ಗುರುವಾರ, ಮೇ 19, 2011

ನಾನು ಒಂದು ಹುಡುಗಿ



ನನಗೆ ಗೊತ್ತಿಲ್ಲ ನಾನು ಯಾವಾಗ ನನಗೂ ಒಬ್ಬ ಗೆಳೆಯ ಬೇಕು, ನಾನು ನನ್ನ ಕನಸನ್ನು ಅವನ ಜೊತೆ ಹಂಚಿಕೊಂಡು ಸುಂದರ ರಂಗಿನ ಚಿತ್ತಾರವನ್ನು ರಚಿಸಬೇಕು, ಅವನ ಜೊತೆ ಮನ ಬಿಚ್ಚಿ ಎಲ್ಲವನ್ನು ಹೇಳಿಕೊಳ್ಳಬೇಕು ಹೀಗೆ ಅಂತ್ಯವಿಲ್ಲದ ಕನಸನ್ನು ನನ್ನಲ್ಲಿ ನಾನೇ ಕಾಣುತ್ತಿದ್ದೆ ಎಂದು.

ನಾನು ಒಂದು ಹುಡುಗಿ ಎಂದು ನನಗೆ ಗೊತ್ತು ಮಾಡಿದ್ದು ಆಂದರೆ ಆ ದಿನ. ಅಲ್ಲಿಯವರಿಗೂ ನಾನು ಹುಡುಗರ ತರಾ ಯಾವುದರಲ್ಲೂ ಕಡಿಮೆಯೇನಿಲ್ಲ. ನನಗೆ ಎನಿಸುತ್ತಿತ್ತು ಅವರುಗಳು ಸುತ್ತುವ ರೀತಿ ನಾನು ಸುತ್ತಬೇಕು. ಅವರುಗಳು ಆಡುವ ಆಟಗಳನ್ನೂ ನಾನು ಆಡಬೇಕು ಯಾವುದರಲ್ಲೂ ನನಗೆ ಸೋಲು ಎಂಬುದು ಇರಲೇ ಬಾರದು... ಎಂಬ ರೀತಿಯಲ್ಲಿ ಒಂದು ರೀತಿಯ ಮಧುರ ಬಾವನೆಯೇ ಇರಲಿಲ್ಲ ಅನಿಸುತ್ತದೆ.

ಯಾಕೆಂದರೆ ನನ್ನ ತಮ್ಮನನ್ನು ನನ್ನ ಎತ್ತವರು ನೋಡಿಕೊಳ್ಳುತ್ತಿದ್ದ ರೀತಿ, ಅವನಿಗೆ ಅವರುಗಳು ಉಪಚರಿಸುತ್ತಿದ್ದದು, ಗಂಡು ಎಂದರೆ ಯಾಕಾಷ್ಟು ಮಮಕಾರವೋ ಒಂದು ತಿಳಿಯುವುದಿಲ್ಲ. ಗಂಡು ಹುಡುಗರು ಎಂದರೇ ಹೆತ್ತ ಮನೆಯಲ್ಲಿಯೇ ಏನೇನೋ ರೀತಿಯಲ್ಲಿ ಕಾಣುತ್ತಾರೆ. ಯಾಕೆಂದು ನನಗೆ ತಿಳಿಯುವ ಮಟ್ಟಿಗೆ ನಾನು ನನ್ನ ಕನಸುಗಳನ್ನು ಕಾಣುವ ದಿನಗಳಿಗೆ ಬಂದಿದ್ದೇ.
ಯಾವಾಗಲೂ ಚಿಕ್ಕಂದಿನಲ್ಲಿ ನನ್ನನ್ನು ನನ್ನ ಎತ್ತವರು ಚೆನ್ನಾಗಿಯೇ ಕಾಣುತ್ತಿದ್ದರು ಅನಿಸುತ್ತದೆ. ಯಾಕೆಂದರೇ ನಾನೇ ಪುಟ್ಟ ಪುಟಾಣಿ ಮಗುವಲ್ಲವಾ?

