ಶುಕ್ರವಾರ, ಡಿಸೆಂಬರ್ 31, 2010

ಹೊಸ ವರ್ಷಕ್ಕೆ ಹೊಸ ಕನಸಿಗೆ ಚಿಯರ್ಸ್!

ಹೊಸ ವರ್ಷಕ್ಕೆ ಕಾಲು ಇಟ್ಟಾಯಿತು. ಹೊಸ ಹೊಸ ಭಾವನೆಗಳು. ಹೊಸ ಹೊಸ ಆಸೆಯ ಚಿಗುರು ಕನಸು. ಕಳೆದ ದಿನಗಳ ನೋವು ನಲಿವುಗಳ ಪುನರ್ ಮೆಲುಕು ಹಾಕುತ್ತಾ... ಹೊಸ ದಿನಗಳಲ್ಲಿ ಕೂಂಚ ಕೂಂಚ ಹೊಸ ತನದ ಸುಖದ ಕ್ಷಣಗಳ ಬಗ್ಗೆ ಕನಸು ಕಾಣುತ್ತಾ.. ಹಿಡೇರದ ಕನಸುಗಳ ನನಸು ಮಾಡುವ ದಾರಿ ಹುಡುಕುತ್ತಾ.. ಹೊಸ ಹೊಸ ಅವಕಾಶಗಳಿಗಾಗಿ ಕಾಯುತ್ತಾ.. ಹೊಸ ಹೊಸ ಯೋಚನೆಗಳತ್ತಾ.. ಹೊಸ ಹೊಸ ಚಿಂತನೆಗಳನ್ನು ಮೂಡಿಸುತ್ತಾ.. ಹೊಸ ಆಶ ಕಿರಣವನ್ನು ನಿರೀಕ್ಷಿಸುತ್ತಾ ಪುನಃ ನಮ್ಮ ನಿತ್ಯ ಪಯಣವನ್ನು ಮಾಡುತ್ತಾ.. ಜೀವನ ಬಂಡಿಯನ್ನು ಸಾಗಿಸುತ್ತಾ.. ಹೀಗೆ ಸಾಗುವುದು ನಮ್ಮ ನಿಮ್ಮಗಳ ನಾನಾ ರೀತಿಯ ರಂಗಿನ ಚಿಂತನೆಯ ಚಿಗುರುಗಳು.. ಅದಕ್ಕೆ ಅಂತ್ಯವಿಲ್ಲ. ಅದಕ್ಕೆ ಬೆಸರವಿಲ್ಲ. ಅದೇ ಅಲ್ಲವಾ ಹಳೆ ಬೇರು ಹೊಸ ಚಿಗುರು.


ನಮ್ಮ ಐ.ಟಿ ಮತ್ತು ಬೆಂಗಳೂರಿನ ಜನ ವರ್ಷದ ಅಂತ್ಯ ಡಿಸೆಂಬರ್ ತಿಂಗಳು ಬಂತು ಅಂದರೇ ಸಾಕು. ಮೂದಲ ದಿನದಿಂದಲೇ ತಮ್ಮ ಹೊಸ ವರ್ಷದ ಸ್ವಾಗತವನ್ನು ಮಾಡಲು ತರಾವೇರಿ ಯೋಜನೆಯನ್ನು ರಚಿಸುತ್ತಾರೆ. ಅಲ್ಲಿ ಇಲ್ಲಿ ಹೊಸ ವರ್ಷದ ಆಚರಣೆಯನ್ನು ಮಾಡಿದರೇ.. ಅವರುಗಳನ್ನು ಇವರುಗಳನ್ನು ಕರೆಯೋಣ.. ಅಲ್ಲಿ ಹೀಗೆ ಹೀಗೆ ಖುಷಿಪಡೋಣ... ಅಲ್ಲಿ ಇಷ್ಟು ತಿಂಡಿ... ಅಲ್ಲಿ ಇಷ್ಟು ವೈರೇಟಿಯ ಡ್ರಿಂಕ್ಸ್.. ಹೀಗೆ ದೊಡ್ಡದೊಂದು ಪಟ್ಟಿಯನ್ನೇ ತಯಾರಿಸಿ ಅದರ ನೆರವೇರಿಕೆಗೆ ಶತ ಪ್ರಯತ್ನ ಮಾಡುತ್ತಾರೆ. ಹೀಗೆ ಸಾಗುತ್ತದೆ ನಮ್ಮ ಮೆಟ್ರೋ ಜನರ ಹೊಸ ವರ್ಷದ ಭರ್ಜರಿ ಸ್ವಾಗತಾಚರಣೆ.



ಪ್ರತಿಯೊಬ್ಬರಿಗೂ ಏನೋ ಒಂದು ತಲ್ಲಣ.. ಡಿಸೆಂಬರ್ ೩೧ ರ ಮಧ್ಯ ರಾತ್ರಿ .. ಗಡಿಯಾರದ ಮುಳ್ಳು ೧೨ಕ್ಕೆ ಬಂದಾಗ.. ಅಲ್ಲಿ ಏದ್ದೇಳುವ ಉದ್ಗಾರಗಳು.. ಮುಖದಲ್ಲಿ ಮೂಡುವ ಖುಷಿ, ಸಂತೋಷಭರಿತ ಭಾವನೆಗಳನ್ನು ನಾನಾ ರೀತಿಯಲ್ಲಿ ತನ್ನ ಜೊತೆಗಾರರೊಡನೆ ಜೋರಾಗಿ ಕೂಗುವ ಮೊಲಕ.. ಕುಡಿಯುವ ಮೊಲಕ.. ಕಿಕ್ ಬರುವಂತೆ ನ್ಯೂ ಹಿಯರ್ ನ್ನು ಬರಮಾಡಿಕೊಂಡು ಮುಂಜಾನೆಯವರೆಗೂ.. ಮಸ್ತಿ.. ಮಜಾದಲ್ಲಿ ತಲ್ಲಿನನಾಗುತ್ತಾನೆ..ಬೆಂಗಳೂರಿನ ಸಾಮಾನ್ಯ ಪ್ರಜೆ.... ಇರಲೇಬೇಕು ಈ ರೀತಿಯ ಒಂದು ಸಂವತ್ಸರಕ್ಕೆ.. ಮುನ್ನೂರು ಅರವೈತೈದು ದಿನಗಳ ಬಳುವಳಿಗೆ!!



ತಮ್ಮ ಎಲ್ಲೆಯನ್ನು ಮೀರಿ ತಮ್ಮ ನಿಜತನವನ್ನು ಬೆಂಗಳೂರಿನ ಪ್ರತಿ ರಸ್ತೆಯಲ್ಲಿಯು ತೋರಿಸುವರು. ಎಂ.ಜಿ ರೋಡ, ಬ್ರಿಗೇಡ್ ರಸ್ತೆಗಳನ್ನು ಕೇಳುವುದೇ ಬೇಡ. ಕಾಲು ಇಡಲು ಜಾಗವಿರದಂತೆ ಜಮಾಯಿಸಿ ರಸ್ತೆಯಲ್ಲಿ ತಮ್ಮ ನರ್ತನವನ್ನು ತೋರಿಸುತ್ತಿರುತ್ತಾರೆ. ಇವರುಗಳ ಎಲ್ಲೇಯನ್ನು ಇತಿ ಮೀತಿಯಲ್ಲಿ ಇಡಲು ಸಾವಿರಾರು ಸಂಖ್ಯೆಯ ಪೋಲಿಸ್ ಪೊರ್ಸ್. ಈ ಮಂದಿಯ ಪ್ರವಾರವನ್ನು ತಡೆಯಲಾಗದೇ ಎಂ.ಜಿ ರಸ್ತೆಯಲ್ಲಿರುವ ಮುಖ್ಯ ಹೋಟೆಲ್ ಗಳನ್ನು ಜನವರಿ ೧ ರವರೆಗೆ ಮುಚ್ಚಿರುತ್ತೇವೆ ಎಂಬ ಪ್ರಕಟಣೆಗಳು ಪತ್ರಿಕೆಗಳಲ್ಲಿ. ಪೋಲಿಸ್ ಕಮೀಷನರ್ ರವರು ತಮ್ಮ ಹೊಸ ವರ್ಷದ ಆಚರಣೆಯ ಬಗ್ಗೆ ಹೇಳಿದ ಮಾತು ಕೇಳಿ.. "ಇಂದಿನ ರಾತ್ರಿ ಯಾವ ರೀತಿಯ ಅವಘಡಗಳು ನಡೆಯದಿದ್ದರೆ ಅದೇ ನನಗೆ ಮುಖ್ಯವಾದ ಹೊಸ ವರ್ಷಾಚರಣೆ". ಮಹಿಳೆಯರನ್ನು ಮಾತ್ರ ಎಂ.ಜಿ ರಸ್ತೆಗೆ ಕರೆದುಕೊಂಡು ಹೋಗಬೇಡಿ ಎಂಬ ಪ್ರಕಟಣೆ... ಯಾಕೆ ಹೀಗೆ ಎಂಬುದನ್ನು ಪ್ರತಿಯೊಬ್ಬರೂ ಚಿಂತಿಸಬೇಕು. ಈ ರೀತಿಯ ಆಚರಣೆಯನ್ನು ನಿಜವಾಗಿಯೋ ಹೊಸ ವರ್ಷಾಚರಣೆ ನಿರೀಕ್ಷಿಸುತ್ತಾ?



ಡಿಸೆಂಬರ್ ೩೧ ರ ರಾತ್ರಿ ರಸ್ತೆಯ ಮೇಲೆ ನಡೆದಾಡುವುದು ಸಹ ಕಷ್ಟ... ನೀವುಗಳು ಸರಿಯಾಗಿ ಹೋದರೂ ಎದುರಿಗೆ ಬರುವ ಮಂದಿಗಳು ಯಾವ ರೀತಿಯಲ್ಲಿ ಬರುವವರು ಎಂಬ ಗ್ಯಾರಂಟಿಯನ್ನು ಕೊಡಲಂತು ಸಾಧ್ಯವಿಲ್ಲ. ಅದಕ್ಕಾಗಿಯೇ ಎಂಬಂತೆ.. ಅದನ್ನು ನೆನಪು ಮಾಡಲೇ ಎಂಬಂತೆ.. ಬಿಟ್ರ್ಯಾಕ್ ರವರ ಡಿಜಿಟಲ್ ಬೋರ್ಡನಲ್ಲಿ " ಮುಂದೆ ಮದ್ಯಪಾನ ತಪಸಾಣೆಯನ್ನು ಮಾಡಲಾಗುವುದು" ಎಂಬುದನ್ನು ರಕ್ತಗೆಂಪು ಅಕ್ಷರದಲ್ಲಿ ತೋರಿಸುತ್ತಾರೆ.



ಇದು ನಮ್ಮ ಬೆಂಗಳೂರು ಮಂದಿ ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸುವ ಪರಿ. ಈ ವರ್ಷ ನೀವೇನಾದರೂ ಮಿಸ್ ಮಾಡಿಕೊಂಡಿದ್ದರೇ ಮುಂದಿನ ವರ್ಷದಲ್ಲಿ ಮನೆಯಿಂದ ಹೊರ ಬಂದು ನೋಡಿ ಆನಂದಿಸಿ ನೀವು ಪಾಲ್ಗೂಳ್ಳಿ!



ಒಂದು ವರ್ಷವನ್ನು ಕಳೆಯುವುದು ಎಂಬುದು ಒಬ್ಬ ವ್ಯಕ್ತಿಗೆ ಬಹು ದೊಡ್ಡದಾದ ಸಂಗತಿ. ಕಾಲವನ್ನು ತಡೆಯುವವರು ಯಾರು ಇಲ್ಲ. ಅದು ಏನೊಂದು ಬೇದವನ್ನು ಮಾಡದೇ ಈ ಭೂಮಿಯ ಮೇಲೆ ಇರುವ ಪ್ರತಿಯೊಬ್ಬ ಜೀವಿಗೂ ಸಮಾನವಾಗಿ ಸಮಯವನ್ನು ಕೊಡುತ್ತದೆ. ಅದನ್ನು ತನ್ನ ಜಾಣ್ಮೆಯಿಂದ ಬಳಸಿಕೊಂಡವನು ಕಾಲದ ಗೆಳೆಯನಾಗುತ್ತಾನೆ ಮತ್ತು ಅವನೇ ತನ್ನ ಬದುಕು ಎಂಬ ಬಂಡಿಯನ್ನು ಉನ್ನತವಾಗಿ ಮುನ್ನಡಿಸಿ ಸಾಧಕ ಎಂಬ ಪ್ರಭಾವಳಿಯನ್ನು ಧರಿಸುತ್ತಾನೆ ಅಷ್ಟೇ.



ಸಮಯದ ಮಹತ್ವವನ್ನು ಅವಕಾಶಗಳನ್ನು ಕಳೆದುಕೊಂಡಾಗ ಅನುಭವಿಸುತ್ತಾನೆ. ತನ್ನ ಜೊತೆಯವರು ಉಪಯೋಗಿಸಿಕೊಂಡು ತನ್ನ ಪಕ್ಕದಲ್ಲಿಯೇ ವಿಭಿನ್ನವಾಗಿ ಮಾಡಿ ತೋರಿಸಿದಾಗ ಮಾತ್ರ ಅವನ ಅರಿವಿಗೆ ಬರುತ್ತದೆ. ಅಷ್ಟೋತ್ತಿಗಾಗಲೇ ಆ ಸಮಯ ಚರಿತ್ರೆಯಾಗಿರುತ್ತದೆ. ಏನಾನ್ನದರೂ ವಾಪಸ್ಸು ತರಬಹುದು ಕಳೆದ ದಿನಗಳನ್ನು, ಗಳಿಗೆಗಳನ್ನು ಏನು ಮಾಡಿದರೂ ತರಲಾಗುವುದಿಲ್ಲ. ಅದೇ ವಿಪರ್ಯಾಸ! ಕಾಲದ ಜೊತೆ ನಾವುಗಳು ಅರಿತು ಹೆಜ್ಜೆಯನ್ನು ಹಾಕಬೇಕು.



೨೦೧೦ ವರ್ಷ ಹತ್ತು ಹಲವು ವಿಭಿನ್ನ ವಿಷಯಗಳಿಂದ ನೆನಪಿನಲ್ಲಿ ಇಡುವಂತ ಸಂವತ್ಸರವಾಗಿತ್ತು. ಸಾರ್ವಜನಿಕವಾಗಿ ನಮ್ಮ ರಾಜ್ಯ ಮತ್ತು ನಮ್ಮ ದೇಶದಲ್ಲಿ ಹಲವಾರು ರೀತಿಯ ಸಂಘರ್ಷಗಳನ್ನು ರಾಜಕೀಯವಾಗಿ, ಅರ್ಥಿಕವಾಗಿ, ಸಾಮಾಜಿಕವಾಗಿ ಎಲ್ಲಾ ರಂಗಗಳಲ್ಲೂ ಜನತೆ ಕಂಡಿದೆ. ಹೆಮ್ಮೆ ಪಡುವಂತ ವಿಷಯಗಳು ಮತ್ತು ವಿಚಾರಗಳನ್ನು ನಾಯಕರುಗಳು ಸಾಧಕರು ರಾಷ್ಟ್ರಕ್ಕೆ ಕೊಟ್ಟು ನಮ್ಮ ರಾಷ್ಟ್ರ ಪತಾಕೆಯನ್ನು ಜಗತ್ತಿನಲ್ಲಿಯೇ ಎತ್ತಿ ಹಿಡಿಯುವಂತೆ ಮಾಡಿದ್ದಾರೆ. ಹಾಗೆಯೇ ನಮ್ಮ ಭಾರತದ ಮಾನವನ್ನು ಮೂರು ಕಾಸಿಗೆ ಹರಾಜು ಹಾಕಿದ ಮಹನ್ ನಾಯಕರುಗಳು ಇದ್ದಾರೆ. ಅವರ ಬಗ್ಗೆ ನಾವುಗಳು ಕೇವಲ ಅಸಹ್ಯವನ್ನು ಪಡಬಹುದು ಅಷ್ಟೇ. ಒಳ್ಳೆಯದು ಮತ್ತು ಕೆಟ್ಟದು ಒಂದೇ ನಾಣ್ಯದ ಎರಡು ಮುಖವಲ್ಲವಾ!



