ಶನಿವಾರ, ಮಾರ್ಚ್ 26, 2011

ಅಪ್ಪ-ಅಮ್ಮ ಮತ್ತು ಮಗ(ಳು)




ಮಗು ತನ್ನ ಪುಟ್ಟ ಪುಟ್ಟ ಹೆಜ್ಜೆಗಳನ್ನು ತನ್ನ ತಾಯಿ-ತಂದೆಯರ ಎದೆಯ ಮೇಲೆ ಇಟ್ಟು ನಡೆದಾಗ ಆಗುವ ಆನಂದ ಮುಂದೆ ತನ್ನ ವಯೋಮಾನದ ದಿನಗಳಲ್ಲಿ ಅದೇ ಕಾಲುಗಳು ತಂದೆ - ತಾಯಿಯರ ಕಡೆಗೆ ವಿರುದ್ಧವಾಗಿ ನಿಂತಾಗ ಹೆತ್ತವರಿಗೆ ತುಂಬ ನೋವಾಗುತ್ತದೆ ಅಲ್ಲವ ಯಾಕೆ?

ಇರಬೇಕು ಆಗ ಈ ಮಗ ಪ್ರಬುದ್ಧಮಾನನಾಗಿ ಬೆಳೆದು ರಾಗ- ದ್ವೇಷ - ಙ್ಞಾನ - ಪ್ರೀತಿಯಿಂದ ತುಂಬಿ ಸಹಿಸಲಾಸಾಧ್ಯವಾದ ಭಾರವಾಗಿರಬೇಕು. ಅಥವಾ ಈ ಮುಗ್ಧ ತಂದೆ ತಾಯಂದಿರುಗಳು ತಮ್ಮ ಜೀವ ಮಾನದ ಅರ್ಧ ದಿನಗಳನ್ನು ಕಳೆದು ಆ ಭಾರವನ್ನು ಸಹಿಸಲು ಸಾಧ್ಯವಾಗದಷ್ಟು ವಿವಿಧ ರೀತಿಯ ಆಸೆ, ನಂಬಿಕೆ, ಪ್ರೀತಿ, ಮಹತ್ವಕಾಂಕ್ಷೆ, ಅಸಹಾಯಕತೆ ಮತ್ತು ದೇಹ ದೌರ್ಬಲ್ಯದಿಂದ ತಮ್ಮ ಬೆಳೆದ ಫೊರನ ಕೇವಲ ದೇಹ ಭಾರವಲ್ಲದೆ ಅವನ ಭಾವನೆಗಳನ್ನು ಸಹ ಸಹಿಸದ ಮಟ್ಟಕ್ಕೆ ಬಂದಿರುತ್ತಾರೆ.

ಈ ಪುಟ್ಟ ಮಗು ಸಹಜ ಹೆಜ್ಜೆಗಳು ಮುಂದೆ ಯಾಕೆ ಸಹಿಸಲಾಸಾಧ್ಯವಾದ ಭಾರವಗುತ್ತವೆ ಎಂಬುದು ಕೇವಲ ಉಪಮೆಯಾಗಿರುವಂತೆಯೇ ನಮಗೆ ನಮ್ಮ ಭಾರತೀಯ ಕುಟುಂಬ ವ್ಯವಸ್ಥೆಯ ಅತಿ ಮಧುರವಾದ ಕಟ್ಟುನಿಟ್ಟಿನ ಬಂಧನವನ್ನೇ ಚಿಂತನೆಗೀಡು ಮಾಡುತ್ತದೆ.

ಈ ಜಗತ್ತಿನ ಯಾವುದೇ ಜೀವ ಸಂಕುಲಗಳಲ್ಲೂ ಈ ರೀತಿಯ ವಿಭಿನ್ನವಾದ ಸಾಮಾಜಿಕ ಸಂಬಂಧದ ನಡಾವಳಿಗಳನ್ನು ನಾವು ಕಾಣಲಾರೆವು.



ಪ್ರತಿ ಮಾನವ ಜೀವಿಯು ತನ್ನ ವಂಶಾಭಿವೃದ್ಧಿಯಲ್ಲಿ ತನ್ನ ಜೀವನ ಸಾರ್ಥಕ್ಯವನ್ನು ಕಂಡುಕೊಳ್ಳುತ್ತದೆ.

ಈ ಮುಂದಿನ ಪೀಳಿಗೆಯು ತನ್ನ ನಂತರದ ಜೀವನದ ತನ್ನ ಪ್ರತಿನಿಧಿಯೇನೂ ಎಂಬಂತೆ ತನ್ನ ರಕ್ತ ಮಾಂಸ, ಭಾವನೆ ಮತ್ತು ತನ್ನ ಸರ್ವಸ್ವವನ್ನೆ ತ್ಯಾಗ ಮಾಡಿ ಪ್ರತಿ ತಂದೆ ತಾಯಿಯಂದಿರುಗಳು ಹೆತ್ತ ದಿನಗಳಿಂದ ಆ ತನ್ನ ವಂಶದ ಕುಡಿ ತನ್ನ ಕಾಲ ಮೇಲೆ ತಾನು ಸ್ವರ್ವ ಸ್ವತಂತ್ರವಾಗಿ ಜೀವಿಸುವವರೆಗೂ ತನಗೆ ಯಾವುದೆ ಹೊರೆಯಲ್ಲ ಎಂಬಂತೆ ಎಷ್ಟೇ ಸಂಖ್ಯೆಯ ಮಕ್ಕಳಿರಲಿ ಸಮಾನವಾದ ಪ್ರೀತಿ - ವಿಶ್ವಾಸ ಆಸೆಯನ್ನು ಇಟ್ಟುಕೊಂಡು ಗಿಡಕ್ಕೆ ಕಾಯಿಗಳು ಎಂದೂ ಭಾರವಾಗಲಾರವು ಎಂಬ ರೀತಿಯಲ್ಲಿ ಪೂರೆಯುತ್ತಾರೆ.

ನನಗೆ ಅನಿಸುತ್ತದೆ ಈ "ಪ್ರೀತಿ" ತನ್ನ ಮಕ್ಕಳಿಗೆ ಮಾತ್ರ ಮೀಸಲಾದ ಅತಿ ಸಾಮಾನ್ಯ ಸರ್ವ ಸಮಾನವಾಗಿ ಪ್ರತಿಯೊಬ್ಬರಲ್ಲೂ ಕಂಡುಬರುವ ಈ ಆರೈಕೆಯ ಮೂಲ ಸೆಲೆ ಎಲ್ಲಿದೆ?

ಆದರೆ! ಈ ರೀತಿಯ ಪ್ರೀತಿಯ ಬೆಲೆಯನ್ನು ಕಡೆಗಣಿಸುವ ದಿನಗಳನ್ನು ಅಲ್ಲಲ್ಲಿ ಕೆಲವರು ಅಥವಾ ನೂರಕ್ಕೆ ತೊಂಬತ್ತೊಂಬತ್ತು ಜನರುಗಳು ತಮ್ಮ ತಂದೆ - ತಾಯಿಗಳ ಮನಸ್ಸಿಗೆ ನೋವಾಗುವ ಹೆಜ್ಜೆಯನ್ನು ಇಡುವ ಕಾಲ ಮುಂದೆ ಯಾಕೆ ಬರುತ್ತದೆ? ಮತ್ತು ಅದು ಎಲ್ಲಿಂದ ಬರುತ್ತದೆ? ಅದು ಆ ದೇವರಿಗೆ ಮಾತ್ರ ಗೊತ್ತೇನೋ!

ತಾನು ಚಿಕ್ಕವನಾಗಿದ್ದಾಗ ಎಲ್ಲ ವಿಷಯಕ್ಕೂ ಅಮ್ಮನೇ ಸಾಕ್ಷಿ ಮತ್ತು ಅವಳೇ ಉತ್ತಮ ಗೈಡ್ ಎಂದು ಪ್ರತಿಯೊಂದು ವಿಷಯದಲ್ಲೂ ಅವಳ ಪಾಲು ಇದೇ ಎಂಬುವಷ್ಟರ ಮಟ್ಟಿಗೆ ಕಳೆದ ದಿನಗಳು ಎಷ್ಟು ಬೇಗ "ನೋ ಷೀ ಇಸ್ ನಾಟ್ ಫಾರ್ ದಿಸ್" ಎಂಬಲ್ಲಿಗೆ ಬಂದುಬಿಟ್ಟಿರುತ್ತದೆ. ಆ ನಮ್ಮ ಅತಿ ಮೆಚ್ಚಿನ "ಮೊದಲ ಸ್ನೇಹಿತೆ" ತೀರ ಹಳತಾಗುತ್ತಾಳೆ. ಎಲ್ಲಿ ಎಲ್ಲವೂ ಅತಿ ಹೇರಳವಾಗಿ ಯಾವುದೇ ಯೋಚನೆಯಿಲ್ಲದೆ ಸೂರೆಗೊಂಡಿರುತ್ತೇವೂ ಅದೇ ಇಂದು ಕವಡೆಕಾಸಿಗೂ ಕಿಮ್ಮತ್ತು ಇಲ್ಲದ ರೀತಿಯಲ್ಲಿ ನಾವುಗಳು ಸವಕಲು ನಾಣ್ಯದ ರೀತಿಯಲ್ಲಿ ಲೆಕ್ಕಕ್ಕಿಲ್ಲದವರನ್ನಾಗಿ ಮಾಡುತ್ತೇವೆ ಯಾಕೇ?

"ಮೈ ಡ್ಯಾಡ್ ಇಸ್ ಸ್ಟ್ರಾಂಗೇಸ್ಟ್" ಎನ್ನುತ್ತಾ ಅಪ್ಪನ ಗಮ್ಮತ್ತನ್ನು ತನ್ನ ಬಾಲ್ಯದಲ್ಲಿ ಸಮಯ ಸಿಕ್ಕಾಗಲೆಲ್ಲಾ ಕನವರಿಸುವವರು ಅದೇಷ್ಟು ಬೇಗ "ಹೀ ಇಸ್ ಒಲ್ಡ್ ಮ್ಯಾನ್!" ಎಂಬಲ್ಲಿಗೆ ತಂದು ನಿಲ್ಲಿಸುವ ಮರ್ಮವಾದರೂ ಯಾವುದು?

ಹೌದು! ನಮ್ಮ ಮಕ್ಕಳೇ ನಮ್ಮ ಮುತ್ತುಗಳು ಅವರೇ ನಮಗೆ ಕೋಟಿ ಸಂಪತ್ತು; ಅವರಿಲ್ಲದೇ ನಾವುಗಳಿಲ್ಲ ಎಂಬ ಮನೋ ನಿರ್ಧಾರ ಕಡೆಗಾಲದಲ್ಲಿ ಎಲ್ಲವನ್ನು ಕಳೆದುಕೊಂಡು ನಿಸ್ಸಾಯಕ ಮನೋಭಾವದಿಂದ ತೀರ ಮುದುಕರಾಗುವ ನಮ್ಮ ನಿಮ್ಮ ಅಪ್ಪ - ಅಮ್ಮಂದಿರುಗಳು ಯಾಕೆ ತೀರ ವಿಭಿನ್ನವಾಗಿ ಯೋಚಿಸಿ ತಮ್ಮ ಜೀವನವನ್ನು ಇನ್ನೂ ಸುಂದರವಾಗಿ ಕಳೆಯಲು ಸಾಧ್ಯವಿಲ್ಲ ಎಂಬಲ್ಲಿಗೆ ಬಂದು ನಿಲ್ಲುತ್ತಾರಲ್ಲಾ ಯಾಕೆ?

ಈ ಪೀಳಿಗೆ ಬರುವ ಮೊದಲು ಇಬ್ಬರೂ ತುಂಬ ಖುಷಿಯಾಗಿ ಸಮರಸದಿಂದ ತಾವಿಬ್ಬರೂ ಜೀವಿಸುವ ದಿನಗಳನ್ನು ಯಾಕೆ ಅಷ್ಟು ವೇಗವಾಗಿ ಎಲ್ಲ ಮುಗಿದು ಹೋಯಿತು ಎಂಬಂತೆ ಜೀವನವನ್ನೇ ಮರೆಯುತ್ತಾರಲ್ಲಾ ಯಾಕೆ!



ಇದೆಲ್ಲಾ ಏನೇ ಯೋಚಿಸಿದರೂ ನಮ್ಮ ನಮ್ಮಲ್ಲಿಯೇ ಅಲಿಖಿತ ಶಾಸನ ನಿಯಮವೆಂಬಂತೆ ನಾವು ನಮ್ಮ ಅಪ್ಪ ಅಮ್ಮರನ್ನು ಆ ರೀತಿಯ ನರಳಾಟದಲ್ಲಿ ನಡೆಸಿಕೊಳ್ಳುತ್ತೇವೆ. ಅದ್ದರಿಂದ ನಮ್ಮ ಹೆತ್ತವರುಗಳು ತಮ್ಮ ಅಗಾಧ ಆಸೆಯೆಂಬ ಕನಸಿನ ಸೌಧವನ್ನು ಮುಂದೇನೂ ಮಾಡಲು ಸಾಧ್ಯವಿಲ್ಲ ಎಂಬ ರೀತಿಯಲ್ಲಿ ತಮ್ಮ ಮುಂದೆಯೆ ಕೆಡವಿಕೊಳ್ಳುತ್ತಾರೆ.

ಆದರೂ ನಮ್ಮ ಈ ಸುಂದರ ಕೌಟಂಬಿಕ ವ್ಯವಸ್ಥೆ ಅಷ್ಟು ದೌರ್ಬಲ್ಯವಾಗಿಲ್ಲ. ಇನ್ನೂ ಕೆಲವರಲ್ಲಿ ಆ ವ್ಯವಸ್ಥೆಯ ಸವಿ, ಸೌಂದರ್ಯದ ಮತ್ತು ಗಟ್ಟಿತನದ ಮಹತ್ವ ತಿಳಿದಿದೆ. ಅದಕ್ಕೆ ಸಮಯಕ್ಕೆ ಸರಿಯಾಗಿ ಮಳೆ ಬೆಳೆಯಾಗಿ ಈ ಪ್ರಕೃತಿ ಇನ್ನೂ ಸುಂದರವಾಗಿ ಅಂತಃಕರಣೆಯಾಗಿ ಪ್ರತಿಯೊಬ್ಬರಿಗೂ ನೆರವಾಗಿರುವುದು.

ಆದರೂ ನನಗೆ ಅನಿಸುತ್ತದೆ ಆ ಸೌಂದರ್ಯದ ಮಹತ್ವವನ್ನೇ ಮರೆಸುವ ಮಟ್ಟಿಗೆ ವೇಗವಾಗಿ ಅಸಂಖ್ಯಾ "ವೃದ್ಧಾಶ್ರಮಗಳು" ಹುಟ್ಟಿಕೊಳ್ಳುತ್ತಿರುವುದು ಯಾವುದರ ಪ್ರತೀಕ? ಕೆಲ ನಿಮಿಷ ನಿಂತು ಪ್ರತಿಯೊಬ್ಬರೂ ಆ ಕಡೆಗೆ ಗಮನ ಹರಿಸಿ ಯೋಚಿಸುವುದು ಉತ್ತಮವಲ್ಲವಾ?

ದಯವಿಟ್ಟು ಯೋಚಿಸಿ.!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