ಶನಿವಾರ, ಡಿಸೆಂಬರ್ 10, 2016

ಪ್ರಬುದ್ಧ ನ್ಯೂಸ್ ಪತ್ರಿಕೆಗೆ ಒಂದು ವರುಷ ತುಂಬುತ್ತಿದೆ....

ಪತ್ರಿಕೆಯ ಬಳಗಕ್ಕೆ ಹೊಸ ವರುಷದ ಮತ್ತು ಪತ್ರಿಕೆಯ ಹುಟ್ಟುಹಬ್ಬದ ಶುಭಾಶಯಗಳು!

ಪ್ರಬುದ್ಧ ನ್ಯೂಸ್ ಮಾಸ ಪತ್ರಿಕೆಗೆ ಇಂದಿಗೆ ಒಂದು ವರುಷ ತುಂಬುತ್ತಿದೆ.

ಚಿತ್ರದುರ್ಗದಿಂದ ಪ್ರತಿ ತಿಂಗಳು ಐದನೇ ತಾರೀಕು ವೈವಿಧ್ಯಮಯವಾದ ವಸ್ತು ವಿಷಯ ಬರಹಗಳೊಂದಿಗೆ ಓದುಗರ ಕೈಗೆ ಸಿಗುತ್ತಾ.. ಒಂದೇ ಗುಕ್ಕಿಗೆ ಎಲ್ಲಾ ಲೇಖನಗಳನ್ನು ಓದಿಸುವಂತೆ ಮಾಡುತ್ತದೆ.

ಹೊಸ ಪತ್ರಿಕೆಗಳನ್ನು ಶುರು ಮಾಡುವುದು ಮತ್ತು ಅದನ್ನು ಉತ್ತಮವಾಗಿ ಸತತವಾಗಿ ನಡೆಸಿಕೊಂಡು ಹೋಗುವುದು ಅಷ್ಟು ಸುಲಭವಲ್ಲ!

ಇಂದು ಎಲ್ಲಾದರಲ್ಲೂ ಸ್ಪರ್ಧೆ. ಸ್ಪರ್ಧೆಯಲ್ಲಿ ನಿರಂತರವಾಗಿ ಹೆಚ್ಚು ಶಕ್ತವಾಗಿ ಓಡಬೇಕು. ಇಲ್ಲವೆಂದರೇ ತನ್ನಷ್ಟಕ್ಕೆ ತಾನೇ ಸೋಲನ್ನು ಒಪ್ಪಿಕೊಂಡಂತೆ.

ಯಾವುದೇ ರಂಗದಲ್ಲೂ  ನಾವು ಜಯ ಶಾಲಿಯಾಗಬೇಕೆಂದರೇ, ತಾನು ಸ್ವಲ್ಪ ವಿಭಿನ್ನವಾಗಿರಬೇಕು. ಬೇರೆಯವರಿಗಿಂತ ಮುಂದಿದ್ದರೇ ಮಾತ್ರ ಗೆಲವು.  ಈ ರೀತಿಯ ಹೊಸ ಚಿಂತನೆಯೊಂದಿಗೆ ಸಮಾನ ಮನಸ್ಕ ಗೆಳೆಯರೊಂದಿಗೆ  ಜನವರಿ ೨೦೧೬ ರಿಂದ ಪ್ರಾರಂಭವಾದ ಪ್ರಬುದ್ಧ ನ್ಯೂಸ್ ಪತ್ರಿಕೆಯಿದು.

ಪ್ರಬುದ್ಧ ನ್ಯೂಸ್ ಈಗ ಮನೆ ಮಾತಾಗಿದೆ ಎಂದರೇ ಪತ್ರಿಕೆಯನ್ನು ನಡೆಸುತ್ತಿರುವವರ ಮನಸ್ಸು ನಿತ್ಯ ಹೊಚ್ಚ ಹೊಸತನದಿಂದ ಕೊಡಿದೆ ಎಂದರ್ಥ!

ಮೊದಲ ಸಂಚಿಕೆಯಿಂದ ಈ ವರುಷದ ಕೊನೆಯ ಸಂಚಿಕೆಯವರೆಗೂ ಸುದ್ಧಿ, ಲೇಖನಗಳು, ಅಂಕಣಗಳು, ಪತ್ರಿಕೆಯ ಕ್ವಾಲಿಟಿ, ಮುಖಪುಟ ವಿನ್ಯಾಸ ಹೀಗೆ ಪ್ರತಿಯೊಂದರಲ್ಲೂ ಪ್ರಬುದ್ಧತೆಯನ್ನು ಮೆರೆದಿದೆ.  ಹೆಸರಿಗೆ ತಕ್ಕಂತೆ ಪತ್ರಿಕೆ ಯಾವಾಗಲೂ ತನ್ನ ಪ್ರಬುದ್ಧಮಾನತೆಯನ್ನು ಪಸರಿಸಿದೆ.

ಇದು ಹೊಸ ಪತ್ರಿಕೆಯೆಂಬುದನ್ನೇ ನಂಬಂತಾಗಿದೆ. ಇಂದು ಹಾಗೆ ಹೇಳುವ ಆಗಿಲ್ಲ! ಈಗ ಮೊದಲನೇ ವರುಷದ ಹುಟ್ಟು ಹಬ್ಬ.

ಹೌದು! ಪ್ರೀತಿಪಟ್ಟು ರೂಪಿಸಿದ ಪತ್ರಿಕೆಯಾದ್ದರಿಂದ ಓದುಗನಿಗೆ ಎಂದಿಗೂ ಇದು ಹೊಸ ಪತ್ರಿಕೆಯೆಂದು ಎನಿಸಿಲ್ಲ.

ಪತ್ರಿಕೆಯಲ್ಲಿ ಬರುತ್ತಿರುವ ಲೇಖನಗಳು, ವಿಷಯಗಳ ಆಯ್ಕೆಯಿಂದ ಓದುಗ ದೊರೆಗೆ ಓದಿನ ಮೃಷ್ಟಾನ್ನವನ್ನೆ ನೀಡಿದೆ. ವಾರ ವಾರ ಕೈಗೆ ಸಿಗುವಂತ್ತಾಗಿದ್ದರೇ ಎಷ್ಟು ಚೆನ್ನಾ ..! ಎಂಬ ಭಾವನೆಯನ್ನು ಹುಟ್ಟುಹಾಕಿದೆ.

ಪತ್ರಿಕೆಯ ಪ್ರತಿ ಬರಹಗಳಲ್ಲೂ ಪ್ರಾರಂಭದಿಂದ ಇಂದಿನವರೆಗೂ ಅದೇ ಬಿಗಿ ಹಿಡಿತವಿದೆ.

ವೈವಿಧ್ಯಮಯ ಬರಹಗಳಿಂದ ಕಾದು ಓದುವಂತೆ ಮಾಡಿರುವ ಪುಟಗಳೆಂದರೇ: ಸಂಪಾದಕೀಯ ಪುಟ, ಮುಖಪುಟ ಲೇಖನ, ವ್ಯಕ್ತಿತ್ವ ವಿಕಸನ , ಕಾಲನಿರ್ಣಯ, ಮನದಾಳದ ಮಾತು ಅಂಕಣ.. ಇತ್ಯಾದಿ.

ಸಂಪಾದಕೀಯ ಪುಟ - ಖುದ್ದು ಪ್ರಧಾನ ಸಂಪಾದಕರೇ ಬರೆಯುವ ಸಂಪಾದಕೀಯ ಪುಟ ನಿಜವಾಗಿಯೂ ಸಂಗ್ರಾಹಯೋಗ್ಯವಾದದ್ದು. ತಿಪ್ಪೇಸ್ವಾಮಿಯವರ ಭಾಷ ಪ್ರೌಡಿಮೆ ಮತ್ತು ವಿಷಯ ಸಂಗ್ರಾಹಣೆಯ ಪರಿಶ್ರಮವನ್ನು ಇದರಲ್ಲಿ ಗುರುತಿಸಬಹುದು. ದೇಶ-ರಾಜ್ಯದಲ್ಲಿ ಆ ಮಾಸದಲ್ಲಿ ಮಾಸದಂತೆ ಉಳಿದ ಸುದ್ಧಿಯ-ಘಟನೆಯ ಸುತ್ತಾ ತಮ್ಮದೇಯಾದ ಶೈಲಿಯಲ್ಲಿ ವಿಷಯ ವಿಸ್ತಾರವನ್ನು ವಿಶ್ಲೇಷಕ ಚಿಂತನೆಯಲ್ಲಿ ಚಿತ್ರಿಸುವುದು. ಘಟನೆಯ ನೈಜತೆಯನ್ನು ಮನನ ಮಾಡುತ್ತ ಆದರ ಆಗುಹೋಗುಗಳನ್ನು ಬೇರೆ ರೀತಿಯಲ್ಲಿ ಓದುಗರಿಗೆ ತಿಳಿಸುತ್ತಾರೆ. ಸಂಪಾದಕೀಯ ಪುಟ ಇಡೀ ಪತ್ರಿಕೆಗೆ ಮುಕುಟಪ್ರಾಯವಾದದ್ದು ಎಂದರೇ ತಪ್ಪಲ್ಲ!

ನಾನು ಇಷ್ಟಪಟ್ಟು ಮೊದಲು ಓದುವ ಪುಟವೆಂದರೇ ಪತ್ರಿಕೆಯ ಈ ಮೊರನೇಯ ಪುಟ.  ತಿಪ್ಪೇಸ್ವಾಮಿಯವರ ಬರಹದ ದುಡಿಮೆ ಹೀಗೆ ಸಾಗಲಿ ಎನ್ನುವುದೇ ನಮ್ಮಗಳ ಆಶಯ.

ಕಾಲನಿರ್ಣಯ..? - ಜಿತೇಂದ್ರರ ರಾಜಕೀಯ ಕಾಲಂ. ಕರ್ನಾಟಕದಲ್ಲಿ ಜರುಗುವ ರಾಜಕೀಯ ಹೆಜ್ಜೆಗಳನ್ನು ತಮ್ಮದೇಯಾದ ರಾಜಕೀಯ ವಿಶ್ಲೇಷಣೆಯೊಂದಿಗೆ ಅತ್ಯಂತ ಚೂಕ್ಕವಾಗಿ ಚಿತ್ರಿಸುವ ಲೇಖನ. ಇದುವರೆಗೆ ಬಂದಿರುವ ಅವರ ಎಲ್ಲಾ ಲೇಖನಗಳು ತುಂಬ ಸೂಗಸಾಗಿವೆ. ರಾಜಕೀಯವೆಂದರೇ ಮೂಗು ಮುರಿಯುವರು ಸಹ ಕುತೂಹಲದಿಂದ ಓದುವಂತೆ ಮಾಡುತ್ತದೆ. ಯಾಕೋ ಕಳೆದ ಮೂರು ತಿಂಗಳಿಂದ ಈ ಕಾಲಂ ನಿಂತುಹೋಗಿರುವುದು ಬೇಸರದ ಸಂಗತಿ. ಈ ಕಾಲಂ ಪುನಃ  ಪ್ರಾರಂಭವಾಗಲಿ ಎಂಬುದು ಈ ಓದುಗನ ಆಸೆ.

ವ್ಯಕ್ತಿವಿಕಸನ ಕಾಲಂ 'ಸಾವಿರ ಸೋಲುಗಳನ್ನು ಮೆಟ್ಟಿ ನಿಲ್ಲು'  -ಸಿದ್ದಲಿಂಗಪ್ಪನವರ ಕಾಲಂ. ಇದು ಪ್ರತಿಯೊಬ್ಬರಿಗೂ ಮಾರ್ಗದರ್ಶಿ ಬರಹಗಳ ಗೊಂಚಲು. ಸೋತ ಮನಸ್ಸುಗಳಿಗೆ ಸಂಜೀವಿನಿ! ಚಿಕ್ಕ ಚಿಕ್ಕ ಕಥೆಗಳ ಮೊಲಕ ಜೀವನವನ್ನು ಹೇಗೆ ಎದುರಿಸಬಹುದು ಎಂಬುದನ್ನು ತಿಳಿಸುತ್ತದೆ. ಕಾದಿದ್ದು ಮುಂದಿನ ತಿಂಗಳ ಬರಹವನ್ನು ಓದುವಂತೆ ಮಾಡುತ್ತಿರುತ್ತದೆ. ಮುಂದಿನ ಕಂತಿಗಾಗಿ ಒಂದು ತಿಂಗಳವರೆಗೂ ಕಾಯಬೇಕಲ್ಲಪ್ಪಾ. ಎಂದು ಬೇಜಾರಾಗುತ್ತದೆ.

ನನ್ನನ್ನು ಹೆಚ್ಚು ಇಷ್ಟಪಟ್ಟು ಓದುವಂತೆ ಮಾಡುತ್ತಿರುವ ಪ್ರಬುದ್ಧ ನ್ಯೂಸ್ ಅಂಕಣವೆಂದರೇ ’ಮನದಾಳದ ಮಾತು’ - ಇದು ಪ್ರತಿ ತಿಂಗಳು ಒಬ್ಬೊಬ್ಬ ಓದುಗರ ಭಾವನೆಗಳ/ಘಟನೆಗಳ/ಜೀವನ ಸಂಘರ್ಷದ ಸಂಗಮ ಮಾಲೆ. ತಮ್ಮ ಜೀವನದಲ್ಲಿ ಘಟಿಸಿದ ಘಟನೆಗಳ ಮೇಲೆ ಬೆಳಕು ಚೆಲ್ಲುವ ಅಂಕಣ. ಈ ಅಂಕಣಕ್ಕೆ ಓದುಗರು ನೇರ ಭಾಗವಹಿಸಿಕೆಯನ್ನು ಪತ್ರಿಕೆ ನೀಡಿರುವುದು ಪತ್ರಿಕೆ ಓದುಗರ ಬಗ್ಗೆ ಇಟ್ಟುಕೊಂಡಿರುವ ಕಾಳಜಿಯನ್ನು ನಿರೂಪಿಸುತ್ತದೆ.

ಸಂಶೋಧನ ವಿದ್ಯಾರ್ಥಿಗಳ ಸಂಶೋಧನ ಬರಹಗಳನ್ನು ಪ್ರಕಟಿಸುತ್ತಿರುವುದು. ಪತ್ರಿಕೆ ನವ ತರುಣ ವಿದ್ಯಾರ್ಥಿಗಳ ಶಿಕ್ಷಣ ಮತ್ತು ಚಿಂತನೆಗಳಿಗೆ ತಾನು ನೀಡುತ್ತಿರುವ ಪ್ರೋತ್ಸಾಹವನ್ನು ತೋರಿಸುತ್ತದೆ.

ಇದಷ್ಟೇ ಅಲ್ಲದೇ ಕಾನೂನಿಗೆ ಸಂಬಂಧಿಸಿದ ಹಲವು ಲೇಖನಗಳು ಸಾಮಾನ್ಯ ಜನರಿಗೆ ಭಾರತದಲ್ಲಿರುವ ಗೊತ್ತಿಲ್ಲದ ಕಾನೂನು ಮತ್ತು ಅದರ ಉಪಯೋಕ್ತತೆಯನ್ನು ಪಡೆಯಲು ಸಾಮಾನ್ಯ ಜನರಿಗೆ ಅನುಕೂಲವಾಗಿದೆ ಎಂದರೇ ತಪ್ಪಿಲ್ಲ.

ಮುಖಪುಟದಲ್ಲಿ ನೀಡುವ ಹೆಡ್ ಲೈನ್ಸ್ - ಹೆಚ್ಚು ಕಾಡುವಂತೆ ಮತ್ತು ಕನ್ನಡ ಪದಗಳನ್ನು ಹೀಗೂ ಉಪಯೋಗಿಸಬಹುದು ಎಂಬುದನ್ನು ಪ್ರಬುದ್ಧ ನ್ಯೂಸ್ ಪ್ರತಿ ತಿಂಗಳು ಜಗಜ್ಜಾಹೀರು ಮಾಡಿದೆ. ’ವಿಚಾರಗಳ ಮೇಲುಡಿಗೆಯೇ ಭಾಷೆ’

ಹೊಸ ಪತ್ರಿಕೆಗಳೆಂದರೇ ಪ್ರಸಿದ್ಧರಾದ ಲೇಖಕರಿಗೆ ಮಣೆ ಹಾಕುವುದು. ಈಗಾಗಲೇ ಪೇಮಸ್ಸಾದ ಲೇಖಕರಿಂದ/ಸಾಹಿತಿಗಳಿಂದ ಅಂಕಣಗಳನ್ನು ಬರೆಸಿಕೊಂಡು ತಮ್ಮ ಪತ್ರಿಕೆಯ ಪ್ರಸಾರವನ್ನು ಹೆಚ್ಚಿಸಿಕೊಳ್ಳಲು ತವಕಿಸುವ ಇಂಥ ಸಂದರ್ಭದಲ್ಲಿ ಕೇವಲ ಹೊಸ ಲೇಖಕರಿಂದ ಅತ್ಯುತ್ತಮವಾದ ಲೇಖನಗಳನ್ನು ಬರೆಯಿಸುತ್ತಿರುವುದು. ಹೊಸಬರಿಗೆ ಅವಕಾಶವನ್ನು ಕೊಟ್ಟು ಅವರಲ್ಲಿ ಹುದುಗಿರುವ ಹೊಸ ಚಿಂತನೆಯನ್ನು ಕನ್ನಡ ಓದುಗರಿಗೆ ಪರಿಚಯಿಸುತ್ತಿರುವುದು ಪ್ರಬುದ್ಧ ನ್ಯೂಸ್ ಪತ್ರಿಕೆಯ ಹೆಮ್ಮೆ . ಇದು ಎಲ್ಲಾ ಪತ್ರಿಕೆಗಳಿಗೂ ಮಾದರಿ.

ಪತ್ರಿಕೆ ತನ್ನ ಮೊದಲ ವರುಷದ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಸಾಮಾನ್ಯ ಓದುಗನಾಗಿ ಈ ಪತ್ರಿಕೆ ಇನ್ನು ಹೆಚ್ಚು ಹೆಚ್ಚು ಎತ್ತರಕ್ಕೇರಲಿ!  ಹಾಗೆಯೇ ಆದಷ್ಟು ಬೇಗ ವಾರಪತ್ರಿಕೆಯಾಗಿ ಬಹುಬೇಗ ನಮ್ಮೆಲ್ಲಾರ ಕೈಸೇರಲಿ ಎಂದು ಆಶಿಸುವೆನು.


ಬುಧವಾರ, ನವೆಂಬರ್ 23, 2016

ಇದು ಎಂದು ನಿಲ್ಲುವುದೋ

ನವಂಬರ್ ೮ ಇಡೀ ವಿಶ್ವ ಅಮೆರಿಕಾದ ಚುನಾವಣೆಯ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿದ್ದರೆ. ಮೋದಿ ಶಾಕಿಂಗ್ ನ್ಯೂಸ್ ನ್ನು ಭಾರತೀಯರಿಗೆ ನೋಟ್ ಬ್ಯಾನ್ ಮಾಡುವ ಮೂಲಕ ಕೊಟ್ಟರು.

ವಿಶ್ವವೇ ಒಂದು ಕ್ಷಣ ಮೋದಿಯ ಮತ್ತು ಭಾರತ ಸರ್ಕಾರದ ನಿರ್ಧಾರದಿಂದ ನಿಬ್ಬೇರಗಾಗಿತು.

೧೦೦೦ , ೫೦೦ ರ ನೋಟಗಳು ಸರಿ ರಾತ್ರಿಯಿಂದ ಪೂರಾ ಬಂದ್. ನಾಳೆ ಬದಲಿಸಿಕೊಂಡರೇ ಮಾತ್ರ ಅವುಗಳಿಗೆ ಬೆಲೆ.

ಕೆಲವರಿಗೆ ಈ ರೂಲ್ ನುಂಗಲಾರದ ತುತ್ತಾಗಿದ್ದಂತೂ ನಿಜ.

ಮಾರನೇಯ ದಿನದಿಂದ ಸಾಲು ಸಾಲು ಮಂದಿ ಬ್ಯಾಂಕ್ ಗಳ ಮುಂದೆ ನೋಟ್ ಬದಲಿಸಿಕೊಳ್ಳಲು ನಿಂತಿದ್ದೇ ಬಂತು.

ಸಾಕಷ್ಟು ಜನ ಸಾಮಾನ್ಯರು ಈ ನಿರ್ಧಾರವನ್ನು ಮೆಚ್ಚಿದರು. ಹಾಗೆಯೇ ಕೆಲವರು ಮೋದಿಯನ್ನು ಶಪಿಸಿದರು.

ರಾಜಕೀಯ ನಾಯಕರುಗಳು ತಮ್ಮದೇಯಾದ ದಾಟಿಯಲ್ಲಿ ಈ ನಿರ್ಧಾರವನ್ನು ಖಂಡತುಂಡವಾಗಿ ಖಂಡಿಸಿದರು.

ಮೋದಿ ಕೇವಲ ಬ್ಯುಸಿನೇಸ್ ಮ್ಯಾನ್ ಮತ್ತು ಶ್ರೀಮಂತರ ಪರ. ಇವರುಗಳನ್ನು ಓಲೈಸುವ ಸಲುವಾಗಿ ಈ ಕಾನೂನು ತಂದಿದ್ದಾರೆ. ಬಡ ಜನರು, ರೈತರು, ಸಣ್ಣ ವ್ಯಾಪರಿಗಳು ಎಲ್ಲಿಗೆ ಹೋಗಲಿ? ಅದು ಹೇಗೆ ಪ್ರತಿಯೂಬ್ಬರೂ ಬ್ಯಾಂಕ್ ಆಕೌಂಟ್ ಇಟ್ಟುಕೊಳ್ಳಲು ಸಾಧ್ಯ. ಜನರ ಬಗ್ಗೆ ಮೋದಿಗೆ ಕರುಣೆಯೇ ಇಲ್ಲ. ಇದು ಒಂದು ದೊಡ್ಡ ನೋಟ್ ಹಗರಣ. ಬಡ ಜನರ ಸಾವುಗಳು ಬ್ಯಾಂಕ್ ಕ್ಯೂ ನಲ್ಲಿ ನಡೆಯುತ್ತಿದೆ. ಹೀಗೆ ವಿರೋಧದ ಮಾತು ಮಾತು ಚರ್ಚೆಗಳು ಇನ್ನೂ ನಡೆಯುತ್ತಿವೆ.

ಇದು ಕಾಳಧನ ಸಂಗ್ರಹಕಾರರಿಗೆ ದುಃಸಪ್ನ. ಭ್ರಷ್ಟ ಜನರಿಗೆ ಸರಿಯಾದ ಶಾಸ್ತಿಯಾಯಿತು. ಇನ್ನಾದರೂ ಬ್ಲಾಕ್ ಮನಿ ಹೇಳ ಹೆಸರಿಲ್ಲದ ರೀತಿಯಲ್ಲಿ ನಾಶವಾಗುತ್ತದೆ. ಮೋದಿಯೆಂದರೇ ತಾತ್ಸಾರ ಮಾಡಿದವರಿಗೆ ಮೋದಿ ಸರ್ಕಾರ ಸರಿಯಾಗಿ ತೋರಿಸಿತು. ಬಡವರಿಗೂ ಸಹ ಸರ್ಕಾರದಲ್ಲಿ ನಂಬಿಕೆ ಬರುವ ನಿರ್ಧಾರ ಇದು. ಭಾರತ ಇಂದಿಗೆ ಬೆಳಕನ್ನು ಕಂಡಿತು. ಶ್ರೀಮಂತರ ದರ್ಬಾರಿಗೆ ಕಡಿವಾಣ ಮೋದಿ ಹಾಕಿದರು. ಇಂಥ ಪ್ರಧಾನಿಯನ್ನು ಕಂಡ ಭಾರತ ಧ್ಯನ್ಯ! ಹೀಗೆ ಪರವಾದ ಮಾತುಗಳು ಪ್ರತಿ ಮೀಡಿಯಾಗಳಲ್ಲಿ ಪಸರಿಸಿತು.

ಯಾವುದೇ ಒಂದು ಕೆಲಸ, ಘಟನೆ, ವಿಚಾರ ನಡೆದರೂ ಪರ ಮತ್ತು ವಿರೋಧದ ಮಾತು ಕೇಳುವುದು ಪ್ರಜಾಪ್ರಭುತ್ವದಲ್ಲಿ ಸಾಮಾನ್ಯ.
ಯಾಕೆಂದರೇ ಪ್ರತಿಯೊಬ್ಬರಿಗೂ ತಮ್ಮ ಅಭಿವ್ಯಕ್ತಿಯನ್ನು ತಮ್ಮನುಸಾರ ವ್ಯಕ್ತಪಡಿಸಲು ಸರ್ವ ಸ್ವತಂತ್ರರು.

ಆದರೇ ನೋಟ್ ಬ್ಯಾನ್ ನಿಂದ ಎಷ್ಟು ಅನುಕೂಲವಾಗಬಹುದೋ ಅಷ್ಟೇ ಅನಾನುಕೂಲಗಳು ಸ್ವಲ್ಪ ದಿನಗಳು ಜನಸಾಮನ್ಯರು ಅನುಭವಿಸುವುದು ನಿಜ.

ಸರ್ಕಾರ ಯಾವುದೇ ರೀತಿಯ ಮುಂದಾಲೋಚನೆಯಿಲ್ಲದೆ ಏಕಾಏಕಿ ಈ ನಿರ್ಧಾರ ತೆಗೆದುಕೊಂಡಿಲ್ಲ. ಆದರೂ ಇಂದು ನೋಟ್ ಬದಲಾವಣೆಯ ಭರಾಟೆಯಲ್ಲಿ ಸಾಮನ್ಯ ಜನರ ಸಾವುಗಳು ಮಾತ್ರ ಅಕ್ಷಮ್ಯ. ಇದಕ್ಕೆ ಯಾರು ಹೊಣೆಯಾಗುವರೊ ಗೊತ್ತಿಲ್ಲ!

ಯಾಕೆಂದರೇ ಯಾವುದೇ ಸುಧಾರಣೆ ಒಂದು ಜೀವಕ್ಕಿಂತ ಅಮೊಲ್ಯವಲ್ಲ.

ಇದನ್ನೇ ಕೆಲವರು ಕೇವಲವಾಗಿ ಮುಂದಿನ ಉತ್ತಮ ಭವಿಷ್ಯಕ್ಕಾಗಿ ಇಂದಿನ ಕಷ್ಟಗಳು ಅವಶ್ಯಕ ಎನ್ನುವ ಉದ್ಧಟತನ ತೋರಿಸುತ್ತಿದ್ದಾರೆ. ಈ ರೀತಿಯ ಮನೋಭಾವನೆ ಯಾರೂ ಒಪ್ಪವಂತದ್ದಲ್ಲ.

ಸರ್ಕಾರದ ಯಾವುದೇ ಯೋಜನೆಯ ಫಲಾನುಭವಿಗಳು ಸಾಮಾನ್ಯ ಜನಗಳು, ಹಾಗೆಯೇ ಯಾವುದೇ ಕಾಯದೆ ಕಾನೂನುಗಳಿಂದ ಕಷ್ಟ ಅನುಭವಿಸುವುದು ಈ ಸಾಮಾನ್ಯ ಜನಗಳೇ.

ಉಳ್ಳವರಿಗೆ ಯಾವುದೇ ತೊಂದರೆ ಎಂದಿಗೂ ಆಗುವುದಿಲ್ಲ. ಅದಕ್ಕೆ ಇರಬೇಕು ಪ್ರತಿಯೊಬ್ಬರೂ ಉನ್ನತವಾದದ್ದನ್ನು ಪಡೆದುಕೊಳ್ಳಲು ತವಕಪಡುವುದು.

ಸರ್ಕಾರದ ಜಾಗದಲ್ಲಿರುವ ನಾಯಕರುಗಳು ಹಿಂದಿನಿಂದಲೂ ಬಡವರನ್ನೆ ತಮ್ಮ ಟ್ರಂಪ್ ಕಾರ್ಡ ಮಾಡಿಕೊಂಡಿದ್ದಾರೆ. ಬಡವರ ಉದ್ಧಾರದ ಹೆಸರಲ್ಲಿ ಅವರನ್ನು ಇನ್ನೂ ಅದೇ ಸ್ಥಿತಿಯಲ್ಲಿ ಇಡುವುದು ಅವರಿಗೆ ಲಾಭ. ಅದಕ್ಕೆ ಈ ಅಧಿಕಾರದ ಮಧದಲ್ಲಿರುವವರ ಮಾತುಗಳು ಯಾವುದು ನಿಜ ಯಾವುದು ಸುಳ್ಳೆಂದು ಅರಿಯುವುದು ಅಷ್ಟು ಸುಲಭವಲ್ಲ.

ಇಂದು ಪ್ರತಿಯೊಂದನ್ನು ಸಂಶಯದ ಮನಸ್ಸಿನಲ್ಲಿ ನೋಡುವಂತಾಗಿದೆ.

ಮೋದಿ ಏನೇ ಒಳ್ಳೆಯದನ್ನು ದೇಶಕ್ಕಾಗಿ ಮಾಡಲು ನಿರ್ಧರಿಸಿದರೂ ಪ್ರತಿಯೊಬ್ಬರೂ ಸಂಶಯದಲ್ಲಿ ಕಾಣುವುಂತಾಗಿದೆ.

ಇದು ಯಾಕೇ?

ದೇಶಕ್ಕಾಗಿ ಒಳ್ಳೆಯದನ್ನು ಮಾಡುವ ಮನುಷ್ಯನೇ ಹುಟ್ಟಿಲ್ಲ ಎನ್ನುತ್ತಿದ್ದಾರೆ.

ಅದು ಹೇಗೆ ನಮ್ಮ ಜನ ಗಾಂಧಿಯನ್ನು ನಂಬಿದರು? ಅದು ಯಾವ ಗುಣ ಗಾಂಧಿಯ ಮಾತನ್ನು ಇಡೀ ದೇಶ ಪಾಲಿಸುವಂತೆ ಮಾಡಿತು?

ಪ್ರಜಾಪ್ರಭುತ್ವವಿರುವ ಸರ್ಕಾರದಲ್ಲಿ ಪ್ರಜೆಯೇ ಪ್ರಭು ಎಂಬುದು ಕೇವಲ ಬಾಯಿ ಮಾತಾಗಿದೆ. ಯಾಕೆಂದರೇ ಸ್ವಾತಂತ್ರ್ಯ ಬಂದ ೭೦ ವರುಷದಲ್ಲಿ ನಮ್ಮನಾಳಿದ ನಾಯಕರುಗಳ ಜೊಳ್ಳು ಧೋರಣೆಯ ಮಾತುಗಳು. ಅವರುಗಳು ತಿಂದು ತೇಗಿದ ರೀತಿ. ಬಡವರ ಬಗ್ಗೆ ಅವರು ಮಾತನಾಡುವುದಕ್ಕೂ, ಅವರನ್ನು ಕಾಣುವುದಕ್ಕೂ ಅಜಗಜಾಂತರ ವ್ಯತ್ಯಾಸವಾಗಿದೆ.

ದೇಶ ಉನ್ನತಿಯಾಗಬೇಕಾದರೇ ದೇಶದ ನಾಯಕರುಗಳು ಒಳ್ಳೆಯವರಾಗಿರಬೇಕು. ಒಳ್ಳೆಯ ನಾಯಕ ಸಿಗಬೇಕಾದರೇ ದೇಶದ ಜನರು ಅಂಥ ನಾಯಕರನ್ನು ಆರಿಸಬೇಕು.

ಆದರೇ ಎಲ್ಲೋ ಏನೋ ವ್ಯತ್ಯಾಸ ಕಾಣುತ್ತಿದೆ. ಅಧಿಕಾರ ಸಿಕ್ಕಿದರೇ ಸಾಕು ತಾನು ತನ್ನ ಕುಟುಂಬ ಮಾತ್ರ ಚೆನ್ನಾಗಿರಬೇಕು ಎನ್ನುವ ಮಟ್ಟಿಗೆ ಕೊಳ್ಳೆ ಹೊಡೆಯುವವರನ್ನೇ ಕಂಡ ನಮಗೆ ಮೋದಿಯ ನಡೆ ಸ್ವಲ್ಪ ವಿಭಿನ್ನ ಅನಿಸುತ್ತಿದೆ. ಇದಕ್ಕೆ ಇರಬೇಕು ನಮ್ಮ ಜನ ಈ ಬದಲಾವಣೆಯನ್ನು ಸುಲಭವಾಗಿ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ.


ಯಾವುದೇ ಬದಲಾವಣೆ ಸುಧಾರಣೆ ಬೇಡ ಗುರು! ನಾನು ಚೆನ್ನಾಗಿದ್ದರೇ ಸಾಕು. ಯಾವನ್ ಕ್ಯೂ ನಲ್ಲಿ ನಿಲ್ಲಬೇಕು? ನನ್ನ ದುಡ್ಡು ನನ್ನದಾಗಿದ್ದರೇ ಸಾಕು. ಯಾರು ಎಷ್ಟು ಬೇಕಾದರೂ ಇಟ್ಟುಕೊಂಡಿರಲಿ. ಈ ರೀತಿಯ ನಮ್ಮ ಮನೋಭಾವನೆಯನ್ನೇ ಎನ್ ಕ್ಯಾಷ್ ಮಾಡಿಕೊಂಡಿರುವ ನಮ್ಮ ಸೋ ಕಾಲ್ಡ್ ರಾಜಕೀಯ ನಾಯಕರುಗಳು ನಮ್ಮ ಬದುಕನ್ನು ಇನ್ನೂ ಮೂರ ಬಟ್ಟೆ ಮಾಡಲು ಸಿದ್ಧರಾಗಿದ್ದಾರೆ. ಇದು ನಿಜ!

ಸಂಸತ್ತನಲ್ಲಿ ಎಲ್ಲ ಪ್ರತಿಪಕ್ಷಗಳು ಈ ನೋಟ್ ಬ್ಯಾನ್ ಮಾಡಿರುವ ವಿರುದ್ಧ ತೊಡೆತಟ್ಟಿಕೊಂಡು ವಿರೋಧಿಸುತ್ತಿರುವುದನ್ನು ನೋಡಿದರೇ ನಮಗೆ ನಾವೇ ನಾಚಿಕೆಪಟ್ಟುಕೊಳ್ಳಬೇಕೇನೋ..?

ಏನೂ ಮಾಡುವ ಆಗಿಲ್ಲ. ನಾವೇ ಆರಿಸಿಕಳಿಸಿರುವ ಪ್ರತಿನಿಧಿಗಳು. ಅವರುಗಳು ನಮ್ಮಗಳ ಬಗ್ಗೆ ಬಾಯಿ ತುಂಬ ಹರಿಸುತ್ತಿರುವ ನುಡಿಗಳು ಕೇಳಬೇಕು. ಅವರಿಗೆ ನಮ್ಮ ಜನಗಳು ಇನ್ನೂ ಅದೇ ಸ್ಥಿತಿಯಲ್ಲಿದ್ದಷ್ಟು ಲಾಭ.

ಸತತ ೭೦ ವರುಷ ನಮ್ಮವರ ಏಳ್ಗೆಯನ್ನಾಗಲಿ, ನಮ್ಮ ಜನರನ್ನು ಹೆಚ್ಚು ಅಕ್ಷರಸ್ಥರನ್ನಾಗಿ ಮಾಡೋಣ, ಹೆಚ್ಚು ತಿಳುವಳಿಕೆಯುಳ್ಳವರನ್ನಾಗಿ ಮಾಡೋಣ ಎನ್ನುವುದರ ಬಗ್ಗೆ ಈ ರೀತಿಯ ಒಗ್ಗಟ್ಟನ್ನು ಪ್ರದರ್ಶಿದ್ದರೇ ನಮ್ಮ ಭಾರತ ಇಂದು ಅದು ಎಲ್ಲೋ ಇರುತ್ತಿತ್ತು.

ಆದರೇ ನಮ್ಮ ಪಕ್ಷಗಳು ಕೇವಲ ರಾಜಕೀಯ ಲಾಭಕ್ಕಾಗಿ ಜನರ ಭಾವನೆಗಳನ್ನು ಬಳಸಿಕೊಳ್ಳುತ್ತಿರುವುದು ವಿಪರ್ಯಾಸ. ಅದಕ್ಕಾಗಿ ಇವರುಗಳು ಮಾಡುತ್ತಿರುವ ನಾಟಕಗಳನ್ನು ನೋಡಿದರೇ ಇವರಿಗೆ ಮೋದಿ ನಡೆ ಮಾತ್ರ ತಪ್ಪಾಗಿ ಕಾಣುತ್ತಿದೆ. ಅದಕ್ಕಾಗಿ ಸಾಮಾನ್ಯ ಜನರ ಮನಸ್ಸನ್ನು ಬಡಿದೆಬ್ಬಿಸಿ ಸರ್ಕಾರದ ವಿರುದ್ಧ ದಂಗೆಯೇಳಿಸಬೇಕು. ಮುಂದಿನ ಚುನಾವಣೆಯಲ್ಲಿ ನಮ್ಮನ್ನು ಆರಿಸಲಿ ಎಂಬ ದೂರಾಲೋಚನೆಯಂತಿದೆ.

ಇದು ಎಂದು ನಿಲ್ಲುವುದೋ ಕಾದು ನೋಡಬೇಕು.

ಗುರುವಾರ, ನವೆಂಬರ್ 10, 2016

ಸುದ್ಧಿಗಳು ಮತ್ತು ಸಮಾಜ



ಸಂವಹನ ಮಾಧ್ಯಮಗಳ ಜವಬ್ದಾರಿಯ ಬಗ್ಗೆ ಹಿಂದಿನಿಂದಲೂ ಚರ್ಚೆಗಳು ನಡೆಯುತ್ತಿವೆ. ಟಿ.ವಿ  ನ್ಯೂಸ್ ಚಾನಲ್ ಗಳು ಬಂದ ಮೇಲೊಂತೂ ಪರಿ ಪರಿಯಾಗಿ ಅವುಗಳ ಸಮಾಜಿಕ ಕಳ ಕಳಿಯ ಬಗ್ಗೆ ಸಾಮಾನ್ಯ ಜನರುಗಳು ಪ್ರಶ್ನೇ ಮಾಡುತ್ತಿದ್ದಾರೆ.

ಸುದ್ಧಿ ಮಾಡುವುದೇ ಸುದ್ಧಿ ಮಾಧ್ಯಮಗಳ ಕರ್ತವ್ಯವಾ? ಅವುಗಳು ಏನೂ ಸಮಾಜಕ್ಕೆ ನೀಡಬಹುದು. ಅವು ಹೇಗೆ ಜನಗಳ ಸಮಸ್ಯೆಗಳನ್ನು ಪರಿಹರಿಸಬಹುದು. ಹೀಗೆ ಹತ್ತಾರು ಕೋನಗಳಲ್ಲಿ ಇವರನ್ನು ಕೇಳುತ್ತಿರುತ್ತಾರೆ.

ಪ್ರಬಲ ಮಾಧ್ಯಮ ಎಂದರೇ ಟಿ.ವಿ ಮಾಧ್ಯಮ. ಪತ್ರಿಕೆ, ರೇಡಿಯೊ ಗಳಿಗಿಂತ ಅತಿ ವೇಗವಾಗಿ ಜನರನ್ನು ತಲುಪುವ ಮಾರ್ಗ ಎಂದರೇ ಟಿ.ವಿ ಚಾನಲ್ ಗಳು ಮಾತ್ರ.

ಎಲ್ಲಾ ಭಾಷೆಗಳಲ್ಲು ಸಾಕಷ್ಟು ನ್ಯೂಸ್ ಚಾನಲ್ ಗಳು ಹುಟ್ಟಿಕೊಂಡಿವೆ. ಯಾವುದೇ ಘಟನೆಗಳು ನಡೆದರೂ ಕ್ಷಣ ಮಾತ್ರದಲ್ಲಿ  ಅದರ ವರದಿ ಬ್ರೇಕಿಂಗ್ ನ್ಯೂಸ್ ರೂಪದಲ್ಲಿ ಟಿ.ವಿ ಪರದೆಯಲ್ಲಿ ಪ್ರತ್ಯಕ್ಷವಾಗುತ್ತದೆ.

ಅದು ಜನರಿಗೆ ಎಷ್ಟು ಉಪಯೋಗವಾಗುತ್ತದೂ ಬಿಡುತ್ತದೂ ಗೊತ್ತಿಲ್ಲ. ಪ್ರಸಾರವನ್ನು ಮಾತ್ರ ಮಾಡುತ್ತಾರೆ. ಯಾವುದೇ ಘಟನೆಯನ್ನು ಯಥಾವತ್ ಪ್ರಸಾರ ಮಾಡುವುದೇ ಅವರ ಹೆಗ್ಗಳಿಕೆಯಾಗಿದೆ! ಎನ್ನುವ ಮಟ್ಟಿಗೆ.

ಆದರೇ ಕೆಲವೊಂದು ಸಮಯದಲ್ಲಿ ಸುದ್ಧಿ ಪ್ರಸಾರ ಮಾಡುವುದಷ್ಟೇ, ಮಾಡುವುದು ತಪ್ಪು ಅನಿಸುತ್ತದೆ. ಯಾವುದೋ ಒಂದು ಅಪಘಾತ, ಯಾವುದೋ ಒಂದು ಅವಘಡಗಳು ಸಂಭವಿಸಿದಾಗ, ಸಂಭವಿಸುವ ಸೂಚನೆ ಗೊತ್ತಿದ್ದಾಗ, ಈ ಮಾಧ್ಯಮಗಳು ಕೇವಲ ಕ್ಯಾಮರ ಮೈಕ್ ಗಳಿಗೆ ಕೆಲಸಗಳನ್ನು ಕೊಡುವುದನ್ನು ಬಿಟ್ಟು ಮನಸಾಕ್ಷಿಗೆ ಕೆಲಸಕೊಟ್ಟರೆ ಕ್ಷೇಮ.ಆ ಮೊಲಕ ಕೆಲವೊಂದು ಜೀವಗಳನ್ನು ಉಳಿಸಬಹುದಾಗಿತ್ತು ಎನಿಸುತ್ತದೆ.

ಹೀಗೆ ಅನಿಸುವುದು ಅವರೇ ಸುದ್ಧಿಯನ್ನು ಬೀತರಿಸುವಾಗ ನುಡಿಯುವ ಪುಂಕಾನು ಪುಂಕು ಮಾತುಗಳು ಮತ್ತು ಬೇರೆಯವರನ್ನು ಬೆಟ್ಟು ಮಾಡಿ ತೋರಿಸುವುದರಿಂದ.

ಯಾಕೆಂದರೆ ಇತ್ತೀಚೆಗೆ ನಡೆದ ಇಬ್ಬರು ನಟರುಗಳ ಸಾವು. ಕಾವೇರಿ ಗಲಾಟೆಯಲ್ಲಿ ಆದ ಅನಾಹುತ. ಹಿಂದೆ ರಸ್ತೆ ಅಪಘಾತದಲ್ಲಿ ಅಸುನೀಗಿದ ಯುವಕನ ಘಟನೆ. ಹಿರಿಯ ಪೊಲೀಸ್ ಅಧಿಕಾರಿಯ ಆತ್ಮಹತ್ಯೆ. ಹೀಗೆ ಈ ಕೆಲವೊಂದು ಸುದ್ಧಿ ಪ್ರಸಾರಣೆಗಳು, ಮಾಧ್ಯಮಗಳು ಕೇವಲ ಕ್ಯಾಮರ ಕಣ್ಣಿನಿಂದ ನೋಡುವುದನ್ನು ಬಿಟ್ಟು ಹೃದಯದಿಂದ ನೋಡಬೇಕಾಗಿತ್ತು ಎಂದು ಪ್ರತಿಯೊಬ್ಬ ವೀಕ್ಷಕನನ್ನು ಕಲಕಿದ್ದಿದೆ.

ಘಟನೆ ಸಂಭವಿಸಿದ ಮೇಲೆ ಹೇಳುವ ನೂರು ಕಾರಣಗಳು. ಮತ್ಯಾರನ್ನೋ ಹೊಣೆಗಾರರನ್ನಾಗಿ ಮಾಡುವುದು ಉಪಯೋಗವಿಲ್ಲ. ಯಾಕೆಂದರೇ ತಾವೇ ಕಿವಿಯಾರೇ ಸತ್ಯವನ್ನು ಕೇಳಿ, ನೋಡಿದ ಮೇಲೆ ಜನರಿಗೆ ಟಿ.ವಿಯಲ್ಲಿ ತೋರಿಸುವುದು ಸುದ್ಧಿ ಸಂಸ್ಥೆಗಳು. ಆದ್ದರಿಂದ ಪ್ರಪ್ರಥಮವಾಗಿ ಇದರ ಬಗ್ಗೆ ತಿಳಿಯುವವರು ಮತ್ತು ವಿಷಯ ಗೊತ್ತಿರುವವರು ಈ ಮಾಧ್ಯಮದವರಿಗೆ. ಇವರುಗಳು ತಾವೇ ತಡೆಯಬಹುದಾಗಿದ್ದ ದುರಂತಗಳನ್ನು ಮತ್ಯಾರೋ ಬಂದು ನಿಲ್ಲಿಸಬಹುದಾಗಿತ್ತು ಎಂದು ಹೇಳುವುದು ತೀರ ಕ್ಷುಲ್ಲಕ ಅನಿಸುತ್ತದೆ.

ಇದೆ ನ್ಯೂಸ್ ಚಾನಲ್ ಗಳ ಉತ್ತಮ ಸಮಾಜ ನಿರ್ಮಾಣ, ದಿಟ್ಟ, ನೇರ ಸ್ವಾಸ್ಥ್ಯ ನಡವಳಿಕೆ?

ಕೇವಲ ವೇಗವಾದ ಸುದ್ಧಿ ಪ್ರಸಾರದಲ್ಲಿ ಮೇಲು ಗೈ ಸಾಧಿಸದೆ ಸಾಮಾಜಿಕ ಕಾಳಜಿಯಲ್ಲಿ ವೇಗವನ್ನು ಸಾಧಿಸುವುದು ಅತ್ಯಂತ ಅವಶ್ಯಕ ನಡೆಯಾಗಿದೆ. ಇದು ನಮ್ಮೆಲ್ಲಾರ ಕೋರಿಕೆಯು ಆಗಿದೆ.