ಆದರೇ ತಮ್ಮನ ಆಗಮನವಾಯಿತೋ ನನ್ನ ಪ್ರೀತಿಯ ಪಾಲನ್ನು ಅವನು ಹಂಚಿಕೊಂಡನೇನೋ ಎನಿಸುತ್ತಿತ್ತು.

ತಿಳಿಯದು ನನ್ನ ಮನಸ್ಸಿನ ನನ್ನ ಆ ಯೋಚನೆಗಳು ನನ್ನಲ್ಲಿ ಆ ರೀತಿಯಲ್ಲಿ ಬರುತ್ತಿತ್ತು. ಯಾರಿಗೆ ಆದರೋ ಅದು ಸಹಜ ಇಲ್ಲೆಯವರೆಗೂ ತಾನೊಬ್ಬಳೆ ನನ್ನ ಎತ್ತವರ ಪ್ರೀತಿಯನ್ನು ಸೂರೆ ಮಾಡುವ ವೇಳೆಯಲ್ಲಿ ಅದರ ಪಾಲನ್ನು ಕೊಡು ಎಂದು ಮತ್ತೊಬ್ಬರು ಬಂದರೆ ಸಹಜವಾಗಿಯೇ ಅವರ ಮೇಲೆ ಸಿಟ್ಟು ಸೇಡವು ಬರುತ್ತದೆ.


ಯಾವುದರಲ್ಲಿ ನಾನು ಕಮ್ಮಿ? ಯಾಕೆ ಅವನೇ ರಾಜ ಎಂಬ ರೀತಿಯಲ್ಲಿ ಪ್ರತಿಯೊಬ್ಬರು ಕಾಣುತ್ತಾರೆ ಎಂಬ ವಾದಗಳು ನನ್ನ ಮನದ ಮೊಲೆಯಲ್ಲಿ ಜಲ್ಲೆಂದು ಎದ್ದು ನಿಲ್ಲುತ್ತಿದ್ದವು.

ಹೌದು! ನೀನೇ ದೊಡ್ಡವಳು ನೀನೇ ಅವನನ್ನು ನೋಡಿಕೊಳ್ಳಬೇಕು. ಅವನು ಏನನ್ನು ಬೇಕು ಎನ್ನುತ್ತಾನೋ ಅದನ್ನು ಯಾವುದೇ ಮೂಲಾಜಿಲ್ಲದೆ ಕೊಡಬೇಕು. ಅವುಗಳು ನನ್ನ ಪ್ರೀತಿಯ ಚಿಕ್ಕ ಚಿಕ್ಕ ವಸ್ತುಗಳಾಗಿದ್ದರೂ ಸಹ. ಇದು ನನಗೆ ನನ್ನ ಸೂಕ್ಷ್ಮ ಭಾವನೆಗಳಿಗೆ ವಿಪರೀತವಾದ ದಕ್ಕೆಯನ್ನು ತಂದಿತು. ನನ್ನನ್ನು ಮೊದಲು ಪ್ರೀತಿಸುತ್ತಿದ್ದವರು, ಇಂದು ಅವರುಗಳು ವರ್ತಿಸುತ್ತಿದ್ದ ರೀತಿ ಹೆಣ್ಣು ಎಂದರೇ ಸಮಾಜದಲ್ಲಿ ಯಾವ ರೀತಿಯಲ್ಲಿ ನೋಡುವರು ಎಂಬುದನ್ನು ನೋಡುವಂತೆ ಅರಿಯುವಂತೆ ಮಾಡಿತು.

