ಶನಿವಾರ, ಜೂನ್ 18, 2011

ನೆನಪುಗಳ ಮೇಲಿನ ನಿಲ್ಲದ ಪಯಣ

ನಮ್ಮ ಬಾಲ್ಯದ ದಿನಗಳನ್ನು ನೆನಸಿಕೊಂಡರೆ ಇಂದು ರೋಮಾಂಚನವಾಗುತ್ತದೆ. ಅಲ್ಲಿ ಹಲವು ಇಲ್ಲದಿದ್ದರು ಮಹಾನ್ ಸುಂದರ ಕ್ಷಣಗಳಾಗಿದ್ದವು ಎಂದು ಇಂದು ಅನಿಸುತ್ತಿದೆ. ಅದೇ ಬದುಕು ಅಲ್ಲವಾ ಕಳೆದು ಹೋದ ದಿನಗಳನ್ನು ಇಂದು ಯೋಚಿಸುತ್ತಾ.. ಚಿಂತಿಸುತ್ತಾ.. ಅಂದು ಹಾಗೆ ಇದ್ದೆವು ಇಂದು ಹೀಗೆ ಇರುವೆವು ಎಂದುಕೊಳ್ಳುತ್ತಾ..ಪುನಃ ಪುನಃ ಅದರ ಮೆಲುಕನ್ನು ನಮ್ಮ ಕೊನೆಯ ದಿನಗಳವರೆಗೂ ಯಾವಾಗಲೂ ವಾಸ್ತವಕಕ್ಕೆ ಎಳೆದುಕೊಳ್ಳುತ್ತಿರುತ್ತಲೇ ಇರುತ್ತೇವೆ.

ಅಂದಿನ ನಮ್ಮ ಬಾಲ್ಯದ ದಿನಗಳನ್ನು ನಮ್ಮ ಇಂದಿನ ಜಂಜಾಟದ ಜವಾಬ್ದಾರಿಯ ದಿನಗಳಿಗೆ ಹೋಲಿಕೆ ಮಾಡಿಕೊಂಡು ಹಳೆಯ ದಿನಗಳೇ ಚೆನ್ನಾಗಿದ್ದವು ಕಣಪ್ಪಾ ಎಂದುಕೊಳ್ಳುತ್ತೇವೆ.

ಅಂದು ಹೀಗೆ ನಾವುಗಳು ನಮಗೆ ಈಗ ಸಿಗುತ್ತಿರುವ ಸ್ವಾತಂತ್ರ್ಯ ಇದ್ದಿರಲಿಲ್ಲ. ನಾವಿನ್ನೂ ಚಿಕ್ಕವರು ಎಂದುಕೊಂಡು.. ಯಾವ ಮನದ ಆಸೆಯನ್ನಾದರೂ ಹಿಡೇರಿಸಿಕೊಳ್ಳಬೇಕಾದರೂ ನಮ್ಮ ಹೆತ್ತವರ ಕಡೆ ಮುಖ ಮಾಡಬೇಕಾದ ದಿನಗಳು ಅವುಗಳು. ನಾವೇನನ್ನು ಸ್ವಾತಂತ್ರ್ಯವಾಗಿ ನಿರ್ಧರಿಸಲಾರದಂತಹ ದಿನಗಳವು. ಒಂದು ಸಿಕ್ಕರೇ ಇನ್ನೊಂದು ಸಿಗಲಾರದಂತಹ ಬರಗಾಲದ ದಿನಗಳವು ಅದರೋ.. ಆ ಕಷ್ಟ ಕಾರ್ಪಣ್ಯ ದಿನಗಳು ಇಂದು ಈ ಸ್ಥಿತಿಯಲ್ಲೂ ಸಹ ಹೆಚ್ಚು ಸಹನೀಯವಾಗುತ್ತವೆ ಯಾಕೆ?

ಇಂದು ನಾವುಗಳೇ ನಮ್ಮ ಕಾಲಮೇಲೆ ನಾವುಗಳೂ ನಿಂತಿದ್ದೇವೆ ಎಂಬ ಬೀಗು. ಏನಾನ್ನಾದರೂ ಯಾವ ಸಮಯದಲ್ಲಾದರೂ ಗಳಿಸಿಕೊಳ್ಳುವ ಶಕ್ತಿಯನ್ನು ಸಂಪಾದಿಸಿದ್ದೇವೆ. ಯಾವುದಕ್ಕೂ ಕೂರತೆ ಎಂಬುದು ಎಳ್ಳಷ್ಟು ಇಲ್ಲ. ಆದರೋ ಯಾಕೆ ಎಲ್ಲಾರೂ ಕಳೆದ ಆ ದಿನಗಳೇ ದಿ ಬೇಸ್ಟ್ ಎಂದುಕೊಳ್ಳುವುದು.

ಅಂದು ನಮ್ಮ ದಿನಗಳನ್ನು ಹಾಗೆಯೇ ಹೊಸ ಆಸೆಯಲ್ಲಿ ಹೊಸ ಭರವಸೆಯಲ್ಲಿ ಕಳೆದು ಬಂದಿರುವೆವು. ಆಗ ಯಾವುದಕ್ಕೆ ನಾವುಗಳು ಹಂಬಲಿಸಿದ್ದೇವೋ ಅವುಗಳನ್ನು ಮುಂದೆ ನಾನಂತೊ ಒಂದು ದಿನ ಗಳಿಸಲೇ ಬೇಕು. ಹೀಗೆ ಹೀಗೆ ಬಾಳಬೇಕು ಎಂಬ ಕನಸನ್ನು ಕಂಡ ಫಲವೇ ಇಂದಿನ ಬದುಕಾಗಿರಬೇಕಲ್ಲವಾ?

ಅಂದಿನ ಆ ತುಡಿತ ನಮ್ಮ ಇಂದಿನ ಈ ಸ್ಥಿತಿಗೆ ನಮ್ಮನ್ನು ತಂದು ನಿಲ್ಲಿಸಿರಬಹುದಲ್ಲಾ.. ಅಂದಿನ ಆ ಅಪಮಾನ, ನೋವು, ಕಷ್ಟ, ಆರ್ಥಿಕತೆ, ಸ್ಥಿತಿಯೇ ಇಂದಿನ ಮೆಟ್ಟಿಲಾಗಿರಬೇಕಲ್ಲವಾ? ಆದರೋ ಯಾಕೆ ನಾವುಗಳು ಅಂದಿನ ಆ ನಿಕೃಷ್ಟ ದಿನಗಳನ್ನೇ ಹೆಚ್ಚು ಆಪ್ಯಾಯಮಾನವಾಗಿ ಕಾಣುತ್ತೇವೆ.

ಅಂದು ಕಷ್ಟ ಒಂದು ಇತ್ತು. ಅಂದು ದುಡ್ಡು ಮಾತ್ರ ಇರಲಿಲ್ಲ. ಅಂದು ಈ ಆಸ್ತಿ ಇರಲಿಲ್ಲ. ಆದರೆ ಈಗ ನೋಡಿ! ಎಂಬ ಈ ಒಂದು ಮಾತು ಈಗ ನಮ್ಮ ನಿಮ್ಮೇಲ್ಲಾರಲ್ಲಿ ಬರಲು ಕಾರಣವಾವುದಾದರೂ ಏನು ಸಾರ್?

ನಮ್ಮ ಬದುಕು ಕೇವಲ ಹೀಗೇನಾ! ಯಾವ ಘಟ್ಟದಲ್ಲಾದರೂ ಇರಲಿ.. ಯಾವುದಾದರೂ ಸ್ಥಿತಿಯಲ್ಲಿರಲಿ.. ಎಂದಿಗೂ ನಮ್ಮಗಳಿಗೆ ಇದೇ ಬದುಕು ಚೆನ್ನಾಗಿದೆ, ಸಂತೋಷವಾಗಿದ್ದೇವೆ.. ಎಂದು ನಾವುಗಳು ನಿರ್ಧರಿಸಲು ಸಾಧ್ಯವಿಲ್ಲವೇ ಇಲ್ಲವೆನಿಸುತ್ತದೆ. ಇಂದು ಇರುವ ದಿನಗಳನ್ನು ನೆಮ್ಮದಿಯಾಗಿ ಕಳೆಯಲು ಹಳೆಯ ದಿನಗಳನ್ನು ನೆನಪಿಕೊಳ್ಳುವುದು ಒಂದು ಮಾನವ ಸಹಜ ಅಭ್ಯಾಸವೇನೋ ಎನಿಸುತ್ತದೆ.

ನಾನು ಇರುವ ಜಾಗ,ಸ್ಥಿತಿ,ಸಂಬಂಧ,ನೆರೆಹೊರೆ,ಸ್ನೇಹ.. ಹೀಗೆ ಪ್ರತಿಯೊಂದನ್ನು ಹಳೆಯದರ ಜೊತೆಯಲ್ಲಿ ಗುಣಕಾರ, ಭಾಗಕಾರ ಮಾಡಿಯೇ ನಾವುಗಳು ಬದುಕುವಂತಾಗುತ್ತದೆ ಯಾಕೆ?

