ಗುರುವಾರ, ಡಿಸೆಂಬರ್ 16, 2010

ಆದರ್ಶ ಹೇಳುವುದಕ್ಕಾ?

ನಾವೊಂದು ಎಣಿಸಿದರೇ ದೈವವೊಂದು ಬಗೆಯುವುದು ಎಂಬುದು ಒಂದು ನಾಣ್ಣುಡಿ.


ನಾವುಗಳು ನಮ್ಮ ಜೊತೆಯಿರುವವರ ಬಗ್ಗೆ, ನಮ್ಮ ಸ್ನೇಹಿತರ ಬಗ್ಗೆ, ನಮ್ಮ ಮನೆಯ ತಂದೆ ತಾಯಿಗಳ ಬಗ್ಗೆ, ಮನೆಯ ಹಿರಿಯರ ಬಗ್ಗೆ, ನಮ್ಮ ಬಾಲ್ಯದ ಗುರುಗಳು ಬಗ್ಗೆ, ನಮ್ಮ ಸಂಬಂಧಿಕರುಗಳ ಬಗ್ಗೆ, ಕೊನೆಗೆ ನಮ್ಮ ರಾಜ್ಯದ ಮುಖ್ಯಮಂತ್ರಿ, ಪ್ರಧಾನಿಯ,ಮಂತ್ರಿಗಳು ಬಗ್ಗೆ, ಮನ ಮೆಚ್ಚಿದ ಸಿನಿಮಾ ನಟ ನಟಿಯ ಬಗ್ಗೆ ಒಂದು ರೀತಿಯಾದ ಯಾರು ಪ್ರಶ್ನೆ ಮಾಡದ ರೀತಿಯ ಗೌರವವದ ಸೌಧವನ್ನು ಕಟ್ಟಿಕೊಂಡು ಅಲ್ಲಿಯೇ ಅವರನ್ನು ಇಟ್ಟು ಹೆಮ್ಮೆ ಪಡುತ್ತಿರುತ್ತೇವೆ.


ಅವರುಗಳು ಏನನ್ನಾದರನ್ನು ಸಾಧಿಸಿದರೇ ನಮ್ಮಗಳಿಗೆ ನಾವೇ ಆ ಸ್ಥಾನವನ್ನು ಪಡೆದಷ್ಟು ಸಂತೋಷವನ್ನುಪಡುತ್ತೇವೆ. ಅವರ ಒಂದು ಒಂದು ಹೆಜ್ಜೆಯನ್ನು ಎಚ್ಚರದಿಂದ ಗಮನಿಸುತ್ತಾ ಅವರುಗಳೂ ಯಾವತ್ತಿದ್ದರೂ ನಮ್ಮವರೇ ಎಂಬ ಭಾವನೆಯ ಜನನಕ್ಕೆ ಕಾರಣ ಸಮಾಜದಲ್ಲಿ ಅವರುಗಳು ಗಳಿಸಿದ ಸ್ಥಾನ ಮತ್ತು ನೆರೆಹೊರೆಯರುವರು ಅವರನ್ನು ನಡೆಸಿಕೊಳ್ಳುವ ರೀತಿ, ಅವರ ಮಾತು, ಪ್ರೀತಿ, ನಡವಳಿಕೆ, ನಮ್ಮ ಗಳ ಬಗ್ಗೆ ಅವರಿಗೆ ಇರುವ ಕಾಳಜಿ ಇತ್ಯಾದಿ ವಿಷಯಗಳಿಂದ ಆ ಆಯ ವಯಸ್ಸಿನಲ್ಲಿ ಲೆಕ್ಕವಿಲ್ಲದಷ್ಟು ಪ್ರೀತಿ ಪಾತ್ರರು ನಮ್ಮ ಮನಸ್ಸಿನಲ್ಲಿ ಕೂರುತ್ತಾರೆ. ಮತ್ತು ನಮ್ಮ ಹೃದಯವನ್ನು ಆಕ್ರಮಿಸಿಕೊಳ್ಳುತ್ತಾರೆ. ಅದೇಯಲ್ಲವಾ ಜೀವನದ ಜೀವಿಗಳ ಮರ್ಮದ ನಿತ್ಯ ಸಂತೆ.


ನಾವುಗಳು ಈಗ ಏನಾದರೂ ಹೀಗೆ ಇದ್ದೇವೆ ಎಂದರೇ ಈ ಮೇಲೆ ಹೇಳಿದ ನಮ್ಮ ಹತ್ತಿರದವರ ನಮ್ಮ ಮನ ಗೆದ್ದವರ ಅಚ್ಚಿನ ಪ್ರತಿಯೇ ಸರಿ. ಅವರ ಒಂದೊಂದು ಗುಣ, ವ್ಯಕ್ತಿತ್ವ, ನುಡಿ ನಮ್ಮ ಗುಣಾವಗುಣಗಳನ್ನು ನಿರ್ಧರಿಸಿರುತ್ತದೆ. ಅದನ್ನು ಬಿಟ್ಟು ಬೇರೆಯಾಗಲೂ ಸಾಧ್ಯವಿಲ್ಲ. ಬಾಲ್ಯದಂತೂ ನಮ್ಮ ತಂದೆ ತಾಯಿಯರ ಪಡಿಯಚ್ಚುಗುಳಾಗಿರುತ್ತೇವೆ. ಅದಕ್ಕೆ ಹಿರಿಯ ಅಜ್ಜ ಅಜ್ಜಿಗಳು "ಹೇ ನಿನ್ನ ಮಗಳು ಎಲ್ಲಾ ನಿನ್ನಂತೇ ಕಣೇ!" ಎಂದು ಛೇಡಿಸುತ್ತಿರುತ್ತಾರೆ.



ಆ ಸಮಯದಲ್ಲಿ ಅದು ಸರಿಯಾದುದ್ದೇ ಯಾಕೆಂದರೆ ನಾವುಗಳು ಈ ಹೊರಗಿನ ಜಗತ್ತಿನ ಕಡೆಗೆ ನಮ್ಮ ಗಮನವಿರುವುದಿಲ್ಲ. ಏನಾದರೂ ಮನೆ ಮನೆಯಲ್ಲಿರುವವರ ಜೊತೆಯೆ ನಮ್ಮ ಪ್ರಪಂಚವಾಗಿರುತ್ತದೆ. ಯಾರಾದರೂ ಏನಾದರೂ ಮಾಡಿದರೇ ಗಮನವಿಟ್ಟು ಅವರಂತೆಯೇ ಅನುಸರಿಸಲೂ ತೊಡಗುತ್ತೇವೆ. ಕೆಟ್ಟದ್ದು ಯಾವುದು, ಒಳ್ಳೆಯದ್ದು ಯಾವುದು ಎಂಬುದನ್ನು ತಿಳಿಯುವ ವಯಸ್ಸು ಅದು ಆಗಿರುವುದಿಲ್ಲ. ಅಷ್ಟೊಂದು ಮುಗ್ಧ ಮರಿಗಳು. ಅದ್ದರಿಂದ ಹಿರಿಯರುಗಳು ನಮ್ಮ ಮೇಲೆ ಒಂದು ಕಣ್ಣು ಇಟ್ಟಿರುತ್ತಾರೆ. ಅದು ಅವಶ್ಯ.


ಹೀಗೆ ನಮ್ಮ ಅನುಕರಣೆಯ ಜಾಡು ಕೊಂಚ ಕೊಂಚ ವಿಸ್ತರಿಸುತ್ತಾ ಸಂಬಂಧಿಕರುಗಳನ್ನು, ಸ್ನೇಹಿತರನ್ನು ಪಡೆಯುತ್ತಾ... ನಮ್ಮನ್ನು ಗಮನಿಸುವವರನ್ನು, ನಮ್ಮ ಭಾವನೆಗಳಿಗೆ ಸ್ಪಂಧಿಸುವವರನ್ನು ನಮ್ಮ ಹಾಗೆಯೇ ಯೋಚಿಸುವವರನ್ನು, ನಮಗೆ ಪಾಸೀಟಿವ್ ಅನಿಸಿದವರನ್ನು ನಮ್ಮ ಮನಸ್ಸಿನಲ್ಲಿ ಸ್ಥಾಪಿಸಿಕೊಳ್ಳುತ್ತಾ ಹೋಗುತ್ತೇವೆ. ಆ ಸ್ಥಾಪನೆಯ ಸಂಖ್ಯೆ ಸಾಕಷ್ಟು ಇರುತ್ತದೆ..
ಇಲ್ಲಿ ಗಮನಿಸಬೇಕು. ಯಾರೇ ಆಗಲಿ ತನಗೆ ಅನಿಸಿದಂತೆ ಆ ವ್ಯಕ್ತಿಗಳೆಲ್ಲ ಅವನ/ಅವಳ ಮಟ್ಟಿಗೆ ತುಂಬ ಒಳ್ಳೆಯವರು ಮತ್ತು ಪ್ರಶ್ನಾತೀತರು. ಯಾಕೆಂದರೇ ಅವನ ನೆಚ್ಚೆಗೆ ಮತ್ತು ಅವನು ಏನನ್ನು ಅಂದುಕೊಂಡು ಪಯಣಿಸುತ್ತಾನೋ ಅದಕ್ಕೇ ಸ್ಪಂದಿಸುವವರಾಗಿರುತ್ತಾರೆ. ಇಲ್ಲಿ ಗಮನಿಸಬೇಕಾದ್ದು. ಈ ವ್ಯಕ್ತಿ ಹೇಗೆ ಎಂಬುದು. ಅವನಿಗೆ ಬೇಡವಾದದ್ದು ಬೇರೊಬ್ಬರಿಗೆ ಬೇಕಾಗಿರಬಹುದು. ಇಲ್ಲಿ ಒಳ್ಳೆಯದು ಕೆಟ್ಟದ್ದು ಎಂಬುವ ಸವಾಲೇ ಇಲ್ಲ.


ತಾನು ಅವರಂತೆಯೇ ಆಗಬೇಕು ಎಂಥಲೊ ಅವರನ್ನು ಅನುಸರಿಸುತ್ತಿರುತ್ತಾನೆ. ಅವರನ್ನು ತನ್ನ ಆದರ್ಶದ ಮನೆಯಲ್ಲಿ ಇರಿಸಿಕೊಂಡಿರುತ್ತಾನೆ. ಹೀಗೆ ಇರುವವರುಗಳ ಪಟ್ಟಿ ತಾನು ಅವರೊಡನೆ ನಿತ್ಯ ಸಂಪರ್ಕದಲ್ಲಿ ಇರಲೇ ಬೇಕಾದ ಅವಶ್ಯಕತೆ ಇಲ್ಲ. ಅವರನ್ನು ಎಲ್ಲಾದರೂ ಬೇಟಿ ಮಾಡಿರಬಹುದು. ತನಗೆ ಇಷ್ಟವಾದ ಚಿತ್ರದಲ್ಲಿ ನಟಿಸಿರುವ ನಟ/ನಟಿಯಿರಬಹುದು. ತಾನು ಓದಿದದ ಉತ್ತಮ ಪುಸ್ತಕದ ಲೇಖಕನಾಗಿರಬಹುದು, ತನ್ನ ಜೊತೆಗಾರ/ಗಾರ್ತಿಯಿರಬಹುದು.... ಇವರುಗಳ ವ್ಯಕ್ತಿತ್ವದ ಕೆಲವು ಅಂಶಗಳು ಇವನನ್ನು ಇವನ ಬದುಕಿಗೆ ಒಂದು ದಿಕ್ಕು ತೋರಿಸರಬಹುದು ಅಥಾವ ಅವನನ್ನು ಆ ಕ್ಷಣಕ್ಕೇ ಆನಂದಮಯವಾಗಿ ಇಟ್ಟಿರಬಹುದು. ಅವರುಗಳನ್ನು ಒಂದು ಕ್ಷಣ ನೆನಪಿಸಿಕೊಂಡರೇ ಇವನಿ/ಳಿಗೆ ಏನೋ ಒಂದು ಶಕ್ತಿಯನ್ನು ಪಡೆದಂತಾಗುತ್ತದೆ. ಅವರುಗಳು ಏನಾದರೂ ಸಾಧಿಸಿದರಂತೋ ಕೇಳುವುದೇ ಬೇಡ ತಾನೇ ಮುಂದಾಗಿ ಸುತ್ತಲಿನವರಿಗೆ ಸಿಹಿಯನ್ನು ಹಂಚುವ ಮಟ್ಟಿಗೆ ಆತ್ಮೀಯತೆ. ಇವರುಗಳಲ್ಲಿ ಬಹಳಷ್ಟು ಮಂದಿಯನ್ನು ಮುಖತಃ ಬೇಟಿ ಮಾಡಿ ಮಾತನ್ನಾಡಿರುವುದಿಲ್ಲ. ಆದರೂ ಅವನು/ಅವಳು ಗೊತ್ತು ಗುರು! ಎಂಬ ಧೃಡತೆ.


ಆದರೇ ಆ ಆದರ್ಶಪುರುಷರುಗಳಿಗೆ ಇಂಥ ಸಾಮಾನ್ಯ ಭಕ್ತರುಗಳು ಸಾವಿರಾರು. ಆದರೂ ಅವರುಗಳು ಸಹ ನಮ್ಮ ನಿಮ್ಮಂತೆಯೇ ಬೆಳೆದು. ಅವರುಗಳು ನಮ್ಮ ನಿಮ್ಮಂತೆ ಬಾಲ್ಯದಿಂದ, ಯೌವನದ ದಿನಗಳಲ್ಲಿ ನಾವುಗಳು ಹೇಗೆ ಇವರುಗಳನ್ನು ಆದರ್ಶರುಗಳು ಎಂದು ಇಟ್ಟುಕೊಂಡು ನೋಡುತ್ತಿರುತ್ತೇವೋ ಹಾಗೆಯೇ ಅವರುಗಳು ಮತ್ತೇ ಅವರ ಯಾರೋ ಹಿರಿಯರನ್ನು ಆರಾಧಿಸಿರುತ್ತಾರೆ.


ಕಾಲದ ಮಹಿಮೆಯೊ ಅಥಾವ ಯಾವುದೊ ವಿಧಿಯಾಟವೊ ಒಂದು ಕ್ಷಣ ಮೈಮರೆತು ತಮ್ಮ ಆದರ್ಶದ ಜೀವನವನ್ನು ಬೀದಿಗೆ ತಂದು ಕೊಂಡಾಗ, ನೈತಿಕತೆಯನ್ನು ಬಿಟ್ಟಾಗ, ಭ್ರಷ್ಟತೆಯನ್ನು ಅಂಟಿಸಿಕೊಂಡಾಗ.... ಇವನನ್ನು ಪಾಲೋ ಮಾಡುವ ನಮ್ಮ ನಿಮ್ಮಂತ ಜನ ಸಾಮಾನ್ಯನ ಪರಿಸ್ಥಿತಿ ಯಾರಿಗೆ ಹೇಳಬೇಕು. ನಿನ್ನೇಯವರೆಗೂ ಅವನ/ಅವಳ ಬಗ್ಗೆ ನಾವುಗಳು ಎಲ್ಲರ ಮುಂದೆ/ಸ್ವತಃ ತನ್ನ ಅಂತರಂಗದಲ್ಲಿ ಉನ್ನತವಾದ ಜಾಗವನ್ನು ಕೊಟ್ಟು ಪೂಜಿಸಿಕೊಂಡು ಹೆಮ್ಮೆಯನ್ನು ಪಟ್ಟಿರುತ್ತೇವೆ.


ಆದರೇ! ಇದು ಅವರುಗಳಿಗೆ ತಿಳಿಯಬೇಕಲ್ಲಾ ಸ್ವಾಮಿ. ಅವರುಗಳು ಸಹ ಉಪ್ಪು ಹುಳಿ ತಿನ್ನುವ (ಅ)ಸಾಮಾನ್ಯರುಗಳು ಎಂದು ನಾವುಗಳು ಎಂದಿಗೂ ಕಲ್ಪಿಸಿಕೊಂಡಿರುವುದಿಲ್ಲ. ಹೀಗೆ ಒಂದೇ ಭಾರಿಗೆ ನಮ್ಮ ಹೆಮ್ಮೆಯ ಗುಳ್ಳೆಗೆ ಸೂಜಿ ಚುಚ್ಚುವಂತೆ ಮಾಡಿದರೇ... ನಿಂತ ಧರೆಯೇ ಮುಳುಗಿದ ಅನುಭವ.


ಅದ್ದರಿಂದ ನಾವುಗಳು ಇದರಿಂದ ಭ್ರಮ ನಿರಸನವುಂಟುಮಾಡಿಕೊಳ್ಳುವ ಅವಶ್ಯಕತೆಯಿಲ್ಲ. ಇರಲಿ ನಿಮ್ಮ ಮನದ ಅಂತರಂಗದಲ್ಲಿ ಈ ರೀತಿಯ ಕಲ್ಪನೆಯ ನಿಮ್ಮ ಆದರ್ಶ ಜನಗಳ ಪಟ್ಟಿ. ಅವರುಗಳ ಬಗ್ಗೆ ಅತಿಯಾದ ಕಕ್ಕುಲಾತಿಯನ್ನು ಇಟ್ಟುಕೊಳ್ಳುವುದು ತಪ್ಪು. ಅವರ ಸಾಧನೆಗಳನ್ನು, ಅದಕ್ಕೆ ಅವನು ಉಪಯೋಗಿಸಿದ ದಾರಿಯನ್ನು ಸಾಮಾನ್ಯರಂತೆ ತೆಗೆದುಕೊಳ್ಳಬೇಕು. ಅವರು ಸಹ ಕೇವಲ ನಮ್ಮ ನಿಮ್ಮಂತೆಯೇ ಸರಿ. ಅವರಿಗೂ ನಮಗೆ ಇದ್ದಂತೆಯೇ ದೌರ್ಬಲ್ಯಗಳು ಇರುವುದು ಸಹಜ. ದೌರ್ಬಲ್ಯಗಳನ್ನು ಗೆದ್ದವನಿದ್ದರೇ ಅವನು ದೇವರೇ ಸರಿ. ಇಲ್ಲಿ ಯಾರು ದೇವರುಗಳಲ್ಲಾ.


ಹಾಗೆಯೇ ಸಾರ್ವಜನಿಕವಾಗಿ ಇರುವ ಐಕಾನ್ ಗಳು ಎಂದು ಯಾರನ್ನು ನಾವುಗಳು ಆರಾಧಿಸುತ್ತೇವೋ ಆ ಮಂದಿ ಒಂದು ಕ್ಷಣ ಯೋಚಿಸಿ ತಮ್ಮ ತಮ್ಮತನವನ್ನು ತೋರಬೇಕು. ಕೇವಲ ಪರದೆಯ ಮೇಲೆ ಆದರ್ಶದ ರೂವಾರಿಯಾಗಿದ್ದು ತನ್ನ ವೈಕ್ತಿಕ ಜೀವನದಲ್ಲಿ ಕೇವಲವಾಗಿರಬಾರದು. ಇದು ಪ್ರತಿಯೊಬ್ಬ ಪ್ರಸಿದ್ಧರಿಗೂ ಅನ್ವಯವಾಗುತ್ತದೆ.


ಸಮಾಜ ಗಮನಿಸುವ ವ್ಯಕ್ತಿಗಳು ಯುವ ಜನಾಂಗಕ್ಕೆ ಆದರ್ಶಪ್ರಾಯರು. ನಾವುಗಳು ನಮ್ಮ ಮನೆಯಲ್ಲಿಯೇ ನಮ್ಮ ಬೆರಳನ್ನು ಯಾವಾಗಲೂ ತೋರಿಸುವುದು ಇವರ ಕಡೆಯೇ. ಇದನ್ನು ಅವರುಗಳು ಅರಿಯುವಂತೆ ಮಾಡುವವರು ಯಾರು? ಮತ್ತೇ ಅದೇ ಉನ್ನತ ವಿಚಾರದ ಜೀವನ ಪಯಣದಲ್ಲಿ ಬರುವ ಶಾಲೆ, ಮನೆ, ನೆರೆಹೊರೆ ಮತ್ತು ಸಮಾಜ.


ನಾವುಗಳು ಏನಾದರೂ ಆಗಿರಲಿ ಎಲ್ಲದ್ದಕ್ಕಿಂತ ಮಾನವೀಯತೆಯ ಕಳಕಳಿಯೇ ಮತ್ತು ಚೂರು ನೈತಿಕತೆ ಮುಖ್ಯ. ಇಲ್ಲಿ ಯಾರು ಶಾಶ್ವತವಲ್ಲ. ಇರುವಷ್ಟು ದಿನಗಳಲ್ಲಿ ಎಲ್ಲರಿಗೂ ಪ್ರೀತಿಯನ್ನು ಹಂಚುವ ಧೈಯ ಎಲ್ಲಾರ ಗುರಿಯಾಗಬೇಕು. ತಮ್ಮ ಸಣ್ಣತನದ ಆಸೆಗೆ ತಾವುಗಳು ಗಳಿಸಿರುವ ಸ್ಥಾನ,ಮಾನ,ಗೌರವಗಳನ್ನು ನಗಣ್ಯ ಮಾಡಬಾರದು ಅಲ್ಲವಾ. ಭಾರತ ಎಂದರೇ ಈ ಅಮೂಲ್ಯವಾದ ಶ್ರೇಷ್ಟತೆಗೆ ದ್ಯೂತಕ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