ಸಾಂಸ್ಕೃತಿಕ ಲೋಕವಾದ ಸಾಹಿತ್ಯ.. ಮುಖ್ಯವಾಗಿ ನನಗೆ ಇಷ್ಟವಾದ ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಹೊಸ ಗಾಳಿಯ ಸಿಂಚನವಾಗಿದೇ ಎಂದರೇ ತಪ್ಪಲ್ಲಾ. ಈ ಇಂದಿನ ಇಂಟರ್ ನೇಟ್ ಪ್ರಪಂಚದಲ್ಲಿದ್ದರೂ ಪುಸ್ತಕವನ್ನು ಕೊಂಡು ಓದುವ ಸಂಸ್ಕೃತಿ ಚೆನ್ನಾಗಿಯೇ ಇದೆ ಎಂಬುದನ್ನು ನಿರೂಪಿಸಲೆಂಬಂತೆ ಹಲವಾರು ಮುಖ್ಯ ಹೊಸ ಹೊಸ ಕಥೆ, ಕಾದಂಬರಿ, ಕವನ, ಪ್ರಬಂಧಗಳ ಪುಸ್ತಕಗಳು ಬಿಡುಗಡೆಯಾಗಿ ದಾಖಲೆಯ ಮಟ್ಟದಲ್ಲಿ ಮಾರಾಟವಾಗಿದ್ದಾವೆ.



ಕನ್ನಡದ ಲೇಖಕರುಗಳು ತಮ್ಮ ಪ್ರತಿಭೆಯಿಂದ ಹತ್ತು ಹಲವಾರು ಪುರಸ್ಕಾರಗಳನ್ನು ಗಳಿಸಿರುವುದು ಅವರ ಕೃತಿಯ ಶ್ರೇಷ್ಠತೆಗೆ ಸಾಕ್ಷಿ. ಇಂಥವರನ್ನು ಹೊಂದಿರುವ ಕನ್ನಡಾಂಭೆ ಎಂದಿಗೂ ಬಂಜೆಯಲ್ಲ. ಇಂಥವರ ಸಂತತಿ ಸಾವಿರವಾಗಲಿ. ನಾಡಿನ ಶ್ರೀಮಂತಿಕೆಯನ್ನು ಸಾಂಸ್ಕೃತಿಕ ರಂಗದ ಕಲಾವಿದರ ಸಂಖ್ಯೆಯಿಂದ ಹಿಂದೆ ಅಳೆಯುತ್ತಿದ್ದರಂತೆ. ಅದು ನಿಜ ಅವರುಗಳಿಂದಲೇ ಒಂದೀಷ್ಟು ಒಳ್ಳೆಯತನದ ಸಿಹಿ ಗಾಳಿಯ ಸಿಂಚನವಾಗುತ್ತಿದೆ ಎಂದರೇ ತಪ್ಪಲ್ಲಾ



ವೈಕ್ತಿಕವಾಗಿ ಕಳೆದ ವರ್ಷ ನನಗೆ ಒಂದೀಷ್ಟು ಸಫಲತೆಯನ್ನು ವಿಫಲತೆಯನ್ನು ಕೊಟ್ಟಿದ್ದರೂ... ಸ್ನೇಹ ಲೋಕಕ್ಕೆ ಹೊಸ ಸಂಗಾತಿಗಳನ್ನು ಕೊಟ್ಟು ಅವರ ವಿಭಿನ್ನತೆಯಿಂದ ನನ್ನ ಅರಿವನ್ನು ಮತ್ತು ಖುಷಿ ಕ್ಷಣಗಳನ್ನು ಉತ್ತಮಗೊಳಿಸಿದೇ ಎಂದರೇ ಅತಿಶಯೋಕ್ತಿಯಲ್ಲ. ಒಂದು ಪುಸ್ತಕವನ್ನು ಓದುವುದಕ್ಕಿಂತ ವಿಭಿನ್ನ ಜನರೊಡನೆ ಬೇರೆಯುವುದು ಅವರ ವಿಚಾರವನ್ನು ಅರಿಯುವುದು ಮೇಲು ಎಂಬಂತೆ. ಕಳೆದ ವರ್ಷದಲ್ಲಿ ಹೊಸ ಮುಖಗಳ ಪರಿಚಯ ತೀರ ಆತ್ಮೀಯರನ್ನಾಗಿ ಮಾಡಿತು. ಜೀವನ ಅಂದರೇ ನಿತ್ಯ ನಮ್ಮ ಬದುಕಿನಲ್ಲಿ ಹಲವರನ್ನು ಬೇಟಿ ಮಾಡುತ್ತೇವೆ ಅದರೆ ಅವರಲ್ಲಿ ಕೆಲವು ಗಟ್ಟಿ ಕಾಳುಗಳು ಮಾತ್ರ ನಮ್ಮಲ್ಲಿ ಬೇರು ಬಿಡುತ್ತವೆ. ಅವುಗಳ ಬೆಳವಣಿಗೆಗೆ ಒಂದೀಷ್ಟು ಆತ್ಮೀಯತೆ ಮತ್ತು ಪರಸ್ಪರ ನಂಬಿಕೆಯ ಬೆಳಕು ಬಿದ್ದರೆ ಹೆಮ್ಮರವಾಗಿ ಬೆಳೆದು ನಮಗೂ ಮತ್ತು ಬೇರೆಯವರಿಗೂ ನೆರಳಾಗುತ್ತೆ. ಅದು ವ್ಯಕ್ತಿ, ವಿಚಾರ, ನಂಬಿಕೆ, ಭಾವನೆ, ಆಕಾಂಕ್ಷೆ ಇತ್ಯಾದಿ ಯಾವುದಾದರೂ ಆಗಿರಬಹುದು.



ಹೊಸ ವರ್ಷಕ್ಕೆ ಹೊಸ ಬೆಳಕು ಇರಲಿ.. ಹೊಸ ರೀತಿಯಲ್ಲಿ ಹಳೆ-ಹೊಸ ಆಸೆಗಳು ನನಸಾಗಲಿ... ಹೊಸ ಕನಸು ಹೊಳೆಯಲಿ ಬೆಳೆಯಲಿ.



ಚಿಯರ್ಸ್!

ಮಂಗಳವಾರ, ಡಿಸೆಂಬರ್ 21, 2010

ಈರುಳ್ಳಿ ಕಣ್ಣೀರ ಪುರಾಣ



ಮೊದ ಮೊದಲು ನಮ್ಮ ನಿಮ್ಮ ಹೆಣ್ಣು ಮಕ್ಕಳು ನಿತ್ಯ ತಮ್ಮ ಕಣ್ಣೀರನ್ನು ಅಡಿಗೆ ಮನೆಯಲ್ಲಿ ಮೌನವಾಗಿ ಸುರಿಸುತ್ತಿದ್ದರು. ಆದರೇ ಕಳೆದ ಒಂದು ವಾರದಿಂದ ಪ್ರತಿಯೊಬ್ಬರೂ ಸಾಮಾನ್ಯ ಪ್ರಜೆಯಿಂದ ಸಾಗಿ ಡೆಲ್ಲಿಯ ನಮ್ಮ ಪ್ರಧಾನ ಮಂತ್ರಿಯವರೆಗೂ ತಮ್ಮ ಕಣ್ಣೀರನ್ನು ಹರಿಯಬಿಡುವಂತ ಸ್ಥಿತಿ ಬಂದಿರುವುದು ಯಾಕೆಂದು ಆಶ್ಚರ್ಯವೇ? ಅದೇ ಈರುಳ್ಳಿ ಸರ್ ಈರುಳ್ಳಿ! ಈರುಳ್ಳಿ ಈಗ ಎಲ್ಲೆಲ್ಲೂ ಅದರ ಒಂದು ಮಾತು ಬಿಟ್ಟರೆ ಬೇರೆ ವಿಷಯವೇ ಇಲ್ಲ. ಯಾಕೆಂದರೆ ಆ ಮಟ್ಟಿಗೆ ಅದು ತನ್ನ ಬೆಲೆಯನ್ನು ಹೆಚ್ಚಿಸಿಕೊಂಡು ಎಲ್ಲರ ಕಣ್ಣನ್ನು ಕೆಂಪಗೆ ಮಾಡಿದೆ.


ನಮಗಂತೂ ತರಕಾರಿಗಳು ಮತ್ತು ಅದರ ಮಹತ್ವ ತಿಳಿದುಕೊಳ್ಳುವ ಅವಶ್ಯಕತೆಯೇ ಇಲ್ಲ ಬಿಡಿ. ಹೇಗೋ ನಮ್ಮ ಹೆತ್ತವರು, ದೊಡ್ಡವರು ನಿತ್ಯ ಅವುಗಳನ್ನು ತಂದು ಸಮಯಕ್ಕೆ ಸರಿಯಾಗಿ ತಿಂಡಿ ತಿನಿಸುಗಳನ್ನು ಮಾಡಿ ನಮ್ಮ ಅರೆ ಹೊಟ್ಟೆಯನ್ನು ತುಂಬಿಸುವುದರಿಂದ ಆದರ ಯೋಚನೆಯನ್ನು ಮಾಡುವ ಜರೂರತು ಇಲ್ಲವೇ ಇಲ್ಲ.


ಎಷ್ಟೋ ತರಕಾರಿಯ ಹೆಸರಗಳು ಪುನಃ ನಮ್ಮ ಬಾಲ್ಯದ ಜೀವಶಾಸ್ತ್ರವನ್ನು ಪುನಃ ಪರಮರ್ಶಿಸುವ ಮಟ್ಟಿಗೆ ಕಣ್ಮರೆಯಾಗಿ ಬಿಟ್ಟಿವೆ. ಯಾಕೆಂದರೇ ನಾವುಗಳು ನಮ್ಮದೇಯಾದ ಪ್ರಪಂಚದಲ್ಲಿ ಬ್ಯುಸಿಯಾಗಿಬಿಟ್ಟಿದ್ದೇವಪ್ಪ.


ಅಡಿಗೆಯ ಮನೆಯಲ್ಲಿ ರಾಜ ಮರ್ಯಾದೆಯನ್ನು ನಮ್ಮ ಭಾರತದಲ್ಲಿ ಗಳಿಸಿರುವ ಏಕೈಕ ತರಕಾರಿಯೆಂದರೇ ಅದು ಈರುಳ್ಳಿ. ಅದು ಇಲ್ಲದ ನಮ್ಮ ಆಹಾರ ಪ್ರಪಂಚವೇ ಒಂದು ಶೂನ್ಯ ಮಾತ್ರ!


ಅದರಿಂದ ತಯಾರಿಸುವ ತರಾವೇರಿ ತಿಂಡಿ ತಿನಿಸುಗಳ ಪಟ್ಟಿಯಯೇ ಒಂದು ಕಥೆಯಾದಿತು. ಅವುಗಳ ರುಚಿಯನ್ನು ನಾವುಗಳೆಲ್ಲಾ ಗೊತ್ತಿಲ್ಲದ ರೀತಿಯಲ್ಲಿ ಸವಿದಿದ್ದು ಪುನಃ ಪುನಃ ನೆನಪಿಸಿಕೊಂಡು ತಿನ್ನುತ್ತೇವೆ. ಅವುಗಳಿಗೆ ಅಂಥ ರುಚಿಕಟ್ಟನ್ನು ಕೊಡುವುದು ಈರುಳ್ಳಿ ಮಾತ್ರ. ನಿನ್ನೇ ದಟ್ಸ್ ಕನ್ನಡದಲ್ಲಿ ಈ ಈರುಳ್ಳಿ ಬೆಲೆ ದುಭಾರಿಯಾದ ಸಮಯದಲ್ಲಿ ಇದಕ್ಕೆ ಬದಲಾಗಿ ಕೆಲವು ತರಕಾರಿಗಳನ್ನು ಕೊಟ್ಟು ಓದುಗರಿಗೆ ಚುನಾಯಿಸಲು ಕೊಟ್ಟಿದ್ದರು. ಆದರೇ ನಮಗೆ ತಿಳಿದ ಮಟ್ಟಿಗೆ ಆದರ ರುಚಿಯನ್ನು ಬೇರೊಂದು ತರಕಾರಿ ಕೊಡಲಾರದು. ಯಾಕೆಂದರೇ ಅದು ಯುನಿಕ್ ಮತ್ತು ಬೇರೊಂದು ಕಾಫಿ ಮಾಡಲಾರದ ಗುಣವನ್ನು ಹೊಂದಿರುವಂತದ್ದು.


ಏನೇ ಈ ದುಬಾರಿಯಾದ ಬೆಲೆಯಿದ್ದರೂ ಸಾಮಾನ್ಯ ರೈತ ಇದನ್ನು ಮೈ ಮಣ್ಣು ಮಾಡಿಕೊಂಡು ಬೆಳೆದು ನಮ್ಮ ಹೊಟ್ಟೆ ತುಂಬಿಸಿದರೂ ಅವನಿಗೆ ಈ ಬೆಲೆ ಏರಿಕೆಯ ಲಾಭವಂತು ಎಂದಿಗೂ ದೊರೆಯಲಾರದು. ಅವನಿಗೆ ಯಾವತ್ತಿದ್ದರೂ ಕೇವಲ ಅದರ ಕಷ್ಟ ನಷ್ಟಗಳ ಕಣ್ಣೀರು ಮಾತ್ರ. ಅದರೂ ಹೊಟ್ಟೆಯ ಪಾಡು ಮತ್ತು ಅವನ ನಿತ್ಯ ಕರ್ಮ ಬೆಳೆಯನ್ನು ಬೆಳೆಯಲೇಬೇಕು. ಮತ್ತು ಬೆಳೆಯುತ್ತಲೇ ಇರುತ್ತಾನೆ. ಸರಿಯಾದ ರೇಟು ಬಂತು ಎಂದು ಖುಷಿಯನ್ನುಪಡುವ ವೇಳೆಗೆ ನಮ್ಮ ಈ ವಿಚಿತ್ರ ಪ್ರಕೃತಿಯ ಮಾಯಜಾಲದಲ್ಲಿ ಸರಿಯಾಗಿ ಧೋ ಎಂಬ ಮಳೆಯೊ, ಮೊಡ ಮುಚ್ಚಿದ ವಾತವರಣದಿಂದ ಹಸನು ಮಾಡುವ ಸಮಯಕ್ಕೇ ಸರಿಯಾಗಿ ಈ ರೀತಿಯಲ್ಲಿ ಏನಾದರೂ ಒಂದು ಸ್ಥಿತಿಯಿಂದ ಬೆಳೆದ ಅದಷ್ಟೂ ಈರುಳ್ಳಿಯನ್ನು ತಿಪ್ಪೇಯ ಪಾಲು ಮಾಡಿರುವ ರೈತರು ಸಾವಿರಾರು.


