ಶನಿವಾರ, ಡಿಸೆಂಬರ್ 11, 2010

ನೆಚ್ಚಿನ ಸಂಪಾದಕನ ಬಗ್ಗೆ



ನಮಗೆ ಇಷ್ಟಪಟ್ಟದ್ದನ್ನು ಹುಡುಕಿ ಕೊಂಡು ಪಡೆಯುತ್ತೆವೆ. ಅದು ಸಿಗುವವರೆಗೂ ಮನಸ್ಸಿಗೆ ನೆಮ್ಮದಿ ದೊರೆಯದು. ಹಾಗೆಯೇ ಇತ್ತೀಚಿನ ವರ್ಷಗಳಲ್ಲಿ ನನ್ನ ಮನವನ್ನು ಗೆದ್ದಿದ್ದು ವಿಶ್ವೇಶ್ವರ ಭಟ್ ರವರ ಸಾರಥ್ಯದಲ್ಲಿ ಬರುತ್ತಿದ್ದ ವಿ.ಕ ದಿನ ಪತ್ರಿಕೆ. ಅವರುಗಳ ಬರಹಗಳಿಗಾಗಿ ಮಾತ್ರ ನಾನು ಅವರ ಪತ್ರಿಕೆಯನ್ನು ಖರೀದಿಸುತ್ತಿದ್ದೇನೋ ಏನೋ ಗೊತ್ತಿಲ್ಲ. ಆದರೆ ಕಳೆದ ಎರಡು ದಿನಗಳಿಂದ ಅವರಿಲ್ಲದೇ ಬರುತ್ತಿರುವ ಪತ್ರಿಕೆ ಮತ್ತೂ ಒಂದು ಪತ್ರಿಕೆ ಮಾತ್ರ ಅನಿಸುತ್ತಿದೆ. ಅದು ಯಾಕೋ ಅವರನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೇವೆ ಅನಿಸುತ್ತಿದೆ.

ಪತ್ರಿಕಾ ರಂಗದಲ್ಲಿ ಕೆಲವೇ ದಿನಗಳಲ್ಲಿ ಅತಿ ಚಿಕ್ಕ ವಯಸ್ಸಿನಲ್ಲಿ ಕ್ರಾಂತಿಯನ್ನು ಮಾಡಿರುವವರು ಅಂದರೆ ಅದು ವಿಶ್ವೇಶ್ವರ ಭಟ್. ಕನ್ನಡ ಪತ್ರಿಕಾ ರಂಗದಲ್ಲಿ ಅತ್ಯಂತ ವೇಗವಾಗಿ ಪತ್ರಿಕೆಯ ಪ್ರಸಾರ ಸಂಖ್ಯೆಯನ್ನು ಮತ್ತು ತಮ್ಮ ವಿಭಿನ್ನ ಅಭಿರುಚಿಯಿಂದ ಓದುಗರಿಗೆ ಅತಿ ರಸವತ್ತಾದ ರಸಗವಳವನ್ನು ದಿನಂಪ್ರತಿ ಮುಂಜಾನೆಯ ಕಾದಿದ್ದ ಮನಸ್ಸುಗಳಿಗೆ ಚೂಟಿಯನ್ನು ಕೊಡುತ್ತಿದ್ದರು.



ಮುಖಪುಟದಿಂದ ಕೊನೆಯ ಪುಟದವರೆಗೂ ಅವರ ಛಾಪನ್ನು ಕಾಣಿಸುತ್ತಿದ್ದರೂ. ಮುಖಪುಟದಲ್ಲಿ ಬರುತ್ತಿದ್ದ ಅಗ್ರ ಸುದ್ದಿಯ ತಲೆ ಬರಹದಲ್ಲಿ ಕ್ರಾಂತಿಯನ್ನೇ ಉಂಟು ಮಾಡಿದ್ದರೂ ಅಂದರೆ ಅತಿಶಯೋಕ್ತಿಯಲ್ಲ. ಅವರು ಕೊಡುತ್ತಿದ್ದ ಪಂಚಿಂಗ ಹೆಡ್ ಲೈನ್ ಒಂದು ಕ್ಷಣ ಎಂಥವರನ್ನು ಸೆಳೆಯುತ್ತಿತ್ತು. ಇದರಿಂದ ಬೇರೆಯ ಪತ್ರಿಕೆಗಳು ಸಹ ಆ ರೀತಿಯ ಪದಗಳ ಪ್ರಯೋಗಕ್ಕೆ ಅಡಿ ಇಟ್ಟರು ಸಹ. ಈ ರೀತಿಯಲ್ಲಿ ಹೊಸ ಹೊಸ ಪ್ರಯೋಗಗಳಿಗೆ ವೇದಿಕೆಯನ್ನಾಗಿ ಮಾಡಿ ಅದರ ಸಂತಸವನ್ನು ಮತ್ತು ಓದುವ ಸುಖವನ್ನು ವಿ.ಕ ಓದುಗರಿಗೆ ಒದಗಿಸಿ ಓದುಗರನ್ನು ಬೇರೆ ಎಲ್ಲಾ ಪತ್ರಿಕೆಯ ಓದುಗರಿಗಿಂತ ಒಂದು ಹೆಜ್ಜೆ ಮುಂದೆ ಇರುವಂತೆ ನೋಡಿಕೊಂಡರು.



ಇದಕ್ಕೆ ಕಾರಣರಾಗಿದ್ದ ಒಂದು ವಿಷಯ ಅಂದರೇ ಅವರುಗಳು ಕಲೆ ಹಾಕಿದ ತರುಣ ಡೈನಾಮಿಕ್ ಬರಹಗಾರರ ತಂಡ. ಅವರುಗಳ ಅಂಕಣ ಬರಹಗಳು ಯಾವುದೇ ಅಂತರಾಷ್ಟ್ರೀಯ ಸುದ್ಧಿ ಪತ್ರಿಕೆಗಳಿಗಿಂತ ಕಡಿಮೆಯಿಲ್ಲದಂತೆ ಮಾಡಿತ್ತು. ಎಲ್ಲಾರಿಂದ "ಬರೆಯುವ ಸಂಪಾದಕ" ಎಂಬ ಬಿರುದನ್ನು ಗಳಿಸಿಕೊಂಡ ತರುಣ ಸಂಪಾದಕರಾದ ವಿಶ್ವೇಶ್ವರ ಭಟ್ ಬಹುಬೇಗ ವಿ.ಕ ಹೊರ ಹೋಗಿದ್ದು ಮಾತ್ರ ಕನ್ನಡ ಪತ್ರಕರ್ತ ರಂಗಕ್ಕೆ ದೊಡ್ಡ ಶಾಕ್.