ನನಗೆ ನನ್ನದೇಯಾದ ನನ್ನ ಕನಸನ್ನು ಹಂಚಿಕೊಳ್ಳುವ ಹೆಣ್ಣನ್ನು ಹೆಣ್ಣ ರೀತಿಯಲ್ಲಿ ಕಾಣುವ ಹೃದಯವನ್ನು ಹುಡುಕುವಂತೆ ಮಾಡಿತು. ಹಾಗಂತಾ ನನ್ನ ಮನೆಯವರು ದುಷ್ಟರು ಎಂದು ನಾನೆಂದು ಭಾವಿಸಿಲ್ಲ. ಆ ದಿನಗಳಲ್ಲಿ ನನ್ನ ಚಿಕ್ಕ ಮನಸ್ಸಿಗೆ ಅವರ ನಡಾವಳಿ ಆ ರೀತಿಯಲ್ಲಿ ಕಂಡಿತು.

ಗಂಡು ಹುಡುಗ ಎಂದ ತಕ್ಷಣ ನೀನು ಹಾಗೆ ಸಾಧಿಸಬೇಕು, ಹೀಗೆ ಸಾಧಿಸಬೇಕು, ನೀನು ಏನಾದರೂ ಮಾಡಬಹುದು, ನೀನೆ ನಮಗೆ ಆಸರೆ ಇತ್ಯಾದಿಯ ಪಾಸೀಟಿವ್ ಭರವಸೆಯನ್ನು ನಾನು ನನ್ನ ಸುತ್ತ ಮುತ್ತ ನೋಡಿದ್ದೇನೆ.

ಹೆಣ್ಣು ಎಂದರೇ ಅವಳು ಮನೆಯ ಕೆಲಸ ಮಾಡಲು ಸೀಮಿತ, ಓದು ಅರ್ಧ, ಕೆಲಸ ಬೇಕಿಲ್ಲ, ವಯಸ್ಸು ೧೮ ಆದರೆ ಸಾಕು ಬೇಗ ಮದುವೆ ಮಾಡಿ ಗಂಡಿನ ಮನೆಗೆ ಸಾಗು ಹಾಕಿದರೆ ಸಾಕಾಪ್ಪ ಎಂದು ಪರಿತಪಿಸುವ ಅಸಾಂಖ್ಯಾತ ತಂದೆ ತಾಯಂದಿರು. ನನಗಂತೋ ಇಂದಿಗೂ ತಿಳಿಯದು.
ಮಕ್ಕಳಿಗೆ ಹೆಣ್ಣು ಬೇಕು, ಪ್ರೀತಿಗೆ ತಾಯಿಬೇಕು, ಗೆಳೆತನಕ್ಕೆ ಸಂಗಾತಿ ಬೇಕು.. ಆದರೇ ಹೆಣ್ಣು ಮಗು ಜನಿಸಿದ ಸಮಯದಲ್ಲಿ ಅವರುಗಳು ಪರಿತಪಿಸು ಸ್ಥಿತಿ ನೋಡಿದರೇ ಅವರುಗಳು ಸ್ತ್ರೀ ಅಂದರೇ "ಸೆರಗಲ್ಲಿ ಕಟ್ಟಿಕೊಂಡ ಕೆಂಡ!" ಎಂಬ ರೀತಿಯಲ್ಲಿ ನೋಡುತ್ತಾರೆ.


ನನಗೆ ಎನಿಸುತ್ತದೆ... ಅವರುಗಳು ಎಂದಿಗೂ ಇವಳು ಸಹ ಮನೆಯ ನಮ್ಮ ಮನೆ ಮಗಳು ಎಂದು ಎಂದಿಗೂ ನೋಡುವುದಿಲ್ಲವೇನೋ.. (ಎಲ್ಲರೂ ಅಲ್ಲಾ ಕ್ಷಮಿಸಿ)