ಒಮ್ಮೊಮ್ಮೆ ಅತಿರೇಕದ ವರ್ತನೆಯನ್ನು ಸುದ್ಧಿ ಸಂಗ್ರಹಿಸುವವರು ಮಾಡುವುದನ್ನು ನಿತ್ಯ ಟಿ.ವಿಗಳಲ್ಲಿ ಗಮನಿಸಬಹುದು. ಏನದರೊಂದು ಕಾಂಟ್ರವರ್ಸಿ ಕ್ರಿಯೇಟ್ ಮಾಡಿ ಅದನ್ನೆ ದೊಡ್ಡ ಸುದ್ಧಿ ಮಾಡುವುದು. ವ್ಯಕ್ತಿ ಮತ್ತು ಸಮಾಜವನ್ನು ಇಕ್ಕಟ್ಟಿಗೆ ಸಿಲುಕಿಸುವುದು. ಯಾವುದೇ ಸುದ್ಧಿ ಪ್ರಸಾರ ಮಾಡುವುದು ಕ್ಷೇಮವೇ ಇಲ್ಲವೇ ಎಂದು ಪರಮರ್ಶಿಸುವ ಗೊಜಿಗೆ ಹೋಗದೇ ನೇರವಾಗಿ ಜನರ ಮುಂದೆ ಇಡುವುದು.

ದುಃಖದಲ್ಲಿರುವವರನ್ನು ಪದೆ ಪದೆ ಪ್ರಶ್ನೆ ಮಾಡುವುದು ಮಾನವೀಯತೆಯನ್ನೇ ಕಳೆದುಕೊಂಡಂತೆ ಅನ್ನಿಸುತ್ತದೆ. ಕೈಯಲ್ಲಿ ಮೈಕ್ ಇದ್ದ ತಕ್ಷಣ ಯಾವುದೋ ಲೋಕದಿಂದ ಇಳಿದು ಬಂದವರಂತೆ ವರ್ತಿಸಬಾರದು.

ಮಾಧ್ಯಮ ತನ್ನ ಇತಿಮೀತಿಯನ್ನು ಹರಿತು ನಡೆದರೆ ತುಂಬ ಒಳಿತು.

ಈ ಹಿಂದೆ ಒಂದು ಕಿರು ಚಿತ್ರ ಬಂದಿತ್ತು. ಅದರಲ್ಲಿ ಹೀಗೆ ದಾರಿಯಲ್ಲಿ ತರುಣನೊಬ್ಬ ಸಾಗುತ್ತಿರುತ್ತಾನೆ. ಅದೇ ಸಮಯದಲ್ಲಿ ಇವನಿಗೆ ಯಾರೋ ವಯಸ್ಸಾದ ಮನುಷ್ಯ ಯಾರಿಗೂ ಗೊತ್ತಾಗದ ರೀತಿಯಲ್ಲಿ ಮರವನ್ನು ಏರುತ್ತಿರುವುದು ಕಾಣುತ್ತದೆ. ಈ ಹುಡುಗನಿಗೆ ಕುತೂಹಲ ಜೇಬಲ್ಲಿದ್ದ ಗ್ಯಾಲಕ್ಸಿ ಮೊಬೈಲ್ ತೆಗೆದು ವಿಡಿಯೋ ಆನ್ ಮಾಡಿ ಕಳ್ಳಿ ಮರೆಯಲ್ಲಿ ರೇಕಾರ್ಡ್ ಮಾಡಲು ಕುರುತ್ತಾನೆ. ಅದು ಉಸಿರು ಬಿಗಿ ಹಿಡಿದು. ಅದು ಎಲ್ಲಿ ಆ ವ್ಯಕ್ತಿಗೆ ತನ್ನ ಇರುವಿಕೆ ತಿಳಿಯುವುದೋ ಎಂದು!

ವಯಸ್ಸದ ಆ ವ್ಯಕ್ತಿ ಮರ ಹತ್ತಿ ಸುತ್ತ ಮುತ್ತ ನೋಡುತ್ತಾನೆ. ಹಾಗೆಯೇ ಗಟ್ಟಿ ಕೊಂಬೆಯನ್ನು ಹುಡುಕಲು ತೊಡಗುತ್ತಾನೆ. ಕೊನೆಗೆ ಬಲ ಬದಿಗೆ ಒಂದೊಂದೆ ಹೆಜ್ಜೆ ಜಾರುತ್ತನೆ. ಕೈಯಲ್ಲಿದ್ದ ಹಗ್ಗವನ್ನು ಕೊಂಬೆಗೆ ಕಟ್ಟುತ್ತಾನೆ. ಇನ್ನೊಂದು ಹಗ್ಗದ ತುದಿಯನ್ನು ಕುಣಿಕೆ ಕಟ್ಟಿ ತನ್ನ ಕೊರಳಿಗೆ ಹಾಕಿಕೊಳ್ಳುತ್ತಾನೆ. ಕಣ್ಣಲ್ಲಿ ಧಾರಾಕಾರ ನೀರು! ಮೇಲೆ ಒಮ್ಮೆ ನೋಡುತ್ತಾನೆ. ಹಾಗೆಯೇ ತಲೆ ತಗ್ಗಿಸುತ್ತಾನೆ. ಅದು ಏನು ಏನೋ ಬಾಯಲ್ಲಿ ದುಃಖದಿಂದ ಪ್ರಲಾಪಿಸುತ್ತಾನೆ. ಆದರೂ ತಾನು ಬಂದಿರುವ ಕಾರ್ಯವನ್ನು ಮುಗಿಸುವ ಆತುರದಲ್ಲಿ ಕಣ್ಣು ಮುಚ್ಚಿ ಒಮ್ಮೆಯೇ ಜೀಗಿಯುತ್ತಾನೆ. ಅಷ್ಟೇ! ಇದೆಲ್ಲಾವನ್ನು ಈ ತರುಣ ತನ್ನ ಮೊಬೈಲ್ ವಿಡಿಯೋದಲ್ಲಿ ರೇಕಾರ್ಡ ಮಾಡುತ್ತಾ ನೋಡುತ್ತಿರುತ್ತಾನೆ. ಕೊನೆಗೆ ವ್ಯಕ್ತಿಯ ಶವ ನೆತಾಡುತ್ತದೆ. ರೇಕಾರ್ಡ್ ನಿಲ್ಲುತ್ತದೆ.ಅನಂತರ ಅದನ್ನು ಯಾರಿಗೋ ಕಳಿಸಲು ತೊಡಗುತ್ತಾನೆ.ಅಲ್ಲಿಗೆ ಈ ಕಿರುಚಿತ್ರ ಮುಗಿಯುತ್ತದೆ.

ಇದು ಮನ ಕಲುಕುವ ಸನ್ನಿವೇಶ. ನಮ್ಮತನವನ್ನು ಕಳೆದುಕೊಂಡು ವರ್ತಿಸುವ ಹುಚ್ಚುತನ. ಈ ರೀತಿಯ ಗೀಳು ಯಾರಿಗೂ ಎಂದಿಗೂ ಬರಬಾರದು. ಇಂಥ ಸಮಯದಲ್ಲಿ ಮನುಷ್ಯತ್ವ ಜಾಗೃತವಾಗಬೇಕು.

ಇಂದು ಪ್ರತಿಯೊಂದನ್ನು ವಿಡಿಯೋ, ಪೊಟೋ ತೆಗೆದು ಅದನ್ನು ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಡುವುದು ಖ(ಕಾ)ಯಾಲಿಯಾಗಿದೆ.

ಒಮ್ಮೊಮ್ಮೆ ಆ ಒಂದು ವಿಡಿಯೋ ಪೊಟೋ ತುಣುಕು ಇಡೀ ಸಮಾಜವನ್ನೆ ತಲ್ಲಣಗೊಳಿಸಿಬಿಡುವುದು. ಇಲ್ಲಿ ಯಾರ ಕಡಿವಾಣವಿಲ್ಲ. ಪ್ರತಿಯೊಬ್ಬರೂ ಅವರವರ ಮನಸೊ ಇಚ್ಛೆ ಏನದರೂ ಪ್ರಸಾರ ಮಾಡಬಹುದು. ತಮಗೆ ತಾವೇ ರೀಪೊರ್ಟರ್!

ಆದರೇ ಈ ರೀತಿಯ ವರ್ತನೆ ಘನತೆಯುಳ್ಳ ಸುದ್ಧಿ ಸಂಸ್ಥೆಗಳಿಂದ ನಡೆಯಬಾರದು.

ಟಿ.ವಿ, ಪತ್ರಿಕೆ, ಸುದ್ಧಿ ಮಾಧ್ಯಮಗಳನ್ನು ಶಾಸಕಾಂಗದ ನಾಲ್ಕನೇಯ ಅಂಗ ಎಂದು ಸಂವಿಧಾನವೇ ಗುರುತಿಸಿದೆ. ಸ್ವಾಸ್ಥ್ಯ ಸಮಾಜ ಮತ್ತು ಶಾಂತ ಸಮಾಜದ ನಿರ್ಮಾಣ ಇವುಗಳ ಕೈಯಲ್ಲಿಯೇ ಜಾಸ್ತಿಯಿದೆ.

ಇಂದು ಮಾಧ್ಯಮಗಳಿಂದ ಜಗತ್ತೆ ಒಂದು ಪುಟ್ಟ ಹಳ್ಳಿಯಾಗಿದೆ. ಜಗತ್ತಿನ ಯಾವುದೇ ಮೊಲೆಯಲ್ಲಿ ಜರುಗಿದ ಚಿಕ್ಕ ಘಟನೆಗಳು ಸಹ ಕ್ಷಣ ಮಾತ್ರದಲ್ಲಿ ಮನೆ ಮನವನ್ನುತಲುಪುತ್ತಿವೆ. ಇದಕ್ಕೆ ಪ್ರತಿಯೊಬ್ಬರೂ ಅಭಾರಿಗಳು. ಇದರಿಂದ ಮಾಧ್ಯಮಗಳು ಲಾಭವನ್ನುಗಳಿಸುತ್ತಿವೆ. ಹಾಗೆಯೇ ಸಾಮಾನ್ಯ ಜನರುಗಳು ಸಹ ಹೆಚ್ಚು ಉಪಯೋಗ ಪಡೆದುಕೊಳ್ಳುತ್ತಿದ್ದಾರೆ.

ಯಾವುದೇ ದೊಡ್ಡ/ಚಿಕ್ಕ ಸುದ್ಧಿ ಅಥವಾ ವಿಚಾರ ಒಂದು ಅಮೊಲ್ಯ ಜೀವಕ್ಕಿಂತ ಎಂದಿಗೂ ದೊಡ್ಡದಲ್ಲ. ಆದ್ದರಿಂದ ಜೀವಪರ ಕಾಳಜಿಯನ್ನು ಪ್ರತಿಯೊಂದು ಚಾನಲ್ ಮತ್ತು ಪ್ರತಿ ಮಾಧ್ಯಮಗಳು ಹೊಂದುವುದು ಇಂದಿನ ಜರೂರತಾಗಿದೆ.

ಇಲ್ಲವೆಂದರೇ ಹೇಳುವುದೊಂದು ಮಾಡುವುದೊಂದು ಅನ್ನುವಂತಾಗುತ್ತದೆ.

ಗುರುವಾರ, ಅಕ್ಟೋಬರ್ 20, 2016

ಪೇಪರ್ ಲೆಸ್ ಯುಗ

ಪೇಪರ್ ಲೆಸ್ ಯುಗ ಅಂದರೇ ಇದೆ ಇರಬೇಕು. ಪೆನ್ನು ಪೇಪರ್ ಗಳ ಬಳಕೆಯೇ ಗೌಣವಾಗಿದೆ. ಕಂಪ್ಯೂಟರ್ ಮೊಬೈಲ್ ಗಳು  ಶೇ ೯೯ರಷ್ಟು ಮಾನವನ ಕೈಯಾರೆ ಬರೆಯುವ ಬರವಣಿಗೆಯನ್ನು ನಿಲ್ಲಿಸಿದೆ.

ಹಿಂದೆ ಬಾಲ್ಯದಿಂದಲೇ ಬಳಪ, ಸ್ಲೇಟ್ ಅಕ್ಷರಾಭ್ಯಾಸಕ್ಕೆ ಬಳಸುತ್ತಿದ್ದರು. ಬಳಪಗಳೋ ವಿಧ ವಿಧವಾದವುಗಳಿದ್ದವು. ಸ್ಲೇಟ್ ಗಳಲ್ಲೂ ಎಷ್ಟೊಂದು ಬಗೆ ಕಲ್ಲಿನ ಸ್ಲೇಟ್, ತಗಡಿನ ಸ್ಲೇಟ್, ತೀರಾ ಇತ್ತೀಚೆಗೆ ಪ್ಲಾಸ್ಟಿಕ್ ಸ್ಲೇಟ್ ಬಳಕೆ ಪ್ರಾರಂಭವಾಯಿತು.

ಸ್ವಲ್ಪ ದೊಡ್ಡವರಾದಂತೆ ಸೀಸದ ಕಡ್ಡಿ ಮತ್ತು ಪುಸ್ತಕಗಳಲ್ಲಿ ಬರೆಯುತ್ತಿದ್ದೆವು ಮತ್ತು ಕಲಿಯುತ್ತಿದ್ದೇವು.

ಮುಂದೆ ಮುಂದೆ ದೊಡ್ಡ ದೊಡ್ಡ ತರಗತಿಗಳಿಗೆ ಹೋದಂತೆ ಎಕ್ಸಸೈಜ್, ಪೇಪರ್ ಮತ್ತು ಪೆನ್ನುಗಳ ಬಳಕೆ ಮಾಡುವುದು ಮಾಮೂಲುಯಿತು.

ಪೆನ್ನಲ್ಲಿ ಬರೆಯುವುದಕ್ಕೂ ಮೊದಲು ಸೀಸದ ಕಡ್ಡಿಯಲ್ಲಿ ಬರೆದು ಅಭ್ಯಾಸ ಮಾಡಿದರೇ ಅಕ್ಷರಗಳ ಬರವಣಿಗೆ ಉತ್ತಮವಾಗುವುದು ಎಂದು ಹೇಳುತ್ತಿದ್ದುದು ಪ್ರತೀತಿ.

ಪೆನ್ನುಗಳಲ್ಲೂ ಸಹ ಹಲವು ವಿಧ. ಒಂದೊಂದು ಪೆನ್ನು ಒಂದೊಂದು ಥರ. ಆದರೇ ಎಲ್ಲಾ ಪೆನ್ನುಗಳು ಬರೆಯುವುದು ಒಂದೇ ಬಗೆ. ವಿವಿಧತೆಯಲ್ಲಿ ಏಕತೆ!

ಇಂಕ್ ಪೆನ್ನಲ್ಲಿ ಬರೆದರೇ ವಜಾನ್ ಜಾಸ್ತಿ, ಅದು ಬರವಣಿಗೆಗೆ ಅತ್ಯುತ್ತಮ ಎಂದು ಹಿರಿಯರು ಹೇಳುತ್ತಿದ್ದರು. ಆದರೆ ಅದರ ಬಳಕೆ ವಿದ್ಯಾರ್ಥಿಗಳಿಗೆ ಬಲು ಕಷ್ಟ. ಸ್ವಲ್ಪ ಅಜಾಗರೂಕತೆಯಲ್ಲಿ ಬಳಸಿದರೇ ಮೈಕೈಯೆಲ್ಲಾ ಮಸಿ. ಮಸಿ ಕಾಲಿಯಾಗುವುದು. ಅದನ್ನು ನಿತ್ಯ ತುಂಬುವುದು. ಗಾಳಿಗೆ ಅದು ಒಣಗಿ ಬರೆಯದೆ ಇರುವುದು. ಅದಕ್ಕಾಗಿ ಕೈಯಲ್ಲಿ ಒಮ್ಮೆ ಗಾಳಿಯಲ್ಲಿ ಹೊಡೆಯುವುದು.ಮಸಿ ಬೇರೆಯವರಿಗೆ ಸಿಡಿಯುವುದು. ಇತ್ಯಾದಿ ಚಟುವಟಿಗೆಗಳ ನಂಟು ಪೆನ್ನುಗಳದ್ದು.

ಕಡ್ಡಿ ಪೆನ್ನುಗಳದ್ದು ಇನ್ನೊಂದು ಕಥೆ. ರಿಫಿಲ್ ತುಂಬುದು, ಇಂಕ್ ಕಾಲಿಯಾಗಿದೆಯೋ ಇಲ್ಲವೋ ಎಂದು ನೋಡಲು ಪೆನ್ನು ಬಿಚ್ಚುವುದು. ಸ್ಪ್ರಿಂಗ್ ಹಾಕುವುದು. ಬಿಚ್ಚಿದಾಗ ಸ್ಪ್ರಿಂಗ್ ಕೈ ತಪ್ಪಿ ನೆಗೆಯುವುದು. ಬಟನ್ ಪೆನ್ನುಗಳನ್ನು ಹಾಗೆ ಹೀಗೆ ಒತ್ತುವುದು. ಟಕ್ ಟಕ್ ಶಬ್ಧ ಮಾಡುವುದು. ವೇಗವಾಗಿ ಬರೆಯಲು ರಿಪಿಲ್ ಪೆನ್ನುಗಳೇ ಬೇಸ್ಟ್ ಎಂದು ಮಾತನಾಡಿಕೊಳ್ಳುವುದು. ಕ್ಯಾಪ್ ಪೆನ್ನುಗಳ ರಾಜಾ ರೇನಾಲ್ಡ್ಸ್. ಎಕ್ಸಾಮ್ ಮೊದಲು ಹೊಸ ಪೆನ್ನು ಖರೀದಿ ಮಾಡುವುದು. ಅಷ್ಟರ ಮಟ್ಟಿಗೆ ಶಿಕ್ಷಣ ಪಡೆದವರೆಲ್ಲಾ ಇದರ ಓಡನಾಟದಲ್ಲಿ ಮಿಂದು ಎದ್ದಿರುವವರೆ.

ಓದು ಅಂದರೇ, ಬರವಣಿಗೆ ಎನ್ನುವುದು ಬಿಡಿಸಲಾರದ ಭಾಂದವ್ಯ. ಬರೆದುದು ಕೊನೆತನಕ. ಹೆಚ್ಚು ಓದುವುದು ಎಂದರೇ, ಹೆಚ್ಚು ಬರೆಯುವುದು. ಇದು ಅಂದಿನ ನಮ್ಮ ಗುರುಗಳ ಹೇಳಿಕೆ.

ನೋಟ್ಸ್ ಬರೆಯದೇ ಯಾರು ತಮ್ಮ ಶಿಕ್ಷಣ ಪೊರೈಸಿಲ್ಲಾ ಎಂದರೇ ತಪ್ಪಿಲ್ಲ.

ನಮ್ಮ ಬರವಣಿಗೆಯೇ ಕೊನೆ ಎಂದರೇ ನಮ್ಮ ಬಿ.ಎ, ಬಿ.ಈ ಅನಿಸುತ್ತದೆ. ಮತ್ತೆ ನಮ್ಮ ಜೇಬುಗಳು ಈ ಪೆನ್ನುಗಳನ್ನು ಕಂಡೇ ಇಲ್ಲ. ಪೆನ್ನಿನ ಅವಶ್ಯಕತೆಯೇ ಇಲ್ಲ ಎನ್ನುವ ಮಟ್ಟಿಗೆ ಅವುಗಳ ಬಳಕೆಯನ್ನು ಕಮ್ಮಿ ಮಾಡಿಕೊಂಡಿದ್ದೇವೆ. ಬರೆಯುವುದೇ ಮರೆತು ಹೋಗಿದೆ ಎನ್ನುವ ಮಟ್ಟಿಗೆ ಪೂರ್ತಿ ನಿಲ್ಲಿಸಿದ್ದೇವೆ.

ನಾವೆಲ್ಲಾ ಅಲ್ಲಿ ಇಲ್ಲಿ ಕೆಲಸ ದುಡಿತ ಎಂದು ತೊಡಗಿಕೊಂಡಿದ್ದೇವೆ. ಆದರೆ ಬರೆಯುವ ಜರೂರತು ಎಲ್ಲೂ ಇಲ್ಲ. ಕಂಪ್ಯೂಟರ್, ಲ್ಯಾಪ್ ಟಾಪ್, ಮೊಬೈಲ್, ಟ್ಯಾಬ್ ಎಂಬ ಹತ್ತು ಹಲವು ಡಿಜಿಟಲ್ ಕೊಡುಗೆಗಳಲ್ಲಿ ನಮ್ಮ ಬರೆಯುವ ಕಲೆಯನ್ನು ನಿಲ್ಲಿಸಿಕೊಂಡುಬಿಟ್ಟಿದ್ದೇವೆ.

ಪೆನ್ನು ಪೇಪರ್ ಯಾವುದಕ್ಕೂ ಬೇಕಿಲ್ಲ. ಡಿಜಿಟಲ್ ಸ್ಕ್ರೀನ್ ಮೇಲೆ ಡಿಜಿಟಲ್ ಪೆನ್ನಿನಲ್ಲಿ ಸಹಿ ಮಾಡುವುದರ ಮಟ್ಟಿಗೆ ಬಂದು ನಿಂತಿದೆ.

ಹಿಂದೆ ಬ್ಯಾಂಕ್ ನಲ್ಲಿ ವ್ಯವಹಾರ ಮಾಡಬೇಕು ಎಂದರೇ ಪೆನ್ನು ಇಟ್ಟುಕೊಂಡು ಬ್ಯಾಂಕ್ ನೊಳಗೆ ಕಾಲು ಇಡಬೇಕಾಗಿತ್ತು. ಇಲ್ಲ ಅಂದರೇ ಹಣ ಪಡೆಯುವ ಮಾರ್ಗವೇ ಬಂದ್! ಇಂದು ನೋಡಿ ಎಲ್ಲಿ ಬೇಕಂದರೇ ಅಲ್ಲಿ ಹಣ ಪಡೆಯಬಹುದು ಅಥವಾ ಹಣವನ್ನು ಬ್ಯಾಂಕಿಗೆ ಜಮಾ ಮಾಡಬಹುದು. ಅದು ಯಾವುದೇ ಚಲನ್, ರಸೀದಿ ಸಹಿ ಏನೊಂದು ಭರ್ತಿ ಮಾಡದೇ.

ಹಳ್ಳಿಯಿಂದ ದಿಲ್ಲಿಯವರೆಗೂ ಪ್ರತಿಯೊಂದು ಡಿಜಿಟಲ್ ಮಯವಾಗಿದೆ. ಇಂದು ಯಾವುದೇ ದಪ್ಪ ದಪ್ಪ ಪುಸ್ತಕಗಳನ್ನು ಯಾವುದೇ ಕಛೇರಿಯಲ್ಲಿ ಪೋಷಿಸಿಕೊಳ್ಳಬೇಕಿಲ್ಲ. ಒಂದು ಚಿಕ್ಕ ಕಂಪ್ಯೂಟರ್ ಪರದೆಯೊಳಗೆ ಅಗಾಧವಾದ ಅಂಶಗಳನ್ನು ರಹಸ್ಯಗಳನ್ನು ಕಾಪಾಡಿಕೊಳ್ಳಬಹುದಾಗಿದೆ.

ಅಂಚೆ. ಅಂಚೆ ಕಾಗದಗಳ ಬಳಕೆ ನಿಂತು ಯಾವುದೋ ಕಾಲವಾಯಿತು.ನಾನು ನನ್ನ ಹತ್ತನೇಯ ತರಗತಿಯ ಪರೀಕ್ಷೆಯಲ್ಲಿ ಪತ್ರ ಬರೆದ ನೆನಪು. ಅನಂತರ ಅದರ ಬಳಕೆಯ ಜರೂರತೆಯೇ ಬಂದಿಲ್ಲ. ದೂರದ ಮಾಮನ ಕಾಗದಕ್ಕೆ ಕಾಯಬೇಕಿಲ್ಲ. ಇಂದು ಒಂದೇ ಕ್ಷಣದಲ್ಲಿ ಒಂದೇ ಕಾಲಿನಲ್ಲಿ ಎಲ್ಲಾ ವಿಚಾರಿಸಿಕೊಳ್ಳಬಹುದಾಗಿದೆ. ಅದು ವಿಡಿಯೋ ಮೊಲಕ ಡೈರಕ್ಟ್ ವಾಕಿ ಟಾಕಿ.

ಇಲ್ಲಿಗೆ ಬಂದು ನಿಂತಿದೆ ನಮ್ಮ ಸಂಹವನ.

ನಾನು ಬರೆದಿರುವ ಮೇಲಿನ ಪ್ರತಿಯೊಂದು ಅಕ್ಷರಗಳು ಲ್ಯಾಪ್ ಟಾಪ್ ಕೀಲಿ ಮಣಿಗಳಲ್ಲಿ ಕುಟ್ಟಿರುವುದು. ಪೆನ್ನು ಪೇಪರ್ ಯಾವುದೊಂದು ಇಲ್ಲದೇ ಬರೆದು ವೇಬ್ ಪೇಜ್ ಗೆ ಅಪಲೋಡ್ ಮಾಡಿದ ಲೇಖನ ಇದು.

ನಂಬಲು ತುಂಬ ಕಷ್ಟ ಆದರೇ ಇದೆ ನಿಜ.

ಅಷ್ಟರ ಮಟ್ಟಿಗೆ ಕಾಗದ ಕಾಗದವೆಂದು ಮರಗಿಡಗಳನ್ನು ಉಳಿಯಿಸಿದ್ದೀವಿ.

ಆದರೇ ಕೈಯಾರೇ ಪೆನ್ನಿನಲ್ಲಿ ಬಿಳಿ ಕಾಗದದ ಹಾಳೆಯ ಮೇಲೆ ಬರೆಯುವ ಸುಖ ಈ ಮೊಬೈಲ್, ಟ್ಯಾಬ್ ಗಳಲ್ಲಿ ಬರೆಯುವುದರಲ್ಲಿ ಸಿಗುವುದಿಲ್ಲ ಬಿಡಿ.

ಆದರೇ ಕಾಲ ಬದಲಾಗಿದೆ. ಅದಕ್ಕೆ ತಕ್ಕ ರೀತಿಯಲ್ಲಿ ತಾಂತ್ರಿಕತೆಯನ್ನು ಬಳಸಬೇಕಾಗಿದೆ. ವೇಗ ಅಂದರೇ ಇದೆ ಅನಿಸುತ್ತದೆ.

ಇಂದು ಹುಟ್ಟಿದ ಮಕ್ಕಳಿಗೂ ಅಕ್ಷರಗಳ ಓ ನಾಮವನ್ನು ಬಳಪಗಳಿಲ್ಲದೇ ಹೇಳಿಕೊಡಬಹುದಾಗಿದೆ. ಮಗ್ಗಿ ಪುಸ್ತಕಗಳಲ್ಲಿ ಕಲಿಯುತ್ತಿದ್ದ ಎಷ್ಟೊಂದು ಪ್ರಥಮ ಪಾಠಗಳನ್ನು ಯುಟೂಬ್ ನ ರೈಮ್ಸ್ ವಿಡೀಯೋಗಳಲ್ಲಿ ಹಿರಿಯರ ಸಹಾಯವಿಲ್ಲದೇ ಇಂದಿನ ಮಕ್ಕಳು ತಾವೇ ಕಲಿಯಯುತ್ತಿದ್ದಾವೆ.

ಹೀಗೆ ಮುಂದುವರಿದರೇ ಬರೆಯುವ ಕಲೆಯೇ ಇಲ್ಲದಂತಾಗಿ ಕೇವಲ ಸ್ಪರ್ಶ, ಟಚ್ , ಟೈಫ್ ಮಾಡುವುದರಲ್ಲಿ ನಿಪುಣರಾಗುವವರು ನಮ್ಮ ಮುಂದಿನ ಪೀಳಿಗೆ.  ಬರವಣಿಗೆ ಎಂದರೇ ಮೆಸೇಜ್ ಬರೆಯುವುದು. ಪ್ರಬಂಧವೆಂದರೇ ಪೇಸ್ ಬುಕ್ ವಾಲ್ ನಲ್ಲಿ ಕಾಮೆಂಟ್ ಹಾಕುವುದು ಎನ್ನುವಾಂತಾಗದಿರಲಿ ಎಂಬುದೇ ಎಲ್ಲಾರ ಹಂಬಲ.

ಏನೇ ವೇಗವಾದ ಡಿಜಿಟಲ್ ಯುಗವಿದ್ದರು, ಅದೇ ಹಳೆಯ ಕಾಲದಲ್ಲಿದ್ದ ಪೇಪರ್, ಪುಸ್ತಕಗಳು, ಪತ್ರಿಕೆಗಳನ್ನು ಕೈಯಲ್ಲಿ ಹಿಡಿದುಕೊಂಡು ಹತ್ತಿರದಿಂದ ಓದುವ ಸುಖವನ್ನು ಯಾವ ಕಾಲಕ್ಕೂ ಯಾರು ನೀಡಲಾರರು. ಇಂದಿಗೂ ಜಗತ್ತಿನಲ್ಲಿ ಅತಿ ಹೆಚ್ಚಾಗಿ ಪ್ರತಿಯೊಬ್ಬರೂ ಇಷ್ಟಪಡುವುದು ಪ್ರಿಂಟೆಡ್ ಪುಸ್ತಕ ಮತ್ತು ಪತ್ರಿಕೆಗಳನ್ನೇ. ಇವುಗಳೇ ಜನಸಾಮಾನ್ಯರಿಗೆ ಎಲ್ಲಾ ಕಾಲಕ್ಕೂ ತೀರಾ ಹತ್ತಿರ ಮತ್ತು ಶಾಶ್ವತ.

ಬುಧವಾರ, ಅಕ್ಟೋಬರ್ 12, 2016

ಮನಸ್ಸು ಅವಳು ಊರು ನೆನಪು

ಅವತ್ತೇ ಅನಿಸಿತ್ತು ಇಷ್ಟು ಚೂಸಿಯಾಗಿ ಸಿಕ್ಕಿದ ಪ್ರೀತಿ ಕೊನೆಯವರೆಗೂ ಇರುವುದಾ? ಇದು ಯಾಕಾದರೂ ನನ್ನ ಮನಸ್ಸಿನಲ್ಲಿ ಅಂದು ಹಾಗೆ ಪಾಸ್ ಆಯಿತೋ? ಗೂತ್ತಿಲ್ಲ. ಸಿಕ್ತ್ ಸೇನ್ಸ್ ಎಂಬುದು ಒಮ್ಮೊಮ್ಮೆ ಹೀಗೆ ಕೆಲಸ ಮಾಡುತ್ತದೆ.

ಆದರೇ ಕಳೆದ ನಾಲ್ಕುವರೆ ವರುಷಗಳ ನೆನಪು ಇನ್ನು ಇಂದಿಗೂ ಹಸಿಯಾಗಿದೆ. ಅಂದು ಎಲ್ಲವೂ ಸುಂದರ. ಪ್ರತಿ ಘಳಿಗೆಯು ಏನೋ ಹೊಸತನ. ಅವಳೊಬ್ಬಳು ಜೊತೆ ಇದ್ದರೇ ಏನೂ ಬೇಕಾದರೂ ಜಯಿಸುವೆನು ಎಂಬ ದೈರ್ಯ.ಮುಂಜಾನೆಯ ಸೂರ್ಯನ ಕಿರಣಗಳನ್ನು ಕಾಣುವಂತಾ ಮನಸ್ಸು. ಯಾವಾಗ ಬೆಳಕಾಗುವುದೋ..  ಬೆಳ್ಳಂ ಬೆಳಗ್ಗೆಯಲ್ಲಿ ಯಾವಾಗ ನಮ್ಮೂರಿನ ಬಸ್ ನ ಮೊದಲ ಹಾರ್ನ್ ಕಿವಿಗೆ ಬೀಳುವುದೋ. ನಾನು ಕಾಲೇಜು ಎಂದುಕೊಂಡು.. ಎದ್ದು, ಬಿದ್ದು ಸಿದ್ಧವಾಗುವುದು.

ನಾನು ಪ್ರತಿದಿನ ಸೂರ್ಯ ಹುಟ್ಟುವುದಕ್ಕೂ ಮೊದಲು ಕಾಲೇಜಿಗೆ ಸಿದ್ಧವಾಗುತ್ತಿದ್ದ ರಭಸಕ್ಕೆ ಅಮ್ಮನೇ ದಂಗಾಗಿದ್ದಳು.

ಏನ್ ಮಗಾ ಎಷ್ಟು ಕಟ್ಟುನಿಟ್ಟಾಗಿ ಓದಿನ ಬಗ್ಗೆ ಪ್ರೀತಿ ಇಟ್ಟುಕೊಂಡಿದೆ. ಬಿಡು ಮುಂದೊಂದು ದಿನ ಊರಿಗೆ ದೊಡ್ಡ ಅಧಿಕಾರಿಯಾಗಿ ಬಂದೇ ಬರುತ್ತಾನೆ. ಎಂದು ಮನದಲ್ಲಿಯೇ ಸಂತಸಪಟ್ಟಿದ್ದಳು ಅನಿಸುತ್ತದೆ.

ಬೇಡವೆಂದರೂ ರಾತ್ರಿ ಉಳಿಸಿದ ಹಾಲನ್ನು ಬಿಸಿ ಮಾಡಿ ಕಾಫಿ ಪೌಡರ ಮಿಕ್ಸ್ ಮಾಡಿ ನನಗೆ ಎಂದೇ ಕಾಫಿ ಮಾಡಿಕೊಡುತ್ತಿದ್ದುದು. ಎಲ್ಲೋ ಉಳಿಸಿ, ಹಾಗೆಯೇ ಮಡಿಸಿದ ಒದ್ದೆ ಒದ್ದೆಯ ಹತ್ತರ ಎರಡು ನೋಟುಗಳನ್ನು ನನ್ನ ಎದೆ ಮೇಲಿನ ಜೋಬಿಗೆ ನಿತ್ಯ ಇಡುತ್ತಿದ್ದುದು.

ಅದು ತಾಯಿ ಪ್ರೀತಿ! ಈ ಪ್ರೀತಿ ಒಂದೇ ನಾನು ಈಗಲೂ ಜೀವಂತವಾಗಿ ಇರುವಂತೆ ಮಾಡಿರುವುದು.

ಅಂದು ಇದನ್ನು ಅರ್ಥ ಮಾಡಿಕೊಳ್ಳುವ ವಯಸ್ಸು ನನ್ನದಾಗಿರಲಿಲ್ಲ.

ಬಸ್ ನಲ್ಲಿ ಕುಳಿತರೂ ವರುಷವಾದಂತೆ. ಯಾವಾಗ ಈ ಡ್ರೈವರ್ ಬರುವನೋ? ಯಾವಾಗ ಹೊರಡುವನೋ? ಎಂದು ಪೂರ್ತಿ ಸಿಟ್ಟಲ್ಲಿ ಕಿಟಕಿಯಾಚೆ ನಿಂತು ಟೀ ಕುಡಿಯುತ್ತಿರುವವನ್ನು ಮನದಲ್ಲಿಯೇ ಶಪಿಸುತ್ತಿದ್ದೆ.

ಮುಂಜಾನೆಯ ಸಮಯ ಓದುವುದಕ್ಕೆ ಹೇಳಿ ಮಾಡಿಸಿದ ಸಮಯವಂತೆ. ಆಗ ಏನೂ ನೆನಪು ಮಾಡಿಕೊಂಡರು, ಓದಿದರೂ ಮನಸ್ಸಲ್ಲಿ ಶಾಶ್ವತವಾಗಿ ನೆಲೆ ನಿಲ್ಲುವುದಂತೆ. ಆದರೇ ಆ ಸಮಯದಲ್ಲಿ ಅವಳ ನೆನಪಲ್ಲದೇ ಇನ್ನು ಏನೂ ಮನದಲ್ಲಿರಲಿಲ್ಲ. ಆದಕ್ಕೆ ಇರಬೇಕು ಈಗಲೂ ಅವಳ ಪ್ರತಿ ಚಲನೆಯು ಹಾಗೆಯೇ ಪ್ರತಿಭಾರಿ ಮೈ ಮನ ತಟ್ಟುತ್ತದೆ.

ಬಸ್ ಸ್ವಲ್ಪ ಸ್ವಲ್ಪ ಸೌಂಡ ಮಾಡಿಕೊಳ್ಳುತ್ತಾ ಹಳ್ಳವನ್ನು ಶಕ್ತಿಯಿಲ್ಲದ ಹುಡುಗನಂತೆ ಉಸಿರು ಬಿಗಿ ಇಟ್ಟುಕೊಂಡು ಏರುತ್ತಿದ್ದರೇ.. ಆ ದಡದ ಮೇಲಿರುವ ನನ್ನ ಹುಡುಗಿಯ ಊರಿನ ಒಂದೊಂದೇ ನೋಟ ಕಂಡು ಎದೆಯ ಬಡಿತ ಏರುತ್ತಿತ್ತು. ಅವಳು ಬಂದಿರುತ್ತಾಳೆ. ಅವಳಿಗೂ ನನ್ನ ಕಾತರ ಇದ್ದೇ ಇರುತ್ತದೆ. ಎಂದುಕೊಂಡು ನಿತ್ಯ ಖುಷಿಯಾಗುತ್ತಿದ್ದೆ.

ಇಂದು ರಾತ್ರಿಯೇ ಮೇಸೆಜ್ ಮಾಡಿದ್ದಳು. ಯಾಕೋ ಕಣೋ ನಿನ್ನ ಹೆಚ್ಚು ಮಿಸ್ ಮಾಡಿಕೊಂಡಂಗೇ ಆಗ್ತಾ ಇದೆ. ನಾಳೆ ನಿನ್ನ ಇಷ್ಟದ ಚೋಡಿದಾರ ಹಾಕಿಕೊಂಡು ಬರುತ್ತೇನೆ.. ಅಂದಿದ್ದಳು. ನಾನು ಲವ್ ಯು ಎಂದು ಹಾಗೆಯೇ ನಿದ್ದೆಗೆ ಜಾರಿದ್ದೆ.

ಬಸ್ ಅಂತೂ ಎಡಕ್ಕೆ ತಿರುಗಿ ಅಲ್ಲಿಯೇ ಬಂದ ಬಸ್ ಸ್ಟಾಪ್ ನಲ್ಲಿ ನಿಂತಿತು.

ಕಣ್ಣರಳಿಸಿ ಮುಂದಿನ ಬಾಗಿಲನ್ನೂ ನೋಡಿದ್ದೇ ಬಂತು.

ಇಲ್ಲಿ ಬಸ್ ಸ್ವಲ್ಪ ಹೊತ್ತು ನಿಲ್ಲುವುದು ಮಾಮೂಲು. ಯಾಕೆಂದರೇ ಇದು ಮೊದಲನೇಯ ಊರು. ಇಲ್ಲಿಯು ಪುನಃ ಪ್ರತಿಯೊಬ್ಬರೂ ಟೀ-ತಿಂಡಿ ಸೇವಿಸುತ್ತಾರೆ. ಅದು ಇದು ಎಂದು  ಸಣ್ಣ ಕುಶೋಲಹಪರಿ ಪರಸ್ಪರ ನಡೆಯುತ್ತದೆ. ಮೂರು ಊರುಗಳಿಗೂ ಇದು ಒಂದೇ ಬಸ್ ಸ್ಟಾಪ್. ಜನಗಳು ಅಕ್ಕಪಕ್ಕದ ಎರಡು ಊರುಗಳಿಂದಲೂ ಮುಂಜಾನೆಯೇ ನಡೆದುಕೊಂಡು ಬರುತ್ತಾರೆ. ಪಾಪ ಬರಲಿ ಜನ. ಏನೂ ಐದು ಹತ್ತು ನಿಮಿಷ ಲೇಟ್ ಆದ್ರೆ ಪರವಾಗಿಲ್ಲ. ಚಿಹಳ್ಳಿಯಿಂದ ಚಚ್ಚಿದಾರಯಿತು ಎಂಬ ಕರುಣೆ ಈ ಬಸ್ಸಿನ ಡ್ರೈವರ್ ನದು.

ಆದರೇ ನನ್ನ ಹುಡುಗಿಯ ಸುಳಿವೇ ಇಲ್ಲ..!

ಏನೇ ಲೇಟ್ ಎಂದರೂ ಐದು ನಿಮಿಷಕ್ಕೂ ಜಾಸ್ತಿ ಲೇಟ್ ಮಾಡಿಲ್ಲ ಯಾವತ್ತು.

ಏನಾಗಿರಬಹುದು? ಮೇಸೆಜ್ ಮಾಡಲಾ.. ಕಾಲ್ ಮಾಡಲಾ ಎಂಬ ಕನಪ್ಯೂಸನ್ ನಲ್ಲಿ ಚಟಪಟಿಸಿದೆ.

ಹಿಂದಿನ ಸೀಟ್, ಮುಂದಿನ ಸೀಟ್ ನಲ್ಲಿ ನಮ್ಮ ಊರಿನವರ ದಂಡೇ ದಂಡು. ಸ್ವಲ್ಪ ಸಂಕೋಚ, ಹೆಚ್ಚು ಢವಢವ ಎದೆಯ ಬಡಿತದಲ್ಲಿ ಅವಳ ಮನೆಯಿರುವ ದಾರಿಯ ಕಡೆಗೆ ಬಲ ಬದಿಯ ಕಿಟಿಕಿಯಿಂದ ಹಾಗೆಯೇ ಕಣ್ಣು ಹಾಯಿಸಿದೆ.

ನೋ!  ಅವಳ ಸಪ್ಪಳವೇ ಇಲ್ಲ.

ಆಗಲೇ ಕಂಡಕ್ಟರ್ ರೈಟ್ -ರೈಟ್ ಹೇಳುತ್ತಿದ್ದಾನೆ... ಕಾಲ್ ಮಾಡಲು ಧೈರ್ಯ ಬರದೇ ಮೇಸೆಜ್ ಕುಟ್ಟಿದೆ.  ಮೇಸೆಜ್ ಸೆಂಡ್ ಆಗಿದ್ದು ಕನಪರ್ಮ್ ಮಾಡಿಕೊಂಡೆ ಹ್ಯಾಪು ಮೊರೆ ಮಾಡಿಕೊಂಡೆ.

ಬಸ್ ಹಾಗೆಯೇ ಬಲಕ್ಕೆ ಒರಳಿತು. ಜಾಲಿ ಮುಳ್ಳುಗಳಿರುವ ಸೆರಗಿನಲ್ಲಿ ತಿರುಗಿ ಮುಂದಿನ ಹಳ್ಳದೊಳಕ್ಕೆ ಇಳಿಯಲಾರಂಬಿಸಿತು. ದಾರಿ ದೂರವಾಯಿತು, ಅವಳು ಇನ್ನು ಹತ್ತಿರವಾದಳು.

ಪುನಃ ಆಸೆಯ ಕಣ್ಣಿನಿಂದ ಜನ ಜಂಗುಳಿಯ ಮಧ್ಯದಲ್ಲಿ ಪುನಃ ಹಿಂದಿನ ಬಸ್ ಗ್ಲಾಸ್ ನಲ್ಲಿ ಕಾಣದ ದಾರಿಯ ಕಡೆ ಬಿಟ್ಟ ಕಣ್ಣಲ್ಲಿ ನೋಡಿದೆ. ಹಿಂದಿನ ಸೀಟನಲ್ಲಿದ್ದ ದೊಡ್ಡ ಮೀಸೆಯ ಈರಜ್ಜ ಬೊಚ್ಚು ಬಾಯಲ್ಲಿ ನಕ್ಕಿದ್ದು ಮಾತ್ರ ಲಕ್ಷಣವಾಗಿ ಕಾಣಿಸಿತು.

ಮನದಲ್ಲಿ ತಳಮಳ. ಮುಂದಿನ ಸ್ಟಾಪ್ ನಲ್ಲಿ ಹಿಳಿದು ಹೋಗವುದೇ ಎಂದು ಒಂದು ಮನಸ್ಸು ಕೇಳಿದರೇ.. ಇನ್ನೊಂದು ಮನಸ್ಸು ಈರಜ್ಜ ನ ನಗುವನ್ನು ನೆನಪಿಸಿ ಸುಮ್ಮನಿರು ಎಂದಿತು.

ಈ ಹುಡುಗಿಯರೇ ಹೀಗೆ ಅನಿಸುತ್ತದೆ. ಯಾವಾಗಲೂ ಹತ್ತಿರವೇ ಇರುತ್ತೇವೆ ಅನ್ನುತ್ತಾರೆ. ನೀನೇ ನನ್ನ ಜೀವ ಅನ್ನುತ್ತಾರೆ. ಮೀಸ್ ಮಾಡಿಕೊಳ್ಳುತ್ತಿದ್ದೇನೆ ಅನ್ನುತ್ತಾರೆ. ನೀನು ಬೇಕು ಅನ್ನುತ್ತಾರೆ. ಆದರೇ ಈ ರೀತಿ ಹೇಳದೆ ಕೇಳದೇ ಕೈ ಕೊಡುತ್ತಾರೆ.

ಹುಡುಗಿಯರಿಗೆ ಏನೂ ಗೊತ್ತು ಗಂಡಸರ ದುಃಖ?

ಪುನಃ ಪುನಃ ಮೊಬೈಲ್ ಕಡೆ ಬಗ್ಗಿ ಬಗ್ಗಿ ನೋಡಿದ್ದೆ ಬಂತು.

ನೂ ರಿಪ್ಲೇ...!

ಎಷ್ಟು ಹೊತ್ತಿಗೆ ಕಾಲೇಜು ತಲುಪುವೇನೋ ಅನ್ನಿಸಿತು. ಈ ಬಸ್ , ಈ ರೋಡ್ ದೇವರಿಗೆ ಪ್ರೀತಿ ಅನಿಸಿತು. ಯಾಕೋ ಮುಂಜಾನೆಯ ಆಹ್ಲಾದತೆಯೇ ಇಲ್ಲವೇನಿಸಿತು. ಸೂರ್ಯ ಮಂಕಾಗಿದ್ದಾನೆ ಅನಿಸಿತು.

ಪುರದಲ್ಲಿ ಬಸ್ಸು ನಿಂತಾಗ ಒಂದು ಚಿಕ್ಕ ಹರಕೆಯನ್ನು ಲಕ್ಷ್ಮಿ ನರಸಿಂಹಸ್ವಾಮಿಯಲ್ಲಿ ಹೊತ್ತುಕೊಂಡೆ. ಕಾಲೇಜು ತಲುಪುವುದರಲ್ಲಿ ನನ್ನವಳ ಮೇಸೆಜ್ ಬರಲಿ. ನಾನು ಮುಂದಿನ ಶನಿವಾರ ಅವಳ ಜೊತೆಯಲ್ಲಿ ನಿನ್ನ ದರುಶನ ಮಾಡೇ ಮಾಡುವೆನೆಂದು!