ಎಷ್ಟೋ ಭಾರಿ ಎಲ್ಲಾ ಈರುಳ್ಳಿಯನ್ನು ಮೂಟೆಯಲ್ಲಿ ತುಂಬಿಸಿಕೊಂಡು ನಗರಗಳಿಗೆ ಬಂದು ವ್ಯಾಪಾರ ಮಾಡಿದರೇ ಅವನಿಗೆ ಅವುಗಳನ್ನು ಸಾಗಿಸಿದ ಲಾರಿಯ ಹಣವನ್ನು ಕೊಡಲಾರದಷ್ಟು ಹಣ ಬಂದಿರುವುದಿಲ್ಲ. ಯಾವ ಸುಖಕ್ಕಾಗಿ ಈ ಬೆಳೆಯನ್ನು ಬೆಳೆಯಬೇಕು ಎಂದು ಎಷ್ಟೋ ರೈತರು ತಾವು ಬೆಳೆದ ಈರುಳ್ಳಿಯನ್ನು ಹಾಗೆಯೇ ಹೊಲದಲ್ಲಿ ಬಿಟ್ಟು ಯಾರದರೂ ತೆಗೆದುಕೊಂಡು ಹೋಗಲಿ ಎಂದೊ ಅಥವಾ ಹೊಲಕ್ಕೆ ಗೊಬ್ಬರವಾಗಲಿಯೆಂದು ಕೊಳೆಯಲು ಬಿಟ್ಟಿರುವ ನಿದರ್ಶನಗಳು ಸಾವಿರಾರು..


ಆದರೇ ಇಲ್ಲಿನ ನಮ್ಮ ಮೆಟ್ರೂ ಜನಗಳಿಗೆ ಈ ಕಷ್ಟ ನಷ್ಟಗಳ ಸಾಮಾನ್ಯ ರೈತನ ಚಿತ್ರಣವೇ ಕಣ್ಣಿಗೆ ಬೀಳುವುದಿಲ್ಲ. ಇಲ್ಲಿಯ ಹೈಟೇಕ್ ಎ.ಸಿ ಯಲ್ಲಿನ ಪ್ರಶ್ ವೇಜ್ ಶಾಪ್ ಗಳಲ್ಲಿ ಹೇಳಿದಷ್ಟು ಹಣ ಕೊಟ್ಟು ಕ್ಯೂನಲ್ಲಿ ನಿಂತು ಖರೀದಿಸುತ್ತಾರೆ. ಹಾಗದರೇ ಈ ಎಲ್ಲಾ ದುಬಾರಿಯ ಬೆಲೆ ಯಾರ ಜೇಬನ್ನು ಸೇರುತ್ತದೆ? ಇನ್ನೆಲ್ಲಿಗೇ ಇಲ್ಲಿಯೇ ಇರುವ ಹೈಟೆಕ್ ದಳ್ಳಾಳಿಗಳನ್ನು.


ನನಗೇ ಇದುವರಿಗೂ ಅರ್ಥವಾಗದೇ ಇರುವ ಮರ್ಮವೆಂದರೇ ನಾವುಗಳು ಎಂದಾದರೂ ಅಪರೂಪಕ್ಕೆ ಅಡಿಗೆ ಮಾಡಲು ನಿಂತಾಗ ಈ ಈರುಳ್ಳಿಯನ್ನು ಕೊಯ್ಯುವಾಗ ಬರುವ ಕಣ್ಣೀರು.. ನಿತ್ಯ ತಮ್ಮ ಕಾಯಕವನ್ನು ಮಾಡುವ ನಮ್ಮ ಅಮ್ಮಂದಿರುಗಳಲ್ಲಿ ಯಾಕೇ ಬರುವುದಿಲ್ಲ? ನನಗೆ ಅನಿಸುತ್ತದೆ... ಅದು ಅವರ ಜೊತೆಯಲ್ಲಿ ಅಷ್ಟರ ಮಟ್ಟಿಗೆ ಹೊಂದಿಕೊಂಡಿರಬಹುದು ಅಲ್ಲವಾ..
ಹೋಟೆಲ್ ಗಳಲ್ಲಿ ಈರುಳ್ಳಿಯನ್ನು ಕತ್ತರಿಸುವ ಹುಡುಗರ ಶೈಲಿಯನ್ನು ನೋಡುವುದೇ ಒಂದು ಚಂದ. ಎಷ್ಟೊಂದು ವೇಗವಾಗಿ ಒಂದೇ ಸೈಜಿನಲ್ಲಿ ಕೆಲವೇ ಸಮಯದಲ್ಲಿ ರಾಶಿಯ ಗೂಡನ್ನೇ ನಿರ್ಮಿಸಿ ಬಿಟ್ಟಿರುತ್ತಾರೆ. ಅದಕ್ಕೆ ಇರಬೇಕು ಅನುಭವ ಎಂಬುದು ಯಾರಪ್ಪನ ಸ್ವತ್ತಲ್ಲಾ.


ನಮ್ಮ ಭಾರತದಲ್ಲಿ ವರ್ಷದಲ್ಲಿ ಸರಾಸರಿ ೪೦ ಲಕ್ಷ ಟನ್ ಈರುಳ್ಳಿಯನ್ನು ತಿನ್ನುವರು ಎಂದರೇ ಯೋಚಿಸಿ ಅದರ ಪ್ರಾಮುಖ್ಯತೆಯನ್ನು. ದೆಹಲಿ ಒಂದರಲ್ಲಿಯೇ ಮೂರುಸಾವಿರ ಟನ್ ನಿತ್ಯ ಕೊಚ್ಚಿ ಹಾಕುತ್ತಾರೆ ಎಂದರೇ ಭಾರತದ ಬೇರೆ ಬೇರೆ ಭಾಗಗಳಲ್ಲಿ ಕೇಳುವುದೇ ಬೇಡವಲ್ಲ.


ಪ್ರಪಂಚದಲ್ಲಿಯೇ ಹೆಚ್ಚು ಈರುಳ್ಳಿಯನ್ನು ಉತ್ಪದಿಸುವ ದೇಶವೆಂದರೇ ಚೀನಾ ಅನಂತರದ ಸ್ಥಾನ ಭಾರತಕ್ಕೇ.ಭಾರತದ ಶೇಕಡ ೩೦ ರಷ್ಟು ಈರುಳ್ಳಿ ಉತ್ವದನೆ ಮಹಾರಾಷ್ಟ್ರ ಒಂದರಲ್ಲಿಯೇ ಆಗುತ್ತಿದೆ. ಭಾರತದಲ್ಲಿ ಹೆಚ್ಚಾಗಿ ಈರುಳ್ಳಿಯನ್ನು ಬೆಳೆಯುವ ಮಹಾರಾಷ್ಟ್ರದಲ್ಲಿನ ಸ್ಥಳಗಳೆಂದರೇ ಪುಣೆ, ಅಹಮದನಗರ, ಸತರಾ, ಸೊಲ್ಲಾಪುರ ಇತ್ಯಾದಿ .


ಈ ತರಕಾರಿ ಬಹು ದಿನಗಳವರೆಗೆ ಇಟ್ಟುಕೊಳ್ಳುವುದು ಬಹು ಕಷ್ಟ. ಇಟ್ಟಲ್ಲಿಯೇ ಕೊಳೆತು ಹೋಗುವುದು ಇದರ ಸಾಮಾನ್ಯ ಗುಣ. ಗುಂಪಿನಲ್ಲಿ ಒಂದು ಕೊಳೆತರು ಅದು ತನ್ನ ಸ್ನೇಹಿತರುಗಳನ್ನು ತನ್ನ ದಾರಿಯನ್ನೇ ಹಿಡಿಯುವಂತೆ ಪ್ರೇರಪಿಸುವುದು. ಇದೇ ಇದರ ಬೆಲೆಯ ಏರಿಕೆ ಇಳಿಕೆಗೆ ಕಾರಣ. ಸುಗ್ಗಿಯ ಕಾಲದಲ್ಲಿ ಇವುಗಳ ಬೆಲೆ ಕೇವಲ ಐವತ್ತು ಪೈಸೆಗೆ ಇಳಿದಿರುವುದುಂಟು ಎಂದರೇ ಯೋಚಿಸಿ.. ಇಂದಿನ ಈ ಬಂಗಾರದ ಬೆಲೆಯ ಕಾರಣ. ಅದರೂ ನಮ್ಮ ಸರ್ಕಾರಗಳನ್ನು ನಡುಗಿಸುವ ಮಟ್ಟಿಗೆ ಇದು ತನ್ನ ಜಾದೂವನ್ನು ಮಾಡಿದೇ ಎಂದರೆ ಅತಿಶಯೋಕ್ತಿಯಲ್ಲಾ.


ವೈದಕೀಯವಾಗಿ ಪ್ರಮಾಣಿತವಾಗಿರುವ ಈ ಮುಖ್ಯ ತರಕಾರಿ ನಮ್ಮ ಆರೋಗ್ಯಕ್ಕೆ ಅತ್ಯಗತ್ಯ. ಅದನ್ನು ಹಸಿಯಾಗಿ, ಬೆಯಸಿ ಹೇಗಾದರೂ ಸೇವಿಸಬಹುದು. ಹಸಿಯಾಗಿ ತಿಂದಾಗ ಬಾಯಲ್ಲಿ ಅದರ ವಾಸನೆಯು ಅಪಾರ.. ಅದರೇ ತಿನ್ನಲೇ ಬೇಕಲ್ಲ. ಏನೋ ಗೊತ್ತಿಲ್ಲ. ಈರುಳ್ಳಿ ಒಂದು ಇದ್ದರೇ ಎನಾದರೂ ಅಡಿಗೆಯನ್ನು ಕ್ಷಣ ಮಾತ್ರದಲ್ಲಿ ಮಾಡಬಹುದು. ಅದು ಇಲ್ಲದ ಅಡಿಗೆಯೇ ಇಲ್ಲ ಎಂಬುದು ನನ್ನ ಭಾವನೇ.. ನೀವು ಏನೂ ಹೇಳುತ್ತೀರಾ?

ಇತಿಃ ಈರುಳ್ಳಿ ಪುರಾಣ ಸಮಾಪ್ತಿ!
-

ಗುರುವಾರ, ಡಿಸೆಂಬರ್ 16, 2010

ಆದರ್ಶ ಹೇಳುವುದಕ್ಕಾ?

ನಾವೊಂದು ಎಣಿಸಿದರೇ ದೈವವೊಂದು ಬಗೆಯುವುದು ಎಂಬುದು ಒಂದು ನಾಣ್ಣುಡಿ.


ನಾವುಗಳು ನಮ್ಮ ಜೊತೆಯಿರುವವರ ಬಗ್ಗೆ, ನಮ್ಮ ಸ್ನೇಹಿತರ ಬಗ್ಗೆ, ನಮ್ಮ ಮನೆಯ ತಂದೆ ತಾಯಿಗಳ ಬಗ್ಗೆ, ಮನೆಯ ಹಿರಿಯರ ಬಗ್ಗೆ, ನಮ್ಮ ಬಾಲ್ಯದ ಗುರುಗಳು ಬಗ್ಗೆ, ನಮ್ಮ ಸಂಬಂಧಿಕರುಗಳ ಬಗ್ಗೆ, ಕೊನೆಗೆ ನಮ್ಮ ರಾಜ್ಯದ ಮುಖ್ಯಮಂತ್ರಿ, ಪ್ರಧಾನಿಯ,ಮಂತ್ರಿಗಳು ಬಗ್ಗೆ, ಮನ ಮೆಚ್ಚಿದ ಸಿನಿಮಾ ನಟ ನಟಿಯ ಬಗ್ಗೆ ಒಂದು ರೀತಿಯಾದ ಯಾರು ಪ್ರಶ್ನೆ ಮಾಡದ ರೀತಿಯ ಗೌರವವದ ಸೌಧವನ್ನು ಕಟ್ಟಿಕೊಂಡು ಅಲ್ಲಿಯೇ ಅವರನ್ನು ಇಟ್ಟು ಹೆಮ್ಮೆ ಪಡುತ್ತಿರುತ್ತೇವೆ.


ಅವರುಗಳು ಏನನ್ನಾದರನ್ನು ಸಾಧಿಸಿದರೇ ನಮ್ಮಗಳಿಗೆ ನಾವೇ ಆ ಸ್ಥಾನವನ್ನು ಪಡೆದಷ್ಟು ಸಂತೋಷವನ್ನುಪಡುತ್ತೇವೆ. ಅವರ ಒಂದು ಒಂದು ಹೆಜ್ಜೆಯನ್ನು ಎಚ್ಚರದಿಂದ ಗಮನಿಸುತ್ತಾ ಅವರುಗಳೂ ಯಾವತ್ತಿದ್ದರೂ ನಮ್ಮವರೇ ಎಂಬ ಭಾವನೆಯ ಜನನಕ್ಕೆ ಕಾರಣ ಸಮಾಜದಲ್ಲಿ ಅವರುಗಳು ಗಳಿಸಿದ ಸ್ಥಾನ ಮತ್ತು ನೆರೆಹೊರೆಯರುವರು ಅವರನ್ನು ನಡೆಸಿಕೊಳ್ಳುವ ರೀತಿ, ಅವರ ಮಾತು, ಪ್ರೀತಿ, ನಡವಳಿಕೆ, ನಮ್ಮ ಗಳ ಬಗ್ಗೆ ಅವರಿಗೆ ಇರುವ ಕಾಳಜಿ ಇತ್ಯಾದಿ ವಿಷಯಗಳಿಂದ ಆ ಆಯ ವಯಸ್ಸಿನಲ್ಲಿ ಲೆಕ್ಕವಿಲ್ಲದಷ್ಟು ಪ್ರೀತಿ ಪಾತ್ರರು ನಮ್ಮ ಮನಸ್ಸಿನಲ್ಲಿ ಕೂರುತ್ತಾರೆ. ಮತ್ತು ನಮ್ಮ ಹೃದಯವನ್ನು ಆಕ್ರಮಿಸಿಕೊಳ್ಳುತ್ತಾರೆ. ಅದೇಯಲ್ಲವಾ ಜೀವನದ ಜೀವಿಗಳ ಮರ್ಮದ ನಿತ್ಯ ಸಂತೆ.


ನಾವುಗಳು ಈಗ ಏನಾದರೂ ಹೀಗೆ ಇದ್ದೇವೆ ಎಂದರೇ ಈ ಮೇಲೆ ಹೇಳಿದ ನಮ್ಮ ಹತ್ತಿರದವರ ನಮ್ಮ ಮನ ಗೆದ್ದವರ ಅಚ್ಚಿನ ಪ್ರತಿಯೇ ಸರಿ. ಅವರ ಒಂದೊಂದು ಗುಣ, ವ್ಯಕ್ತಿತ್ವ, ನುಡಿ ನಮ್ಮ ಗುಣಾವಗುಣಗಳನ್ನು ನಿರ್ಧರಿಸಿರುತ್ತದೆ. ಅದನ್ನು ಬಿಟ್ಟು ಬೇರೆಯಾಗಲೂ ಸಾಧ್ಯವಿಲ್ಲ. ಬಾಲ್ಯದಂತೂ ನಮ್ಮ ತಂದೆ ತಾಯಿಯರ ಪಡಿಯಚ್ಚುಗುಳಾಗಿರುತ್ತೇವೆ. ಅದಕ್ಕೆ ಹಿರಿಯ ಅಜ್ಜ ಅಜ್ಜಿಗಳು "ಹೇ ನಿನ್ನ ಮಗಳು ಎಲ್ಲಾ ನಿನ್ನಂತೇ ಕಣೇ!" ಎಂದು ಛೇಡಿಸುತ್ತಿರುತ್ತಾರೆ.