ಈ ಎಲ್ಲಾ ಮನದ ಗೊಂದಲದ ಸಮಯದಲ್ಲಿ ನನ್ನ ಓದಿನ ಸಮಯದಲ್ಲಿ, ಮನೆಯಲ್ಲಿ ನನ್ನನ್ನು ಮದುವೆ ಮಾಡಿ ಸಾಗು ಹಾಕಬೇಕು ಎಂಬ ತಯಾರಿಯೋ ತಯಾರಿ. ನನ್ನ ಕನಸು ನಾನು ಏನು ಅಪೇಕ್ಷೆಪಡುತ್ತೀನಿ ಎನ್ನುವುದನ್ನು ಏನು ವಿಚಾರ ಮಾಡದೇ ಅವರುಗಳೇ ನಿರ್ಧರಿಸಿಬಿಟ್ಟಿದ್ದರೇನೋ. ಹುಡುಗಿಯರು ಪ್ರಮುಖ ನಿರ್ಧಾರ ತೆಗೆದುಕೊಳ್ಳಲು ಯೋಗ್ಯರಲ್ಲ ಎಂಬ ಭಾವನೆಯಿರಬೇಕು?



ನನಗೋ ನನ್ನ ಗೆಳೆಯನ ಬಗ್ಗೆ, ನನ್ನ ಪ್ರೀತಿಯ ಬಗ್ಗೆ ಹೇಗೆ ಅವರ ಹತ್ತಿರದಲ್ಲಿ ಹೇಳಬೇಕೋ ತಿಳಿಯದೇ ನಾನು ಇನ್ನೂ ಕೆಲವು ವರ್ಷಗಳ ಕಾಲ ಓದುತ್ತೇನೆ ಎಂದು ಹೇಳಿ ಮನೆಯಲ್ಲಿನ ಎಲ್ಲರಿಂದ ಬೈಸಿಕೊಂಡದ್ದಾಯಿತು.

ನನ್ನ ಗೆಳತಿಯರ ಪ್ರಚೋದನೆಯೇ ಇರಬೇಕು ನನಗೋ ಒಬ್ಬ ಗೆಳೆಯಬೇಕು ಎನಿಸಿದ್ದು. ನನ್ನ ನೆಚ್ಚಿನ ಗೆಳೆಯತಿಯರಾದ ಸೇವಂತಿ,ಮಲ್ಲಿಗೆಯರು ಎಷ್ಟೊಂದು ಜೋಶ್ ನಲ್ಲಿ ಹೀಗಾಗಲೇ ತಮ್ಮ ತಮ್ಮ ಸಂಗಾತಿಯರೊಡನೆ ಓಡಾಡುವುದು, ಸುತ್ತುವುದು, ಕದ್ದು ಮುಚ್ಚಿ ಪಾರ್ಕನಲ್ಲಿ ತನ್ನ ನೆಚ್ಚಿನ ಸಂಗಾತಿಯ ಜೋತೆ ಕನಸನ್ನು ಕಟ್ಟುವುದನ್ನು ನೋಡಿ.. ಅವರ ಗೆಳೆಯರ ಬಗ್ಗೆ ಅವರ ಪ್ರವರ ಕೇಳಿ ಕೇಳಿ..ನಾನು ಯಾಕೇ ಪ್ರಯತ್ನಿಸಬಾರದು ಎಂಬ ಒಂದು ಭರವಸೆಯ ಎಳೆ ಮನದಲ್ಲಿ ಮೋಡಿತು..


ಹೀಗೆ ಇರುವಾಗಲೇ ಆ ನನ್ನ ಮುದ್ದು ಗಮಾರ ನನ್ನ ಕಣ್ಣಿಗೆ ಬಿಳಬೇಕೇ.... ನಾನು ಹೇಗೆ ಅವನನ್ನು ಮಾತನಾಡಿಸಲಿ.. ಹುಡುಗಿಯರೇ ಮುಂದೆ ಬಿದ್ದು ಕೇಳಬಹುದಾ.. ಪರಿಚಯಿಸಿಕೊಳ್ಳಬಹುದಾ.. ಹೀಗೆ ಮನದ ತುಂಬ ಸಾವಿರ ತೊಳಲಾಟಗಳೇ ಸರಿ. ಮನೆಯವರಿಗೆ ತಿಳಿದರೇ ಏನು ಮಾಡುವುದು? ಯಾರಾದರೂ ನೋಡಿದರೇ ಏನು ಮಾಡುವುದು? ಹೀಗೆ ನೂರಾರು ಯೋಚನೆ.. ಬಹು ಕಷ್ಟ ಕಣೇ ಎಂದು ಸೇವಂತಿಯ ಬಳಿ ನನ್ನ ಅಳಲನ್ನು ಹೇಳಿಕೊಂಡು ಮರುಗಿದ್ದಾಗಿತ್ತು.