ಸ್ವತಃ ಅವರೇ ಬರೆಯುತ್ತಿದ್ದ ಪ್ರಸಿದ್ಧ ಅಂಕಣಗಳಾದ ಭಾನುವಾರ ಬರುತ್ತಿದ್ದ "ಜನಮನ" ಅಲ್ಲಿ ವಾರದಲ್ಲಿ ಘಟಿಸಿದ ಘಟನೆ, ಪ್ರಸಿದ್ಧ ಸಾಮಾನ್ಯ ಜನರ ಅಪರೂಪದವಾದ ನೋಟ, ಬುಕ್ ಟಾಕ್, ಸಲಹೆ, ಕಡ ತಂದ ಎಸ್. ಎಂ. ಎಸ್ ಜೋಕಗಳಿಂದ ವಾರಾಂತ್ಯದಲ್ಲಿ ನಮ್ಮನ್ನು ಕಾಯುವಂತೆ ಮಾಡುತ್ತಿದ್ದರು. ದಿನಪ್ರಂತಿ ಪ್ರಕಟವಾಗುತ್ತಿದ್ದ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ರೀತಿಯಲ್ಲಿ ಬರುತ್ತಿದ "ವಕ್ರತುಂಡೋಕ್ತಿ" ಗಳು ಒಂದು ಕ್ಷಣ ಹೌದಲ್ಲವಾ! ಎಂಬಂತೆ ಮನಸ್ಸಿಗೆ ಸಂತಸ ನೀಡುತ್ತಿದ್ದವು. ಪ್ರತಿ ಗುರುವಾರ ಅವರು ಬರೆಯುತ್ತಿದ್ದ "ನೂರೆಂಟು ಮಾತು" ಅಂಕಣದಲ್ಲಿ ವಿಷದವಾಗಿ ವಿಭಿನ್ನವಾದ ಅಪರೂಪದ ವಿಷಯಗಳನ್ನು ನಮಗೆ ತಿಳಿಸುವುದಕ್ಕೆ ಬಳಸಿಕೊಂಡಿದ್ದರು. ಇದು ಎಷ್ಟರ ಮಟ್ಟಿಗೆ ಸುಪ್ರಸಿದ್ಧಿಯಾಗಿದೆ ಅಂದರೆ ಅವುಗಳ ಸಂಕಲನಗಳನ್ನೊಳಗೂಂಡ ಪುಸ್ತಕಗಳ ಭಾರಿ ಮಾರಟವೇ ಸಾಕ್ಷಿ. ಶನಿವಾರ ಅವರು ಬರೆಯುತ್ತಿದ್ದ ತಮ್ಮದೇ ರಂಗಕ್ಕೆ ಸಂಬಂಧಿಸಿದ ಅಪರೂಪದ ವಿವರಗಳನ್ನು ಓದುಗರ ಕುತೂಹಲ ತಣಿಸಲು ಕೊಡುತ್ತಿದ್ದಾರೇನೋ ಎಂಬಂತೆ ಪ್ರಕಟಿಸುತ್ತಿದ್ದರು. ಇದರಿಂದ ಮಾಧ್ಯಮ ಲೋಕಕ್ಕೆ ಕಾಲು ಇಡಲು ನಿಂತಿರುವ ನಮ ತರುಣ/ತರುಣಿಯರಿಗೆ ಅದು ದಾರಿ ದೀಪವೇ ಸರಿ. ಇದರಿಂದ ನಾವುಗಳು ಒಂದು ಪತ್ರಿಕೆಯ ಬೆಳವಣಿಗೆಯಲ್ಲಿ ಯಾರು ಯಾರೂ ಹೇಗೆ ಯಾವ ರೀತಿಯಲ್ಲಿ ತಮ್ಮ ಪಾತ್ರವನ್ನು ನೀಡುತ್ತಾರೆ ಎಂಬುದನ್ನು ಅರಿಯಲು ಮತ್ತು ಹಲವಾರು ಮಹಾನ್ ಘಟಾನುಗಟಿ ಪತ್ರಿಕೆಯ ದಿಗ್ಗಜರ ಅಪರೂಪದ ಅವರ ಜೀವನ ಚಿತ್ರಗಳನ್ನು ಹೇಳಲು "ಸುದ್ದಿಮನೆ ಕತೆ" ಅಂಕಣ ಒಂದು ವೇದಿಕೆಯಾಗಿತ್ತು ಎಂಬುದು ಒಂದು ಹೆಮ್ಮೆಯ ವಿಷಯ. ಪ್ರತಿ ಶನಿವಾರ ತಪ್ಪಿಸದೇ ಪತ್ರಿಕೆಯನ್ನು ಕಾಯುವಂತೆ ಮಾಡುತ್ತಿದ್ದ ಈ ಒಂದು ಅಂಕಣ ಇನ್ನೂ ಮುಂದೆ ಇಲ್ಲ ಎಂದರೆ ಅದು ಎಷ್ಟೊಂದು ಬೇಸರದ ಸಂಗತಿ!




ಹೊಸತನದ ಹರಿಕಾರರಂತೆ ಇದ್ದು ಕನ್ನಡ ಪತ್ರಿಕೆಯ ಲೋಕಕ್ಕೆ ಇಗೂ ಓದುಗರನ್ನು ಸೆಳೆಯಬಹುದು ಎಂಬ ರೀತಿಯಲ್ಲಿ ವಿ.ಕ ಖ್ಯಾತಿಯನ್ನು ತಂದುಕೊಟ್ಟವರು ಇವರು ಎಂದರೇ ತಪ್ಪಾಗದು. ಅವರನ್ನು ಪುನಃ ನಾವುಗಳು ಇದೇ ಕ್ಷೇತ್ರದಲ್ಲಿ ಪುನಃ ಹೊಸ ಅವತಾರದಲ್ಲಿ ಶಕ್ತಿಯುಕ್ತವಾಗಿ ಕಾಣಲು ಈ ಸಹೃದಯ ಮನ ಬಯಸುತ್ತದೆ.