ಆ ಸಮಯದಲ್ಲಿ ಅದು ಸರಿಯಾದುದ್ದೇ ಯಾಕೆಂದರೆ ನಾವುಗಳು ಈ ಹೊರಗಿನ ಜಗತ್ತಿನ ಕಡೆಗೆ ನಮ್ಮ ಗಮನವಿರುವುದಿಲ್ಲ. ಏನಾದರೂ ಮನೆ ಮನೆಯಲ್ಲಿರುವವರ ಜೊತೆಯೆ ನಮ್ಮ ಪ್ರಪಂಚವಾಗಿರುತ್ತದೆ. ಯಾರಾದರೂ ಏನಾದರೂ ಮಾಡಿದರೇ ಗಮನವಿಟ್ಟು ಅವರಂತೆಯೇ ಅನುಸರಿಸಲೂ ತೊಡಗುತ್ತೇವೆ. ಕೆಟ್ಟದ್ದು ಯಾವುದು, ಒಳ್ಳೆಯದ್ದು ಯಾವುದು ಎಂಬುದನ್ನು ತಿಳಿಯುವ ವಯಸ್ಸು ಅದು ಆಗಿರುವುದಿಲ್ಲ. ಅಷ್ಟೊಂದು ಮುಗ್ಧ ಮರಿಗಳು. ಅದ್ದರಿಂದ ಹಿರಿಯರುಗಳು ನಮ್ಮ ಮೇಲೆ ಒಂದು ಕಣ್ಣು ಇಟ್ಟಿರುತ್ತಾರೆ. ಅದು ಅವಶ್ಯ.


ಹೀಗೆ ನಮ್ಮ ಅನುಕರಣೆಯ ಜಾಡು ಕೊಂಚ ಕೊಂಚ ವಿಸ್ತರಿಸುತ್ತಾ ಸಂಬಂಧಿಕರುಗಳನ್ನು, ಸ್ನೇಹಿತರನ್ನು ಪಡೆಯುತ್ತಾ... ನಮ್ಮನ್ನು ಗಮನಿಸುವವರನ್ನು, ನಮ್ಮ ಭಾವನೆಗಳಿಗೆ ಸ್ಪಂಧಿಸುವವರನ್ನು ನಮ್ಮ ಹಾಗೆಯೇ ಯೋಚಿಸುವವರನ್ನು, ನಮಗೆ ಪಾಸೀಟಿವ್ ಅನಿಸಿದವರನ್ನು ನಮ್ಮ ಮನಸ್ಸಿನಲ್ಲಿ ಸ್ಥಾಪಿಸಿಕೊಳ್ಳುತ್ತಾ ಹೋಗುತ್ತೇವೆ. ಆ ಸ್ಥಾಪನೆಯ ಸಂಖ್ಯೆ ಸಾಕಷ್ಟು ಇರುತ್ತದೆ..
ಇಲ್ಲಿ ಗಮನಿಸಬೇಕು. ಯಾರೇ ಆಗಲಿ ತನಗೆ ಅನಿಸಿದಂತೆ ಆ ವ್ಯಕ್ತಿಗಳೆಲ್ಲ ಅವನ/ಅವಳ ಮಟ್ಟಿಗೆ ತುಂಬ ಒಳ್ಳೆಯವರು ಮತ್ತು ಪ್ರಶ್ನಾತೀತರು. ಯಾಕೆಂದರೇ ಅವನ ನೆಚ್ಚೆಗೆ ಮತ್ತು ಅವನು ಏನನ್ನು ಅಂದುಕೊಂಡು ಪಯಣಿಸುತ್ತಾನೋ ಅದಕ್ಕೇ ಸ್ಪಂದಿಸುವವರಾಗಿರುತ್ತಾರೆ. ಇಲ್ಲಿ ಗಮನಿಸಬೇಕಾದ್ದು. ಈ ವ್ಯಕ್ತಿ ಹೇಗೆ ಎಂಬುದು. ಅವನಿಗೆ ಬೇಡವಾದದ್ದು ಬೇರೊಬ್ಬರಿಗೆ ಬೇಕಾಗಿರಬಹುದು. ಇಲ್ಲಿ ಒಳ್ಳೆಯದು ಕೆಟ್ಟದ್ದು ಎಂಬುವ ಸವಾಲೇ ಇಲ್ಲ.


ತಾನು ಅವರಂತೆಯೇ ಆಗಬೇಕು ಎಂಥಲೊ ಅವರನ್ನು ಅನುಸರಿಸುತ್ತಿರುತ್ತಾನೆ. ಅವರನ್ನು ತನ್ನ ಆದರ್ಶದ ಮನೆಯಲ್ಲಿ ಇರಿಸಿಕೊಂಡಿರುತ್ತಾನೆ. ಹೀಗೆ ಇರುವವರುಗಳ ಪಟ್ಟಿ ತಾನು ಅವರೊಡನೆ ನಿತ್ಯ ಸಂಪರ್ಕದಲ್ಲಿ ಇರಲೇ ಬೇಕಾದ ಅವಶ್ಯಕತೆ ಇಲ್ಲ. ಅವರನ್ನು ಎಲ್ಲಾದರೂ ಬೇಟಿ ಮಾಡಿರಬಹುದು. ತನಗೆ ಇಷ್ಟವಾದ ಚಿತ್ರದಲ್ಲಿ ನಟಿಸಿರುವ ನಟ/ನಟಿಯಿರಬಹುದು. ತಾನು ಓದಿದದ ಉತ್ತಮ ಪುಸ್ತಕದ ಲೇಖಕನಾಗಿರಬಹುದು, ತನ್ನ ಜೊತೆಗಾರ/ಗಾರ್ತಿಯಿರಬಹುದು.... ಇವರುಗಳ ವ್ಯಕ್ತಿತ್ವದ ಕೆಲವು ಅಂಶಗಳು ಇವನನ್ನು ಇವನ ಬದುಕಿಗೆ ಒಂದು ದಿಕ್ಕು ತೋರಿಸರಬಹುದು ಅಥಾವ ಅವನನ್ನು ಆ ಕ್ಷಣಕ್ಕೇ ಆನಂದಮಯವಾಗಿ ಇಟ್ಟಿರಬಹುದು. ಅವರುಗಳನ್ನು ಒಂದು ಕ್ಷಣ ನೆನಪಿಸಿಕೊಂಡರೇ ಇವನಿ/ಳಿಗೆ ಏನೋ ಒಂದು ಶಕ್ತಿಯನ್ನು ಪಡೆದಂತಾಗುತ್ತದೆ. ಅವರುಗಳು ಏನಾದರೂ ಸಾಧಿಸಿದರಂತೋ ಕೇಳುವುದೇ ಬೇಡ ತಾನೇ ಮುಂದಾಗಿ ಸುತ್ತಲಿನವರಿಗೆ ಸಿಹಿಯನ್ನು ಹಂಚುವ ಮಟ್ಟಿಗೆ ಆತ್ಮೀಯತೆ. ಇವರುಗಳಲ್ಲಿ ಬಹಳಷ್ಟು ಮಂದಿಯನ್ನು ಮುಖತಃ ಬೇಟಿ ಮಾಡಿ ಮಾತನ್ನಾಡಿರುವುದಿಲ್ಲ. ಆದರೂ ಅವನು/ಅವಳು ಗೊತ್ತು ಗುರು! ಎಂಬ ಧೃಡತೆ.


ಆದರೇ ಆ ಆದರ್ಶಪುರುಷರುಗಳಿಗೆ ಇಂಥ ಸಾಮಾನ್ಯ ಭಕ್ತರುಗಳು ಸಾವಿರಾರು. ಆದರೂ ಅವರುಗಳು ಸಹ ನಮ್ಮ ನಿಮ್ಮಂತೆಯೇ ಬೆಳೆದು. ಅವರುಗಳು ನಮ್ಮ ನಿಮ್ಮಂತೆ ಬಾಲ್ಯದಿಂದ, ಯೌವನದ ದಿನಗಳಲ್ಲಿ ನಾವುಗಳು ಹೇಗೆ ಇವರುಗಳನ್ನು ಆದರ್ಶರುಗಳು ಎಂದು ಇಟ್ಟುಕೊಂಡು ನೋಡುತ್ತಿರುತ್ತೇವೋ ಹಾಗೆಯೇ ಅವರುಗಳು ಮತ್ತೇ ಅವರ ಯಾರೋ ಹಿರಿಯರನ್ನು ಆರಾಧಿಸಿರುತ್ತಾರೆ.


ಕಾಲದ ಮಹಿಮೆಯೊ ಅಥಾವ ಯಾವುದೊ ವಿಧಿಯಾಟವೊ ಒಂದು ಕ್ಷಣ ಮೈಮರೆತು ತಮ್ಮ ಆದರ್ಶದ ಜೀವನವನ್ನು ಬೀದಿಗೆ ತಂದು ಕೊಂಡಾಗ, ನೈತಿಕತೆಯನ್ನು ಬಿಟ್ಟಾಗ, ಭ್ರಷ್ಟತೆಯನ್ನು ಅಂಟಿಸಿಕೊಂಡಾಗ.... ಇವನನ್ನು ಪಾಲೋ ಮಾಡುವ ನಮ್ಮ ನಿಮ್ಮಂತ ಜನ ಸಾಮಾನ್ಯನ ಪರಿಸ್ಥಿತಿ ಯಾರಿಗೆ ಹೇಳಬೇಕು. ನಿನ್ನೇಯವರೆಗೂ ಅವನ/ಅವಳ ಬಗ್ಗೆ ನಾವುಗಳು ಎಲ್ಲರ ಮುಂದೆ/ಸ್ವತಃ ತನ್ನ ಅಂತರಂಗದಲ್ಲಿ ಉನ್ನತವಾದ ಜಾಗವನ್ನು ಕೊಟ್ಟು ಪೂಜಿಸಿಕೊಂಡು ಹೆಮ್ಮೆಯನ್ನು ಪಟ್ಟಿರುತ್ತೇವೆ.


ಆದರೇ! ಇದು ಅವರುಗಳಿಗೆ ತಿಳಿಯಬೇಕಲ್ಲಾ ಸ್ವಾಮಿ. ಅವರುಗಳು ಸಹ ಉಪ್ಪು ಹುಳಿ ತಿನ್ನುವ (ಅ)ಸಾಮಾನ್ಯರುಗಳು ಎಂದು ನಾವುಗಳು ಎಂದಿಗೂ ಕಲ್ಪಿಸಿಕೊಂಡಿರುವುದಿಲ್ಲ. ಹೀಗೆ ಒಂದೇ ಭಾರಿಗೆ ನಮ್ಮ ಹೆಮ್ಮೆಯ ಗುಳ್ಳೆಗೆ ಸೂಜಿ ಚುಚ್ಚುವಂತೆ ಮಾಡಿದರೇ... ನಿಂತ ಧರೆಯೇ ಮುಳುಗಿದ ಅನುಭವ.


ಅದ್ದರಿಂದ ನಾವುಗಳು ಇದರಿಂದ ಭ್ರಮ ನಿರಸನವುಂಟುಮಾಡಿಕೊಳ್ಳುವ ಅವಶ್ಯಕತೆಯಿಲ್ಲ. ಇರಲಿ ನಿಮ್ಮ ಮನದ ಅಂತರಂಗದಲ್ಲಿ ಈ ರೀತಿಯ ಕಲ್ಪನೆಯ ನಿಮ್ಮ ಆದರ್ಶ ಜನಗಳ ಪಟ್ಟಿ. ಅವರುಗಳ ಬಗ್ಗೆ ಅತಿಯಾದ ಕಕ್ಕುಲಾತಿಯನ್ನು ಇಟ್ಟುಕೊಳ್ಳುವುದು ತಪ್ಪು. ಅವರ ಸಾಧನೆಗಳನ್ನು, ಅದಕ್ಕೆ ಅವನು ಉಪಯೋಗಿಸಿದ ದಾರಿಯನ್ನು ಸಾಮಾನ್ಯರಂತೆ ತೆಗೆದುಕೊಳ್ಳಬೇಕು. ಅವರು ಸಹ ಕೇವಲ ನಮ್ಮ ನಿಮ್ಮಂತೆಯೇ ಸರಿ. ಅವರಿಗೂ ನಮಗೆ ಇದ್ದಂತೆಯೇ ದೌರ್ಬಲ್ಯಗಳು ಇರುವುದು ಸಹಜ. ದೌರ್ಬಲ್ಯಗಳನ್ನು ಗೆದ್ದವನಿದ್ದರೇ ಅವನು ದೇವರೇ ಸರಿ. ಇಲ್ಲಿ ಯಾರು ದೇವರುಗಳಲ್ಲಾ.


ಹಾಗೆಯೇ ಸಾರ್ವಜನಿಕವಾಗಿ ಇರುವ ಐಕಾನ್ ಗಳು ಎಂದು ಯಾರನ್ನು ನಾವುಗಳು ಆರಾಧಿಸುತ್ತೇವೋ ಆ ಮಂದಿ ಒಂದು ಕ್ಷಣ ಯೋಚಿಸಿ ತಮ್ಮ ತಮ್ಮತನವನ್ನು ತೋರಬೇಕು. ಕೇವಲ ಪರದೆಯ ಮೇಲೆ ಆದರ್ಶದ ರೂವಾರಿಯಾಗಿದ್ದು ತನ್ನ ವೈಕ್ತಿಕ ಜೀವನದಲ್ಲಿ ಕೇವಲವಾಗಿರಬಾರದು. ಇದು ಪ್ರತಿಯೊಬ್ಬ ಪ್ರಸಿದ್ಧರಿಗೂ ಅನ್ವಯವಾಗುತ್ತದೆ.


ಸಮಾಜ ಗಮನಿಸುವ ವ್ಯಕ್ತಿಗಳು ಯುವ ಜನಾಂಗಕ್ಕೆ ಆದರ್ಶಪ್ರಾಯರು. ನಾವುಗಳು ನಮ್ಮ ಮನೆಯಲ್ಲಿಯೇ ನಮ್ಮ ಬೆರಳನ್ನು ಯಾವಾಗಲೂ ತೋರಿಸುವುದು ಇವರ ಕಡೆಯೇ. ಇದನ್ನು ಅವರುಗಳು ಅರಿಯುವಂತೆ ಮಾಡುವವರು ಯಾರು? ಮತ್ತೇ ಅದೇ ಉನ್ನತ ವಿಚಾರದ ಜೀವನ ಪಯಣದಲ್ಲಿ ಬರುವ ಶಾಲೆ, ಮನೆ, ನೆರೆಹೊರೆ ಮತ್ತು ಸಮಾಜ.


