವೇ ಸರಿ. ಅವರುಗಳ ಓಡನಾಟವೇ ಒಂದು ದೊಡ್ಡ ವಿಚಾರ. ಅವರನ್ನು ಹತ್ತಿರದಿಂದ ಕಂಡವರಾ ಬದುಕೇ ಪಾವನ ಗಂಗೆ..

ಇಂದಿನ ಈ ಮುಂದುವರಿದ ಜಮಾನದಲ್ಲಿ ಒಂದು ಕ್ಷಣ ನಾವುಗಳು ನಮ್ಮನ್ನು ತಿದ್ದಿತೀಡಿದ ನಮ್ಮ ಎಲ್ಲಾ ಗುರುಗಳನ್ನು ನೆನಪಿಸಿಕೊಂಡು ಅವರಿಗೆ ಒಂದು ಹೃದಯಪೂರ್ವಕ ನಮನವನ್ನು ಸಲ್ಲಿಸೋಣ. ಗುರುವೇ ನಮಃ

ಬುಧವಾರ, ಆಗಸ್ಟ್ 24, 2011

ಓಂ ಶಾಂತಿ! ಓಂ ಶಾಂತಿ!

ನಮ್ಮಗಳಿಗೆ ಒಂದು ರೀತಿಯಲ್ಲಿ ಭಯವನ್ನು, ನಾವುಗಳು ಹೀಗೆ ಇರಬೇಕು, ಹೀಗೆ ಮಾಡಬೇಕು, ಹೀಗೆ ಸರಿ ದಾರಿಯಲ್ಲಿ ನಡೆಯಬೇಕು ಎಂಬುದನ್ನು ಕಲಿಸುವುದು ಯಾರು ಎಂದರೇ ನಮ್ಮ ಹಿರಿಯರು ಎಂದು ಗಂಟಾಘೋಷವಾಗಿ ಹೇಳುತ್ತೇವೆ. ನಾವು ಆ ಹಿರಿಯರುಗಳ ಮಾತನ್ನು ಸುಖ ಸುಮ್ಮನೇ ಕೇಳಿ ಹಾಗೆಯೇ ನಡೆಯಲು ಶುರುಮಾಡುವುವೇ?

ಇಲ್ಲ ಅಲ್ಲವಾ?

ನಾವುಗಳು ಅವರ ಮಾತನ್ನು ಕೇಳಬೇಕೆಂದರೆ ನಮಗೆ ಅವರುಗಳು ಯಾವುದಾದರೂ ಒಂದು ಸಾಕ್ಷಿ ಪ್ರಙ್ಞೆಯನ್ನು ತೋರಿಸಬೇಕು.ಅದೇ ದೇವರುಗಳು. ಅಂದರೇ ಆ ಚಿಕ್ಕ ವಯಸ್ಸಿನಲ್ಲಿ ನಮಗೆ ಯಾವುದನ್ನೋ ಮೀರಿದ ಒಂದು ಸಾಕ್ಷಿ ಇರುತ್ತದೆ ಎಂದರೇ ಅದು ನಮ್ಮ ನಮ್ಮ ಮನೆಗಳಲ್ಲಿ ನಾವುಗಳು ಆರಾಧಿಸುವುದನ್ನು ನೋಡುತ್ತಿರುವ ಆ ಮನೆ ದೇವರು ಮಾತ್ರ.

ಚಿಕ್ಕಂದಿನ ದಿನಗಳಲ್ಲಿಯೇ ನಮ್ಮಗಳಿಗೆ ಅದನ್ನು ರೂಡಿ ಮಾಡಿ ಬಿಟ್ಟಿರುತ್ತಾರೆ. ಅವುಗಳನ್ನು ನೋಡುವ ಮೂಲಕ, ಅವುಗಳನ್ನು ಆಚರಿಸಲು ಕಲಿಯುವುದರ ಮೂಲಕ ಸ್ವಲ್ಪ ಸ್ವಲ್ಪ ನಾವುಗಳನ್ನು ನಮ್ಮ ಚಿಂತನೆ, ಯೋಚನೆ ಮತ್ತು ಬುದ್ಧಿಶಕ್ತಿಯಾನುಸಾರ ಅವುಗಳನ್ನು ನಮ್ಮ ಮನದಲ್ಲಿ ಸ್ಥಾಪಿಸಿಕೊಳ್ಳಲು ಪ್ರಾರಂಭಿಸುತ್ತೇವೆ.

ಕೆಲವು ದಿನಗಳವರೆಗೆ ಅದನ್ನು ಯಥಾಃ ಜಾರಿಯಲ್ಲಿ ಇಟ್ಟುಕೊಳ್ಳಲು ಪ್ರಾರಂಭಿಸುತ್ತೇವೆ. ನಮ್ಮ ಮನೆಗಳಲ್ಲಿ ಏನನ್ನು ಆಚರಿಸುತ್ತಾರೋ ಅದೇ ನಮ್ಮ ಸಂಸ್ಕೃತಿಯೆಂದು ಕಲಿಯುತ್ತೇವೆ. ಅವುಗಳನ್ನೇ ಭಯ ಭಕ್ತಿಯೊಂದಿಗೆ ಅಳವಡಿಸಿಕೊಳ್ಳಲು ಪ್ರಾರಂಭಿಸುತ್ತೇವೆ.



ಬುದ್ಧಿ ಬಲಿಯುವವರೆಗೂ ನಮ್ಮ ಮನೆಯಲ್ಲಿ ಅನುಸರಿಸುತ್ತಿರುವ, ಆಚರಿಸುತ್ತಿರುವ ಆಚರಣೆ, ಪೂಜೆ ಮಾಡುವ ದೇವರುಗಳನ್ನೇ ಪ್ರತಿಯೊಬ್ಬರೂ ಮಾಡುತ್ತಾರೆ ಎಂಬ ಭಾವನೆಯಲ್ಲಿರುತ್ತೇವೆ. ಇದು ಒಂದು ಸಾಮಾನ್ಯವಾದ ರೂಡಿ ಮತ್ತು ಎಲ್ಲಾರೂ ಮಾಡುವವರೇನೋ ಎಂಬ ರೀತಿಯಲ್ಲಿ ಅಷ್ಟೊಂದು ಪ್ರಾಮುಖ್ಯತೆಯನ್ನು ಕೊಡದ ಕಾರಣ ನಿರಾಳವಾಗಿ ಅದು ನಮ್ಮದೇ ನನ್ನದೇ ಒಂದು ಆಚರಣೆ. ಅದನ್ನು ನಾವುಗಳು ಕಡ್ಡಾಯವಾಗಿ ಮಾಡಲೇಬೇಕು. ಯಾಕೆಂದರೇ ನನ್ನ ಮನೆಯಲ್ಲಿ,ನನಗೆ ಗೊತ್ತಿರುವವರೆಲ್ಲಾ, ನನ್ನ ಸಂಬಂಧಿಕರೆಲ್ಲಾ ಮಾಡುತ್ತಿದ್ದಾರೆ. ಅಂದು ಕೊಂಡು ಯಾವುದೇ ಒಂದು ಸಣ್ಣ ಅನುಮಾನವಿಲ್ಲದೇ ನಾವುಗಳು ಬಹುದಿನಗಳವರೆಗೆ ನಡೆಸುತ್ತಾ ಸಾಗುತ್ತೇವೆ.

ಇದೇ ನಮ್ಮ ಧರ್ಮವಾಗುತ್ತದೆ, ಇದೆ ನಮ್ಮ ಜಾತಿಯಾಗುತ್ತದೆ, ಇದೆ ನಮ್ಮ ಸಂಸ್ಕೃತಿಯಾಗುತ್ತದೆ ಅದು ನಮಗೆ ಗೊತ್ತಿರದ ರೀತಿಯಲ್ಲಿ. ಬಾಲ್ಯದಲ್ಲಿ ಯಾವುದನ್ನು ನಾವುಗಳು ಪ್ರಶ್ನೆ ಮಾಡದೆ ಒಪ್ಪಿಕೊಂಡಿರುತ್ತೇವೋ ಅದೇ ನಮಗೆ ಮಾಮೊಲಾದ ಗೊತ್ತಿರುವ ನಿರಾಳ ದಾರಿಯಾಗುತ್ತದೆ. ಅದರ ಬಗ್ಗೆ ಎಂದೂ ನಾವು ಚಿಕ್ಕ ಜಿಙ್ಞಾಸೆಯನ್ನು ಒಂದಷ್ಟು ದಿನಗಳವರೆಗೆ ಇಟ್ಟುಕೊಂಡಿರುವುದಿಲ್ಲ.

ಯಾವಾಗ ನಮ್ಮ ಓದು, ನಮ್ಮ ಸ್ನೇಹ, ಹೊರ ಜಗತ್ತು, ಸುತ್ತ ಮುತ್ತಲಿನ ಪರಿಸರ, ಸಮಾಜ ಹೀಗೆ ಹಲವು ರೀತಿಯ ಜಗತ್ತಿನ ಮರ್ಮಗಳನ್ನು ತನ್ನ ಕಣ್ಣು, ಮನಸ್ಸಿನಿಂದ ವ್ಯಕ್ತಿ ನೋಡಲು ಪ್ರಾರಂಭಿಸುವನೋ.. ಆಗ ನೋಡಿ ಶುರುವಾಗುತ್ತದೆ ತರಾವೇರಿ ಗೊಂದಲಗಳು ಮನದ ಮೂಲೆಯಲ್ಲಿ.

ಯಾಕೇ ಆ ನನ್ನ ಗೆಳೆಯ/ತಿ ನನ್ನ ರೀತಿಯಲ್ಲಿ ಆಚರಣೆಗಳನ್ನು ಮಾಡುವುದಿಲ್ಲ. ಅವನು/ಳು ಆರಾಧಿಸುವ ಹಬ್ಬ, ದೇವರುಗಳು, ಊಟ ಉಪಚಾರಗಳು ಪೂರ್ಣವಾಗಿ ನನಗಿಂತ ವಿಭಿನ್ನವಾಗಿವೆ. ಅವರುಗಳ ನಡಾವಳಿಗಳೇ ವಿಪರೀತವಾಗಿವೆ ಯಾಕೇ? ಹೀಗೆ ಪ್ರಶ್ನೆಗಳ ಸುರಿಮಳೆಯೇ ಮನಸ್ಸಿಗೆ ಬರಲು ಪ್ರಾರಂಭವಾಗುತ್ತವೆ. ಅವುಗಳಿಗೆ ನಮ್ಮ ತಂದೆ-ತಾಯಿ, ಹಿರಿಯರುಗಳಿಂದ, ಸ್ನೇಹಿತರುಗಳಿಂದ, ಸುತ್ತಲಿನ ಪರಿಸರದಿಂದ ಸರಿಯಾಗಿಯೇ ಉತ್ತರಗಳು ಸಮಯ ಮತ್ತು ಸಂದರ್ಭಕ್ಕೆ ತಕ್ಕ ಹಾಗೆಯೇ ಕೇಳುತ್ತೇವೆ ಮತ್ತು ಅವುಗಳ ಮೂಲಕ ವ್ಯಕ್ತಿ ಜಗತ್ತಿನ ವಿರಾಟ ರೂಪವಾದ ಪದ್ಧತಿಗಳನ್ನು ಅರಿಯುತ್ತಾ ಸಾಗುತ್ತನೆ.


ಹಾಗೆಯೇ ತಾನು ಓದುವ ಶಿಕ್ಷಣದ ಮೂಲಕ ಅವನು ತನ್ನ ವಯಸ್ಸಿಗೆ ಅನುಗುಣವಾಗಿ ತಾನು ಆಚರಿಸುವ ಸಂಸ್ಕೃತಿ, ದೇವರುಗಳು, ಧರ್ಮ, ಆಚರಣೆಗಳು, ಇವುಗಳ ಇತಿಹಾಸ. ಇವುಗಳನ್ನು ಯಾರು ಹುಟ್ಟು ಹಾಕಿದರು? ಯಾಕೆ ಹೀಗೆ ಮಾಡಬೇಕು ಎಂಬುದನ್ನು ತನ್ನ ಅರ್ಥವಂತಿಕೆಗೆ ಅನುಗುಣವಾಗಿ ಅರಿಯಲು ಪ್ರಾರಂಭಿಸುವನು. ನಾವುಗಳು ಮಾತ್ರ ಯಾಕೆ ಹೀಗೆ ಅನುಸರಿಸುತ್ತಿದ್ದೇವೆ. ಮತ್ತು ಇದಕ್ಕೆ ಏನಾದರೂ ಕಾರಣಗಳು ಇರುವುವೇ? ಈ ಆಚರಣೆಗಳನ್ನು ಮಾಡದಿದ್ದರೆ ಏನಾಗುವುದು? ನಮ್ಮ ದೇವರನ್ನು ನಾನು ಆರಾಧಿಸದಿದ್ದರೆ ಏನಾಗುವುದು? ನಾನು ಅದನ್ನು ಪಠಿಸದಿದ್ದರೇ ಏನಾಗುವುದು? ಹೀಗೆ ಒಂದೊಂದಾಗಿ ಪ್ರಶ್ನೆಗಳನ್ನು ತನ್ನ ಮನದಲ್ಲಿ ಮೂಡಿಸಿಕೊಂಡು ಅವುಗಳಿಗೆ ಉತ್ತರವನ್ನು ಪಡೆಯಲು ಪ್ರಾರಂಭಿಸುವನು.

ಮನುಷ್ಯನ ಮನಸ್ಸೆ ಒಂದು ಸುಖಕ್ಕಾಗಿ ಯಾವಾಗಲೂ ಹಾತೊರೆಯುತ್ತಿರುತ್ತದೆ. ತಾನು ಮಾಡುವ ಆಚರಣೆಗಳಿಂದ ತನಗೆ ಅನುಕೂಲವನ್ನು ಪಡೆಯಲು ಹಂಬಲಿಸುವನು. ಅದು ತನಗಾಗಿ ಅಥವಾ ತನ್ನನ್ನು ನೆಚ್ಚಿದವರಿಗಾಗಿ. ಹೀಗೆ ತನ್ನ ಅಭಿವೃದ್ಧಿಯ ದಾರಿಯಲ್ಲಿ ತಾನು ಮಾಡುವ ಯಾವುದೇ ಒಂದು ಕೆಲಸಕ್ಕೂ ಅವನಿಗೆ ಪ್ರತಿಫಲ ಸಿಗಲೇಬೇಕು. ಮುಂದೆ ಆಗುವ ಮಾಡುವ ಏನೇ ಕರ್ಮ ಕಾರ್ಯಕ್ಕೂ ಒಂದು ನಿರ್ಧಿಷ್ಟವಾದ ಫಲಕ್ಕೆ ಕಾಯುತ್ತಾನೆ. ಹೀಗೆ ಭವಿಷ್ಯತ್ ನಲ್ಲಿ ಸಿಗಲಿರುವ ಒಂದು ವಸ್ತುವನ್ನು ಪಡೆಯಲು ತನ್ನ ಸಾಮರ್ಥ್ಯವಲ್ಲದೇ ಬೇರೆನಾದರೂ ಒಂದು ಶಕ್ತಿಯ ನೆರವನ್ನು ಅವನು ಅಪೇಕ್ಷಿಸುತ್ತಾನೆ. ಅದೇ ತಾನು ನಂಬಿರುವ ದೇವರು. ದೇವರು ಅವನು ಪ್ರಶ್ನಾತೀತ. ಅವನಿಗೆ ತನ್ನ ಬಾಲ್ಯದಿಂದಲೂ ಎಲ್ಲರೂ ಅತಿಯಾದ ಗೌರವವನ್ನು ಪೂಜ್ಯಭಾವನೆಯನ್ನು ತನ್ನ ಮನೆಯಿಂದ ಹಿಡಿದು ತನ್ನಂತಿರುವ ಒಂದು ದೊಡ್ಡ ಸಮೊಹವೇ ನಂಬುವ ದೇವರೇ ಆಶದಾಯಕವಾಗಿ ಕಾಣುತ್ತದೆ. ಅದೇ ಅವನಿಗೆ ಹೊಸ ಆಶಾಕಿರಣ. ಎಲ್ಲಾ ರೀತಿಯ ನೆಮ್ಮದಿಯನ್ನು ದಯಪಾಲಿಸುವ ಕಾಮದೇನಾಗಿ ಕಾಣುತ್ತಾನೆ. ಅವನ ಶಕ್ತಿವಂತಿಕೆಯನ್ನು ತನ್ನಲ್ಲಿ ಕಾಣಲು ತವಕಿಸುತ್ತಾನೆ. ಆಗ ಅವನ ಭಕ್ತಿಯ ಪರಕಾಷ್ಠೆಯನ್ನು ನಾವುಗಳು ಕಾಣಬಹುದು. ಅದು ಅವನ ಆರಾಧನೆಯ ಸಮಯವಾಗಿರುತ್ತದೆ.

ಏನಾದರೂ ತಾನು ಅಂದುಕೊಂಡಿದ್ದು ವಿಪಲವಾದರೂ ಅವನಿಗೇನೂ ಬೇಜಾರಾಗುವುದಿಲ್ಲ. ಯಾಕೆಂದರೇ ಇದರ ಜಯ ಅಪಜಯಗಳನ್ನು ಒಂದು ದೊಡ್ಡ ಶಕ್ತಿಗೆ ಸಮರ್ಪಿಸಿರುತ್ತಾನೆ. ತನ್ನ ಸಾಮರ್ಥ್ಯದಲ್ಲಿ ಸ್ವಲ್ಪ ಏನೋ ಊನವಾಗಿದೆ. ದೇವರು ಮುಂದೆ ಎಂದಾದರೂ ನನಗೆ ನೆರವು ನೀಡೇ ನೀಡುತ್ತಾನೆ ಎಂಬ ಒಂದು ಸಮಾಧಾನ ಅವನದಾಗಿರುತ್ತದೆ. ಈ ಒಂದು ಸಮಾಧಾನವನ್ನು ನಾವುಗಳು ಎಂದೂ ಸಾಮಾನ್ಯ ಮನುಷ್ಯರಿಂದ ಪಡೆಯಲಾಗುವುದಿಲ್ಲ.

ಹೀಗೆ ಪ್ರತಿಯೊಬ್ಬರೂ ತಾನು ನಂಬಿರುವ ಧರ್ಮ, ದೇವರುಗಳನ್ನು ತಮ್ಮ ಸರ್ವಸ್ವವಾಗಿ ಇಟ್ಟುಕೊಂಡಿರುತ್ತಾರೆ. ಅದೇ ಒಂದು ಬದುಕನ್ನು ಕಟ್ಟಿ ಕೊಟ್ಟಿರುತ್ತದೆ. ಎಲ್ಲದಕ್ಕೂ ಅದೇ ಪ್ರಥಮತಃ. ಅವರ ಅವರುಗಳಿಗೆ ಅವರವರದೇ ಧರ್ಮ ಅಚ್ಚು ಮೆಚ್ಚು. ಯಾಕೆಂದರೇ ಅದು ಅವರ ಅಚಲ ನಂಬಿಕೆ.

ಈ ನಮ್ಮ ಪ್ರಪಂಚದಲ್ಲಿ ಸಾವಿರಾರು ವಿಭಿನ್ನವಾದ ಧರ್ಮ ಆಚರಣೆಗಳನ್ನು ಕಾಣುತ್ತೇವೆ. ಎಲ್ಲಾ ಧರ್ಮ ಆಚರಣೆಗಳ ಏಕ ಮಾತ್ರ ಸಂದೇಶವೆಂದರೇ "ಮಾನವನ ಪರಸ್ಪರರ ಪ್ರೀತಿ ಮತ್ತು ಸಹ ಬಾಳ್ವೇ".

ಇದು ತೀರ ಅತಿ ಸರಳ ಸಂದೇಶವಾಗುತ್ತದೆ. ಹೌದು! ಹಿಂದೆ ನಮ್ಮ ನಮ್ಮ ಒಂದಷ್ಟು ಗುಂಪುಗಳು ತಮ್ಮ ಒಳ್ಳೆಯತನದ ಜೀವನಕ್ಕಾಗಿ ಮಾಡಿಕೊಂಡ ಒಂದು ಪದ್ಧತಿ ಆಚರಣೆಗಳೇ ಇಂದು ನಾವುಗಳು ಕಾಣುತ್ತಿರುವ ಹತ್ತು ಹಲವು ಆಚರಣೆಗಳಾಗಿವೆ.

ಆ ಆ ವರ್ಗಗಳಲ್ಲಿ ಉದಯಿಸಿದ ಮೇದಾವಿ ಮಹನೀಯರುಗಳ ಸಂದೇಶಗಳು, ಉಪದೇಶಗಳೂ, ಅವರ ಜೀವನ ಚಿತ್ರಗಳು, ಸುಧಾರಣೆಗಳೆ.. ನೀತಿ ಸಂಹಿತೆಗಳು, ಕಥೆ, ಪುರಾಣ, ನಂಬಿಕೆಗಳಾಗಿವೆ. ಅವೇ ನಮಗೆಲ್ಲಾರಿಗೂ ಮೌಲ್ಯಯುತವಾದ ಆದರ್ಶಮಯವಾದ ಪವಿತ್ರ ಗ್ರಂಥಗಳಾಗಿವೆ.

ನಾವುಗಳು ಎಲ್ಲಾ ಧರ್ಮಿಯರ ಧರ್ಮ ಗ್ರಂಥಗಳನ್ನು ತೀರ ಅಳವಾಗಿ ನೋಡಿದಾಗ ತಿಳಿಯುವ ಒಂದು ಸಾಮಾನ್ಯವಾದ ನೀತಿಯೇನೆಂದರೆ ಅದು ಮಾನವ ಧರ್ಮದ ಮೇಲು ಗೈ. ಮತ್ತು ಪ್ರತಿಯೊಂದು ಒಂದರೊಳಗೊಂದು ತಮ್ಮ ರೆಂಬೆಯನ್ನು ಚಾಚಿಕೊಂಡಿರುವುವು. ಎಲ್ಲಾ ಒಂದೇ ಎಂಬುದು ಯಾರೊಬ್ಬರೂ ಮರೆಯಲಾರದಂತಹ ಮುಖ್ಯ ಸಂದೇಶ.

ಕೆಲವೊಂದು ಆಚರಣೆಗಳು ಜನಗಳ ತಿದ್ದುಪಡಿ, ಆಚರಣೆಗಳ ವೈಪರಿತ್ಯದಿಂದ ಒಮ್ಮೊಮ್ಮೆ ಇಂದಿನ ಜನಗಳಿಗೆ ಬೆಸರವನ್ನು ತಂದಿರುವುವು. ಅದು ಸಹಜ! ಯಾಕೆಂದರೇ ಇಂದು ನಾವುಗಳು ಯೋಚಿಸಿರುವಂತೆಯೇ ಶತ ಶತಮಾನಗಳ ಹಿಂದಿನಿಂದಲೂ ಸಾವಿರಾರು ಜನರುಗಳು ಯೋಚಿಸಿರುತ್ತಾರೆ. ಕೆಲವೊಂದು ನ್ಯೂನತೆಗಳು ಮತ್ತು ಒಳ್ಳೆಯ ನೀತಿಗಳು ಸೇರಿವೆ. ಆದರೇ ಮೂಲತನ ಮಾತ್ರ ಯಾವಾಗಲೂ ಒಂದೇ, ಅದನ್ನು ಗಮನಿಸಬೇಕು.

ಪ್ರತಿಯೊಬ್ಬನಿಗೂ ತಾನು ಏನೇನೋ ಮಾಡಿದರೂ ತನಗೆ ಒಂದು ಕ್ಷಣ ನೆಮ್ಮದಿಯೆಂಬುದು ಸಿಗುವುದು ತಾನು ತನ್ನ ಮನಸ್ಸನ್ನು ಯಾವುದರಲ್ಲಾದರೂ ಕೇಂದ್ರಿಕರಿಸಿ ಅನುಭವಿಸಿದಾಗ ಮಾತ್ರ. ತನ್ನನ್ನು ತಾನು ಮರೆತು ಸುತ್ತಲಿನ ಈ ಪ್ರಪಂಚವನ್ನು ಒಂದು ಕ್ಷಣ ಶೂನ್ಯವಾಗಿ ಕಂಡಾಗ ಮಾತ್ರ. ಇದು ತಾನು ನಂಬಿರುವ ಧರ್ಮದಲ್ಲಿ ಇರುವಂತಹ ಪ್ರಾರ್ಥನೆ, ಭಜನೆ, ಗೀತೆ, ಗಾಯನ, ಆರಾಧನೆ ಇತ್ಯಾದಿ ಮಾಡುವುದರಿಂದ ಸಿಗುವುದು.

ನೀವುಗಳು ಗಮನಿಸಿರಬಹುದು. ಕೆಲವೊಂದು ಮಂದಿಗಳು ತಾವು ಬೆಳೆದಂತೆ ತಮ್ಮ ಮನೆಗಳಲ್ಲಿ ಅಥವಾ ತಮ್ಮ ಸಮುದಾಯದಲ್ಲಿ ಆಚರಿಸುವ ಈ ಎಲ್ಲಾ ಆಚರಣೆಗಳನ್ನು ಬಿಟ್ಟು ತಾವುಗಳು ಅದನ್ನು ನಂಬುವುದಿಲ್ಲ ಎಂಬ ರೀತಿಯಲ್ಲಿ ಅವರದೇಯಾದ ಒಂದು ಮನೋಧರ್ಮದಲ್ಲಿ ಬದುಕುತ್ತಾರೆ. ಅವರುಗಳು ಸಹ ತಮ್ಮ ಕೆಲಸ ಕಾರ್ಯದಲ್ಲಿ ತುಂಬ ಸುಂದರವಾಗಿ ಸುಖ ಸಂತೋಷವಾಗಿ ಬದುಕುತ್ತಾರೆ. ಇದು ಏನನ್ನು ಸೂಚಿಸುತ್ತದೆ ಅಂದರೇ ಇವುಗಳೆಲ್ಲಾ ನಮ್ಮ ನಮ್ಮಗಳ ಅನುಕೂಲಕ್ಕಾಗಿ ನಮ್ಮ ಹಿರಿಯರುಗಳು ಕಟ್ಟಿ ಕೊಟ್ಟಿರುವ ಒಳ್ಳೆಯತನಗಳು ಮಾತ್ರ. ನಿಮಗೆ ಅನುಕೂಲವಾದರೆ ನೀವುಗಳು ಅನುಸರಿಸಿ. ಅಥವಾ ನೀವೇ ಏನಾದರೂ ಹೊಸ ಮಾರ್ಗವನ್ನು ಕಂಡುಹಿಡಿದರೆ ಅದರಲ್ಲಿಯೇ ಮುಂದುವರಿಯರಿ. ಆದರೆ ನೀವು ಸಾಗುವ ಮಾರ್ಗ ಯಾರೊಬ್ಬರಿಗೂ ತೊಂದರೆಯನ್ನು ಕೊಡಲಾರದು, ನೀವು ನೆಮ್ಮದಿಯಾಗಿ ಬದುಕಬಹುದು, ಅಂದರೇ ಅದೇ ಒಂದು ಉತ್ಕೃಷ್ಟವಾದ ಮಾನವ ಧರ್ಮ. ನೀನು ಬದುಕು ಪರರನ್ನು ಬದುಕಲು ಬಿಡು!

ಹೀಗೆ ಮನುಷ್ಯ ತನ್ನ ಮೀತಿಯನ್ನು ಒಂದು ಚೌಕಟ್ಟಿನಲ್ಲಿ ಇಟ್ಟುಕೊಳ್ಳಲು ಕಂಡುಕೊಂಡ, ತಾನೇ ನಿರ್ಮಿಸಿಕೊಂಡ ಒಂದು ವ್ಯವಸ್ಥಿತ ಮಾನವ ಏಳ್ಗೆಯ ನಡಾವಳಿಗಳೇ ಈ ಎಲ್ಲಾ ಆಚಾರ-ವಿಚಾರಗಳು. ಇದು ಹೀಗೆ ಎನ್ನುವ, ಇವನ್ನು ನೀನು ಚಾಚು ತಪ್ಪದೇ ಆಚರಣೆಯಲ್ಲಿ ಇಟ್ಟುಕೊಳ್ಳಲೇ ಬೇಕೆಂಬ ಕಟ್ಟು ನಿಟ್ಟಿನ ಕಾನೂನುಗಳು ಇವುಗಳಲ್ಲಾ. ಹೀಗೂ ಇರಬಹುದು.. ಹಾಗೂ ಇರಬಹುದು.. ಹೇಗೂ ಇದ್ದರೂ.. ನೀನು ಬದುಕು.. ಪರರನ್ನು ಬದುಕಲು ಬಿಡು..

ಓಂ ಶಾಂತಿ! ಓಂ ಶಾಂತಿ!

ಬುಧವಾರ, ಆಗಸ್ಟ್ 17, 2011

ಶ್ರಾವಣದ ದಿನಗಳು ಬಂದಿವೆ



ಆಷಾಡ ಕಳೆದಿದೆ ಶ್ರಾವಣದ ದಿನಗಳು ಬಂದಿವೆ. ಕೊರೆಯುವ ಚಳಿಯ ದಿನಗಳು ಇತಿಹಾಸ ಸೇರಿವೆ. ಆಷಾಡ ಎಂದು ಒಂದು ತಿಂಗಳಿಂದ ದೂರವಾದ ತನ್ನ ನೆಚ್ಚಿನ ನಲ್ಲೆಯ ಪುನರಾಗಮನವಾಗಿದೆ. ಸಂಭ್ರಮದ ಹಬ್ಬದ ಆಚರಣೆಗಳು ಪ್ರಾರಂಭವಾಗಿವೆ. ಶುಭ ಶಕುನ, ಶುಭ ದಿನಗಳು, ಶುಭ ಆಚರಣೆ ಮೊದಲುಗೊಂಡಿವೆ.

ಪ್ರಕೃತಿ ತನ್ನ ತನವನ್ನು ಹಚ್ಚ ಹಸಿರಿನಿಂದ ಇಡಿ ಪ್ರಾಣಿ ಸಂಕುಲವನ್ನು ಹರಸಿದೆ. ಬತ್ತಿ ಹೋದ ತೊರೆ, ಹಳ್ಳ ಕೊಳ್ಳಗಳು, ಝರಿಗಳು ಮೈದುಂಬಿ ಹರಿಯಲು ಪ್ರಾರಂಭಿಸಿವೆ. ಒಂದು ರೀತಿಯಲ್ಲಿ ಸಮಷ್ಟಿಯೆ ಧನ್ಯತೆಯ ನಗುವನ್ನು ಬೀರಿದೆ.

ಸಾಕಾಗುವಷ್ಟು ಮಳೆಯನ್ನು ಕೆಲವು ಜಾಗಗಳು ಪಡೆದಿವೆ. ಕೆಲವು ಕಡೆ ಅದರಿಂದ ಅನಾಹುತಗಳು, ಅತಿವೃಷ್ಟಿಯಾಗಿ ಜನರುಗಳು ನಲುಗುತ್ತಿದ್ದಾರೆ. ಪ್ರವಾಹದಿಂದ ತುಂಬಿ ಹರಿಯುತ್ತಿರುವ ನದಿಗಳು ತಮಗೆ ತಾವೇ ಸಾಠಿ ಎಂಬ ರೀತಿಯಲ್ಲಿ ಇಕ್ಕೆಲಗಳಲ್ಲಿರುವ ಮಾನವ ವಾಸ ಸ್ಥಳಗಳನ್ನು ನುಂಗುತ್ತಾ ದುಃಸ್ವಪ್ನವಾಗಿದೆ.

ಇಂದು ಸಹ ಮುಂಜಾನೆಯಿಂದ ನಮ್ಮ ಬೆಂಗಳೂರಿನಲ್ಲಿ ಬಿಡದ ತುಂತುರು ಮಳೆ ಹಲವು ಗಂಟೆಗಳಿಂದ ಚಟಪಟ ಸದ್ದಿನಿಂದ ಸುರಿಯುತ್ತಿದೆ. ಕಳೆದ ಎರಡು ದಿನಗಳಿಂದ ಬಿಡದೆ ನಿರಂತರವಾಗಿ ಸೂರ್ಯನ ಕಣ್ಣಾಮುಚ್ಚಾಲೆಯ ಜೊತೆಯಲ್ಲಿ ಪ್ರಕೃತಿ ಗಂಭೀರವಾಗಿ ತನ್ನ ಜಾದುವನ್ನು ಜನಮನಗಳಿಗೆ ತಂಪು ನೀಡುತ್ತಿದೆ.

ಭಾರತದ ೬೫ನೇ ಸ್ವಾತಂತ್ರ್ಯ ಆಚರಣೆಯನ್ನು ಮಾಡಿದ ನಂತರದ ದಿನ ಆಗಸ್ಟ ೧೬, ಅಣ್ಣಾ ಹಜಾರೆಯವರ ಭ್ರಷ್ಟಾಚಾರ ಅಂದೋಲನದ ಉಪವಾಸ ಸತ್ಯಾಗ್ರಹ ಪ್ರಾರಂಭವಾಗಿ ಕೇಂದ್ರ ಸರ್ಕಾರಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ದೇಶದ ಉದ್ದಗಲಕ್ಕೂ ಭಾರೀ ಪ್ರಮಾಣದಲ್ಲಿ ಹಳ್ಳಿಯ ಓಣಿ ಓಣಿಗಳಿಂದ ಪ್ರಾರಂಭಿಸಿ ದೊಡ್ಡ ದೊಡ್ಡ ನಗರಗಳ ಸಣ್ಣ ಸಣ್ಣ ಗಲ್ಲಿಗಳಿಂದ ಪ್ರತಿಯೊಬ್ಬ ಪ್ರಜೆಯು ದೇಶದ ಬಗ್ಗೆ ಯೋಚಿಸಲು ಪ್ರಾರಂಭಿಸಿ ತನ್ನ ಕೈಲಾದ ಮಟ್ಟಿಗೆ ಅಣ್ಣಾನವರಿಗೆ ಮೌನ ಬೆಂಬಲವನ್ನು ಘೋಷಿಸುತ್ತಿದ್ದಾರೆ.

ಯುವ ಜನತೆಗೆ ಈಗ ತಮ್ಮ ದೇಶಪ್ರೇಮವನ್ನು ಮೆರೆಯುವ ದಿನಗಳು ತಾನಾಗಿ ಒದಗಿಬಂದಂತಾಗಿದೆ. ಹಿಂದೆ ನಾವುಗಳು ನಮ್ಮ ಪಠ್ಯದಲ್ಲಿ ಓದಿದ ಸ್ವಾತಂತ್ರ್ಯ ಹೊರಾಟ ಮತ್ತು ಸ್ವರೂಪವನ್ನು ಇಂದು ಕಣ್ಣಿಂದ ನೋಡುವ ಅವಕಾಶ ಒದಗಿದಕ್ಕೆ ಸಂಭ್ರಮ ಪಡಬೇಕೋ ಅಥವಾ ವ್ಯಥೆ ಪಡಬೇಕು ತಿಳಿಯದಂತಾಗಿದೆ.

ನಮ್ಮ ದೇಶದ ಭವಿಷ್ಯವನ್ನು ಈ ಹಾಳು ಭ್ರಷ್ಟಾಚಾರ, ಲಂಚತನ, ಲಂಪಟತೆಯ ರಾಕ್ಷಸತನ ಎಷ್ಟೂ ನಲುಗಿಸಿದೆ ಎಂದರೇ ಪ್ರತಿಯೊಬ್ಬ ಭಾರತೀಯನ ಆಕ್ರೋಶ ಇಂದು ಬೀದಿಯಲ್ಲಿ ನೋಡುವಂತಾಗಿದೆ. ಇದಕ್ಕೆ ಕಾರಣಕರ್ತನಾದ ಹೊಸ ಆಶ ಜ್ಯೋತಿ ಅಣ್ಣಾ ಮಾತ್ರ! ಗಾಂಧಿ ಮತ್ತು ಅವರ ದೋರಣೆಯ ಪ್ರತೀಕವಾಗಿ ಅಣ್ಣಾ ನಮ್ಮ ಜನಗಳ ಕಣ್ಣಿನಲ್ಲಿ ಕಾಣಲಾರಂಬಿಸಿದ್ದಾರೆ. ಅವರಿಗೆ ಜಯ ಸಿಗಲೇ ಬೇಕು ಮತ್ತು ಸಿಕ್ಕೆ ಸಿಗುತ್ತದೆ ಎಂಬ ಸಂತಸವಿದೆ.

ಆದರೇ ಈ ವರ್ಷ ನನ್ನ ಸೀಮೆ ಬರಗಾಲವನ್ನು ಎದುರಿಸುವಂತಾಗಿದೆ. ಬೆಂಗಳೂರಿನಲ್ಲಿ ಸುರಿಯುತ್ತಿರುವ ಮುಂಗಾರು ಮಳೆಯನ್ನು ಕಂಡು ನನ್ನ ಮನ ಮುಲುಗುತ್ತಿದೆ. ಯಾಕೆಂದರೇ ಅಲ್ಲಿ ಈಗಾಗಲೇ ಬರಗಾಲದ ಛಾಯೆ ದಟ್ಟವಾಗುತ್ತದೆ. ಈ ಸಮಯದಲ್ಲಿ ಬಿಡದ ಮಳೆಯಾಗಬೇಕಾಗಿತ್ತು. ಜಿಟಿ ಮಳೆಯಲ್ಲಿ ರೈತರು ತಮ್ಮ ಮೊದಲ ಬಿತ್ತನೆಯನ್ನು ಪ್ರಾರಂಭ ಮಾಡಬೇಕಾಗಿತ್ತು. ಮುಂಗಾರು ಮಳೆಯ ಆಶಾ ಭಾವನೆಯನ್ನು ಇಟ್ಟುಕೊಂಡು ಮುಂದಿನ ದಿನಗಳನ್ನು ಕಾಣುವ ಮನಗಳಿಗೆ ಕೇವಲ ನಿಲ್ಲದ ಗಾಳಿ ಮಾತ್ರವಾಗಿದೆ. ಅದು ಮೊಡವನ್ನು ತರುತ್ತಿಲ್ಲ. ಮಳೆಯನ್ನು ಸುರಿಸುತ್ತಿಲ್ಲ. ನಮ್ಮ ಬಯಲು ಸೀಮೆಯ ಜನಗಳ ಮೂಲ ಆಸರೆ ಮಳೆ ಮಾತ್ರ. ಅಲ್ಲಿ ಯಾವುದೇ ನದಿ, ಹೊಳೆ, ಕೆರೆ, ಚಾನಲ್ ಗಳೇ ಇಲ್ಲ. ಪ್ರತಿಯೊಂದು ಬೆಳೆಗೂ ಮಳೆ ಮಾತ್ರ. ಆದರೂ ನೀರಾವರಿ ಮಾಡಿಕೊಂಡರೂ ಅದು ಕೇವಲ ತೋಟಕ್ಕೆ ಮಾತ್ರ. ಚಿಕ್ಕ ಚಿಕ್ಕ ಅಡಿಕೆ, ತೆಂಗು, ಬಾಳೆ ತೋಟಗಳಿಗೆ ನೀರು ಊಣಿಸಲೇ ಸಾಕಾಗುತ್ತದೆ. ಪುನಃ ಕಾಲಿಯಾದ ಬೋರ್ ವೆಲ್ ಗಳು ಸಹ ಮಳೆಯನ್ನೇ ಆಶ್ರಯಿಸುವಂತಾಗಿರುತ್ತದೆ.

ಮಳೆಗಾಲದಲ್ಲಿ ಸ್ವಲ್ಪ ಏರುಪೇರಾದರೂ ನೀರಾವರಿಯನ್ನು ಮಾಡುತ್ತಿರುವ ರೈತಾಪಿ ಜನಗಳ ಚಿಂತೆಯನ್ನು ನೋಡುವುದು ಬೇಡಾ!

ಸ್ವಾತಂತ್ರ್ಯ ದಿನಾಚಾರಣೆಯನ್ನು ಮೊದಲ ಭಾರಿಗೆ ಜಿಲ್ಲಾ ಉಸ್ತಾವರಿ ಸಚಿವೆಯಿಂದ ಆಚರಿಸಲ್ಪಟ್ಟಿತು. ಸಚಿವೆಯು ಸಹ ಜೆಲ್ಲೆಯ ಇಂದಿನ ಮಳೆಗಾಲದ ಸ್ಥಿತಿಯನ್ನು ಕಣ್ಣಲ್ಲಿಟ್ಟುಕೊಂಡು ಜೆಲ್ಲೆಯ ಬರಗಾಲಕ್ಕೆ ಏನೇನೂ ಅನುಕೂಲವನ್ನು ಸರ್ಕಾರದಿಂದ ಮಾಡಿಕೊಡಲು ಸಾಧ್ಯವಿದೆಯೋ ಅದನ್ನು ಮಾಡಲು ನಾನು ಪ್ರಯತ್ನಿಸುವೆ ಎಂದಿದ್ದಾರೆ.

ಆದರೇ ಅವರು ಕೊಡುವ ಅನುದಾನ ಪ್ರಕೃತಿ ನೀಡುವ ಸಮೃದ್ಧ ಮಳೆಗೆ ಸರಿಸಾಟಿಯಿಲ್ಲ ಅಲ್ಲವಾ?

ಕಾಲಾಯ ತಸ್ಮಯಾ ನಮಃ!

ಕಾಲಕ್ಕೆ ತಕ್ಕಂತೆ ನಾವುಗಳು ಬದುಕಬೇಕು. ಹಿಂದೆ ಇದ್ದ ಸುಂದರ ದಿನಗಳು ಮುಂದೆ ಬರುತ್ತವೆ ಮತ್ತು ಕಾಣುತ್ತೇವೆ ಎಂಬ ನಂಬಿಕೆಯೇ ಇಲ್ಲದಂತಾಗುತ್ತಿದೆ. ಇಂದು ಪ್ರಕೃತಿಯ ಮೇಲೆ ನಡೆಯುತ್ತಿರುವ ಅತ್ಯಾಚಾರಕ್ಕೆ ಸಾಕ್ಷಿಯಾಗಿ ಮಳೆ ಬೇಳೆಯಾಗುತ್ತಿದೆ.

ಮನುಷ್ಯ ಅರಿತು ನಡೆಯುವ ಕಾಲ ಇದಾಗಿದೆ. ಹಿಂದೆ ಕಂಡಿದ್ದ ಹಳ್ಳಿಯಲ್ಲಿನ ಕಸಪಿಸ ಕೆಸರು. ಎಲ್ಲಿ ಜಾರಿಬಿದ್ದೇವೋ ಏನೋ ಎಂಬ ಜಾಗರುಕತೆಯಿಂದ ಕಾಲನ್ನು ಅದುಮಿ ನಡೆಯುತ್ತಿದ್ದದು. ಮಳೆಯಿಂದ ತೊಯ್ದು ತೊಪ್ಪೆಯಾಗುವುದನ್ನು ತಪ್ಪಿಸಲು ತಲೆ ಮೇಲೆ ಗೋಣಿ ಚಿಲದ ಕೊಪ್ಪೆಯನ್ನು ಇಟ್ಟುಕೊಂಡು ಓಡಾಡುತ್ತಿದ್ದದು. ಆದರೂ ಅಪೂರ್ಣವಾಗಿ ನೆನದು, ಬಿಸಿಯ ಕಾವನ್ನು ಕೊಟ್ಟು ಕೊಳ್ಳಲು ಒಲೆಯ ಮುಂದೆ ಕೂರಲು ಪೈಪೋಟಿ ನಡೆಸುತ್ತಿದ್ದದು.. ಎಲ್ಲಾ ಒಂದು ಸವಿ ನೆನಪು ಮಾತ್ರ. ಕಾಲ ಎಷ್ಟೊಂದು ಬದಲಾಗಿದೆ.

ಹೊಸ ಕ್ರಾಂತಿಯೇ ನಡೆದಿದೆ ಅಂತ ಅನಿಸುತ್ತಿಲ್ಲವಾ?



ಬುಧವಾರ, ಆಗಸ್ಟ್ 3, 2011

ಸ್ನೇಹಲೋಕ

ನೀ ಇವನ/ಇವಳ ಜೊತೆ ಆಟ ಆಡು. ನಾಳೆಯಿಂದ ನೀನು ಇವನ ಜೊತೆಯಲ್ಲಿ ಶಾಲೆಗೆ ಹೋಗು. ಇವನ/ಇವಳ ಜೊತೆಗೆ ಶಾಲೆಯಲ್ಲಿ ಕುಳಿತುಕೋ. ಹೀಗೆ ನಮಗೆ ನಮ್ಮ ಹೆತ್ತವರು ಪರರ ಜೊತೆಯಲ್ಲಿ ನಾವುಗಳು ಹೇಗೆ ನಮ್ಮ ಪರಿಚಯವನ್ನು ಬೆಳೆಸಿಕೊಳ್ಳಬೇಕು ಎಂಬುದನ್ನು ತೋರಿಸಿಕೊಟ್ಟಿರುತ್ತಾರೆ.

ಅವರಿಗೆ ಏನೋ ಒಂದು ರೀತಿಯಲ್ಲಿ ನಮ್ಮ ಮಗ/ಮಗಳು ಮನೆಯಿಂದ ಹೊರಗಡೆಯಲ್ಲಿ ಇದ್ದಾಗ ಯಾರಾದರೂ ಪರಿಚಯದವರು ಜೊತೆಯಲ್ಲಿ ಇರಲಿ ಎಂಬ ಆಸೆ. ಮನೆಯಲ್ಲಿ ಅವರ ಕಣ್ಣಳತೆಯಲ್ಲಿ ಇರುತ್ತೇವೆ ಎಂಬ ಏನೋ ನೆಮ್ಮದಿ. ಆದರೆ ಮನೆಯಿಂದ ಹೊರಗಡೆ ಇದ್ದಾಗಲೂ ಇದೆ ರೀತಿಯಲ್ಲಿ ತಾವುಗಳು ನಮ್ಮ ಜೊತೆಯಲ್ಲಿ ಇರದೇ ಇದ್ದಾಗ ಯಾರದರೂ ಮತ್ತೊಬ್ಬರು ಪರಸ್ಪರ ಕಾಳಜಿಯನ್ನು ತೋರುವವರನ್ನು ಮಕ್ಕಳು ತಮ್ಮ ಜೊತೆಯಲ್ಲಿ ಇಟ್ಟುಕೊಳ್ಳಲಿ ಎಂಬ ಹಂಬಲ.

ಇದೇ ಬೆಳೆಯುತ್ತಾ ಬೆಳೆಯುತ್ತಾ ನಮಗೆ ಬುದ್ಧಿ ಬರುವ ವೇಳೆಗೆ ಎಷ್ಟೊಂದು ಅಗಾಧವಾಗಿ ನಾವುಗಳು ಪ್ರತಿ ಕ್ಷಣ, ಪ್ರತಿ ಸ್ಥಳದಲ್ಲೂ ನಾವುಗಳು ನಮ್ಮನ್ನು ಗುರುತಿಸುವವರನ್ನು, ನಮ್ಮ ಬಗ್ಗೆ ಕಾಳಜಿಯನ್ನುಂಟು ಮಾಡುವವರನ್ನು, ನಮ್ಮ ಬಗ್ಗೆ ಒಂದು ರೀತಿಯ ಪ್ರೀತಿಯನ್ನು ವ್ಯಕ್ತಪಡಿಸುವವರನ್ನು ಅಥಾವ ಒಂದೇ ಒಂದು ಹಲೋ ಎಂದು ಹೇಳುವವರನ್ನು ಪರಿಚಯಿಸಿಕೊಂಡಿರುತ್ತೇವೆ.

ಯಾವುದೇ ಒಂದು ಗೊತ್ತು ಪರಿಚಯವಿಲ್ಲದ ಜಾಗದಲ್ಲಿ ಪ್ರತಿಯಾಗಿ ಯಾರಾದರೂ ಒಬ್ಬರ ಒಂದೇ ಒಂದು ಮುಗಳ್ನಗು ನಮ್ಮ ಎಷ್ಟೋ ಮನದಲ್ಲಿನ ಗೊಂದಲ, ಭಯ, ಸಂಶಯಗಳನ್ನು ದೂರ ಮಾಡಿರುತ್ತದೆ.

ಇದು ಇಲ್ಲವೆಂದರೇ ಮನುಷ್ಯನಾಗಿದ್ದೇ ದಂಡ ಎನ್ನುವಂತಾಗುತ್ತದೆ. ಮನುಷ್ಯ ಸಂಘ ಜೀವಿ ಎಂಬುದು ನಾವುಗಳು ಬುದ್ಧಿ ಬಂದ ಮೇಲೆ ತಿಳಿದಿರುವ ಸಾಮಾನ್ಯ ವಿಷಯ. ಒಂಟಿಯಾಗಿ ಏನನ್ನು ಮಾಡಲು ಸಾಧ್ಯವಿಲ್ಲ. ಮಾಡಬಹುದು ಆದರೇ ಪರಸ್ಪರರ ಜೊತೆಯಲ್ಲಿ ತೊಡಗುವ ಕೆಲಸ ಕಾರ್ಯಗಳ, ಚಿಂತನೆಯ ವಿನಿಮಯದ ಸ್ವಾರಸ್ಯ ಒಂಟಿ ಸುಂಟರಗಾಳಿಯಲ್ಲಿ ಕಾಣುವುದಕ್ಕೆ ಆಗುವುದಿಲ್ಲ.

ನಮಗೆ ಯಾವುದೇ ದುಡಿತವಿಲ್ಲದೇ ಬರುವ ಮತ್ತು ನಮ್ಮನ್ನು ಸುತ್ತುವರಿಯುವ ಸಂಬಂಧವೆಂದರೇ ನಮ್ಮ ರಕ್ತ ಸಂಬಂಧ/ಸಂಬಂಧಿಗಳು. ಅದು ನಾವುಗಳು ಇಷ್ಟಪಟ್ಟರು, ಪಡದೇ ಇದ್ದರೂ ನಮ್ಮ ಜೊತೆಯಲ್ಲಿ ನಮ್ಮ ಕುಟುಂಬದಿಂದ ಬರುತ್ತದೆ. ಅದಕ್ಕೆ ನಾವುಗಳು ನಮ್ಮ ಮನಸ್ಸಿದ್ದರೂ ಮನಸ್ಸಿಲ್ಲದಿದ್ದರೂ ಅವರ ಜೊತೆಯಲ್ಲಿ ಸಾಗಬೇಕು.



ಅದಕ್ಕೆ ಇರಬೇಕು. ನೀವೆ ಯೋಚಿಸಿ ನಾವುಗಳು ನಮ್ಮ ಮನಸ್ಸನ್ನು ಬಿಚ್ಚಿ ನಮ್ಮ ಸ್ನೇಹಿತರರ ಜೊತೆಯಲ್ಲಿ ಮಾತನ್ನಾಡಿದಷ್ಟು ನಮ್ಮ ಸಂಬಂಧಿಕರ ಜೊತೆಯಲ್ಲಿ ವ್ಯಕ್ತಪಡಿಸಲು ಆಗುವುದಿಲ್ಲ. ಅಲ್ಲಿ ನಾವುಗಳು ತೋರಿಸುವುದು ನಮ್ಮ ಸಾಮರ್ಥ್ಯ ಮತ್ತು ನಮ್ಮ ಹಿರಿಮೆಯನ್ನು.

ಅದೇ ನಮ್ಮ ಗೆಳೆಯರ ಹತ್ತಿರ ನಮ್ಮ ಹೆಮ್ಮೆ, ಪಾಸೀಟಿವ್ ಅಂಶಗಳಿಗಿಂತ ನಮ್ಮ ದೌರ್ಬಲ್ಯಗಳನ್ನು, ನಮ್ಮ ವೈಪಲ್ಯಗಳನ್ನು, ಕಷ್ಟಗಳನ್ನು ಯಾವುದೇ ಹೆಗ್ಗಿಲ್ಲದೇ ತೋಡಿಕೊಳ್ಳುತ್ತೇವೆ. ಅದಕ್ಕೆ ರ್ರೀ ಸ್ನೇಹಿತರ ಜೊತೆಯಲ್ಲಿ ಇದ್ದ ಕ್ಷಣಗಳೇ ನಮ್ಮ ಜೀವನದ ಅತ್ಯಂತಹ ಸಂತೋಷದ ಮತ್ತು ನಿರಾಳವಾದ ಸುಂದರ ಸ್ವಪ್ನಗಳು. ಅಲ್ಲಿ ನಮ್ಮನ್ನು ನಾವುಗಳು ತೆರೆದ ಮನದಿಂದ ಬಿಚ್ಚಿಕೊಳ್ಳುತ್ತೇವೆ. ನಮ್ಮ ದುಃಖಗಳಿಗೆ ನಮ್ಮ ಗೆಳೆಯರ ಅಸರೆಯಿರುತ್ತದೆ. ನಮ್ಮ ಕಷ್ಟಗಳಿಗೆ ಒಂದೇರಡು ಸಾಂತ್ವನದ ನುಡಿಗಳಿರುತ್ತವೆ. ನಮ್ಮ ಗೆಲುವಿನ ವಿಚಾರಕ್ಕೆ ಒಂದು ಪ್ರೋತ್ಸಾಹದ ಉತ್ತೇಜನವಿರುತ್ತದೆ. ನಮ್ಮ ಅಭಿರುಚಿಗೆ ಅವರುಗಳ ತಾಳ ಮೇಳಗಳಿರುತ್ತೇವೆ. ಯಾವುದನ್ನು ಇದು ಸರಿಯಿಲ್ಲ ಎಂದು, ಏನೋ ನೀನು ಹೀಗೆ ಹೇಳಿದೇ ಎಂದು ಕೊಂಕಾಗಿ ನೋಡುವುದಿಲ್ಲ. ಅದೇ ಅಲ್ಲವಾ ಸ್ನೇಹಲೋಕ! ಒಂದು ವೇಳೆ ಏನಾದರೂ ಆ ರೀತಿಯ ಟೀಕೆ ಟಿಪ್ಪಣಿಗಳು ಬಂದರೂ ಅದು ನಮ್ಮನ್ನು ತಿದ್ದುವ ರೀತಿಯಾಗಿರುತ್ತೇವೆ ವಿನಾಃ ನಮ್ಮನ್ನು ಹಂಗಿಸುವುದಂತೆ ಅಲ್ಲ.




ನನಗೆ ಅನಿಸುತ್ತದೆ. ನಮ್ಮ ಜೀವನದಲ್ಲಿ ಒಂದೇ ಒಂದು ಸಂಬಂಧ ಯಾವಾಗಲೂ ನಿತ್ಯ ನೂತನವಾಗಿರುವುದು ಅಂದರೇ ಅದು ಗೆಳೆತನ. ಇಲ್ಲಿ ಯಾವುದೇ ವಯೋಮಾನವಿಲ್ಲ, ಲಿಂಗ ಬೇದವಿಲ್ಲ, ಅಂತಸ್ತು ಇಲ್ಲ.. ಯಾವೊಂದು ಅಪೇಕ್ಷೆ ಇಲ್ಲದೇ ಸುಲಭವಾಗಿ ಘಟಿಸುವ ಒಂದು ತಣ್ಣನೆಯ ನಿಷ್ಕಲ್ಮಶವಾದ ಝರಿ.

ಅದು ಎಲ್ಲಿಯಾದರೂ ಎಷ್ಟೊತ್ತಾದರೂ ಆಗಿರಬಹುದು. ಅ ಕ್ಷಣಕ್ಕೆ ಅವರುಗಳೇ ನಮ್ಮ ಆತ್ಮೀಯರು. ನಾವುಗಳೂ ಓಡಾಡುವ ನಿತ್ಯ ಓಣಿಯಿಂದ ನಾವುಗಳು ಪ್ರವಾಸ ಮಾಡಿದ ಯಾವುದೇ ಹೊಸ ಹೊಸ ಜಾಗ, ಊರು, ಸ್ಥಳ, ದೇಶ ಏನಾದರೂ ಆಗಿರಲಿ ಅಲ್ಲಿಯೇ ಖಂಡಿತವಾಗಿ ನಾವುಗಳು ನಮ್ಮ ಅಗತ್ಯತಗೆ ತಕ್ಕಂತೆ ಕನಿಷ್ಟ ಒಬ್ಬರೂ ಇಬ್ಬರನ್ನಾದರೂ ಅತ್ಯಂತ ಪರಿಚಯದವರು ಎಂಬುವಷ್ಟರ ಮಟ್ಟಿಗೆ ನಮ್ಮ ಹೃದಯದಲ್ಲಿ ಇಟ್ಟುಕೊಂಡಿರುತ್ತೇವೆ. ಒಮ್ಮೆ ಹೀಗೆ ಪ್ರತಿಷ್ಠಾಪಿಸಿಕೊಂಡ ವ್ಯಕ್ತಿಗಳು ಎಂದು ಮರೆಯದವರಾಗಿರುತ್ತಾರೆ.

ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು, ಎಲ್ಲೋ ಕೆಲಸ ಮಾಡಲು ಹೊಟ್ಟೆ ಪಾಡಿಗೆ ಎಂದು ಬಂದಂತಹ ಜಾಗಗಳಲ್ಲಿ ನಮ್ಮ ಅಸರೆಗೆ ಬರುವವರು ಎಂದರೇ ಸ್ನೇಹಿತರುಗಳು ಮಾತ್ರ. ಯಾರು ಗೊತ್ತಿರದ ಜಾಗದಲ್ಲಿ ಅಲ್ಲಿರುವವರೇ ನಮ್ಮ ಸ್ನೇಹಿತರುಗಳು! ಇದೇ ಒಂದು ನಿಜವಾದ ಮಾತು.

ನಮ್ಮ ಇಂದಿನ ಈ ವೇಗದ ಜೀವನದಲ್ಲಿ ಅಸಂಖ್ಯಾತ ಸ್ನೇಹಿತರನ್ನು ನಾವುಗಳು ಪಡೆಯಬಹುದು.

ಹಾಗೆಯೇ ನಾವುಗಳು ಅವರ ಜೊತೆಯಲ್ಲಿ ಎಷ್ಟರ ಮಟ್ಟಿಗೆ ಪರಸ್ಪರರನ್ನು ಬೇಟಿ ಮಾಡಿರುತ್ತೇವೆ? ಮಾತನ್ನಾಡುವುದು, ಕುಶಲವನ್ನು ವಿಚಾರಿಸಿಕೊಳ್ಳುತ್ತೇವೆ?

ಅಂದು ಅವರ ಜೊತೆಯಲ್ಲಿ ಹಾಗೆ ಇದ್ದೇವು. ಅದರೆ ಇಂದಿನ ಪರಿಸ್ಥಿತಿಯೇ ಬೇರೆ ಇಂದು ಮತ್ಯಾರೋ ನಮಗೆ ತೀರ ಹತ್ತಿರದವರಾಗಿರುತ್ತಾರೆ. ಇವರುಗಳು ಹೊಸ ಗೆಳೆಯರು ಮತ್ತು ಗೊತ್ತಿರುವವರು. ಹಾಗೆಯೇ ಇವರ ಜೊತೆಯಲ್ಲಿಯೇ ಹೆಚ್ಚಿನ ಸಮಯ ಕಳೆಯುವಂತಾಗಿರುತ್ತದೆ. ಹಾಗಂತಹ ಅವರನ್ನು ನಾವುಗಳು ಏನೂ ಹಳೆಯ ಸ್ನೇಹಿತರನ್ನು ಪೂರ್ಣವಾಗಿ ಮರೆತಿರುವುದಿಲ್ಲ. ಅದೇ ಸಮಯ, ಸ್ಥಳ, ಅವಕಾಶದ ಅಭಾವದಿಂದ ಸ್ವಲ್ಪಮಟ್ಟಿಗೆ ಸ್ನೇಹ ಹಳತಾಗಿರುತ್ತದೆ ಅಷ್ಟೇ.

ಯೋಚಿಸಿ ಈ ರೀತಿಯ ವಿಪರ್ಯಾಸ ಗೊತ್ತೋ ಗೊತ್ತಿಲ್ಲದೇ ಎಲ್ಲರ ಜೀವನದಲ್ಲೂ ಸಾಮಾನ್ಯವಾಗಿ ಚಲನೆಯಲ್ಲಿರುತ್ತದೆ. ನಾವುಗಳು ಏನೂ ಮಾಡಲು ಸಾಧ್ಯವಿಲ್ಲ. ಅದಕ್ಕೆ ಕಾರಣಗಳು ನೂರಾರು. ಹಾಗಂತಹ ನಾವುಗಳು ನಮ್ಮ ಹಳೆಯ ಸ್ನೇಹಿತರುಗಳನ್ನು ಪೂರ್ಣವಾಗಿ ಕಡೆಗಣಿಸಿರುತ್ತೇವೆ ಎಂದೇನಲ್ಲಾ. ಸಮಯ ಸಿಗಬೇಕು ಮತ್ತು ಜರೂರತು ಬರಬೇಕು.

ಇದಕ್ಕೆ ಸಾಕ್ಷಿ ನಮ್ಮ ಇಂದಿನ ತಂತ್ರಙ್ಞಾನದ ಕೊಡುಗೆಗಳಾದ ಸೇಲ್ ಪೋನ್, ಪೇಸ್ ಬುಕ್, ಆರ್ಕುಟ್ ನೋಡಿ ಎಷ್ಟೊಂದು ಸ್ನೇಹಿತರ ಕಾಂಟ್ಯಕ್ಟ್ಸ್ ಇವೆ ನಮ್ಮಲ್ಲಿ. ನಾವುಗಳು ವರ್ಷದಲ್ಲಿ ಎಷ್ಟು ಮಂದಿಯನ್ನು ನಿರಂತರವಾಗಿ ಟಚ್ ನಲ್ಲಿ ಇಟ್ಟುಕೊಂಡಿದ್ದೇವೆ. ಎಣಿಸಿದರೇ ನಮಗೆ ನಾವೇ ಆಶ್ಚರ್ಯಪಡುವಂತಾಗುತ್ತದೆ. ಯಾಕೆ ಹೀಗೆ?

ನಾವುಗಳು ನಮ್ಮ ಸ್ನೇಹದ ಹೊಸ ಹೊಸ ದಿಕ್ಕಿನಲ್ಲಿ ಹೊಸ ಹೊಸ ಗೆಳೆಯರನ್ನು/ಗೆಳತಿಯರನ್ನು ಅಂದಿನ ದಿನ ಮಾನಗಳಿಗೆ ಅನುಗುಣವಾಗಿ ಬೆಳೆಸುತ್ತಾ ಸಾಗುತ್ತೇವೆ. ಇಂದಿನ ಕ್ಷಣಕ್ಕೆ ಇವರ ಜೊತೆಯಲ್ಲಿಯೇ ಹೆಚ್ಚು ಹೆಚ್ಚು ವಿಚಾರ ವಿನಿಮಯ, ಪರಸ್ಪರ ಮಾತುಕತೆ, ಬೌದ್ಧಿಕ ಬೆಳವಣಿಗೆ... ಇದೇ ನಿಜವಾದ ಸತ್ಯ.

ನಾವುಗಳು ಬಾಲ್ಯದಲ್ಲಿ ನನ್ನ ಬೇಸ್ಟ್ ಪ್ರೇಂಡ್ ಎಂದು ಹೇಳಿಕೊಂಡಿದ್ದವನು/ಳು ಎಲ್ಲೂ ಇದ್ದಾರೆ. ಅವರುಗಳ ಅಡ್ರಸ್ಸೇ ಇಲ್ಲದವರಾಗಿರುವೆವು. ಏನೂ ಮಾಡಲೂ ಆಗುವುದಿಲ್ಲ. ಯುಗ ಯುಗಗಳು ಸಾಗುತ್ತಿವೆ.

ಅದರೂ ಈ ಒಂದು ಸುಂದರವಾದ ಸಂಬಂಧದ ಬಗ್ಗೆ ಇರುವಷ್ಟು ಮಾತುಗಳು, ಅಭಿಪ್ರಾಯಗಳು ಹಿಂದಿನ ಪುರಾಣ ಪುಣ್ಯಕತೆಗಳಿಂದ ಇತ್ತೀಚಿಗಿನ ಸಿನಿಮಾ ಕತೆಗಳವರೆಗೂ, ಎಷ್ಟೊಂದೂ ವಿಚಾರಗಳು ಬೆಳೆದು ಬಂದಿವೆ ಅಂದರೇ ಅದರ ಮಹತ್ವವನ್ನು ನಾವುಗಳು ಅರಿಯಬೇಕು.

ಅದಕ್ಕೆ ಹಿರಿಯರು ಹೇಳುತ್ತಾರೆ.. ಬೆಳೆದ ಮಕ್ಕಳನ್ನು ಸ್ನೇಹಿತರ ರೀತಿಯಲ್ಲಿ ನೋಡು. ನಿನ್ನ ಸಂಗಾತಿಯನ್ನು ಸ್ನೇಹಿತರ ಹಾಗೆಯೇ ನೋಡಿ ಆಗ ನಿಮ್ಮ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಈ ಎಲ್ಲಾ ಮಾತುಗಳು ಮತ್ತೊಮ್ಮೆ ಸ್ನೇಹವೆಂದರೇ ಏನೂ ಮತ್ತು ಯಾಕೆ ನಾವುಗಳು ಜಗತ್ತಿನ ಅತಿ ಶ್ರೇಷ್ಠವಾದ ಸಂಬಂಧವೆಂದು ಪರಿಗಣಿಸಿದ್ದಾರೆ ಎಂಬುದು ತಿಳಿಯುತ್ತದೆ.

ಇಂದಿನ ದಿನಗಳಲ್ಲಿ ನಮ್ಮ ಮೋಬೈಲ್ ಗಳಿಗೆ ನಮ್ಮ ಗೆಳೆಯರಿಂದ ಬರುವ ಎಸ್. ಎಂ. ಎಸ್ ಗಳು ಸಹ ಹತ್ತು ಹಲವು ರೀತಿಯಲ್ಲಿ ಸ್ನೇಹದ ಬಗ್ಗೆ ವ್ಯಾಖ್ಯಾನಿಸುತ್ತಿರುತ್ತವೆ ಮತ್ತು ನಾವುಗಳೇ ನಮ್ಮಲ್ಲಿ ರೋಮಾಂಚನವನ್ನುಗೊಳ್ಳುವಂತೆ ಮಾಡುತ್ತವೆ. ರೀಯಲಿ ಪ್ರೇಂಡ್ಸ್ ಶಿಪ್ ಇಸ್ ಗ್ರೇಟ್!

ಹಾಗೆ ನಾವುಗಳು ಹೊಸ ಹೊಸ ಗೆಳೆಯರನ್ನು ಮಾಡಿಕೊಳ್ಳುತ್ತೇವೆ. ಅವರ ಯಾವುದೋ ಒಂದು ಗುಣ, ಅಭಿರುಚಿ, ಮಾತು ನಮಗೆ ತೀರ ನಮ್ಮವರನ್ನಾಗಿ ಮಾಡಿರುತ್ತದೆ. ಆ ಕ್ಷಣಕ್ಕೆ ಯಾಕೋ ಇವರು ನಂಬಿಕೆಯ ವ್ಯಕ್ತಿ ಎಂಬ ಭಾವನೆ ಮನದಲ್ಲಿ ಮೂಡಿರುತ್ತದೆ. ಅವರುಗಳಿಗೂ ಅದೇ ರೀತಿಯಲ್ಲಿ ಒಂದು ಸ್ನೇಹದ ಮೈತ್ರಿ ಉಂಟಾದಾಗ ಸ್ನೇಹ ಗಾಢವಾಗುತ್ತದೆ. ಇಲ್ಲಿ ಯಾವುದೇ ಒಂದು ಉದ್ದೇಶ, ಅವಶ್ಯಕತೆಯಿಂದ ಗೆಳೆತನ ಗಟ್ಟಿಯಾಗಿರುವುದಿಲ್ಲ. ಕೇವಲ ಒಂದು ಅಂತಃಕರಣದಿಂದ ಇಬ್ಬರೂ ಯಾವುದೇ ಒಂದು ಕಂಡಿಷನ್ ಇಲ್ಲದೇ ಪರಸ್ಪರ ಸ್ನೇಹ ಹಸ್ತವನ್ನು ಚಾಚಿರುತ್ತಾರೆ.

ಅವರ ಜೊತೆಯಲ್ಲಿ ಇದ್ದ ಕ್ಷಣಗಳು ಏನೋ ನನಗೆ ತುಂಬ ಖುಷಿಯನ್ನು ಕೊಡುತ್ತದೆ. ಅವರ ಜೊತೆಯಲ್ಲಿ ಮಾತನ್ನಾಡಿದರೇ ಏನೋ ನನಗೆ ಮನಸ್ಸಿಗೆ ಹಗುರವಾದಂತೆ ಅನಿಸುತ್ತದೆ. ಅವರ ಅನುಭವಗಳು ನನ್ನ ವೃತ್ತಿಗೆ ಅನುಕೂಲವಾಗುತ್ತವೆ. ಅವರ ಬುದ್ಧಿವಂತಿಕೆ, ಜಾಣತನ ನಾನು ಕಲಿಯಬಹುದು. ನಾನು ಎಡವಿದರೆ ಅವರು ಎಚ್ಚರಿಸುತ್ತಾರೆ. ನನ್ನ ಗೊಂದಲಗಳಿಗೆ ಅವರುಗಳ ಮಾತುಗಳು ಸಾಂತ್ವನ ನೀಡುತ್ತವೆ. ಇತ್ಯಾದಿ ಇತ್ಯಾದಿ ಒಂದು ಯಾವುದೇ ನಿರ್ಧಿಷ್ಟವಿಲ್ಲದ ಒಂದು ಸಾಮಾನ್ಯ ಸಂಗತಿ ತೀರ ಹತ್ತಿರದವರನ್ನಾಗಿ ಮಾಡಿಬಿಟ್ಟಿರುತ್ತದೆ.




ನಿಮಗೆ ಗೊತ್ತೇ ನಮಗೆ ನಾವು ತಿಳಿಯದೇ ಒಂದೊಂದು ವಿಷಯಗಳನ್ನು ಯಾರೂಬ್ಬರ ಮುಂದೆ ಬಾಯಿ ಬಿಟ್ಟಿಲ್ಲದ್ದು, ನಮ್ಮ ಗೆಳೆಯರ ಮುಂದೆ ಅದೇ ಮೊದಲನೆಯದಾಗಿ ಹೇಳಿಕೊಂಡುಬಿಟ್ಟಿರುತ್ತೇವೆ. ಯಾಕೆಂದರೇ ಆ ಒಂದು ಕಂಪ್ಯಾನಿಯನ್ ಹಾಗೆ ಮಾಡಿಬಿಟ್ಟಿರುತ್ತದೆ. ಅಷ್ಟೊಂದು ನಂಬಿಕೆಯನ್ನು ನಾವು ನಮ್ಮವರು/ನಮ್ಮವಳು ಎಂದು ಅಂದುಕೊಂಡ ವ್ಯಕ್ತಿ ಮಾಡಿಬಿಟ್ಟಿರುತ್ತಾರೆ. ಅದಕ್ಕೆ ಹಿರಿಯರು ಹೇಳಿರುವವರು ಸಜ್ಜನರ ಸಂಗ ಹೆಜ್ಜೇನು ಸವಿದಂತೆ. ಸವಿ ಸವಿಯಾದ ಅನುಭವಗಳ ಖಜಾನೆಯನ್ನು ಹಂಚುವಂತ ಅಪರೂಪದ ಸ್ನೇಹಿತರುಗಳನ್ನು ಪಡೆಯುವ ಸೌಭಾಗ್ಯ ಕೆಲವರದಾಗಿರುತ್ತದೆ.

ನಾವುಗಳು ಎಷೊಂದು ವಿಷಯಗಳನ್ನು ನಮ್ಮ ಸ್ನೇಹಿತರುಗಳಿಂದ ಕಲಿತುಕೊಂಡಿರುತ್ತೇವೆ. ಅವರುಗಳೇ ಒಮ್ಮೊಮ್ಮೆ ನಮ್ಮನ್ನು ತಿದ್ದುವ ಒಳ್ಳೆಯ ಮೇಸ್ಟರ್ ಗಳಾಗಿರುತ್ತಾರೆ. ಸ್ನೇಹದಲ್ಲಿ ಕೆಲವೊಮ್ಮೆ ಸಿಟ್ಟು ಸೇಡವುಗಳು ಬರುವುದು ಸಾಮಾನ್ಯ. ಕೆಲವೊಂದು ದಿನಗಳ ಮಟ್ಟಿಗೆ ಒಬ್ಬರೊನ್ನೊಬ್ಬರು ಮಾತನ್ನಾಡಿಸದ ಮಟ್ಟಿಗೆ ಟೂ ಬಿಟ್ಟಿರುತ್ತಾರೆ. ಇದು ಕೆವಲ ಯಾವುದೇ ಒಂದು ಪರ್ಪಸ್ ಗಾಗಿ ಅಲ್ಲ. ಕೆಲವೊಂದು ವಿಚಾರಗಳ ವೈರುಧ್ಯಗಳಿಂದ ಮಾತ್ರ. ಅತಿ ಹೆಚ್ಚು ಇಷ್ಟಪಟ್ಟ ಸ್ನೇಹಿತರಾಗಿರುವುದರಿಂದಲೇ ಆ ಮಟ್ಟಿಗೆ ಸಿಟ್ಟಾಗುವುದು. ಇಲ್ಲ ಅಂದರೇ ಅದು ಸ್ನೇಹವೇ ಅಲ್ಲ. ಯಾಕೆಂದರೇ ನಿನ್ನ ಬಗ್ಗೆ ಕಾಳಜಿಯಿಲ್ಲದ ವ್ಯಕ್ತಿ ಯಾಕೇ ನಿನ್ನ ಜೊತೆಯಲ್ಲಿ ಕಾದಾಡುವನು? ಅವನ ಪಾಡಿಗೆ ಅವನಿರುವನು ಅಲ್ಲವಾ? ಇದನ್ನು ನಾವುಗಳು ಅರ್ಥ ಮಾಡಿಕೊಳ್ಳಬೇಕು.

ನಿಜವಾದ ಸ್ನೇಹಿತ ಒಮ್ಮೊಮ್ಮೆ ತಂದೆಯ ರೀತಿಯಾಗಿ ದಂಡಿಸುವನಾಗಿರುತ್ತಾನೆ, ತಾಯಿಯ ರೀತಿಯಲ್ಲಿ ಪ್ರೀತಿಯನ್ನು ಹರಿಸುವವನಾಗಿರುತ್ತಾನೆ, ತಂಗಿಯ/ತಮ್ಮನ ರೀತಿಯಲ್ಲಿ ಮಮತೆಯನ್ನು, ತುಂಟತನವನ್ನುಂಟು ಮಾಡುವವನಾಗಿರುತ್ತಾನೆ.

ನಮ್ಮ ಜೊತೆಯಲ್ಲಿ ಇರುವವರ ಜೊತೆಯಲ್ಲಿ ನಾವುಗಳು ನಮ್ಮ ಸಂತೋಷವನ್ನು, ದುಃಖವನ್ನು, ನೋವನ್ನು, ಅನುಭವವಗಳನ್ನು ಪರಸ್ಪರರು ಹಂಚಿಕೊಳ್ಳುತ್ತಾ, ನಮ್ಮ ನಮ್ಮ ಉನ್ನತಿಯನ್ನು ಕಾಣವುದು ನಿತ್ಯ ಜಾರಿಯಲ್ಲಿರಬೇಕು. ಆಗಲೇ ಸ್ನೇಹತ್ವಕ್ಕೆ ಮಹತ್ವ ಬರುವುದು.

ಮಂಗಳವಾರ, ಜುಲೈ 26, 2011

ದಟ್ಟ ಕಾನನಗಳಲ್ಲಿ ಹೆಜ್ಜೆ.....

"ದೇಶ ಸುತ್ತ ಬೇಕು ಕೋಶ ಓದಬೇಕು"

ಹೌದು! ನಾವು ನಮ್ಮದೇಯಾದ ವಿವಿಧ ಬಿಡುವಿಲ್ಲದ, ಬಿಡುವಿನ ಸಮಯಗಳನ್ನು ಹತ್ತು ಹಲವು ರೀತಿಗಳಲ್ಲಿ ನಮ್ಮ ಸುತ್ತ ಮುತ್ತಲಿನಲ್ಲಿ ಕಳೆದು ಬಿಡುತ್ತೇವೆ.

ನಮ್ಮ ಹಿರಿಯರು, ನಮ್ಮ ತಂದೆ ತಾಯಂದಿರುಗಳು ಕೆಲವೊಮ್ಮೆ ಅವರ ಸಂಬಂಧಿಕರ ಊರು ಅಥವಾ ಅವರ ಜೆಲ್ಲೆಯ ಹತ್ತಿರದ ಪ್ರದೇಶಗಳನ್ನು ಬಿಟ್ಟು ಬೇರೆ ಯಾವುದೇ ಸ್ಥಳಗಳನ್ನು ಅವರ ಜೀವಮಾನದಲ್ಲಿಯೇ ನೋಡದೇ ತಮ್ಮ ಆಯಸ್ಸುಗಳನ್ನು ಪೊರೈಸಿರುತ್ತಾರೆ.

ಆ ರೀತಿಯ ಪರ್ಯಾಟನೆಯ ಪ್ರವೃತ್ತಿಯನ್ನು ಕನಸು ಮನಸಿನಲ್ಲೂ ಯೋಚಿಸಿರುವುದಿಲ್ಲ. ಕೇವಲ ಯಾವುದೇ ಕೆಲಸ ಕಾರ್ಯ ನಿಮಿತ್ತಾ ವಿವಿಧ ಹತ್ತಿರದ ಊರುಗಳನ್ನು, ಸ್ಥಳಗಳನ್ನು ಮಾತ್ರ ತಮ್ಮ ಜೀವ ಮಾನದಲ್ಲಿ ಕಂಡಿರುವಂತಹ ನೂರಾರು ಮಂದಿಗಳನ್ನು ನಮ್ಮ ನಿಮ್ಮ ನಡುವೆ ಕಾಣಬಹುದು.

ಅದಕ್ಕೆ ಇರಬೇಕು ಮೇಲೆ ಉಲ್ಲೇಖಿಸಿರುವ ಒಗಟು ಹುಟ್ಟಿಕೊಂಡಿರುವುದು ಅಲ್ಲವಾ?

ಆದರೂ ಎಷ್ಟು ಮಂದಿ ತಮ್ಮ ಜೀವಿತಾವದಿಯಲ್ಲಿ ಎಲ್ಲಾ ಪುಸ್ತಕಗಳನ್ನು ಓದುತ್ತಾರೆ ಮತ್ತು ಓದಲು ಅವರಿಗೆ ಸಮಯಾವಕಾಶ ಎಲ್ಲಿ ಸಿಕ್ಕಿರುತ್ತದೆ? (ವಿದ್ಯಾವಂತರಾಗಿದ್ದರೆ)

ನಮಗೆಲ್ಲಾ "ಪ್ರವಾಸ" ಎಂಬ ಪದ ಕಿವಿಗೆ ಬಿದ್ದಿದ್ದು ಅಂದರೇ ನಮ್ಮ ವಿದ್ಯಾರ್ಥಿ ದೆಸೆಯಲ್ಲಿಯೇ. ಶಾಲೆಗಳಲ್ಲಿ ಶಿಕ್ಷಕರು ಪ್ರವಾಸವನ್ನು ಹಮ್ಮಿಕೊಂಡಾಗ ನಮ್ಮ ತಂದೆ ತಾಯಿಯರಿಂದ ಒತ್ತಾಯಾಪೂರ್ವಕವಾಗಿ ಅನುಮತಿಯನ್ನು ಕಾಡಿಬೇಡಿ ಗಿಟ್ಟಿಸಿಕೊಂಡು ಹೋಗಲು ತಯಾರಿ ನಡೆಸಿರುತ್ತೇವೆ. ಅಲ್ಲಿಯು ಸಹ ನಮ್ಮ ಕುಟುಂಬದವರುಗಳು ಒಲ್ಲದ ಮನಸ್ಸಿನಿಂದ ಓ.ಕೆ ಅಂದಿರುತ್ತಾರೆ. ಯಾವುದೇ ಪೋಷಕರು ಮನಸ್ಸಪೂರ್ವಕವಾಗಿ ನಮ್ಮನ್ನು ಪ್ರವಾಸಕ್ಕೆ ಹೋಗಲು ಬಿಟ್ಟಿರುವುದಿಲ್ಲ. ಅವರುಗಳಿಗೆ ಏನೋ ಭಯ!! ಅಥವಾ ಅವರುಗಳಿಗೆ ಅವರ ಪೋಷಕರುಗಳು ಹೀಗೆ ಮಾಡಿರುವುದರ ನೆನಪೇನೋ?

ಹೀಗಾಗಿ ನಮ್ಮ ಸಂಸ್ಕೃತಿಯಲ್ಲಿ ಈ ಉನ್ನತವಾದ ವಿಷಯ ಕೆಲಸಕ್ಕೆ ಬಾರದಾಗಿರುತ್ತದೆ. ಇದು ಅಷ್ಟೇನೂ ಪ್ರಮುಖ್ಯವಾದ ವಿಷಯ ಮತ್ತು ಅಭ್ಯಾಸ ಅನಿಸಿರುವುದಿಲ್ಲ. ಇದಕ್ಕೆ ಹತ್ತು ಹಲವಾರು ಕಾರಣಗಳು ನಮ್ಮ ನಮ್ಮಲ್ಲಿಯೇ ಇವೆ.

ಆದರೂ ಸಹ ಹಳ್ಳಿಯ ಜೀವನಕ್ಕೆ ಹೋಲಿಸಿದರೇ ನಗರದ ವಿವಿಧ ಸಂಘ ಸಂಸ್ಥೆಗಳು, ಶಾಲೆಗಳು, ಕಾಲೇಜುಗಳು ಮತ್ತು ಕಛೇರಿಯ ಉದ್ಯೋಗಿಗಳು ಅದರ ಪ್ರಾಮುಖ್ಯತೆಯನ್ನು ಅರಿತು ತಮ್ಮ ದೈನಂದಿನ ಮಾಮೊಲಿ ಜೀವನದಿಂದ ಕೆಲವು ಸಮಯ ವಾರಾಂತ್ಯಾದಲ್ಲಿ ತುಂಬ ವೈವಿಧ್ಯಮಯವಾಗಿ ಕಳೆಯಲು ಒಂದು -ಎರಡು ದಿನ ಅಥವಾ ಒಂದು ವಾರದ ದೀರ್ಘ ಪ್ರವಾಸಗಳನ್ನು ಹಮ್ಮಿಕೊಳ್ಳುತ್ತಾರೆ.

ನಾವುಗಳು ನಮ್ಮ ಪ್ರಪಂಚದ ಪೂರ್ಣ ಬಾಗದ ಕೇವಲ ಒಂದು ಚುಕ್ಕೆಯಷ್ಟನ್ನು ಮಾತ್ರ ತಮ್ಮ ಜೀವನದಲ್ಲಿ ಅರಿಯುವ ಮೊಲಕ ತಮ್ಮ ಮನೋಸಂತೋಷವನ್ನು ಮತ್ತು ಮನೋವಿಕಾಸವನ್ನು ಮಾಡಿಕೊಳ್ಳಲು ಸಾಧ್ಯ.

ಈ ಪ್ರವಾಸದಲ್ಲಿ ನಾವು ವಿವಿಧ ಜನ, ಪರಿಸರ, ಪದ್ಧತಿ, ಜನರು, ಉಡುಗೆ, ತೊಡುಗೆ, ಆಚಾರ, ವಿಚಾರ, ನಿಸರ್ಗ ವೈವಿಧ್ಯತೆ, ಜೀವ ಸಂಕುಲ.. ಹೀಗೆ ನೂರಾರು ಗೊತ್ತಿರದ ಹೊಸ ವಿಷಯಗಳನ್ನು ಅರಿಯುವ ಮೂಲಕ ನಮ್ಮಲ್ಲಿನ "ಕೂಪ ಮೊಂಡುಕತನವನ್ನು" ಸ್ವಲ್ಪ ಕಡಿಮೆ ಮಾಡಿಕೊಳ್ಳಬಹುದು. ಹಾಗೆಯೇ ನಮ್ಮನ್ನೇ ನಾವು ಈ ಪ್ರಪಂಚದಲ್ಲಿ ಗುರುತಿಸಿಕೊಳ್ಳಲು ಅನುವು ಮಾಡಿಕೊಟ್ಟಂತಾಗುತ್ತದೆ.

ಹಾಗೆಯೇ ವಿವಿಧ ರೀತಿಯಲ್ಲಿ ಪ್ರವಾಸದಲ್ಲಿ ಸ್ವಲ್ಪ ಸಾಹಾಸಮಯವಾಗಿ ನಿಸರ್ಗದ ವೈವಿಧ್ಯತೆಯೊಂದಿಗೆ ಕೆಲವು ಗಳಿಗೆ ಕಳೆಯಬೇಕು ಅಂದರೇ (ಟ್ರೆಕ್ಕಿಂಗ್) ಚಾರಣಾ ಅತ್ಯುತ್ತಮವಾದದ್ದು.

ಈ ಚಾರಣಕ್ಕೆ ಹೇಳಿ ಮಾಡಿಸಿದ ಸುಂದರ ಭವ್ಯವಾದ ನಿಸರ್ಗ ತಾಣಗಳು ನಮ್ಮ ಕರ್ನಾಟಕ ರಾಜ್ಯದಲ್ಲಿರುವುದು ನಮ್ಮೆಲ್ಲಾರ ಅದೃಷ್ಟವೇ ಸರಿ!

ಈ ಚಾರಣಕ್ಕೆ ಬೇಕಾಗಿರುವುದು ಸೂಕ್ಷ್ಮ ಪ್ರಕೃತಿ ಸ್ನೇಹಿ ಮನಸ್ಸು. ಯಾವುದೇ ಸಂದರ್ಭವನ್ನು ಖುಷಿಯಾಗಿ ಅನುಭವಿಸುವ ಭಾವನೆಯನ್ನು ಹೊಂದಿರುವ ಕೆಲವೇ ಮಂದಿಯ ಒಂದು ಟೀಂ ಇದ್ದರೆ ಅದು ತುಂಬ ಮನರಂಜನೆಯಾಗಿ ನಮ್ಮಲ್ಲಿಯೇ ನಾವುಗಳು ಈ ದಟ್ಟ ಅರಣ್ಯ, ಉನ್ನತ ಶಿಖರ, ಹಕ್ಕಿಗಳ ಕಲರವ, ಜುಳುಜುಳು ಹರಿಯುವ ಜಲಧಾರೆಗಳು, ಕಲ್ಲು ಮಣ್ಣುಗಳ ದಾರಿಯಲ್ಲಿ ಕಳೆದು ಸಾಗುತ್ತಾ ಹೋಗುವ ರೋಮಾಂಚನವನ್ನು ಅನುಭವಿಸಬಹುದು.



ಅಲ್ಲಿ ನಾವು ಕಾಲಿಟ್ಟ ತಕ್ಷಣ ನಮಗೆ ತಿಳಿಯದ ರೀತಿಯಲ್ಲಿ ಪ್ರಕೃತಿಯ ಮಹಾನ್ ಮುಖ್ಯ ವಿಸ್ಮಯಗಳ ನಡುವೆ ಕೇವಲ ಪ್ರೇಕ್ಷಕರಾಗಿ ಪ್ರತಿ ನಿಮಿಷಗಳನ್ನು ಅದರಲ್ಲಿ ಕರಗಿ, ಈ ನಮ್ಮ ಜಂಜಾಡದ ವ್ಯವಸ್ಥೆಯ ನೆನಪು ಸಹ ಬಾರದ ರೀತಿಯಲ್ಲಿ ಮೈಮರೆಯಬಹುದು. ನಾವುಗಳು ಪ್ರಕೃತಿಯ ಆ ವಿಸ್ಮಯವನ್ನು ನಮ್ಮ ಮನದಲ್ಲಿಯೇ ಗುಣಕಾರ ಭಾಗಕಾರ ಮಾಡಿಕೊಳ್ಳಬಹುದು ಮತ್ತು ಒಂದು ಥ್ಯಾಂಕ್ಸ್ ನ್ನು ಆ ಪ್ರಕೃತಿ ಮಾತೆಗೆ ಹೇಳದೆ ಇರಲಾರಿರಿ.

ಹೌದು! ಅದಕ್ಕೆ ಇರಬೇಕು ನಮ್ಮ ಪುರಾಣ, ಪುಣ್ಯ ಕಥೆಗಳ ಎಲ್ಲಾ ಮಹಾನ್ ಸಾಧಕರ ತಾಣಗಳು ಬಹು ದೂರದಲ್ಲಿವೆ. ನಾಗರೀಕತೆಯ ಯಾವ ಸೋಂಕು ಇಲ್ಲದ ಪೂರ್ಣ ಪೂರ್ಣ ಪ್ರಕೃತಿ ಮಾತೆಯ ಕೊಡುಗೆಯಾದ ದಟ್ಟ ಅರಣ್ಯ, ಉನ್ನತ ಮಹಾನ್ ಶಿಖರದಲ್ಲಿವೆ. ಎಲ್ಲಾ ಕೃತಕವೆನಿಸುವ ವ್ಯವಸ್ಥೆಯಿಂದ ಕಳಚಿಕೊಂಡು ಅದರದೇಯಾದ ಶ್ರೀಮಂತವಾದ ವರ್ಣನೆಗೆ ನಿಲುಕಲಾರದ ಸನ್ನಿವೇಶದ ಸಜ್ಜನಿಕೆಯಲ್ಲಿವೆ.

ಈ ರೀತಿಯ ಪರಿಸರದ ವರ್ಣನೆಯನ್ನು ನಾವು ನಮ್ಮ ಪ್ರಸಿದ್ಧ ಲೇಖಕರ ಕಾದಂಬರಿ, ಕತೆ, ಕವಿತೆಗಳಲ್ಲಿ ಕೇಳಿದ್ದೇವೆ. ಹಾಗೆಯೇ ಇತ್ತೀಚಿನ ಹಲವು ಸಿನಿಮಾಗಳಲ್ಲಿ ನೋಡಿದ್ದೇವೆ.

ಆದರೇ, ಆ ರೀತಿಯ ವರ್ಣನೆಯನ್ನು ನಾವುಗಳು ಯಾವ ರೀತಿಯಲ್ಲಿ ಕಲ್ಪಿಸಿಕೊಂಡಿರುತ್ತೇವೆ ಎಂಬುದು ಈ ರೀತಿಯ ದಟ್ಟ ಕಾನನಗಳಲ್ಲಿ ಹೆಜ್ಜೆ ಇಟ್ಟಾಗಲೇ ಅದರ ಪರಿಣಾಮದ ಮಹಿಮೆ ನಮಗೆ ಗೊತ್ತಾಗುವುದು.

ನನಗೆ ಅನಿಸುತ್ತದೆ ಕುವೆಂಪು,ಕಾರಂತ ಮತ್ತು ತೇಜಸ್ವಿಯವರು ಯಾಕೆ ಹಾಗೇ ತಮ್ಮ ಕೃತಿಗಳಲ್ಲಿ ಪ್ರಕೃತಿಯ ಮಹಾನ್ ವರ್ಣನೆಯನ್ನು ಹಾಗೆ ಮಾಡಿರುವವರು ಎಂದರೇ ಅವರು ಜೀವಿಸುತ್ತಿದ್ದ ಪರಿಸರವೇ ಅವರಿಗೆ ಪ್ರೇರಕವಾಗಿತ್ತು. ಅದೇ ಅವರ ಮೊಲಕ ಹಾಗೆ ಬರೆಯಿಸಿತು ಅನಿಸುತ್ತದೆ.

ಒಂದೇ ಭೂಮಂಡಲವಾಗಿ ಪ್ರತಿಯೊಂದರಲ್ಲೂ ವಿಭಿನ್ನವಾಗಿರುವ ಈ ದಿವ್ಯ ಪರಿಸರದ ಮಾಂತ್ರಿಕತೆಯ ಜಾದು ನಮ್ಮನ್ನು ಅಲ್ಪರನ್ನಾಗಿ ಮಾಡುತ್ತದೆ. ನಾವುಗಳು ನಮ್ಮ ಮಿತಿಯನ್ನು ಅರಿಯುವಂತೆ ಮಾಡುತ್ತದೆ.

ಅಲ್ಲಿರುವ ವಿವಿಧ ರೀತಿಯ ಸಸ್ಯ ಜೀವ ಸಂಕುಲ, ಮರ, ಗಿಡ, ಬಳ್ಳಿಗಳು, ವಿವಿಧ ಜಾತಿಯ ಪಕ್ಷಿಗಳ ಕಲರವ, ವಿವಿಧ ಶಬ್ಧಗಳು. ಮುಂಜಾನೆಯೊಂದು ರೀತಿ, ಮಧ್ಯಾಹ್ನ ಒಂದು ರೀತಿಯಲ್ಲಿ ಮತ್ತು ಸಂಜೆ - ರಾತ್ರಿ ಒಂದು ರೀತಿಯಲ್ಲಿ ಪ್ರಕೃತಿಯು ನವಚೈತನ್ಯವನ್ನು ಗಳಿಗೆ ಗಳಿಗೂ ಬದಲಾಗುವ ಆ ರಂಗಿನ ರಂಗ ಮಂಟಪಕ್ಕೆ ಸೂತ್ರಧಾರ ಅವನೇ ಅವನು ಎಂಬುದು "ಚಾರಣ"ಕ್ಕೆ ಬಂದ ಪ್ರತಿಯೊಬ್ಬರೂ ಅನುಭವಿಸುವುದರಲ್ಲಿ ಸಂಶವಿಲ್ಲ.

ಅತಿ ಎತ್ತರದ ಶಿಖರವನ್ನು ಏರಿ, ಅಲ್ಲಿಂದ ಮುಂದೆ ಭವ್ಯ ಆಕಾಶವೇ ಕೊನೆ ಎಂಬುದು ಗೊತ್ತಾದಾಗ, ಅಲ್ಲಿಂದ ಎತ್ತ ನೋಡಿದರೂ ದಟ್ಟ ಹಸಿರು ಕಾಡು, ಪ್ರತಿ ಮರವೂ ತಾನು ಆ ಶಿಖರವನ್ನು ಮುಟ್ಟಬೇಕು ಎಂಬಂತೆ ನವ ಚೈತನ್ಯದಿಂದ ಮುಗಿಲು ನೋಡುತ್ತಿರುವುದನ್ನು ಗಮನಿಸಿದಾಗ, ನಾವೇ ಧನ್ಯ. ಈ ಶಿಖರಗಳಿಗೆ ಮುತ್ತಿಕ್ಕುತ್ತಿದ್ದೇವೇ ಎಂಬಂತೆ ತೇಲುತ್ತಿರುವ ಬಿಳಿ ಮೋಡಗಳನ್ನು ನೋಡುವಾಗ ನಾವುಗಳು ಧನ್ಯ ಮಾತ್ರ. ಈ ಉನ್ನತವಾದ ಪ್ರದೇಶದಲ್ಲಿ ನನ್ನ ಸಂಚಾರವಿದೆ ಎಂದು ಬೀಗುವ ತಂಗಾಳಿಯನ್ನು ನಮ್ಮ ದೇಹ ಸ್ಪರ್ಷಿಸಿದಾಗ ಮಾತೇ ಮೌನಕ್ಕೆ ಶರಣು ಶರಣು ಅನ್ನುತ್ತದೆ.



ಈ ಪ್ರದೇಶದಲ್ಲಿ ನನಗೆ ಇನ್ನೂ ಏನೂ ಕೆಲಸವಿಲ್ಲ ಎಂಬಂತೆ ಮೌನವಾದ ಆ "ನಿಶಬ್ಧ" ವನ್ನು ಕಂಡಾಗ ನಿಜವಾಗಿಯೂ ನಮಗೆಲ್ಲಾ ಮೂಕಪ್ರೇಕ್ಷಕನಾಗಿರುವುದೇ ಕಾಯಕ.

ಪ್ರಕೃತಿಯ ಈ ಎಲ್ಲಾ ಮಹಾನ್ ಪ್ರತಿನಿಧಿಗಳೇ ದಿವ್ಯ ಧ್ಯಾನದಲ್ಲಿ ಕುಳಿತಿರುವಾಗ ನಾವುಗಳು ಸಹ ಏನೊಂದು ಮಾತು ಬಾಯಿಗೆ ಬಾರದೇ ತನ್ನಿಂದ ತಾನೇ "ಧ್ಯಾನಸ್ಥ" ವಾಗುವುದು, ಈ ಪ್ರಕೃತಿಯ ಮಹಿಮೆಯನ್ನು ಸೂಚಿಸುತ್ತದೆ.

(ಈ ಮೇಲಿನ ಭಾವನೆಯನ್ನು ನನಗೆ ಉಂಟು ಮಾಡಿದ್ದು, ನಾವುಗಳು ಕೂಡಚಾದ್ರಿಯ ಅತಿ ಎತ್ತರದ ಬೆಟ್ಟವನ್ನು ಏರಿ ಸೂರ್ಯಾಸ್ತವನ್ನು ನೋಡಿದಾಗ. ನನ್ನ ಎಲ್ಲಾ ಸಂಗಡಿಗರು ಮೌನಕ್ಕೆ ಶರಣಾಗಿದ್ದು ನಿಜವಾಗಿಯೂ ಈಗಲೂ ನನಗೆ ವಿಸ್ಮಯ ಮತ್ತು ಆಶ್ಚರ್ಯವನ್ನುಂಟು ಮಾಡುತ್ತದೆ! ಅಂದಿನ ಆ ಕ್ಷಣ)

ಈ ರೀತಿಯ ಪ್ರಕೃತಿಯ ನಿತ್ಯ ದಿನಚರಿ ಯಾವುದೇ ವೇಳೆ, ಯಾವುದೇ ದಿನ ನಿಲ್ಲದೇ ನಿರಂತರವಾಗಿ ಚಾಲನೆಯಲ್ಲಿರುವುದು ನಮ್ಮ ಬದುಕಿಗೆ ಒಂದು ಪಾಠವೇ ಸರಿ!

ನಮ್ಮ ಶಿಕ್ಷಣದಲ್ಲಿ ಈ ರೀತಿಯ ವಿವಿಧ ಚಟುವಟಿಕೆಗಳನ್ನು ಮಕ್ಕಳಿಗೆ ಬಾಲ್ಯದಿಂದಲೇ ಕಲಿಸಿ ಪ್ರಕೃತಿಯಲ್ಲಿ ಒಡನಾಡುವಂತೆ ಮಾಡವಂತಾಗಬೇಕು. ಪ್ರಕೃತಿಯಲ್ಲಿ ಮಕ್ಕಳೂ ಬೇರೆಯುವಂತೆ ಅನುವು ಮಾಡಿ ಕೊಡಬೇಕು.



ಹಾಗೆಯೇ ಈ ರೀತಿಯ ತಾಣಗಳನ್ನು ಹೊಂದಿರುವ ನಮ್ಮ ಪಶ್ಚಿಮ ಘಟ್ಟಗಳ ಸಂರಕ್ಷಣೆಯ ಜವಾಬ್ದಾರಿ ಯಾರೇಲ್ಲಾ ಈ ರೀತಿಯ ಪ್ರವಾಸ ಕೈಗೊಳ್ಳುತ್ತಾರೋ ಅವರ ಮೇಲಿದೆ. ನಾವುಗಳು ಅವುಗಳಿಗೆ ಧಕ್ಕೆ ತರುವಂತಹ ಕೆಲಸ ಮಾಡಲು ಯಾವುದೇ ಅಧಿಕಾರವಿಲ್ಲ. ಕೇವಲ ಅವನ್ನು ನೋಡಿ ಆನಂದಿಸಿ ಬರಬೇಕು ಅಷ್ಟೇ ವಿನಾಃ ನಮ್ಮ ನಾಗರೀಕತೆಯ ವಿವಿಧ ವ್ಯವಸ್ಥೆಯ ಕುರುವುಗಳನ್ನು ಅಲ್ಲಿ ಪ್ರತಿಷ್ಠಾಪಿಸುವುದಲ್ಲಾ. ಹಾಗೆಯೇ ಅದರ ಬಗ್ಗೆ ಅರಿವನ್ನು ಎಲ್ಲರಿಗೂ ಮಾಡಿಕೊಡಬೇಕಾಗಿರುವುದು ಇಂದಿನ ಸಂದರ್ಭದಲ್ಲಿ ಅತ್ಯವಶ್ಯ.

ಬುಧವಾರ, ಜುಲೈ 20, 2011

ಪ್ರೀಮಿಯರ್ ಶೋ::ಲೀಕಾಯುಕ್ತ ವರದಿ

ಇಂದು ಮುಂಜಾನೆಯ ಪತ್ರಿಕೆಗಳನ್ನು ನೋಡಿದಾಗ ಅಚ್ಚರಿಯಾಗದೇ ಇರುವಂತಹ ಶಾಕ್ ಸುದ್ಧಿಯನ್ನು ಕಾಣು ಭಾಗ್ಯ ಎಲ್ಲಾ ಕನ್ನಡ ನಾಡಿನ ಜನತೆಗೆ ಲಬಿಸಿತ್ತು ಎಂದರೇ ಅತಿಶಯೋಕ್ತಿಯಲ್ಲ.

ಅದು ಕಳೆದ ಮೂರು ವರ್ಷಗಳಿಂದ ದಿನ ನಿತ್ಯ ದಾರವಾಹಿಯಾಗಿ ವರದಿಯಾಗುತ್ತಲೆ ಇದ್ದಂತಹ ಸಂಚಿಕೆಗಳು. ಆದರೆ ಇಂದು ಅದರ ಪೂರ್ಣ ಮೋವಿಯ ಪ್ರೀಮಿಯರ್ ಶೋ ಯಾವುದೋ ಮಾಯದಲ್ಲಿ "ಲೀಕಾಯುಕ್ತ ವರದಿ"ಯಾಗಿ ಕಾಣಿಸಿಕೊಂಡಿತ್ತು.

ಅಲ್ಲಿ ಇರುವ ವರದಿಯ ಮುಖ್ಯ ಅಂಶಗಳು ಮಾಧ್ಯಮಗಳಿಗೆ ಗೊತ್ತಾಗಿದೆ. ಬಿಡುಗಡೆಯನ್ನು ಸರ್ಕಾರಕ್ಕೆ ಅರ್ಪಿಸುವ ಮೊದಲೆ ಪತ್ರಿಕೆಗಳ ಕೈಗೆ ಸಿಕ್ಕಿಬಿಟ್ಟಿದೆ. ಇದು ನಮ್ಮ ದೇಶದ ಮತ್ತು ಸರ್ಕಾರಿ ಸಂಸ್ಥೆಗಳಲ್ಲಿ ಕೆಲಸ ಮಾಡುವವರ ಕಾಳಜಿಗೆ ಉದಾಹರಣೆ ಅಲ್ಲೂ ಭ್ರಷ್ಟತೆ. ಹೀಗೆ ಮಾಡಲು ಅವರದೇಯಾದ ಕಾರಣಗಳು ಉಂಟು. ಅವುಗಳ ಸದುಪಯೋಗವನ್ನು ಪಾಲುದಾರರು ಪಡೆಯುತ್ತಾರೆ ಅಷ್ಟೇ!

ಆದರೆ ತಮಾಷೆಯ ವಿಚಾರವೆಂದರೆ ಸಾವಿರಾರು ಕೋಟಿಯ ಆಕ್ರಮ ಗಣಿಗಾರಿಕೆಯ ವೈವಾಟನ್ನು ಎಲ್ಲಾ ಮುಖ್ಯ ಕೂಳಗಳು ನಡೆಸಿದ್ದಾರೆ. ಎಲ್ಲಾರ ಪಾಲದ ನೈಸರ್ಗಿಕ ಸಂಪತ್ತನ್ನು ವಿದೇಶಕ್ಕೆ ಕಳ್ಳತನದಲ್ಲಿ ಸಾಗಿಸಿದ್ದಾರೆ. ಆದರೂ ಅಧಿಕೃತ ವರದಿ ಸರ್ಕಾರಕ್ಕೆ ಸಿಗುವ ಮುನ್ನ ಸಿಕ್ಕಿರುವ ವರದಿಯಲ್ಲಿರುವ ವ್ಯಕ್ತಿಗಳು ಹೇಳುವ ಮಾತುಗಳನ್ನು ನೋಡಿದರೇ ನಾವುಗಳೇ ಪಕಾ ಪಕಾ ನಕ್ಕು ಮನಸ್ಸಿನಲ್ಲಿ ಮೂಡುವ ಆಕ್ರೋಶವನ್ನು ಯಾರ ಮುಂದೆ ಹೇಳಿಕೊಳ್ಳಬೇಕೋ ತಿಳಿಯದಾಗಿದೆ.

ಯಾರೊಬ್ಬರು ಹೌದು! ನಾವು ತಪ್ಪು ಮಾಡಿದ್ದೇವೆ ಎಂಬುದನ್ನು ಒಪ್ಪಿಕೊಳ್ಳುತ್ತಿಲ್ಲ. ಒಬ್ಬರೂ ಹೇಳುತ್ತಾರೆ "ಇದು ಅಧಿಕೃತ ವರದಿಯಲ್ಲ, ಆದ್ದರಿಂದ ಈಗಲೇ ನಾವುಗಳು ಏನೂ ಹೇಳಲಾಗುವುದಿಲ್ಲ." ಇನ್ನೊಬ್ಬರು ಹೇಳುತ್ತಾರೆ "ನಾವುಗಳು ಮಾಡಿರುವ ವ್ಯವಹಾರ ಎಲ್ಲ ಅಧಿಕೃತ ಮತ್ತು ಪಾರದರ್ಶಕ ನಮ್ಮ ಹೆಸರು ಇದೇ ಎಂದರೇ ಯಾರೋ ತಿಳಿಯದೇ ನಮ್ಮ ಹೆಸರನ್ನು ಬೇಕಂತಹ ಹೇಳಿಬಿಟ್ಟಿರಬಹುದು" ಹೀಗೆ ಒಬ್ಬೊಬ್ಬರೂ ಒಂದೊಂದು ಸಮರ್ಥನೆಯ ಸರಮಾಲೆಯನ್ನೇ ಪೋಣಿಸಿದ್ದಾರೆ.

ಅಂದರೇ ಸಾವಿರಾರು ಕೋಟಿರೂಪಾಯಿಯ ಅದಿರು, ಮಣ್ಣು ಎಲ್ಲಾ ಕಣ್ಣಿಗೆ ಕಾಣದ ರೀತಿಯಲ್ಲಿ ಮಂಗಮಾಯವಾಯಿತೇ ಪಾಪ ನಮ್ಮ ಈ ಗಣಿ ಮಾಲಿಕರುಗಳು, ಅಧಿಕಾರಿಗಳು ಮತ್ತು ಸರ್ಕಾರ ಏನೇನೂ ಮಾಡಲಿಲ್ಲವೇ? ಪಾಪ ಅವರುಗಳ ಪಾತ್ರ ಏನೋ ಇಲ್ಲವೇನೋ?



ಇವರ ಇಂದಿನ ಈ ಶ್ರೀಮಂತಿಕೆ ಯಾವುದರ ಮೊಲದಿಂದ ಬಂದಿತು ಸ್ವಾಮಿ!

ಇದರ ಬಗ್ಗೆ ಮಾತನ್ನಾಡುವುದೇ ಜಿಗುಪ್ಸೆಯಾಗುತ್ತದೆ. ಸಾಮಾನ್ಯ ಪ್ರಜೆಯ ನೋವು, ನಲಿವು, ಅವನಿಗೆ ಸಿಗಬೇಕಾದ ಸಾಮಾಜಿಕ ನ್ಯಾಯ, ನೈಸರ್ಗಿಕ ಸಂಪತ್ತಿನ ಸಮಪಾಲು, ಇದ್ಯಾವುದು ಈ ಮಹನೀಯರುಗಳಿಗೆ ಬೇಕಾಗಿಲ್ಲ.

ತಪ್ಪು ಮಾಡದವರು ಯಾರ್ವಾರ್ರೇ ಎಂಬ ಡೈಲಾಗ್ ನ್ನು ಪ್ರತಿಯೊಬ್ಬರು ನೀಡುತ್ತಾರೆ.

ಅಲ್ಲಾ ಸ್ವಾಮಿ ಇವರುಗಳಿಗೆ ನೈತಿಕತೆ ಎಂದರೇ ಏನೂ ಎಂಬುದನ್ನು ಯಾವ ರೀತಿಯಲ್ಲಿ ತಿಳಿಯಪಡಿಸಬೇಕು.

ಅಧಿಕಾರದ ಪ್ರಮಾಣ ವಚನ ಓದುವಾಗ ಇವರುಗಳು ಮಾಡುವುದಾದರೂ ಏನೂ. ಅಧಿಕಾರದಲ್ಲಿ ಮೈ ಮರೆಯುವಾಗ ಅಧಿಕಾರವನ್ನು ಉಪಯೋಗಿಸುವುದು ಏನಕ್ಕೆ?

ಬಿಡಿ ಅಧಿಕಾರಿಗಳು, ರಾಜಕಾರಣಿಗಳು ಎಂದರೇ ಜನರು ಏನನ್ನು ಹೇಳುವ ಮಟ್ಟಿಗೆ ಇವರುಗಳು ಇಲ್ಲವೇ ಇಲ್ಲವೇನೋ.

ಅದರೂ ಪುನಃ ಈ ಮಹನೀಯರುಗಳೇ ಅದು ಹೇಗೆ ಪುನರಾಯ್ಕೇಯಾಗಿ ಬರುತ್ತಾರೆ? ವಿದಾನಸೌಧವೇನು ಇವರುಗಳು ವಾಸಮಾಡುವ ಆರಮನೆಯೆಂದುಕೊಂಡು ಮತದಾರರು ಇವರಿಂದ ಆಳಿಸಿಕೊಳ್ಳುವ ದೌರ್ಭಾಗ್ಯ ಜನತೆಯೇ?

ನಾವುಗಳು ಭವ್ಯ ಭಾರತ, ಭವ್ಯ ಪ್ರಜಾಪ್ರಭುತ್ವ ರಾಷ್ಟ್ರ ಎಂದು ಶಾಲೆಯ ದಿನಗಳಲ್ಲಿ ಸಮಾಜ ಶಾಸ್ತ್ರದಲ್ಲಿ ಓದುವುದಕ್ಕೂ ಇಲ್ಲಿ ನಡೆಯುತ್ತಿರುವುದಕ್ಕೂ ಏನೊಂದು ಸಂಬಂಧವಿಲ್ಲವಲ್ಲ ದೇವ್ರೂ?

ಇವರುಗಳು ಕೊಡಿ ಇಡುವ ಹಿಡಿಗಂಟು ತಾವು ತಿಂದು ತಮ್ಮ ಮಕ್ಕಳು ಮರಿಗಳವರೆಗೂ, ಇಡಿ ತಮ್ಮ ಖಾಂದನ್ ನೂರು ತಲೆಮಾರುಗಳು ತಿಂದು ತೇಗಿದರೂ ಕಳೆಯದಾರದಷ್ಟು ಮಣ್ಣು, ಹೊನ್ನೂ ಪ್ರತಿಯೊಂದು ತಮಗೆ ಮಾತ್ರ ಎಂಬಂತೆ ಎಲ್ಲಿ ಸಿಗುತ್ತದೋ ಅಲ್ಲಲ್ಲಿ ನಿತ್ಯ ಭೋಜನ ಮಾಡುವವರಲ್ಲ? ಇವರುಗಳಿಗೆ ಕಿಂಚಿತ್ ಆದರೂ ಮರ್ಯಾದೇ ಇದ್ಯಾ? ತಿಳಿಯದಾಗಿದೆ.

ಹಿಂದೆ ಇದ್ದಂತಹ ರಾಜಕಾರಣಿಗಳಿಗೂ ಇವರಿಗೂ ಹೋಲಿಕೆಯನ್ನು ಮಾಡುವುದಕ್ಕೂ ಭಯವಾಗುವ ರೇಂಜಿಗೆ ಇವರುಗಳು ದೊಡ್ಡ ಮಟ್ಟದಲ್ಲಿ ಬೆಳೆದು ಬಿಟ್ಟಿರುವವರೋ ಅಥವಾ ನಾವುಗಳು ಆಯ್ಕೆ ಮಾಡುವುದರಲ್ಲಿಯೇ ಮತದಾರ ಎಡೆವಿಬಿಟ್ಟಿರುವನೇ ತಿಳಿಯದಾಗಿದೆ.

ಉಜ್ವಲ ಭವಿಷ್ಯವನ್ನು ಭಾರತಕ್ಕೆ ಎಲ್ಲಿಂದ ಕೊಡಲಿ ಎನ್ನುವಂತಾಗಿದೆ. ಯಾರಾದರೂ ಅಣ್ಣ ಹಜಾರೆಯವಂತಹ ದೇಶ ಭಕ್ತರು ದ್ವನಿ ಎತ್ತಿದರೇ ಅವರ ಕೂಗನ್ನೂ ಎಷ್ಟರ ಮಟ್ಟಿಗೆ ಹಳ್ಳ ಇಡಿಸಬೇಕೋ ಅಷ್ಟರ ಮಟ್ಟಿಗೆ ಅದರ ಶಕ್ತಿಯನ್ನೇ ತಗ್ಗಿಸುವಂತಹ ನಾಯಕ ಮಣಿಗಳು ನಮ್ಮ ರಾಜಕಾರಣದಲ್ಲಿ ಇದ್ದಾರೆ.




ನೀನು ಒಳ್ಳೆಯವನಲ್ಲ ಎಂದರೇ ಸಾಕು, ನೀನೇಷ್ಟು ಒಳ್ಳೆಯವನು ಮೊದಲು ನೀ ನೋಡಿಕೋ ಎಂದು ಒಣ ಪ್ರತಿಷ್ಠೆಯನ್ನು ಪ್ರದರ್ಶಿಸುತ್ತಾರೆ.

ನನಗೆ ಅನಿಸುತ್ತದೆ ನಮ್ಮ ಕನಸು, ನಮ್ಮ ಉತ್ಸಹ, ನಮ್ಮ ಸಮಾಜ, ನಮ್ಮ ಬೆಳವಣಿಗೆಯನ್ನ ಯಾವುದೋ ಒಂದು ವ್ಯವಸ್ಥೆಯ ಸುಳಿ ದುರ್ಬಲಗೊಳಿಸುತ್ತಿದೆ. ಇದರ ಬದಲಾವಣೆಯ ಸಿಹಿ ಗಾಳಿ ಯಾವಾಗ ಎಲ್ಲಿಂದ ಬಿಸುವುದು?

ಏನೇ ಮಾಡಿದರೂ, ಎಷ್ಟೇ ಭ್ರಷ್ಟರಾದರೂ ಅಧಿಕಾರದಲ್ಲಿಯೇ ಮಜಾ ಅನುಭವಿಸಬೇಕು ಎಂಬ ಭಂಡತನ ನಮ್ಮ ಅಧಿಕಾರಸ್ಥರಲ್ಲಿ ಸ್ಥಾಯಿಯಾಗಿ ಕೂಂತು ಬಿಟ್ಟಿದೆ. ಸ್ವಲ್ಪವಾದರೂ ಕಳಂಕ ಮೆತ್ತಿದರೇ ನಾಚಿಕೆಯೇ ಆಗುತ್ತಿಲ್ಲ. ಹೇ ಇದೇನೂ ಮಹಾ ಬಿಡಿ! ಯಾರೂ ಮಾಡಿಲ್ಲದಂತಹದೇನೂ ನಾನು ಮಾಡಿಲ್ಲ! ಎಂಬಂತಾಗಿದೆ.

ನಾವುಗಳು ನಮ್ಮ ಶಾಲಾ ದಿನಗಳಲ್ಲಿ ಓದಿದ ನೈತಿಕ ಪಾಠಗಳು ಇವರುಗಳು ಯಾರು ಓದಿಯೇ ಇಲ್ಲವೇ ಎಂಬ ಅನುಮಾನ ಕಾಣುತ್ತಿದೆ.

ಸಾರ್ವಜನಿಕ ವ್ಯಕ್ತಿ ಯಾಕೇ ಸಾರ್ವಜನಿಕ ಸೇವೆಗಳಿಗೆ ಸೇರುತ್ತಾನೆ. ಅವನ ಧ್ಯೇಯವಾದರೂ ಏನೂ ಎಂಬುವಂತಾಗಿದೆ.

ಹಿಂದೆ ಸಾರ್ವಜನಿಕ ಸೇವೆಗೆ ತಮ್ಮ ಜೀವನವನ್ನು ಮುಡಿಪಾಗಿಡುವವರುಗಳ ಜನರ ಜೀವನ ಶೈಲಿಗೂ, ಇಂದು ಅಡಿ ಇಡುತ್ತಿರುವವರ ಶೈಲಿಗೂ ಹೋಲಿಕೆಯನ್ನು ಮಾಡುವವನೇ ಪಾಪಿಯಂತಾಗಿದೆ.

ಹಿಂದೆ ಸಾಮಾಜಿಕ ಸೇವೆ ಮಾಡುವವನು ಎಂದರೇ ಮನೆಯಲ್ಲಿ ಮೂಗು ಮುರಿಯುತ್ತಿದ್ದರು. ಯಾಕೆಂದರೇ ಅಲ್ಲಿ ಆರ್ಥಿಕವಾಗಿ ಗಳಿಸುವುದಕ್ಕಿಂತಹ ಮನೆಯಲ್ಲಿನ ಸಂಪತ್ತನ್ನೇ ಜನರ ಸೇವೆಗಾಗಿ ಕೊಡಬೇಕಾಗಿತ್ತು. ಮತ್ತು ಅಲ್ಲಿಂದ ಏನೊಂದು ಉಪಯೋಗವಿಲ್ಲ. ಮನೆಗೆ ಮಾರಿ ಪರರಿಗೆ ಉಪಕಾರಿ ಎಂಬಂತಾಗುತ್ತಿತ್ತು. ಕೇವಲ ಹೆಸರು ಮಾತ್ರ ಸಿಗುತ್ತಿತ್ತು.

ಆದರೇ ಇಂದು ಈ ರೀತಿಯಲ್ಲಿದೆಯೇ ನಮ್ಮ ಸಾರ್ವಜನಿಕ ವ್ಯಕ್ತಿಗಳ ಪರಿಸ್ಥಿತಿ?

ಇದೊಂದು ಪ್ಯಾಶನ್ ಆಗಿಬಿಟ್ಟಿದೆ. ಇಂದು ಯಾರು ಹೆಸರಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ದುಡ್ಡು ಒಂದು ಇದ್ದಾರೆ ತಾವುಗಳು ಹೇಗೆ ತಮ್ಮ ಹೆಸರನ್ನು ಜನರ ಮಾನಸದಲ್ಲಿ ಹಸಿರಾಗಿ ಇಟ್ಟುಕೊಂಡು ಇರಬಹುದು ಎಂಬ ಐಡ್ಯಾ ಗೊತ್ತಾಗಿಬಿಟ್ಟಿದೆ. ಅದಕ್ಕೆ ಏನಾನ್ನಾದರೂ ಮಾಡಲೂ ಇವರುಗಳು ತಯಾರು. ಹಾಗೆಯೇ ಅಧಿಕಾರ ಯಾವಗಲ ಇವರ ಅಂಗೈಯಲ್ಲಿಯೇ ಇರಬೇಕು. ಯಾಕೆಂದರೇ ತಾವು ಮಾಡುವ ಆಕ್ರಮ ಸಂಪತ್ತು, ಆಸ್ತಿ ಇವುಗಳಿಗೆಲ್ಲಾ ಅದೇ ರಕ್ಷ ಕವಚ. ಅದಕ್ಕಾಗಿ ಶತ ಪ್ರಯತ್ನವನ್ನು ಮಾಡುತ್ತಲೇ ಮಾಡುತ್ತಲೇ ಆಧಿಕಾರವನ್ನು ಗಳಿಸಿಕೊಂಡು ಸಾಮಾನ್ಯ ಜನರನ್ನು ಬೆಪ್ಪು ಮಾಡುತ್ತಾರೆ.

ಮತ್ತು ಯಾರೂ ಹೆಚ್ಚು ಹಣವನ್ನು ಹೊಂದಿರುವವರೋ ಅವರೇ ಜನನಾಯಕರಾಗುತ್ತಾರೆ.ಅವರುಗಳೇ ಚುನಾವಣೆಯಲ್ಲಿ ಆರಿಸಿಬರುತ್ತಾರೆ. ಹಣವಿಲ್ಲದವರೂ ಎಂದಿಗೂ ಅಧಿಕಾರವನ್ನು ಗಳಿಸಲು ಸಾಧ್ಯವಿಲ್ಲ. ಅದಕ್ಕಾಗಿಯೇ ಬಡವ ಬಡವನಾಗಿಯೇ ಇರುತ್ತಾನೆ. ಹಣವಿರುವವ ದೊಡ್ಡ ದೊಡ್ದ ಮಟ್ಟದಲ್ಲಿ ಬೆಳೆಯುತ್ತಾ ಹೋಗುತ್ತಾನೆ. ಅವನಿಗೆ ಮಾತ್ರ ರಾಜಕೀಯ, ಚುನಾವಣೆ, ಸಮಾಜ ಸೇವೆ ಎಂಬ ಪೋಜು.

ಈ ರೀತಿಯಲ್ಲಿರುವ ನಮ್ಮ ವ್ಯವಸ್ಥೆಯ ಈ ದಿನಗಳಲ್ಲಿ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?

ಹೊಸ ಆಶಾ ಕಿರಣವನ್ನು ಮೂಡಿಸುವ ವ್ಯಕ್ತಿಯ, ವ್ಯವಸ್ಥೆಯ ಆಗಮವನ್ನು ಸ್ವಾತಂತ್ರ್ಯ ದಿನಾಚರಣೆಯ ಈ ಸಂದರ್ಭದಲ್ಲಿ ಯಾವ ರೀತಿಯಲ್ಲಿ ನೋಡಬೇಕೋ ತಿಳಿಯದಾಗಿದೇ!!

ಜೈ ಭಾರತ್!