ಗುರುವಾರ, ಜೂನ್ 2, 2011

ನಾನು ಆದರ್ಶ ಪುರುಷನಾಗದ ಹೊರತು, ಆದರ್ಶ ಸ್ತ್ರೀ ಎಲ್ಲಿಂದ ಬರುತ್ತಾಳೆ?





ಸ್ತ್ರೀ!

ಆಕೆಗೊಂದು ದೇಹವಿದೆ: ಅದಕ್ಕೆ ವ್ಯಾಯಾಮ ಬೇಕು.
ಆಕೆಗೊಂದು ಮಿದುಳಿದೆ: ಅದಕ್ಕೆ ಙ್ಞಾನ ಬೇಕು.
ಆಕೆಗೊಂದು ಹೃದಯವಿದೆ: ಅದಕ್ಕೆ ಅನುಭೊತಿ ಬೇಕು.



ಇದು ರವಿಬೆಳೆಗೆರೆಯವರ ಅನುವಾದಿತ ವಿಲಕ್ಷಣ ಸಾಹಿತಿ, ದೊಡ್ಡ ಚಿಂತಕ "ಚಲಂ" ರವರ ಆತ್ಮ ಚರಿತ್ರೆಯ ನೋಟ್ಸ್. ಯಾಕೋ ಇವುಗಳನ್ನು ನೋಟ್ ಮಾಡಿಕೊಳ್ಳಬೇಕು ಅನಿಸಿತು. ಎರಡನೇಯ ಭಾರಿ ಓದುವಂತೆ ಮಾಡಿದ ಮೋಡಿ ಪುಸ್ತಕ. ಹಾಗೆಯೇ ಕೆಲವೊಂದು ಪುಸ್ತಕಗಳು ಪುನಃ ಪುನಃ ಮನಸ್ಸಿಗೆ ಹತ್ತಿರವಾಗುತ್ತವೆ.

ರವಿಬೆಳೆಗೆಯವರು ತಮ್ಮ ಮುನ್ನುಡಿಯಲ್ಲಿಯೇ ಹೇಳಿಬಿಟ್ಟಿದ್ದಾರೆ. ಈ ವ್ಯಕ್ತಿಯನ್ನು ಅನುಕರಣೆ ಮಾಡುತ್ತೇವೆ ಎಂದು ಎಂದಿಗೂ ಹೋಗಬೇಡಿ. ಸುಮ್ಮನೇ ಓದಬೇಕಷ್ಟೇ. ಹಾಗೆ ಅನುಕರಣೆಯನ್ನು ಮಾಡಲು ನಮ್ಮ ನಿಮ್ಮಂಥ ಸಾಮಾನ್ಯ ಮನುಷ್ಯನಿಗೆ ಎಂದಿಗೂ ಸಾಧ್ಯವಿಲ್ಲ ಬಿಡಿ! ಇಗೋ ಬದುಕಿದ್ದಾರಾ ಅಂಥ ನಮ್ಮ ಮನಸ್ಸಿನಲ್ಲಿ ಕೇವಲ ಆಶ್ಚರ್ಯವನ್ನುಂಟು ಮಾಡುತ್ತಾರೆ ಸಾಹಿತಿ ಚಲಂ.

ಅನುವಾದ ಎನ್ನುವಂತೆಯೇ ಇಲ್ಲ. ಮೊಲ ಕೃತಿಯೇನೋ ಅನ್ನುವ ರೀತಿಯಲ್ಲಿ ರವಿಯವರ ಬರವಣಿಗೆ ಮನಸ್ಸಿಗೆ ಹಿತವಾಗಿದೆ.

ಹಾಗೆಯೇ ನನಗೆ ಯಾಕೋ ಈ ಪುಸ್ತಕವನ್ನು ಓದಿದಾಗ ಒಂದು ಕಡೆ ಈ ಸಾಲುಗಳನ್ನು ಎತ್ತಿಟ್ಟುಕೊಳ್ಳೋಣ ಎನಿಸಿತು. ಅದರ ಯಥಾವತ್ ಪುನಃ ಪುನಃ ನೆನಪಿಸಿಕೊಳ್ಳಲು.

"ಈ ಉದಾತ್ತ ಪುರುಷರಿದ್ದಾರಲ್ಲ ಚಲಂ? ಎಷ್ಟೇ ಉತ್ತಮರಾದರೊ ಹೆಣ್ಣು ಹಣದ ಗೀಳು ಅವರನ್ನು ಬಿಡದು". - ಪುಟ ೩೦

"ಅಸಲಿಗೆ ಆನಂದ ಎಂದರೇ ಏನು? ಏನೂ ಇಲ್ಲದೆ ಹೋಗುವುದೇ ಆನಂದವಲ್ಲ ತಿಳಿ. ಸಂತೋಷ ಬಂತು ಅಂದುಕೊಂಡರೆ, ಅದು ಆನಂದದೊಳಗಿನ ರೂಪವೇ. ಚಿಕ್ಕ ಮಕ್ಕಳು ತುಂಬ ಖುಷಿಯಾಗಿ ದಿನ ಕಳೆಯುತ್ತಾರೆ, ಅದರಲ್ಲೂ ಬಡವರ ಮಕ್ಕಳು, ಎಲೆ, ಕಲ್ಲು, ಮಣ್ಣು, ಬಳೆಯ ಚೂರು - ಹೀಗೆ ಏನು ಸಿಕ್ಕರು ಆದರೊಂದಿಗೆ ಆಡುತ್ತಾ ಕಾಲ ಕಳೆಯುತ್ತಾರೆ. ಈಡನ್ ಗಾರ್ಡನ್ ನಲ್ಲಿ ಆಯಡಮ್ ಮತ್ತು ಈವ್ ಹಾಗೆಯೇ ಕಾಲ ಕಳೆದಿರಬೇಕು. ಫಾರ್ ಬಿಡನ್ ಆಫಲ್ ತಿನ್ನುವ ತನಕ" -ಪುಟ ೩೫

"ಏನೋ ನಿರ್ಣಹಿಸಿಕೊಂಡು ಏನೋ ಮಾಡುತ್ತೇವೆ ಅಂದುಕೊಳ್ಳುತ್ತೇವೆ. ಆದರೆ ನಿರ್ಣಯಿಸಿವವವರು ನಾವಲ್ಲ" - ಪುಟ ೪೧

"ಒಬ್ಬೊಬ್ಬರು ಒಂದೊಂದು ಗಟ್ಟಿಯಾದ ಇನ್ ಕ್ಲಿನೇಷನೊಂದಿಗೆ ಹುಟ್ಟುತ್ತಾರೆ. ಅದು ಧರ್ಮವೇನಾ ಅಂತ ನಿರ್ಧರಿಸಿಕೊಳ್ಳಲು ಎಷ್ಟೋ ರೀತಿಯಾಗಿ ಪ್ರಯತ್ನಿಸುತ್ತಾರೆ. ಆದರೆ ಒಂದೊಂದು ಕಾಂಕ್ಷೆ ಏನು ಮಾಡಿದರೂ ಬೆನ್ನು ಬಿಡುವುದಿಲ್ಲ. ಇದು ಎಷ್ಟು ಜನ್ಮಗಳಿಂದ ತಂದುಕೊಂಡದ್ದೋ ಅನ್ನಿಸಿಬಿಡುತ್ತದೆ. ಕೊನೆಗೆ ಆ ಮನುಷ್ಯನೊಂದಿಗೇ ಅದು ಭಸ್ಮವಾಗಬೇಕೆನೋ? ಅಥವಾ ಆಗಲೂ ಉಳಿದು ಹೋಗುತ್ತದಾ?" - ಪುಟ ೪೭

"ಮನುಷ್ಯನ ದುಃಖ ಆತನ ಪ್ರೇಮದ ತೀವ್ರತೆಯ ಮೇಲೆ ಆಧಾರ ಪಟ್ಟಿರುತ್ತದೆ" - ಪುಟ ೮೦

"ನಾನು ಅನ್ನೋದು ಹೋಗದ ಹೊರತು ಙ್ಞಾನೋದಯವಿಲ್ಲ ಅಂತಾರೆ ಭಗವಾನ್" ಅಂದೆ "ನಾನು" ಅನ್ನುವುದು ಎಲ್ಲಿ ಮಾಯವಾಯಿತು? ಚಲಂ ಮನಸ್ಸಿನಲ್ಲಿನ ಸ್ತ್ರಿಯಲ್ಲಿ, ಮಕ್ಕಳಲ್ಲಿ ಅದು ಉಳಿದೇ ಇದೆ. -ಪುಟ ೯೬

ಮನುಷ್ಯನಲ್ಲಿ "ನಾನು" ಅನ್ನೋದು ಮೊದಲನೆಯದು ಅಂತಾರೆ ಭಗವಾನ್. ಅದರಿಂದಲೇ ಉಳಿದೆಲ್ಲ ಆಲೋಚನೆಗಳು ಹುಟ್ಟಿಕೊಂಡವು. "ನಾನು" ಅನ್ನುವುದರಿಂದಲೇ ಅಙ್ಞಾನ, ಪಾತಕ, ದುರ್ಮಾರ್ಗ, ಮಮತೆಗಳು ಎಲ್ಲ ಹುಟ್ಟಿಕೊಳ್ಳುತ್ತವೆ ಅನ್ನುತ್ತಾರೆ. -ಪುಟ ೧೧೨