ನಾವುಗಳು ಏನಾದರೂ ಆಗಿರಲಿ ಎಲ್ಲದ್ದಕ್ಕಿಂತ ಮಾನವೀಯತೆಯ ಕಳಕಳಿಯೇ ಮತ್ತು ಚೂರು ನೈತಿಕತೆ ಮುಖ್ಯ. ಇಲ್ಲಿ ಯಾರು ಶಾಶ್ವತವಲ್ಲ. ಇರುವಷ್ಟು ದಿನಗಳಲ್ಲಿ ಎಲ್ಲರಿಗೂ ಪ್ರೀತಿಯನ್ನು ಹಂಚುವ ಧೈಯ ಎಲ್ಲಾರ ಗುರಿಯಾಗಬೇಕು. ತಮ್ಮ ಸಣ್ಣತನದ ಆಸೆಗೆ ತಾವುಗಳು ಗಳಿಸಿರುವ ಸ್ಥಾನ,ಮಾನ,ಗೌರವಗಳನ್ನು ನಗಣ್ಯ ಮಾಡಬಾರದು ಅಲ್ಲವಾ. ಭಾರತ ಎಂದರೇ ಈ ಅಮೂಲ್ಯವಾದ ಶ್ರೇಷ್ಟತೆಗೆ ದ್ಯೂತಕ!

ಶನಿವಾರ, ಡಿಸೆಂಬರ್ 11, 2010

ನೆಚ್ಚಿನ ಸಂಪಾದಕನ ಬಗ್ಗೆ



ನಮಗೆ ಇಷ್ಟಪಟ್ಟದ್ದನ್ನು ಹುಡುಕಿ ಕೊಂಡು ಪಡೆಯುತ್ತೆವೆ. ಅದು ಸಿಗುವವರೆಗೂ ಮನಸ್ಸಿಗೆ ನೆಮ್ಮದಿ ದೊರೆಯದು. ಹಾಗೆಯೇ ಇತ್ತೀಚಿನ ವರ್ಷಗಳಲ್ಲಿ ನನ್ನ ಮನವನ್ನು ಗೆದ್ದಿದ್ದು ವಿಶ್ವೇಶ್ವರ ಭಟ್ ರವರ ಸಾರಥ್ಯದಲ್ಲಿ ಬರುತ್ತಿದ್ದ ವಿ.ಕ ದಿನ ಪತ್ರಿಕೆ. ಅವರುಗಳ ಬರಹಗಳಿಗಾಗಿ ಮಾತ್ರ ನಾನು ಅವರ ಪತ್ರಿಕೆಯನ್ನು ಖರೀದಿಸುತ್ತಿದ್ದೇನೋ ಏನೋ ಗೊತ್ತಿಲ್ಲ. ಆದರೆ ಕಳೆದ ಎರಡು ದಿನಗಳಿಂದ ಅವರಿಲ್ಲದೇ ಬರುತ್ತಿರುವ ಪತ್ರಿಕೆ ಮತ್ತೂ ಒಂದು ಪತ್ರಿಕೆ ಮಾತ್ರ ಅನಿಸುತ್ತಿದೆ. ಅದು ಯಾಕೋ ಅವರನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೇವೆ ಅನಿಸುತ್ತಿದೆ.

ಪತ್ರಿಕಾ ರಂಗದಲ್ಲಿ ಕೆಲವೇ ದಿನಗಳಲ್ಲಿ ಅತಿ ಚಿಕ್ಕ ವಯಸ್ಸಿನಲ್ಲಿ ಕ್ರಾಂತಿಯನ್ನು ಮಾಡಿರುವವರು ಅಂದರೆ ಅದು ವಿಶ್ವೇಶ್ವರ ಭಟ್. ಕನ್ನಡ ಪತ್ರಿಕಾ ರಂಗದಲ್ಲಿ ಅತ್ಯಂತ ವೇಗವಾಗಿ ಪತ್ರಿಕೆಯ ಪ್ರಸಾರ ಸಂಖ್ಯೆಯನ್ನು ಮತ್ತು ತಮ್ಮ ವಿಭಿನ್ನ ಅಭಿರುಚಿಯಿಂದ ಓದುಗರಿಗೆ ಅತಿ ರಸವತ್ತಾದ ರಸಗವಳವನ್ನು ದಿನಂಪ್ರತಿ ಮುಂಜಾನೆಯ ಕಾದಿದ್ದ ಮನಸ್ಸುಗಳಿಗೆ ಚೂಟಿಯನ್ನು ಕೊಡುತ್ತಿದ್ದರು.



ಮುಖಪುಟದಿಂದ ಕೊನೆಯ ಪುಟದವರೆಗೂ ಅವರ ಛಾಪನ್ನು ಕಾಣಿಸುತ್ತಿದ್ದರೂ. ಮುಖಪುಟದಲ್ಲಿ ಬರುತ್ತಿದ್ದ ಅಗ್ರ ಸುದ್ದಿಯ ತಲೆ ಬರಹದಲ್ಲಿ ಕ್ರಾಂತಿಯನ್ನೇ ಉಂಟು ಮಾಡಿದ್ದರೂ ಅಂದರೆ ಅತಿಶಯೋಕ್ತಿಯಲ್ಲ. ಅವರು ಕೊಡುತ್ತಿದ್ದ ಪಂಚಿಂಗ ಹೆಡ್ ಲೈನ್ ಒಂದು ಕ್ಷಣ ಎಂಥವರನ್ನು ಸೆಳೆಯುತ್ತಿತ್ತು. ಇದರಿಂದ ಬೇರೆಯ ಪತ್ರಿಕೆಗಳು ಸಹ ಆ ರೀತಿಯ ಪದಗಳ ಪ್ರಯೋಗಕ್ಕೆ ಅಡಿ ಇಟ್ಟರು ಸಹ. ಈ ರೀತಿಯಲ್ಲಿ ಹೊಸ ಹೊಸ ಪ್ರಯೋಗಗಳಿಗೆ ವೇದಿಕೆಯನ್ನಾಗಿ ಮಾಡಿ ಅದರ ಸಂತಸವನ್ನು ಮತ್ತು ಓದುವ ಸುಖವನ್ನು ವಿ.ಕ ಓದುಗರಿಗೆ ಒದಗಿಸಿ ಓದುಗರನ್ನು ಬೇರೆ ಎಲ್ಲಾ ಪತ್ರಿಕೆಯ ಓದುಗರಿಗಿಂತ ಒಂದು ಹೆಜ್ಜೆ ಮುಂದೆ ಇರುವಂತೆ ನೋಡಿಕೊಂಡರು.



ಇದಕ್ಕೆ ಕಾರಣರಾಗಿದ್ದ ಒಂದು ವಿಷಯ ಅಂದರೇ ಅವರುಗಳು ಕಲೆ ಹಾಕಿದ ತರುಣ ಡೈನಾಮಿಕ್ ಬರಹಗಾರರ ತಂಡ. ಅವರುಗಳ ಅಂಕಣ ಬರಹಗಳು ಯಾವುದೇ ಅಂತರಾಷ್ಟ್ರೀಯ ಸುದ್ಧಿ ಪತ್ರಿಕೆಗಳಿಗಿಂತ ಕಡಿಮೆಯಿಲ್ಲದಂತೆ ಮಾಡಿತ್ತು. ಎಲ್ಲಾರಿಂದ "ಬರೆಯುವ ಸಂಪಾದಕ" ಎಂಬ ಬಿರುದನ್ನು ಗಳಿಸಿಕೊಂಡ ತರುಣ ಸಂಪಾದಕರಾದ ವಿಶ್ವೇಶ್ವರ ಭಟ್ ಬಹುಬೇಗ ವಿ.ಕ ಹೊರ ಹೋಗಿದ್ದು ಮಾತ್ರ ಕನ್ನಡ ಪತ್ರಕರ್ತ ರಂಗಕ್ಕೆ ದೊಡ್ಡ ಶಾಕ್.



ಸ್ವತಃ ಅವರೇ ಬರೆಯುತ್ತಿದ್ದ ಪ್ರಸಿದ್ಧ ಅಂಕಣಗಳಾದ ಭಾನುವಾರ ಬರುತ್ತಿದ್ದ "ಜನಮನ" ಅಲ್ಲಿ ವಾರದಲ್ಲಿ ಘಟಿಸಿದ ಘಟನೆ, ಪ್ರಸಿದ್ಧ ಸಾಮಾನ್ಯ ಜನರ ಅಪರೂಪದವಾದ ನೋಟ, ಬುಕ್ ಟಾಕ್, ಸಲಹೆ, ಕಡ ತಂದ ಎಸ್. ಎಂ. ಎಸ್ ಜೋಕಗಳಿಂದ ವಾರಾಂತ್ಯದಲ್ಲಿ ನಮ್ಮನ್ನು ಕಾಯುವಂತೆ ಮಾಡುತ್ತಿದ್ದರು. ದಿನಪ್ರಂತಿ ಪ್ರಕಟವಾಗುತ್ತಿದ್ದ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ರೀತಿಯಲ್ಲಿ ಬರುತ್ತಿದ "ವಕ್ರತುಂಡೋಕ್ತಿ" ಗಳು ಒಂದು ಕ್ಷಣ ಹೌದಲ್ಲವಾ! ಎಂಬಂತೆ ಮನಸ್ಸಿಗೆ ಸಂತಸ ನೀಡುತ್ತಿದ್ದವು. ಪ್ರತಿ ಗುರುವಾರ ಅವರು ಬರೆಯುತ್ತಿದ್ದ "ನೂರೆಂಟು ಮಾತು" ಅಂಕಣದಲ್ಲಿ ವಿಷದವಾಗಿ ವಿಭಿನ್ನವಾದ ಅಪರೂಪದ ವಿಷಯಗಳನ್ನು ನಮಗೆ ತಿಳಿಸುವುದಕ್ಕೆ ಬಳಸಿಕೊಂಡಿದ್ದರು. ಇದು ಎಷ್ಟರ ಮಟ್ಟಿಗೆ ಸುಪ್ರಸಿದ್ಧಿಯಾಗಿದೆ ಅಂದರೆ ಅವುಗಳ ಸಂಕಲನಗಳನ್ನೊಳಗೂಂಡ ಪುಸ್ತಕಗಳ ಭಾರಿ ಮಾರಟವೇ ಸಾಕ್ಷಿ. ಶನಿವಾರ ಅವರು ಬರೆಯುತ್ತಿದ್ದ ತಮ್ಮದೇ ರಂಗಕ್ಕೆ ಸಂಬಂಧಿಸಿದ ಅಪರೂಪದ ವಿವರಗಳನ್ನು ಓದುಗರ ಕುತೂಹಲ ತಣಿಸಲು ಕೊಡುತ್ತಿದ್ದಾರೇನೋ ಎಂಬಂತೆ ಪ್ರಕಟಿಸುತ್ತಿದ್ದರು. ಇದರಿಂದ ಮಾಧ್ಯಮ ಲೋಕಕ್ಕೆ ಕಾಲು ಇಡಲು ನಿಂತಿರುವ ನಮ ತರುಣ/ತರುಣಿಯರಿಗೆ ಅದು ದಾರಿ ದೀಪವೇ ಸರಿ. ಇದರಿಂದ ನಾವುಗಳು ಒಂದು ಪತ್ರಿಕೆಯ ಬೆಳವಣಿಗೆಯಲ್ಲಿ ಯಾರು ಯಾರೂ ಹೇಗೆ ಯಾವ ರೀತಿಯಲ್ಲಿ ತಮ್ಮ ಪಾತ್ರವನ್ನು ನೀಡುತ್ತಾರೆ ಎಂಬುದನ್ನು ಅರಿಯಲು ಮತ್ತು ಹಲವಾರು ಮಹಾನ್ ಘಟಾನುಗಟಿ ಪತ್ರಿಕೆಯ ದಿಗ್ಗಜರ ಅಪರೂಪದ ಅವರ ಜೀವನ ಚಿತ್ರಗಳನ್ನು ಹೇಳಲು "ಸುದ್ದಿಮನೆ ಕತೆ" ಅಂಕಣ ಒಂದು ವೇದಿಕೆಯಾಗಿತ್ತು ಎಂಬುದು ಒಂದು ಹೆಮ್ಮೆಯ ವಿಷಯ. ಪ್ರತಿ ಶನಿವಾರ ತಪ್ಪಿಸದೇ ಪತ್ರಿಕೆಯನ್ನು ಕಾಯುವಂತೆ ಮಾಡುತ್ತಿದ್ದ ಈ ಒಂದು ಅಂಕಣ ಇನ್ನೂ ಮುಂದೆ ಇಲ್ಲ ಎಂದರೆ ಅದು ಎಷ್ಟೊಂದು ಬೇಸರದ ಸಂಗತಿ!




ಹೊಸತನದ ಹರಿಕಾರರಂತೆ ಇದ್ದು ಕನ್ನಡ ಪತ್ರಿಕೆಯ ಲೋಕಕ್ಕೆ ಇಗೂ ಓದುಗರನ್ನು ಸೆಳೆಯಬಹುದು ಎಂಬ ರೀತಿಯಲ್ಲಿ ವಿ.ಕ ಖ್ಯಾತಿಯನ್ನು ತಂದುಕೊಟ್ಟವರು ಇವರು ಎಂದರೇ ತಪ್ಪಾಗದು. ಅವರನ್ನು ಪುನಃ ನಾವುಗಳು ಇದೇ ಕ್ಷೇತ್ರದಲ್ಲಿ ಪುನಃ ಹೊಸ ಅವತಾರದಲ್ಲಿ ಶಕ್ತಿಯುಕ್ತವಾಗಿ ಕಾಣಲು ಈ ಸಹೃದಯ ಮನ ಬಯಸುತ್ತದೆ.




ನಾವು ಇಷ್ಟಪಟ್ಟು ಓದುವ ಹಲವಾರು ಕನ್ನಡ ಲೇಖಕರುಗಳನ್ನು ಪ್ರತ್ಯಕ್ಷ ಕಣ್ಣಿಂದ ಕಂಡು ಮಾತನ್ನಾಡಿಸದಿದ್ದರೂ ಅದು ಯಾಕೋ ಅವರ ನನ್ನ ಸಂಪರ್ಕ ಸಕತ್ತಾಗಿದೇ ಎಂಬ ಭಾವನೆ ನಮ್ಮ ನೆಚ್ಚಿನವರ ಬಗ್ಗೆ ಇರುತ್ತದೆ. ಯಾಕೆ? ಹೌದು! ಅವರು ಬರೆಯುವ ಕಥೆ, ಕಾದಂಬರಿ, ಹಾಡುವ ಹಾಡು, ರಚಿಸುವ ಕವಿತೆ ನಮಗಾಗಿಯೇ ಬರೆದಿದ್ದಾರೆ ಏನೋ ಎಂಬಂತೆ ಕಾದಿದ್ದು ಓದಿ ಆ ಕತೃಗೆ ಇಲ್ಲಿಂದಲೇ ಒಂದು ನಮಸ್ಕಾರವನ್ನು ಹೇಳುತ್ತೆವೆ. ಅವರನ್ನು ಮುಖತಃ ಬೇಟಿ ಮಾಡಿದರೆ ನಾವುಗಳು ಅವರ ಬಗ್ಗೆ ಇಟ್ಟುಕೊಂಡ ನೂರಾರು ಭಾವನೆಗಳನ್ನು ಸುಲುಭವಾಗಿ ತಲುಪಿಸಲು ಸಾಧ್ಯವಾಗದೇ ಏನೋ ಕಸಿವಿಸಿಯಾಗುತ್ತದೆ. ಯಾಕೆ? ನಮ್ಮ ಮತ್ತು ಅವರ ಪೂರ್ಣ ಸಂಪರ್ಕ ಅವರ ಕೃತಿಗಳ ಮೂಲಕ ಅಲ್ಲವೇ ಸಂವಹನ ಮಾಧ್ಯಮ. ಅವರ ಕೃತಿಗಳಿಂದಲೇ ಅವನು ಅವನ ಸಹೃದಯರೊಡನೆ ಮಾತನ್ನಾಡುತ್ತಾನೆ. ತಾನು ಏನು ಹೇಳಬೇಕೊ ಅದನ್ನು ಅವನು ತನ್ನ ನೆಚ್ಚಿನ ಓದುಗನಿಗೆ ತಲುಪಿಸುತ್ತಾನೆ. ಯಾಕೆಂದರೆ ಅಲ್ಲಿಯೇ ಕತೃ ಮೂದಲು ನಮಗೆ ಪರಿಚಿತನಾಗಿದ್ದು. ಅವರ ಬಗ್ಗೆ ನಮ್ಮಲ್ಲಿರುವ ಕಲ್ಪನೆ ಅವರ ಪುಸ್ತಕ, ಕಥೆ, ಕವಿತೆ, ಹಾಡು ಇವುಗಳಲ್ಲಿಯೇ ವಿಸ್ತೃತಗೊಂಡಿರುತ್ತದೆ.