ಕಾಲೇಜು ಅಂದರೇ ಕಾಲೇಜೇ. ಅಲ್ಲಿ ಎಂದೂ ಮರೆಯಲಾರದ ಕ್ಷಣಗಳಿರುತ್ತವೆ. ಗೆಳೆಯ ಗೆಳತಿಯರ ಜೊತೆಯಲ್ಲಿ ಕೊಡಿ ಕಲಿಯುವ ಪರಿಸರವಿರುತ್ತದೆ. ನಾವುಗಳು ನಮ್ಮನ್ನು ಅತ್ಯುತ್ತಮರನ್ನಾಗಿ ಮಾಡಿಕೊಳ್ಳುವ ಅವಕಾಶವಿರುತ್ತದೆ. ಕಲಿಯುವುದಕ್ಕೆ ವಿಫುಲವಾದ ವಾತವರಣವಿರುತ್ತದೆ. ಇಂಥ ಸರಸ್ವತಿಯ ನೆಲೆಯಾದ ಕಾಲೇಜಿಗೆ ನಿತ್ಯ ನಮಸ್ಕಾರ ಮಾಡಿ ಹೆಜ್ಜೆ ಇಡಬೇಕು.

ಪ್ರತಿಯೊಬ್ಬರ ಬದುಕಿಗೆ ಹೊಸ ಮಾರ್ಗ ತೋರುವ ನೆಲೆಬೀಡು ನಮ್ಮ ಶಿಕ್ಷಣ ಸಂಸ್ಥೆಗಳು.

ಮನವಿಲ್ಲದ ಮನಸ್ಸಿನಲ್ಲಿ ಬಸ್ಸನಿಂದ ಇಳಿದು ಮೊದಲು ಮಾಡಿದ್ದು ೯೮೦೪೨೦೩೨೦೧ ನಂಬರ್ ಗೆ ಕಾಲು. ಕಾಲ್ ಕನಕ್ಟ್ ಆಗುವುದಕ್ಕೂ ತಾತ್ಸರ ಮಾಡುತ್ತಿದೆ ಇಂದು. ಇದು ಹೀಗೆ ಕಷ್ಟ ಕಾಲದಲ್ಲಿಯೇ ಆಳಿಗೊಂದು ಕಲ್ಲು ಅನ್ನುವ ರೀತಿಯಲ್ಲಿ. ಒಂದು, ಎರಡು ರೀಂಗ್ ಆಗಲು ಶುರುವಾಯಿತು. ಎದೆಯಲ್ಲಿ ಢವಢವ ಬಡಿತ. ನಾಲ್ಕನೇ ರೀಂಗ್ ಗೆ ಕಾಲ್ ಪೀಕ್ ಆಯ್ತು. ಆದರೇ ದ್ವನಿ ತೀರ ಅಪರಿಚಿತವೇನಿಸಿತು. ದೂಸರಾ ಮಾತನಾಡದೇ ಕಾಲ್ ಕಟ್ ಮಾಡಿದೆ.

ಅಲ್ಲ ಏನಾಯ್ತು ಇವಳಿಗೆ? ನೆನ್ನೆ ಸರೀ ರಾತ್ರಿಯವರೆಗೂ ಟಚ್ ಲ್ಲಿ ಇದ್ದವಳಿಗೆ. ಬೆಳಕು ಹರಿಯುವುದರಲ್ಲಿ ಸುದ್ಧಿಯೇ ಇಲ್ಲ! ಮೊಬೈಲ್ ನ್ನು ಒಂದು ಕ್ಷಣ  ಬಿಟ್ಟಿರಲಾರದವಳು. ಹೀಗೆ ಮತ್ತೊಬ್ಬರೂ ರೀಸಿವ್ ಮಾಡುತ್ತಿದ್ದಾರೆ ಎಂದರೇ...? ಏನೂ ಅರ್ಥವಾಗಲಿಲ್ಲ.

ಯಾಕೋ ತಣ್ಣಗೆ ಮನಸ್ಸಿಗೆ ಶಾಕ್ ಆಯಿತು.  ಭಾರವಾದ ಹೆಜ್ಜೆಯನ್ನು ಹಾಕಿಕೊಂಡು ಕಾಲೇಜು ಮೆಟ್ಟಿಲನ್ನು ಹತ್ತುತ್ತಿದ್ದಂತೆ ಸುಭಾಷ್ ಸಿಕ್ಕಿದ. ಅವನು ಬಾರೋ ಕ್ಯಾಂಟಿನ್ ಗೆ ಹೋಗೋಣ ಇನ್ನು ೩೦ ನಿಮಿಷ ಇದೆ ಎಂದ. ಆದರೆ ನಾನು ಅದು ಕಿವಿಗೆ ಬಿಳಿಸಿಕೊಳ್ಳದ ರೀತಿಯಲ್ಲಿ ಇನ್ನೊಂದು ಸ್ಟೆಪ್ ಇಟ್ಟೆ. ಹಿಂದಿನಿಂದ ಸರಿಯಾಗಿ ಗುದ್ದಿದ.  ಆಗ ಎಚ್ಚರವಾದಂತಾಗಿ ಹಾಯ್ ಎಂದೇ.

ಪುನಃ ಅವನೇ ಹೇಳಿದ. ಸಾಯೇಬ್ರ್ ಮೂಡ್ ಯಾಕೋ ಸರಿ ಇಲ್ಲಾ!

ಗೊತ್ತಾಯಿತು ಬಿಡು. ನೀ ಒಂಟಿಯಾಗಿ ಬಂದಾಗಲೇ ಅಂದುಕೊಂಡೆ! ಯಾಕೋ ನಿನ್ನ ಹುಡುಗಿ ನಿನ್ನ ಜೋತೆ ಬರಲಿಲ್ಲವಾ? ಒಂದೇ ಮಾತಲ್ಲಿ ’ಇಲ್ಲಾ’ ಎಂದೇ. ಏಯ್ ಬಿಡು ಗುರು. ಏನೋ ಕೆಲಸ ಇರುತ್ತೇ ಅದಕ್ಕೆ ಬಂದಿಲ್ಲ.  ಇಷ್ಟು ಚಿಕ್ಕ ವಿಷಯಗಳಿಗೆಲ್ಲ ಹುಡುಗರು ಬೇಜಾರು ಮಾಡಿಕೊಳ್ಳಬಾರದು. ಹುಡುಗಿಯ ಒಂದು ಮೇಸೆಜು, ಒಂದು ಕಾಲ್ ಬರದಿದ್ದರು ಜಗತ್ತೇ ಮುಳುಗಿದ ರೀತಿಯಲ್ಲಿ ವರ್ತಿಸುತ್ತಿರಾ ಕಣ್ರೋ .. ಎಂದು ಚಿಕ್ಕ ವೇದಾಂತ ಹೇಳಿ - ಬಾ ಈಗ ಕ್ಯಾಂಟಿನಗೆ ಹೋಗೋಣ. ನನಗೆ ಸಿಕ್ಕಪಟ್ಟೆ ಹಸಿವು ಎಂದ.

ಆದರೇ ನನ್ನ ಮನಸ್ಸು ಇನ್ನೂ ಅವಳ ಊರುಬಿಟ್ಟು ಬಂದಿರಲಿಲ್ಲ... ಯಾವುದೋ ಕೆಟ್ಟ ಘಟನೆಗೆ ಮುನೂಚನೆಯೆಂಬಂತೆ.

ಬುಧವಾರ, ಸೆಪ್ಟೆಂಬರ್ 14, 2016

ಕಾವೇರಿ ನೀರು ಹಸನಾಗಿ ಹರಿದು ಅಳಿಸಲಿ

ಕಳೆದ ವಾರ ಕರಾಳ ದಿನಗಳನ್ನು ಬೆಂಗಳೂರು ಮತ್ತು ಕನ್ನಡ ನಾಡು ಕಂಡಿತು. ಅಕ್ಷರಶಃ ಬೆಂಗಳೂರು ದಗದಗಿಸಿ ಬೆಂಕಿಯಲ್ಲಿ ಉರಿದು ಹೋಯಿತು.  


ಕೋರ್ಟ ಆದೇಶದಂತೆ ನೀರನ್ನು ಕಳೆದುಕೊಂಡೆವು. ಆದರ ನೋವು ಇನ್ನು ಆರುವ ಮೊದಲೇ..ಬೆಂಗಳೂರು ಶಾಂತಿಯ ಉದ್ಯಾನ ನಗರಿ ಎಂಬ ಹೆಸರು ಕಳಚಿ ಬೀಳುವಂತೆ ಶಾಂತಿಯ ಹಸಿರು ವಾತವರಣವನ್ನೇ ಹೊಗೆಯಲ್ಲಿ ತೂರಿಬಿಟ್ಟೇವು.  


ಅಮಾಯಕ ಸಾಮಾನ್ಯ ಜನಗಳಿಗೆ ಭಯವೊಂದು ಬಿಟ್ಟು ಮತ್ತೇನೂ ತೋಚದಂತಾಗಿತ್ತು.  


ಕೆಲಸವೆಂದು ಮನೆಯಿಂದ ಹೊರಗಡೆ ಹೋದವರು ಸಂಜೆ ಯಾವುದೇ ಅಪಾಯವಿಲ್ಲದೇ ವಾಪಸ್ಸು ಬರುವರೋ ಇಲ್ಲವೋ ಎಂಬಂತೆ ಮನೆಯಲ್ಲಿದ್ದವರೆಲ್ಲಾ ತಳಮಳದಲ್ಲಿ ಬೆಂದು ಹೋಗಿದ್ದೇ ಬಂತು.  


ಮನುಷ್ಯನಷ್ಟು ಕೆಟ್ಟ ಪ್ರಾಣಿ ಮತ್ತೊಬ್ಬನಿಲ್ಲ! ಮನುಷ್ಯನತ್ವ ಎಂಬುದು ಎಲ್ಲಿದೇ? ಮನುಷ್ಯನ ನಾಗರೀಕತೆ ಬೆಳೆದಂತೆ ತನ್ನ ಸೂಕ್ಷ್ಮತೆಯನ್ನು ಮರೆಯುತ್ತಾನೆಂಬುದನ್ನು ಕೆಲವೇ ಕೆಲವು ದುಷ್ಟ ಜನಗಳಿಂದ ಪುನಃ ನಿರೂಪಿಸಿದಂತಾಗಿದೆ.  


ಹಿ0ದಿನಿಂದಲೂ ಮಾನವ ಪ್ರತಿಯೊಂದನ್ನು ಹೋರಾಟದಿಂದಲೇ ಗೆದ್ದುಕೊಂಡಿದ್ದಾನೆ. ಆಗಂಥಾ ಹಿಂಸೆಯ ಮಾರ್ಗವನ್ನು ಹಿಡಿದು ನಡೆಯುವುದು ಮನುಷ್ಯ ಮಾತ್ರರು ಮೆಚ್ಚುವ ದಾರಿಯಲ್ಲ!  


ಮುಂದುವರಿದ ಟೆಕ್ನಾಲಜಿ ನಮ್ಮ ಮನೋಭಾವನೆಯನ್ನು ವಿಸ್ತಾರ ಮಾಡಬೇಕು. ಆದರೇ ಯಾಕೋ ಸಂಕೋಚತತೆಗೆ ಒಡ್ಡಿಕೊಂಡು ಹೆಚ್ಚು ಹೆಚ್ಚು ಸಂಕೀರ್ಣನಾಗುತ್ತಿದ್ದೇವೆ.  


ಸಾಮಾಜಿಕ ತಾಣಗಳಲ್ಲಿ ಯಾರೋ ಏನೂ ಗೊತ್ತಿಲ್ಲದವನು ಏನೋ ಪೋಸ್ಟ್ ಮಾಡಿದ ಎಂದು ಕೊಂಡು ನಮ್ಮ ನಮ್ಮ ನಡುವೆಯೇ ಕೊಚ್ಚುವ ಕೊಲ್ಲುವ ಸಂಸ್ಕೃತಿಗೆ ಇಳಿಯುತ್ತಿರುವುದು ತುಂಬ ವಿಪರ್ಯಾಸ.  


ಯಾವುದಕ್ಕೆ ಮತ್ತು ಯಾರಿಗೆ ಮಹತ್ವವನ್ನು ಕೊಡಬೇಕು ಎಂಬುದನ್ನೇ ನಾವುಗಳು ಮರೆತುಬಿಟ್ಟಿದ್ದೇವೆ. ಯಾವುದು ಮುಖ್ಯ ಯಾವುದು ಅಮುಖ್ಯ ಎಂಬ ಪರಾಂಶೆ ಮಾಡುವುದನ್ನೇ ಬಿಟ್ಟುಬಿಟ್ಟಿದ್ದೆವೆ.
 


ಹೆಚ್ಚು ಲೈಕ್ ಆಗಿದ್ದೆಲ್ಲಾ ಸತ್ಯವಾದದ್ದು. ಹೆಚ್ಚು ಹೆಚ್ಚು ಶೇರ್ ಆಗಿದ್ದೇ ನಿಜವಾದ ಘಟನೆ ಎಂದುಕೊಂಡುಬಿಟ್ಟಿದ್ದೇವೆ. ವೇಗವಾಗಿ ರೀಯಾಕ್ಟ್ ಮಾಡುತ್ತಿರುವುದೇ ನಮ್ಮ ಜೀವಂತಿಕೆಯಾಗಿದೆ. ಟೋಟಲಿ ನಮ್ಮತನವನ್ನೇ ನಾವು ಮರೆಯುತ್ತಿದ್ದೇವೆ.  


ಸರ್ಕಾರವೇ ಎಲ್ಲದಕ್ಕೂ ಹೊಣೆ. ಎಲ್ಲದಕ್ಕೂ ಸರ್ಕಾರವೇ ಕಾರಣ. ಈ ರೀತಿಯ ಚಿಂತನೆ ಮುಖ್ಯ ಮಾಡುತ್ತಿರುವುದು ಮತ್ತು ರಾಜಕೀಯವಾಗಿ ಪ್ರತಿಯೊಬ್ಬರೂ ಚಿಂತಿಸುತ್ತಿರುವುದು. ಲಾಭ ನಷ್ಟಗಳ ಮೆಲಾಟದಲ್ಲಿ ಮನುಷ್ಯತ್ವವನ್ನೇ ಗಾಳಿಗೆ ತೂರುತ್ತಿದ್ದೇವೆ.  


ಒಕ್ಕೊಟಗಳ ಭಾರತದಲ್ಲಿ ರಾಜ್ಯ ರಾಜ್ಯಗಳ ನಡುವೆ ಗಡಿಗಳನ್ನು ನಿರ್ಮಿಸಿಕೊಂಡು ವೈರತ್ವವನ್ನು ಸಾಧಿಸಲು ಹೊರಡುತ್ತಿರುವುದು ದೊಡ್ಡ ವಿಪರ್ಯಾಸ!  


ಭಾಷೆ, ಬಣ್ಣ, ರಾಜ್ಯ, ನೆಲ, ಜಲ ಈ ಎಲ್ಲಾದಕ್ಕೂ ಮಿಗಿಲಾದದ್ದು ಮನುಷ್ಯತ್ವ ಮತ್ತು ಒಳ್ಳೆತನ ಎಂಬುದನ್ನು ಮರೆತಿರುವುದು. ನಾವುಗಳು ಅರಿತವರು ಎಂದು ಹೇಳಿಕೊಳ್ಳುವುದಕ್ಕೇ ನಾಚಿಕೆಯಾಗುತ್ತದೆ.  


ಎರಡು ರಾಜ್ಯದ ನಾಯಕರುಗಳು ಕುಳಿತು ಬಗೆಹರಿಸಿಕೊಳ್ಳಬಹುದಾದಂತಹ ಸಮಸ್ಯೆಗಳನ್ನು ಎರಡು ರಾಜ್ಯದ ಜನಗಳು ಹೇಗೆ ನ್ಯಾಯ ಒದಗಿಸಬಲ್ಲರು?  


ಇಂಥ ಸಮಯಗಳಲ್ಲಿ ಮೊದಲು ಜನಗಳಿಗೆ ಸರ್ಕಾರದ ನಾಯಕರುಗಳಿಂದ ಸ್ಪಷ್ಟ ಸಂದೇಶ ರವಾನೆಯಾಗಬೇಕು. ಸರ್ಕಾರವೇ ಜನರಗಿಂತ ವೇಗವಾಗಿ ರೀಯಾಕ್ಟ್ ಮಾಡಬೇಕು.  


ಕೋರ್ಟ ನ್ಯಾಯಾದೇಶ ಈ ಎಲ್ಲದಕ್ಕೂ ಮೊದಲು ಒಬ್ಬ ಉತ್ತಮ ನಾಗರಿಕನಾಗಿ ಎರಡು ರಾಜ್ಯದ ಮುಖ್ಯ ಮಂತ್ರಿಗಳು ಸಾಧಕ ಬಾಧಕಗಳನ್ನು ತೆರೆದ ಕಣ್ಣುಗಳಿಂದ ನೋಡಬೇಕು.  


ಇಲ್ಲಿರುವವರು ಜನರೇ ಅಲ್ಲಿರುವವರು ಜನರೇ. ಅವರಿಗೂ ಅನ್ಯಾಯವಾಗಬಾರದು ಇವರಿಗೂ ಅನ್ಯಾಯವಾಗಬಾರದು. ಇರುವ ಒಂದೇ ದೇಶದಲ್ಲಿ ಯಾಕೇ ಈ ಕಚ್ಚಾಟ? ಯಾಕೆ ಸಮಾನ ಸಮಾನತೆಯ ನಡಾವಳಿ ಇಲ್ಲಿ ಪ್ರದರ್ಶಿಸಬಾರದು?  


ಸುಖ ಸುಮ್ಮನೇ ರೋಚ್ಚಿಗೆದ್ದು ಬೆಂಕಿ ಹಚ್ಚಿದರೇ ಈ ಸಮಸ್ಯೆ ಎಂದು ಬಗೆಹರಿಯುವುದಿಲ್ಲ!  


ಇಲ್ಲಿ ನೊಂದು ಬೆಂದು ಹೋಗುವುವರು ಪುನಃ ಜನ ಸಾಮಾನ್ಯರೇ. ರೈತರಿಗೆ ನೀರು ಬೇಕು. ಜನಸಾಮನ್ಯರಿಗೂ ಕುಡಿಯುವ ನೀರು ಬೇಕು. ಪ್ರತಿಯೊಬ್ಬರು ಬದುಕಲೇ ಬೇಕು. ಬದುಕಬೇಕೆಂದು ಇನ್ನೊಬ್ಬರನ್ನು ತುಳಿದು ಎಂದಿಗೂ ಬದುಕಬಾರದು.  


ಒಂದೇ ಮಾತರಂ ಎಂದು ಜಪಿಸಿದ ನಾಡಲ್ಲೇ ದೊಂಬಿ ದಬ್ಬಾಳಿಕೆ? ನಮ್ಮ ನೆಲದಲ್ಲೆ ನಮ್ಮ ನಮ್ಮನ್ನು ಕಾಯಲು ಸೇನೆ, ಪೊಲೀಸ್! ನಾವುಗಳು ಆರಾಮಾಗಿ ಓಡಾಡುವ ಓಣಿಗಳಲ್ಲಿ ಗನ್, ಲಾಟಿಗಳ ಸಪ್ಪಳ!  


ನಾವೇನೂ ಯುದ್ಧ ಭೂಮಿಯಲ್ಲಿದ್ದೇವೆ?



ಕಾವೇರಿಯ ಒಟ್ಟು ಉದ್ದ ೮೦೨ ಕೀ.ಮಿ. ರಾಜ್ಯದಲ್ಲಿ ಕಾವೇರಿ ಜಲಾಯನ ಪ್ರದೇಶ ೩೪ ಸಾವಿರ ಕೀ.ಮಿ ಇದ್ದರೆ.. ತಮಿಳುನಾಡು ೪೪ ಸಾವಿರ ಕೀ.ಮಿ ಹೊಂದಿದೆ.


ಕಾವೇರಿ ನದಿಯ ನೀರು ಹಂಚಿಕೆಯ ವಿಚಾರ ೧೮೯೨ ರಿಂದ ಶುರುವಾಗಿ ಇಂದಿನವರೆಗೂ ಸಾಗುತ್ತಲೆ ಬರುತ್ತಿದೆ. ಮಳೆಯಾಗಿ ನೀರು ತುಂಬಿ ಹರಿದರೇ ಯಾರಿಗೂ ಸಮಸ್ಯೆ ಇಲ್ಲ. ಮಳೆ ಕೈ ಕೊಟ್ಟ ಕಾಲಕ್ಕೆ ಈ ಎಲ್ಲಾ ಸಮಸ್ಯೆ.


ರಾಜರ ಕಾಲದಲ್ಲಿ ವಿಶ್ವೇಶ್ವರಯ್ಯವನವರ ಯೋಜನೆಯಂತೆ ಎರಡುವರೆ ಕೋಟಿ ರೂಪಾಯಿಯಲ್ಲಿ ಕನ್ನಂಬಾಡಿಯ ಕಟ್ಟೆಯನ್ನು ಕಟ್ಟಿದರು.

ಅಣೆಕಟ್ಟು ಕಟ್ಟಿ ಮಳೆ ಇಲ್ಲದ ಕಾಲಕ್ಕೆ ನೀರು ಇರಲಿ ಎಂದು ಇಟ್ಟುಕೊಂಡರೇ ಅದನ್ನೇ ಬಿಡಿ ಎಂದು ಪಿಳ್ಳೆ ನೆವ ತೆಗುಯುತ್ತಿದೆ ನೆರೆ ರಾಜ್ಯ.




ತಮಿಳುನಾಡಿನಲ್ಲಿ ಕಾಣುವ ರಾಜಕೀಯ ಇಚ್ಛಾ ಶಕ್ತಿ ನಮ್ಮ ರಾಜ್ಯದಲ್ಲಿರುವ ರಾಜಕೀಯ ನಾಯಕರುಗಳಿಗೆ ಬರಬೇಕು. ನಿತ್ಯ ಸಮಸ್ಯೆಯಾಗಿರುವ ಈ ವಿಷಯಕ್ಕೆ ಪೂರ್ಣ ಪ್ರಮಾಣದ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು.






ಪ್ರತಿ ವರುಷ ಕೋರ್ಟ್ ಖರ್ಚಿಗೆ ೨೦ ಸಾವಿರ ಕೋಟಿಗೂ ಹೆಚ್ಚು ಹಣ ಹರಿಸಿದರೂ ನೀರಿನ ಜಗಳಕ್ಕೆ ಅಂತ್ಯ ಕಾಣಿಸಲು ಸಾಧ್ಯವಾಗಿಲ್ಲ!



ಹತ್ತು ಹಲವಾರು ವರುಷಗಳ ನೀರಿನ ಹಂಚಿಕೆಯ ಹಗ್ಗ ಜಗ್ಗಾಟವನ್ನು ನಿಲ್ಲಿಸಬಾರದೆ. ತಿಳಿದವರು ಮತ್ತು ಅಧಿಕಾರದ ಗದ್ದುಗೆಯಲ್ಲಿರುವ ಎರಡು ರಾಜ್ಯದ ಮುಖ್ಯಸ್ಥರು ಇದರ ಬಗ್ಗೆ ಶಾಂತವಾಗಿ ಯೋಚಿಸಬಾರದೆ

ರಾಜ್ಯದಲ್ಲಿರುವ ಜನತೆಗೆ ಸರ್ಕಾರದಿಂದ ಸಿಗಬೇಕಾದದ್ದು ರಕ್ಷಣೆ ಮತ್ತು ಶಾಂತಿಯ ಬಾಳ್ವೆ. ಸಾಮಾನ್ಯ ನಾಗರಿಕರ ಸಾವಲ್ಲ!





ಕಾವೇರಿ ನೀರು ಹಸನಾಗಿ ಹರಿದು ಎರಡು ರಾಜ್ಯದ ಜನಮನಗಳ ನೀರಿನ ಆಹಾಕಾರವನ್ನು ಅಳಿಸಲಿ !

ಸೋಮವಾರ, ಆಗಸ್ಟ್ 8, 2016

ಸ್ವಂತ ಕಾಲ ಮೇಲೆ

ಹೆಚ್ಚು ತಿಳಿದುಕೊಂಡಂತೆ ಬೇರೆಯವರೊಂದಿಗಿನ ಅವಲಂಬನೆ ಕಡಿಮೆಯಾಗುತ್ತದೆ ಅನಿಸುತ್ತದೆ.

 

ಚಿಕ್ಕ ವಯಸ್ಸಿನ ಮಕ್ಕಳ ನಡವಳಿಯನ್ನು ಗಮನಿಸಿದರೆ ಗೊತ್ತಾಗುತ್ತದೆ. ಹಾಲುಗಲ್ಲದ ಹಸುಗೂಸು ಪೂರ್ತಿ ಅಮ್ಮನನ್ನೇ ಅವಲಂಭಿಸಿರುತ್ತದೆ. ಅಮ್ಮ ಕುಡಿಸಿದಾಗ ಮಾತ್ರ ಹೊಟ್ಟೆ ತುಂಬುವುದು. ಅಮ್ಮ ಹೆತ್ತಿಕೊಂಡು ಹೋದರೆ ಮಾತ್ರ ತಾನು ಇರುವ ತನ್ನ ಜಾಗ ಬದಲಿಸುವುದು. ಇಲ್ಲ ಎಂದರೇ ಏನೇಂದರೂ ಏನಾಗುವುದಿಲ್ಲ.

 

ಇದು ಏನನ್ನು ಸೂಚಿಸುತ್ತದೆ ಎಂದರೇ ತನ್ನ ಕೈಯಲ್ಲಿ ಆಗದ, ಸಾಮರ್ಥ್ಯಕ್ಕೆ ಸಿಲುಕದವನ್ನು ತನ್ನ ಸುತ್ತಲಿರುವ ತಾಯಿ, ತಂದೆ ಮತ್ತು ಕುಟುಂಬದವರಿಂದ ಪಡೆಯುವೆವು.

 

ಮಗು ತನ್ನ ಸುತ್ತಲಿನಲ್ಲಿ ನಡೆಯುವ ಚಿಕ್ಕ ಚಿಕ್ಕ ಘಟನೆ, ನೋಟ, ಮಾತು, ರುಚಿಗಳ ಮೊಲಕ ತನ್ನ ಜಾಣ್ಮೆಯನ್ನು ಬೆಳೆಸಿಕೊಳ್ಳುತ್ತದೆ. ಹಾಗೆಯೇ ತಾನು ಬೇರೆಯವರೊಂದಿಗಿನ ತನ್ನ ಅವಲಂಬನೆಯನ್ನು ಕಳಚಿಕೊಳ್ಳುತ್ತಾ ಹೋಗುತ್ತದೆ.

 

ಹೆತ್ತ ಅಮ್ಮನಿಗೆ ಆಶ್ಚರ್ಯವಾಗುತ್ತದೆ. ಯಾಕೋ ದಿನ ದಿನಕೆ ಮಗ/ಮಗಳು ತನ್ನಿಂದ ದೂರವಾಗುತ್ತಿದ್ದಾರೆ ಅನಿಸುತ್ತದೆ. ಪ್ರತಿಯೊಂದಕ್ಕೊ ನನ್ನ ಅಣತಿಯನ್ನು ಕಾಯಿತ್ತಿದ್ದ ಕೂಸುಗಳು ಇವೆಯೇ ಏನೂ ಅನಿಸುತ್ತದೆ.

 

ಹತ್ತಿರವಿದ್ದರೂ ದೂರವಿರುವಂತೆ ಮನಸ್ಸಿಗೆ ಫೀಲ್ ಆಗುತ್ತದೆ.

 

ಆದರೇ ಪ್ರತಿಯೊಬ್ಬರೂ ತನ್ನ ಮಕ್ಕಳು ಬೇರೆಯವರಿಗೆ ಹೊರೆಯಾಗಿ ಜೀವನ ನಡೆಸುವುದನ್ನು ಎಂದಿಗೂ ಇಷ್ಟಪಡುವುದಿಲ್ಲ.

 

ಮಕ್ಕಳು ತಮ್ಮ ದೇಹ ಬುದ್ಧಿ ಬೆಳೆದಂತೆ ತಮ್ಮ ದಾರಿಯನ್ನು ತಾನು ಕಂಡುಕೊಳ್ಳಲಿ ಎಂಬುದೇ ಜಗತ್ತಿನ ಎಲ್ಲಾ ಜೀವಿಗಳ ಆಶಯ.

 

ನೀವು ನೋಡಿರಬಹುದು ಕಾಲೇಜು ಮುಗಿಯಿತು ಎಂದರೇ ಸಾಕು. ಏಯ್ ಮಗಾ ಮೊದಲು ನಿನ್ನ ಕಾಲ ಮೇಲೆ ನೀನು ನಿಲ್ಲುವಂತಾಗು. ಯಾವುದಾದರೂ ಕೆಲಸ ಹುಡುಕಿಕೋ ಅನ್ನುತ್ತಾರೆ.

 

ದೊಡ್ಡವರಾಗುತ್ತಾ ಆಗುತ್ತಾ ನಾವುಗಳು ಸರ್ವ ಸ್ವತಂತ್ರರಾಗಲು ಶ್ರಮಿಸುವುವೆವು. ರೆಕ್ಕೆ ಬಂದ ಹಕ್ಕಿಯ ರೀತಿಯಲ್ಲಿ ತನ್ನದೆಯಾದ ಬದುಕನ್ನು ಕಟ್ಟಿಕೊಳ್ಳಲು ತೊಡಗುವೆವು. ಹೆತ್ತವರ ಮಡಿಲಲ್ಲಿ ಬೆಳೆದು ದೊಡ್ಡವರಾಗಿ ಹೊಸ ತೀರದ ಹುಡುಕಾಟಕ್ಕೆ ದಾಪುಗಾಲು ಇಡುವೆವು.

 

ಇದು ಕೇವಲ ಮನುಷ್ಯ ಜಾತಿಯಲ್ಲಿ ಮಾತ್ರವಲ್ಲ ಭೂಮಿಯ ಮೇಲಿರುವ ಪ್ರತಿಯೊಂದು ಜೀವಿಯ ಪಾಡು ಇದು. ತಾನು ಯಾರ ಮೇಲು ಡಿಪೆಂಡ್ ಆಗಿಲ್ಲ ಎಂಬುದನ್ನು ನಿರೂಪಿಸುವ ಚಾಲೇಂಜು.

 

ಇದೆ ಜೀವನದ ಮರ್ಮ ತಾನು ತನ್ನವರಿಂದ ಕಲಿತ ಪಾಠವನ್ನು ಸ್ವತಂತ್ರವಾಗಿ ಬಳಸುವುದು. ತಾನೇ ಎಲ್ಲದಕ್ಕೂ ಹೊಣೆಯಾಗಿ ಜೀವನದ ಅತ್ಯಂತ ಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳುವುದು.

 

ತೆಗೆದುಕೊಂಡ ನಿರ್ಧಾರಗಳು, ಮಾಡಲು ತೊಡಗುವ ಕೆಲಸಗಳನ್ನು ಯಶಸ್ವಿಯಾಗಿ ಮುಗಿಸುವುದೇ ನಮ್ಮಲ್ಲಿ ನಾವು ಮುಂದಿನ ಯೋಜನೆಗಳ ಪ್ಲಾನ್ ಗೆ ಬಹು ದೊಡ್ಡ ಆಸರೆ.

 

ಮನುಷ್ಯ ಸಂಘ ಜೀವಿ. ಅವಲಂಬನೆ ಮನುಷ್ಯನಿಗೆ ಅನಿವಾರ್ಯವಾದರೂ ಅದರಿಂದ ಬಿಡುಗಡೆಯನ್ನು ಅನುಭವಿಸುವುದರಲ್ಲಿಯೇ ಪ್ರತಿಯೊಬ್ಬರೂ ಸಂತಸಪಡುವವರು.

 

ತಾನೇ ಗಳಿಸಿದ ಪ್ರತಿಯೊಂದು ಯಶಸ್ಸು ಅತಿ ಹೆಚ್ಚು ಸಂತೋಷದಾಯಕವಾಗಿರುತ್ತದೆ.

 

ಜಗತ್ತಿನಲ್ಲಿ ಸರ್ವ ಸ್ವತಂತ್ರರಾಗಿ ಸಾಧಿಸಿದ ಸಾಧನೆಗಳನ್ನು ಸಾಧಕರನ್ನು ಸಮಾಜ ಬಹು ಮನ್ನಣೆಯಿಂದ ಗಮನಿಸುತ್ತದೆ.

 

ಇದು ಕೇವಲ ಕುಟುಂಬ, ನೆರೆಹೊರೆಗೆ ಸೀಮಿತಾಗಿಲ್ಲ. ಯಾವುದೇ ಕಛೇರಿ, ನೌಕರಿ, ದೇಶಾಂತರದ ಯೋಜನೆಗಳು ಹೀಗೆ ಪ್ರತಿಯೊಂದು ಹೆಚ್ಚು ಹೊರೆಯಿಲ್ಲದೇ ಮತ್ತು ಬೇರೆಯವರ ಸಹಾಯವಿಲ್ಲದೇ ಗಳಿಸಿದ ಗೆಲುವಿಗೆ ಬೆಲೆ.

 

ಗುರಿಗೆ ಗುರು ಬೇಕು.. ಶಿಷ್ಯ ಗುರುವಿನ ಮಾರ್ಗದರ್ಶನ ಪಡೆಯಲೇಬೇಕು. ಆದರೇ ಗುರುವನ್ನೇ ಜೊತೆಯಲ್ಲಿ ಯಾವಾಗಲು ಇಟ್ಟುಕೊಳ್ಳಬಾರದು.

 

ಇಂದಿನ ದಿನದಲ್ಲಿ ಏಕಲವ್ಯನಂತವನಿಗೆ ಹೆಚ್ಚು ಬೆಲೆ.

 

ಯಾರು ಬಹುಬೇಗ ಬೇಕಾದ ವಿಷಯಗಳನ್ನು ತಿಳಿದುಕೊಂಡು ಒಂಟಿಯಾಗಿ ಕೊಟ್ಟ ಕೆಲಸವನ್ನು ಮುಗಿಸುವುವರೋ ಅವರಿಗೆ ಎಲ್ಲಾ ನೌಕರಿಗಳಲ್ಲಿಯು ಮೊದಲ ಆಧ್ಯತೆ.

 

ಹಾಗಾಗಿ ಬಾಲ್ಯದಿಂದಲೇ ಕಲಿಯುವ ತಿಳಿಯುವ ತಿಳುವಳಿಕೆ, ಅವಲಂಬನೆಯಿಲ್ಲದೆ ಹಿಡಿದ ಕೆಲಸಗಳನ್ನು ಮಾಡಿ ಮುಗಿಸುವ ವ್ಯವಹಾರ ಬುದ್ಧಿ ನಮ್ಮ ಮಕ್ಕಳಿಗೆ ಬೇಕಾಗಿದೆ.

 

ನೀವು ಕೇಳಿರಬಹುದು. ಜೀವನ ಸಂಗಾತಿ ಎನಿಸಿಕೊಂಡ ಜೀವನ ಗೆಳತಿಯೇ ನಾನು ಸ್ವತಂತ್ರವಾಗಿ ಬಾಳಬೇಕು... ಅದಕ್ಕಾಗಿ ನಾನು ಕೆಲಸ ಮಾಡುವೆ. ನಾನು ನನ್ನ ಕಾಲ ಮೇಲೆ ನಿಲ್ಲಬೇಕು. ಹೀಗೆಲ್ಲಾ ಹೇಳುವವರು.

 

ಹೌದು ಇಂದು ಯಾರು ಯಾರನ್ನು ಯಾವುದಕ್ಕಾಗಿಯು ಆಶ್ರಯಿಸುವ ಕಾಲವಲ್ಲ. ಎಲ್ಲರೂ ತಮ್ಮದೇಯಾದ ತಮ್ಮ ಬದುಕನ್ನು ರೂಪಿಸಿಕೊಳ್ಳುವ ಮಟ್ಟಿಗೆ ಜಾಣ ಜಾಣೆಯಾರಾಗಿದ್ದಾರೆ.

 

ಎಲ್ಲಾ, ಕಾಲಯಾ ತಸ್ಮಯ ನಮ:!

 

ಶುಕ್ರವಾರ, ಜೂನ್ 24, 2016

ಟಾಪರ್ ಸುಮಿತ್ರಾ

ಅವಳ ಹೆಸರು ಸುಮಿತ್ರಾ. ನಾನು ಅವಳನ್ನು ಮೊದಲು ನೋಡಿದ್ದು ಪಿ.ಯು.ಸಿ ಯಲ್ಲಿ ಅನಿಸುತ್ತೇ.

ಮೊನ್ನೇ ಅವಳನ್ನು ಪೇಸ್ ಬುಕ್ ನಲ್ಲಿ ಕಂಡು ಅಚ್ಚರಿಯಾಯಿತು. ಅದೇ ಮುಖ ಆ ದಿನಗಳ ನಗು ಇನ್ನು ಮರೆಯಾಗಿಲ್ಲ.

ಇದೆ ಅನಿಸುತ್ತೇ ಒಂದಷ್ಟು ಜನಗಳು ಏನೇ ಏನು ಎಂದರೂ ಬದಲಾಗಲಾರರು.

ಕಾಲ ಮಾತ್ರ ಬದಲಾಗಬೇಕು ಅಷ್ಟೇ!

ಬಹಳ ದಿನಗಳ ಅನಂತರ ಸಿಕ್ಕಿದ ಗೆಳತಿಯನ್ನು ಏನಮ್ಮಾ ಎಲ್ಲಿ ಹೋಗಿದ್ದೇ? ಎಂದು ಅದೇ ಗೆಳೆತನದ ರೀತಿಯಲ್ಲಿ ಕೇಳಿದೇ.

ಅಂದಿನ ಆ ಸುಮಿತ್ರಾ ಇಂದು ಸುಮಿತ್ರಾ ಸಾಗರ್ ಆಗಿ ದೂರದ ಅಮೆರಿಕಾದಲ್ಲಿ  ವಾಸಿಸುತ್ತಿದ್ದಾರಂತೆ.  ಸಾಕಷ್ಟು ಬದಲಾವಣೆಯ ಗಾಳಿ ಉಂಟಾಗಿದೆ ಎಂಬುದು ಚಾಟ್ ಮೂಲಕ ತಿಳಿಯಿತು. ಮುದ್ದಾದ ಎರಡು ಮಕ್ಕಳು ಮತ್ತು ಸಾಪ್ಟವೇರ್ ಸಂಗಾತಿಯ ಜೊತೆಯಲ್ಲಿ ಚೆನ್ನಾಗಿಯೇ ಇದ್ದೀನಿ ಎಂದು ಸ್ಮೈಲ್ ಐಕಾನ್ ಮೊಲಕ ತಿಳಿಸಿದಳು.

ಇನ್ನೊಮ್ಮೆ ಚಾಟ್ ಮಾಡೋಣ ಬಾಯ್ ಎಂದು ಲಾಗೌಟ್ ಆದಳು.

ಪೇಸ್ ಬುಕ್ ಈ ರೀತಿಯಲ್ಲಿ ಉಪಯೋಗವಾಗುವುದು. ಸುದ್ಧಿಯೇ ಇಲ್ಲದೇ ಕಳೆದು ಹೋದ ಗೆಳೆಯರು, ಗೆಳೆಯತಿಯರು, ನೆರೆಹೊರೆಯವರು ದೂರದವರು ಪ್ರತಿಯೊಬ್ಬರನ್ನು ಒಂದಲ್ಲಾ ಒಂದು ಸಮಯದಲ್ಲಿ ದುತ್ತನೇ ಪ್ರತ್ಯಕ್ಷ ಮಾಡಿಸುತ್ತದೆ.

ಈ ಸುಮಿತ್ರಾ ಪ್ರಥಮ ಪಿ.ಯು ದಿಂದ ಇಂಜಿನಿಯರಿಂಗ್ ಮುಗಿಯುವವರೆಗೂ ಜೊತೆಯಲ್ಲಿಯೇ ಓದುತ್ತಾ ಪರಿಚಯದ ಹುಡುಗಿಯಾಗಿದ್ದರು.

ಓದುವ ವೇಳೆಯಲ್ಲಿ ನಮಗೆಲ್ಲಿ ಗೊತ್ತೂ.. ಹೀಗೆಲ್ಲಾ ಜೀವನ ನಮ್ಮನ್ನೆಲ್ಲಾ ಎಲ್ಲಿಂದ ಎಲ್ಲಿಗೋ ಕರೆದುಕೊಂಡು ಹೋಗುತ್ತದೆಂದು?

ಓದುವುದು ಒಂದು ಮಾಡುವುದು ಮತ್ತೊಂದು. ಓದಿಗೆ ತಕ್ಕನಾದ ಕೆಲಸ ಸಿಕ್ಕುವುದಾದರೇ ನಮ್ಮಗಳ ಪಾಡು ಹೀಗೆ ಯಾಕೆ ಇರುತ್ತಿತ್ತು.

ಹಾಗೆಯೇ ಕೆಲಸಕ್ಕಾಗಿಯೇ ಎಂದು ಓದಬಾರದು. ಪದೆ ಪದೆ ಹೀಗೆ ಹೇಳುತ್ತಿದ್ದ ನಮ್ಮ ಇಂಜಿನಿಯರಿಂಗ್ ಕಾಲೇಜು ಲೆಕ್ಚ್ ರ್ ಮಾತು.

ಎಷ್ಟು ಸತ್ಯ!

ಈಗ ಸುಮಿತ್ರಾ ನನ್ನೇ ತೆಗುದುಕೊಂಡರೇ... ಆಗ ಓದುತ್ತಿದ್ದ ಸ್ಪೀಡ್ ಗೆ ಇಲ್ಲಿಯೇ ಭಾರತದಲ್ಲಿ ಯಾವುದಾದರೂ ದೊಡ್ಡ ಆಫೀಸ್ ನಲ್ಲಿ ಅಥವಾ ದೊಡ್ಡ ಹುದ್ದೆಯಲ್ಲಿಯೇ ಇರಬೇಕಾಗಿತ್ತು.

ನಾವಂತೂ ಸುಮಿತ್ರ ಓದುವ ಕ್ಯಪಾಸಿಟಿಗೆ ಥಂಡಾ ಹೋಗಿಬಿಟ್ಟಿದ್ದೀವಿ.

ಸತತ ನಾಲ್ಕು ವರುಷಗಳು ಕಾಲೇಜಿಗೆ ಒಬ್ಬಳೇ ಟಾಪರ್. ನಾವು ಯಾರೊಬ್ಬರೂ ಓದುವುದರಲ್ಲಿ ಅವಳ ಸರಿ ಸಮ ಬರಲು ಹಾಗಲೇ ಇಲ್ಲ!

ಅದು ಓದುವ ದಿನಗಳು. ಮತ್ತೆ ಎಂದು ನಮಗೆ ಮರಳಿ ಬರಲಾರವು.

ಕೇವಲ ನೆನಪುಗಳು ಮಾತ್ರ!

ಆದರೇ ಇಂದು ಸುಮಿತ್ರಾ ತುಂಬು ಗೃಹಿಣಿಯಾಗಿ ಎರಡು ಮಕ್ಕಳ ಮತ್ತು ಗಂಡನ ಕ್ಷೇಮ ಮಾತ್ರ ನೋಡಿಕೊಳ್ಳುತ್ತಿರುವುದು. ಅದೇ ಟಾಪರ್ ಸುಮಿತ್ರಾನ ಅನಿಸುತ್ತದೆ!

ಕಾಲ ಎಲ್ಲಿಂದ ಎಲ್ಲಿಗೂ ಚಲಿಸಿದೆ.

ಜೀವನ ದೊಡ್ಡದು!

ಅಂದುಕೊಂಡದ್ದು ಯಾವುದು ಸಿಗಲಾರದು. ಬದುಕಿಗೆ ತಕ್ಕಂತೆ ಹೊಂದಿಕೊಳ್ಳಬೇಕು. ಅದೇ ಜೀವನ ಮರ್ಮ!

ಈಗ ನೆನಪಿಸಿಕೊಂಡರೇ ಅದೇ ಅಚ್ಚರಿಯಾಯಿತು.

ಅಲ್ಲಾ ನಾವೆಲ್ಲಾ ಅಷ್ಟು ಸಾಹಸಪಟ್ಟಿದ್ದು ಇದಕ್ಕೇನಾ ಅನಿಸುತ್ತದೆ. ಅಂದು ಚೆನ್ನಾಗಿ ಓದಿದ ಮೇಡಮ್ಮ ಇಂದು ಮನೆಯಲ್ಲಿದ್ದಾರೆ. ನಾವುಗಳು ಯುಜ್ ಲೇಸ್ ಎಂದುಕೊಂಡವರು ಟಸ್ಸು ಪುಸ್ ಎಂದುಕೊಂಡು ಕೊರಳಿಗೆ ಟ್ಯಾಗ್ ಹಾಕಿಕೊಂಡು ಮಿಂಚುವ ಎಂ.ಎನ್.ಸಿ ಯಲ್ಲಿ ದುಡಿಯುತ್ತಿದ್ದೇವೆ.

ಇಲ್ಲಿ ಯಾರು ಮುಂದೆ? ಯಾರು ಹಿಂದೆ? ಗೊತ್ತಾಗುತ್ತಿಲ್ಲ!

ನನಗೆ ಅನಿಸುತ್ತದೆ. ಸುಮಿತ್ರ ಏನಾದರೂ ಒಮ್ಮೆಯಾದರೂ ಅಂದಿನ ಕಾಲೇಜು ದಿನಗಳಲ್ಲಿನ ಭರವಸೆಯ ಕನಸಿನ ಬಗ್ಗೆ ಈಗ ಯೋಚಿಸಿರುವಳೆ? ಅಂದಿನ ನೆನಪು ಇಂದು ಇಲ್ಲವೇ? ಏನಾದರೂ ಪಶ್ಚಾತಪದ ಬೇಸರ ಮನದಲ್ಲಿ ಉಂಟಾಗಿದೆಯೇ?

ಮತ್ಯಾವತ್ತಾದರೂ ಚಾಟ್ ಗೆ ಸಿಕ್ಕಾಗೆ ಕೇಳೇ ಕೇಳುತ್ತೇನೆ.

ಕೆಲಸ ಸಿಕ್ಕಿ ಹೆಚ್ಚು ದುಡಿದರೇ ಮಾತ್ರ ಓದಿದ್ದು ಸಾರ್ಥಕವಾ?

ಓದುವುದು ದುಡಿಯುವುದಕ್ಕೆ ಮಾತ್ರನಾ?

ಅಲ್ಲಾ ಅಷ್ಟೆಲ್ಲಾ ಓದಿ ಮೊಡಿಗೆರೆ ಎಂಬ ಹಳ್ಳಿಗೆ ಬಂದು ವ್ಯವಸಾಯ ಮಾಡಿದ ತೇಜಸ್ವಿ ಗ್ರೇಟ್ ಅಲ್ಲವಾ? ನಗರದಲ್ಲಿಯೇ ಇದ್ದುಕೊಂಡು ಯಾರು ಸಾಧಿಸಲಾಗರದದ್ದನ್ನು ಗದ್ದೆ, ಕಾಡು, ಪ್ರಾಣಿ, ಸಸ್ಯಗಳ ಮದ್ಯೆಯೇ ಇದ್ದುಕೊಂಡು ವಿಶ್ವಕ್ಕೆ ಗೋಚರಿಸಿದ್ದು ಕಡಿಮೆ ಸಾಧನೆಯೆನಲ್ಲ!

