ಭಾನುವಾರ, ಜೂನ್ 19, 2011

ತೀರ್ಥ ರೂಪ ತಂದೆಗೆ...



ಇಂದು ತಂದೆಯ ದಿನ. ಇದು ಪಾಶ್ಚಾತ್ಯರಿಗೆ ಮಾತ್ರವಲ್ಲ. ನಮಗೂ ಸಹ. ನನ್ನ ಡ್ಯಾಡಿ ಯಾವಾಗಲೂ ನನಗೆ ಸ್ಟ್ರಾಂಗೆಸ್ಟ್. ನನ್ನ ಚಿಕ್ಕಂದಿನ ದಿನದಿಂದಲೂ ಇರಬೇಕು. ನಮ್ಮ ಅಪ್ಪಾ ಅಂದರೆ ಅಮ್ಮನಿಗಿಂತ ನನಗೆ ಮೀಗಿಲು. ಅಮ್ಮ ಅಮ್ಮನ ಮಮತೆಯ ಕರೆಗೆ ಮೀಗಿಲಾದದ್ದು ಯಾವುದು ಇಲ್ಲ ಬಿಡಿ ಅದು ಅಮ್ಮ ಮಾತ್ರ ಎಂದು ಹೇಳಬಹುದು.

ಮನೆಗೆ ಬಂದರೇ ಅಮ್ಮನ ಮುದ್ದಿನ ಮಗಳು ಮತ್ತು ನನಗೆ ಅಮ್ಮನ ನಲುಮೆ ಯಾವಾಗಲೂ ತುಂಬ ಖುಷಿಯನ್ನು ಕೂಡುವ ವಿಚಾರ. ಆದರೇ ಹೊರಗಡೆ ನನ್ನ ಗೆಳೆಯರ/ಗೆಳೆತಿಯರ ಜೊತೆಯಲ್ಲಿ ಆಟವನ್ನು ಆಡುವಾಗ. ಯಾರದರೂ ತೊಂದರೆಯನ್ನು ಕೊಟ್ಟಾಗ ನನಗೆ ಮೊದಲು ಬರುವ ದೈರ್ಯ, ಭರವಸೆಯ ಆಸರೆಯ ನೆನಪು ಎಂದರೇ ಅದು ನಮ್ಮ ಅಪ್ಪನದು.

ನಾನು ಯಾವಾಗಲೂ ಒಂದು ಅಚ್ಚರಿಯ ನೋಟವನ್ನು ನನ್ನ ಅಪ್ಪನೆಡೆಗೆ ಇಟ್ಟುಕೊಂಡಿದ್ದೇನೆ. ಇಂದು ನಾನು ನನ್ನ ಕಾಲ ಮೇಲೆ ನಿಂತುಕೊಂಡು ನಾನೇ ನನ್ನ ಪಾಕೇಟ್ ಮನಿಯನ್ನು ಸಂಪಾಧಿಸಿಕೊಳ್ಳುವ ಬಲವನ್ನು ಪಡೆದಿದ್ದರು. ಯಾಕೋ ನನಗೆ ನನ್ನ ಅಪ್ಪನ ಆಸರೆಯನ್ನು ಯಾವಾಗಲೂ ಮೀಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಅನಿಸುತ್ತದೆ. ಯಾಕೆಂದರೇ ನನ್ನ ಅಪ್ಪನ ಕಣ್ಣಾಲಿಗಳು ನಾನು ಚಿಕ್ಕವಳಿದ್ದಾಗ ಇದ್ದ ರೀತಿಯಲ್ಲಿ ಇಂದು ಇಲ್ಲ.. ಆದರೋ ನನಗೆ ನನ್ನ ಹೊರ ಪ್ರಪಂಚದಲ್ಲಿ ಪುರುಷ ಸಮಾಜ ಎಂದರೇ ನೆನಪಾಗುವ ಒಂದು ಪದವೆಂದರೇ ಅದು ಅಪ್ಪ ಮಾತ್ರ.