ಎಷ್ಟೋ ಬಾರಿ ನೆಚ್ಚಿನ ರವಿಬೆಳೆಗೆರೆಯ ಕಾರ್ಯಕ್ರಮಗಳಿಗೆ ಹೋಗಿದ್ದೇನೆ ಅದರೆ ಅವರನ್ನು ಮುಖತಃ ಮಾತನ್ನಾಡಿಸಲು ಏನೋ ಸಂಕೋಚ. ಆದರೇ ಅವರ ಒಂದೇ ಒಂದು ವಾರದ ಅಂಕಣ ಬರಹವನ್ನು ಮಿಸ್ ಮಾಡಿಕೊಂಡು ಇರಲಾರೆ. ಕಾದಿದ್ದು ಅವರನ್ನು ಕಾಣಬೇಕು ಎಂದು ಅವರ ಪತ್ರಿಕೆ, ಪುಸ್ತಕಗಳಿಗಾಗಿ ಕಾಯುತ್ತಿರುತ್ತೇನೆ. ಇದು ಹೀಗೆ ಇರಬೇಕು ಅಲ್ಲವಾ. ನಾವುಗಳು ಅವರ ಅಮೊಲ್ಯವಾದ ಕ್ಷಣಗಳನ್ನು ಏಕೆ ಕೊಲ್ಲಬೇಕು ಸುಖ ಸುಮ್ಮನೇ ಬೇಟಿ ಮಾಡುತ್ತಾ?




ಅದಕ್ಕೆ ಇರಬೇಕು ನಮ್ಮ ಎಲ್ಲಾ ನೆಚ್ಚಿನ ಕಲಾವಿದರು ಯಾವುದೇ ಸಮಾರಂಭ ಅಥವಾ ಸಂದರ್ಭದಲ್ಲಿ "ನಾವು ಹೇಳುವುದನ್ನು ನಮ್ಮ ಕೃತಿಗಳು ಮಾತನ್ನಾಡುತ್ತವೆ" ಎನ್ನುತ್ತಾರೆ.




ಸಹೃದಯರು ತನ್ನ ನೆಚ್ಚಿನ ಲೇಖಕನನ್ನು ಅಥವಾ ಕಲಾಕಾರರನ್ನು ಎಷ್ಟರ ಮಟ್ಟಿಗೆ ಆರಾಧಿಸುತ್ತಾರೆ ಎಂದರೆ ಅವನು ಹೇಳಿದಂತೆ ಇರಲು ಪ್ರಯತ್ನಿಸುತ್ತಾರೆ. ಮತ್ತು ಅವನನ್ನೇ ತನ್ನ ರೋಲ್ ಮಾಡಲ್ ಎಂದು ಭಾವಿಸಿರುತ್ತಾರೆ. ಅವನನ್ನು ತನ್ನ ನೆಚ್ಚಿನ ಬೆಚ್ಚನೆಯ ಸ್ಥಾನದಲಿ ಸ್ಥಾಪಿಸಿಕೊಂಡಿರುತ್ತಾರೆ. ಅದ್ದರಿಂದ ಸಾರ್ವಜನಿಕವಾಗಿ ಅವರುಗಳನ್ನು ಪ್ರತಿಯೊಬ್ಬರೂ ಗಮನಿಸುತ್ತಿರುತ್ತಾರೆ. ತಮ್ಮ ಕೃತಿಗಳಲ್ಲಿ ಬರುವ ಬೋಧನೆಯ ಮಾತುಗಳು, ಆದರ್ಶ ಪಾತ್ರಗಳು ತನ್ನ ಲೇಖನದೇ ಅಥವಾ ತನ್ನ ಕಲಾವಿದನದೇ ಎನ್ನುವ ಮಟ್ಟಿಗೆ ನಂಬಿ ಬಿಟ್ಟಿರುತ್ತಾರೆ. ಆದ್ದರಿಂದ ಅವರುಗಳು ಇಡುವ ಪ್ರತಿಯೊಂದು ಹೆಜ್ಜೆ ಅತಿ ಮುಖ್ಯವಾಗಿರುತ್ತದೆ. ಇಲ್ಲವಾದರೆ ಹೇಳವುದು ಆಚಾರ ಮಾಡವುದು ಅನಾಚಾರವಾದಂತಾಗುತ್ತದೆ. ಉತ್ತಮ ನಡಾವಳಿಯನ್ನು ಪ್ರಸಿದ್ಧಿ ವ್ಯಕ್ತಿಗಳಿಂದ ಜನತೆ ಯಾವಾಗಲೂ ಅಪೇಕ್ಷಿಸುತ್ತದೆ.




ಸಾಹಿತಿಗಳು, ಕವಿಗಳು, ಕಲಾವಿದರು ಎಂದರೇ ಪ್ರತ್ಯೇಕವಾದ ಸ್ಥಾನವನ್ನು ಜನಗಳು ತಮ್ಮ ತಮ್ಮ ಮನದಲ್ಲಿ ಇಟ್ಟು ಕೊಂಡಿರುತ್ತಾರೆ ಅದಕ್ಕೆ ಧಕ್ಕೆಯಾಗದಂತೆ ಕಾಪಾಡಿಕೊಂಡಿರುವುದು ಅವರ ಗುರುತರ ಜವಾಬ್ದಾರಿ ಅಲ್ಲವಾ?

ಗುರುವಾರ, ಡಿಸೆಂಬರ್ 9, 2010

ಹಳ್ಳಿ ಹಳ್ಳಿಯೆಂದು ಮೂಗು ಮುರಿಯಬೇಡಮ್ಮ



ಎಷ್ಟೊಂದು ರೂಟಿನ್ ಜೀವನವಾಗಿದೆ ನಮ್ಮ ಬದುಕು. ಯಂತ್ರಕ್ಕೆ ಕೀಲಿ ಕೊಟ್ಟ ಬೊಂಬೆಯಂತೆ ಟೈಮ್ ಟೂ ಟೈಮ್ ನಮ್ಮ ಕೆಲಸ ಕಾರ್ಯಗಳನ್ನು ಮಾಡುತ್ತಾ, ನಮ್ಮ ಸುತ್ತಲಿನವರ ಗೊಡವೆಯೇ ಬೇಡವೋ ಬೇಡಾ ಎಂಬಂತೆ ತಾನಯಿತು ತನ್ನ ಪಾಡಾಯಿತು ಎಂಬಂತೆ ದಿನದ ಇಪ್ಪತ್ತುನಾಲ್ಕು ಗಂಟೆಗಳನ್ನು ಹೀಗೆಯೇ ಇಡೀ ವರ್ಷದ ಮುನ್ನುರೈವತ್ತು ದಿನಗಳನ್ನು ಕಳೆದು ಬಿಟ್ಟಿರುತ್ತೇವೆ ಯಾಕೆ?


ಜೀವನವನ್ನು ದೂಡಬೇಕಲ್ಲಾ ಎಂಬಂತೆ ಮನದ ತುಂಬ ವಿಪರೀತವಾದ ವಿವಿಧ ಆಸೆ, ಆಕಾಂಕ್ಷೆಗಳನ್ನು ಇಟ್ಟುಕೊಂಡು ಮತ್ತು ಅವುಗಳನ್ನು ತಮ್ಮ ಅಡಿಯಾಳಾಗಿಸಬೇಕು ಎಂಬ ದಾವಂತದಲ್ಲಿ ಕುದುರೆಯ ಕಣ್ಣಿಗೆ ಕಟ್ಟಿದ ಕಪಾಟದಂತೆ ಅತ್ತ ಇತ್ತ ನೋಡದಂತೆ, ಸ್ಪಂದಿಸಿದಂತೆ, ಮನೆಯಿಂದ ಹೊರಗಡೆ, ತಾನು ಹೋಗುವ ಜಾಗ, ಕೆಲಸ ಮಾಡುವ ಸ್ಥಳ, ನಡೆದಾಡುವ ರಸ್ತೆ. ಅದೇ ಅಪರಿಚಿತ ಮುಖಗಳ ಮುಂದೆ ಅದೇ ರೀಪಿಟಾದ ಸಂಭಾಷಣೆ, ಕುಶಲೊಪರಿಯನ್ನು ಯಾವುದೇ ಹೆಗ್ಗು ಮತ್ತು ಯಾವುದೇ ಭಾವನೆಯಿಲ್ಲದೆ ನಟಿಸುತ್ತಾ, ಮಾಡುತ್ತಾ ನಮ್ಮ ದಿನಗಳನ್ನು ಸಂತೋಷವಾಗಿದ್ದೇವೆ ಎಂಬಂತೆ ಕಳೆದು ಬಿಟ್ಟಿರುತ್ತೇವೆ.


ಇದೇ ನಗರ ಜೀವನಕ್ಕೆ ಮತ್ತು ನಾವು ಹುಟ್ಟಿ ಬಂದ ಹಳ್ಳಿಗಾಡಿನ ಬದುಕಿಗೆ ಇರುವ ವ್ಯತ್ಯಾಸ. ಹಳ್ಳಿಯಲ್ಲಿ ದಿನದ ಪ್ರಾರಂಭ ಬಯಲಿನಲ್ಲಿ, ಎದುರಿನ ಮನೆಯವರ ಗದ್ದಲ, ಸದ್ದು, ಅವರು ಇವರುಗಳ ಜಗಳ, ಪ್ರೀತಿ ಮಾತು, ಕಕ್ಕುಲಾತಿ, ಪ್ರಾಣಿ-ಪಕ್ಷಿಗಳ ಸಂಚಲನೆಯೆಂಬ ಪ್ರಾರ್ಥನೆಯಿಂದ ಆರಂಭವಾಗಿ ತಾನು ಸಹ ಅದರಲ್ಲಿ ಭಾಗವಹಿಸಬೇಕು ಎಂಬಂತೆ ಮಾಡುತ್ತಾವೆ. ಮತ್ತು ತನ್ನ ಮನದಲ್ಲಿ ತನ್ನ ಬಗ್ಗೆಯೆಲ್ಲದೇ ಊರಿನಲ್ಲಿರುವ ಎಲ್ಲರ ಬದುಕು, ವಿಚಾರ, ಕುಟುಂಬದ ಬಗ್ಗೆ ಚಿಂತಿಸಿ ತನ್ನ ಸಹಾಯ - ಸಹಕಾರವನ್ನು ನೀಡುತ್ತಿರುತ್ತೇವೆ.

ಮುಕ್ಕಾಲುಪಾಲು ಬೇರೆಯವರ ವಿಷಯಗಳನ್ನು ಮಾತನ್ನಾಡುತ್ತಿರುತ್ತಾ ಅದನ್ನು ಹೀಗೆ ಮಾಡಿದ್ದರೆ ಅವನು ಹೀಗಾಗುತ್ತಿದ್ದಾ ಎಂಬಂತೆ ಯಾವುದೇ ಕೀಳರಿಮೆಯಿಲ್ಲದ ರೀತಿಯಲ್ಲಿ ನಮ್ಮ ಸಲಹೆಗಳನ್ನು ಮನೆ ಮಂದಿಯೆಲ್ಲಾ ಕುಳಿತು ಚರ್ಚಿಸುತ್ತಿರುತ್ತೇವೆ ಅದೇ ಅವರ ಬದುಕು!


ಈ ರೀತಿಯ ವಿಚಾರ ಸ್ಪಂದನ ನಗರದ ಜನತೆಯ ಮನಸ್ಸಿನಲ್ಲಿ ಬರುವುದನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ತಾನಾಯಿತು ತನ್ನ ಸುಖವಾಯಿತು ಎಂಬಂತೆ ಯಾವುದೊ ಒಂದು ಗುರಿ ಹುಡುಕುವ ನಾವಿಗನಂತೆ ಅತ್ತಿತ್ತಾ ನೋಡದಂತೆ ಜೀವನವನ್ನು ಪ್ರಗತಿಯ ಪಥದಲ್ಲಿ ಸಾಗಿಸುತ್ತಾ ಸಾವಿರಾರು ಆತ್ಮೀಯ ಭಾವಸ್ಪಂದನಗಳ ಲೋಕವನ್ನು ಕಳೆದು ಕೊಳ್ಳುತ್ತಿದ್ದಾನೆ ಅಂತ ಅನಿಸುವುದಿಲ್ಲವಾ?


ನಗರದ ಮಂದಿ ತಮ್ಮ ಮನಸ್ಸನ್ನು ಸಂತೋಷಪಡಿಸಿಕೊಳ್ಳಬೇಕು ಎಂದರೇ, ಅದೇ ಪ್ಲ್ಯಾನ್ ಪ್ರಕಾರ, ಟೈಮ್ ಟೇಬಲ್ ನಲ್ಲಿ ಇಂಥಲ್ಲಿಗೆ ಹೋಗಿ ಇಷ್ಟು ಹೊತ್ತು ಇದ್ದು ಇಷ್ಟು ಹೊತ್ತಿಗೆ ವಾಪಾಸ್ಸಗಬೇಕು. ಇಷ್ಟು ಸಮಯ ನಲಿದಾಡಬೇಕು. ಇಷ್ಟು ಸಮಯ ನಗಬೇಕು, ಇದೇ ಸಮಯಕ್ಕೆ ತಿನ್ನಬೇಕು, ಇದೇ ಸಮಯಕ್ಕೆ ಮಲಗಬೇಕು... ಎಂದು ತಮಗೆ ತಾವೇ ಗಡಿಯ ಮೀತಿಯನ್ನು ನಿರ್ಮಿಸಿಕೊಂಡು ಅದರಲ್ಲಿಯೇ ಖುಷಿಪಡಬೇಕಾದ ಪಾಡಾಗಿದೆ. ಹೀಗೆ ನಮ್ಮ ಇಡೀ ಜೀವನ ಪ್ರೀ ಪ್ಲ್ಯಾನ್ಡ್ ಚಟುವಟಿಕೆಯಾಗಿದೆ. ಅಷ್ಟೊಂದು ಲೆಕ್ಕಾಚಾರವಾದ ರೀತಿಯಲ್ಲಿ ಎಲ್ಲಾ ಕರಾರುವಕ್ಕಾಗಿ ಜೀವಿಸುವುದೇ ಸಕ್ಸ್ ಸ್ ಫುಲ್ ವ್ಯಕ್ತಿತ್ವವಾಗಿದೆ.


ತಾನೇ ಅಳವಡಿಸಿಕೊಂಡ ತನ್ನ ಆಸೆಗಳನ್ನು ತನ್ನ ಸ್ಥಾನಗಳನ್ನು ಗಳಿಸುವುದು ಮತ್ತು ತಾನು ಅಂದುಕೊಂಡದ್ದನ್ನು ಸಾಧಿಸುವುದೇ ಸಕ್ಸ್ ಸಾ?


ಹಾಗೆಯೇ ನಮ್ಮ ಹಳ್ಳಿಗಾಡಿನ ಜನವನ್ನು ನಾವುಗಳು ಅನಾಗರಿಕರು. ಎಷ್ಟೊಂದು ಅವರು ಇನ್ನೂ ಮುಂದುವರಿಯಬೇಕು ಎಂಬಂತೆ ಅವರನ್ನು ಪ್ರತ್ಯೇಕವಾದ ಸ್ಥಾನದಲ್ಲಿರಿಸಿ ಯಾವುದೊ ಲೋಕದಿಂದ ಬಂದಿರುವವರು ಎಂಬಂತೆ ನಗರದ ಮಂದಿ ನಿಸರ್ಗ ಜೀವಿಗಳನ್ನು ನೋಡುತ್ತಿದ್ದಾರೆ. ಆದರೇ ತಾವುಗಳು ಯಾವ ಮಟ್ಟದ ಜೀವನ ಪ್ರಗತಿಯಲ್ಲಿ ಇದ್ದೇವೆ ಎಂಬುದನ್ನು ಮೊದಲು ಅರಿಯಬೇಕು.


ನಮ್ಮಲ್ಲಿ ಎಲ್ಲಾ ಇದೆ. ಏನೂ ಬೇಕಾದರೂ ಯಾವ ಸಮಯದಲ್ಲಿ ಎಲ್ಲಾರಿಗೂ ಯಾವುದೇ ವಯಸ್ಸಿನ ಅಂತರವಿಲ್ಲದೇ ನಮ್ಮ ನಮ್ಮ ಮನೆಯವರಿಂದ ನಮಗೆ ದೂರೆಯುತ್ತದೆ. ಈ ರೀತಿಯ ಅನುಕೂಲವೇ ನಮ್ಮ ಮನಸ್ಸಿಗೆ ಏಕತನತೆಯನ್ನು ಕೊಟ್ಟಿದೆ ಎಂದು ನಮಗೆ ಹಲವು ಸಮಯದಲ್ಲಿ ಅನಿಸದಿರದು. ಕಷ್ಟಗಳು ಮತ್ತು ತನ್ನ ಆಸೆಗಳನ್ನು ಹಿಡೇರಿಸಿಕೊಳ್ಳಲು ಅವಕಾಶಗಳಿಲ್ಲದೇ ಮರುಗಿ ಹಲವು ದಿನಗಳ ನಂತರ ಆ ಸುವರ್ಣ ಅವಕಾಶ ಒದಗಿ ಬಂದಾಗ ಸಿಗುವ ಆನಂದವನ್ನು ಅಕ್ಷರಗಳಲ್ಲಿ ಹಿಡಿದಿಡಲು ನಮ್ಮಿಂದ ಸಾಧ್ಯವಿಲ್ಲ.


ಈ ರೀತಿಯ ಪುಳಕಗೊಳ್ಳುವ ಕ್ಷಣಗಳು ಹೇರಳವಾಗಿ ಹಳ್ಳಿಗಾಡಿನ ಬಡ ಜನಗಳಿಗೆ ಸಾಕಷ್ಟು ಇರುವುದರಿಂದ ಅವರು ನಮ್ಮ ಜೀವನದ ಶೈಲಿಗಿಂತ ಎಷ್ಟೋ ಪಾಲು ಶ್ರೀಮಂತರಾಗಿದ್ದಾರೆ. ಈ ರೀತಿಯ ಆ ಮೂಹರ್ತಮಯವಾದ ರೋಮಂಚನದ ಗಳಿಗೆಯ ಅನುಭವ ನಮ್ಮ ಈ ಉಳ್ಳವರ ಹೈಟೆಕ್ ಲೈಫ್ ನ ಮಂದಿಗೆ ಎಂದಿಗೂ ಸಿಗಲಾರದು.


ಈ ರೀತಿಯ ಅನುಭವವೇ ಮನುಷ್ಯನ ಮನೋಲ್ಲಾಸ ಮತ್ತು ಹೊಸತನದ ತುಡಿತಕ್ಕೆ ಅವಕಾಶವಾಗುವುದೇನೊ. ಅದಕ್ಕೆ ಇರಬೇಕು ಗಟ್ಟಿ ಮನೊಸ್ಥೈರ್ಯ, ಪ್ರೀತಿಯ ಹೃದಯ, ಮರುಗುವ ಕರುಣೆಯ ಮನಸ್ಸನ್ನು ಹಳ್ಳಿಯ ಜನ ನಗರದ ಜನಗಳಿಗಿಂತ ಹೆಚ್ಚಾಗಿ ಹೊಂದಿದ್ದಾರೆ.


ಅದಕ್ಕೆ ಇರಬೇಕು ನಮಗೆ ಇಂದಿಗೂ ಟಿ. ಎನ್. ಸೀತರಾಮರವರ ದಾರವಾಹಿಯಲ್ಲಿ ತೋರಿಸುವ ಆ ಒಂದು ಬಡ ಮದ್ಯಮ ಕುಟುಂಬದ ಕಷ್ಟದ ಸರಮಾಲೆಯ ಚಿತ್ರಣ, ಹಳ್ಳಿಯ ಬದುಕು ಅತ್ಯಂತ ಹತ್ತಿರವಾಗುವುದು. ಇದನ್ನು ನೋಡಿದರೇ ಎಲ್ಲಾ ಇದ್ದು ನಾವುಗಳು ಎಲ್ಲವನ್ನು ಪ್ರತಿ ಕ್ಷಣದಲ್ಲಿ ಅಪಾರವಾಗಿ ಮಿಸ್ ಮಾಡಿಕೊಳ್ಳೂತ್ತಿದ್ದೇವೆಂದು ಅನಿಸುವುದಿಲ್ಲವಾ?

ಬುಧವಾರ, ಡಿಸೆಂಬರ್ 1, 2010

ಅಶರೀರ ಮೆಸೇಜ್

Mobiles are iritating!Daily Charging!Recharging!Annoying beeps always disurbing!But still I love my mobile becoz it connect "U & Me"..




ಇಂದು ಪ್ರತಿಯೊಬ್ಬರು ತಮ್ಮ ಹೃದಯಕ್ಕೆ ತೀರ ಹತ್ತಿರವಾಗಿ ಇಟ್ಟುಕೊಂಡಿರುವ ಏಕೈಕ ವಸ್ತು ಎಂದರೇ ಅದು ಮೊಬೈಲ್. ಹೌದು! ನಮ್ಮ ಹುಡುಗರು/ಹುಡುಗಿಯರು ತಮ್ಮ ಪ್ರೀತಿ ಪಾತ್ರರನ್ನು ಮರೆತರೂ ಮರೆತರು ಆದರೆ ಮೊಬೈಲ್ ನ್ನು ಒಂದು ಕ್ಷಣವು ಬಿಟ್ಟು ಇರಲಾರದು. ಅದು ಎಷ್ಟರ ಮಟ್ಟಿಗೆ ಜೀವನದ ಅವಿಭಾಜ್ಯ ಅಂಗವಾಗಿದೆ ಎಂದರೆ ಅದು ಬೇಕೆ ಬೇಕು. ನೀವು ಯಾರನ್ನಾದರೂ ಸಂಪರ್ಕದಲ್ಲಿ ಇಟ್ಟುಕೊಳ್ಳಬೇಕೆಂದರೇ ಆ ವ್ಯಕ್ತಿ ಈ ಒಂದು ಕೇವಲವಾದ ಮೊಬೈಲ್ ನ್ನು ನಂಬರ್ ನ್ನು ಒಂದಿರುಬೇಕು.

ಇದೊಂದು ೨೧ ನೇ ಶತಮಾನದ ಬಹುಮುಖ್ಯ ತಂತ್ರಙ್ಞಾನ ಕ್ರಾಂತಿಯೇ ಸರಿ. ಮನಸ್ಸು ಮನಸ್ಸುಗಳನ್ನು ಕಲ್ಪನೆಗೂ ನೀಲುಕದ ರೀತಿಯಲ್ಲಿ ನೇಟ್ ವರ್ಕ್ ಎಂಬ ಮಾಯಜಾಲದಲ್ಲಿ ಬಿಡಿಸಲಾರದ ಕೊಂಡಿಯನ್ನಾಗಿ ಮಾಡಿ ಬಿಟ್ಟಿದೆ.

ಭಾರತದಲ್ಲಿ ೧೯೮೫ ರಲ್ಲಿ ಮೂದಲ ಬಾರಿಗೆ ಟೆಲಿಪೂನ್ ನ್ನು ನಾನ್ ಕರ್ಷಿಯಲ್ ಸೇವೆಯಾಗಿ ದೆಹಲಿಯಲ್ಲಿ ಪ್ರಾರಂಭಿಸಲಾಯಿತು. ಪ್ರಾರಂಭದಲ್ಲಿ ಮೊಬೈಲ್ ಸಾಮಾನ್ಯ ಜನರ ಗಗನ ಕುಸುಮವಾಗಿತ್ತು. ಶ್ರೀಮಂತರು ವ್ಯಾಪಾರಸ್ಥರು ಮಾತ್ರ ಉಪಯೋಗಿಸುವ ದುಬಾರಿ ವಸ್ತುವಾಗಿತ್ತು. ಅದರೇ ಯಾವಾಗ ರಿಲಯನ್ಸ್ ಭಾರತದಲ್ಲಿ ಕ್ರಾಂತಿಯನ್ನುಂಟು ಮಾಡಿತೊ ಎಲ್ಲಾರ ಕೈಯಲ್ಲೂ, ಕಿವಿಯಲ್ಲೂ, ಜೇಬಿನಲ್ಲಿ ಮೊಬೈಲ್ ಸಾರ್ ಮೊಬೈಲ್ ಆಗಿ ಹೋಗಿಬಿಟ್ಟಿತು.

ಇಂದು ಇದು ಯಾವ ಸ್ಥಿತಿಗೆ ಬಂದಿದೆಯೆಂದರೆ ವ್ಯಕ್ತಿ ಮೊದಲ ಸೆಲ್ ಪೋನ್ ಕಾಲ್ ನಿಂದ ಮುಂಜಾನೆಯನ್ನು ಪ್ರಾರಂಭಿಸಿ.. ಕೊನೆಯ ಪೋನ್ ಕಾಲ್ ಅಥಾವ ಕೊನೆಯ ಎಸ್. ಎಂ. ಎಸ್ ನ್ನು ಕಳಿಸುವ ಮೊಲಕ ಅಥವಾ ಓದುವ ಮೊಲಕ ಹಾಸಿಗೆಗೆ ಹೋಗಿ ಮುಂಜಾನೆ ಪುನಃ ಮೊದಲ ಕಾಲ್ ಗಾಗಿ ಕಾತರಿಸುತ್ತಾ ನಿದ್ದೆಗೆ ಜಾರುತ್ತಾನೆ.

ಒಂದು ಕ್ಷಣ ಅದು ಇಲ್ಲದಿದ್ದರೆ ಅವನ ಕಳವಳ, ಕಸಿವಿಸಿಯನ್ನು ನಮ್ಮ ಕಣ್ಣಿಂದ ನೋಡಲಾಗುವುದಿಲ್ಲ. ಅದು ಶಬ್ಧ ಮಾಡದ ಜಾಗ ಇಲ್ಲವೇ ಇಲ್ಲ ಎಂದು ಹೇಳಬಹುದು. ಅದಕ್ಕಾಗಿಯೇ ಬಹುಮುಖ್ಯವಾದ ಜಾಗಗಳಲ್ಲಿ ಅದರ ತರಂಗಾಂತರಗಳಿಂದ ವಿವಿಧ ರೀತಿಯಲ್ಲಿ ಅಪಾಯವುಂಟಾಗುವುದನ್ನು ತಡೆಯುವ ಸಲುವಾಗಿ ಮೊಬೈಲ್ ನ್ನು ಉಪಯೋಗಿಸ ಬೇಡಿ ಎಂದು ಕಟ್ಟಾಪ್ಪಣೆ ಮಾಡುವ ಮಟ್ಟಿಗೆ ಮತ್ತು ಕಾನೂನು ತರುವ ಮಟ್ಟಿಗೆ ಫಲಕಗಳನ್ನು ನೇತು ಹಾಕುವವರೆಗೆ ಇದರ ಆರ್ಭಟವಾಗಿದೆ.

ಇಂದು ಮಗು ಹುಟ್ಟಿದ ತಕ್ಷಣ ಅದರ ಕೈಗೆ ಆಟಿಕೆಯ ಸಾಮಾನುವಾಗಿ ನಾವುಗಳು ಏನಾದರೂ ಕೊಡಬಹುದಾದ ವಸ್ತು ಅಂದರೆ ಅದು ಮೊಬೈಲ್. ಅದರ ವಿವಿಧ ರೀತಿಯ ರಿಂಗಿಂಗ್ ಟೋನ್ ಕೇಳಿದರೆ ಅಳುವ ಮಗು ತನ್ನ ಅಳುವನ್ನು ನಿಲ್ಲಿಸುತ್ತದೆ. ಎಂದರೇ ನೀವುಗಳೇ ಉಹಿಸಬಹುದು.


ತಾಂತ್ರಿಕವಾಗಿ ಅಪಾರವಾದ ಕ್ರಾಂತಿಯ ಪರಿಣಾಮವಾಗಿ ಎಲ್ಲಾ ಸೇವೆಗಳು ಮೊಬೈಲ್ ನಲ್ಲಿ ಲಭ್ಯವಿದೆ. ಬ್ಯಾಂಕಿಂಗ್, ಶಾಪೀಂಗ್, ವಾರ್ತೆ, ಜಾತಕ, ಹಾಡು, ಜೋಕ್ ಇತ್ಯಾದಿ ಏನನ್ನು ನಾವುಗಳು ಮುಖಾ ಮುಖಿ ಸೇವೆಗಳನ್ನು ಪಡೆಯುತ್ತಿದ್ದೇವೊ ಆ ಎಲ್ಲಾ ಕೆಲಸಗಳನ್ನು ಕುಂತಲ್ಲಿಯೇ ಒಂದು ಎಸ್. ಎಂ. ಎಸ್ ಅಥವಾ ಒಂದು ಕಾಲ್ ನ ಸಹಾಯದಿಂದ ಪೂರೈಸಿಕೊಳ್ಳಬಹುದಾಗಿದೆ. ಇದು ಒಂದು ಉಪಯುಕ್ತ ಮತ್ತು ವೇಗವಾದ ಸೇವೆಯಾಗಿದೆ. ಅದಕ್ಕೆ ಇದನ್ನು ಕಂಡುಹಿಡಿದ ವ್ಯಕ್ತಿಗಳಿಗೆ ನಮೊ ನಮಾಃ


ಮೊಬೈಲ್ ಗೆ ಸಂಬಂಧಿಸಿದಂತೆ ವಿವಿಧ ಗಾದೆಗಳು ಹುಟ್ಟಿಕೊಂಡಿವೆ ಅದಕ್ಕೆ ಒಂದು ಸ್ಯಾಂಪಲ್ ಅಂದರೆ "ಕಾಲ್ ಬೆಳ್ಳಿ ಎಸ್. ಎಂ. ಎಸ್ ಬಂಗಾರ" ಹೌದು! ಎಸ್. ಎಂ. ಎಸ್ ಎಷ್ಟೊಂದು ಉಪಯೋಗಿಯೆಂದರೆ ಮೀಟಿಂಗನಲ್ಲಿರುವ ಸಮಯದಲ್ಲಿ, ಗುಂಪಿನಲ್ಲಿ ಕುಳಿತುಕೊಂಡ ವೇಳೆ, ಮನೆಯಲ್ಲಿ ಟಪ್ ಟಪ್ ಅಂತಹ ಟೈಪ್ ಮಾಡಿ ಬೇಕಾದವರಿಗೆ ಬೇಕಾದ ರೀತಿಯಲ್ಲಿ ಮಾತೇ ಇಲ್ಲದೇ ನಮ್ಮ ಅಭಿಪ್ರಾಯಗಳನ್ನು ತಿಳಿಸುತ್ತಾ ಮಾತನ್ನಾಡಬಹುದು.

ಕೆಲವೊಂದು ಪ್ರೇಮ ಅಂಕುರಗಳು ಈ ಒಂದೇ ಒಂದು ಎಸ್. ಎಂ. ಎಸ್ ನಿಂದ ಬೆಳೆದಿವೆ. ಕೆಲವೊಂದು ಪ್ರೇಮಗಳು ಈ ಒಂದೇ ಒಂದು ಎಸ್. ಎಂ. ಎಸ್ ಮೊಲಕ ಮುರಿದು ಬಿದ್ದಿವೇ. ಮದುವೆಗಳು ಮುರಿದು ಬಿದ್ದಿರುವುದಕ್ಕೆ ಸಾಕ್ಷಿಯೆಂದರೆ ಒಂದು ಎಸ್. ಎಂ. ಎಸ್ , ಆತ್ಮಹತ್ಯೆಗೂ ಮೊದಲು ಕಳಿಸಿದ ಮೆಸೇಜ್ ಹೀಗೆ ಎಲ್ಲಾದಕ್ಕೂ ಇದೇ ಮಂತ್ರ.

ಯಾರಿಗಾದರೂ ಕ್ಷಮೆಯನ್ನು ಕೇಳಬೇಕೆ ಮೆಸೇಜ್ ಗಿಂತ ಮುಖ್ಯವಾದ ಮಾಧ್ಯಮ ಇಲ್ಲವೇ ಇಲ್ಲ. ನೀವುಗಳು ನೋಡಬೇಕು ಇದರಲ್ಲಿ ಪಳಗಿದ ವ್ಯಕ್ತಿಗಳು ಅವರುಗಳು ಎಸ್. ಎಂ. ಎಸ್ ಗಾಗಿಯೇ ಇರುವುದು ಎಂಬ ರೀತಿಯ ಇಂಗ್ಲಿಷ ವಿಭಿನ್ನ ಬರವಣಿಗೆಯನ್ನು ಕಲಿತಿರುತ್ತಾರೆ. ಅಲ್ಲಿ ಶಾರ್ಟ್ ಅಂಡ್ ಸ್ವೀಟ್ ಆಗಿ ಕ್ವಿಕ್ ಆಗಿ ವಿಷಯವನ್ನು ತಲುಪಿಸಬೇಕಾಗಿರುತ್ತದೆ. ಈ ರೀತಿಯ ಒಂದು ಭಾಷೆಯ ಪದಗಳು ಇತ್ತೀಚೆಗೆ ಆಕ್ಸ್ ಪರ್ಡ ನಿಗಂಟಿನಲ್ಲೂ ಸೇರ್ಪಡೆಗೊಂಡಿದೆ ಎಂದರೇ ಉಹಿಸಿ ಇದರ ವಿಸ್ತಾರವನ್ನು.

ಇಂದು ಮೊಬೈಲ್ ನಂಬರನ್ನು ಪಡೆಯುವುದು ಏನೂ ದೊಡ್ಡ ವಿಚಾರವಲ್ಲಾ. ಇರುವುದು ಹ್ಯಾಂಡ್ ಸೆಟ್ ನ ಆಯ್ಕೆಯಲ್ಲಿ. ತಮ್ಮ ಆರ್ಥಿಕತೆಗೆ ಅನುಸಾರವಾಗಿ, ತಮ್ಮ ಲೆವಲ್ ಗೆ ತಕ್ಕುದಾದ ಮೊಬೈಲ್ ನ್ನು ಇಟ್ಟುಕೊಳ್ಳುವುದು ಗೌರವದ ಸಂಕೇತ. ಐಫೋನ್, ಟಚ್ ಸ್ಕ್ರೀನ್, ೪ ಮೆಗಾ ಪಿಕ್ಸಲ್ ಕ್ಯಾಮರ, ಎಕ್ಸಪ್ರೇಸ್ ಮ್ಯೊಸಿಕ್ ಸೀರಿಸ್. ವಿವಿಧ ಪ್ರಸಿದ್ಧವಾದ ಬ್ರ್ಯಾಂಡ್ ಸೆಲ್ ಗಳ ಆಯ್ಕೆ ಪ್ರತಿಷ್ಟೇಯ ವಿಷಯ.

ತರುಣರು/ತರುಣಿಯರು ತಮ್ಮ ಮೊದಲ ಉದ್ಯೋಗದ ಸಂಬಳದಿಂದ ಮೊದಲು ಖರೀದಿಸುವುದು ಒಂದು ಮೊಬೈಲ್ ನ್ನು. ಮೊಬೈಲ್ ಇಂದು ಕೊಂಡಿದ್ದು ನಾಳೆ ಹಳೆಯದು. ಅದಕ್ಕೆ ಗಾದೆಯೇ ಹುಟ್ಟಿಕೊಂಡಿದೆ. "ಹುಡುಗ ಹುಡುಕುವ ಹೆಣ್ಣು ಮೊಬೈಲ್ ಎರಡು ಒಂದೇ ಸ್ವಲ್ಪ ಕಾದರೇ ಹೊಸ ಒಳ್ಳೆಯದೇ ಸಿಗುವುದು." ಋತುಮಾನಕ್ಕೆ ಸಮಾನವಾಗಿ ಸೇಟ್ ಚೇಂಜ್ ಮಾಡುತ್ತಾರೆ.

ಆದರೋ ಇಂದಿನ ನಮ್ಮ ಈ ವ್ಯವಸ್ಥೆಗೆ ಮತ್ತು ಈ ವೇಗದ ಬದುಕಿಗೆ ಇದರ ಅವಶ್ಯಕತೆ ಬೇಕೆ ಬೇಕು. ಇಲ್ಲದಿದ್ದರೂ ನಡೆಯುತ್ತದೆ ಎನ್ನಬಹುದು. ಆದರೆ ಒಮ್ಮೆ ಉಪಯೋಗಿಸಿದರೇ ಅದರ ಮಹತ್ವದಿಂದ ಅದನ್ನೇ ಅವಲಂಬಿಸುವಂತಾಗುತ್ತದೆ. ಮತ್ತು ಇದು ವ್ಯಕ್ತಿಯನ್ನು ಗುರುತಿಸಲೂ. ಅವನನ್ನು ಸಂಪರ್ಕಿಸಲೂ ವಿಷಯಗಳ ಕೊಡು ಕೊಳ್ಳಿವಿಕೆಯ ವ್ಯವಹಾರಕ್ಕೆ ಬೇಕೆ ಬೇಕಾದ ಅನಿವಾರ್ಯವಾದ ಒಂದು ಸಾಧನವಾಗಿದೆ.

ಅದೇ ರೀತಿಯಲ್ಲಿ ಅನಾನುಕೂಲಗಳು ಇದ್ದಾವೇ... ಉಪಯೋಗವಿರುವ ಕಡೆ ಅಪಾಯಗಳು ಇರಲೇ ಬೇಕು ಅಲ್ಲವಾ? ಅದೇ ಪ್ರಕೃತಿಯ ಜೀವನ ಮರ್ಮ ಮತ್ತು ಧರ್ಮ. ಅದರೇ ನಾವು ಎಷ್ಟು ಮೀತಿಯಾಗಿ ಅದನ್ನು ಬಳಸಿದರೇ ಅಷ್ಟು ಉತ್ತಮ. ಯಾಕೆಂದರೇ ಅದು ಕೇವಲ ನಿರ್ಜೀವವಾದ ಒಂದು ಸಾಧನ. ಮನುಷ್ಯ ಮನುಷ್ಯರ ನಡುವಿನ ಜೀವ ತಂತುವಾದ ಸ್ನೇಹ ಸೇತುವೆಯೇ ಹಿರಿದಾದು. ಅದ್ದರಿಂದ ಅದೇ ಯಾವಾಗಲೂ ಮೇಲುಗೈ ಸಾಧಿಸಬೇಕು. ಹಾಗೇ ಮಾಡುವ ಚಮತ್ಕಾರ ನಮ್ಮ ನಿಮ್ಮಗಳ ಕೈಯಲ್ಲಿಯೆ ಇದೆ.
***********************
Kisi ladki ki Yad aye - yad karo Zyada aye - SMS karo Or Jyada - PHONE karo Orb Zyda - Mil lo Or Zyda - pyar karoUse b Zyda - Shadi karo Phir kabi yaada nahi aayegi.
********************

ನಾನು ಹೇಳಲೂ ಹೋರಟಿದ್ದು. ಎಸ್. ಎಂ. ಎಸ್ ಬಗ್ಗೆ. ಇಂದು ಎಸ್. ಎಂ. ಎಸ್ ಗಳಲ್ಲಿ ಸೃಷ್ಟಿಯಾಗುತ್ತಿರುವ ಹೊಸ ಹೊಸ ವಿಚಾರಗಳು, ಜೋಕ್ ಗಳು, ಸಂದೇಶಗಳು, ವಿಷಯಗಳು ಚಿಕ್ಕವಾಗಿ ಚೊಕ್ಕವಾಗಿ ನಮ್ಮನ್ನು ಚಿಂತನೆಗಿಡು ಮಾಡುತ್ತವೆ. ಮತ್ತು ಈ ಮೆಸೇಜ್ ಗಳಿಂದ ಒಂದಿಷ್ಟು ಅರಿವು ಮತ್ತು ವ್ಯಕ್ತಿಗಳ ಬದುಕಿಗೆ ಹೊಸ ಕಿರಣವನ್ನು ನೀಡುವಂತಾಗುತ್ತದೆ. ಅವುಗಳು ಒಬ್ಬರಿಂದೊಬ್ಬರಿಗೆ ಪಾರವರ್ಡಾಗಿ ಬಂದಿದ್ದರೂ ಅವುಗಳ ಮಹತ್ವದ ಬೆಳಕು ತೀರ ಮಸುಕಾಗಿರುವುದಿಲ್ಲ. ನನ್ನನೊಂತೂ ಚಿಂತನೆಗೆ ದೊಡುತ್ತವೆ. ಒಂದೊಂದು ಎಸ್. ಎಂ . ಎಸ್ ನಮ್ಮ ಜೀವನದ ಉತ್ತಮ ಕ್ಷಣಗಳ ಪುನರ್ ಮೆಲುಕಿಗೆ ಸಾಧನವಾಗುತ್ತವೆ. ಅವುಗಳನ್ನು ನಮ್ಮ ಹತ್ತಿರದವರೊಡನೆ ಹಂಚಿಕೊಳ್ಳೋಣ ಎಂಬಂತೆ ಪ್ರೇರಪಿಸುತ್ತವೆ. ಇದರಿಂದ ನಾವುಗಳು ಎಷ್ಟೋ ಮಂದಿಯನ್ನು ನಮ್ಮನ್ನು ನೆನಪಿಸಿಕೊಳ್ಳುವಂತೆ ಮಾಡುತ್ತೇವೆ.
*********************
ENSTIEN::
"If someone feels that they had never made a mistake in their life, then it means they had never tried a new
thing in their life.....:)
*******************

ನಮ್ಮ ಪೋನ್ ನಲ್ಲಿ ಎಷ್ಟೊಂದು ಮಂದಿಯ ನಂಬರ್ ಗಳು ಇರುತ್ತವೆ. ಆದರೆ ನಾವುಗಳು ಅವರನ್ನು ಎಷ್ಟು ಬಾರಿ ಮಾತನ್ನಾಡಿಸಿರುತ್ತೇವೆ? ಅದರೆ ಮೌನವಾಗಿ ಒಬ್ಬರನ್ನು ಸ್ಪರ್ಷಿಸಿ ನಮ್ಮನ್ನು ನೆನೆಯುವಂತೆ ಮಾಡಲು ಈ ಎಸ್. ಎಂ. ಎಸ್ ಗಳು ಸಹಕಾರಿ ಅಲ್ಲವಾ.
***************************************
1 day v all b sitting n thinking hard abt life....
How it changed from simple college life to strict professional life
+
How pocket money changed to huge monthly pay cheques, But gives less happiness
+
How a single plate of samosa changed 2 a full pizza,But hunger is less.
+
How 2 save every single rupee 2 recharge cell phone changed 2 postpaid connection, But less people 2 talk 2..
Life moves so fast, so stay in touch.. 2 all my frnds Luv U all..
Hope V wil b der 4 each till d end...

******************************

ಹಾಗೆಯೇ ಸುಖ ಸುಮ್ಮನೇ ಕೆಲಸಕ್ಕೆ ಬಾರದ ಎಸ್. ಎಂ. ಎಸ್ ಗಳನ್ನು ಸುಮ್ಮನೆ ಎಲ್ಲಾರಿಗೂ ಪಾರವರ್ಡ್ ಮಾಡುವುದು ಸಹ ಒಳ್ಳೆಯವರ ಲಕ್ಷಣವಲ್ಲ. ನೆನಪಿನಲ್ಲಿ ಉಳಿಯುವಂತಹ, ವ್ಯಕ್ತಿಗೆ ಉಪಯುಕ್ತವಾಗುವಂತಹ ಮೆಸೇಜ್ ಗಳನ್ನು ಕಳಿಸುವ ಮೊಲಕ ನಿಮ್ಮ ಅಭಿರುಚಿಯನ್ನು ಬೇರೆಯವರಿಗೆ ತಿಳಿಸಬಹುದು ಅಲ್ಲವಾ.

**************************
Two difficult things to say in life:
1. Hello 4 d 1st time to unknown person!
2. Good bye 4 d last time to whom v really loved most!

**************************
Moral of the movie ROBO:
A Girl cannot only spoil manbut even machines...!!

**************************
Heart beat is excited more wen eyes start looking at sum1 silentlybut life seems 2 b more excited wen sum1 start reading those eyes silently.
*************************
Som of the best moments in life:
-To laugh until it hurts ur stomach.
-To wake up and realize its possible to sleep a couple of hours more.
-To write last paper of your last exam.
-Calls at night that last for hours.
-To see an old friend again & feel that things haven't changes.
-To hear a song that makes you remember a special person.
-To have sombody who tell you that i STILL TRUST YOU.
May ur life be full of such moments.

***************************