ನಾವು ಇಷ್ಟಪಟ್ಟು ಓದುವ ಹಲವಾರು ಕನ್ನಡ ಲೇಖಕರುಗಳನ್ನು ಪ್ರತ್ಯಕ್ಷ ಕಣ್ಣಿಂದ ಕಂಡು ಮಾತನ್ನಾಡಿಸದಿದ್ದರೂ ಅದು ಯಾಕೋ ಅವರ ನನ್ನ ಸಂಪರ್ಕ ಸಕತ್ತಾಗಿದೇ ಎಂಬ ಭಾವನೆ ನಮ್ಮ ನೆಚ್ಚಿನವರ ಬಗ್ಗೆ ಇರುತ್ತದೆ. ಯಾಕೆ? ಹೌದು! ಅವರು ಬರೆಯುವ ಕಥೆ, ಕಾದಂಬರಿ, ಹಾಡುವ ಹಾಡು, ರಚಿಸುವ ಕವಿತೆ ನಮಗಾಗಿಯೇ ಬರೆದಿದ್ದಾರೆ ಏನೋ ಎಂಬಂತೆ ಕಾದಿದ್ದು ಓದಿ ಆ ಕತೃಗೆ ಇಲ್ಲಿಂದಲೇ ಒಂದು ನಮಸ್ಕಾರವನ್ನು ಹೇಳುತ್ತೆವೆ. ಅವರನ್ನು ಮುಖತಃ ಬೇಟಿ ಮಾಡಿದರೆ ನಾವುಗಳು ಅವರ ಬಗ್ಗೆ ಇಟ್ಟುಕೊಂಡ ನೂರಾರು ಭಾವನೆಗಳನ್ನು ಸುಲುಭವಾಗಿ ತಲುಪಿಸಲು ಸಾಧ್ಯವಾಗದೇ ಏನೋ ಕಸಿವಿಸಿಯಾಗುತ್ತದೆ. ಯಾಕೆ? ನಮ್ಮ ಮತ್ತು ಅವರ ಪೂರ್ಣ ಸಂಪರ್ಕ ಅವರ ಕೃತಿಗಳ ಮೂಲಕ ಅಲ್ಲವೇ ಸಂವಹನ ಮಾಧ್ಯಮ. ಅವರ ಕೃತಿಗಳಿಂದಲೇ ಅವನು ಅವನ ಸಹೃದಯರೊಡನೆ ಮಾತನ್ನಾಡುತ್ತಾನೆ. ತಾನು ಏನು ಹೇಳಬೇಕೊ ಅದನ್ನು ಅವನು ತನ್ನ ನೆಚ್ಚಿನ ಓದುಗನಿಗೆ ತಲುಪಿಸುತ್ತಾನೆ. ಯಾಕೆಂದರೆ ಅಲ್ಲಿಯೇ ಕತೃ ಮೂದಲು ನಮಗೆ ಪರಿಚಿತನಾಗಿದ್ದು. ಅವರ ಬಗ್ಗೆ ನಮ್ಮಲ್ಲಿರುವ ಕಲ್ಪನೆ ಅವರ ಪುಸ್ತಕ, ಕಥೆ, ಕವಿತೆ, ಹಾಡು ಇವುಗಳಲ್ಲಿಯೇ ವಿಸ್ತೃತಗೊಂಡಿರುತ್ತದೆ.




ಎಷ್ಟೋ ಬಾರಿ ನೆಚ್ಚಿನ ರವಿಬೆಳೆಗೆರೆಯ ಕಾರ್ಯಕ್ರಮಗಳಿಗೆ ಹೋಗಿದ್ದೇನೆ ಅದರೆ ಅವರನ್ನು ಮುಖತಃ ಮಾತನ್ನಾಡಿಸಲು ಏನೋ ಸಂಕೋಚ. ಆದರೇ ಅವರ ಒಂದೇ ಒಂದು ವಾರದ ಅಂಕಣ ಬರಹವನ್ನು ಮಿಸ್ ಮಾಡಿಕೊಂಡು ಇರಲಾರೆ. ಕಾದಿದ್ದು ಅವರನ್ನು ಕಾಣಬೇಕು ಎಂದು ಅವರ ಪತ್ರಿಕೆ, ಪುಸ್ತಕಗಳಿಗಾಗಿ ಕಾಯುತ್ತಿರುತ್ತೇನೆ. ಇದು ಹೀಗೆ ಇರಬೇಕು ಅಲ್ಲವಾ. ನಾವುಗಳು ಅವರ ಅಮೊಲ್ಯವಾದ ಕ್ಷಣಗಳನ್ನು ಏಕೆ ಕೊಲ್ಲಬೇಕು ಸುಖ ಸುಮ್ಮನೇ ಬೇಟಿ ಮಾಡುತ್ತಾ?




ಅದಕ್ಕೆ ಇರಬೇಕು ನಮ್ಮ ಎಲ್ಲಾ ನೆಚ್ಚಿನ ಕಲಾವಿದರು ಯಾವುದೇ ಸಮಾರಂಭ ಅಥವಾ ಸಂದರ್ಭದಲ್ಲಿ "ನಾವು ಹೇಳುವುದನ್ನು ನಮ್ಮ ಕೃತಿಗಳು ಮಾತನ್ನಾಡುತ್ತವೆ" ಎನ್ನುತ್ತಾರೆ.




ಸಹೃದಯರು ತನ್ನ ನೆಚ್ಚಿನ ಲೇಖಕನನ್ನು ಅಥವಾ ಕಲಾಕಾರರನ್ನು ಎಷ್ಟರ ಮಟ್ಟಿಗೆ ಆರಾಧಿಸುತ್ತಾರೆ ಎಂದರೆ ಅವನು ಹೇಳಿದಂತೆ ಇರಲು ಪ್ರಯತ್ನಿಸುತ್ತಾರೆ. ಮತ್ತು ಅವನನ್ನೇ ತನ್ನ ರೋಲ್ ಮಾಡಲ್ ಎಂದು ಭಾವಿಸಿರುತ್ತಾರೆ. ಅವನನ್ನು ತನ್ನ ನೆಚ್ಚಿನ ಬೆಚ್ಚನೆಯ ಸ್ಥಾನದಲಿ ಸ್ಥಾಪಿಸಿಕೊಂಡಿರುತ್ತಾರೆ. ಅದ್ದರಿಂದ ಸಾರ್ವಜನಿಕವಾಗಿ ಅವರುಗಳನ್ನು ಪ್ರತಿಯೊಬ್ಬರೂ ಗಮನಿಸುತ್ತಿರುತ್ತಾರೆ. ತಮ್ಮ ಕೃತಿಗಳಲ್ಲಿ ಬರುವ ಬೋಧನೆಯ ಮಾತುಗಳು, ಆದರ್ಶ ಪಾತ್ರಗಳು ತನ್ನ ಲೇಖನದೇ ಅಥವಾ ತನ್ನ ಕಲಾವಿದನದೇ ಎನ್ನುವ ಮಟ್ಟಿಗೆ ನಂಬಿ ಬಿಟ್ಟಿರುತ್ತಾರೆ. ಆದ್ದರಿಂದ ಅವರುಗಳು ಇಡುವ ಪ್ರತಿಯೊಂದು ಹೆಜ್ಜೆ ಅತಿ ಮುಖ್ಯವಾಗಿರುತ್ತದೆ. ಇಲ್ಲವಾದರೆ ಹೇಳವುದು ಆಚಾರ ಮಾಡವುದು ಅನಾಚಾರವಾದಂತಾಗುತ್ತದೆ. ಉತ್ತಮ ನಡಾವಳಿಯನ್ನು ಪ್ರಸಿದ್ಧಿ ವ್ಯಕ್ತಿಗಳಿಂದ ಜನತೆ ಯಾವಾಗಲೂ ಅಪೇಕ್ಷಿಸುತ್ತದೆ.




ಸಾಹಿತಿಗಳು, ಕವಿಗಳು, ಕಲಾವಿದರು ಎಂದರೇ ಪ್ರತ್ಯೇಕವಾದ ಸ್ಥಾನವನ್ನು ಜನಗಳು ತಮ್ಮ ತಮ್ಮ ಮನದಲ್ಲಿ ಇಟ್ಟು ಕೊಂಡಿರುತ್ತಾರೆ ಅದಕ್ಕೆ ಧಕ್ಕೆಯಾಗದಂತೆ ಕಾಪಾಡಿಕೊಂಡಿರುವುದು ಅವರ ಗುರುತರ ಜವಾಬ್ದಾರಿ ಅಲ್ಲವಾ?

1 ಕಾಮೆಂಟ್‌: