ಗುರುವಾರ, ಮಾರ್ಚ್ 31, 2011

ಯಾರೂ ಶಾಶ್ವತ ಮೂರ್ಖರಲ್ಲ

ಬೇರೆಯವರು ಮೂರ್ಖರು ಎಂದು ಭಾವಿಸುವವರು ಮೂಲತಃ ಅದೇ ಮನಸ್ಥಿತಿಯಲ್ಲಿರುತ್ತಾರೆ. ಯಾರೂ ಶಾಶ್ವತ ಮೂರ್ಖರಲ್ಲ. ಆದರೆ ಮೂರ್ಖತನವೆಂಬುದು ಎಲ್ಲರಲ್ಲೂ ಆಗಾಗ ಇಣಕುತ್ತಿರುತ್ತದೆ. ಇದೊಂದು ದಿನ ಮಾತ್ರ ಅದು ಪರವಾಗಿಲ್ಲ ಅದು ಇಣುಕಲಿ. - ಸುಪ್ರಭತಾ ಕೃಪೆ.





ವಿಶ್ವ ಮೂರ್ಖರ ದಿನವೆಂದು ಪ್ರಪಂಚಾದ್ಯಂತ ಏಫ್ರಿಲ್ ೧ ರಂದು ಆಚರಿಸುತ್ತಾರೆ. ಸಾಮಾನ್ಯವಾಗಿ ಪ್ರತಿಯೊಬ್ಬರಲ್ಲೂ ಸ್ವಲ್ಪವಾದರೂ ಮೂರ್ಖತನವಿರುತ್ತದೆ. ಆಗಲೆ ನಾವುಗಳು ಅವನನ್ನು ನಾರ್ಮಲ್ ಆದ ವ್ಯಕ್ತಿ ಎನ್ನಬಹುದೇನೋ. ಎಷ್ಟೇ ಬುದ್ಧಿವಂತರಾದರೂ ಯಾವುದೇ ಒಂದು ಸಮಯದಲ್ಲಿ ಯಾರಿಂದಲಾದರೂ ಅಥವಾ ಗೊತ್ತಿಲ್ಲದ ರೀತಿಯಲ್ಲಿ ಆ ರೀತಿ ವರ್ತಿಸಿ ಅನಂತರ ಹಾಗೇ ಆಗಿದ್ದಕ್ಕೆ ವ್ಯಥೆಯನ್ನು ಪಟ್ಟಿರುತ್ತೇವೆ.

ವಿಶ್ವ ಮೂರ್ಖರ ದಿನವನ್ನು ಏಫ್ರಿಲ್ ಒಂದನೇ ದಿನವೇ ಯಾಕೆ ಆಯ್ಕೆಯಾಯಿತು ಅಂದರೇ ಅದಕ್ಕೂ ಒಂದು ಇತಿಹಾಸ ಮತ್ತು ಕಥೆಯಿದೆ. ನಮ್ಮ ಈಗಿನ ಹೊಸ ವರ್ಷ ಜನವರಿ ೧ ನ್ನು ಹೊಸ ವರುಷದ ಪ್ರಾರಂಭ ದಿನವೆಂದು ಪರಿಗಣಿಸುವುದಕ್ಕೂ ಮುನ್ನ ಏಪ್ರಿಲ್ ೧ ನೇ ದಿನವನ್ನು ವರ್ಷದ ಪ್ರಾರಂಭ ದಿನವೆಂದು ಹಿಂದಿನ ಜನಗಳು ಆಚರಿಸುತ್ತಿದ್ದರು. ಆದರೆ ಯಾರೋ ಒಬ್ಬರೂ ಇಲ್ಲ ಅದು ಆಗಲ್ಲ ಸರಿಯಾದ ವರ್ಷದ ಪ್ರಾರಂಭ ಜನವರಿ ೧ ಎಂದು ಹೇಳಿದರೂ ಮತ್ತು ಹಾಗೆಯೇ ನಾವುಗಳು ಇನ್ನೂ ಮುಂದೆ ವರ್ಷದ ಮೊದಲ ದಿನ ಜನವರಿ ೧ ಎಂದು ಆಚರಿಸೋಣ ಮತ್ತು ಅದನ್ನು ಅನುಸರಿಸೋಣ ಎಂದು ಪಾಲಿಸಲು ತೊಡಗಿದರು. ಆದರೆ ಮಾನವ ಸಹಜ ದೌರ್ಬಲ್ಯ ಅಂದರೆ ಅವನ ಅಭ್ಯಾಸ ರೂಡಿ. ಯಾವಾಗ ಏಪ್ರಿಲ್ ೧ ಬರುತ್ತದೋ ಅಂದು ಸಾಕಷ್ಟು ಜನಗಳು ಇದೇ ಹೊಸ ವರ್ಷದ ಮೊದಲ ದಿನವೆಂದು ಸಂಭ್ರಮದಿಂದ ಆಚರಿಸಲೂ ತೊಡಗುತ್ತಾರೆ. ಮತ್ತು ಹೀಗೆ ಆಚರಿಸುವ ಮಂದಿಗಳನ್ನು ಉಳಿದ ಮಂದಿ ಮೂರ್ಖರುಗಳು ಇವರು ಎಂದು ಹಾಸ್ಯ ಮಾಡುತ್ತಾ ಸಂಭ್ರಮಿಸುತ್ತಾರೆ. ಮತ್ತು ಏಪ್ರಿಲ್ ಪೂಲ್ಸ್ ಇವರುಗಳು ಎಂದು ಕರೆಯುತ್ತಾರೆ. ಹೀಗೆ ಹಲವು ವರ್ಷಗಳವರೆಗೆ ನಿರಂತರವಾಗಿ ಈ ಸಂಭ್ರಮ ಏಪ್ರಿಲ್ ೧ ರಂದು ಜಾರಿಯಲ್ಲಿರುತ್ತದೆ ಮತ್ತು ನಕ್ಕು ನಗುತ್ತಿರುತ್ತಾರೆ. ಆದ್ದರಿಂದ ವಿಶ್ವಾದ್ಯಂತಹ ಈ ದಿನವನ್ನು "ಏಪ್ರಿಲ್ ಪೂಲ್" ದಿನವೆಂದು ಕರೆದು ಅಂದು ತಮ್ಮ ಮೂರ್ಖತನಕ್ಕೆ ಒಂದು ಪುರಸ್ಕಾರವನ್ನು ಕೊಟ್ಟು ಕೊಂಡು ಹಗುರಾಗುತ್ತಾರೆ?


ಆದರೇ ಮೂರ್ಖರು ತಾವುಗಳು ಆಗುವುದಕ್ಕಿಂತ ನಾವುಗಳು ಬೇರೆಯವರನ್ನು ಮೂರ್ಖರನ್ನಾಗಿ ಮಾಡಲು ತುಂಬ ಉತ್ಸುಕರಾಗಿರುತ್ತೇವೆ. ಯಾಕೆಂದರೇ ಬೇರೆಯವರು ಬಿದ್ದಾಗ ಹೇಗೆ ನಾವುಗಳು ಸೇಫ್ ಎಂದು ಖುಷಿಪಟ್ಟು ನಗುತ್ತೇವೋ ಆ ರೀತಿಯಲ್ಲಿ ಸಮಯ ಸಿಕ್ಕಾಗಲ್ಲೆಲ್ಲಾ ಹತ್ತಿರದವರ ಕಾಲು ಎಳೆದು ಸಂಭ್ರಮಪಡುವ ಚಾಳಿ ನಮ್ಮ ನಮ್ಮಲ್ಲಿ ಹೇರಳವಾಗಿರುತ್ತದೆ.

ಮೂರ್ಖತನ ಎಂಬುದು ಹಲವು ಸಮಯಗಳಲ್ಲಿ ಒಂದು ಹಾಸ್ಯದ ವಸ್ತುವಾಗಿ ನಮ್ಮಗಳಿಗೆ ಸಂತೋಷವನ್ನು ಕೊಡಬಹುದು. ಆದರೇ ನಾವುಗಳು ಬೇರೆಯವರನ್ನು ಮೂರ್ಖರನ್ನಾಗಿ ಮಾಡಿ ಅದರಲ್ಲಿ ಸಂತಸಪಡುವುದಕ್ಕಿಂತಹ ನಮ್ಮ ನಮ್ಮಲ್ಲಿಯೇ ಇರುವ ನಾವುಗಳೇ ಕೆಲವೊಮ್ಮೆ ಮೂರ್ಖರಾದ ಕ್ಷಣಗಳನ್ನು ಮೆಲುಕು ಹಾಕಿಕೊಳ್ಳುತ್ತಾ ನಕ್ಕು ನಲಿಯುವುದು ಆರೋಗ್ಯಕರ.

ಈ ದಿನ ಎಲ್ಲರೂ ನಕ್ಕು ನಕ್ಕು ಹಗುರಾಗುವ ದಿನ. ಹಾಸ್ಯದ ಹೊನಲು ಮೂರ್ಖತನದಲ್ಲಿರುತ್ತದೆಯೇನೋ? ನಾವುಗಳು ನೋಡುವ ಯಾವುದೇ ಸಿನಿಮಾ, ಕಥೆ, ಜೋಕ್ಸ್, ಹಾಡುಗಳಲ್ಲಿ ಅತಿ ಹೆಚ್ಚು ಮನಸ್ಸನ್ನು ಗೆಲ್ಲುವರು ಮೂರ್ಖತೆಯಿಂದ ವರ್ತಿಸುವವರು. ಇಂದಿಗೂ ನಾವುಗಳು ಮೂರ್ಖ -ಬುದ್ಧಿ ಇಲ್ಲದವನಂತೆ ವರ್ತಿಸ ಬೇಡ ಎಂದು ಹೇಳುತ್ತೇವೆ. ಒಮ್ಮೊಮ್ಮೆ ಅಲ್ಲಿಯು ಸಹ ಮಾನವೀಯತೆ, ಮನಸ್ಸನ್ನು ಮುಟ್ಟುವಂತಹ ಸನ್ನಿವೇಶ, ಭಾವನೆಗಳನ್ನು ಆ ವ್ಯಕ್ತಿಗಳಿಂದ ಕಲಿಯುವಂತಹದು ಇರುತ್ತದೆ. ಯಾರೋ ಸಹ ಹುಟ್ಟುತ್ತಲೆ ಮೂರ್ಖರಾಗಿರುವುದಿಲ್ಲ. ಸಮಯ ಸನ್ನಿವೇಶ ಹಾಗೇ ಮಾಡಿರುತ್ತದೆ.

ನಾವುಗಳಂತೋ ಸಮಯ ಸಿಕ್ಕಿದರೇ ಯಾವುದಾದರೂ ಒಂದು ಸುಳ್ಳು ಹೇಳಲು ತವಕಿಸುತ್ತಿರುತ್ತೇವೆ. ಅಲ್ಲಿ ಆ ಸಮಯಕ್ಕೆ ಬಚವಾಗುವುದು ಅನಿವಾರ್ಯವಾಗಿರುತ್ತದೆ. ಹಾಗೆ ಅಲ್ಲಿ ನಮ್ಮ ಸುಳ್ಳನ್ನು ನಂಬಿರುವ ವ್ಯಕ್ತಿ ಆ ವ್ಯಕ್ತಿಯ ದೃಷ್ಟಿಯಲ್ಲಿ ಮೂರ್ಖನೇ ಸರಿ ಯಾಕೆಂದರೇ ಅದನ್ನು ಸತ್ಯ ಎಂದು ನಂಬಿರುತ್ತಾನೆ. ಆರೋಗ್ಯಕರ ಸುಳ್ಳು ಓಕೇ... ಆದರೇ ಅದೇ ಅತಿಯಾಗಿ ಯಾವಾಗಲೂ ಪುನವರ್ತಿತವಾದರೇ ನಷ್ಟ ಸುಳ್ಳು ನಂಬುವವನಿಗಲ್ಲ. ಹೇಳುವ ಮಹಾಶಯನಿಗೆ.

ಒಮ್ಮೊಮ್ಮೆ ನಮ್ಮಗಳ ಮುಗ್ಧತನವನ್ನೇ ಬಂಡವಾಳ ಮಾಡಿಕೊಂಡು ಹಲವಾರು ಬಾರಿ ಕೆಲವರುಗಳು ನಮ್ಮನ್ನು ಮೂರ್ಖತೆಗೆ ದೂಡುತ್ತಾರೆ. ನಮ್ಮಗಳಿಗೆ ಕೊನೆಯವರೆಗೂ ಅದರ ಮರ್ಮ ಅರಿಯಲಾಗುವುದಿಲ್ಲ. ಕೇವಲ ತಮಾಷೆಗಾಗಿ ಮಾಡುವ ಯಾವುದೇ ಇಂಥ ಘಟನೆಗಳು ಪರವಾಗಿಲ್ಲ. ಒಮ್ಮೊಮ್ಮೆ ಒಬ್ಬೊಬ್ಬರೂ ಅದನ್ನೇ ಜೀವನವನ್ನಾಗಿ ಮಾಡಿಕೊಂಡು ಕೊನೆಯವರೆಗೂ ಎಲ್ಲ ಸಮಯದಲ್ಲೂ ಎಲ್ಲರನ್ನೂ ಯಾಮಾರಿಸಿ ಸಂಭ್ರಮಿಸುತ್ತಾರೆ. ಆದರೇ ಅದು ಆ ವ್ಯಕ್ತಿಯ ಮೂರ್ಖತನವಲ್ಲದೇ ಮತ್ತೇನಾಲ್ಲ.

ನಮ್ಮ ರಾಜಕಾರಣಿಗಳಂತೋ ಮತದಾರನನ್ನು ಯಾವ ಯಾವ ರೀತಿಯ ತಮ್ಮ ಆಸೆಯ ಭರವಸೆಗಳ ಮಹಾಪೂರದಲ್ಲಿ ಮುಳುಗೇಳಿಸಿ ಒಂದು ವ್ಯವಸ್ಥೆಯನ್ನೇ ಮೂರ್ಖರನ್ನಾಗಿ ಮಾಡಿಬಿಡುತ್ತಾರೆ ಎಂದರೇ ಅತಿಶಯೋಕ್ತಿಯಲ್ಲ. ಅದು ಎಷ್ಟು ದಿನಗಳ ಪಯಣ ಎಂಬುದು ಪಾಪ ಆ ಮೂರ್ಖ ನಾಯಕರುಗಳಿಗೆ ತಿಳಿದಿರುವುದಿಲ್ಲ.

ನಮ್ಮ ಸಾಹಿತ್ಯದಲ್ಲಂತೋ ಸಾವಿರಾರು ಕಥೆಗಳು ಮತ್ತು ಪಾತ್ರಗಳನ್ನು ನಮ್ಮ ಲೇಖಕರುಗಳು ಸೃಷ್ಟಿ ಮಾಡಿದ್ದಾರೆ ಮತ್ತು ಅವುರುಗಳು ಎಲ್ಲರ ಮನೆ ಮಾತಾಗಿದೆ. ಹಾಗೆಯೇ ತಮಾಷೆಯ ವಸ್ತುವಾಗಿದ್ದರೂ ಅವರುಗಳು ನೀಡುವ ಜೀವನದ ಒಂದು ಸತ್ಯ ಎಲ್ಲರೂ ಒಪ್ಪುವಂತಾಗಿರುತ್ತದೆ. ಹಾಸ್ಯ ರಸದ ಇಂದಿರುವುದು ಪ್ರತಿಯೊಬ್ಬರೂ ತಮ್ಮನ್ನು ತಾವು ಹಾಸ್ಯದ ದೃಷ್ಟಿಕೊನದಿಂದ ನೋಡಿಕೊಳ್ಳಬೇಕು.

ಈ ದಿನ ಏನೇ ತಪ್ಪು ಮಾಡಿದರೇ ಮಾಫ್! ಎನ್ನುವ ರೀತಿಯಲ್ಲಿ ಕೆಲವರುಗಳು ಶಾಕ್ ವಿಷಯಗಳನ್ನು ತಮಗೆ ಗೊತ್ತಿರುವ ಜೊತೆಗಾರರಿಗೆ ತಿಳಿಸಿ ಖುಷಿಪಟ್ಟು ಅದು ಸುಳ್ಳು ಎಂದು "ಏಪ್ರಿಲ್ ಪೂಲ್" ಆದೇ ಎಂದು ನಕ್ಕು ನಗಿಸುತ್ತಾರೆ.

ಕೆಲವು ಪತ್ರಿಕೆಗಳಂತೋ ವಿಸ್ಮಯಕಾರಿ ವಿಷಯಗಳನ್ನು ಮುದ್ರಿಸಿ ಬಚವಾಗಲು ಇಂದು ಏಪ್ರಿಲ್ ೧ ಗೊತ್ತಲಾ ಎಂದು ಹೇಳಿ ಬಿಡುತ್ತಾರೆ. ಸುಳ್ಳು ಸುದ್ಧಿಗಳನ್ನು ಗಾಸಿಪ್ ಗಳನ್ನು ಟಿ. ವಿ ಮಾಧ್ಯಮಗಳು ಪ್ರಸಾರ ಮಾಡಿ ವಿಕ್ಷಕರುಗಳನ್ನು ರೋಮಾಂಚನಗೊಳಿಸುತ್ತಾರೆ. ಹೌದಾ! ಎಂದು ಹುಬ್ಬೇರಿಸಿದಾಗ ಏಪ್ರಿಲ್ ೧ ಎಂದು ತಿಳಿದು ನಾವುಗಳು ಮೂರ್ಖರಾದೇವು ಎಂದು ನಗುತ್ತಾರೆ.

ನಮ್ಮ ನಮ್ಮಲ್ಲಿಯೇ ಮಾಡುವ ಒಂದೀಷ್ಟು ತಪ್ಪು ಒಪ್ಪುಗಳನ್ನು ನೋಡಿಕೊಂಡು ನಾವುಗಳು ನಲಿಯಬೇಕು. ಬರೀ ಬೇರೆಯವರ ತಪ್ಪುಗಳನ್ನು ಪಟ್ಟಿ ಮಾಡುವುದನ್ನು ಬಿಟ್ಟು ನಾವುಗಳು ಸಹ ಎಲ್ಲರಂತೆ ಯಾವುದರಲ್ಲೂ ವಿಭಿನ್ನರಲ್ಲ ಎಂಬುದನ್ನು ಮನಗಾಣಬೇಕು.

ಬೇರೆಯವರ ಬಗ್ಗೆ ನಾವುಗಳು ಮಾಡುವ ಟೀಕೆ, ಟಿಪ್ಪಣಿಗಳು ವ್ಯಂಗ್ಯವಾಗಿರಬಾರದು ಅದು ನೈಜವಾಗಿ ಅವನ/ಳ ವ್ಯಕ್ತಿತ್ವವನ್ನು ತಿದ್ದಿಕೊಳ್ಳಲು ಸಹಾಯಕಾರಿಯಾಗಿರಬೇಕು. ಅದು ಯಾರ ಮನವನ್ನು ನೋಯಿಸುವ ಮಟ್ಟಕ್ಕೆ ಹೋಗಬಾರದು. ಕೇಳುಗನಿಗೂ ಹೌದು! ಹೇಳುತ್ತಿರುವುದು ಸತ್ಯ ನಾನು ತಿದ್ದಿಕೊಳ್ಳಬೇಕು, ಮಾಡಿದ್ದು ತಪ್ಪು ಎನ್ನುವಂತಿರಬಾರದು. ಯಾಕೆಂದರೇ ಎಲ್ಲರೂ ನಮ್ಮವರಲ್ಲವೇ ಎಂಬ ಕಳ ಕಳಿ ಇರಬೇಕು.


ಎಲ್ಲರೂ ಎಲ್ಲರ ದೃಷ್ಟಿಯಲ್ಲಿ ಕೆಲವೊಂದು ವಿಷಯದಲ್ಲಿ ಪಕ್ಕ ಮೂರ್ಖರಂತೆಯೇ ಗೋಚರಿಸುತ್ತಾರೆ. ಅದಕ್ಕೆ ಹೇಳಿದ್ದು ಮೊದಲೂ ನಾವುಗಳು ನಮ್ಮ ನ್ನು ನಾವುಗಳು ನೋಡಿಕೊಳ್ಳಬೇಕು. ಬೇರೆಯವರು ನಮಗೇ ಛೇಡಿಸಿದಾಗ ಆಗುವ ಅನುಭವ - ನಾವುಗಳು ಬೇರೆಯವರಿಗೆ ಮಾಡಿದಗಲೂ ಆ ವ್ಯಕ್ತಿ ಹಾಗೆಯೇ ನೋವನ್ನು ಅನುಭವಿಸುತ್ತಾನೆ.

ಆದ್ದರಿಂದ ಫನ್ ಅಂದರೆ ಅದು ನಮ್ಮೀಂದ ಮೊದಲೂ ಪ್ರಾರಂಭವಾಗಿ ಸುತ್ತಲೂ ಪಸರಿಸಬೇಕು..

ಇಲ್ಲಿ ಯಾರೋ ಎಂದಿಗೂ ಪರಿಪೂರ್ಣರಲ್ಲ..!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