ಹಾಗೆಯೇ ಯಾವುದೇ ಯಶಸ್ವಿ ವ್ಯಕ್ತಿಯಾಗಲಿ. ಯಾವುದೇ ದೊಡ್ಡ, ಸಾಮಾನ್ಯ ಮನುಷ್ಯನಾಗಿರಲಿ. ಅವನ ಗತಕಾಲದ ದಿನಗಳನ್ನು ಅವನು ಇಂದಿನ ತನ್ನ ಬದುಕಿನೊಂದಿಗೆ ಗುರುತಿಸಿಕೊಳ್ಳುವುದು ಮತ್ತು ಅವುಗಳ ಪುನರ ಸಂಮಿಲನ ಮಾಡಿಕೊಳ್ಳುವುದು ಆಗಾಗ್ಗೆ ನಡೆಯುತ್ತಿರುವ ಅನುಸಂಧಾನವೇ ಸರಿ.

ನನಗೆ ಅನಿಸುತ್ತದೆ. ಇಂದಿನ ಮುಂದಿನ ನಮ್ಮ ಬಾಳ ಯಶಸ್ವಿ ನಿರ್ವಹಣೆಗೆ ಅಂದು ನಡೆದಾಡಿದ ಬದುಕಿನ ದಾರಿಗಳು ದಾರಿದೀಪವಾಗುತ್ತಿರಬೇಕು. ಅವುಗಳಲ್ಲಿ ನಾವುಗಳು ಕಲಿತ ಒಂದು ಪಾಠ, ಅವುಗಳಿಂದ ನಾವುಗಳು ಗಳಿಸಿದ ಒಂದು ನೀತಿ, ಅವುಗಳಿಂದ ನಾವುಗಳು ಪಡೆದ ಮಾನವ ಸಂಬಂಧಗಳು ನಮ್ಮನ್ನು ನಾವುಗಳು ಹೆಚ್ಚು ಹತ್ತಿರದಿಂದ ನೋಡಿಕೊಳ್ಳಲು ಸಹಕಾರಿಯಾಗುತ್ತವೆ ಅನಿಸುತ್ತದೆ. ಅದ್ದರಿಂದಲೇ ಆ ದಿನಗಳು ಹೆಚ್ಚು ಹೆಚ್ಚು ಹತ್ತಿರವಾಗಿ ಕಾಣುವುದು. ಮತ್ತು ಅವುಗಳು ನಮ್ಮವೇ ದಿನಗಳಲ್ಲವೇ ಅದ್ದರಿಂದ ಅವುಗಳು ನಮಗೆ ಮಾತ್ರ ಸೀಮಿತವಾದದ್ದವು. ನಾವುಗಳಲ್ಲದೇ ಅವುಗಳನ್ನು ಯಾರು ಪುನಃ ಕೇಳಬೇಕು.

ಇತಿಹಾಸ ಅಂದರೇ ಅದೇ ಅಲ್ಲವಾ.. ಚರಿತ್ರೆ ಎಂಬುದು ಪ್ರತಿಯೊಂದಕ್ಕೂ ಇರಲೇ ಬೇಕು. ಚರಿತ್ರೆ ಇಲ್ಲದಿದ್ದರೆ ವರ್ತಮಾನಕ್ಕೆ ಎಲ್ಲಿಯ ಬೆಲೆ? ವರ್ತಮಾನದ ವರ್ಚಸ್ಸು ಇತಿಹಾಸದಲ್ಲಿರುತ್ತದೆ. ಅದೇ ಇಂದಿನ ನಮ್ಮ ಬೆಳಗು. ಆ ಬೆಳಗು ಯಾವಾಗಲೂ ಜೀವ ಜ್ಯೋತಿಯೇ ಸರಿ!

ನಮ್ಮ ನಮ್ಮ ಚಿಕ್ಕ ಚಿಕ್ಕ ಒಂದೊಂದು ಕಳೆದ ಕ್ಷಣಗಳ ಹಳೆಯ ಮೋಟೆಯ ನೆನಪುಗಳ ಮೇಲಿನ ನಿಲ್ಲದ ಪಯಣ ಎಂದಿಗೂ ನಿಲ್ಲದೇ ನಿರಂತರ ಸಾಗುವ ಹಸಿರು ಉದ್ಯಾನ ಎಕ್ಸ್ ಪ್ರೇಸ್ ಊಗಿಬಂಡಿಯೇ ಸರಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