ಅಲ್ಲವಾ ನೀವೇ ಹೇಳಿ! ವಿಶ್ವ ವಿದ್ಯಾಲಯದಲ್ಲಿರುವವರು ತೇಜಸ್ವಿ ಬರೆದಿದ್ದನ್ನು ಸಿಲಬಸ್ ಆಗಿ ಅಧ್ಯಯನ ಮಾಡುತ್ತಿದ್ದಾರೆ.

ತೇಜಸ್ವಿ ರೀತಿ ಯಾಕೆ ಯಾರು ಯೋಚನೆ ಮಾಡುವುದಿಲ್ಲ?

ಸುಮಿತ್ರ ಳನ್ನು ಕಂಡು ನಾನು ಯಾಕೆ ತಕ್ಷಣ ಹಾಗೆ ಯೋಚಿಸಿದೆ?

ಓದಿದ್ದಾರೆ ಎಂದರೇ ಅಫೀಸ್ ನಲ್ಲಿ ಮಾತ್ರ ಕೆಲಸ ಮಾಡಬೇಕೇ? ಮತ್ತಿನೇನನ್ನೂ ಮಾಡಬಾರದೇ?

ನಿಜವಾದ ಪ್ರತಿಭೆ ಎಂದರೇ ಏನು?

ಓದುವುದು ತಿಳುವಳಿಕೆಗೆ ಮಾತ್ರ ಎಂದು ಯಾಕೆ ಯಾರೊಬ್ಬರೂ ಯೋಚಿಸಲಾರರು.

ದುಡ್ಡು ಗಳಿಸುವುದೊಂದೇ ಬದುಕಾ? ಬದುಕುವುದಕ್ಕಾಗಿ ದುಡ್ಡು ಬೇಕು, ದುಡ್ಡಿಗಾಗಿ ಬದುಕುವುದೇ ಜೀವನವಾ?

ಓದುವ ಸಮಯದಲ್ಲಿ ಕೇವಲ ಕೆಲಸ ಗಳಿಸುವುದೊಂದೆ ಗುರಿಯಾಗುವುದು ಯಾಕೆ? ಆ ಸಮಯದಲ್ಲಿ ಬೇರೆ ಯಾವ ಯೋಚನೆಯು ಮನದಲ್ಲಿ ಸುಳಿಯಲಾರದಂತೆ ಮಾಡಿರುವ ವ್ಯವಸ್ಥೆಯ ಕೈಯಾದರೂ ಯಾವುದು?

ಪ್ರತಿಭೆಗಳು ಅರಳಬೇಕಂತೆ. ಅರಳುವ ಸಮಯ ಮತ್ತು ಸ್ಥಳಗಳೆಂದರೇ ಶಿಕ್ಷಣ ಮತ್ತು ಶಿಕ್ಷಣ ಸಂಸ್ಥೆಯ ಅಂಗಳಗಳಂತೆ. ಆದರೇ ಈ ಅಂಗಳಗಳು ಇಂದು ಕೇವಲ ಕೆಲಸ ಮಾಡುವ ಕಾರ್ಮಿಕರನ್ನು ತಯಾರು ಮಾಡುವ ಕಾರ್ಖನೆಗಳಾಗುತ್ತಿವೆಯೆಲ್ಲ ಇದು ಸರಿಯೇ?

ಹೊಸದಾಗಿ ಯೋಚಿಸುವಂತಹ ಮನಸ್ಸುಗಳ ನಿರ್ಮಾಣ ಮಾಡುವ ತಾಣಗಳಗಾಬೇಕಿದ್ದ ಕಾಲೇಜು, ವಿಶ್ವವಿದ್ಯಾನಿಲಯಗಳು ಯಾಕೆ ಇಂದು ಮಂಕಾಗಿವೆ ಅನಿಸುತ್ತಿವೆ ಇಂದು?

ಓದಿದ ಮನಸ್ಸುಗಳಿಗೆ ಕೆಲಸ ಸಿಗುತ್ತಿಲ್ಲ, ಕೆಲಸಕ್ಕೆ ಹೋಗುತ್ತಿಲ್ಲ ಎಂದರೇ ಯಾಕೆ ಬೇಜಾರು ಆಗುವುದು? ಕೆಲಸವಲ್ಲದೇ ಬೇರೆ ಬೇರೆ ಮನ ಕುಣಿಯುವ ಚಟುವಟಿಕೆಯ ಕೇಂದ್ರಗಳ್ಯಾಕಾಗುತ್ತಿಲ್ಲ?

ಅದೇ ಅಕ್ಕ ಪಕ್ಕದವರು ಏನು ಅನ್ನುತ್ತಾರೋ.. ಅಲ್ಲಿಯ ಗೆಳೆಯನಿಗೆ ಎಲ್ಲೋ ಕೆಲಸ ಸಿಕ್ಕಿತು.. ಆ ಗೆಳತಿ ಹೊರದೇಶದಲ್ಲಿ ಕೆಲಸ ಮಾಡುತ್ತಿದ್ದಾಳೆ.. ನಾನು ಮಾತ್ರ ಇನ್ನೂ ಏನು ಮಾಡುತ್ತಿಲ್ಲಾ..ಓದಿದ್ದೇಲ್ಲಾ ವೇಸ್ಟ್.. ಹಾಗೆ ಹೀಗೆ ಎಂದು ಜಿಗುಪ್ಸೆಪಡುವುದು ಇಂದಿಗೂ ನಿಲ್ಲುತ್ತಿಲ್ಲ.

ಓದು ಹೊಸತನದ ಪ್ರತಿಭೆಗೆ ಮೊದಲ ಹೆಜ್ಜೆಯಾಗಬೇಕು. ನವ್ಯವಾಗಿ ಚಿಂತಿಸುವ ಮನಸ್ಸುಗಳಾಗಬೇಕು. ಈ ರೀತಿಯ ಮನೋಭಾವನೆಯನ್ನು ರೂಪಿಸುವ ಕ್ಲಾಸ್ ರೋಂ ಗಳಾಗಬೇಕಿರುವುದು ಪ್ರತಿಯೊಂದು ಶಿಕ್ಷಣ ಸಂಸ್ಥೆಗಳ ಸಿದ್ಧಾಂತವಾಗಬೇಕು.

ಸುಮಿತ್ರಾರನ್ನು ನೋಡಿದ ಮೇಲೆ ಹೀಗೆಲ್ಲಾ ಲಹರಿ ಬಂದು ಮಾತನಾಡಿದ್ದು ಕಣ್ರೀ.

ಅದು ಯಾಕೋ ಟಾಪರ್ ಸುಮಿತ್ರಾನನ್ನು ಇನ್ನು ಈ ನನ್ನ ಮನ ಮರೆಯಲಾರದೋ?

ಅವರನ್ನೇ ಕೇಳಿ ಹೇಳುತ್ತೇನೆ.

ಶುಕ್ರವಾರ, ಜೂನ್ 10, 2016

ಸರ್ಕಾರಿ ಶಾಲೆಗಳನ್ನು ಕೇಳುವವರು ಯಾರು

ಶಾಲೆಗಳು ದೂಳು ಕೊಡವಿಕೊಂಡು ಪ್ರಾರಂಭವಾಗಿವೆ.


ಕಾನ್ವೇಂಟ್ ಗಳಂತೂ ಒಂದು ತಿಂಗಳು ಮುಂಚೆಯೇ ಪ್ರಾರಂಭವಾಗಿವೆ. ಅಷ್ಟರ ಮಟ್ಟಿಗೆ ಕಾನ್ವೇಂಟ್ ಗಳು ಜನರ ಮನಸ್ಸನ್ನು ಸೆಳೆದಿವೆ.


ಸರ್ಕಾರಿ ಶಾಲೆಗಳನ್ನು ಕೇಳುವವರು ಯಾರು?


ಅವುಗಳು ಅದೇ ಹಳೆ ಸ್ಟೈಲ್ ನಲ್ಲಿ ಈ ತಿಂಗಳು ಶುರುವಾಗಿವೆ. ಆದರೇ ಶುರುವಾಗುವ ಸಮಯದಲ್ಲಿ ಕೆಟ್ಟ ಸುದ್ಧಿಯಂತೆ: ಸುಮಾರು ಮೂರು ಸಾವಿರ ಸರ್ಕಾರಿ ಕನ್ನಡ ಶಾಲೆಗಳ ಬಾಗಿಲನ್ನು ಶಾಶ್ವತವಾಗಿ ಮುಚ್ಚುವೆವು.. ಎಂಬ ಸುದ್ಧಿ, ಕನ್ನಡ ಮನಗಳನ್ನು ಕಲಿಕಿತು(?)


ಇದರ ಬಗ್ಗೆ ಪ್ರತಿಯೊಬ್ಬ ಕನ್ನಡಿಗರೂ ತಮ್ಮ ಅಕ್ರೋಶವನ್ನು ಸೋಷಿಯಲ್ ಮೀಡಿಯಾದಲ್ಲಿ ಲೈಕ್ ಮತ್ತು ಶೇರ್ ಮಾಡುವ ಮೊಲಕ ಮಮ್ಮಲು ಮರುಗಿದರು.


ಕನ್ನಡದ ಬಗ್ಗೆ ಇಷ್ಟರ ಮಟ್ಟಿಗೆ ಹೋರಾಡುವ ಮನಸ್ಸುಗಳಾದರೂ ಇದ್ದಾವಲ್ಲ, ಕನ್ನಡಮ್ಮ ನೀ ಧನ್ಯ!!


ಪ್ರತಿ ವರುಷ ಹೀಗೆ ಕಂತು ಕಂತಿನಲ್ಲಿ ಸರ್ಕಾರಿ ಶಾಲೆಗಳು ಕಣ್ಣು ಮುಚ್ಚುತ್ತಿರುವುದು ಯಾವುದರ ಮುನ್ಸೂಚನೆಯೆಂಬುದು ಗೊತ್ತಾಗುತ್ತಿಲ್ಲ.


ಆದರೇ ಅಷ್ಟರ ಮಟ್ಟಿಗೆ ನಮ್ಮ ಕನ್ನಡಿಗರ ಮನಸ್ಸು ಕಾನ್ವೇಂಟ್ - ಇಂಗ್ಲೀಷ್ ಮಾಧ್ಯಮದ ಕಡೆ ಹರಿಯುತ್ತಿರುವ ದಿಕ್ಸೊಚಿ ಇದು, ಅಂದರೇ ತಪ್ಪಲ್ಲ.


ಪೇಸ್ ಬುಕ್ ಮತ್ತು ಸೋಷಿಯಲ್ ಮೀಡಿಯದಲ್ಲಿ ಲೈಕ್, ಶೇರ್ ಮಾಡಿದ ಮಂದಿಯೇ ತಮ್ಮ ಮಕ್ಕಳನ್ನು ಕಾನ್ವೇಂಟ್ ಗಳಿಗೆ ಇಂದಿಗೂ ಕಳಿಸುತ್ತಿದ್ದಾರೆ.



 Why? ಎಂದರೇ.. ಅದು ಬೇರೆ.. ನಾವು ಹೀಗೆ ಮರುಗುವುದು ಬೇರೆ.. ಎಂದು ಮೂಗು ಮುರಿಯುವವರು.


ಹೌದು ಸರ್ಕಾರಿ ಸ್ಕೋಲ್ ಮಾತ್ರ ಬೇಡ. ಸರ್ಕಾರಿ ಕೆಲಸ ಮಾತ್ರ ಇರಲಿ. ಎಂಬ ಮನೋಭಾವ ನಮ್ಮಲ್ಲಿ ಬೆಳೆಯುತ್ತಿರುವುದು ಯಾಕೋ ಸರಿ ಕಾಣುತ್ತಿಲ್ಲ.


ಹೆಚ್ಚು ಹೆಚ್ಚು ವಸೂಲಿ ಮಾಡುವ ಖಾಸಗಿ ಶಾಲೆಗಳೇ ನಮ್ಮ ಕಣ್ಣುಗಳಿಗೆ ನಕ್ಷತ್ರಗಳಂತೆ ಹೊಳೆಯುತ್ತಿವೆ.



ಈಗಂತೂ ಹಳ್ಳಿಯಿಂದ ದಿಲ್ಲಿಯವರೆಗೂ ಪ್ರತಿಯೊಬ್ಬರೂ ತಮ್ಮ ಮಕ್ಕಳು ಖಾಸಗಿ ಶಾಲೆಗಳಿಗೆ ಹೋಗಲಿ ಎಂಬ ಪ್ರಾರ್ಥನೆಯೇ...?


ಹೇಗಾದರೂ ಸರಿ, ಎಷ್ಟೇ ಕಷ್ಟವಾದರೂ ಸರಿ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಾಲ ಸೂಲ ಮಾಡಿಯಾದರೂ, ಡೊನೇಷನ್ ಕಟ್ಟಿ ಸಾವಿರ ಸಾವಿರ ಸುರಿದು ಮಕ್ಕಳ ಅಭಿವೃದ್ಧಿಯ ಬಗ್ಗೆ ಯೋಚಿಸುತ್ತಾರೆ.


ಸರ್ಕಾರಿ ಶಾಲೆಗಳು ಉಪಯೋಗವಿಲ್ಲದ್ದವೂ ಎಂಬ ಕೀಳು ಮನೋಭಾವನೆ ಎಲ್ಲಿಂದ ಬಂತೋ ದೇವರೇ ಬಲ್ಲ! ಬಡವರಿಗೆ ಮಾತ್ರ.  ಕೈಲಿ ಏನೂ ಸಾಧ್ಯವಿಲ್ಲದವರಿಗೆ ಮಾತ್ರ ಈ ಶಾಲೆಗಳು.






ಅಯ್ಯೋ ಪಾಪ!




ಸರ್ಕಾರದವರೂ ಸಹ ತಲೆ ಕೆಡಿಸಿಕೊಳ್ಳುವುದಕ್ಕೆ ಹೋಗುವುದಿಲ್ಲ. ಅದಕ್ಕೆ ಒಂದು ದೊಡ್ಡ ಇಲಾಖೆ, ಮಂತ್ರಿಗಳು ,



ದೊಡ್ಡ ಅಧಿಕಾರಿಗಳು, ಮಾಸ್ತರುಗಳು ಎಲ್ಲ ಇದ್ದಾರೆ. ಆದರೇ ಮಕ್ಕಳು ಮಾತ್ರ ಕಡಿಮೆ.


ಅದಕ್ಕೆ ಪ್ರತಿ ವರುಷ ಸಾವಿರ ಸಾವಿರ ಶಾಲೆಗಳು ಶಾಶ್ವತ ಬೀಗ ಜಡಿಸಿಕೊಳ್ಳುತ್ತಿವೆ.


ನಮ್ಮ ಜನಗಳ ಕ್ರೇಜ್ ಇಷ್ಟರ ಮಟ್ಟಿಗೆ ಕಾನ್ವೇಂಟ್ ಮಯವಾಗಿದೆ. ಚಿಕ್ಕ ಚಿಕ್ಕ ಮಕ್ಕಳ ಬಾಯಲ್ಲಿ ಅಸ್ಪಷ್ಟ ಇಂಗ್ಲೀಷ್ ಕೇಳಿದರೇ ಅದು ಏನೋ ಸಂಭ್ರಮ. ತೂದಲು ಮಾತಿನ ಇಂಗ್ಲೀಷ್ ಆ ಮಗುವಿನ ಮುಂದಿನ ಭವಿಷ್ಯ ರೂಪಿಸುವುದು ಎಂಬ ಭ್ರಮೆಯಲ್ಲಿ ಪ್ರತಿಯೊಬ್ಬ ಪೋಷಕರು ಬಂದಿಯಾಗಿರುವವರು.



ಹೆಚ್ಚು ಹಣ ಪಡೆಯುವುದು ಇದಕ್ಕೆ. ಅವರು ಅಷ್ಟು ದುಡ್ಡು ವಸೂಲಿ ಮಾಡುತ್ತಾರೆ ಎಂದರೇ ಅಷ್ಟು ಚೆನ್ನಾಗಿ ಕಲಿಸಿಯೇ ಕಲಿಸುತ್ತಾರೆ ಎನ್ನುತ್ತಾರೆ. ಈ ಸರ್ಕಾರಿ ಶಾಲೆಗಳಲ್ಲಿ ಏನೂ ಕಲಿಸುತ್ತಾರೆ ಗುರು? ಅಲ್ಲಿ ನೆಟ್ಟಗೆ ಒಬ್ಬ ಮೇಷ್ಟ್ರೇ ಇಲ್ಲ ಎನ್ನುತ್ತಾರೆ.




ನಮ್ಮ ದೇಶದ ಸರ್ಕಾರಿ ಶಾಲೆಗಳನ್ನು ಮುಂದೆ ಇತಿಹಾಸದಲ್ಲಿ ಓದುವ ಕಾಲ ಬಂದರೇ ಸೋಜಿಗವಲ್ಲ.


ಈ ತಿಂಗಳಂತೂ ಮಕ್ಕಳಿಗೆ ಮತ್ತು ಹೆತ್ತವರಿಗೆ ಬ್ಯುಸಿ ತಿಂಗಳು. ಮಕ್ಕಳನ್ನು ಹೊಸ ಹೊಸ ಶಾಲೆಗಳಿಗೆ ಸೇರಿಸಲು ಎಷ್ಟೊಂದು ಕಷ್ಟಪಟ್ಟಿರುತ್ತಾರೆ. ಖಾಸಗಿ ಶಾಲೆಗಳಲ್ಲಿ ಸೀಟು ಸಿಗುವುದು ಅಷ್ಟು ಸುಲಭದ ಮಾತಲ್ಲ. ಅದರ ಪುರಾಣವೇ ಬೇರೆ. ಅದಕ್ಕಾಗಿ ವರುಷದಿಂದ ಕಾಯುತ್ತಿರುತ್ತಾರೆ.


ಅಂತೂ ಈ ತಿಂಗಳಿಂದ ಮಗು ಸ್ಕೊಲಿಗೆ ಹೋಯ್ತು ಎಂದು ನಿಟ್ಟುಸಿರುಬಿಟ್ಟಿರುತ್ತಾರೆ.


ಈ ಬದಲಾದ ಕಾಲ ಮತ್ತು ಜನಗಳ ಮನೋಭಾವ ಮಕ್ಕಳನ್ನು ಮಕ್ಕಳಾಗಿ ನೋಡಲಾರದಂತಾಗಿದೆ. ಚಿಕ್ಕ ಮಕ್ಕಳೇ ಸಿರಿಯ್ಸ್ ಆದ ದೊಡ್ಡವರಂತೆ ವರ್ತಿಸುತ್ತಿದ್ದಾರೆ. ಹೆತ್ತವರ ದುಡಿಮೆ ಮತ್ತು ಹಂಬಲ ತಮ್ಮ ಮುದ್ದು ಮಕ್ಕಳ ಮುಖದ ಮೇಲೆ ಕಾಣುತ್ತಿದೆಂಬಂತೆ ಭಾಸವಾಗುತ್ತಿದೆ.


ವಯಸ್ಸಿಗೆ ಮೀರಿದ ಮಾತು, ವಯಸ್ಸಿಗೆ ಮೀರಿದ ನಡಾವಳಿಕೆ ಮತ್ತು ಗಂಭೀರತೆ ಇಂದಿನ ಮಕ್ಕಳಲ್ಲಿ ಸಾಮಾನ್ಯವಾಗಿ ಕಾಣಬಹುದಾಗಿದೆ.


ನೀವು ನೋಡಿರಬಹುದು.. ಇಂದಿನ ನಮ್ಮ ಮನೆಯ ಟಿ.ವಿಯಲ್ಲಿ ಬರುವ ರೀಯಾಲಿಟಿ ಶೋ ನಲ್ಲಿ ಬಾಗಿಯಾಗುವ ಪುಟ್ಟ ಪುಟ್ಟ ಕಂದಮ್ಮಗಳ ಬಾಯಲ್ಲಿ ದೊಡ್ಡವರು ಮಾತನಾಡುವ ಮಾತುಗಳು.ಮಕ್ಕಳ ನಡೆ ನುಡಿಗಳು ಕಂಡು ದೊಡ್ಡವರೇ ನಾಚುವಂತಾಗಿದೆ.


ಪ್ರತಿಯೊಂದರಲ್ಲೂ ಸ್ವರ್ದೆ. ಮಕ್ಕಳು ಮಕ್ಕಳಾಗಿ ದೊಡ್ಡವರು ಬಿಟ್ಟೇ ಇಲ್ಲವೆಂದು ಅನಿಸುತ್ತದೆ.


ಆ ತುಂಟತನ, ಆಟ- ಪಾಠ ಎಲ್ಲಾ ಮಾಯವಾಗಿಬಿಟ್ಟಿದೆ! ಬಾಲ್ಯವೇ ಎಲ್ಲೋ ಕಳೆದು ಹೋಗುತ್ತಿದೆ


ಪ್ರತಿಯೊಂದರಲ್ಲೂ ’ದಿ ಬೇಸ್ಟ" ನೀ ಆಗಬೇಕು ಎಂಬ ಈ ಸುಸ್ತು ಮಕ್ಕಳ ಮನಸ್ಸಿನಲ್ಲಿ ಕಾಣುತ್ತಿದೇವೆಂದು ಅನಿಸುತ್ತದೆ.


ನನಗಂತೂ ಅಯ್ಯೋ ಪುಟ್ಟ ಪಾಪುವೇ ಎಂದೆನಿಸುತ್ತದೆ.


ಅಂಕ, ಸ್ಥಾನ, ಹುದ್ದೆ ಎಂಬ ಶಬ್ಧಗಳೇ ಅವುಗಳ ಗುರಿ ಮಾಡಿಬಿಟ್ಟಿದ್ದೇವೆನೋ.


ನೆನಸಿಕೊಂಡರೇ ಮೈ ಜುಂ ಅನಿಸುತ್ತದೆ.


ಈ ರೀತಿಯ ಭಾರಿ ಭರವಸೆಗಳ, ಕನಸುಗಳ, ಭವಿಷ್ಯದ ಬಾರವಾದ ಚೀಲಗಳನ್ನು ಹೊತ್ತುಕೊಂಡು ಮಕ್ಕಳು ತನ್ನ ಮೊದಲ ಹೆಜ್ಜೆಗಳನ್ನು ಶಾಲೆಗಳ ಕಡೆಗೆ ಈ ತಿಂಗಳು ಹಾಕಿಬಿಟ್ಟಿವೆ.


ಮುಂದಿನ ಒಂದು ವರುಷ ಓದುವುದೊಂದೆ ಅವುಗಳ ಕೆಲಸ. ಓದು ಓದು ಮತ್ತು ಓದು. ಹೆತ್ತವರಿಗೂ ಒತ್ತಡ ಮಕ್ಕಳಿಗೂ  ಒತ್ತಡ.


ಇಂದಿನ ಪೋಷಕರು ತಮ್ಮ ಮಕ್ಕಳ ಓದುವುದರ ಬಗ್ಗೆ ತಲೆ ಕೆಡಿಸಿಕೊಂಡಷ್ಟು ಮತ್ಯಾವುದರ ಬಗ್ಗೆಯು ಯೋಚಿಸಿರುವುದಿಲ್ಲ.


ಎಲ್ಲಾ ದುಭಾರಿ. ಒಂದು ಮಗು ಜನಿಸಿದರೇ ಸಾಕು ಹೆತ್ತವರ ಯೋಚನೆ ದುಪ್ಪಟ್ಟಾಗುತ್ತದೆ.


ಮಕ್ಕಳಾದ  ಮೇಲೆ ತಂದೆ ತಾಯಿಗಳ ಜೀವನ ಅಷ್ಟೇ. ಮಕ್ಕಳನ್ನು ಒಂದು ದಡ ಸೇರಿಸುವುದರಲ್ಲಿಯೇ ತಮ್ಮ ಪೂರ್ತಿ ಅಯುಷ್ಯವನ್ನು ಕಳೆದುಬಿಡುತ್ತಾರೆ.


ನಮ್ಮ ಹಿಂದಿನವರು ಹೀಗೆಲ್ಲಾ ಎಂದು ಚಿಂತಿಸಿರಲಾರರು. ಆದರೇ ಇದರ ಜರೂರತೂ ಇಂದು ಹೆಚ್ಚು. ಏನೂ ಮಾಡುವ ಆಗಿಲ್ಲ! ಕಾಲಕ್ಕೆ ತಕ್ಕಂತೆ ಬದುಕಬೇಕು. ಈಗ ಸುಮ್ಮನೇ ಓದಿದರೇ ಯಾರು ಮೂಸಿಯು ನೋಡುವುದಿಲ್ಲ. ಎಲ್ಲಾದರಲ್ಲೂ ಚ್ಯೂಟಿ ಇರುವವರೇ ಬೇಕು. ಅದಕ್ಕಾಗಿಯೇ ಪ್ರತಿಯೊಬ್ಬರೂ ಶಿಕ್ಷಣವನ್ನು ತಪಸ್ಸಿನಂತೆ ಜಪಿಸುತ್ತಾರೆ.


ಇದಕ್ಕಾಗಿ ನಮ್ಮ ಎಲ್ಲಾ ಖಾಸಗಿ ಶಾಲೆಗಳು, ಶಿಕ್ಷಣ ಸಂಸ್ಥೆಗಳು ಕಟಿ ಬದ್ಧವಾಗಿವೆ!


ಓದು ಒಂದು ವ್ಯಾಪಾರವನ್ನಾಗಿ ಮಾಡಿತ್ತಿದ್ದೇವೆನೋ ಅನಿಸುತ್ತಿದೆ. ಅದು ಆಗಬಾರದು. ಎಂದೆಂದಿಗೂ. ಎಂಬುದೇ ನನ್ನ ಆಶಯ!

ಬುಧವಾರ, ಏಪ್ರಿಲ್ 27, 2016

ಹೆಚ್ ೪

ದೂರದ ಬೆಟ್ಟ ನುಣ್ಣಗೆ ಎಂಬುದು ಇಲ್ಲಿಗೆ ಬಂದ ಮೇಲೆ ಗೊತ್ತಾಗಿದ್ದು.

ಅದು ಯಾಕೆ ನಮ್ಮ ಜನ ದೂರದ  ಅಮೇರಿಕಾ ಅಥವಾ ಇತರೆ ದೇಶಗಳ ಬಗ್ಗೆ ಹುಬ್ಬೇರಿಸುವಂತ ಭಾವನೆಗಳನ್ನು ಇಟ್ಟುಕೊಂಡಿದ್ದಾರೋ? ದೇವರಿಗೆ ಗೊತ್ತು.

ಇರುವುದನ್ನೆಲ್ಲ ಬಿಟ್ಟು ಇರದಿರದ ಕಡೆಗೆ ಮನಸ್ಸು ಹರಿಯಬಿಡುವುದೇ ಜೀವನವಾ?

ಡಿಪೆಂಡೆಂಟ್ ವೀಸಾದಲ್ಲಿ ಪ್ರವಾಸ ಮಾಡುವುದು ಒಂದು ರೀತಿಯಲ್ಲಿ ಖುಷಿ ಕೊಡುವ ವಿಷಯವೇ..? ಅದು ಭಾರತದಲ್ಲಿದ್ದುಕೊಂಡು  ವಿದೇಶಕ್ಕೆ ಹಾರುವ ಭಾವನೆಯ ಖುಷಿ ಇಲ್ಲಿಗೆ ಬಂದ ಮೇಲೆ ಖಂಡಿತ ಇರಲಾರದೆಂದು ಅನಿಸುತ್ತದೆ.

ಇದು ನಿಜವಾಗಿಯೂ ಒಂಟಿ ಬಾಳ ನೌಕೆಯೇ ಸರಿ. ಗಂಡ ಎಂಬ ಪ್ರಾಣಿ ಕೆಲಸ ಕೆಲಸ ಎಂದು ಬರಾ ಬರೀ ೧೮ ಕ್ಕೊ ಹೆಚ್ಚು ಗಂಟೆಗಳು ಕೆಲಸದಲ್ಲಿ ಮುಳುಗೇಳುವಂತಹ ಪ್ರಾಜೆಕ್ಟ್ ಸಿಕ್ಕಿದರೇ.. ಹೆಂಡತಿ ನೀ ನನಗೆ ಬೆಂಡು ಎತ್ತುತೀ ..ಎಂದೇ ಹೇಳುತ್ತಾರೆ ಇಲ್ಲಿಯ ಗಂಡುಗಳು.

ಸತ್ಯವಾಗಿ ಮನಸ್ಸುಗಳು ಪರಸ್ಪರ ಪ್ರೀತಿಯಿಂದ ಆರಾಮಾಗಿ ಮಾತನಾಡುವ ಅವಕಾಶವೇ ಇಲ್ಲಿ ಇಲ್ಲವೆಂದು ಅನಿಸುತ್ತದೆ. ಇಲ್ಲಿ ಎಲ್ಲಾ ಇದೆ. ಕಾರು ಇದೆ. ದೊಡ್ಡ ಮನೆಯಿದೆ. ಬಹು ಬೇಗ ಆಪೀಸ್ ಗೆ ಹೋಗುತ್ತಾರೆ. ಸಂಜೆಯ ಟ್ರಾಪಿಕ್ ಜಂಜಾಟವಿಲ್ಲದೇ ಬೇಗ ಮನಗೆ ಬರುತ್ತಾರೆ. ಎಂದು ಖುಷಿಪಡುವ ಪಾಡು ನಮಗಿಲ್ಲ.

ಪುನಃ ಸರಿ ರಾತ್ರಿಯವರೆಗೂ ಆಪಶೂರ್ ಮೀಟಿಂಗ್. ಅದು ಇದು ಎಂದು ಲ್ಯಾಪ್ ಟಾಪ್ ನಲ್ಲಿ ತಲ್ಲಿನ ಮೂರ್ತಿಗಳಾಗುತ್ತಾರೆ ನಮ್ಮವರು.

ಕೆಲಸದಲ್ಲಿ ತೋರುವ ಪ್ರೀತಿಯನ್ನು ಮನೆಯಲ್ಲಿರುವ ನೆಚ್ಚಿನ ಜೀವಂತ ಜೀವಗಳಿಗೆ ವಿಕ್ ಡೇಸ್ ಗಳಲ್ಲಿ ಎಂದಿಗೂ ಪ್ರೀತಿ/ಸಮಯ ತೋರಲಾರರು.

ನಮ್ಮ ಊರಲ್ಲಾದರೋ ಗೆಳೆತಿಯರು, ಅಕ್ಕ ಪಕ್ಕದವರು ಮಾತನಾಡಲು, ನೋಡಲು ಸಿಗುತ್ತಾರೆ.

ಇಲ್ಲಿಯೋ ಮನೆಯಲ್ಲಿರುವ ಎರಡು ಜೀವಗಳೇ ಪರಸ್ಪರ ಆಸರೆ.

ಬಾಯಿ ತುಂಬ ಎರಡು ಮಾತನಾಡಲು ಸಾಧ್ಯವಾಗದ ಬ್ಯುಸಿ ಲೈಫ್ ಇದು.

ಹೊರಗಡೆ ಹೋದರೋ ನಮ್ಮ ನಗರದಲ್ಲಿ ಬಂದ್ ಅಥವಾ ಕರ್ಪ್ಯೂ ಸಮಯದಲ್ಲಿ ಕಾಣುವಂತ ಬೀಕೋ ಎನ್ನುವ ವಾತವರಣ. ಜನಗಳನ್ನು ನೋಡಬೇಕು ಎಂದರೇ ಪುನಃ ಶಾಪಿಂಗ್ ಮಾಲ್ ಗಳು ಇರುವ ಏರಿಯಾಕ್ಕೇ  ಹೋಗಬೇಕು. ಕಾಲು ನಡಿಗೆಯಲ್ಲಿ ಹೋಗಲಾರದಷ್ಟು ದೂರ ಈ ಜಾಗಗಳು.

ಇಲ್ಲಿ ಜನಗಳಿಲ್ಲ, ಜಾಗ್ ಮಾತ್ರ ಜಾಸ್ತಿ ಇದೆ. ಅದೇ ನಮ್ಮೊರಲ್ಲಿ ಹೆಜ್ಜೆ ಹೆಜ್ಜೆಗೂ ಪರಿಚಿತ ಮುಖಗಳ ದರ್ಶನ. ಆ ಸುಖ ಇಲ್ಲಿ ಇಲ್ಲ ಬಿಡಿ!

ಹೆಂಡತಿಯರಾಗಿ ಬಂದಿರುವ ನಮ್ಮಂತವರ ಮನಸ್ಸಿನ ತಳಮಳ ಕೇಳುವ ಮನಸ್ಸುಗಳು ಇಲ್ಲ!

ಇಲ್ಲಿ ಎಲ್ಲಾ ಇದೆ. ವಾಟ್ಸ್ ಪ್, ಪೇಸ್ ಬುಕ್ ಇತ್ಯಾದಿಗಳೇ ನಿತ್ಯ ನಿರಂತರ ಸಂಗಾತಿಗಳು. ಇಲ್ಲಿ ನೇಟ್ ಯಾವಾಗಲು ಇರುತ್ತದೆ. ನಮ್ಮೊರಲ್ಲಿ ಇವುಗಳ ಬಳಕೆಯನ್ನು ಮಾಡುವುದೇ ಖುಷಿಯಾಗುತ್ತಿರುತ್ತಿತ್ತು. ಆದರೇ ಇಲ್ಲಿ ಇದು ಸಹ ಮಹಾ ಬೋರು.

ಒಂದೇ ಒಂದು ಖುಷಿಯ ವಿಚಾರ ಎಂದರೇ ಇಲ್ಲಿಗೆ ಬರುವುದಕ್ಕೂ ಮೊದಲು ಅಡಿಗೆ ಮನೆಯ ದಿಕ್ಕು ಕಾಣದ ನನ್ನ ಕೈಗಳು ಈಗ ಎಲ್ಲದರಲ್ಲೂ ನಿಪುಣತೆಯನ್ನು ಕಂಡಿವೆ. ಇದರಲ್ಲಾದರೂ ಅಟ್ ಲಿಸ್ಟ್ ಸ್ವಲ್ಪ ನನ್ನನ್ನು ನಾನು ಮರೆತು ತರಾವೇರಿ ಖಾಧ್ಯಗಳನ್ನು ತಯಾರು ಮಾಡುವುದನ್ನು ಕಲಿಯಲು ಅನುಕೂಲವಾಗಿದೆ. ಇದಕ್ಕೆ ನಾನು ಮತ್ತೇ ಇಂಟರ್ ನೇಟ್ ಗೆ ಥ್ಯಾಂಕ್ಸ್ ಹೇಳಬೇಕು.

ಅಲ್ಲಿಯಾಗಿದ್ದರೆ, ಅಕ್ಕ ಪಕ್ಕದ ಅಂಟಿ, ಅಮ್ಮಂದಿರಿಂದ ಕಲಿಯಬೇಕಾಗಿತ್ತು. ಇಲ್ಲಿ ಗೊಗಲ್ , ಯು ಟ್ಯೂಬ್ ಗಳೇ ಅಕ್ಕರೆಯ ಅಮ್ಮ - ಅಂಟಿಯರು. ಇದರಲ್ಲಿಯೇ ನಮ್ಮ ಮನ ಅರಳುವ ವಿಷಯಗಳನ್ನು ಕೇಳಬೇಕು ಮತ್ತು ನೋಡಬೇಕು.

ಕಾರು ಚಲಾಯಿಸಲು ಕಲಿಯದಿದ್ದರೇ ಗಂಡನ ಪಾದವೇ ಗತಿ. ಅವರು ಪ್ರೀ ಆದ ವಿಕೇಂಡ್ ಗೆ ಕಾದಿದ್ದು. ಹತ್ತು ಬಾರಿ ಗೊಗೆರದು ಅಲ್ಲಿ ಇಲ್ಲಿಗೆ ಕರೆದುಕೊಂಡು ಹೋಗಬೇಕು. ಇಲ್ಲ ಎಂದರೇ ಆರಮಾಗಿ ಮನೆಯಲ್ಲಿಯೇ ತಿಂದುಂಡು ಸುಸ್ತಾಗಿ ಮಲಗಿಬಿಡುತ್ತಾರೆ.

ಪಾಪ!!! ಏನು ಮಾಡುವುದು ಇರೋ ೨ ದಿನವಾದರೂ ರೇಸ್ಟ್ ಬೇಡವೇ ಬ್ಯುಸಿ ಮನಸ್ಸುಗಳಿಗೆ?

ಬೇಕೆಂದಾಗ ಬ್ಯೂಟಿ ಪಾರ್ಲರ್ ಗಳಿಗೆ ಹೋಗಲು ಆಗುವುದಿಲ್ಲ. ಅದೇ ನಮ್ಮೊರಲ್ಲಿ ಈ ಗಂಡು ಜೀವಗಳಿಗೆ ಗೊತ್ತಿಲ್ಲದಂತೆ ಎಷ್ಟು ಭಾರಿ ಹೋಗುತ್ತಿದ್ದೇವೋ. ಹೀಗೆ ಆದರೇ ನಮ್ಮ ಕಾಂತಿಯುಕ್ತ ಮುಖಗಳ ಪಾಡು ದೇವರಿಗೆ ಪ್ರೀತಿ!

ನೋಡುತ್ತಿನಲ್ಲಾ.. ಇಲ್ಲಿರುವ ವಿದೇಶಿ  (ಭಾರತೀಯ) ಮಹಿಳೆಯರ ಒಂದು ಮುಖ್ಯ ಕೆಲಸ ಎಂದರೇ! ಮುದ್ದು ಮಕ್ಕಳ ಜೋಪಾನ. ಅವುಗಳ ಹಿಂದೆ ಯಾವಾಗಲೂ ಓಡುವುದು. ಯಾಕೆಂದರೇ ಇರುವವರು ನಾವಿಬ್ಬರೇ ಅಜ್ಜ , ಅಜ್ಜಿ, ಅಕ್ಕ -ಪಕ್ಕದವರು ಯಾರು ಇಲ್ಲ.

ಸೋ ಟೋಟಲಿ ಮಕ್ಕಳನ್ನು ನೋಡಿಕೊಳ್ಳುವುದರಲ್ಲಿಯೇ ನನ್ನ ಜೀವನ ಮೋಕ್ಷ ಕಾಣುವುಂತಾಗಿದೆ.

ಎಷ್ಟೇ ಓದಿದ್ದರೂ ಸೌಟು ಹಿಡಿಯುವುದು ತಪ್ಪುವುದಿಲ್ಲ ಎಂಬಂತೆ, ಯಾವುದೇ ಕೆಲಸ ಮಾಡುತ್ತಿದ್ದರೂ ಎಚ್ ೪ ಮೇಲೆ ಬಂದರೇ ಮಕ್ಕಳನ್ನು ಸಂಬಾಳಿಸುವುದು ತಪ್ಪುವುದಿಲ್ಲ! ಇವುಗಳ ಕಾರ್ಯ ಮಾಡುವುದರಲ್ಲಿಯೇ ಅರ್ಧ ಆಂಟಿಗಳಾಗಿದ್ದೇವೆ ಅನಿಸುತ್ತದೆ. ಮಕ್ಕಳಿಗಾದರೂ ಯಾರಿದ್ದಾರೇ ನಾನೇ ಅಜ್ಜಿ/ಅಮ್ಮ ಎಲ್ಲಾ.

ಆದರೂ ಮಕ್ಕಳಿರುವುದು ೮೦% ಮನಸ್ಸಿಗೆ ಖುಷಿ ಕೊಟ್ಟಿದೆ. ಇದರ ಮೊಲಕವಾದರೂ ನಮ್ಮ ಮನಸ್ಸುಗಳು ಸ್ವಲ್ಪ ಬ್ಯುಸಿಯಾಗಿವೆ. ಇಲ್ಲದಿದ್ದರೇ ಸೋಮಾರಿಗಳಾಗಿ ರಸ್ಟ್ ದಾರಿ ಹಿಡಿಯುತ್ತಿದ್ದವು.

ನಾನೇಷ್ಟು ಖುಷಿ ಪಟ್ಟಿದ್ದೆ, ವಿದೇಶಕ್ಕೆ ಹೋಗಲು ಸಿದ್ದತೆ ಮಾಡಿಕೊಳ್ಳುವಾಗ. ಪಾಸ್ ಪೊರ್ಟ್ ಮಾಡಿಸಿವುದರಿಂದ ಹಿಡಿದು, ಏರ್ ಟಿಕೇಟ್ ಬುಕ್ ಮಾಡುವವರೆಗೂ. ನಾ ವಿದೇಶಕ್ಕೆ ಹೋಗುವೆನು ಎಂದು ತಿಳಿದು ಅಕ್ಕಪಕ್ಕದ ಮನೆಯವರು, ಬಂದು ಬಳಗದವರು ನನ್ನಡೆಗೆ ನೋಡುವ ನೋಟವೇ ಬದಲಾಗಿದ್ದು. ಅದನ್ನು ಕಂಡು ಮನದಲ್ಲಿಯೇ ನಕ್ಕಿದ್ದು. ವಿದೇಶಕ್ಕೆ ಹೋಗುತ್ತಿದ್ದೇನೆ ಎಂದು ೩ ಭಾರಿ ಸೋಟ್ ಕೇಸ್ ತುಂಬುವಷ್ಟು ಶಾಪಿಂಗ್ ಮಾಡಿದ್ದು... ನೆನಸಿಕೊಂಡರೇ ಈಗ ಅಯ್ಯೋ ಅನಿಸುತ್ತಿದೆ.

ಆ ಸಂಭ್ರಮ  ಇದ್ದಿದ್ದು ನಾಲ್ಕು ದಿನ ಮಾತ್ರ. ಆ ಒಂದು ವಾರ ನಿತ್ಯ ನೋಡುವ ಪ್ರತಿ ನೋಟವನ್ನು ಕ್ಯಾಮರದಲ್ಲಿ ಸೇರೆ ಹಿಡಿದು ಪೇಸ್ ಬುಕ್ ಗೆ ತುರಕಿ ಲೈಕ್ ಗಳಿಗೆ ಕಾಯುತ್ತಿದ್ದುದ್ದೇ ಬಂತು. ನಮ್ಮ ದೇಶದ ಮಂದಿ ಶೋಟಿಂಗ್ ಗೆ ಅದಕ್ಕಾಗಿಯೇ ವಿದೇಶದ ಜಾಗಗಳಿಗೆ ಬರುವುದು.. ಯಾವ ದಿಕ್ಕು ನೋಡಿದರೂ ಕ್ಯಾನವಾಸ್ ಮೇಲೆ ಬರೆದ ಚಿತ್ರದಂತೆ. ಈ ರೀತಿಯ ನೋಟ ನಮ್ಮ ಆ ದೂಳು ಊರಲ್ಲಿ ಎಲ್ಲಿ ಕಾಣಲಿ?  ನಾನಿರುವ ಈ ಚಿಕ್ಕ ವಿಲೇಜೇ ಇಗಿದ್ದಾರೇ.. ನ್ಯೂಯಾರ್ಕ್ ಹೇಗಿರಬಹುದು ಓ ದೇವರೇ ಎಂದು ಎರಡು ದಿನ ಕಣ್ಣು ಮುಚ್ಚಿರಲಿಲ್ಲ.

ಆದರೇ ಇದು ಎಲ್ಲಾ ಬರೀ ಒಂದು ತಿಂಗಳವರೆಗೆ ಮಾತ್ರ ತುಂಬ ಚೆನ್ನಾ ಎಂದು ಅನಿಸಿದ್ದು.

ಅದು ನಿಜ ಕಣ್ರಿ. ನಮ್ಮ ಊರು, ನಮ್ಮ ಅಮ್ಮ ಎಂದಿಗೂ ನಿತ್ಯ ಸುಂದರ. ಇಲ್ಲಿ ಯಾಕೋ ಎಲ್ಲಾ ಇದ್ದು ಏನೋ ಇಲ್ಲ ಎಂದೆನಿಸುತ್ತದೆ. ಭಾವನೆಗಳನ್ನು ಅತ್ತಿಟ್ಟುಕೊಂಡಿದ್ದೇವೆ ಅನಿಸುತ್ತದೆ. ಅದೇ ನಾಲ್ಕು ಗೋಡೆಗಳ ಮಧ್ಯೆ ನಾ ಒಂಟಿ ಬಂದಿ ಎಂದೆನಿಸುತ್ತದೆ.

ಯಾರ ಬಳಿ ಬಿಚ್ಚು ಮನಸ್ಸಿನ ಮಾತನ್ನಾಡಲಿ? ಇದು ಎಲ್ಲಾ ಬೇಕಿತ್ತಾ ?  ಯಾವುದೋ ದೊರದ ಆಸೆಗಳಿಗಾಗಿ ನಮ್ಮ ಹೆತ್ತವರನ್ನು, ಬಂದು ಬಳಗವನ್ನು ಬಿಟ್ಟು ಇಲ್ಲಿ ಯಾಕಿದ್ದೇವೆ. ಯಾಕಿಷ್ಟು ಜನ ಇಲ್ಲಿಯ ಜಿ.ಸಿ ಗಳಿಗಾಗಿ ಬಕಾ ಪಕ್ಷಿ ಥರಾ ಕಾಯುತ್ತಿದ್ದಾರೆ, ಪ್ರಾರ್ಥಿಸುತ್ತಿದ್ದಾರೆ. ಜಿ.ಸಿ ಮುಂದೆ ನಮ್ಮ ಆಧಾರ್ ಕಾರ್ಡು ಡಲ್ಲು ಎಂದು ನಮ್ಮ ಜನಗಳಿಗೆ ಯಾಕೆ ಅನಿಸುತ್ತಿದೆ ?

ನಮ್ಮ ದೇಶದಲ್ಲಿರುವ ಅತ್ಯುತ್ತಮ ಸ್ಥಳಗಳ ಪರಿಚಯ ಮಾಡಿರದಿದ್ದರೂ ವಿದೇಶ ಸ್ಥಳಗಳನ್ನು ನೋಡಬೇಕು ತಿರುಗಾಡಬೇಕು ಎಂಬ ಥಹಾ ಥಹಾ ಎಲ್ಲಿಂದ ಬರುತ್ತದೆ?

ಏನು ಮಾಡುವುದು ಅದೇ ಒಂದು ರೀತಿಯ ಬೋರು ಮನಸ್ಸಿಗೆ ಕನಿಷ್ಟ ಬದಲಾವಣೆಯಾಗಿದೆ ಇಲ್ಲಿ!!

ಬದಲಾಗುತ್ತಿರುವುದು ನಾವುಗಳ ಅಥವಾ ನಮ್ಮ ವ್ಯವಸ್ಥೆಯಾ? ಹುಟ್ಟಿ ಬೆಳೆದು, ಓದಿದ  ದೇಶದಲ್ಲಿಯೆ ಇದ್ದು ಏನಾದರೂ ಮಾಡುವ ಬದಲು, ಇಲ್ಲಿಗೆ ಹೀಗೆ ಬಂದು ಯಾಕೆ ಹೊಸ ರೀತಿಯ ಬದುಕಿಗಾಗಿ ಕಷ್ಟಪಡುವುದು ಯಾವ ಸುಖ? ಗೊತ್ತಾಗುತ್ತಿಲ್ಲ!

ಇರುವ ಒಂದು ಎರಡು ಮಕ್ಕಳನ್ನು ಕಟ್ಟಿಕೊಂಡು ಇಬ್ಬರು ದುಡಿಯಲು ತೊಡಗಿದರೇ ಅದು ಹೇಗೆ ಸ್ವಾಸ್ಥ್ಯ ಕುಟುಂಬವೆಂದೆನಿಸುತ್ತದೆ?

ಆದರೂ ದಿನ ಕಳೆದರೇ ಎಂಥವರೂ ಎಂಥ ಸನ್ನಿವೇಶಕ್ಕಾದರೂ ಒಗ್ಗಿ ಕೊಳ್ಳುತ್ತಾರೇ ಅನ್ನುವಂತೆ ಇಲ್ಲಿರುವುದೇ ಮೇಲು ಅನಿಸುತ್ತದಲ್ಲಾ ಯಾಕೆ? ನಾವು ಹುಟ್ಟಿದ ಊರೇ ಪರಕೀಯ ಅನಿಸುತ್ತದಲ್ಲ ಯಾಕೇ?

ಇದೇ ಕಾಲ ನಿಯಮವಾ?



ಶುಕ್ರವಾರ, ಏಪ್ರಿಲ್ 8, 2016

ಬೇವು ಬೆಲ್ಲದಂತೆ ಬದುಕು

ಮಣ್ಣಿನ ಗುಣ ಮರೆಯಬಾರದು. ಹೌದು ಯುಗಾದಿ ಹಬ್ಬ ನಮ್ಮ ಮಣ್ಣಿನ ಹಬ್ಬ. ವರುಷದ ಆರಂಭದ ಹಬ್ಬ. ಹಳ್ಳಿಯ ಪ್ರತಿ ಮನೆಯು ತಪ್ಪದೇ ಸಂಭ್ರಮದಿಂದ ಆಚರಿಸುವ ದೊಡ್ಡ ಹಬ್ಬ.

ಹಳ್ಳಿಯ ಹಬ್ಬದ ಆಚರಣೆಯ ಸಂಭ್ರಮ ಹಾಗೆಯೇ ಮನದಲ್ಲಿ ಕಲರ್ ಕಲರ್ ಪೊಟೋದಂತೆ ಅಚ್ಚು ಹೊತ್ತಿದೆ. ಅದು ಎಂದು ಮರೆಯಾಗದು ಅಂಥ ಹಬ್ಬದ ದಿನಗಳು ಈ ಪಳ ಪಳ ಹೊಳೆಯ ಸಿಟಿಯಲ್ಲಿ ಕನಸು ಮಾತ್ರವಾಗಿದೆ.

ಹಬ್ಬಗಳೆಂದರೇ ಸುತ್ತ ಮುತ್ತಲಿನವರೆಲ್ಲ ಸೇರಿ ಒಟ್ಟಿಗೆ ಒಂದಾಗಿ ಕಲೆತು ಸಂಭ್ರಮಿಸುವುದೆಂದರ್ಥ.

ಜಾತ್ರೆ, ಪರಿಷೇ, ಕೆಂಡಗಳೆಂದರೆ ಸುತ್ತಲಿನ ಹತ್ತು ಹಳ್ಳಿಗಳಲ್ಲಿರುವವರೆಲ್ಲ ಕಲೆತು ನಡೆಸುವ ತೇರು.  ಪ್ರತಿ ಮನೆಯವರು ತಮ್ಮ ನೆಂಟರು ಇಷ್ಟರನ್ನು ತಪ್ಪದೆ ಬನ್ನಿ ಎಂದು ಕರೆಯುವ ಜಾತ್ರೆ ಎಂದಾದರೂ ಮರೆಯುವುದುಂಟೆ?  ವರುಷಕ್ಕೆ ಒಮ್ಮೆ ನಡೆಯುವ ಈ ರೀತಿಯ ಅಪರೂಪದ ಹಬ್ಬಗಳಿಗೆ ಸೇರುವ ಜನ ಜನ ಕಂಡೆ ಮನ ತುಂಬಿಬರುವುದು. ಹಬ್ಬ ಆಚರಿಸಿದ ಸಮಧಾನ ಪ್ರತಿಯೊಬ್ಬರ ಮನದಲ್ಲಿ ನೂರುಕಾಲ ಸ್ಥಾಯಿಯಾಗಿರುವುದು.

ಈ ರೀತಿಯ ಸಂತೋಷದ ದಿನಗಳನ್ನು ಕೇವಲ ಕಥೆಗಳಂತೆ ಕೇಳುವುದು, ಸಿನಿಮಾದಂತೆ ಟಿ.ವಿ ಯಲ್ಲಿ ನೋಡುವುದೇ ಈಗಿನ ಸುಖವಾಗಿದೆ.

ಅನುಭವಿಸಲು ಸಾಧ್ಯವಿಲ್ಲ. ಇದು ಎಲ್ಲಾ ಎಲ್ಲಿಂದ ಎಲ್ಲಿಗೋ ಬಂದು ನಿಂತಂತಿದೆ.

ಇಂದು ಹಳ್ಳಿಗಳು ಸಹ ಅರ್ಧದಷ್ಟು ಬದಲಾಗಿರುವುದು ಸುಳ್ಳಲ್ಲ.

ಆದರೂ ಅದೇ ಮಣ್ಣಿನ ವಾಸನೆ ಇಂದಿಗೂ ಇದ್ದೆ ಇರುತ್ತದೆ. ವಂಸಂತದ ಚಿಗುರು ಹಳೆ ಮರದಲ್ಲಿ ಕಾಲಕ್ಕೆ ತಕ್ಕಂತೆ ಬಂದೆ ಬರುತ್ತದೆ. ಬದಲಾಗಿರುವುದು ನಮ್ಮ ಮನಸ್ಸಿನ ನೋಟ ಮಾತ್ರ ಅಂದರೇ ತಪ್ಪಲ್ಲ!

ಇಂದು ಇರುವ ಮೂರು ಮಂದಿಯೇ ಮನೆಯಲ್ಲಿ ಬಾಗಿಲು ಹಾಕಿಕೊಂಡು ಎಲ್ಲಾ ಹಬ್ಬಗಳನ್ನು ಚೆನ್ನಾಗಿ ಆಚರಿಸಿಕೊಳ್ಳುವೆವು. ಮನೆಯಲ್ಲಿನ ಸಂಭ್ರಮದ ಸೆಲ್ಫಿ ಪೊಟೋಗಳನ್ನು ಎಪ್. ಬಿ ಯಲ್ಲಿ ಅಪಲೋಡ್ ಮಾಡಿ ಲೈಕ್ ಗಳಿಗಾಗಿ ಕಾಯುವವ ತವಕದ ಮನಸ್ಸುಗಳು ನಮ್ಮದಾಗಿದೆ.

ಸಂಭ್ರಮಗಳೆಲ್ಲಾ ಅನುಭವಿಸುವುದಕ್ಕಿಂತ ಸೆರೆ ಹಿಡಿದು ಕೈಯಲ್ಲಿನ ಮೊಬೈಲ್ ಗೆ ನೂಕುವುದಂತಾಗಿದೆ. ಪ್ರತಿಯೊಂದನ್ನು ಪೊಟೋ ಕ್ಕಾಗಿ ಮಾಡುವಂತಾಗಿದೆ. ಪೊಟೋ ತೆಗೆಯುವ ನಲಿವಿನಲ್ಲಿ ಮನದ ಮನಸ್ಸುಗಳ ಕಾತುರತೆಯನ್ನು ಸೊರಗಿಸುತ್ತಿದ್ದೇವೆ. ಇದೆ ನಿಜವಾದ ಹಬ್ಬವಾಗಿದೆ.

ಎಲ್ಲಿಗೂ ಹೋಗದೆ ಯಾರನ್ನು ಸಂಪರ್ಕಿಸದೆ ತಮಗೆ ತಾವೆ ನಲಿದು ದೂರದ ಪ್ರಪಂಚಕ್ಕೆ ಸಂಭ್ರಮದ ಗಳಿಗೆಗಳನ್ನು ರವಾನೆ ಮಾಡುವುದೆ ಕಾಯಕವಾಗಿದೆ.  ವಿಡಿಯೋ  ತುಣುಕು , ಪೊಟೋ ಪ್ರೇಮ್ ಬದುಕು ನಮ್ಮದು ಅಂದರೇ ತಪ್ಪಲ್ಲಾ!

ಪ್ರತಿಯೊಂದನ್ನು ಹೊರ ಪ್ರಪಂಚದ ದೃಷ್ಟಿಗಾಗಿ ನಮ್ಮ ನಮ್ಮ ಭಾವನೆಗಳನ್ನು ಹೊಂದಿಸಿಕೊಂಡು ನಲಿಯುವೆವು ಅನಿಸುತ್ತದೆ. ಕೃತಕ ಪ್ಲಾಶ್ ಗೆ ಕೊಡುವ ನಮ್ಮ ನಗುವನ್ನು ಜೀವಂತ ಮುಖಗಳ ಎದುರಿಗೆ ಕೊಡಲಾರದಷ್ಟು ಕಳೆಗಟ್ಟಿಸಿಕೊಂಡಿವೆ.

ಹಬ್ಬ ಅನ್ನುವುದಲ್ಲ, ನಮ್ಮ ಪ್ರತಿಯೊಂದು ಚಟುವಟಿಕೆಗಳನ್ನೆಲ್ಲಾ ದಾಖಲೆಗಾಗಿ ಮಾಡುವಂತಾಗಿದೆ.

ಮದುವೆ -ಮುಂಜಿ-ಹುಟ್ಟಿದ ಹಬ್ಬ ಇತ್ಯಾದಿ ಯಾವೊಂದು ಆಚರಣೆಗಳು ಕೇವಲ ಆಚರಣೆಗಳಾಗಿವೆ ಅನಿಸುತ್ತದೆ.

ಆಚರಿಸುವ ಈ ದಿನಗಳ ಮಹತ್ವ ಮರೆಯಾಗಿದೆ. ಬೆರೆತು ನಲಿಯುವ ದಿನಗಳು ಯಾರೊಬ್ಬರಿಗೂ ಸಿಗುತ್ತಿಲ್ಲ. ಅವರವರೆ ಸಂತೋಷಿಸಿ ಇದೆ ನಮ್ಮ ಮ್ಯಾಕ್ಸಿಮಮ್ ಖುಷಿಯ ಗಳಿಗೆಗಳು ಎಂದುಕೊಂಡು ಯಾವುದಾದರೂ ಸೋಷಿಯಲ್ ಸೈಟ್ ನಲ್ಲಿ ಟ್ಯಾಗ್ ಮಾಡಿಬಿಟ್ಟರೆ ಸಾಕಪ್ಪ ಅನಿಸುತ್ತಿದೆ.

ಇಂಥ ಸ್ಥಿತಿಯಲ್ಲಿ ಹಳ್ಳಿಯ ಹಬ್ಬಗಳು ನಮ್ಮನ್ನು ತುಂಬ ಕಾಡುತ್ತವೆ. ಆ ದಿನಗಳು ಮತ್ತೆ ಬರಬಾರದೇ ಅನಿಸುತ್ತದೆ. ವರುಷಕ್ಕೆ ಒಮ್ಮೆ ಸಿಗುತ್ತಿದ್ದ ಹೊಸ ಬಟ್ಟೆಗಳು. ವರುಷಕ್ಕೆ ಒಮ್ಮೆ ಸಿಗುತ್ತಿದ್ದ ಬೋರಿ ಸಿಹಿ ತಿಂಡಿಗಳು, ಹಬ್ಬಕ್ಕಾಗಿಯೇ ದೂರದ ಊರಿನಿಂದ ಬರುತ್ತಿದ್ದ ಕುಟುಂಬದ ಪ್ರೀತಿ ಪಾತ್ರರರ ದರುಶನಗಳು.. ಹೀಗೆ ಸಪ್ರೈಜ್ ಎಂಬುದೇ ಕಾಣೆಯಾಗಿದೆ.

ಪ್ರತಿಯೊಂದು  ಕಾಫಿ ಮಾಡಿದ ಜೆರಾಕ್ಸ್ ನಡಾವಳಿಕೆಗಳು, ಸಂಭ್ರಮಗಳು ಅನಿಸುತ್ತದೆ.

ಯಾವುದರಲ್ಲೂ ವೈವಿಧ್ಯಮಯವಾದ ಎಂದು ಮರೆಯಲಾಗದ ಕ್ಷಣಗಳು ಎಂದು ಅನಿಸುತ್ತಿಲ್ಲ!

ರುಚಿಯಾದ ತಿನಿಸುಗಳು ಮಾಮೊಲಿ ದಿನದಲ್ಲಿ ತಿಂದ ರೀತಿಯಂತೆ ಅನಿಸುತ್ತದೆ. ಹಬ್ಬದ ರುಚಿ ಮಾಡಿದ ನಮ್ಮ ತಿಂಡಿಗಳಲ್ಲಿ ಇಲ್ಲ. ಯಾವುದಾದರೂ ಹಳ್ಳಿ ಮನೆ, ಬಾಡೋಟದ ರೆಸ್ಟೊರೆಂಟ್ ಗಳಲ್ಲಿನ ರುಚಿಯೇ ಮೆಚ್ಚು.

ಇದು ನಮ್ಮ ಮನಸ್ಸಿನ ಭಾವನೆಯೊ ಅಥವಾ ಮತ್ತ್ಯಾವುದೋ ಒಂದು ಗೊತ್ತಾಗುತ್ತಿಲ್ಲ.

ಯುಗಾದಿ! ಯುಗದ ಹಾದಿ... ಯುಗ ಯುಗಾದಿ ಕಳೆದರೂ ಮತ್ತೆ ಯುಗಾದಿ ಬರುತ್ತದೆ.. ಪ್ರತಿ ಯುಗಾದಿ ಹೊಸತನದ್ದು ಅನಿಸುತ್ತಿರುತ್ತದೆ. ಆದರೇ ಈಗಿನ ಯುಗಾದಿ ಮತ್ತೊಂದು ಹಬ್ಬ ಮಾತ್ರ ಎಂಬ ಪೀಲ್ ಎಂದೂ ಆಗಬಾರದು ಎನ್ನುವುದು ನಮ್ಮ ಆಶಯ.

ಮನುಷ್ಯನ ದುಡಿತ ಸಮಯಕ್ಕೆ ಬಿಡುವು ಕೊಟ್ಟು ತನ್ನ ಸುತ್ತಲಿನವರೊಡನೆ ಸೇರಿಕೊಂಡು ತನ್ನ ಕಷ್ಟ ಸುಖಗಳನ್ನು ಹಂಚಿಕೊಂಡು ಮನಸ್ಸು ಮನಸ್ಸು ಬೆರತು ಆಚರಿಸಿದರೆ ಜೀವನ ಯುಗಾದಿಯ ಬೇವು ಬೆಲ್ಲದಂತೆ ಬದುಕಾಗುವುದು.

ಇಂಥ ದಿನಗಳು ಪುನಃ ನಗರದ ಮಂದಿಗಳಿಗೆ ಮರಳಿ ಮರಳಿ ಬರಲಿ ಎಂದು ಆಶಿಸೋಣ!

ಬುಧವಾರ, ಮಾರ್ಚ್ 30, 2016

ಜೀವನದ ಅರ್ಧ ಮೈಲೇಜು

ಬದುಕಿನ ಸಾರ್ಥಕತೆಯ ಬಗ್ಗೆ ಪ್ರತಿಯೊಬ್ಬರೂ ತಮ್ಮಲ್ಲಿಯೆ ಒಮ್ಮೆಯಾದರು ಯೋಚಿಸಿರುತ್ತಾರೆ.

ಹುಟ್ಟಿನಂದಿನಿಂದ ಬಾಲ್ಯ, ಯೌವನ, ಮದ್ಯ ವಯಸ್ಸು, ಮುಪ್ಪು ಹೀಗೆ ವಿಭಿನ್ನ ಕಾಲಘಟ್ಟವನ್ನು ಕ್ರಮಿಸುವ ದಾರಿಯಲ್ಲಿ ಯಾವುದಾದರೂಂದು ಘಟ್ಟದಲ್ಲಿ ತನ್ನನ್ನು ತಾನು ಪರಮರ್ಶಿಸಿಕೊಂಡೆ ಕೊಂಡಿರುತ್ತಾನೆ.

ಯಾಕೆಂದರೇ ಬದುಕು ತನ್ನ ವಯಸ್ಸು ಪೂರ್ತಿ ಬರಾಬರಿ ಅನುಭವಗಳ ಮೊತ್ತವನ್ನೆ ಕೊಟ್ಟಿರುತ್ತದೆ. ಈ ಬದುಕು ಯಾವುದೇ ಪ್ರೀ ಪ್ಲ್ಯಾನ್ ಪ್ರೋಗ್ರಾಂ ಅಲ್ಲವಲ್ಲ. ಪ್ರತಿಯೊಂದು ಒಂದಲ್ಲ ಒಂದು ಹೊಸ ಅನುಭವವೇ ಆಗಿರುತ್ತದೆ.

ತಾನು ನೋಡಿ, ಕಲಿತ , ಕೇಳಿದ ಸತ್ವಗಳ ಪರೀಕ್ಷೆಯಾಗಿರುತ್ತದೆ.

ಜೀವನ ಒಮ್ಮೊಮ್ಮೆ ಸುಖ, ಸಂತೋಷಮಯವಾಗಿದ್ದರೆ, ಒಮ್ಮೊಮ್ಮೆ ಎಲ್ಲಾದರೂ ಓಡಿ ಹೋಗಿಬಿಡಲೇ ಅನ್ನಿಸುವಷ್ಟು ಕಷ್ಟ ಮತ್ತು ದುಃಖಮಯವಾಗಿರುತ್ತದೆ.

ಈ ರೀತಿ ಎಲ್ಲಾ ಹೋರಾಟಗಳನ್ನು ಜಯಿಸಲೇ ಬೇಕು. ಅದೇ ಜೀವನ! ನಾವು ನೆಚ್ಚಿಕೊಂಡು, ನಮ್ಮ ಮನದಲ್ಲಿ ಕಲ್ಪಿಸಿಕೊಂಡಷ್ಟು ಸುಲಭವಾದದ್ದು ಮಾತ್ರ ಅಲ್ಲ!

ಹೌದು! ಒಬ್ಬೊಬ್ಬರಿಗೆ ಅದು ಯಾವಾಗಲೂ ಸುಖಮಯವಾಗಿರಬಹುದು. ಅದು ಅವರು ಹುಟ್ಟಿದ ಜಾಗ, ಮನೆ, ಸುತ್ತಲಿನ ಪರಿಸರವನ್ನು ಅವಲಂಬಿಸಿರುತ್ತದೆ. ಅವರಿಗೆ ಮುಟ್ಟಿದ್ದೆಲ್ಲ ಚಿನ್ನ! ಅದು ಅದೃಷ್ಟದ ಮಾತಾಯಿತು.

ಹಾಗಂತಾ ಎಲ್ಲಾರೂ ಚಿನ್ನದ ಪುಟ್ಟಿಯಲ್ಲಿಯೇ ಹುಟ್ಟಲು ಸಾಧ್ಯವಿಲ್ಲವಲ್ಲ!

ಅಂಥವರಿಗೆ ಪ್ರತಿಯೊಂದು ನಿಮಿಷವು ಸವಾಲೇ ಸರಿ! ಹಾಗೆಯೇ ಬದುಕಿ ತಮ್ಮ ಬದುಕನ್ನು ಶಕ್ತಿಗೆ ಅನುಸಾರ ಜೋಪಾನ ಮಾಡಿಕೊಂಡು ಜೀವಿಸುತ್ತಿರುತ್ತಾರೆ.

ಜೀವನ ಚಕ್ರ ತಿರುಗುತ್ತಿರಲೇ ಬೇಕು. ಕತ್ತಲು ಕಳೆದ ಮೇಲೆ ಬೇಳಕು ಬರಲೇ ಬೇಕು. ಇಂದು ಇದ್ದ ದಿನಗಳು ನಾಳೆ ಹೀಗೆ ಇರಲಾರವು. ಬದಲಾವಣೆಯೇ ಜೀವನದ ನಿಯಮ. ಗಡಿಯಾರದ ಮುಳ್ಳು ಎಂದು ನಿಲ್ಲಲಾರದು. ಅದು ನಿರಂತರವಾಗಿ ತಿರುಗುತ್ತಿರುವಂತೆ ನಾವುಗಳು ನಮ್ಮ ಬದುಕಿನ ಎಲ್ಲಾ ಘಟ್ಟಗಳಲ್ಲು ಹೆಜ್ಜೆ ಇಡುತ್ತಾ ಸಾಗುತ್ತಿರಲೇ ಬೇಕು.

ಯಾಕೆಂದರೇ ಈ ಬದುಕು ಯಾರಿಗೂ ಎಂದು ಕಾಯುವುದಿಲ್ಲ. ಇರುವಷ್ಟು ದಿನ ಅದನ್ನು ಅನುಭವಿಸುವವನೇ ಶ್ರೀಮಂತ.

ಆದರೂ ಹೀಗೆ ಸಾಗುತ್ತಿರುವಾಗ ಎಷ್ಟು ವಿಷಯ, ವಸ್ತು, ಸ್ನೇಹ, ಸಂಪತ್ತು, ಗುಣ, ಅವಗುಣ, ಒಳ್ಳೆದು, ಕೆಟ್ಟದ್ದು ಹೀಗೆ ಪ್ರತಿಯೊಂದರ ಮೊಟೆಯನ್ನು ಹೊತ್ತು ಕೊಂಡೇ ನಾವುಗಳು ಮುಂದಿನ ಜೀವನದ ದಾರಿಯನ್ನು ಕ್ರಮಿಸುತ್ತಾ ಸಾಗುತ್ತಿರುತ್ತೇವೆ.

ಇಂಥ ಸಮಯದಲ್ಲಿಯೇ ಈ ಜೀವನ ಅಂದರೇ ಇಷ್ಟೇಯಾ ಎಂದು ಅನಿಸಲಾರಂಬಿಸುತ್ತದೆ. ಎಲ್ಲಾ ಗಳಿಸಿದರೂ ಯಾಕೋ ಏನೂ ಇಲ್ಲವಲ್ಲವೆನಿಸುತ್ತದೆ. ಎಲ್ಲಾ ಕಳೆದುಕೊಂಡರೂ ಸಹ ಹಾಗೆಯೇ ಯಾಕೋ ಏನೂ ಗಳಿಸಲಿಲ್ಲವಲ್ಲ.. ಎಂದುಕೊಳ್ಳುತ್ತೇವೆ.

ಇದು ಕೇವಲ ಓಡುವ ಬದುಕೇ? ಹೀಗೆಯೇ ಬದುಕಬೇಕಾ ಅನಿಸುತ್ತದೆ.

ಯಾಕೇ ಹೀಗೆ ಪ್ರತಿಯೊಬ್ಬರೂ ಬದುಕುವ ರೀತಿಯಲ್ಲಿಯೇ ನಾವುಗಳು ಬದುಕುತ್ತಿದ್ದೇವೆಲ್ಲವೆಂದುಕೊಳ್ಳುತ್ತೇವೆ. ಹೀಗೆ ಒಂದಲ್ಲ ಒಂದು ಪ್ರಶ್ನೆ ಮನದಲ್ಲಿ ಮೂಡಿಯೇ ಮೂಡುತ್ತದೆ.

ಆ ಕ್ಷಣ ಯಾಕೋ ಜೀವನವೇ ನಿರರ್ಥಕವೆನಿಸುತ್ತದೆ. ಹೇಗೆ ಬಾಳಿದರೇ ಉತ್ತಮವೆಂದು ಕ್ರಮಿಸಿದ ದಾರಿಯನ್ನು ಪುನಃ ತಿರುಗಿ ನೋಡಲಾರಂಬಿಸುತ್ತೇವೆ.

ಉಫ್ ಎಷ್ಟು ಬೇಗ ೪೦ಕ್ಕೆ ಕಾಲಿಟ್ಟೆ! ಮನ್ನೆ ಮದುವೆಯಾಗಿದ್ದು ಅನಿಸುತ್ತದೆ. ಮರೆತೆ ಇಲ್ಲ ಇದೀಗ ತಾನೆ ಕಾಲೇಜು ಮೆಟ್ಟಿಲು ಇಳಿದಿರುವುದು ಅನಿಸುತ್ತದೆ. ಆದರೇ ಎಷ್ಟು ಬೇಗ ಸುಸ್ತು ಅನಿಸುತ್ತದೆ. ಜೀವನದ ದುಡಿತದಲ್ಲಿ ಅಕ್ಕ ಪಕ್ಕ ಏನೂ ಜರುಗುತ್ತಿತ್ತು ಎಂಬುವುದನ್ನೇ ಗಮನಿಸಲಾರದಷ್ಟು ಅಸೂಕ್ಷ್ಮಮತಿಯಾಗಿದ್ದೆನಲ್ಲಾ ಎಂದು ಪರಿತಪಿಸುವೆವು.

ಯಾವುದೋ ಒಂದು ಹುದ್ದೆಗಾಗಿ, ಯಾವುದೋ ಒಂದು ಮೊತ್ತದ ಸಂಪತ್ತಿಗಾಗಿ ನನ್ನ ಈ ಒಂದು ಅಮೊಲ್ಯವಾದ ವಯಸ್ಸನ್ನೇ ಹೀಗೆ ಕಳೆದೆನಲ್ಲಾ? ನಾನು ಮಾಡಿದ ಈ ಸಾಧನೆಯೇ ಕೊನೆಯೇ? ನಾನು ಈಗ ಹಿಂದೆ ಇದ್ದೆ ಇದ್ದ ರೀತಿಯಲ್ಲಿಯೇ ಇದ್ದೀನಾ ಅಥವಾ ಏನಾದರೂ ಬದಲಾವಣೆಯ ಚರ್ಯೆ ಕಾಣಿಸುತ್ತಿದಿಯಾ ಎಂದು ಅದೇ ಬೆರಳಿನ ದಪ್ಪ ಗಾಜನ್ನು ಸರಿಸಿ ಕನ್ನಡಿ ನೋಡಿಕೊಂಡಂತಾಗುತ್ತದೆ.

ದೇಹವೇ ಬಸವಳಿದ ಮನಸ್ಸಿನ ಸ್ಥಿತಿಯಲ್ಲಿ ದಿಗ್ಬ್ರಮೆಯಾಗುವುದು ನಿಜ!

ಹೀಗೆ ಯಾವುದು ಮಾಡಿದರೂ ಇದೇ ಶ್ರೇಷ್ಠ ಅನಿಸುತ್ತಿಲ್ಲ. ನಾವೇನಾದರೂ ಬೇರೆಯವರಿಗೆ ಒಂದು ಸಣ್ಣ ಉಪಕಾರ ಮಾಡಿದ್ದಿವಾ ಅಂದರೇ ಅದು ಇಲ್ಲ. ನಾನು ದುಡಿದದ್ದು ಕೇವಲ ನನ್ನ ಈ ಒಂದು ಸಂಸಾರಕ್ಕೆ ಮಾತ್ರ. ನಾನು ಇವರಿಗಾಗಿ ದುಡಿಯಲೇ ಬೇಕಾಗಿತ್ತಾ? ಅವರಾದರೂ ನನ್ನ ಬಗ್ಗೆ ಏನೂ ಹೇಳುತ್ತಾರೋ ಎಂದು ಕೇಳುವಷ್ಟು ಸ್ವಾರ್ಥಮಯ ಈ ಬದುಕಾ ಎಂದು ಪೀಲ್ ಆಗುತ್ತದೆ.

ಏಕೆ ನಾವುಗಳು ಎಲ್ಲಾರಿಗಿಂತ ಬಿನ್ನವಾಗಿ ಜೀವಿಸಲಾರೆವು. ಪ್ರತಿಯೊಂದರಲ್ಲೂ ಪಾಲೊ ಪಾಲೊ ಅವರು ಇವರನ್ನು,ಇವರು ಅವರನ್ನಾ.. ಇದೇ ಮನುಷ್ಯ ಜೀವಿಯ ಜೀವಿತ ಪರಿಯಾ? ಯೋಚಿಸಿದರೇ ಉತ್ತರವೇ ಇಲ್ಲದಂತಾಗುತ್ತಾದೆ. ಯಾವುದೋ ಗೊತ್ತಿದ್ದು ಗೊತ್ತಿಲ್ಲದವರಂತೆ ಯಾಂತ್ರಿಕವಾಗಿ ಸಾಗುತ್ತಿದ್ದೆವೆಂದು ಅನಿಸುವುದಿಲ್ಲವಾ?

ಇಚ್ಚೆ ಇರಲಿ ಇಲ್ಲದಿರಲಿ, ನೆಮ್ಮದಿ ಇರಲಿ ಇಲ್ಲದೇ ಇರಲಿ ಯಾವುದಾದರೂ ಸರಿಯೆಂದು ಬಿಡಲಾರದೆ ಓದನ್ನು ಒದುತ್ತೇವೆ, ಕೆಲಸ ಮಾಡುತ್ತೇವೆ, ಒಟ್ಟಿಗೆ ಜೀವಿಸುತ್ತೇವೆ. ಯಾವುದರಲ್ಲೂ ಪ್ಯಾಶನ್ ಎನ್ನುವುದೆ ಇಲ್ಲ! ಬಿಡಲು ಸಾಧ್ಯವಿದ್ದರೂ ಬಿಡಲು ಆಗುತ್ತಿಲ್ಲವೆಂದು ಒದ್ದಾಡುವುದೇ ಬದುಕಾಗಿದೆ. ಎಲ್ಲದರಲ್ಲೂ ಗೊಣಗಾಟ. ಖುಷಿಯೆಂಬುದು ಪುಸ್ತಕದ ಬದನೆ ಕಾಯಿಯಾಗಿದೆ.

ಇಂಥ ಸಮಯದಲ್ಲಿ ಸಂಯಮವಾಗಿ ನಾವು ಸಾಗುತ್ತಿರುವ ದಾರಿ ಸರಿಯೇ? ಸ್ವಲ್ಪ ಬದಲಾವಣೆ ಬೇಕಾಗಿತ್ತು ಎಂದು ಬೆಳಕಿನ ಚಿಕ್ಕ ಕಿರಣ ಕಾಣಿಸುತ್ತದೆ. ಯಾವುದಾದರೂ ಮನಸ್ಸು ಮೆಚ್ಚುವ, ಪರರಿಗೆ ಉಪಕಾರಿಯಾಗುವ ಯೋಜನೆ/ಯೋಚನೆ ಯಾಕೇ ಮಾಡಬಾರದು?

ಈ ಐಡಿಯಾ ಜೀವನದ ಅರ್ಧ ಮೈಲೇಜು ಮುಗಿದ ಮೇಲೆ ಬರುತ್ತಿದಿಯಲ್ಲಾ ಅದೇ ವಿಪರ್ಯಾಸ! 

ಶುಕ್ರವಾರ, ಮಾರ್ಚ್ 18, 2016

ಮನುಷ್ಯರೊಂದಿಗಿಲ್ಲ ಗೊಗಲ್ ಉತ್ತರವೇನು?

ಡಾ ಡಾ ಬಾ ಆಟ ಆಡೋಣ.

ಅಮ್ಮಾ ನನ್ನ ಎತ್ತಿಕೋ.

ಅಕ್ಕ ಬಾ ಮುದ್ದು ಮಾಡು. ಆ ಎದ್ದು ನಿಲ್ಲು. ಆಂ ನನ್ನ ಮೇಲೆ ತೂರು.

ಮಗು ದ ದಾ ಎಂದು ಏನು ಏನೋ ಮಾಡುತ್ತದೆ.

ಅದೆ ಅಪ್ಪ / ಅಮ್ಮನ ಮುಖ ನೋಡಿ ಚಪ್ಪಾಳೆ ತಟ್ಟಿ ಮುಖ ಅರಳಿಸಿ ನಗುತ್ತದೆ. ಜೋರಾಗಿ ಕೇಕೆ ಹಾಕುತ್ತದೆ.

ಅದಕ್ಕೆ ತನ್ನನ್ನು ಪ್ರೀತಿಸುವವರ ಮೆಚ್ಚುಗೆಯ ನೋಟ ಬೇಕು. ಇಷ್ಟೇ ಮಗು ತನ್ನವರಿಂದ ಅಪೇಕ್ಷಿಸುವುದು.

ಆದರೇ ನಿತ್ಯ ಪ್ರಜ್ವಲವಾಗಿರುವ ಮಗುವಿನ ಮನಸ್ಸಿನಂತೆ ನಮ್ಮ ವಯಸ್ಸಾದವರ ಮನಸ್ಸು ಇರಬೇಕಲ್ಲ? ಮಗು ಘಳಿಗೆ ಘಳಿಗೆಗೂ ಹೊಸತನದ ಎನರ್ಜಿಯಿಂದ ಏಕ್ ದಮ್ ಸುಂದರ ಹಚ್ಚ ಹಸುರಿನ ನಗುವಿನಿಂದ ಕಂಗೊಳಿಸುತ್ತದೆ. ಆದರೆ ನಮ್ಮ ದಣಿವಿನ ಜಂಜಾಟದ ಬದುಕಿನಿಂದ ಆ ಮುಗ್ಧ ಮಗುವಿನ ಜೊತೆ ಒಂದು ನಿಮಿಷವು ಎಲ್ಲ ಮರೆತು ಅದು ಆಡುವ ಒಂದು ಚಿಕ್ಕ ಆಟವನ್ನು ಖುಷಿಯಿಂದ ನಾವು ಅನುಭವಿಸಲು ಸಾಧ್ಯವಾಗುತ್ತಿಲ್ಲ.

ಅದೇ ನಿತ್ಯ ನೂರು ತೊಂದರೆ ತಾಪತ್ರಾಯಗಳ ಯೋಚನೆಯಲ್ಲಿ ಅಪ್ಪ ಅಮ್ಮ ಕ್ಷಣ ಕ್ಷಣವು ಮುಳುಗೇಳುತ್ತಿರುತ್ತಾರೆ.

ಇವರುಗಳಿಗೆ ಮುಂಜಾನೆ ರಾತ್ರಿ ಎನ್ನುವ ವ್ಯತ್ಯಾಸವಿಲ್ಲ.

ಮಗು ಮುಂಜಾನೆ ಮುಂಜಾನೆ ಹಾಸುಗೆಯಲ್ಲಿಯೇ ಹೊಸ ದಿನದೊಟ್ಟಿಗೆ ಪುಟಿಯುತ್ತಿರುತ್ತದೆ. ಅದಕ್ಕೆ ತಕ್ಷಣ ತಾನು ನಿನ್ನೆ ಎಲ್ಲಿಗೆ ನಿಲ್ಲಿಸಿದ ಆ ಆಟವನ್ನು ಪ್ರಾರಂಭ ಮಾಡುವ ಸಂಭ್ರಮ!

ಅದು ಏನೆಂದರೂ ಕಾಯುವುದಿಲ್ಲ. ಹಾಸಿಗೆಯಲ್ಲಿ ಆಗತಾನೆ ನಿದ್ರೆಯ ಸವಿಯನ್ನು ಸವಿಯುತ್ತಿರುವ ಅಪ್ಪ ಅಮ್ಮನನ್ನು ಒದ್ದೂ ಎದ್ದೇಳಿಸುತ್ತದೆ. ಮುಚ್ಚಿಕೊಂಡಿರುವ ಮುಸುಕನ್ನು ಸರಿಸಿ ಹಾಯ್ ಎನ್ನುತ್ತದೆ.

ಇವರುಗಳಿಗೆ ಆದರ ಮುಖ ನೋಡಿದರೇ.. ಆದರ ತೂದಲು ನುಡಿಯನ್ನು ಕೇಳಿಸಿಕೊಂಡರೇ.. ಮುಂಜಾನೆಯ ದೇವರ ಸುಪ್ರಭಾತವೇ ಸರಿ.. ಆದರೇ ನಿನ್ನೇ ಸರಿ ರಾತ್ರಿ ಎಷ್ಟೋ ಹೊತ್ತಿಗೆ ಇವರುಗಳಿಗೆ ನಿದ್ರೆ ಬಂದಿರುತ್ತದೆ. ಆಗಲೇ ಈ ಮಗು ಎಚ್ಚರವಾಗಿಬಿಟ್ಟಿದಿಯಲ್ಲಪ್ಪಾ ಎಂದು ಮನದಲ್ಲಿಯೇ ನುಡಿದು ಇಷ್ಟವಿಲ್ಲದಿದ್ದರೂ ಮಗುವಿಗೆ ಸಾಥ್ ಕೊಡಬೇಕಾಗುತ್ತದೆ.

ಇದುವೇ ನಮ್ಮಗಳ ಭಾರದ ಸುಸ್ತು ಜೀವನ!

ಒಂದು ದಿನವು ಹೊಸತನವಿಲ್ಲದ ಅದೇ ಗಡಿಯಾರದ ಮುಳ್ಳು ಮುಂದೋಡುವಂತೆ ಓಡುತ್ತಿರುವ ಧಾವಂತದ ಓಟವಾಗಿದೆ.

ನಮ್ಮ ಕೊಸುಗಳಿಗೂ ಪ್ರೀತಿಯ ಒಂದು ಕ್ಷಣವನ್ನು ಮೀಸಲಿಡಲಾರದಷ್ಟು ಕೆಲಸ ಕೆಲಸ ಬರೀ ಕೆಲಸ!

ಈ ಮಗುವಿನ ಜೋಶ್ ನಮ್ಮಗಳಿಗೆ ಇಲ್ಲವಲ್ಲ ಎಂದು ಮನಸ್ಸು ಮುಲಾಜಿಗೆ ಜಾರುತ್ತದೆ.

ಯಾಕೋ ಇದ್ದು ಇಲ್ಲದ ಅನುಭಾವದ ಅಂತರ್ ತಳಮಳ.

ಯಾಕಾದರೂ ದೊಡ್ಡವರಾದೇವೋ ಎಂದು ನಮ್ಮ ಮನಸ್ಸೆ ಒಮ್ಮೆ ಪ್ರಶ್ನೆ ಮಾಡುತ್ತದೆ.

ಯಾವುದನ್ನು ತೃಪ್ತಿಯಾಗಿ ಸಂತೋಷಿಸಲಾರೆವು.

ಯೋಚಿಸಿದರೇ ಹತ್ತು ಹಲವು ಯೋಚನೆಗಳು. ಬೆಳೆಯುತ್ತ ಬೆಳೆಯುತ್ತಾ ಯೋಚನೆಯ ಮೊಟೆಯನ್ನೇ ಹೊತ್ತು ಹೊರುತ್ತಾ ಭಾರವದ ಹೆಜ್ಜೆಗಳನ್ನು ಇಡುತ್ತಿರುವೆವೆಂದು ಅನಿಸುತ್ತದೆ.

ಯಾರೊಂದಿಗೂ ನಾಲ್ಕು ಜೀವಂತ ಮಾತುಗಳನ್ನು ಆಡಿರಲಾರೆವು. ಪ್ರತಿಯೊಂದು ಚಿಕ್ಕ ವಿಷಯಕ್ಕೂ ರೇಗುವಂತಾಗುತ್ತದೆ. ಮುಖದ ಮೇಲೆ ನಗುವಿನ ಗೆರೆ ಮಾಯವಾಗಿ ಎಷ್ಟೋ ದಿನಗಳಾಗಿರುತ್ತವೆ.

ಇಷ್ಟೊಂದು ಒತ್ತಡದ ಬದುಕು ಇದುವೇ ಅನಿಸುತ್ತದೆ.

ಯಾರದೋ ಸಿಟ್ಟನ್ನು ಇನ್ಯಾರದೋ ಮೇಲೆ ಧಾರಕಾರವಾಗಿ ಚೆಲ್ಲಿರುತ್ತೇವೆ.

ಹೆಚ್ಚು ಸಿಟ್ಟನ್ನು ಪ್ರೀತಿ ಪಾತ್ರರರ ಮೇಲೆಯೆ ಎರಚಿರುತ್ತೇವೆ.

ಜೀವನದ ಹೆಚ್ಚು ಸಮಯವನ್ನು ಕಳೆಯುವ ಆಫೀಸ್ ಎಂಬುವುದು ಯಾವುದೇ ರೀತಿಯಲ್ಲೂ ನಲ್ಮೆಯ ಜಾಗ ಎಂದು ಕೊನೆಯವರೆಗೂ ಅನಿಸುವುದಿಲ್ಲ. ಇಲ್ಲಿ ಎಲ್ಲಾ ಬರೀ ಕೃತಕತೆ ಎಂದು ಅನಿಸುತ್ತದೆ.

ಇಷ್ಟ ಇರಲಿ ಇಲ್ಲದೇ ಇರಲಿ ಇರಲೇಬೇಕಲ್ಲ ಎಂಬಂತೆ ಇರುತ್ತೇವೆ.

ವರುಷದ ಪ್ರತಿ ಕ್ಷಣವನ್ನು ಅದೇ ಕುರ್ಚಿ, ಟೇಬಲ್, ಕಂಪ್ಯೂಟರ್ ಎಂದು ಭಾವನೆಯೇ ಇಲ್ಲದ ಸ್ಪರ್ಶದಲ್ಲಿ ಕಳೆದಿರುತ್ತೇವೆ. ಇಷ್ಟವಿಲ್ಲದಿದ್ದರೂ ಇಷ್ಟವಿರುವ ರೀತಿಯಲ್ಲಿ, ಸಿಟ್ಟು ಬಂದರೂ ಸಿಟ್ಟೇ ಇಲ್ಲದವರಂತೆ ಮಾತನ್ನಾಡುತ್ತಿರುತ್ತೇವೆ.

ಯಾಕೆಂದರೇ ಇದು ಪ್ರೊಪೇಶನಲ್ ಲೈಫ್. ಇಲ್ಲಿ ಎಲ್ಲದಕ್ಕೂ ಒಂದು ಚೌಕಟ್ಟು ಇದೆ. ಚೌಕಟ್ಟು ಮೀರದ ಕಾರ್ಯ ಕೌಶಲ ನೈಪುಣ್ಯತೆಗೆ ಇಲ್ಲಿ ಅರ್ಹತೆ.

ಮನೆಯಲ್ಲಿ ಎದ್ದೇಳುವುದು ಆಪೀಸ್ ಗೆ ಹೋಗಲು ತಯಾರಿ. ತಿನ್ನುವ ತಿನಿಸು ಕೇವಲ ತಿನಿಸು ಮಾತ್ರ. ರುಚಿಯೇ ಇಲ್ಲದ ಊಟ! ತಿನ್ನುವುದಕ್ಕೂ ಟೈಂ ಇಲ್ಲವೇನೋ ಎಂಬಂತ ಬಾಳ್ವೆ.  ರಾತ್ರಿ ಬೇಗ ಹಾಸಿಗೆಗೆ ಹೋದರೇ ನಿದ್ದೆ ಎಂಬುದು ಪೂರ್ಣವಾಗಿ ನಮ್ಮ ಕಟ್ಟ ವಿರೋಧಿ ಎಂಬಂತೆ ಅದರ ಸುಳಿವೇ ಇಲ್ಲ. ಅದು ಬಿಟ್ಟು ಬೇರೆ ಎಲ್ಲಾ ಇಂದಿನ, ಪುರಾತನ, ಭವಿಷ್ಯತ್ ನದೇ ಚಿಂತೆಯ ಪಿಕ್ಚರ್!

ಕೆಲಸ ಮಾಡುವ ಸಹ ಉದ್ಯೋಗಿಗಳ ಜೊತೆಯಲ್ಲಿ ಎಷ್ಟು ಚೆನ್ನಾಗಿ ಅದೇ ಸವೆದ ಪದಗಳ ಬಳಕೆಯಲ್ಲಿ ರೈಸ್ ಕುಕರ್ ನಲ್ಲಿಯ ಕುದಿಯುತ್ತಿರುವ ಅನ್ನದೊಪಾದಿಯಲ್ಲಿ ವಿಶಲ್ಲೇ ಇಲ್ಲದೇ ಅನ್ನವಾಗುವಂತ ಮಾತು-ಕತೆ.

ಅದೇ ಸಮಯದಲ್ಲಿ ನಮ್ಮ ಪ್ರೀತಿ ಪಾತ್ರರಾದ ಮಕ್ಕಳು, ಮಡದಿಯರು, ಹೆತ್ತವರು ಯಾರದರೂ ಏನದರೂ ಕೇಳಿದರೇ ಎಷ್ಟು ಬೇಗ ಸರ್ರ್ ಎಂದು ರೇಗುವೆವು. ಇದೆ ಎರಡು ನಿಮಿಷಕ್ಕೂ ಮುಂಚೆ ಇವರೇನ  ಯಾವುದೋ ಆಪೀಸ್ ಕಾಲ್ ನಲ್ಲಿ ಹೇಗೆಲ್ಲಾ ನಕ್ಕು ನಗುತ್ತಾ ಮಾತನ್ನಾಡಿದ್ದೂ? ಎಂದು ಆ ಚಿಕ್ಕ ಮಗುವು ಅಪ್ಪನ ಮುಖವನ್ನು ಎರಡು ಬಾರಿ ಪ್ರಶ್ನಾತ್ಮಕವಾಗಿ ನೋಡುತ್ತದೆ.

ಯೋಚಿಸಿದರೇ ನಿಜವಾಗಿಯೂ ಭಯವಾಗುತ್ತದೆ. ಇದುವೆನಾ ನಮ್ಮ ಇಂದಿನ ಜೀವನ ಶೈಲಿ ಅನಿಸುತ್ತದೆ.

ಯಾಕೆ ಹೀಗೆ? ಯಾವುದಕ್ಕೂ ವ್ಯವಧಾನವಿಲ್ಲ. ಯಾವುದಕ್ಕೂ ಸಮಧಾನವಿಲ್ಲ. ಯಾವುದಕ್ಕೂ ತೃಪ್ತಿ ಇಲ್ಲ!

ವೇಗ ವೇಗ!

ಅತಿ ಬೇಗ ಬಳಲಿಕೆಯಲ್ಲಿ ಬೇಯುತ್ತಿದ್ದೇವೆ. ಎಲ್ಲಾ ಇದೆ. ಬದುಕಿದರೇ ಹೀಗೆ ಬದುಕಬೇಕು ಅಂದುಕೊಂಡಿದ್ದೇಲ್ಲಾ ಇದೆ. ಆದರೇ ನೆಮ್ಮದಿ ಎಂಬುದು ಪುಸ್ತಕಗಳಲ್ಲಿ ಹುಡುಕುವಂತಾಗಿದೆ.

ನಮ್ಮ ಮುಂದಿರುವ ಚಿಕ್ಕ ಕುಡಿಗಳನ್ನು ನೋಡಿದಾಗ ಅವರ ಮುಂದೆ ನಾವುಗಳು ಅತಿ ವೇಗವಾಗಿ ಮುದುಕರಾಗಿಬಿಟ್ಟಿದ್ದೇವೆನೋ ಎಂದೆನಿಸುತ್ತದೆ. ಜೀವವೇ ಇಲ್ಲದಂತಾಗಿದೆ. ಬದುಕುತ್ತಿರುವುದು ಕೇವಲ ಕೆಲಸ ಮಾಡಲು ಮಾತ್ರವೇ?

ಕೆಲಸ ಏನಕ್ಕೆ?

ದುಡಿಯುವುದು ಚೆನ್ನಾಗಿ ಮತ್ತು ಸಂತೋಷವಾಗಿ ಬದುಕಲು ಅಲ್ಲವಾ? ಆದರೇ ದುಡಿಯುವುದು ಒಂದು ಬಿಟ್ಟು ಬೇರೆಲ್ಲಾ ನಗಣ್ಯವನ್ನಾಗಿ ಮಾಡಿಕೊಂಡಿದ್ದೇವೆ.

ಮಗುವಿನ ಒಂದು ಮಾತನ್ನು ಆಲಿಸದಾರದಷ್ಟು ಪೇಶನ್ಸ್ ಇಲ್ಲವಾಗಿದೆ. ಯಾವುದಕ್ಕೆ ಹೆಚ್ಚು ಮಹತ್ವ ಕೊಡುತ್ತಿದ್ದೇವೆ? ನಮ್ಮ ಜೀವನದ ಅತಿ ಅಮುಲ್ಯ ಕ್ಷಣಗಳನ್ನು ಗೊತ್ತಿಲ್ಲದ ರೀತಿಯಲ್ಲಿ ಯಾವುದಕ್ಕೇ ಮುಡಿಪಿಟ್ಟಿದ್ದೇವೆ?

ಗೊತ್ತಾಗುತ್ತಿಲ್ಲ!

ನಾವು ನೆಮ್ಮದಿಯ ಜೀವನವನ್ನು ಸಾಗಿಸುತ್ತಿಲ್ಲ. ನಮ್ಮನ್ನು ಅವಲಂಬಿಸಿರುವ ನಮ್ಮವವರಿಗೂ ಶಾಂತಿಯನ್ನು ಕೊಡುತ್ತಿಲ್ಲ. ಇದು ಯಾಕೋ ಭ್ರಮೆಯ ಲೋಕದ ಒಂದು ಭ್ರಮಣೆಯಲ್ಲಿ ಸುತ್ತುತ್ತಿದ್ದೇವೆಂದು ಅನಿಸುತ್ತದೆ.

ಎಲ್ಲೇಲ್ಲೂ ಹೋಗಬೇಕು. ಮುಂದಿನ ವಾರದ ವಿಕೇಂಡ್ ನಲ್ಲಿ ಹೊಸ ಜಾಗಕ್ಕೆ ಹೋಗಬೇಕು. ವಿಕ್ ಡೇಸ್ ನೆನಪಿಗೆ ಗೋಲಿ ಮಾರೋ! ಎಂದೇಳಿ ಹೊಸ ಸ್ಥಳಗಳಿಗೆ ಹೋದರೂ ಬಿಡದೇ ಕಾಡುವ ಪೀಡೆಯಂತೆ ಮತ್ಯಾವೂದೋ ವಿಷಯಗಳು ಕಾಡುತ್ತವೆ. ಅಲ್ಲಿಯು ನಲಿಯುವುದಿಲ್ಲ, ಉಲಿಯುವುದಿಲ್ಲ.. ಥೋತ್ ತೇರಿಕೆ.........?

ಜನರೊಡನೆ ಬಾಯಿಬಿಟ್ಟು ಹೆಚ್ಚು ಮಾತನಾಡುವುದಕ್ಕಿಂತ ಪುಟ್ಟ ಮೊಬೈಲ್ ನಲ್ಲಿರುವ ಪೇಸಬುಕ್, ವಾಟ್ಸಾಪ್, ಎಸ್.ಎಂ.ಎಸ್ ಗಳು ತುಂಬ ಅಪ್ಯಾಯಮಾನವಾಗಿವೆ. ಅದರಲ್ಲಿಯೇ ತಮ್ಮನ್ನು ಬ್ಯುಸಿಯಾಗಿ ಇಟ್ಟುಕೊಳ್ಳೊಣವೆಂದೆನಿಸುತ್ತದೆ.

ಇಂಟರ್ ನೆಟ್ ಇರುವ ಮೊಬೈಲ್ ಇದ್ದರೇ ಜಗತ್ತೇ ಬೇಡವೆಂದೆನಿಸುತ್ತದೆ. ಎಲ್ಲರಿಂದ ದೂರ ಇರೋಣ ಎಂಬಂತೆ ಇಂದಿನ ಜನರೇಶನ್ ಮುಂದಡಿಯಿಡುತ್ತಿರುವುದು ವ್ಯವಸ್ಥೆಯ ದುರ್ಬಲತೆಯನ್ನು ಎತ್ತಿ ತೋರಿಸುತ್ತಿದೆ.

ಮನುಷ್ಯನ ಸಂಬಂಧಗಳು ಅತಿ ವಿರಳತೆ-ಜಾಳತೆಯಾಗಿ ಕಾಣುತ್ತಿದೆ. ಹೆಚ್ಚು ಹೆಚ್ಚು ಮಾನವ ಸಂಬಳ್ವೆ ಸಮಯ ಹಾಳು ಎಂಬಂತಾಗಿದೆ. ಏನಾದರೂ ನೀ ಒಬ್ಬನೇ ನಿರ್ವಹಿಸು ಎನ್ನುವಂತಾಗಿದೆ. ಹೆಚ್ಚು ಸಾಧಕನಾಗಬೇಕೆಂದರೇ ಯಾರ ಕೈಗೂ ನೀ ಸಿಗದ ರೀತಿಯ ನಿನ್ನ ಬದುಕು ಕಟ್ಟಿಕೊಳ್ಳುವಂತನಾಗು ಎನ್ನುವಂತಾಗಿದೆ.

ಹೋಗಲಿ ಮನೆಯಲ್ಲಿರುವವರೊಂದಿಗಾದರೂ ದಿನದ ಒಂದು ಗಂಟೆ ಯಾವುದೇ ಪೇಸ್ ಬುಕ್, ಕಾಲ್, ವಾಟ್ಸ್ ಆಪ್, ಟಿ.ವಿ ಇವುಗಳ ಒಡನಾಟವಿಲ್ಲದೇ ಕೇವಲ ಮನುಷ್ಯರೊಂದಿಗೆ ಕಳೆಯುವುದೇ ದುರ್ಲಬ ಮತ್ತು ಕಷ್ಟಕರ ವಿಷಯವೆಂದರೇ ಅತಿಶಯೋಕ್ತಿಯಲ್ಲ.

ನೆನಸಿಕೊಂಡರೇ ಮೈ ಜುಂ ಅನಿಸುತ್ತದೆ.

ನಾವೇಕೆ ಇಷ್ಟೊಂದು ಯಾಂತ್ರಿಕರಾಗಿದ್ದೇವೆ...? ಹೀಗೆ ಮುಂದುವರಿದರೇ ಇದು ಎಲ್ಲಿಗೆ ಹೋಗಿ ನಿಲ್ಲುವುದೋ?

ಸ್ವಲ್ಪ ಗೂಗಲ್ ಮಾಡಿ ಉತ್ತರ ಕಂಡುಕೊಳ್ಳಬಹುದೇನೋ?

ಯೋಚಿಸಿ.

ಶನಿವಾರ, ಮಾರ್ಚ್ 5, 2016

ಹೆತ್ತ ತಾಯಿಯು ಒಂದು ಹೆಣ್ಣಲ್ಲವಾ?

ಹೆಣ್ಣು ಕಣ್ಣು.

ಪ್ರತಿಯೊಬ್ಬರಿಗೂ ನಾರಿಯ ಓಡನಾಟ ಯಾವುದಾದರೂ ಒಂದು ರೀತಿಯಲ್ಲಿ ಸ್ವ ಅನುಭವವಾಗಿರುತ್ತದೆ.

ಹುಟ್ಟುತ್ತ ತಾಯಿಯಾಗಿಯೋ, ಬೆಳೆಯುತ್ತಾ ಅಕ್ಕ ತಂಗಿಯಾಗಿಯೋ, ಪ್ರವರ್ಧಮಾನಕ್ಕೆ ಬಂದ ನಂತರ ಜೊತೆಗಾತಿಯಾಗಿಯೋ... ಗೆಳತಿಯಾಗಿಯೋ ಹೆಣ್ಣಿನ ಬಗ್ಗೆ ನಮ್ಮ ಭಾವನೆಯ ಒಂದು ಜಾಗವನ್ನು ತನ್ನದಾಗಿಸಿಕೊಂಡಿರುತ್ತಾಳೆ.

ಮಹಿಳೆಯರು ಸಮಾಜದ ಒಂದು ಅಂಗ. ಅವರುಗಳ ಸಮರ್ಪಣೆ ಮತ್ತು ಕೊಡುಗೆ ಒಂದು ಕುಟುಂಬದಿಂದ ಶುರುವಾಗಿ ಸಮಾಜದ ಎಲ್ಲಾ ರಂಗದಲ್ಲೂ ತನ್ನದೆಯಾದ ಛಾಪನ್ನು ಕಾಪಾಡಿಕೊಂಡಿದ್ದಾರೆ.

ಇಂದಿನ ದಿನದಲ್ಲಿ ಮಹಿಳೆಯರು ಪುರುಷರಿಗಿಂತ ಯಾವುದರಲ್ಲೂ ಕಡಿಮೆಯಿಲ್ಲ. ಯಾರೂ ಹೆಣ್ಣೆಂದು ಕೇವಲವಾಗಿ ಕಾಣುವ ಮಾತಿಲ್ಲ.

ಮಹಿಳೆಯರು ಪುರುಷರು ಮಾಡುವ ಪ್ರತಿಯೊಂದು ಕೆಲಸ, ಕಲಿಕೆ, ಸಾಧನೆ, ಕಾಳಜಿ ಹೀಗೆ ಪ್ರತಿಯೊಂದರಲ್ಲೂ ತಾನು ಒಂದು ಕೈ ಮೇಲೆ ಎಂದು ನಿರೂಪಿಸಿದ್ದಾಳೆ.

ಮಹಿಳೆ ಕೇವಲ ಮನೆ ಅಥವಾ ಅಡಿಗೆ ಮನೆಗೆ ಮಾತ್ರ ಸೀಮಿತವಾಗಿಲ್ಲ. ಅವಳು ಬೇರೆಯವರಂತೆ ಮನೆಯಿಂದ ಹೊರಗೂ ಸಹ ದುಡಿಯಬಲ್ಲಳು.  ಅವಳು ಪುರುಷರ ಜೊತೆಗೂಡಿ ತನ್ನ ಜಾಣ್ಮೆ ಮತ್ತು ಶಕ್ತಿಯನ್ನು ತೋರಿಸಬಲ್ಲವಳಾಗಿದ್ದಾಳೆ.

ಮಹಿಳೆ ಅಬಲೆ ಎಂಬ ಮಾತು ಇಂದು ತುಂಬ ಸವಕಲಾಗಿದೆ.

ಎಲ್ಲಾ ಕ್ಷೇತ್ರಗಳಲ್ಲೂ ಅವಳು ತನ್ನ ಪಾಲನ್ನು ತೆಗೆದುಕೊಂಡು ತನ್ನನ್ನು ತಾನು ಏನೂ ಎಂಬುದನ್ನು ಜಗತ್ತಿಗೆ ಜಗಜ್ಜಾಹೀರು ಮಾಡಿದ್ದಾಳೆ.

ಹಿಂದೆ ಇದ್ದಂತೆ ಇಂದು ಕೇವಲ ಅಡಿಗೆ ಮನೆಯಲ್ಲಿ ಸೌಟು ಹಿಡಿದುಕೊಂಡು, ಮಕ್ಕಳು ಮರಿಗಳನ್ನು ಆಡಿಸಿಕೊಂಡು ದಿನಕಳೆಯುವ ದಿನಮಾನಗಳು ಯಾವಾಗಲೇ ಇತಿಹಾಸ ಸೇರಿದ್ದಾವೆ.

ಅವಳು ಹಗಲು ರಾತ್ರಿ ಪುರುಷರ ರೀತಿಯಲ್ಲಿ ಆಪೀಸ್ ನಲ್ಲಿ ದುಡಿಯ ಬಲ್ಲಳಾಗಿದ್ದಾಳೆ. ಇಂದು ಪುರುಷರಿಗೆ ಮಾತ್ರ ಈ ಕೆಲಸ ಎನ್ನುವುದೆಲ್ಲವನ್ನು ತಾನು ಮಾಡುತ್ತಿದ್ದಾಳೆ.

ಮಹಿಳೆಯರಿಗ್ಯಾಕೇ ಈ ಉಸಾಬರಿ ಎಂದು ಅಪ್ಪಿ ತಪ್ಪಿ ಮಾತನ್ನಾಡದಂತೆ ಮಾಡಿದ್ದಾಳೆ.

ಹುಡುಗರೇ ಸ್ವಲ್ಪ ಹುಷಾರು!

ಅವಳ ಜಾಣ್ಮೆ ಏನು? ತಾನೆಷ್ಟು ಬುದ್ಧಿವಂತಳು ಎಂಬುದನ್ನು ತಾನು ವಿದ್ಯಾಭ್ಯಾಸ ಮಾಡುವ ದಿನಗಳಲ್ಲೆ ನಿರೂಪಿಸಿದ್ದಾಳೆ.ಪುರುಷರ ಸರಿಸಮಾನ ಪ್ರತಿಯೊಂದು ಕಾರ್ಯಗಳನ್ನು ಹೆಚ್ಚು ಶ್ರದ್ಧೆ ಮತ್ತು ಅಸಕ್ತಿಯಿಂದ ಮಾಡಿ ಸಾಧನ ಶಿಖರವನ್ನೆ ಏರುತ್ತಿದ್ದಾಳೆ.

ತೊಟ್ಟಿಲು ತೂಗುವ ಕೈ ದೇಶ ಆಳುವುದು ಎಂಬುದನ್ನು ನಿಜ ಮಾಡುವಂತೆ, ನಮ್ಮ ದೇಶದಲ್ಲಿಯೇ ಹಿಂದೆ ಮತ್ತು ಪ್ರಸ್ತುತ ಸಾಕಷ್ಟು ಮಹಿಳಾ ಮಣಿಗಳು ಆಡಳಿತ ಚುಕ್ಕಾಣಿಯನ್ನು ತಮ್ಮ ಕೈಲ್ಲಿ ಹಿಡಿದುಕೊಂಡಿದ್ದಾರೆ.

ದೇಶದ ಆಡಳಿತವನ್ನೇ ತನ್ನ ಕೈಯಲ್ಲಿಡಿದುಕೊಂಡು ಹಲವು ವರುಷ ಸಲೀಸಾಗಿ ಸರ್ಕಾರವನ್ನು ನಿರ್ವಹಿಸಿದ ಕೀರ್ತಿ ಹಿಂದಿನ ಪ್ರಧಾನಿ ಇಂದಿರಾ ಗಾಂಧಿಗೆ ಸಲ್ಲಬೇಕಾಗಿದೆ.

ಅವರ ಹಾದಿಯಂತೆ ಅನೇಕ ರಾಜಾಕೀಯ ನಾಯಕಿಯರು ಇಂದಿಗೂ ಸರ್ಕಾರದ ಬಹುಮುಖ್ಯ ಸ್ಥಾನಗಳನ್ನು ಅಲಂಕರಿಸಿ ಪುರುಷಪುಂಗರಿಗಿಂತ ನಾವೇನು ಕಮ್ಮಿ ಇಲ್ಲ ಎಂಬುದನ್ನು ಮತ್ತೆ ಮತ್ತೆ ಸತ್ಯ ಮಾಡುತ್ತಿದ್ದಾರೆ.

ಹೀಗೆ ಪ್ರತಿಯೊಂದು ರಂಗದಲ್ಲೂ ಅಸಮಾನ್ಯ ಸಾಧನೆಗಳನ್ನು ಸ್ರ್ತೀಯರು ಮಾಡಿದ್ದಾರೆ.

ನಮ್ಮ ಭಾರತ ಹೆಣ್ಣಿಗೆ ಮಹತ್ವವಾದ ಸ್ಥಾನವನ್ನು ಕೊಟ್ಟಿರುವ ದೇಶ ಮತ್ತು ಸ್ರ್ತೀಯರನ್ನು ದೇವತೆಗಳಂತೆ ಕಂಡ ಭೂಮಿ.

ಇಂದು ಮಹಿಳೆಯರು ಮಾಡುವ ಕೆಲಸಗಳನ್ನು ಪುರುಷರು ಮಾಡಬಲ್ಲರು. ಯಾವುದೇ ಬೇದ ಭಾವವಿಲ್ಲದ ಪ್ರತಿಯೊಬ್ಬರೂ ಪ್ರತಿಯೊಂದು ಕೆಲಸವನ್ನು ಶೇರ್ ಮಾಡಿಕೊಂಡು ಮಾಡುವ ಕಲೆಯನ್ನು ಪ್ರತಿ ಕುಟುಂಬದಲ್ಲೂ ಕಾಣಬಹುದು.

ಕೇವಲ ಮಕ್ಕಳಿಗೆ ಜನ್ಮ ನೀಡುವ ಕಾಯಕ ಹೆಣ್ಣಿನದು ಎಂಬ ಹಣೆ ಪಟ್ಟಿ ಇಂದು ಕಳಚಿದೆ. ಮಕ್ಕಳ ಪಾಲನೆ ಪೋಷಣೆ ಗಂಡ ಹೆಂಡತಿ ಇಬ್ಬರದು ಎಂಬ ಪಾಠ ಪ್ರತಿಯೊಂದು ಕುಟುಂಬಕ್ಕೂ ಗೊತ್ತಾಗಿದೆ.

ಯಾಕೆಂದರೇ ಇಂದಿನ ಪಾಸ್ಟ್ ಲೈಫ್ ಯುಗದಲ್ಲಿ ಮತ್ತು ಚಿಕ್ಕ ಕುಟುಂಬದಲ್ಲಿ ಗಂಡು ಮತ್ತು ಹೆಣ್ಣು ಇಬ್ಬರೂ ದುಡಿಯುತ್ತಿದ್ದಾರೆ. ಆದ್ದರಿಂದ ಸಂಸಾರದ ಚಕ್ರ ಸುಗಮವಾಗಿ ಚಲಿಸಬೇಕೆಂದರೇ ಇಬ್ಬರೂ ತಮ್ಮ ತಮ್ಮ ಕೆಲಸವನ್ನು ಸಮನಾಗಿ ಹಂಚಿಕೊಂದು ರ್ವಹಿಸುವ ಜರೂರತು ಇಂದು ಇದೆ.

ಇದು ನೀನೇ ಮಾಡಬೇಕು ಎಂಬ ರೂಲ್ಸ್ ಏನು ಇಲ್ಲ. ಅವಳು ಹೊರಗಡೆ ದುಡಿಯುತ್ತಾಳೆ. ಇವನು ಹೊರಗಡೆ ದುಡಿಯುತ್ತಾನೆ. ಆದ್ದರಿಂದ ಇವನು ಇವನು ಮನೆಯೊಳಗೆ ಕೈ ಅಸರೆಯಾಗಬೇಕು.

ನಮ್ಮ ಮಹಿಳೆಯರು ದೇಶ ವಿದೇಶದಲ್ಲೂ ತಮ್ಮ ಜಾಣ್ಮೆಯ ಮಹಿಮೆಯನ್ನು ತೋರಿಸಿದ್ದಾರೆ.

ಸಾಪ್ಟವೇರ್ ಕ್ಷೇತ್ರಗಳಲ್ಲಿರುವ ಮಹಿಳೆಯರು ವಿದೇಶ ಪ್ರವಾಸ ಮಾಡುತ್ತಿದ್ದಾರೆ. ಅಲ್ಲಿ ನಮ್ಮದಲ್ಲದ ಜಾಗದಲ್ಲಿ ಅಷ್ಟೊಂದು ಧೈರ್ಯದಿಂದ ತಮ್ಮ ಕೆಲಸವನ್ನು ಮಾಡುತ್ತಿರುವುದು ನೋಡಿದರೇ ಎಷ್ಟೊಂದು ಹೆಮ್ಮೆ ಅನಿಸುತ್ತದೆ.

ಹಿಂದೆ ಮಹಿಳೆಯರು ಹೊರಗಡೆ ಹೆಜ್ಜೆ ಇಡುವುದೇ ಅಪರೂಪ ಅನಿಸಿತ್ತು. ಆದರೇ ಬದಲಾದ ಕಾಲಮಾನ ಮಹಿಳೆಯರ ಕೌಶಲವನ್ನು ನಾನ ರೀತಿಯಲ್ಲಿ ಬಳಸಿಕೊಳ್ಳುತ್ತಿರುವುದು ಸಮಾಜದ ಬಂಧನವನ್ನು ಇನ್ನೂ ಗಟ್ಟಿ ಮಾಡಿದೆ ಅಂದರೇ ಅತಿಶಯೋಕ್ತಿಯಲ್ಲ.

ಆದರೂ ಪ್ರತಿ ಮಹಿಳಾ ದಿನಾಚಾರಣೆಯ ಸಮಯದಲ್ಲಿ ಮಹಿಳೆಯರ ಹಕ್ಕು, ಅವರ ಶ್ರೇಯೋಭಿವೃದ್ಧಿಯ ಬಗ್ಗೆ ಜಗತ್ತಿನಲ್ಲೆಡೆ ಪುನಃ ಮಾತು ಕತೆಗಳು ಚರ್ಚೆಗಳು ನಡೆಯುತ್ತವೆ.

ಯಾಕೆಂದರೇ ಇಷ್ಟೆಲ್ಲ ರೀತಿಯಲ್ಲಿ ಸ್ರ್ತೀಯರು ನಾವ್ಯಾರಿಗೂ ಸಾಠಿಯಿಲ್ಲ ಎಂದು ನಿರೂಪಿಸಿದರೂ, ಯಾಕೋ ಅಲ್ಲಿ ಇಲ್ಲಿ ನಿತ್ಯ ಸ್ತ್ರೀಯರ ಮೇಲೆ ತಿಳಿದೋ ತಿಳಿಯದೋ ದೌರ್ಜನ್ಯ ಮತ್ತು ಅವರನ್ನು ನೋಯಿಸುವಂತ ಘಟನೆಗಳು ಘಟಿಸುತ್ತಲೇ ಇರುತ್ತವೆ.

ಇದು ಹೊರಗಡೆ ಮಾತ್ರ ಎಂದಲ್ಲ. ನಮ್ಮ ನಮ್ಮ ಮನೆಯಂಗಳದಲ್ಲಿಯೇ ನಮ್ಮ ಹತ್ತಿವರಿಂದಲೇ ಅನ್ಯಾಯಕ್ಕೆ, ದಬ್ಬಾಳಿಕೆಗಳಿಗೆ ನಮ್ಮ ನಿಮ್ಮ ಸ್ತ್ರೀ ಜೀವಗಳು ಬಲಿಯಾಗುತ್ತಿರುವುದು ಅತ್ಯಂತ ಅವಮಾನಕರ ಸಂಗತಿ.

ನಮ್ಮದೇ ಮನೆಯಲ್ಲಿ ನಮ್ಮದೇ ತಾಯಿ, ಮಗಳು, ತಂಗಿ, ಅಕ್ಕ, ಅತ್ತಿಗೆ, ಅಜ್ಜಿ ಇತ್ಯಾದಿ ಹೆಣ್ಣು ಜೀವಗಳನ್ನು ಅದು ಯಾಕೋ ಒಂದು ರೀತಿಯಲ್ಲಿ ಗೊತ್ತೊ ಗೊತ್ತಿಲ್ಲದೋ ಹೆಣ್ಣು ಮನಸ್ಸಿಗೆ ದಕ್ಕೆ ಬರುವಂತೆ ನೋವುಂಟು ಮಾಡುತ್ತಿದ್ದೇವೆ.

ಇದು ನಿಲ್ಲಬೇಕು.

ಒಂದು ಮನೆಯೆಂದರೇ.. ಅದು ಸುಂದರ ಮನೆಯೆಂದರೇ.. ಅದು ಕೇವಲ ಬೌತಿಕ ವಸ್ತುಗಳು ತುಂಬಿರುವ ಮನೆಯಲ್ಲ! ಅಲ್ಲಿ ಸ್ತ್ರೀಯೊಬ್ಬಳಿದ್ದಾಳೆಂದರೇ ಅಲ್ಲಿಯ ಒಟ್ಟು ಭಾವಪರಿತ ವಾತವರಣವೇ ಆಹ್ಲಾದಕವಾಗಿರುತ್ತಾದೆ. ಪುನಃ ಅದು ಸ್ತ್ರೀ ಮೊಲವಾದ ತಾಯಿ, ತಂಗಿ, ಗೆಳತಿ, ಮಗಳು  ಮನದ ರಾಗ ರಂಜನೆಯಿಂದ ಕೊಡಿರುತ್ತದೆ.

ಇಂಥ ಒಂದು ಒಟ್ಟು ಭಾವ ಪ್ರಫುಲತೆ ಮತ್ತು ಕರುಣ ಬಂಧನ ರಸ ಹೆಣ್ಣು ಜೀವದಿಂದ ಮಾತ್ರ ಹರಿಯಬೇಕು.

ಅವಳು ಎಷ್ಟೇ ಓದಿದ್ದರೂ, ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದರೂ, ಎಷ್ಟೇ ದೊಡ್ಡ ಸಾಧನೆಯ ಶಿಖರವೇರಿದ್ದರೂ ಕುಟುಂಬವೆನ್ನುವ ಮನೆಯೊಳಗೆ ಹೆಜ್ಜೆ ಇಟ್ಟಳೆಂದರೇ ಅವಳ ಭಾವನೆಗಳ ಓಡನಾಟ ಅವಳ ಸುತ್ತಲಿನವರೆಲ್ಲರಿಗೂ ಪಸರಿಸುತ್ತದೆ.  ಅದು ಹೇಗೂ ಒಂದು ರೀತಿಯಲ್ಲಿ ಶಬ್ಧದಲ್ಲಿ ವರ್ಣಿಸಲಾರದ ಅನುಬಂಧನವನ್ನು ಪ್ರತಿಯೊಬ್ಬರಿಗೂ ಕೊಟ್ಟಿರುತ್ತದೆ.

ಅದಕ್ಕೆ ಹೇಳುವುದು ಮನೆ ಎನ್ನುವುದು, ಅದೇ ನೆಮ್ಮದಿಯ ಗೂಡು.

ಹೀಗೆ ಇರುವ ಮಹಿಳೆಯ ಪ್ರಸ್ತುತತೆ ಎಂದು ಬಿಡಿಸಲಾಗದ ನಂಟು ಎಂದರೇ ತಪ್ಪಲ್ಲ.

ಪುರುಷ - ಮಹಿಳೆ ಜೀವನದ ಅತಿ ಮುಖ್ಯ ಎರಡು ಚಕ್ರಗಳು. ಹಲವು ರೂಪದಲ್ಲಿ ಅದು ಸದಾ ಪ್ರತಿಯೊಬ್ಬರನ್ನು ಪ್ರೀತಿಯಿಂದ ಕಾಪಾಡುವ ಪ್ರೀತಿಯ ಮನಸ್ಸು.

ಸ್ರ್ತೀ ಯೆಂದರೇ ತಾಳ್ಮೆ, ಸ್ರ್ತೀಯೆಂದರೇ ಕರುಣೆ, ಸ್ತ್ರೀಯೆಂದರೇ ಪ್ರೀತಿ ಇತ್ಯಾದಿ ನಾನಾ ರೂಪಕಗಳ ಒಟ್ಟು ಸಂಗಮವಾದ ಒಂದು ಜೀವಂತ ಪುತ್ಥಳಿಯನ್ನು ಗೌರವಯುತವಾಗಿ ಪ್ರತಿಯೊಬ್ಬರೂ ಪ್ರತಿ ಜಾಗದಲ್ಲೂ ಕಾಣಬೇಕೆಂಬಂತೆ.

ನಮ್ಮ ಹಿರಿಯರು ಹೇಳಿದ ಮಾತು ಎಂದೆಂದಿಗೂ ಅಜರಾಮರ ’ಎಲ್ಲಿ ಸ್ರ್ತೀಯರನ್ನು ಗೌರವಿಸುತ್ತಾರೊ ಅಲ್ಲಿ ದೇವತೆಗಳು ನೆಲಸಿರುತ್ತಾರೆ’.

ಈ ಮಾತು ಅವರು ಯಾಕೇ ಹೇಳಿದರೂ ಎಂಬುದು ಪ್ರತಿಯೊಬ್ಬರಿಗೂ ಗೊತ್ತು. ಹಿಂದಿನಿಂದಲೂ ಎಷ್ಟೇ ಸುಧಾರಣೆಯ ಹೊಸ ಗಾಳಿ ಬೀಸಿದ್ದರೂ ನಮ್ಮ ಪುರುಷ ಸಮಾಜ ಸ್ರ್ತೀಯರನ್ನು ಅದೇ ಹಳೆಯ ಜಾಡಿನಂತೆ ಕೇವಲವಾಗಿ ಕಾಣುತ್ತಿರುವುದು ದೌರ್ಬಗ್ಯದ ಸಂಗತಿ.

ಪ್ರತಿಯೊಬ್ಬರೂ ಕಣ್ಣು ಮನವನ್ನು ತೆರೆದು ನೋಡುವಂತಾಗಬೇಕು. ಯಾಕೆಂದರೇ ಪ್ರತಿಯೊಬ್ಬರೂ ಆ ಹೆಣ್ಣೆಂಬ ಹೆತ್ತಮ್ಮನಿಂದ ಜನ್ಮ ತಾಳಿರಿರುವವರು. ನಮ್ಮ ಮೊಲ ಬೇರಿರುವುದು ತಾಯಿಯಲ್ಲಿ.

ಹೆತ್ತ ತಾಯಿಯು ಒಂದು ಹೆಣ್ಣಲ್ಲವಾ?

ಭಾನುವಾರ, ಫೆಬ್ರವರಿ 28, 2016

ಕೇವಲ ವಿರೋದಿಸುವುದಕ್ಕಾಗಿ..?

ದೇಶದ ವಿಷಯ ಬ್ಯಾಡಮ್ಮ ಶಿಶ್ಯ! ಅನ್ನುವಂತಾಗಿದೆ.

ಇಂದು ಎರಡು ದೊಡ್ಡ ಗುಂಪುಗಳು ದೇಶದಲ್ಲಿ ಹುಟ್ಟಿಕೊಂಡಿವೆ.
೧.ಮೋದಿ ಸರ್ಕಾರ.
೨. ಮೋದಿಯನ್ನು ಕಂಡರೇ ಮೈ ಪರಚಿಕೊಳ್ಳುವವರೆಲ್ಲಾ ಯಾವುದೇ ಪಕ್ಷ ಬೇದ ಮರೆತು ವಿರೋಧಿಗಳ ಬಣ ಮಾಡಿಕೊಂಡಿದ್ದಾರೆ.

ದೇಶದ ಯಾವುದೇ ಮೊಲೆಯಲ್ಲಿ ಸಣ್ಣದೂಂದು ಘಟನೆ ಜರುಗಿದರೂ ಅದಕ್ಕೆ ಮೋದಿ ಕಾರಣ ಎನ್ನುವಂತಾಗಿದೆ. ಇದಕ್ಕೆ ಮೋದಿಯ ಜನಪ್ರೀಯತೆ ಕಾರಣವೋ? ಅಥವಾ ಮೋದಿ ಹಾಗೆಲ್ಲಾ ಕೊಚ್ಚಿಕೊಂಡು ಅಧಿಕಾರಕ್ಕೆ ಬಂದಿದ್ದಾರಲ್ಲಾ ಅದಕ್ಕೆ ಇದರ ಹೊಣೆ ನೀ ಹೊರು ಎನ್ನುವಂತಾಗಿದೆ.

ಮೋದಿಯ ಇತಿಹಾಸ ಎಲ್ಲರೂ ಬಲ್ಲರು. ಅವರು ಸತತ ಮೂರು ವರುಷ ಗುಜರಾತ್ ನಲ್ಲಿ ಆಡಳಿತ ನಡೆಸಿರುವವರು. ಗುಜರಾತ್ ಅಭಿವೃದ್ಧಿಗಿಂತ, ಗುಜರಾತ್ ನಲ್ಲಿ ಜರುಗಿದ ಗೋದ್ರ ರೂವಾರಿ ಮೋದಿ, ವಿರೋಧಿಗಳಿಂದ ಪ್ರಸಿದ್ಧರಾಗಿರುವುದೇ, ಮೋದಿಯ ಬಗ್ಗೆ ಪ್ರತಿಯೊಬ್ಬರೂ ನೇಗೆಟಿವ್ ಆಗಿ ಚಿಂತಿಸುವಂತಾಗಿರುವುದು.

ಕೋರ್ಟ ನಲ್ಲಿ ಗೋದ್ರ ಘಟನೆಯಲ್ಲಿ ಮೋದಿಯ ಕೈ ಏನೂ ಇಲ್ಲ ಎಂದು ಕ್ಲೀನ್ ಚೀಟ್ ಪಡೆದಿದ್ದರೂ ವಿರೋಧಿಗಳು ಇನ್ನೂ ಅದನ್ನು ನೆಪಮಾಡಿ ಯಾವುದೇ ವಿಚಿತ್ರ ಘಟನೆ ನಡೆದರೂ ಮೋದಿಯಿಂದ ಇಷ್ಟು ಅದ್ವಾನವಾಗುತ್ತಿದೆ ಎನ್ನುತ್ತಿದ್ದಾರೆ.

ಇಂದು ದೇಶದಲ್ಲಿ ಮೇಲೆ ಹೇಳಿದ ಎರಡೇ ಎರಡು ಬಣಗಳಿವೆ. ಒಂದು ಮೋದಿ ಲೈಕ್ ಮಾಡುವವರು. ಇನ್ನೊಂದು ಮೋದಿ ವಿರೋಧಿಸುವವರದು.

ಪ್ರತಿಯೊಂದು ರಾಜಕೀಯ, ಸಂಘಟನೆ, ಸಾಹಿತಿಗಳು, ನಾಯಕರು, ವಿದ್ಯಾರ್ಥಿಗಳು ಹೀಗೆ ಪ್ರತಿಯೊಬ್ಬರೂ ಈ ಎರಡು ಬಣಗಳಲ್ಲಿ ಯಾವುದೇ ಬೇದವಿಲ್ಲದೇ ತಮ್ಮನ್ನು ಗುರುತಿಸಿಕೊಳ್ಳುವ ಮಟ್ಟಿಗೆ ಈ ಎರಡು ವರುಷದಲ್ಲಿ ಅಸಹಿಷ್ಣುತೆಯ ಗುಲ್ಲು ಗುಲ್ಲೇ ಎದ್ದಿದೆ.

ಪಾಪ ಏನೂ ಬಾಯಿಬಿಟ್ಟರು ಕಷ್ಟ ಎನ್ನುವಂತಾಗಿದೆ.

ಒಂದು ಹಳ್ಳಿಯ ಯಾವುದೋ ಒಂದು ಮೊಲೆಯಲ್ಲಿ ಏನಾದರೂ ಅಹಿತಕರ ಘಟನೆ ನೆಡೆದರೆ ಮೋದಿಯ ಎಪೇಕ್ಟ್ ಅನ್ನುವಂತಾಗಿದೆ. ಬಿ.ಜೆ.ಪಿ ತನ್ನ ಹಿಡನ್ ಅಜೆಂಡವನ್ನು ಭಾರತದ ಪ್ರತಿಯೊಬ್ಬರ ಮೇಲೂ ಹೇರುತ್ತಿದೆ. ಈ ದೇಶದಲ್ಲಿ ಯಾವುದೂ ಸರಿಯಿಲ್ಲ! ನಮಗೆ ಹಿಂದೆ ಇದ್ದ ಸಾಮಾಜಿಕ ಕಾಳಜಿ, ಸಮಾಜ ವಾದ, ಬಡವರ ಪರವಾದ, ಬಿ.ಜೆ.ಪಿ ವಿರೋಧಿ ಸರ್ಕಾರಗಳೇ ಕ್ಷೇಮವೆನ್ನುತ್ತಿದ್ದಾರೆ.

ದೇಶದ ಒಳ್ಳೆಯದು , ಅಭಿವೃದ್ಧಿ ಈ ವಿಷಯಗಳ ಚರ್ಚೆಗಿಂತ ಹೇಗಾದರೂ ಮಾಡಿ ಮುಂದಿನ ಸಂಸತ್ತು ಚುನಾವಣೆಯ ಹೊತ್ತಿಗೆ ಮೋದಿ ನೇಮ್ ಪೂರ ಬರಬಾದ್ ಮಾಡಲೇಬೇಕು ಎನ್ನುವಂತೆ ಮೋದಿ ವಿರೋಧಿ ಸೇನೆಯೇ ನಿಂತಿದೆ.

ಮೋದಿ ರೂಪಿಸಿರುವ ಎಲ್ಲಾ ಯೋಜನೆಗಳನ್ನು ಅನುಮಾನದ ಹುತ್ತದಲ್ಲಿ ಜನಗಳು ಕಾಣುವಂತೆ ಮೀಡಿಯಾಗಳು ಬಿತರಿಸುತ್ತಿವೆ. ಮೋದಿ ಕೊಟ್ಟ ಆಶ್ವಾಸನೆಗಳು ಈಗ ಎಲ್ಲಿ ಕೆಲಸ ಮಾಡುತ್ತಿವೆ ಎಂದು ಕೇಳುತ್ತಿದ್ದಾರೆ.

ಮೋದಿ ಪುಲ್ ಮೇಜಾರಟಿಯಲ್ಲಿ ಗೆದ್ದರೆ ಸಾಕೇ..? ಎಲ್ಲಾ ಸುಳ್ಳು ಪೊಳ್ಳು ಭರವಸೆಗಳಿಂದ ಅಧಿಕಾರ ಹಿಡಿದರೇ ಸಾಕೇ..?  ಭಾರತವನ್ನು ಸ್ವರ್ಗ ಮಾಡುತ್ತಿನಿ ಎಂದೆ. ಎಲ್ಲಿ ಸ್ವಚ್ಛ ಭಾರತ? ಯಾವ ಡಿಜಿಟಲ್? ಅದು ಏನೂ ಬಡವರ ಹೊಟ್ಟೆ ತುಂಬಿಸುತ್ತಾ?

ಭಾ ಮೋದಿ ನಮ್ಮೊರಿಗೆ ನೀ ಬಂದು ಪೊರಕೆ ಹಿಡಿದು ಗುಡಿಸು ಎನ್ನುತ್ತಿದ್ದಾರೆ.

ನೀ ರೂಪಿಸಿದ ಯೋಜನೆಗೆ ನೀನೆ ಹೊಣೆ ಅನ್ನುತ್ತಿದ್ದಾರೆ.

ಒಬ್ಬ ಮೋದಿ ಎಲ್ಲ ಕಡೆ ಅದು ಹೇಗೆ ಕೈ ಹಾಕುವುದು ನೀವೆ ಹೇಳಿ?

ಇಷ್ಟರ ಮಟ್ಟಿಗೆ ಜನ ಮೋದಿಯನ್ನು ದ್ವೇಷಿಸುವುದು0ಟ ಎಂದೆನಿಸುತ್ತಿದೆ.

ಮೋದಿ ಏನಾದರೂ ದೇಶದ ಶತ್ರುವನ್ನು ವಿರೋಧಿಸಿದರೇ.. ಇವರುಗಳು ಅವನನ್ನೇ ಜೈ ಅಂದು ಬಿಡುತ್ತಾರೆ. ಹಿಂದೆ ಮುಂದೆ ನೋಡದೆ.

ಯಾರೊಬ್ಬರೂ ಅವರ ನಿಜವಾದ ಕನಸು ಹೋರಾಟವನ್ನು ಮನನ ಮಾಡಿಕೊಳ್ಳುತ್ತಿಲ್ಲ. ಕೇವಲ ಮೀಡಿಯಾದಲ್ಲಿ ಬರುತ್ತಿರುವುದೇ ನಿಜವೆಂದುಕೊಂಡಿದ್ದಾರೆ. ಪ್ರತಿಯೊಂದಕ್ಕೂ ವಿರೋಧ ವಿರೋಧ. ಮೋದಿಗೂ ತಾನು ಯಾಕಾದರೂ ಪ್ರದಾನಿಯಾದೇನೂ ಎಂದು ಅನಿಸಿರಬೇಕು.

ಆದರೇ ಮೋದಿಯ ಮಾತಿಗೆ ವಿಶ್ವವೇ ಕಿವಿಯಾಗಲು ಕಾತುರವಾಗಿದೆ.

ಭಾರತದಲ್ಲಿ ಮಾತ್ರ ಸಾಕಷ್ಟು ವಿರೋಧಿಗಳಿಗೆ ಮೋದಿಯ ಹೆಸರೇ ದುಃಸ್ವಪ್ನವಾಗಿದೆ.

ಯಾವುದೇ ವೀಕ್ ನೆಸ್ ಇಲ್ಲದ ಮನುಷ್ಯರನ್ನು ಸೋಲಿಸುವುದು ಸುಲಭವಲ್ಲ! ಅದಕ್ಕೆ ಈ ರೀತಿಯ ಜಾತಿ, ಧರ್ಮ, ಶಿಕ್ಷಣ ರಂಗಗಳನ್ನು ಬಳಸಿಕೊಂಡು ಸರಕಾರವನ್ನು ರಾಜಕೀಯವಾಗಿ ಬಡಿಯಲು ಸನ್ನದ್ಧರಾಗಿದ್ದಾರೆ.

ಐದು ವರುಷ ಕಾದು ನೋಡುವ ತಾಳ್ಮೆಯನ್ನು ಭಾರತ ಕಳೆದುಕೊಂಡುಬಿಟ್ಟಿದೆ ಅನಿಸುತ್ತದೆ. ಅದು ಸರಿ! ಸುಮಾರು ಅರುವತ್ತು ವರ್ಷ ಒಳ್ಳೆಯ ದಿನಗಳಿಗೆ ಕಾದು ಕಾದು ಸುಸ್ತಾದ ಮಂದಿ ಮೋದಿಯನ್ನು ಈ ರೀತಿಯ ಭರ್ಜರಿ ಜಯದಲ್ಲಿ ಆರಿಸಿರುವುದು ಯಾಕೆ..? ಅದಕ್ಕೆ ಅವರು ಮೋದಿಯಿಂದ ಮ್ಯಾಜಿಕ್ ಕನಸು ಕಾಣುತ್ತಿದ್ದಾರೆ.

ಅದು ಅಷ್ಟು ಸುಲಭವಲ್ಲ!

ಬೀಜ ಬಿತ್ತಬೇಕು, ನೀರು ಎರೆಯಬೇಕು, ಬಳ್ಳಿ ಜೋಪಾನ ಮಾಡಬೇಕು. ಆ ಬಳಿಕ ನಿಜವಾದ ಫಲ ದೊರೆಯುವುದು.

ಆದರೇ ಈ ವಿರೋಧಿ ಪಾಳ್ಯ ದೇಶ ದ್ರೋಹಿಗಳು ಈ ಮೋದಿ ಕಡೆಯವರು ಎನ್ನುವ ಮಟ್ಟಿಗೆ ಬಾಯಿ ಬಡಿದುಕೊಳ್ಳುತ್ತಿದ್ದಾರೆ. ಸಾಮಾಜಿಕ ನ್ಯಾಯವೆಲ್ಲ ಸತ್ತು ಹೋಗಿದೆ. ಕೇವಲ ಹಣವುಳ್ಳವರು ಮಾತ್ರ ಭಾರತದಲ್ಲಿ ಬದುಕಬಹುದೆಂದು ಮಾತನಾಡುತ್ತಿದ್ದಾರೆ.

ಅದಕ್ಕಾಗಿಯೇ ಕೆಲವು ಮಂದಿ ಸಜ್ಜಾಗಿ ತಮ್ಮ ಬಾಯಿಗಳನ್ನು ತೆರೆದುಕೊಂಡು ನಿಂತಿದ್ದಾರೆ. ಇದರ ಬಗ್ಗೆ ಏನಾದರೂ ಎಲ್ಲಾದರೂ ಹೇಳದಿದ್ದರೇ ನಾವೇನೋ ಕಳೆದುಕೊಳ್ಳುತ್ತಿದ್ದೇವೆನೋ ಅನ್ನುವ ಮಟ್ಟಿಗೆ ಜನರ ಭಾವನೆಗಳನ್ನು ಕೆರಳಿಸುವವ ಮಟ್ಟಿಗೆ ಇವರುಗಳು ಮುಂದುವರಿಯುತ್ತಿದ್ದಾರೆ.

ಮೋದಿ ಮುಂದುವರಿದ ಜನರ ನಾಯಕ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ.

ಅಲ್ಲಾ ಹಾಗೆಲ್ಲಾ ಒಂದೇ ಪಂಗಡದ ಜನ ಓಟು ಓತ್ತಿದ್ದರೆ ಮೋದಿ ಅಷ್ಟೊಂದು ಸೀಟು ಗೆದ್ದು ಅಧಿಕಾರ ಹಿಡಿಯುತ್ತಿದ್ದರಾ ಎಂದು ಚಿಕ್ಕದಾಗಿಯೂ ಯೋಚಿಸುತ್ತಿಲ್ಲ!

ಬಿ.ಜೆ.ಪಿ ಹೊರೆತೂ ಯಾವುದೇ ಪಕ್ಷ ಅಧಿಕಾರ ನಡೆಸಿದರೂ ಪರವಾಗಿಲ್ಲ! ಅದು ಕೇಸರಿ! ಅದು ಎಷ್ಟೇ ಪರಮ ಭ್ರಷ್ಟ ಪಕ್ಷವಾದರೂ/ಸರ್ಕಾರವದರೂ ಪರವಾಗಿಲ್ಲ, ಅನ್ನುವಷ್ಟು ಬಾಲಿಶ ಮನಸ್ಸು ಹಿರಿ, ಕಿರಿ ಬುದ್ಧಿ ಜೀವಿಗಳಿಗ್ಯಾಕೆ?

ನಿತ್ಯ ಒಂದಲ್ಲಾ ಒಂದು ಹೊಸ ಹೊಸ ಸಮಸ್ಯೆಗಳ ಸರಮಾಲೆಯನ್ನೇ ಸೃಷ್ಟಿ ಮಾಡುತ್ತಿದ್ದಾರೆ. ಅವುಗಳನ್ನೇಲ್ಲಾ ಪ್ರಸ್ತುತ ಕೇಂದ್ರ ಸರ್ಕಾರದ ಕೊರಳಿಗೆ ಕಟ್ಟುತ್ತಿದ್ದಾರೆ.

ಆಗುತ್ತಿರುವ ಒಳ್ಳೆಯ ಕೆಲಸಗಳನ್ನೆಲ್ಲಾ ನಗಣ್ಯ ಮಾಡಿ, ಕೆಟ್ಟ ಘಟನೆಗಳನ್ನೇ ಎಂಜಾಯ್ ಮಾಡುತ್ತಾ ದೇಶವನ್ನು ಅಭದ್ರತೆಯ ಸಂಚಿಗೆ ಸಿಲುಕಿಸುತ್ತಿರುವ ಈ ವಿರೋಧಿ ನಾಯಕರುಗಳು ನಿಜವಾದ ದೇಶದ ಬಗ್ಗೆ ಹೇಗೆ ಇವರು ಚಿಂತಿಸುವವರು? ಎಂದು ನಾವೆಲ್ಲಾ ಯೋಚಿಸಬೇಕು.

ಈ ವಿರೋದಿಸುವ ಭರದಲ್ಲಿ ದೇಶಕ್ಕೆ ಕಂಟಕವಾಗಿದ್ದ ಭಯೋತ್ವಾದಕರನ್ನು, ಶತ್ರು ದೇಶವಾಗಿರುವ ಪಾಕಿಸ್ತಾನವನ್ನು ಕೊಂಡಾಡುವ ಮಟ್ಟಿಗೆ ನಮ್ಮ ಜನಗಳು ಮುಂದುವರಿದಿರುವುದು ಯಾವುದರ ಸೂಚನೆ? ಇದಂತೂ ತುಂಬ ಅಘಾತಕಾರಿ ವಿಷಯವಾಗಿದೆ.

ಯಾರನ್ನೋ ಒಲೈಸುವ ಸಲುವಾಗಿ ಎಂಥವರನ್ನಾದರೂ ನಾವು ತಿಪ್ಪೇ ಸಾರಿಸಿ ಒಳ್ಳೆಯವರನ್ನಾಗಿ ಮಾಡುವವರಾಗಿದ್ದೇವೆ.

ಯಾವುದನ್ನು ಖಂಡಿಸಬೇಕು, ಯಾವುದನ್ನು ಮೆಚ್ಚಬೇಕು ಎಂಬ ಸೂಕ್ಷ್ಮ ಮನಸ್ಸನ್ನೇ ಕಳೆದುಕೊಂಡಿದ್ದೇವೆ.

ಇದು ಹೀಗಾಗಬಾರದು. ದೇಶಕ್ಕಾಗಿ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರು. ಇಂದು ದೇಶಕ್ಕೆ ರಕ್ಷಣೆಯಾಗಿ ನಿಂತು ಗಡಿ ಕಾಯುತ್ತಿರುವ ನಮ್ಮೆಲ್ಲರ ಪ್ರೀತಿಯ ಸೈನಿಕರ ಜೀವ ತ್ಯಾಗಕ್ಕೆ ನಾವೆಲ್ಲಾ ಅವಮಾನ ಮಾಡಿದಂತೆ ಸರಿ.

ಅಷ್ಟೇಲ್ಲಾ ಹೋರಾಡಿ ಅವರುಗಳು ದೇಶ ಕಾಯುತ್ತಿರುವುದರಿಂದಲೇ ನಾವುಗಳು ಇಂದು ಹೀಗೆ ಆರಾಮಾಗಿ ಬಾಳುತ್ತಿರುವುದು. ನಾವು ಆರಾಮಾಗಿ ಪುರುಸೊತ್ತಾಗಿದ್ದೇವೆ ಎಂದು ಏನೆಲ್ಲಾ ಅನಾಹುತಗಳನ್ನು ಮಾಡಿದರೇ ಯಾರೊಬ್ಬರೂ ಸಹಿಸುವುದಿಲ್ಲ.

ದೇಶಕ್ಕೆ ದಕ್ಕೆ ಬರುವಂತೆ - ದೇಶವಾಸಿಗಳ ಭಾವನೆಗಳನ್ನು ಕಡೆಗಣಿಸುವಂತ ವಿಚಾರ ವಿಷಯಗಳು, ಹೇಳಿಕೆಗಳನ್ನು ನೀಡುವವರಿಗೆ ಕಠಿಣ ಶಿಕ್ಷೆಯಾದರೇ ಮಾತ್ರ ಈ ರೀತಿಯ ದೊಂಬಿಗಳು ನಿಯಂತ್ರಣಕ್ಕೆ ಬರುವುದು ಸಾಧ್ಯ.

ವಿರೋಧಿಸುವುದಕ್ಕಾಗಿ ಎಲ್ಲಾದನ್ನೂ ವಿರೋಧಿಸಲು ಹೋಗಬಾರದು!

ಅಲ್ಲವಾ?



ಶುಕ್ರವಾರ, ಫೆಬ್ರವರಿ 19, 2016

ಮೊಬೈಲ್ ಮಹಿಮೆಗೆ ಶರಣು..!

ಮನುಷ್ಯ ತನ್ನ ಸಂಶೋಧನೆಯಿಂದ ಹೊಸ ಹೊಸ ವಸ್ತು ,ವಿಶೇಷಗಳನ್ನು ತನ್ನ ಜೀವನಕ್ಕೆ ಅಳವಡಿಸಿಕೊಳ್ಳುತ್ತಾನೆ. ಹೊಸ ಪೂರಕ ವಸ್ತುಗಳು ಅವನ ಜೀವನ ಮಟ್ಟವನ್ನು ಉತ್ತಮಗೊಳಿಸುವಲ್ಲಿ ಮಹತ್ವದ ಪಾತ್ರವನ್ನು ವಯಿಸಿವೆ.

ಹೊಸ ಟೆಕ್ನಲಾಜಿಯಿಂದ ಇಂದಿನ ನಮ್ಮ ಜೀವನ ಎಲ್ಲಿಂದ ಎಲ್ಲಿಗೋ ಬಂದು ನಿಂತಿದೆ.

ಪ್ರತಿಯೊಂದು ಒಂದು ಬಟನ್ ಒತ್ತುವ ಮೊಲಕ ತುಂಬ ಈಜೀ ಮತ್ತು ಆನಂದಮಯವಾಗಿದೆ.

ನಮ್ಮ ಬದುಕನ್ನು ಆದಷ್ಟು ಯಂತ್ರ ಮತ್ತು ಈ ತಾಂತ್ರಿಕರಣ ನುಂಗಿ ಬಿಟ್ಟಿದೆ ಅಂದರೇ ಅತಿಶಯೋಕ್ತಿಯಲ್ಲ.

ಮುಂಜಾನೆ ಎದ್ದೇಳುವುದರಿಂದ ಪ್ರಾರಂಭವಾದ ನಮ್ಮ ಈ ಡಿಜಿಟಲ್ ಬದುಕು, ಪುನಃ ಹಾಸಿಗೆಗೆ ಉಸ್ಸಪ್ಪಾ ಎಂದು ಮೈ ಚೆಲ್ಲುವವರೆಗೂ ಒಂದಲ್ಲಾ ಒಂದು ರೀತಿಯಲ್ಲಿ ಯಂತ್ರದ ಜೋತೆಯ ಜೀವನ ಪಯಣವಾಗಿದೆ.

ಇದಕ್ಕೆ ಉದಾಹರಣೆಯೆಂದರೇ ಸ್ಮಾರ್ಟ್ ಮೊಬೈಲ್!

ಇದು ಮನುಷ್ಯನ ಒಂದು ವಿಶಿಷ್ಟವಾದ ಅಂಗವೇ ಸರಿ. ಅದು ನಮ್ಮ ದೇಹದಲ್ಲಿ ಇಲ್ಲ ಎನ್ನುವುದು ಬಿಟ್ಟರೇ! ಅದು ನಮ್ಮ ಬಹು ಮುಖ್ಯ ಅವಿಭಾಜ್ಯ ಅಂಗವಾಗಿದೆ.

ಅದು ಇಲ್ಲದ ಒಂದು ಕ್ಷಣ ಕಲ್ಪನೆಗೂ ನಿಲುಕದಾಗಿದೆ.

ಅದು ಇಲ್ಲದಿದ್ದರೇ ನಮ್ಮ ವರ್ತನೆಯೇ ವಿಚಿತ್ರವಾಗಿರುತ್ತದೆ. ಹಳಿ ತಪ್ಪಿದ ರೈಲ್ ಆಗಿಬಿಡುತ್ತದೆ. ಅಷ್ಟರ ಮಟ್ಟಿಗೆ ಅದು ನಮ್ಮ ಅಂಗೈಯಲ್ಲಿನ ಅರಗಿಳಿಯಾಗಿದೆ. ಅದು ಯಾವಾಗಲೂ ಕೈ ಯಲ್ಲಿರಬೇಕು. ಅದರ ಸುಕೋಮಲವಾದ ಮೈನ್ನು ಟಚ್ ಮಾಡದಿದ್ದರೆ ನಮ್ಮ ಬೆರಳುಗಳು ಏನನ್ನೋ ಕಳೆದುಕೊಂಡಂತಾಗಿ ಕೈಯೇ ಓಡದಂತಾಗಿಬಿಡುತ್ತದೆ.

ಈ ಚಿಕ್ಕ ವಸ್ತು ಇಂದಿನ ಶತಮಾನದ ಒಂದು ಮಹತ್ವವಾದ ಸಂಶೋಧನೆಯೇ ಸರಿ.

ಕೇವಲ ಮಾತನ್ನಾಡಲು ಮಾತ್ರ ಬಳಕೆಯಾಗುತ್ತಿದ್ದ ಈ ವಸ್ತು ಇಂದು ಜೀವನದ ಪ್ರತಿ ರಂಗವನ್ನು ಆಕ್ರಮಿಸಿಕೊಂಡಿದೆ.

ಎಂ ಸರ್ವಿಸ್ ಎಂಬ ಹೊಸ ರಂಗವೇ ಉದ್ಬವವಾಗಿದೆ. ಇದಕ್ಕಾಗಿ ಅಖಂಡ ಇಂಜಿನೀಯರ್ ಗಳು ದುಡಿಯುತ್ತಿದ್ದಾರೆ. ಸಾಕಷ್ಟು ಉದ್ಯೋಗಾವಕಾಶಗಳನ್ನು ಈ ಉದ್ಯಮ ಮಾಡಿಕೊಟ್ಟಿದೆ.

ಇದು ಇಂದು ವೇಗವಾಗಿ ಬೆಳೆಯುತ್ತಿರುವ ಮಹತ್ವವಾದ ಕ್ಷೇತ್ರವಾಗಿದೆ.

ಹಾಗೆಯೇ ಮನುಷ್ಯನ ಹೊಸ ದೌರ್ಬಲ್ಯ ಈ ಮೊಬೈಲ್ ಎಂದರೇ ಸುಳ್ಳಲ್ಲ! ಚಿಕ್ಕ ವಸ್ತುವೊಂದು ಜೊತೆಯಲ್ಲಿದ್ದರೇ ಮುಗಿಯಿತು. ನಿದ್ದೆ ಬೇಡ, ಊಟ ಬೇಡ, ಜನರ ಸಹವಾಸವೇ ಬೇಡ! ಅದಷ್ಟು ಏಕಾಂತವಾಗಿರೋಣ ಅನಿಸುತ್ತದೆ!

ಯಾಕೆಂದರೇ ಇದರ ಮೊಲಕ ಪ್ರತಿಯೊಂದನ್ನು ದಕ್ಕಿಸಿಕೊಳ್ಳಬಹುದಾಗಿದೆ. ಇಡಿ ವಿಶ್ವವೇ ಅಂಗೈಯಲ್ಲಿದೆ ಎಂದು ಅನಿಸುತ್ತದೆ.

ಪ್ರಪಂಚದ ಯಾವುದೋ ಮೊಲೆಯಲ್ಲಿರುವ ವ್ಯಕ್ತಿಗಳ ನಡುವೆ ಸ್ನೇಹ ಮಾಡಿಕೊಳ್ಳಬಹುದು. ಯಾವುದೋ ದೂರದ ವ್ಯಕ್ತಿಗಳ ನಡುವೆ ಮಾತನಾಡಬಹುದು. ಯಾವುದೋ ಗುತ್ತು ಗುರಿಯಿಲ್ಲದ ಸ್ಥಳದ ಪೂರ್ಣ ವಿಷಯಗಳನ್ನು ಒಂದು ಗುಂಡಿ ಒತ್ತುವ ಮೊಲಕ ನಮ್ಮ ಮಸ್ತಕಕ್ಕೆ ಇಳಿಸಿಕೊಳ್ಳಬಹುದಾಗಿದೆ.

ಮೊಬೈಲ್ ಇಷ್ಟೊಂದು ವೇಗವಾಗಿ ಪ್ರತಿಯೊಬ್ಬರನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ ಎಂದು ಯಾರು ಉಹಿಸಿರಲಾರರು.

ನನಗೆ ತಿಳಿದಂತೆ ಭಾರತದಲ್ಲಿ ರಿಲೆಯನ್ಸ್ ಮೊಬೈಲ್ ನೆಟ್ ವರ್ಕ ಈ ಕ್ರಾಂತಿ ಮಾಡಿದ್ದು. ಅವರು ಕೊಟ್ಟ ೫೦೦ ರೂ ಬೆಲೆಯ ಮೊಬೈಲ್! ಶ್ರೀಮಂತ ಮಂದಿ ಮಾತ್ರ ಉಪಯೋಗಿಸುತ್ತಿದ್ದನ್ನು ಕಟ್ಟ ಕಡೆಯ ಜನರುಗಳಿಗೆ ಸಿಗುವಂತೆ ಮಾಡಿದ್ದಂತೂ ಮರೆಯಲಾರದ ಕ್ಷಣ.



ಅಂದಿನಿಂದ ಶುರುವಾದ ಮೊಬೈಲ್ ಯುಗ, ಇಂದು ಯಾರನ್ನು ಕೇಳಿದರೂ ಹಲೋ.. ಎಲ್ಲಿದ್ದೀಯ...? ಈ ಮಾತುಗಳು ಪ್ರತಿಯೊಬ್ಬರೂ ಬಳಸುವ ನಿತ್ಯ ಮಂತ್ರಗಳಾಗಿವೆ.

ಇಂಟರ್ ನೇಟ್, ಸೋಷಿಯಲ್ ಮೀಡಿಯಾಗಳು, ಪೇಸ್ ಬುಕ್, ವಾಟ್ಸಪ್ ಮನುಷ್ಯನು ಯೋಚಿಸಲಾರದಷ್ಟು ದೂರ ಮತ್ತು ವೇಗವಾಗಿ ಪ್ರತಿಯೊಬ್ಬರ ಜೀವನ ಶೈಲಿಯನ್ನೇ ತನ್ನ ಮುಷ್ಠಿಯಲ್ಲಿ ಇಟ್ಟುಕೊಂಡು ಬಿಟ್ಟಿವೆ ಅನಿಸುತ್ತಿದೆ.

ಪ್ರತಿ ಕ್ಷಣ ಪ್ರತಿಯೊಬ್ಬರೂ ಏನನ್ನಾದರೂ ಮೊಬೈಲ್ ನಲ್ಲಿ ನೋಡುತ್ತಿರುತ್ತಾರೆ. ಪ್ರತಿ ನಿಮಿಷವೂ ಏನನ್ನಾದರೂ ಟೈಪಿಸುತ್ತಿರುತ್ತಾರೆ, ಪ್ರತಿ ನಿಮಿಷವು ಸ್ಟೇಟಸ್, ವಾಲು, ಲೈಕ್, ಪೊಟೋ, ಕಾಮೆಂಟ್ ಇತ್ಯಾದಿ ಇತ್ಯಾದಿ ಏನೋ ಒಂದನ್ನು ಮಾಡುವ ಮಟ್ಟಿಗೆ ಮಂದಿಯನ್ನು ಬ್ಯುಸೀ ಮಾಡಿಬಿಟ್ಟಿದೆ.

ಈ ಚಿಕ್ಕ ವಸ್ತುವಿನ ಮೊಲಕವೇ ಸಮಸ್ತಕ್ಕೆ ಅರ್ಪಣೆ,ದರ್ಪಣೆ!

ಈ ಚಿಕ್ಕ ಮೊಬೈಲೇ ಹೊಸ ವರ್ಲ್ಡ್ ಗೆ ಬೆಳಕಿನ ಕಿಂಡಿಯಾಗಿದೆ. ಇದು ಇಲ್ಲದ ಜೀವನವೇ ನಶ್ವರ ಅನಿಸಿಬಿಟ್ಟಿದೆ.

ಇಂಟರ್ ನೇಟ್ ಇಲ್ಲದ ಮನೆಯೇ ಇಲ್ಲ. ಇಂಟರ್ ನೇಟ್ ಇಲ್ಲದ ಮೊಬೈಲ್ ಮೊಬೈಲ್ ಅಲ್ಲ! ಪೇಸ್ ಬುಕ್ ಇಲ್ಲದ ಮುಖವೇ ಮುಖವಲ್ಲ! ಅನ್ನುವ ಮಟ್ಟಿಗೆ ನಮ್ಮ ಮಂದಿ ಈ ಜಂಗಮವಾಣಿಯ ದಾಸಾನು ದಾಸರಾಗಿದ್ದಾರೆ.

ಇಲ್ಲಿಯೇ ಜಗಳ, ಇಲ್ಲಿಯೇ ಆನಂದ , ಇಲ್ಲಿಯೇ ಸಂತೋಷ, ಇಲ್ಲಿಯೇ ದುಃಖ! ಇದರೋಳಗೆ ಎಲ್ಲರೂ ಎಲ್ಲರೊಂದಾಗಿ ಬಿಟ್ಟಿದ್ದಾರೆ.

ಪ್ರತಿಯೊಂದಕ್ಕೂ ಒಂದು ಲೈಕ್ ಇದೆ, ಪ್ರತಿ ಮಾತಿಗೂ ಒಂದು ಕಾಮೆಂಟ್ ಇದೆ. ಪ್ರತಿ ಭಾವನೆಗೂ ಒಂದು ವಾಲ್ ಇದೆ.. ಇದೆ ಭರವಸೆ! ಇದೆ ಬದುಕು! ಇದೆ ನೆಟ್ ವರ್ಕ್ ಗುರು.. ಎನ್ನುವಂತಾಗಿದೆ.

ಟೋಟಲಿ ಇದು ಒಂದು ರೀತಿಯ ರೋಗ ಅನಿಸಿಬಿಡುತ್ತದೆ.

ಈ ಯಾವುದೂ ಗೊತ್ತಿರದ ವ್ಯಕ್ತಿ ಅನಕ್ಷರಸ್ಥನೆನಿಸಿಕೊಳ್ಳುತ್ತಾನೆ.

ಇಷ್ಟು ತಿಳುವಳಿಕೆ ಇಲ್ಲವಾ?

ಏ ಮಗಾ ನಿನಗೆ ರಿಕ್ವೇಸ್ಟ್ ಬರಲಿಲ್ಲವಾ?

ನೀ ಸೆಲ್ಫೀ ತೆಗೆದುಕೊಳ್ಳಲಿಲ್ಲವಾ?

ಯಾಕೋ ಇವನು ಗಾಂಧಿ.. ಎಂದು ಆಡಿಕೊಳ್ಳುತ್ತಾರೆ.

ಎಕ್ಸ್ ಪೋಸರ್ ಆಗಬೇಕು! ವಿಷಯ ತಿಳಕೊಳ್ಳಬೇಕು. ನೋಡು ಇಂದು ಯಾರು ಓದುತ್ತಾರೆ. ಪೇಸ್ ಬುಕ್ ನಲ್ಲಿ ಎಲ್ಲಾ ರೈಟರ್ಸ್, ನಟರು , ನಟಿಯರು, ಉದ್ಯಮಿಗಳು ಪ್ರತಿಯೊಬ್ಬರೂ ಸಿಗುತ್ತಾರೆ.. ನಾವು ಜಸ್ಟ್ ಪಾಲೋ ಮಾಡಬೇಕು ಅಷ್ಟೇ.. ಯಾವುದಾದರೂ ಒಂದು ಗ್ರೂಪ್ ಸೇರಿಕೊಳ್ಳಬೇಕು..

ಇದೆ ಬದುಕು..

ಇಲ್ಲಿಯೇ ಕತೆ, ಕವಿತೆ, ಚಿತ್ರ ಪ್ರತಿಯೊಂದು ಸಿಗುತ್ತದೆ. ಎಷ್ಟು ನೋಡುತ್ತಿಯೋ ಅಷ್ಟೊಂದು. ನಿನ್ನ ಹಳೆಯ ಹೊಸ ಸ್ನೇಹಗಳು ಸಿಗುತ್ತದೆ.

ಅವರುಗಳ ಸ್ಟೇಟ್ ಸ್, ಅ(ಇ)ವರು ಏನು ಮಾಡುತ್ತಾರೆ. ಅ(ಇ)ವರ ವಿಶೇಷ ದಿನಗಳೇನು? ಅದನ್ನು ಅದು ಹೇಗೆ ಸೆಲಬ್ರೇಟ್ ಮಾಡಿದರು ಎಂಬುದನ್ನು ಅವರು ಅಪ್ ಲೋಡ್ ಮಾಡುವ ಪೊಟೋಗಳ ಮೊಲಕ ತಿಳಿದುಕೊಳ್ಳಬಹುದು.

ನಮಗೆ ಗೊತ್ತಿರುವವರು/ಇಲ್ಲದವರು ದೂರ ಇದ್ದರೂ ಹತ್ತಿರವಿದ್ದಂತೆ, ಈ ಟೆಕ್ನಾಲಜಿ ಮೊಲಕ ಪೀಲ್ ಮಾಡಿಕೊಳ್ಳಬಹುದು.

ಹೀಗೆ ನಮ್ಮ ಯುವಕರನ್ನು, ವಯಸ್ಸಾದವರನ್ನು, ಹಣ್ಣು ಮುದುಕರನ್ನು ಪ್ರತಿಯೊಬ್ಬರನ್ನೂ ಒಂದಲ್ಲಾ ಒಂದು ರೀತಿಯಲ್ಲಿ ಈ ಮೊಬೈಲ್ ಸೋಷಿಯಲ್ ಮೀಡಿಯಗಳು ಆಕ್ರಮಿಸಿಕೊಂಡಿವೆ. ಪ್ರತಿಯೊಬ್ಬರನ್ನು ಕ್ರಿಯಶೀಲರನ್ನಾಗಿಟ್ಟಿವೆ.

ಯಾಕೆಂದರೇ ಅವರುಗಳ ಸ್ಟೇಟ್ ಸ್ ನಲ್ಲಿ ಏನದರೂ ಹೊಸದು ನಿತ್ಯ ಇರುತ್ತದೆ!!

ಇದರಿಂದ ಬದುಕು ಕಟ್ಟಿಕೊಂಡಿರುವವರು ಇದ್ದಾರೆ. ಇಲ್ಲಿಯೆ ಕ್ರಾಂತಿಯನ್ನು ಮಾಡಿರುವವರು ಇದ್ದಾರೆ. ಇದರಿಂದಲೇ ಹೊಸ ಹೊಸ ಪ್ರತಿಭೆಗಳು ಹೊಸ ರೀತಿಯಲ್ಲಿ ಕಣ್ಣು ಬಿಟ್ಟುಕೊಂಡಿವೆ. ಒಳ್ಳೆಯದು ಗಿಟ್ಟಿದೆ.. ಕೆಟ್ಟದ್ದು ಆಗಿದೆ.

ಯಾವುದಕ್ಕೋ ಒಂದು ಅಕೌಂಟ್ ಎಲ್ಲಾದರೂ ಮೊದಲು ಒಪನ್ ಮಾಡು.  ಪಾಸ್ ಪೋರ್ಟ್ ಮತ್ತು ರೇಷನ್ ಕಾರ್ಡು ಇಲ್ಲದಿದ್ದರೂ ಪರವಾಗಿಲ್ಲ!

ಹುಟ್ಟಿದ ಮಕ್ಕಳೇ ಅಷ್ಟು ಸುಲಭವಾಗಿ ಮೊಬೈಲ್ - ಟ್ಯಾಬ್ ಬ್ರೌಜ್ ಮಾಡುತ್ತಾರೆ ಎಂದರೇ..ಕೇಳುವುದೇನು?

ಮೊಬೈಲ್ ಕೈ ಗೆ ಬಂದರೇ ಅಳುವ ಕಂದಮ್ಮನ ಮುಖ ಅರಳುತ್ತದೆ.  ಮೊಬೈಲ್ ವಿಡಿಯೋ ನೋಡಿದರೇ ಮುದ್ದು ಮಗು ಸುಮ್ಮನೇ ಬಾಯಿ ತೆರೆದು ಊಟ ಮಾಡುತ್ತದೆ. ಇದರಲ್ಲಿನ ಮ್ಯುಜಿಕ್ ಎಳೆ ಮಗುವಿನ ಲಾಲಿ ಜೋಗುಳ...

ಇದರ ಅಪಾರ ಮಹಿಮೆಗೆ ಶರಣು ಶರಣು!

ಶನಿವಾರ, ಫೆಬ್ರವರಿ 13, 2016

ಒಳ್ಳೆದು ತೆಗೆದುಕೋ

ಒಳ್ಳೆಯ ಆಚಾರಗಳು, ವಿಚಾರಗಳು ಮತ್ತು ಗುಣಗಳನ್ನು ಎಲ್ಲೆ ಇರಲಿ ಗುರುತಿಸಿ ಹಿಂದೆ ಮುಂದೆ ನೋಡದೆ ತೆಗೆದುಕೊಳ್ಳಬೇಕು.

ಇಲ್ಲಿ ದೂರದ ಅಮೆರಿಕಾದ ಒಂದು ನಗರದ ಜನರ ನಡೆ ನುಡಿಗಳು ಮತ್ತು ವ್ಯವಸ್ಥೆ ಆ ದೇಶದ ಪ್ರತಿಬಿಂಬವಾಗಿರಬಹುದು ಎಂದುಕೊಳ್ಳಬಹುದು(?).

ಒಳ್ಳೆಯದನ್ನು ಕಂಡು ಮನಸ್ಸು ಖುಷಿಯಾಗುತ್ತದೆ. ನಮ್ಮ ದೇಶದಲ್ಲೂ ಹೀಗೆ ಇದ್ದರೇ ಎಷ್ಟು ಚೆನ್ನಾಗಿರುತ್ತದೆ ಎಂದು ಅನಿಸಿದ ಕ್ಷಣಗಳನ್ನು ಮಾತ್ರ ಇಲ್ಲಿ ನೋಟ್ ಮಾಡಿದ್ದೇನೆ.

ಹಾಗಂತ, ಎಲ್ಲರೂ ಈಗಾಗಲೆ ಮಾರು ಹೋದ ರೀತಿಯಲ್ಲಿ ನಾನು ಈ ದೇಶಕ್ಕೆ ಮನಸ್ಸು ಕೊಟ್ಟೆ ಎಂದು ಅನ್ಯಥಾ ಭಾವಿಸಬಾರದು.

ಮೊದಲನೆಯದಾಗಿ ಆ ನೆಲದ ಏರ್ ಪೊರ್ಟ್ ನಲ್ಲಿ ಇಳಿದ ತಕ್ಷಣ ಅನಿಸುವುದು ಅಬ್ಬಾ ಎಷ್ಟೊಂದು ಸುಂದರ ಮತ್ತು ಸುವಿಶಾಲವಾಗಿದೆ. ಎಷ್ಟು ಸೈಲೆನ್ಸ್ ಮತ್ತು ನೀಟ್. ವಾತವರಣ ಎಂದು ಪೀಲ್ ಆಗುತ್ತಾ ನಮ್ಮ ಹುಬ್ಬು ಏರುವಂತೆ ಮಾಡುತ್ತದೆ. ಯಾಕೆಂದರೇ ನಾವು ಈಗಾಗಲೇ ಇಲ್ಲಿಗೆ ಹೋಗಿ ಬಂದವರಿಂದ ಕೇಳಿ ತಿಳಿದುಕೊಂಡಿರುವುದರಿಂದೇನೋ?

ಎಲ್ಲಿಯೇ ಯಾರಾದರೂ ಎದುರಿಗೆ ಸಿಗುವಾಗ ಈ ಜನ ಮಾಡುವ ವಿಶ್! ಅದು ಯಾರೇ ಆಗಿರಲಿ ಒಂದು ನಗೆಯ ವಿಶ್, ಪ್ರತಿಯೊಬ್ಬರೂ ಮತ್ತೊಬ್ಬರಿಗೆ ಗೊತ್ತಿರುವವರೇನೋ ಎಂಬಂತೆ ಮಾಡುವ ಹಾಯ್!  ಕಂಡು ತುಂಬ ಖುಷಿಯಾಗುತ್ತದೆ.

ಇಲ್ಲಿಯ ವೈಕಲ್ ಗಳ ಚಲನೆ ಪೂರ್ತಿ ಉಲ್ಟಾ! ಇದು ಎಂಥವರನ್ನು ಕಸಿವಿಸಿ ಮಾಡುತ್ತದೆ. ಅದು ಯಾಕೆ ಈ ಜನ ರಸ್ತೆಯ ಬಲಬದಿಯಲ್ಲಿ ವಾಹನಗಳನ್ನು ಚಲಿಸುತ್ತಾರೆ? ಎಂದು ಕೇಳಿದ್ದಕ್ಕೆ ಯಾರೋ ಹೇಳಿದರು: ಬ್ರಿಟಿಷ್ ರ ರೂಲ್ಸ ಗೆ ವಿರುದ್ಧವಾಗಿ  ಇವರು ಈ ರೀತಿಯಾಗಿ  ವ್ಯವಸ್ಥೆ ಮಾಡಿಕೊಂಡಿದ್ದಾರೆ. ಬ್ರಿಟನ್ ನಲ್ಲಿ ಎಡ ಅದಕ್ಕಾಗಿ ಇಲ್ಲಿ ಬಲವಂತೆ! ಎಷ್ಟು ನಿಜ ಸುಳ್ಳೋ ನನಗೆ ಗೊತ್ತಿಲ್ಲಾ! link

ಕಾರು ಕಾರು ಎಲ್ಲಿ ನೋಡಿದರೂ ಕಾರು. ಇಲ್ಲಿ ಕಾರು ಇಲ್ಲದವನು ಡಿಸೇಬಲ್ ಪರ್ಸ್ ನ್ ಇದ್ದಂತೆ. ಕಾರು ಇಲ್ಲ ಎಂದರೇ ತನ್ನ ಒಂದು ಕಾಲು ಇಲ್ಲದಂತೆ. ಇಲ್ಲಿಯ ವಾತವಾರಣಕ್ಕೆ ಕಾರು ಬೇಕೇ ಬೇಕು. ಕಾರು ಕೊಳ್ಳುವುದು ಸುಲಭ ಬಿಡಿ ಇಲ್ಲಿ!

ಸಿಟಿ ಲಿಮಿಟ್ ನಲ್ಲಿ ಓಡಾಡುವ ಜನ ಬಿಟ್ಟರೆ, ಬೇರೆ ಮೈನ್ ರೋಡ್ ನಲ್ಲಿ ಒಂದು ನರ ಪಿಳ್ಳೆಯು ನಡೆದಾಡುವುದಿಲ್ಲ. ಬರೀ ಕಾರುಗಳು ರೊಯ್ ರೊಯ್ ಎಂದು ವೇಗವಾಗಿ ಚಲಿಸುವ ಶಬ್ಧ ಮಾತ್ರ ಕೇಳಬೇಕು.

ಕೇವಲ ಓಡಾಡುವರು ಆರೋಗ್ಯಕ್ಕಾಗಿ ವಾಕ್ ಮಾಡುತ್ತಿರುವರು ಎಂದು ನಿರ್ಧರಿಸಬಹುದು.

ಕಾರು ಚಾಲನೆ ಮಾಡುವುದು ತುಂಬ ಇಜೀ, ಯಾಕೆಂದರೇ ನಮ್ಮ ಬೆಂಗಳೂರು ನಗರದಂತೆ ವಾಹನಗಳ ದಟ್ಟಣೆ ಇಲ್ಲಿ ಇಲ್ಲ. ಇದ್ದರೂ ಪ್ರತಿಯೊಬ್ಬರೂ ಲೇನ್ ರೂಲ್ಸ್ ಪಾಲೋ ಮಾಡುತ್ತಾರೆ.  ಇಲ್ಲಿ ರೂಲ್ಸ್ ಕಟ್ಟು ನಿಟ್ಟು. ಸಿಗ್ನಲ್ ಜಂಪ್, ಯರ್ರಾ ಬಿರ್ರಿ ಓವರ್ ಟೇಕ್ ಇಲ್ಲ!

ವಿಶಾಲವಾದ ರೋಡ್ ಗಳು! ಎಮರ್ಜ್ ನ್ಸಿ ವಾಹನಗಳಿಗಾಗಿಯೇ ಪ್ರತ್ಯೆಕ ಲೇನ್ ವ್ಯವಸ್ಥೆ ಇದೆ. ಎಮರ್ಜನ್ಸಿ ವಾಹನಗಳು ಪಾಸ್ ಆಗುವಾಗ ಎರಡು ಬದಿಯ ವಾಹನಗಳು ರಸ್ತೆಯ ಬಲಬದಿಗೆ ಬಂದು ನಿಲ್ಲಿಸಬೇಕು. ವ್ಯಕ್ತಿ, ಜೀವಗಳಿಗೆ ಎಷ್ಟು ಬೆಲೆ ಕೊಡುತ್ತಾರೆ ಎಂಬುದು ಇದರಿಂದ ಗೊತ್ತಾಗುತ್ತದೆ.

ನಮ್ಮ ನಗರಗಳಲ್ಲಿ ಯಾವ ರೀತಿ ಬೆಲೆ ಎಂಬುದು ಅಡ್ಡಾ  ದಿಡ್ಡಿ ಓಡಿಸುವವರನ್ನು ನೋಡಿದರೆ ಗೊತ್ತಾಗುತ್ತದೆ. ಇಲ್ಲಿಯ ಜನ ಸ್ವಲ್ಪ ಕಾನೂನಿಗೆ ಎದುರುವರೇನೋ?

ಭಾರತದಿಂದ ಬಂದಿರುವ ನಮ್ಮ ಜನ ಎದುರುವುದಂತೂ ನಾನು ನೋಡಿದ್ದೇನೆ!

ರಸ್ತೆಯಲ್ಲಿ ದೂಳು ಇಲ್ಲ, ವಾಯು ಮಾಲಿನ್ಯ ಇಲ್ಲ, ಹೆಚ್ಚು ಹಾರ್ನ್ ಶಬ್ಧ ಇಲ್ಲ. ಹಾರ್ನ್ ಮಾಡಿದರೂ ಎಂದರೇ ನೀನು ಏನೋ ತಪ್ಪು ಮಾಡಿದ್ದೀಯ ಅಂಥ ಅರ್ಥ. ಹಾರ್ನ್ ಎಂದರೇ ವಾರ್ನ್ ಇದ್ದಾಗೆ ಇಲ್ಲಿ.

ಆದರೇ ನಮ್ಮಲ್ಲಿ ಹಾರ್ನ್ ಇಲ್ಲದಿದ್ದರೇ ಒಂದು ಹೆಜ್ಜೆ ಮುಂದೆ ಹೋಗಲು ಸಾಧ್ಯವಿಲ್ಲ.

ನಮ್ಮಲ್ಲಿಯ ಆ ಕಸ ಗಲೀಜು ಯಾವುದರ ವಾಸನೆಯು ಸಹ ಅನುಭವವಾಗುವುದಿಲ್ಲ. ಅಷ್ಟರ ಮಟ್ಟಿಗೆ ಜನಗಳು ಎಲ್ಲಿ ಕಸ ಹಾಕಬೇಕು ಅಲ್ಲಿ ಮಾತ್ರ ಹಾಕುತ್ತಾರೆ.

ನಾಯಿಗಳು ವಾಕ್ ಕರೆದುಕೊಂಡು ಹೋಗುವಾಗ ಕವರ್ ಹಿಡಿದುಕೊಂಡು ಹೋಗುವ ಇಲ್ಲಿಯ ಜನಗಳನ್ನು ನೋಡಿ ವಿಸ್ಮಿತನಾಗಿದ್ದೇನೆ.

ನಮ್ಮಲ್ಲಿ ಅದನ್ನು ಮಾಡಿಸಿವುದಕ್ಕಾಗಿಯೇ ನಾಯಿಗಳನ್ನು ರಸ್ತೆಗಳಿಗೆ ಕರೆದುಕೊಂಡು ಹೋಗುವವರಿದ್ದಾರೆ. ಇಷ್ಟರ ಮಟ್ಟಿಗೆ ನೈರ್ಮಲ್ಯದ ಬಗ್ಗೆ ಕಾಳಜಿ ಇದೆ ಈ (ನಮ್ಮ) ಜನಕ್ಕೆ.

ಹೈವೆ ರಸ್ತೆಗಳ ಬದಿಯನ್ನು ಸ್ವಚ್ಛಗೊಳಿಸಲು ಜೈಲು ಖೈದಿಗಳನ್ನು ಬಳಸಿಕೊಳ್ಳುವುದನ್ನು ಒಮ್ಮೊಮ್ಮೆ ನೋಡಬಹುದು.

ಇಲ್ಲಿಯ ಸರ್ಕಾರಿ ಆಪೀಸ್ ಗಳು ನಮ್ಮಲ್ಲಿಯ ಪ್ರವಿಟ್ ಆಪೀಸ್ ರೀತಿಯಲ್ಲಿವೆ. ಗೌರ್ಮೆಂಟ್ ವಾಸನೆಯೇ ಕಾಣಿಸುವುದಿಲ್ಲ. ಎಲ್ಲಾ ಕೆಲಸಗಳು ಎಷ್ಟು ಸುಲಭವಾಗಿ ಅಲಿಯೇ ಮುಗಿದು ಹೋಗಿಬಿಡುತ್ತದೆ.

ನಮ್ಮ ಸರ್ಕಾರಿ ಕಛೇರಿಗಳು ಮತ್ತು ಅಲ್ಲಿಯ ಕೆಲಸ ಆ ದೇವರಿಗೆ ಪ್ರೀತಿ!

ಓದುವ ಪ್ರೀತಿ! ಇಲ್ಲಿಯ ಜನ ಕೈಯಲ್ಲಿ ಏನಾದರೂ ತಿನ್ನುವ / ಕುಡಿಯುವ ವಸ್ತುವನ್ನು ಇಟ್ಟುಕೊಳ್ಳುತ್ತಾರೆ, ಇಲ್ಲವೇ ಪುಸ್ತಕವನ್ನು ಹಿಡಿದುಕೊಳ್ಳುತ್ತಾರೆ. ಇಲ್ಲಿಯ ಮಕ್ಕಳಿಗೆ ತಮ್ಮ ಬಾಲ್ಯದಿಂದಲೇ ಓದುವ ಗೀಳನ್ನು ಇಲ್ಲಿಯ ಶಾಲೆಗಳು ಕಲಿಸುತ್ತವೆ.

ಇಲ್ಲಿಯ ಲೈಬ್ರರಿ ಒಂದೊಂದು ವಿಲೇಜ್ ಗೂ ಒಂದೊಂದು. ಅಲ್ಲಿಯ ವ್ಯವಸ್ಥೆ ನಮ್ಮ ಯಾವ ಮೆಟ್ರೋ ನಗರದ ದೊಡ್ಡ ಲೈಬ್ರರಿಗೂ ಕಡಿಮೆ ಇಲ್ಲ ಅನಿಸಿತು.

ಇಲ್ಲಿಯ ಮಕ್ಕಳು ಸ್ಕೋಲ್ ಗೆ ಕುಣಿ ಕುಣಿಯುತ್ತಾ ಹೋಗುತ್ತಾರೆ. ಯಾವ ಬಾರಿ ಪುಸ್ತಕಗಳ ಭಾರವಿಲ್ಲ. ಪೀಜ್ ನ ಬಾರ ಹೆತ್ತವರಿಗೆ ಇಲ್ಲ. ಎಲ್ಲಾ ರಾಜ್ಯಗಳಲ್ಲೂ ಏಕ ರೂಪ ಸಿಲಬಸ್! ಪ್ರವಿಟ್ ಕಾನ್ವೇಂಟ್ ಗಳ ಹಾವಳಿ ಇಲ್ಲವೇ ಇಲ್ಲ!

ಸ್ಕೋಲ್ ಬಸ್ ಗಳು ರಸ್ತೆಯಲ್ಲಿ ಮಕ್ಕಳನ್ನು ತುಂಬಿಕೊಳ್ಳುವಾಗ/ ಇಳಿಸಿಕೊಳ್ಳುವಾಗ ಎರಡು ಬದಿಯಲ್ಲಿ ಬರುವ ವಾಹನಗಳ ನಿಲುವಿಕೆ - ಮಕ್ಕಳ ಬಗ್ಗೆ ಇಲ್ಲಿಯವರ ಕಾಳಜಿ ನನಗೆ ಸೊಜಿಗವನ್ನುಂಟು ಮಾಡಿತು.

ಯಾವುದೇ ಪಾರ್ಕಿಂಗ್ ಲಾಟ್ ನಲ್ಲೂ ಅಂಗವಿಕಲರಿಗಾಗಿಯೇ ಒಂದಷ್ಟು ಪಾರ್ಕಿಂಗ್ ಲಾಟ್ ಮೀಸಲಿಟ್ಟಿರುವುದು ಮನಸೂರೆ ಮಾಡಿತು.

ನೀರು ಬಳಕೆ ಮತ್ತು ಸೀವೆಜ್ ಗೂ ಪೀ ಕಟ್ಟಿಸಿಕೊಳ್ಳುತ್ತಾರೆ. ಇದು ನೀರಿನ ಮಹತ್ವವನ್ನು ಸಾರುತ್ತದೆ. ನೀರು, ಕರೆಂಟು, ಗ್ಯಾಸ್ ಅದು ಹೇಗೆ ಎಲ್ಲಿಂದ ಬರುತ್ತದೆ ಎಂಬುದನ್ನು ನನಗಂತೂ ನಾನೀರುವ ಮನೆಯಲ್ಲಿ ಗುರುತಿಸಲಾರದೆ ಹೋದೆ. ಅಷ್ಟೊಂದು ವ್ಯವಸ್ಥಿತವಾಗಿ ಸಾಗಿಸುತ್ತಾರೆ ಒಂದು ಕಡೆಯಿಂದ ಇನ್ನೊಂದು ಕಡೆಗೆ.

ಇನ್ಸೂರೇನ್ಸ್ ಬೇಕೆ ಬೇಕು. ಅದು ಇಲ್ಲ ಎಂದರೇ ನೀ ಬದುಕುವುದೇ ಕಷ್ಟ! ನೀ ಯಾವುದಾದರೂ ಚಿಕಿತ್ಸೆಗೆ ಆಸ್ಪತ್ರೆಗೆ ಹೋದರೇ ಕಾಯಿಲೆ ಕೇಳುವುದಕ್ಕಿಂತ ಮೊದಲು ಕೇಳುವುದು ಇನ್ಸೂರೇನ್ಸ್. ಇಲ್ಲಿಯ ಚಿಕಿತ್ಸೆ ತುಂಬ ದುಬಾರಿ. ಅದಕ್ಕಾಗಿ ವೈದ್ಯಕೀಯ ವಿಮೆ ಅವಶ್ಯ. ಅದರಲ್ಲಿಯೇ ಪ್ರತಿಯೊಂದನ್ನು ನೋಡಿಕೊಳ್ಳುತ್ತಾರೆ.

ಇಲ್ಲಿಯ ಆಸ್ಪತ್ರೆಗಳು,  ಆಸ್ಪತ್ರೆಗಳಂತೆ ಎಂದು ನನಗೆ ಕಾಣಲಿಲ್ಲ! ಯಾವ ಹೈಟೆಕ್ ಗೂ ಕಡಿಮೆಯಿಲ್ಲ. ನಮ್ಮಲ್ಲಿಯ ಸಾಮಾನ್ಯ ಆಸ್ಪತ್ರೆಯ ಪೇನಾಯಿಲ್ ವಾಸನೆ ನನಗಂತೂ ಬರಲಿಲ್ಲ!

ಪಕ್ಕಾ ಪ್ಲ್ಯಾನ್ ರೀತಿಯಲ್ಲಿ ಕಟ್ಟಿರುವ ಸಿಟಿ. ರೇಸಿಡೆನ್ಸಿ ಏರಿಯಾದಲ್ಲಿ ಬರೀ ವಾಸಿಸುವ ಮನೆಗಳು. ಅಲ್ಲಿ ಮನೆಗಳನ್ನು ಬಿಟ್ಟು ಮತ್ತೇನೂ ಗುರುತಿಸಲಾರಿರಿ. ಒಂದು ಕಡೆ ಶಾಪಿಂಗ್ ಮಾಲ್ ಗಳು. ಒಂದು ಕಡೆ ವೈಕಲ್ ಮಾರಾಟ ಮಳಿಗೆಗಳು. ಒಂದು ಕಡೆ ಹೊಟೆಲ್ ಗಳು ಹೀಗೆ ಪ್ರತಿಯೊಂದು ವ್ಯವಸ್ಥಿತ.

ನಮ್ಮಲ್ಲಿರುವಂತೆ ಯಾವುದು ಅಡ್ಡಾ ದಿಡ್ಡಿಯಾಗಿ ನಿತ್ಯ ಗುಂಡಿ
ಅಗಿಯುವ ಕಾಯಕ ಇಲ್ಲಿ ಕಾಣುವುದಿಲ್ಲ.

ಜನಗಳು ಕಡಿಮೆ, ಜಾಗ ಜಾಸ್ತಿ ಇಲ್ಲಿ.

 ಮಲೆನಾಡಿನ ಘಟ್ಟ ಪ್ರದೇಶಗಳಲ್ಲಿ ವಾಸಿಸುವ ಒಂದೇರಡು ಮನೆಗಳು ಮಾತ್ರ ಇರುವ ಹಳ್ಳಿಯ ರೂಪಾದಿಯಲ್ಲಿ ಒಂದಿಷ್ಟು ಮನೆಗಳು, ಮನೆಯ ಮುಂದೆ ವಿಶಾಲವಾದ ಲಾನ್, ಅಕ್ಕ ಪಕ್ಕ ಪೂರ್ತಿ ಬಟಾ ಬಯಲು. ಇದು ಇಲ್ಲಿಯ ಹಳ್ಳಿಯ ಚಿತ್ರಣ.

ವಿಶಾಲವಾದ ಜಮೀನು ಕಣ್ಣು ಕಾಣುವವರಿಗೆ.. ಕಾಣುವುದೆಲ್ಲ ಒಬ್ಬನದೇ ಅನಿಸುತ್ತದೆ. ನಮ್ಮ ರೀತಿ ಪೀಸ್ ಪೀಸ್ ಜಮೀನು ಕಣ್ಣೀಗೆ ಬೀಳುವುದಿಲ್ಲ.

ಇಲ್ಲಿಯ ಟ್ರಾಪಿಕ್ ಪೊಲೀಸ್ ಗಳು ಸುಖ ಸುಮ್ಮನೆ ಯಾರನ್ನು ತಡೆದು ನಿಲ್ಲಿಸುವುದಿಲ್ಲ.ಅವರು ನಿಮ್ಮನ್ನು ತಡೆದರು ಎಂದರೇ, ನೀ ಏನೋ ತಪ್ಪು ಮಾಡಿದ್ದೀಯಾ ಎಂದು ಅರ್ಥ.

ಇಲ್ಲಿಯ ಜನ ಪ್ರತಿಯೊಂದಕ್ಕೂ ಮಿಷಿನ್ ಮೇಲೆ ಹೆಚ್ಚು ಅವಲಂಬಿತ.

ಒಬ್ಬೇ ಒಬ್ಬ ಒಂದು ಲಾರಿಯನ್ನು ತೆಗೆದುಕೊಂಡು ಬಂದು ಪ್ರತಿಯೊಂದು ಕಸದ ಬ್ಯಾರಲ್ ಗಳನ್ನು (ಏರಿಯಾದ ಎಲ್ಲ ಕಸವನ್ನು ) ತಾನು ಕೆಳಗೆ ಇಳಿಯದೆ ಸುರಿದುಕೊಂಡು ಹೋಗುವುದು ಗ್ರೇಟ್!

ಕಸ ಗುಡಿಸುವುದು, ಬಟ್ಟೆ ತೊಳೆಯುವುದು, ಅಡಿಗೆ ಮಾಡುವುದು ಪ್ರತಿಯೊಂದು ಮಿಷಿನ್!

ಮನುಷ್ಯ ಪರಿಶ್ರಮಕ್ಕಿಂತ ಹೆಚ್ಚು ಯಂತ್ರಗಳು ದುಡಿಯುತ್ತವೆ.

ಯಾವುದೇ ಸ್ಥಳಗಳಿಗೆ ಹೋದರೂ ನಮ್ಮ ಭಾರತೀಯರು ಕಾಣಸಿಗುತ್ತಾರೆ. ನಮ್ಮ ಜನ  ಅಷ್ಟರ ಮಟ್ಟಿಗೆ ಇಲ್ಲಿ ಗಟ್ಟಿಯಾಗಿ ನೆಲೆ ಉರುತ್ತಿದ್ದಾರೆ. 

ಶುಕ್ರವಾರ, ಜನವರಿ 29, 2016

ಗುಂಡು ಮತ್ತು ಪಾರ್ಟಿ

ಪಾರ್ಟಿಗಳು ಚೆನ್ನ!

ಒಂದು ಹತ್ತಾರೂ ಸಮಾನ ಮನಸ್ಕ್ ಮಂದಿಗಳು ಇಳಿ ಸಂಜೆ ಯಾವುದಾದರೂಂದು ಬಾರ್ , ಪಬ್ ಅಥವಾ ರೆಸ್ಟೊರೆಂಟಲ್ಲಿ ಸೇರಿಕೊಳ್ಳುವುದು.

ಪಾರ್ಟಿಗಳು ಏರ್ಪಾಡು ಆಗುವುದು, ಪುನಃ ಸುತ್ತಲಿನ ಗೆಳೆಯರ ಒತ್ತಾಯದ ಮೆರೆಗೆ. ಪಾರ್ಟಿ ಮಾಡಲು ಒಂದು ಕಾರಣ ಬೇಕು. ಆ ಕಾರಣಗಳಿಗೆ ಹತ್ತಾರು ಮಂದಿ ಗೆಳೆಯರ ಸರ್ಕಲ್ ನಲ್ಲಿ ಕೊರತೆಯೇನೂ ಇಲ್ಲ.

ವಾರಕ್ಕೊಂದು ಸಕಾರಣ ಸಿಗುವುದು. ವಾರಕ್ಕೆ ಸಿಗದಿದ್ದರೇ ಕಡೆ ಪಕ್ಷ ತಿಂಗಳಿಗೊಂದು ಕಾರಣ ಸಿಕ್ಕೇ ಸಿಗುತ್ತದೆ.

ಯಾವುದಾದರೂ ಸರಿ, ಹುಟ್ಟಿದ ಹಬ್ಬ, ಹೊಸ ಕಾರು, ಹೊಸ ಮೋಟರ್ ಬೈಕ್, ಹೊಸ ಮನೆ, ಹೊಸ ಹುಡುಗಿ ಸಿಕ್ಕಿದ್ದಕ್ಕೆ, ಹೊಸ ಮದುವೆ, ಹೊಸ ಮುಂಜಿ, ಹೊಸ ಕೆಲಸ, ಹೊಸ ಊರು ಉಫ್ ಹೀಗೆ ನೂರಾರು ಹೊಸ ಹಳೆ ಕಾರಣಗಳು ಮತ್ತು ಸಂದರ್ಭಗಳು ಗೆಳೆಯರ ಗುಂಪಿನ ಮಧ್ಯೆ ಸಿಕ್ಕೆ ಸಿಗುತ್ತದೆ.

ವಿಕೇಂಡ್ ಪ್ರಾರಂಭದ ಶುಕ್ರವಾರದ ಇಳಿ ಸಂಜೆ ಗೆಳೆಯರ ಗುಂಪಲ್ಲಿ ರಂಗೇರುತ್ತದೆ.

ಆ ದಿನಕ್ಕಾಗಿ ತರಾವೇರಿ ಸಿದ್ಧತೆ ನಡೆದಿರುತ್ತದೆ. ವಾರಕ್ಕೆ ಮೊದಲೇ ಎಲ್ಲರಿಗೂ ಪತ್ರವೇ ಇಲ್ಲದ ಆಹ್ವಾನ ಪತ್ರಿಕೆ ರವಾನೆಯಾಗಿರುತ್ತದೆ. ಪಾರ್ಟಿ ಕೊಡಿಸುವ ಪಾರ್ಟಿಗಳದೇ ಜವಬ್ದಾರಿ. ಎಲ್ಲಿ ಬೇಕು ಎಂಬುದನ್ನು ಗುಂಪು ನಿರ್ಧರಿಸುತ್ತದೆ. ಯಾರ್ಯಾರನ್ನು ಕರೆಯಬೇಕು ಎಂಬುದನ್ನು ಹೊಸ್ಟ್ ನಿರ್ಧರಿಸಬೇಕು. ಪಾರ್ಟಿಗೆ ಬರುವುದು ಗುಂಪಿಗೆ ಬಿಟ್ಟ ವಿಷಯ!

ಪಾರ್ಟಿ ಅಂದರೇ ಅದರ ಗಮ್ಮತ್ತೇ ಬೇರೆ. ಜೊತೆಗಾರರೆಲ್ಲ ವಾರದ, ತಿಂಗಳ ಜಂಜಾಟವನ್ನು ಒಂದು ಮೂರು ಗಂಟೆ ಮರೆತು ಕೇವಲ ಮಜಾ ಮಾಡಿ ಬರುವುದು ಮಾತ್ರ !

ಯೋಚನೆಗೆ, ಸುಸ್ತಿಗೆ ಗೋಲಿ ಮಾರ್! ಹೌದು ಈ ರೀತಿಯ ಸ್ಪೀರಿಟ್ ಕೊಡುವ ಪಾರ್ಟಿಗಳು ಯುವಕ ಯುವತಿಯರಿಗೆ ಒಯಸಿಸ್ ಇದ್ದಂತೆ. ಬಾಳಿನ ಅದೇ ಜೀವನ ಚಕ್ರಕ್ಕೆ ತೈಲ ಬಿಟ್ಟಂತೆ. ಪುನಃ ಮುಂದಿನ ಎಂದೋ ಬರುವ ಪಾರ್ಟಿಯ ದಿನಗಳವರೆಗೂ ಜೀವ ಕೊಡುವ ಜಲವಿದ್ದಂತೆ.

ಇಂಥ ಪಾರ್ಟಿಗಳು ನಗರದ ಮಂದಿಯ ಮನ ಗೆದ್ದ ಸಡಗರದ ಕ್ಷಣಗಳು. ಎಂದು ಮರೆಯಲಾರದ ಕಾಪಿಟ್ಟ ಸಮಯ ಎಂದರೇ ತಪ್ಪಲ್ಲಾ!

ಒಮ್ಮೊಮ್ಮೆ ಒಂದೇ ಪಾರ್ಟಿಯನ್ನು ಒಬ್ಬರಿಗಿಂತ ಇಬ್ಬರೂ ಹೊಸ್ಟ ಮಾಡುವ ಸಂದರ್ಭವು ಉಂಟು. ಏನೂ ಮಾಡಲು ಸಾಧ್ಯವಿಲ್ಲ. ಒಟ್ಟಿಗೆ ಶೇರ್ ಮಾಡಿ ಪಾರ್ಟಿ ಕೊಟ್ಟರೆ ಆಯ್ತು ಅಷ್ಟೇ.

ಪ್ರೈಡೇ ಅಂದರೇ ಕೇಳುವುದೇ ಬೇಡ ಪ್ರಸಿದ್ಧವಾದ ಎಲ್ಲಾ ರೆಸ್ಟೊರೆಂಟ್ ಗಳು ಸಂಜೆಯಿಂದಲೇ ತುಂಬಿ ತುಳುಕುತ್ತಿರುತ್ತವೆ. ಒಬ್ಬೊಬ್ಬರಾಗಿ ಪಾರ್ಟಿಗೆ ಬರಲಾರಂಬಿಸುತ್ತಾರೆ. ಹೊಸ್ಟ್ ಗಳು ಮುಂಚೆ ಹೋಗಿ ಟೇಬಲ್ ಬುಕ್ ಮಾಡಬೇಕು. ಪ್ರತಿಯೊಬ್ಬರಿಗೂ ಪುನಃ ಕಾಲ್ , ಮೇಸೆಜ್ ಮಾಡಿ ಕನಪರ್ಮ್ ಮಾಡಿಕೊಳ್ಳಬೇಕು.

ಏ ಸ್ಟಾರ್ಟ್ ಮಾಡಿದ್ದೀಯಾ ಎನ್ನಬೇಕು. ಬರುವವರು ಕಾಲ್ ಮಾಡಿ ಮಿನಿಟ್ ಮಿನಿಟ್ ಅಪ್ ಡೇಟ್ ಕೊಡುತ್ತಾರೆ. ಆನ್ ದಿ ವೇ ಅನ್ನುತ್ತಾರೆ. ಬರಲಾರದವರೂ ಏನಾದರೂ ಕುಂಟು ನೆಪ ಹೇಳಿ ಕೈ ಕೊಡುತ್ತಾರೆ. ಕೊಟ್ಟ ಉತ್ತರಗಳನ್ನು ಪಾರ್ಟಿ ಮುಗಿಯುವರೆಗೂ ಮುಗಿದ ಮೇಲು ಮೆಲಕು ಹಾಕಿ ಕಾಲು ಗೆಳೆಯನ ಎಳೆಯುತ್ತಾರೆ. ಯಾಕಾದರೂ ಪಾರ್ಟಿ ತಪ್ಪಿಸಿಕೊಂಡೇ ಎಂದು ಬರಲಾರದವನೂ ಪರಿತಪಿಸುವಂತಾಗುತ್ತದೆ.

ಪಾರ್ಟಿ ಟೆಬಲ್ ಗೆ ಬಂದಾಗ ಅಲ್ಲಿ ಬೇದ ಭಾವ ಏನೂ ಇಲ್ಲ. ಮೇನು ಬಂದಂತೆ ಒಬ್ಬೊಬ್ಬರೆ ಬರಲಾರಂಬಿಸಿ ಪೂರಾ ಟೇಬಲ್ ತುಂಬಿಸುತ್ತಾರೆ. ವೇಯಟರ್ ಲೋಟ ತುಂಬಿಸುತ್ತಾನೆ. ಅವರ ಅವರಲ್ಲಿಯೇ ಉಭಯ ಕುಶುಲೊಪರಿಯಾಗುತ್ತದೆ. ಏನೇನೂ ಆರ್ಡರ್ ಮಾಡಬೇಕು ಎಂದು ಒಬ್ಬೊಬ್ಬರಿಂದ ಪ್ರಾರಂಭವಾಗುತ್ತದೆ.

ಸೋ ಪಾರ್ಟಿಯ ಪ್ರಥಮ ಘಟ್ಟಕ್ಕೆ ಬಂದು ನಿಂತಿರುತ್ತಾರೆ. ಗೆಳೆಯರ ಬಂಧ ಆ ರೀತಿ. ಪ್ರತಿಯೊಬ್ಬರಿಗೂ ಎಲ್ಲಾ ಸರ್ವ್ ಆಗುವವರೆಗೂ ಎಲ್ಲಾರೂ ಕಾಯುತ್ತಾರೆ. ಪ್ರತಿಯೊಬ್ಬರೂ ಮತ್ತೊಬ್ಬರನ್ನು ತುಂಬ ಕೇರ್ ಮಾಡುವ ಜಾಗ ಅಂದರೇ ಇಂಥ ಪಾರ್ಟಿಗಳು. ಪ್ರತಿಯೊಬ್ಬರೂ ತುಂಬ ದಾರಾಳ ಮನೋಭಾವ ಪ್ರದರ್ಶಿಸುವುದು ಇಲ್ಲಿಯೇ!

ನೋಡಿ ಹಾಗೆಯೇ ಕಣ್ಣು ಮನ ತುಂಬಿಬಿಡುತ್ತದೆ.

ಇದು ಪಕ್ಕ ಐ ಟೆಕ್ ಪಾರ್ಟಿ ಎಂದು ಮಾತ್ರ ಭಾವಿಸಬೇಡಿ! ಅವರವರ ಸ್ಥಿತಿಗೆ ಅನುಗುಣವಾಗಿ ಇದೆ ರೀತಿಯ ಸಾಮಾನ್ಯ ಅಸಮಾನ್ಯ ಪಾರ್ಟಿಗಳು ಏರ್ಪಾಡು ಆಗುತ್ತವೆ.

ಗಂಡು ಹೆಣ್ಣು ಸೋಷಿಯಲ್ ಆಗಿ ಬಾಗವಯಿಸುವ ಔತಣಕೊಟಗಳುಂಟು, ಕೇವಲ ಗಂಡು ಸ್ನೇಹಿತರ ಮಾತ್ರ ಗುಂಪಾಗಿ ಏರ್ಪಡಿಸುವ ಪಾರ್ಟಿಗಳುಂಟು. ಅದು ಅವರ ಪ್ರೇಂಡ್ಸ್ ಸರ್ಕಲ್ ಮೇಲೆ ನಿರ್ಧರಿಸುತ್ತದೆ.

ಹಾಗೆಯೇ ಚಿಯರ್ಸ್ ಮೊಲಕ ಪ್ರಾರಂಭವಾಗುವ ಕುಡಿತ, ಮಾತು -ಕತೆ, ಸ್ವಲ್ಪ ಖಾರ, ಸ್ವಲ್ಪ ಸಿಹಿಯಾಗಿ ಹಿರುತ್ತಾ ಹಿರುತ್ತಾ ತರಾವೇರಿ ವಿಷಯಗಳನ್ನು ಎಕ್ಸ್ ಚೆಂಜ ಮಾಡಿಕೊಳ್ಳುತ್ತಾ ಮನಸ್ಸನ್ನು ಹಗುರ ಮಾಡಿಕೊಳ್ಳುತ್ತಾರೆ. ಇಲ್ಲಿ ಯಾವುದೇ ವಿಷಯಗಳಿಗೆ ಗಡಿ ಇಲ್ಲ. ಕಷ್ಟ ಸುಖ ಪ್ರತಿಯೊಂದನ್ನು ಪ್ರತಿಯೊಬ್ಬರೊಂದಿಗೆ ಹಂಚಿಕೊಳ್ಳುತ್ತಾರೆ.

ಒಂದು ರೌಂಡ್ ಸ್ಟಾಟ್ರಸ್ ಗಳೊಂದಿಗೆ ಮುಗಿದು, ಮತ್ತೊಂದು ರೌಂಡ್ ಇನ್ನೊಂದು ಸ್ಟಾಟ್ರ್ ಸ್ ಗಳೊಂದಿಗೆ ಅಣಿಯಾಗುತ್ತದೆ.

ಕುಡಿಯದೇ ಇರುವವರನ್ನು ಸ್ವಲ್ಪ  ಟೀಜ್ ಮಾಡುತ್ತಾರೆ. ನೀನು ಬದುಕಿರುವುದೇ ವೇಸ್ಟ್ ಅನ್ನುವ ಮಟ್ಟಿಗೆ ಟಂಪ್ಟ್ ಮಾಡುತ್ತಾರೆ. ಕುಡಿ ಮಗಾ ಜಸ್ಟ್ ಟೇಸ್ಟ್ ಮಾಡು ಅನ್ನುತ್ತಾರೆ.

ಲಾಸ್ಟ್ ಟೈಮ್ ಆ ಡ್ರಿಂಕ್ಸ್ ರೀತಿ ಇದು ಇಲ್ಲಾ. ಈ ರೀತಿಯ ಡ್ರಿಂಕ್ಸ್ ಹೀಗೆ ಹೀಗೆಲ್ಲಾ ಮಾಡುತ್ತಾರೆ. ಇದು ಮಸ್ತ್. ಜೀವನದಲ್ಲಿ ಒಮ್ಮೆ ಕುಡಿಯಬೇಕು. ಇಲ್ಲಾ ನನಗೆ ಅದೆಲ್ಲಾ ಹಿಡಿಸುವುದಿಲ್ಲ. ಈ ಡ್ರಿಂಕ್ಸ್ ಈ ರೀತಿಯೇ ಕುಡಿಯಬೇಕು. ಇದು ಅಪರೂಪ. ಇದು ಇವತ್ತು ಸಿಕ್ತು,... ಎಂದು ತಾವು ಕುಡಿಯುತಿರುವ ಅಮೃತದ ಬಗ್ಗೆ ಬಂಗಾರದಂತ ಮಾತುಗಳನ್ನು ಆಡುತ್ತಾರೆ.

ಆ ಬ್ರಹ್ಮನೇ ಇವರ ಮಾತುಗಳನ್ನು ಕೇಳಿ ತಲೆದೂಗಬೇಕು.

ಏನೂ ಮಾಡುವ ಆಗಿಲ್ಲ! ಈ ಮಾತುಗಳೆಲ್ಲಾ ತುಂಬ ತೂಕದ ಮಾತುಗಳು.

ಹೀಗೆಯೇ ಕೊಂಚ ಪಾರ್ಟಿ ಟೈಟ್ ಆಗುತ್ತದೆ. ಕೆಲವರು ಕೊಂಚ ಹೀಗೆ ಜಾಗ ಸಡಿಲ ಮಾಡಿಕೊಂಡು ಹಾಗೆಯೇ ಸುತ್ತಾ ಒಂದು ನೋಟ ಬೀರಿ ಟ್ಯಾಂಕ್ ಖಾಲಿ ಮಾಡಿಕೊಂಡು ಬರುತ್ತಾರೆ.

ಮೈನ್ ಕೋರ್ಸ್ ಗೆ ಅರ್ಡರ್ ಹೋಗುತ್ತದೆ. ಜೋತೆಯಲ್ಲಿಯೇ ಹೊಸ ರೀತಿಯ ಡ್ರಿಂಕ್ಸ್ ನ್ನು ತರಿಸಲು ಸಿದ್ಧರಾಗುತ್ತರೆ.

ಕ್ಯಾಪಸಿಟಿ ಇರುವವರು ಆಯ್ತು ಅನ್ನುತ್ತಾರೆ. ಇಲ್ಲದವರು ನಾನು ಏನಾದರೂ ತಿಂದರೇ ಮುಗಿಯಿತು ನನ್ನ ಕೋಟಾ ಅನ್ನುತ್ತಾರೆ. ಹಾಗೆ ಅಂದವನ ಜನ್ಮ ಜಾಲಾಡುವ ಮಾತುಗಳು ಶುರು ಗೆಳೆಯರ ಬಳಗದಲ್ಲಿ. ಏನೋ ಇದು ಎರಡೇ ರೌಂಡ್ ಗೆ ಔಟ್! ಇಷ್ಟೇ ನಿನ್ನ ಪವರ್ ಅನ್ನುತ್ತಾರೆ. ಇವನಿಗೂ ಏನೂ ಹೇಳಲಾರದ ತಳ ಮಳ! ನೀನು ಏನೂ ನಿನ್ನ ಮನೆಯವರಿಗೆ ಹೆದರಬೇಡ ಗೊತ್ತಾಗದ ರೀತಿಯಲ್ಲಿ ನಿನ್ನ ಮನೆಗೆ ತಲುಪಿಸುತ್ತಿವೆ, ಹೇಗೂ ನಾಳೆ ನಾಡಿದ್ದು ರಜೆ.. ಇತ್ಯಾದಿ ಇತ್ಯಾದಿ ಮೋಟಿವೇಟೆಡ್ ಮಾತುಗಳಿಂದ ಇನ್ಸ್ ಪೈರ್ ಮಾಡುತ್ತಾರ. ಕೊನೆಗೆ ಆಯ್ತು ಅನ್ನುತ್ತಾನೆ ಸುಸ್ತಾದ ಈ ಗೆಳೆಯ.

ಹೀಗೆ ಮಾತು ಮಾತು ನಡೆಯುತ್ತಾ ಮೂರನೆ ರೌಂಡ್ ಮತ್ತು ಮೈನ್ ಕೋರ್ಸ್ ಮುಗಿಯುವ ಹೊತ್ತಿಗೆ ಎಲ್ಲಾರ ಕಣ್ಣು ಎಣ್ಣೆ ಹೊಡೆದವರಂತಾಗಿರುತ್ತದೆ. ಕುಡಿಯದೇ ಇರುವ ಒಂದೇರಡು ಮಿತ್ರರು ಇವರ ಮುಖಗಳನ್ನು ನೋಡಿ ಒಳ ಒಳಗೆ ನಗಲಾರಂಬಿಸುತ್ತಾರೆ.

ಕುಡಿದ ಮಿತ್ರರೂ ನನ್ನ ಪಾಲಿಗೆ ದೇವರ ಸಮಾನ! ಯಾಕೆಂದರೇ ಅವರು ಪರಸ್ಪರ ಒಬ್ಬೊಬ್ಬರ ಬಗ್ಗೆ ಎಷ್ಟೊಂದು ಕಾಳಜಿ ವಯಿಸುತ್ತಾರೆ ಎಂದರೇ ಅವರ ಹೃದಯವೇ ಬಾಯಲ್ಲಿ ಇರುತ್ತದೆ ಅನಿಸುತ್ತದೆ. ಕುಡಿ ಮಗಾ, ನೀನು ಏನು ತಿನ್ನಲೇ ಇಲ್ಲ. ಏಯ್ ಇವನು ಯಾಕೊ ಏನು ಮಾತಡ್ತಿಲ್ಲಾ! ಏಯ್ ಇವನು ಪಾಪ ಇದನ್ನು ಟೆಸ್ಟ್ ಮಾಡಲಿಲ್ಲ. ಇನ್ನು ಸ್ವಲ್ಪ ತಿನ್ನು.. ಇತ್ಯಾದಿ ಇತ್ಯಾದಿ ಮನ ತಟ್ಟುವಂತೆ ಮಾತಾಡುತ್ತಾರೆ.

ಗಂಟೆ ಎಂಬುದು ಯಾರನ್ನೂ ಕಾಯುವುದಿಲ್ಲ. ಗಡಿಯಾರದ ಮುಳ್ಳು ಅದರ ಪಾಡಿಗೆ ಅದು ಓಡುತ್ತಿರುತ್ತದೆ. ಸೋ ಇವರಿಗೆ ಅದು ಮನೆ, ಮನೆಯಲ್ಲಿ ತಮಗಾಗಿ ಕಾಯುತ್ತಿರುವವರನ್ನು ನೆನಪಿಸಿಕೊಡುವುದರಿಂದ ಕಷ್ಟಪಟ್ಟು ಮನೆಯ ಕಡೆ ತೆರಳಬೇಕಾಗಿ ತಮ್ಮ ಪಾರ್ಟಿಗೆ ದಿ ಎಂಡ್ ಕೊಡಲು ಶುರು ಮಾಡುತ್ತಾರೆ...

ಈ ರೀತಿಯ ಜಗವನ್ನೇ ಮರೆತು ತಮ್ಮ ಮನದ ಎಲ್ಲಾ ನೋವು ನಲಿವುಗಳನ್ನು ಜಯಿಸಿ. ಆ ಜಾಗದಲ್ಲಿ ಇರುವಷ್ಟು ಕ್ಷಣಗಳನ್ನು ಸ್ವರ್ಗದಲ್ಲಿ ಇರುವಂತೆ ಬಾವಿಸಿ. ಒಂದೊಂದು ಹನಿಯನ್ನು ಸೆವಿಸಿದಾಗ ಅಮೃತವನ್ನೇ ಕುಡಿದಷ್ಟು ಖುಷಿಪಟ್ಟು. ಮಮ್ಮಲು ಮರುಗುತ್ತಾ. ಏನೋ ಕನಸು ಕಾಣುತ್ತಾ ಹೇಗೋ ಮನಗೆ ತಲುಪಿ. ಮಾರನೆಯ ಮದ್ಯಾನದವರೆಗೂ ಹಾಸಿಗೆಯಲ್ಲಿಯೇ ಸುಖಪಡುವ ಮಂದಿಗಳು ನಾವು, ಸಾಮಾನ್ಯ ಜನಗಳು ಎಂದು ಆನಂದಪಡುತ್ತಾರೆ.

ಮತ್ತೇ ಸೋಮವಾರ ಮುಂದಿನ ಪಾರ್ಟಿ ಬಗ್ಗೆ ಪ್ಲ್ಯಾನ್ ಮಾಡಬೇಕು ಗುರೂ..ಬರ್ಲಾ?

ಭಾನುವಾರ, ಜನವರಿ 17, 2016

ಮಗುವೇ ಅಬ್ಬಾ ಸಾಕು

ಮಗು ತನ್ನ ಪ್ರಾಮುಖ್ಯತೆಯನ್ನು ಮನೆಯಲ್ಲಿ ತನ್ನಷ್ಟಕ್ಕೆ ತಾನೆ ಪ್ರತಿಷ್ಠಾಪಿಸಿಕೊಂಡಿರುತ್ತದೆ. ಅದು ಏನೇ ಮಾಡಿದರೂ ಸುತ್ತಲು ಇರುವವರು ಅದನ್ನು ಗಮನಿಸಿ ಒಂದು ಚೂರು ಪ್ರಕ್ರಿಯಿಸಲಿ ಎಂದು ಬಯಸುತ್ತದೆ. ಅದು ತನ್ನ ಐಡಂಟಿಟೆಯನ್ನು ಪ್ರತಿ ನಡೆಯಲ್ಲೂ ಮನನ ಮಾಡಿಕೊಳ್ಳುತ್ತದೆ

ಯಾರಾದರೂ ಅದರ ಕಡೆ ಗಮನ ಕೊಡಲಿಲ್ಲ ಎಂದರೇ ಅದೇ ರೂಯ್ ಅಳು ಶುರು ಮಾಡಿಕೊಳ್ಳುತ್ತದೆ. ಅತ್ತರೆ ತಾನೆ ಹಾಲು ಕುಡಿಸುವುದು! ಈ ಒಂದು ಜಾಣ್ಮೆಯನ್ನು ಮಗು ತಾನು ಹುಟ್ಟಿದ ದಿನದಿಂದ ಗೊತ್ತು ಮಾಡಿಕೊಂಡಿರುತ್ತದೆ.

ಅಳುವುದರ ಮೊಲಕ ಏನೇನೂ ಬೇಕೋ ಎಲ್ಲಾ ತನ್ನದಾಗಿಸಿಕೊಳ್ಳುತ್ತದೆ. ಅಳುವುದೇ ಅದರ ಮೊದಲ ಭಾಷೆ. ಮಗುವಿನ ಅಳುವಿಗೆ ಹೆದರದೇ ಇರುವುವರು ಯಾರು ಇಲ್ಲಾ!

ಅದು ಯಾವಾಗಲೂ ನಗು ನಗುತ್ತಾ ತನ್ನ ಪಾಡಿಗೆ ತಾನು ಆಡಿಕೊಂಡಿದ್ದರೇ ಸಾಕು ಎನ್ನುವುದೇ ಎಲ್ಲಾ ಹೆತ್ತವರ ಆಸೆ ಪಾಸೆ!

ಅದು ಪ್ರತಿಯೊಂದನ್ನು ತನ್ನ ಸುತ್ತಲಿನವರನ್ನು ನೋಡಿ ಕಲಿಯುತ್ತದೆ. ಪ್ರತಿ ನೋಟವೂ ಹೊಸದು ಮತ್ತು ಸವಾಲಿನದ್ದೂ. ಅದು ಪ್ರತಿಯೊಂದನ್ನೂ ತಾನು ಮಾಡಬೇಕು. ಮಾಡಿದ ಅನಂತರ ಅದು ಸರಿ ಇದೇಯೋ ಇಲ್ಲವೋ ಎಂಬುದನ್ನು ಮನೆಯಲ್ಲಿರುವವರ ಪ್ರತಿಕ್ರಿಯೆಯ ಮೊಲಕ ಪಕ್ಕ ಮಾಡಿಕೊಳ್ಳಬೇಕು.

ತನ್ನವರು ಮೆಚ್ಚಿದರೇ ಓ ಸರಿಯಾಗಿ ಮಾಡಿದೆ ಎಂದುಕೊಳ್ಳುತ್ತದೆ. ಅದು ತಾನು ಮಾಡಿದ್ದನ್ನೇ ಪುನಃ ಪುನಃ ಮಾಡುತ್ತದೆ ಮತ್ತು ತನ್ನ ನೋಡುಗಗರ ಮುಖದ ಮೇಲಿನ ಗೆರೆಯಲ್ಲಿಯೇ ಪಕ್ಕಾ ಮಾಡಿಕೊಳ್ಳುತ್ತದೆ.

ಇಂದಿನ ಮಕ್ಕಳು ತುಂಬ ಪಾಸ್ಟ. ಮನೆಯಲ್ಲಿ ಯಾರು ಏನನ್ನೂ ಮಾಡುತ್ತಾರೋ, ಯಾರು ಏನನ್ನು ನೋಡುತ್ತಾರೋ, ಯಾರು ಏನನ್ನು ಉಪಯೋಗಿಸುತ್ತಾರೋ ಅದೇ ಅದಕ್ಕೂ ಬೇಕು. ಅದು ಬಿಲ್ ಕೂಲ್ ನಾನು ಚಿಕ್ಕವನು/ಳು ಅದು ನನ್ನದಲ್ಲಾ ಎಂದು ಹಿಂಜರಿಯುವುದಿಲ್ಲ. ಅದು ತನ್ನನ್ನು ತಾನು ಎಲ್ಲಾ ತಿಳಿದಿರುವನು ಎಂದುಕೊಳ್ಳುತ್ತದೆ. ತಾನು ಯಾಕೆ ಅವರು ಮಾಡುವ ರೀತಿ ಮಾಡಬಾರದು ಎಂದುಕೊಳ್ಳುತ್ತದೆ. ತಾನು ಒಂದು ಕೈ ಯಾಕೇ ಪ್ರತ್ನಿಸಬಾರದು? ಎಂದು ಪ್ರತಿಯೊಂದನ್ನು ಅಳುವುದರ ಮೊಲಕ ಜೋರು ಮಾಡಿ ಮಾಡಿ ದಕ್ಕಿಸಿಕೊಳ್ಳುತ್ತದೆ.

ಅಮ್ಮ ಮಾಡುವ ಅಡಿಗೆಯ ಸಾಮಾನುಗಳು, ಅಪ್ಪ ಕೆಲಸ ಮಾಡುವ ಲ್ಯಾಪ್ ಟಾಪ್, ಅಣ್ಣ ಉಪಯೋಗಿಸುವ ಸೆಲ್ ಪೋನ್, ಅಜ್ಜ ಉಪಯೋಗಿಸುವ ನಸ್ಯಾ ಡಬ್ಬಿ, ಅಂಟಿ ಉಪಯೋಗಿಸುವ ಅಲಂಕಾರದ ವಸ್ತುಗಳು. ಹೀಗೆ ಕಣ್ಣಿಗೆ ಬೀಳುವ ಏನನ್ನು ನನಗೇ ಬೇಡ ಎಂದು ಯಾವೊತ್ತೂ ಹೇಳುವುದಿಲ್ಲ.

ಎಲ್ಲದ್ದೂ ಬೇಕು ಬೇಕು ಎಂಬ ದಾಹ ಮಗುವಿನದೂ.

ನಾವಾಡುವ ಪ್ರತಿಯೊಂದು ಶಬ್ಧವನ್ನು ಜಾಗರೂಕತೆಯಿಂದ ಆಲಿಸುತ್ತದೆ. ಅದನ್ನೇ ಕೆಲವೇ ಕ್ಷಣಗಳಲ್ಲಿ ಮಾತನಾಡಲು ಪ್ರಯತ್ನಿಸುತ್ತದೆ. ಅದಕ್ಕೆ ಹೇಳುವುದು ನಮ್ಮ ಮಕ್ಕಳು ಏಕ್ ದಮ್ ನಮ್ಮ ಜೇರಾಕ್ಸ್ ಗಳು. ಪ್ರತಿಯೊಂದನ್ನು ಕಾಫಿ ಮಾಡಲು ಪ್ರಯತ್ನಿಸುತ್ತವೆ.  ಅನುಕರಣೆಯಲ್ಲಿ ಮಕ್ಕಳನ್ನು ಯಾರೂ ಬೀಟ್ ಮಾಡಲು ಸಾಧ್ಯವಿಲ್ಲ!

ಮಕ್ಕಳ ಈ ಹಟ ನೋಡಿದರೇ ಹಿರಿಯರಾದ ನಮಗೆ ಒಮ್ಮೊಮ್ಮೆ ದಿಗಿಲಾಗುತ್ತದೆ. ಇನ್ನೂ ಜಾಸ್ತಿಯಾದರೇ ಸಿಟ್ಟು ಬರುತ್ತದೆ. ಅವುಗಳಿಗೆ ತಿಳುವಳಿಕೆ ಹೇಳಲು ಆಗುವುದಿಲ್ಲ. ಹೇಳಿದರೇ ಅವುಗಳು ಕೇಳುವುದಿಲ್ಲ. ಏನೂ ಮಾಡೋಣ ಎಂದು ದಿಕ್ಕೇ ತೋಚದೆ ಮನದಲ್ಲಿ ಸಿಟ್ಟು, ನಗು, ಸಂತೋಷ, ದುಃಖ ಎಲ್ಲಾ ಎಮೋಷನ್ ಗಳು ಒಟ್ಟಿಗೆ ಬಂದು ನಮ್ಮನ್ನೇ ತತ್ತರಿಸುವಂತೆ ಮಾಡುತ್ತವೆ.

ಮೂರ್ತಿ ಚಿಕ್ಕದಾದರೂ ಅವುಗಳು ಮಾಡುವ ತರಲೆಗಳು ಆ ದೇವರಿಗೆ (ನಮಗೂ) ಪ್ರೀತಿ. ಒಮ್ಮೊಮ್ಮೆ ಹೆಮ್ಮೆಯಾಗುತ್ತದೆ. ಅವುಗಳ ಮುದ್ದು ನೋಡಿ ಕಣ್ಣಾಲಿಗಳು ತುಂಬಿ ಬರುತ್ತದೆ. ಅವುಗಳ ತೂದಲು ಮಾತುಗಳನ್ನು ನೋಡಿ ಎಷ್ಟೊಂದು ಆನಂದವಾಗುತ್ತದೆ. ಒಮ್ಮೊಮ್ಮೆ ಅವುಗಳ ಅಚ್ಚ ಹಸಿರು ಕಣ್ಣಾಲಿಗಳನ್ನು ನೋಡಿ ಹಾಗೆಯೇ ಕಚ್ಚಿ ತಿನ್ನೋಣ ಅನಿಸುತ್ತದೆ.

ಅದರೂ ಅವುಗಳು ಒಮ್ಮೊಮ್ಮೆ ರಚ್ಚೆ ಹಿಡಿದಾಗ ಅಬ್ಬಾ ಅಬ್ಬಾ ಸಾಕಪ್ಪಾ ಈ ಮಕ್ಕಳ ಸಹವಾಸ ಅನಿಸುತ್ತದೆ. ಒಂದೇ ಇಷ್ಟೊಂದು ಗೋಳು ಹೋಯ್ದುಕೊಳ್ಳುತ್ತೇ. ಹಿಂದೆ ೧೦-೧೪ ಮಕ್ಕಳನ್ನು ಆ ಅಮ್ಮಂದಿರು ಅದು ಹೇಗೆ ಸಂಬಾಳಿಸಿದ್ದರಪ್ಪಾ ?

ಅವರಿಗೆ ಒಂದು ದೋಡ್ಡ ನಮಸ್ಕಾರಗಳು ಅನಿಸುತ್ತದೆ.

ನಾವುಗಳೇ ಒಂದು ಮಗುವಿಗೆ ಸುಸ್ತಾಗಿರುವುದು. ಇಲ್ಲಿಯ ಅಮೆರಿಕಾದಲ್ಲಿ ಅಬ್ಬಾ ಒಂದು ಮಗುವಿನ ಸಂಸಾರ ಇಲ್ಲವೇ ಇಲ್ಲಾ. ಏನಿದ್ದರೂ ಅವಳಿ ಜವಳಿ ಅಥವಾ ಮಿನಿಮಮ್ ಎರಡು ಮಕ್ಕಳಿರುತ್ತವೆ. ಆದರೂ ಅವುಗಳ ಸಂಬಾಳನೇ ಗಂಡ ಹೆಂಡತಿ ಇಬ್ಬರೆ ಈಜೀಯಾಗಿ ಮಾಡುತ್ತಾರೆ. ಶಾಪೀಂಗ್, ಆಸ್ಪತ್ರೆ ಇತ್ಯಾದಿಯನ್ನು ಹೆಂಡತಿಯೊಬ್ಬಳೆ ಆರಾಮಾಗಿ ನಿಭಾಯಿಸಿಕೊಂಡು ಹೋಗುವುದನ್ನು ಕಂಡು ನಾನಂತೂ ಪೂರ್ತಿ ಅಚ್ಚರಿಯಲ್ಲಿ ಮುಳುಗಿದ್ದೇನೆ.

ನಮ್ಮಲ್ಲಿ ಒಂದು ಚಿಕ್ಕ ಮಗುವಿದ್ದರೇ ಅದನ್ನು ಎಲ್ಲಾದರೂ ಹೊರಗೆ ಕರೆದುಕೊಂಡು ಹೋಗಬೇಕು ಎಂದರೇ ಎಷ್ಟೊಂದು ತಯಾರಿ ಮಾಡಿಕೊಂಡು ನಾನು, ನನ್ನ ಯಜಮಾನರು, ನನ್ನ ತಾಯಿ ಹೀಗೆ ಪೂರ್ತಿ ಜಾತ್ರೆಯೇ ಹೋರಡುತ್ತದೆ.

ಆದರೇ ಇಲ್ಲಿಯ ಜನ ಇಷ್ಟೊಂದು ಸಿಂಪಲ್ ಆಗಿ ಮಕ್ಕಳನ್ನು ಹ್ಯಾಂಡಲ್ ಮಾಡಲು ಅದು ಹೇಗೆ ಸಾಧ್ಯ?

ಹೀಗೆ ಹೇಳಿದ್ದಕ್ಕೆ ನಮ್ಮ ಹಳ್ಳಿಯಲ್ಲೂ ಹೀಗೆ ಮಕ್ಕಳು ಎಂದು ಯಾರು ಭಯಪಡುವುದಿಲ್ಲಮ್ಮಾ, ಸ್ವಲ್ಪ ಬಾಯಿ ಮುಚ್ಚಿಕೋ... ಎಂದು ಬೈಯ್ ಬೇಡಿ!

ನನಗೆ ಅನಿಸುವುದೇನೆಂದರೇ ವಿನಕಾರಣ ಈ ಎಲ್ಲಾ ಸಂಗತಿಗಳಿಗೆ ನಗರದ ನನ್ನಂಥ ಜನಗಳು ಅತಿ ಹೆಚ್ಚು ಪ್ರಾಮುಖ್ಯತೆಯನ್ನು ಕೊಡುತ್ತೇವೆ. ಯಾವುದಕ್ಕೆ ಹೇಗೆ ಪ್ರತಿಕ್ರಿಯಿಸಬೇಕು, ನಡೆದುಕೊಳ್ಳಬೇಕು ಎಂಬುದನ್ನೇ ಮರೆತಿದ್ದೇವೆ. ಪ್ರತಿಯೊಂದನ್ನೂ ಹೆಚ್ಚು ಮುತುವರ್ಜಿಯಲ್ಲಿ ನಡೆಸಲು ಹೋಗಿ ಅದೇ ಹೆಚ್ಚು ತಲೆ ನೋವಿನ ವಿಷಯವಾಗಿರಬೇಕು.

ಮಕ್ಕಳನ್ನು ಹೇಗೆ ಕಾಪಾಡಬೇಕು. ಹೇಗೆ ಉತ್ತಮ ಪೇರೆಂಟ್ ಆಗಿರಬೇಕು. ಹೇಗೆ ಮಕ್ಕಳನ್ನು ನೋಡಿಕೊಳ್ಳಬೇಕು ಹೀಗೆ ಪ್ರತಿಯೊಂದನ್ನೂ ಓದಿ ಕಲಿತು, ತರಬೇತಿ ಪಡೆದು ನಿರ್ವಹಣೆ ಮಾಡುವ ಮಟ್ಟಿಗೆ ಓದಿದ ಮಂದಿ ಬಂದು ನಿಂತಿದ್ದೇವೆ  ಎಂದರೇ ಅತಿಶಯೋಕ್ತಿಯಲ್ಲ .


ಮುಂದೆ ಆ ಮಗುವಿಗೆ ಕಿಂಡರ್ ಗಾರ್ಡನ್ - ಕಾನ್ವೇಂಟ್, ಅವರನ್ನು ರೇಡಿ ಮಾಡಿ ಶಾಲೆಗೆ ಬಿಡುವುದು ಮತ್ತು ಕರೆದುಕೊಂಡು ಬರುವುದು. ಅವರ ಹೋಂ ವರ್ಕ್ ನಾವು ಮಾಡುವುದು, ಅವರಿಗೆ ನಾವೇ ಕಲಿಸುವುದು.

ಇನ್ನೂ ಮುಂದುವರೆಯುತ್ತಾ ಅವರನ್ನು ಉನ್ನತ ಕಾಲೇಜಿನಲ್ಲಿ ಓದಿಸುವುದು, ಉನ್ನತ ಶಿಕ್ಷಣ ಕೊಡಿಸುವುದು, ಡೋನೆಷನ್, ಪೀಜ್, ಇತ್ಯಾದಿ ಇತ್ಯಾದಿ ಕರ್ತವ್ಯಗಳನ್ನು ಹೆತ್ತವರಾಗಿ ಮಾಡಿ ಮಾಡಿ ಅವರನ್ನು ಒಂದು ಸ್ವಂತ ಕಾಲ ಮೇಲೆ ನಿಲ್ಲುವಂತೆ ಮಾಡುವಷ್ಟರಲ್ಲಿ.. ಉಫ್!

ಸ್ವಾಭಾವಿಕವಾಗಿ ಘಟಿಸುವ ಈ ಜೀವನ ಕ್ರಿಯೆಯನ್ನು, ಜೀವನ ದಾರಿಯನ್ನು ಹತ್ತು ಹಲವು ರೀತಿಯ ಜಂಜಾಟದ ಗಂಭೀರವಾದ ವಿಷಯಗಳನ್ನಾಗಿ ನಾವೇ ಮಾಡಿಕೊಂಡು, ಇದನ್ನೇ ಟೋಟಲಿ ಕಾಂಪ್ಲೀಕೇಟ್ ಆದ ಜೀವನ ಶೈಲಿಯಾಗಿ ಕಾಪಾಡಿಕೊಂಡುಬಿಟ್ಟಿದ್ದೇವೆ ಅನಿಸುತ್ತದೆ..

ಒಂದು ಮಗುವೇ ಅಬ್ಬಾ ಸಾಕು ಎಂಬಂತಾಗಿದೆ ನಮ್ಮಗಳ ಪರಿಸ್ಥಿತಿ. ನಿಜವಾಗಿಯೂ ಅಷ್ಟರ ಮಟ್ಟಿಗೆ ನಮ್ಮಗಳ ಬದುಕು ಬ್ಯುಸಿಯೋ ಬ್ಯುಸಿಯಾಗಿದೆ.

ಯಾವುದಕ್ಕೂ ಸಂಯಮ, ತಾಳ್ಮೆ ಈ ಪದಗಳನ್ನು ಪುನಃ ಯಾವುದಾದರೂ ಕೋರ್ಸ್ ಮೊಲಕ ಕಲಿಯುವಂತೆ ನಮ್ಮ ಮಕ್ಕಳು ಮಾಡುತ್ತಿವೆ.

ಅದಕ್ಕೆ ಹೇಳುವುದು ಒಬ್ಬ ವ್ಯಕ್ತಿಯನ್ನು  ಸರಿಯಾದ ಹಾದಿಗೆ ತರಬೇಕು ಅಥವಾ ಜವಬ್ದಾರಿ ಬರಬೇಕು ಎಂದರೇ ಒಂದು ಮದುವೆ ಮಾಡು. ಹಾಗೆಯೇ ಅವರಿಗೆ ಒಂದು ಮಗುವಾದ ಮೇಲೆ ಒಂದು ಹದಕ್ಕೆ ಅವರೇ ಬರುತ್ತಾರೆ.

ಜೀವನ ಅಂದರೇ ಏನೂ ಅಂಥ ಈ ಬದುಕೇ ಹತ್ತು ಯುನಿವರ್ಸಿಟಿಯಲ್ಲಿ ಕಲಿಯಲಾಗದ್ದನ್ನು ಒಂದು ಮಗು ಮತ್ತು ನಮ್ಮ ಜೀವನದ ಮೊಲಕ ತಿಳಿಸಿಕೊಡುತ್ತದೆ.

ನಿಜವಾ.........?