"ಎಂಥ ಸುಖೀ ಸಂಸಾರದಲ್ಲಿ ಕೊಡ ಒಬ್ಬ ಹೆಣ್ಣು ತನಗೇ ಅರ್ಥವಾಗದ ಯಾತನೆಗಳಲ್ಲಿ ಸಿಕ್ಕುಗಳಲ್ಲಿ ಸಿಕ್ಕಿಕೊಂಡಿರುತ್ತಾಳೆ" - ಪುಟ ೧೪೫

"ನಾನು ಆದರ್ಶ ಪುರುಷನಾಗದ ಹೊರತು, ಆದರ್ಶ ಸ್ತ್ರೀ ಎಲ್ಲಿಂದ ಬರುತ್ತಾಳೆ?" - ಪುಟ ೧೫೦

"ಮನುಷ್ಯನಲ್ಲಿ ಸ್ನೇಹ, ದಯೆ, ಏಕೋಭಾವ - ಇವೆಲ್ಲವೂ ಸಂಸ್ಕಾರವೇ" - ಪುಟ ೧೬೬

"ಏನು ಮಾಡಬೇಕು ಮತ್ತು ಏನಾಗುತ್ತಾರೆ ಅನ್ನುವುದು ಸಂಸ್ಕಾರ. ಏನು ಮಾಡಬೇಕು ಅಂತ ಹೇಳಿ ಕೊಡುವುದು ಓದು" - ಪುಟ ೧೬೭

"ಬದುಕೆಂದರೆ ಗೊತ್ತಿಲ್ಲದ ಗುರಿಯಿಲ್ಲದ ಹಾದಿಯಲ್ಲಿ ನಮಗೆ ಬೇಕಾದ್ದನ್ನು ಹುಡುಕುತ್ತಾ ಹೋಗುವ ನಿರಂತರ ಪಯಣವಾ? ಹಾಗೆ ಸಾಗುತ್ತಾ ಸಾಗುತ್ತಾ ಸಿಕ್ಕಿದ್ದನ್ನೇ ನಮಗೆ ಬೇಕಾದದ್ದು ಅಂದುಕೊಂಡು ಬಿಡುತ್ತೇವಾ? ಪ್ರೀತಿಯಲ್ಲೂ ಅಷ್ಟೇನಾ? ನಾವು ಪ್ರೀತಿಸಿದವರು ಸಿಕ್ಕದೇ ಹೋದಾಗ, ಸಿಕ್ಕವರನ್ನೇ ಪ್ರೀತಿಸುವುದು ರಾಜಿಯಾ? ಅಸಹಾಯಕತೆಯಾ? ಅನಿವಾರ್ಯ ಕರ್ಮವಾ? ವಿಧಿಯಾ? ಅಥವಾ ಬದುಕಿನ ವಿಲಕ್ಷಣ ವರ್ತನೆಗಳಲ್ಲಿ ಅದೂ ಒಂದಾ?" - ಪುಟ ೧೮೭

ಅನುಭವಿಸುವುದು ಅಂದರೆ ಅದು ಔನ್ನತ್ಯವಿಲ್ಲದ್ದು, ಮನುಷ್ಯನಲ್ಲಿ ಅಳವಿಲ್ಲದ್ದು. ಎಂಥ ಅದ್ಭುತ ಅನುಭವಗಳು ಮೇಲ್ಮೇಲಿನಿಂದ ಬಂದರೂ ಅವನಿಗೆ ಅವು ಏನನ್ನೂ ಕೊಡಲಾರವು. ಮೆಂಟಲ್ ಸರ್ಪೇಸ್ ನಿಂದ ಜಾರಿ ಹೋಗುತ್ತವೆ. "ಅಯ್ಯೋ ನತದೃಷ್ಟಾ" ಅಂತ ನಕ್ಕು ಹೊರಟು ಹೋಗುತ್ತವೆ. ಸ್ತ್ರೀ ವಿಷಯದಲ್ಲಂತೂ ಇದು ಮತ್ತು ಸತ್ಯ. ಅವಳು ಬೇಕು, ಅನುಭವಿಸಬೇಕು ಅಂದುಕೊಂಡರೆ, ಆ ಕಾಂಕ್ಷೆಯಿಂದಾಗಿಯೇ ಅರ್ಧ ಸಂತೋಷ, ಹಿರಿಮೆ ಸತ್ತು ಹೋಗುತ್ತದೆ. ಅದ್ದರಿಂದ "ಅನುಭವಿಸು" ಎಂಬುದರಲ್ಲಿ ಅರ್ಥವಿಲ್ಲ. - ಪುಟ ೧೦೪


ಆಧಾರ ಗ್ರಂಥ: ಚಲಂ ರವಿಬೆಳೆಗೆರೆ. ಭಾವನ ಪ್ರಕಾಶನ, ಬೆಂಗಳೂರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