ಕಣ್ಣು ಅರಿಯದಿದ್ದರೂ ಹೃದಯ ಅರಿಯುವುದು ಎಂಬಂತೆ ಅವನು ಒಂದು ದಿನ ನಾನು ನನ್ನ ಮನೆಗೆ ಹಾಗೆಯೇ ದಾರಿಯಲ್ಲಿ ಸಾಗುವಾಗ ಮಾತನಾಡಿಸಬೇಕೆ..

ರ್ರೀ.. ನೀವು .. ಬಹಳ ದಿನಗಳಿಂದ ನೋಡುತ್ತಿದ್ದೇನೆ.. ಮಾತನಾಡಿಸಬೇಕು ಅಂದು ಕೊಂಡಿದ್ದೇ.. ಹೀಗೆ ಪೀಠಿಕೆಯನ್ನು ಪ್ರಾರಂಭಿಸಿ ಮನೆಯ ಹತ್ತಿರ ಬರುವತ್ತಿಗೆ ಮೆಚ್ಚಿನ ಸ್ನೇಹದ ಸೆಲೆಯನ್ನು ಇಬ್ಬರೂ ಕಂಡುಕೊಂಡುಬಿಟ್ಟಿದ್ದೇವು.

ಹೀಗೆ ಹಾಗೆ ದಿನಗಳು ಕಳೆದಂತೆ ತುಂಬ ತುಂಬ ಹತ್ತಿರವಾದೆವು. ಅವನೇ ಇರಬೇಕು ನನಗೆ ಮೊದಲು ಹೇಳಿದ್ದು.... ನಾನು ನಿನ್ನ ಇಷ್ಟಪಡುತ್ತೇನೆ! ನನಗೆ ಖುಷಿಯಾಯಿತು. ಇಷ್ಟಪಡುವ ಒಂದು ಹೃದಯ ಸಿಕ್ಕಿತಲ್ಲಾ!

ಹುಡುಗಿಯರು ಹುಡುಗರಲ್ಲಿ ಇನ್ನೂ ಏನನ್ನು ಮಹಾ ಇಷ್ಟಪಡುತ್ತಾರೇ? ಅವರುಗಳನ್ನು ನಮ್ಮನ್ನು ನಮ್ಮ ರೀತಿಯಲ್ಲಿ ಇಷ್ಟಪಟ್ಟು ಕೊಂಚ ಕಾಳಜಿಯನ್ನು ವಯಿಸಿದರೇ ನಮಗೆ ಅದೇ ಸ್ವರ್ಗಕ್ಕೆ ಮೂರು ಗೇಣು.

ಅವನ ಭರವಸೆಯ ಮನಸ್ಥಿತಿ.. ಇನ್ನೂ ಮುಂದೆ ದೊಡ್ಡದಾಗಿ ಓದಬೇಕು.. ಸಾಧಿಸಬೇಕು ಎನ್ನುವ ಮನೋಭಾವ. ನೀನು ಮುಂದೆ ಇನ್ನೂ ಓದು ಎಂಬ ಅಸರೆಯ ನುಡಿ ನನ್ನನ್ನು ತುಂಬ ಸಂತೋಷಪಡಿಸಿತು.