ನನ್ನ ಅಮ್ಮ ನಾನು ಹಟ ಮಾಡುತ್ತಾ ಚಿಕ್ಕ ಚಿಕ್ಕದಕ್ಕು ಸತಾಯಿಸುತ್ತಿದ್ದಾಗ ನನ್ನ ಬಾಲ್ಯದ ದಿನಗಳಲ್ಲಿ ಹೆದರಿಸಲೂ ನನ್ನ ಅಪ್ಪನನ್ನೇ ಬಳಸುತ್ತಿದ್ದಳು. ಆದರೋ ನನಗೆ ಗೊತ್ತು ನನ್ನ ಅಪ್ಪ ನನ್ನನ್ನು ಇದುವರೆಗೂ ಹೀಗೆ ತಮಾಷೆಗೂ ಸಹ ನನ್ನ ಮೇಲೆ ಕೈ ಮಾಡಿಲ್ಲ. ನಾನೇ ಅದೃಷ್ಟವಂತಳು ಎಂದು ಅನಿಸುತ್ತದೆ. ನನಗೆನಿಸುತ್ತದೆ ಅಷ್ಟೊಂದು ನನ್ನನ್ನು ಪ್ರೀತಿಸುತ್ತಿದ್ದರು ಅನಿಸುತ್ತದೆ.

ಇದರಲ್ಲಿ ನನ್ನ ತಮ್ಮಂದಿರ ದೌರ್ಭಾಗ್ಯಕ್ಕೆ ನನಗಂತೋ ಖುಷಿಯ ನೆನಪುಗಳು ಯಾಕೆಂದರೇ ನನ್ನ ಅಪ್ಪ ನಮ್ಮಗಳ ಮಧ್ಯ ಏನಾದರೂ ಜಗಳಗಲು ಆದಾಗ ಯಾವುದೇ ಮೂಲಾಜು ಇಲ್ಲದೇ ನನ್ನ ತಮ್ಮಂದಿರ ಮೇಲೆ ಕೈ ಎತ್ತಿದ್ದಾರೆ. ನನಗೆ ಒಂದಿಷ್ಟು ಮಾತಿಗೂ ಗದರಿಸಿಲ್ಲ. ಅಮ್ಮನ ಬಗ್ಗೆಯು ಸಹ ಅಪ್ಪನಿಗೆ ಅಷ್ಟೇ ಪ್ರೀತಿ.

ಈ ಒಂದು ಗುಣ ನನಗೆ ಅತಿ ಪ್ರೀತಿಯನ್ನು ನನ್ನ ತಂದೆಯ ಮೇಲೆ ಛಾಪಿಸಲು ದಾರಿ ಮಾಡಿಕೊಟ್ಟಿತು.

ನನ್ನ ಹೆಸರಿನ ಜೊತೆಯಲ್ಲಿ ನನ್ನ ತಂದೆಯ ಹೆಸರನ್ನು ಇಟ್ಟುಕೊಳ್ಳಲು ಇರುವ ಅವಕಾಶ. ನೆನಸಿಕೊಂಡರೇ ಅದೇ ಇರಬೇಕು ಎಲ್ಲಾ ಹೆಣ್ಣು ಮಕ್ಕಳಿಗೆ ತಂದೆಯೆಂಬ ಶ್ರೀ ರಕ್ಷೆ ಕಡೆಯತನಕ ಇರುವುದೇನೋ ಎನಿಸುತ್ತದೆ.

ಪ್ರೀತಿಯ ಅಪ್ಪನ ಮಗಳು ಎಂದು ನನ್ನ ಮನೆಯವರೆಲ್ಲಾ ಹಂಗಿಸಿದರೂ ನನ್ನ ಹೆಮ್ಮೆಯನ್ನು ನಾನಂತೋ ಯಾವಾಗಲೂ ಅನುಭವಿಸಲು ಸಂತೋಷವಾಗುತ್ತದೆ. ಚಿಕ್ಕಂದಿನ ದಿನಗಳಲ್ಲಿ ನನಗೆ ಬೇಕೆನಿಸಿದ ವಸ್ತುಗಳು, ತಿನಿಸುಗಳು, ಬಟ್ಟೆಬರೆಗಳ ಮಹಾಪೂರವನ್ನೇ ಹರಿಸಿದ್ದನ್ನು ನೆನಸಿಕೊಂಡರೇ ನನಗೆ ಈಗಲೂ ರೋಮಾಂಚನವಾಗುತ್ತದೆ.

ಇಂದು ನಾನು ಇಷ್ಟಪಟ್ಟ ಬಟ್ಟೆ, ಡ್ರೇಸ್ ಗಳನ್ನು ನಾನೇ ನನ್ನ ಗೆಳೆತಿಯರ ಜೊತೆಯಲ್ಲಿ ಖರೀದಿಸಿ ತಂದಾಗ ನನ್ನನ್ನು ನೋಡಿ ನನ್ನ ತಂದೆಯ ಕಣ್ಣಿನ ಹೊಳಪು ಏನನ್ನು ಹೇಳುತ್ತಿರಬಹುದು ಎಂಬ ಚಿಂತೆಯಲ್ಲಿ ಕೆಲವೊಮ್ಮೆ ನಾನು ಮುಳುಗಿರುತ್ತೇನೆ!

ಅವರ ಅಚ್ಚುಕಟ್ಟು, ಅವರ ಸಮಯ ಪ್ರಙ್ಞೆ, ಅವರ ನಿಷ್ಠುರತೆಗಳೇ ನನಗೆ ಇಂದು ಬಳುವಳಿಯಾಗಿ ಬಂದಿರುವುವೇನೋ ಎಂಬಂತೆ ನಾನು ಇಂದು ಸ್ವಾತಂತ್ರ್ಯವಾಗಿ ಯೋಚಿಸಲು ಮತ್ತು ಕೆಲವೊಂದು ನಿಲುವುಗಳನ್ನು ನನ್ನ ಕೆಲಸಗಳಲ್ಲಿ ತೆಗೆದುಕೊಳ್ಳುತ್ತಿರುವುದಕ್ಕೆ ಸಾಕ್ಷಿ.

ನನಗಂತೋ ನನ್ನ ತಂದೆ ನನ್ನ ಮೊದಲ ಬಾಯ್ ಪ್ರೇಂಡ್. ಯಾಕೆಂದರೇ ನಾನು ಪುರುಷ ಪ್ರಪಂಚದ ಬಗ್ಗೆ ಯೋಚಿಸಿದಾಗ. ಒಳ್ಳೆಯತನ ಕೆಟ್ಟತನದ ಬಗ್ಗೆ ಯೋಚಿಸುವಾಗ ನನಗೆ ನನ್ನ ತಂದೆಯ ಗುಣ, ನಡತೆಗಳೇ ಕಣ್ಣ ಮುಂದೆ ಬರುತ್ತವೆ.

ಅವರುಗಳು ನನಗೆ ಕೊಟ್ಟ ಪ್ರೀತಿ, ಅವರ ಸಲಹೆ ಯಾವುದಕ್ಕೂ ಮೀಗಿಲಾಗಿಲ್ಲ. ಚಿಕ್ಕವಳಿದ್ದಾಗ ಅವರ ಬೆನ್ನ ಮೇಲೆ ಚಿಕ್ಕ ಚಿಕ್ಕ ಪಾದಗಳನ್ನು ಇಟ್ಟು ನಡೆದಾಡಿದ್ದೇ ಎಂದುಕೊಂಡರೇ ಇಂದು ಆಶ್ಚರ್ಯವಾಗುತ್ತದೆ. ಎಲ್ಲಿಗಾದರೂ ಕರೆದುಕೊಂಡು ಹೋಗುವಾಗ ಅವರ ಹೆಗಲ ಮೇಲೆ ಕುಳಿತು ಕೊಂಡು ಅತ್ತ ಇತ್ತಾ ನೋಡುತ್ತಾ... ಅವರ ತಲೆ ಕೂದಲುಗಳನ್ನು ಹಾಗೇ ಹೀಗೆ ಬೆರಳಲ್ಲಿ ಸ್ಪರ್ಷಿಸುತ್ತಿದ್ದದ್ದು ನೆನ್ನೆ ಮೊನ್ನೆ ಮಾಡಿದಂತ ಸವಿನೆನಪು.

ಮನೆಯೆಂದರೇ ಮನೆಯ ಮುಖ್ಯಸ್ಥನೆಂದರೇ ಅಪ್ಪನಲ್ಲವೇ.. ಅವರ ಅ ಒಂದು ಧೀಮಂತಿಕೆಯ ಬೆಳಕು! ಎಂದು ಮರೆಯಲಾಗುವುದಿಲ್ಲ. ನಾನು ನನ್ನ ಕೆಲಸಕ್ಕಾಗಿ ಇಷ್ಟೊಂದು ದೊರದಲ್ಲಿ ಇದ್ದರೂ ಇಂದಿಗೋ ಮುಂಜಾನೆಯಲ್ಲಿ ಮೊದಲು ನಾನು ನೆನಸುವ ದೇವರನ್ನು ನೋಡುವುದಕ್ಕಿಂತ ನನ್ನ ತಂದೆಯನ್ನು ನೋಡುವುದೇ ಹೆಚ್ಚು. ದಿನಕ್ಕೆ ಒಮ್ಮೆಯಾದರೂ ಅವರ ಜೊತೆಯಲ್ಲಿ ಮಾತನಾಡಿದರೇನೆ ಏನೋ ಸಮಾಧಾನ.

ನನ್ನ ಗೆಳೆತಿಯರು ಈಗಲೂ ಹಂಗಿಸುತ್ತಿರುತ್ತಾರೆ. ಏನೇ ನೀನು ಮದುವೆಯಾಗಿ ಗಂಡನ ಮನೆಗೆ ಹೋದರೂ ನಿನ್ನ ಅಪ್ಪ ಪ್ರೀತಿಯ ಹುಚ್ಚು ಬಿಡಲಾರೇ ಕಣೇ!

ಹೌದು ಯಾಕೆ ಬಿಡಬೇಕು!

ಮಾತಾ ಪಿತೃಗಳು ಪ್ರತ್ಯಕ್ಷ ದೇವರುಗಳೇ ಸರಿಯಲ್ಲವಾ. ಅವರುಗಳು ಕಂಡ ಕನಸುಗಳೇ ಈ ನಮ್ಮ ಜೀವನವಲ್ಲವಾ? ಅವರ ಜೀವನದ ತೇರನ್ನು ನಾವುಗಳು ಮುಂದುವರಿಸಿಕೊಂಡು ವಯಸ್ಸಾದ ಕಾಲಕ್ಕೆ ಅವರುಗಳಿಗೆ ಪ್ರೀತಿ, ಅಸರೆಯನ್ನು ನೀಡುವುದು ಎಲ್ಲಾ ಮಕ್ಕಳ ಕರ್ತವ್ಯ ಎಂದು ನಮಗೆ ಅನಿಸುವುದಿಲ್ಲವಾ?

ಈ ಒಂದು ವಿಚಾರದಲ್ಲಿ ನಮ್ಮ ಈ ಭಾರತೀಯ ಕುಟುಂಬ ವ್ಯವಸ್ಥೆಗೆ ಜೈ ಜೈ!

ನಾವುಗಳು ನಿತ್ಯ ಪಾದರ್ಸ್ ಮದರ್ಸ್ ಡೇ ಗಳನ್ನು ಮಾಡುತ್ತಲೇ ಇರುತ್ತೇವೆ. ಮಾಡುತ್ತಲೇ ಇರಬೇಕು. ಅವರುಗಳನ್ನು ನಮ್ಮ ಹೆತ್ತವರು ಎಂಬುದನ್ನು ಎಂದೆಂದಿಗೂ ಮರೆಯದೇ ಇರಬೇಕಾದದ್ದು ಇಂದಿನ ಜರೂರತ್ತು. ಮತ್ತು ಇಂದು ನಮ್ಮ ನಗರ ಪ್ರದೇಶಗಳಲ್ಲಿ ನಿರ್ಮಿತವಾಗುತ್ತಿರುವ ವೃದ್ಧಾಶ್ರಮಗಳ ಬೆಳವಣಿಗೆಯನ್ನು ತಗ್ಗಿಸುವ ಪ್ರಯತ್ನವನ್ನು ಈ ದಿನಗಳು ಮಾಡಲಿ.

ಯುವ ಪೀಳಿಗೆಗಳಲ್ಲಿ ತಂದೆ ತಾಯಿಯರ ಬಗ್ಗೆ ಇರುವ ಪ್ರೀತಿಯ ಜೇನು ನೂರ್ಮಡಿಯಾಗಲೆಂದು ನಾನು ಹಾರೈಸುವೇ...

ನನ್ನ ಸ್ವೀಟ್ ತೀರ್ಥ ರೂಪ ತಂದೆಗೆ ನಿಮ್ಮ ಪ್ರೀತಿಯ ಮಗಳು ಮಾಡುವ ಪ್ರಣಾಮಗಳು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