ಅವನನ್ನು ಒಂದು ಕ್ಷಣವು ಬಿಡಲೇ ಇರಬಾರದು ಎನ್ನುವಂತಾಗುತ್ತಿತ್ತು. ನಮ್ಮ ಮನೆಯವರ ಕಣ್ಣು ತಪ್ಪಿಸಿ ರಜಾ ದಿನಗಳು, ಕಾಲೇಜಿನ ಬಿಡಿವಿನ ವೇಳೆಯಲ್ಲಿ ಬೇಟಿ ಮಾಡುತ್ತಿದ್ದೇವು. ಅವನ ಮಾತು, ಅವನ ಕನಸು ನನ್ನದೇಯೇನೋ ಎಂಬಂತೆ ಮುದ್ದು ಹುಡುಗಿಯಾಗಿ ಅವನನ್ನೇ ನನ್ನ ಕಣ್ಣು ತುಂಬಿಕೊಂಡು ಹಾಗೆಯೇ ನೋಡುತ್ತಾ ಕೂತು ಬಿಟ್ಟಿರುತ್ತಿದ್ದೇ.. ಹೀಗೆಯೇ ಕಾಲೇಜಿನ ಕ್ಯಾಂಟಿನಲ್ಲಿ ಒಮ್ಮೆ ನಮ್ಮ ಲೆಕ್ಚರ್ ಕೈಗೆ ಸಿಕ್ಕಿಬಿಟ್ಟಿದ್ದೀವಿ. ಅಂದಿನ ಪಜೀತಿಯನ್ನು ನೆನಸಿಕೊಂಡರೇ.. ಅಮ್ಮ! ಈ ಪ್ರೀತಿ ಪ್ರೇಮದ ಆಟಕ್ಕೆ ಎಷ್ಟೊಂದು ಕಷ್ಟದ ದಾರಿಗಳು ದೇವರೇ ಎನಿಸುತ್ತದೆ.


ಹೀಗೆ ನನ್ನ ಅವನ ಗೆಳೆತನ ಇಲ್ಲಿಯವರೆಗೆ ಹೀಗೆ ಸಾಗುತ್ತಿದೆ. ಮನೆಯಲ್ಲಿ ಏನೊಂದು ಅವನ ಬಗ್ಗೆ ಇದುವರೆಗೂ ಹೇಳಿಲ್ಲ. ಅದರೆ ನನಗೂ ಅವನಿಗೂ ಒಂದು ಭರವಸೆಯಿದೆ. ಈ ಮೊದಲ ಪ್ರೇಮವನ್ನು ಗಟ್ಟಿಯಾಗಿ ಉಳಿಸಿಕೊಳ್ಳಬೇಕು. ಅದನ್ನು ಹೆಮ್ಮೆಯಿಂದ ಹಿಡಿದು ಸುಂದರ ಜೀವನವನ್ನು ನಾನು ಕಾಣುವ ಕನಸಿನಂತೆ ರಚಿಸಿಕೊಂಡು ನನ್ನ ನೆಚ್ಚಿನ ಮೆಚ್ಚಿನ ಪ್ರೀತಿಯ ಗೆಳೆಯನ ಜೋತೆ ನೂರುಕಾಲ ಸಾಗಿಸಬೇಕು. ಹೀಗೆ ಹತ್ತು ಹಲವು ಹಂಬಲಗಳು ಮನದಲ್ಲಿ ಹೊಯದಾಡುತ್ತಿವೆ.


ಇನ್ನೆರಡು ವರುಷಗಳು ನನ್ನ ಕಾಲೇಜು ಮುಗಿದು ಅವನದು ಮುಗಿದು ಒಂದು ಕೆಲಸವನ್ನು ಹಿಡಿದು ಬಿಟ್ಟರೇ ದೈರ್ಯವಾಗಿ ಮನೆಯಲ್ಲಿ ಇದನ್ನು ಪ್ರಸ್ತಾಪಿಸಿ ಅವರನ್ನು ಒಪ್ಪಿಸಿಕೊಳ್ಳುವ ಮನಸ್ಸು ಇದೆ. ಕಾಲಾಯ ತಸ್ಮಯಾ ನಮಃ..

ನೋಡೊಣ ಮುಂದೆನಾಗುವುದು..ನಿಮ್ಮ ಪ್ರೀತಿಯ ಆರೈಕೆ ಇಲ್ಲಿ ಇರಲಿ !!

1 ಕಾಮೆಂಟ್‌: