ಮಂಗಳವಾರ, ಮೇ 10, 2011

ಪ್ರೀತಿಯೆಂಬುದು ಸದ್ದಿಲ್ಲದೆ ಸಂಭವಿಸುವ ಸಂಗತಿ

ಮೊನ್ನೆ ಪುನಃ ರವಿಬೆಳೆಗೆರೆಯವರ "ಹೇಳಿ ಹೋಗು ಕಾರಣ" ಎಂಬ ಪ್ರೇಮ ಗ್ರಂಥವನ್ನು ಓದಿದಾಗ ಕೇಲವು ಸಾಲುಗಳು ಯಾಕೋ ನನ್ನ ಮನಸ್ಸನ್ನು ಸೆಳೆದವು.

ಅವುಗಳು ನಿಮಗೂ ಸಹ ಇಷ್ಟವಾಗಬಹುದು ಎಂಬ ಕಾರಣದಿಂದ ನಾನು ಹಾಗೆ ಹಾಗೆಯೇ ನೋಟ್ ಮಾಡಿಕೊಂಡಿದ್ದನ್ನು ಯಥಾ: ಪ್ರಸ್ತುತಿ ಇಲ್ಲಿ.

ಈ ಸಾಲುಗಳ ವಾರಸುದಾರರು ರವಿಬೆಳೆಗೆರೆ ಮಾತ್ರ.ಇಂಥ ಮುತ್ತಿನ ಮಣಿಗಳ ಕೊಡುಗೆಗೆ ನಾನು ಅವರಿಗೆ ಅಭಾರಿ ಮತ್ತು ವಂದನೆಗಳು.


"ಅವಶ್ಯಕತೆಗಳಿಗೆ ಹುಟ್ಟಿಕೊಳ್ಳುವುದು ಪ್ರೀತಿಯಲ್ಲ. ಅದು ಹೊಂದಾಣಿಕೆ"

"ಪ್ರೀತಿಯೆಂಬುದು ಸದ್ದಿಲ್ಲದೆ ಸಂಭವಿಸುವ ಸಂಗತಿ"

"ಒಂದು ಪ್ರೀತಿ ಉದ್ಬವಾಗಲಿಕ್ಕೆ ನೂರು ಜರೂರತ್ತುಗಳ ಸೃಷ್ಟಿಯಾಗಬೇಕು.ಕನಸುಗಳು ಫಸಲು ಎದ್ದು ನಿಲ್ಲಬೇಕು."

"ಪ್ರೀತಿಯೆಂದರೆ ಅವಳಿಗಾಗಿ ತನ್ನ ಜೀವ ತೇಯ್ದು ಅದರಲ್ಲೇ ಸಂತೋಷಪಡುವುದು."

"ಅವಳಿಗೆ ದೈವಿಕವಾದದ್ದು ಬೇಡ. ಮನುಷ್ಯ ಸಹಜವಾದದ್ದು ಬೇಕು. ಪ್ರೀತಿ, ವಾಂಛೆ, ದೇಹ, ಅದರ ಸುಖ, ಅದರ ಫಲ.. ಹೌದು! ಹೆಂಗಸು ದೈವವನ್ನು ಪೂಜಿಸಬಲ್ಲಳು. ಪ್ರೀತಿಸಲಾರಳು."

"ಎಲ್ಲಾ ಪ್ರೀತಿಯ ತಾಯಿ ಬೇರು ವಾಂಛೆ. ಪ್ರತಿ ಮನುಷ್ಯನು ಪ್ರೀತಿಯ ಮುಖವಾಡ ಹಾಕಿಕೊಂಡೇ ವಾಂಛೆಗಳನ್ನು ಕಟ್ಟಿಟ್ಟುಕೊಳುತ್ತಾನೆ"



"ಆವೇಶಗಳು ಆವೇಶಗಳಲ್ಲ. ಅವು ಆದರ್ಶಗಳನ್ನು ಕೊಂದು ಬಿಡುವ ಬಲಹೀನತೆಗಳು. ವಂಚನೆಯ ಜಾಯಮಾನವೇ ಅಂತಹವುದು. ಆರಂಭದಲ್ಲಿ ಆಗಿರುತ್ತವೆ. ಅದೇ ಎಲ್ಲೆಲ್ಲೂ ಸಲೀಸಾಗಿ ಹೋಗುತ್ತವೆ."

"ಪ್ರತಿ ಹುಡುಗಿಯಲ್ಲೂ ಒಬ್ಬ ಆದರ್ಶ ಅಮ್ಮ ಇರುತ್ತಾಳೆ. ಅಮ್ಮನಿಗೆ ದುಃಖದ ಮಗು ಅಂದ್ರೆ, ಅಳೋ ಮಗು ಅಂದ್ರೆ, ರೋಗದ ಮಗು ಅಂದ್ರೆ, ದುಷ್ಟ ಮಗು ಅಂದ್ರೆ ಜಾಸ್ತಿ ಇಷ್ಟ. ತಕ್ಷಣ ಅಂಥ ಮಗುವಿಗೆ ಹೆಲ್ಪ್ ಮಾಡಕ್ಕೆ ಮುಂದಾಗುತ್ತಾಳೆ."

"ಹೆಂಗಸಿಗೆ ಮಾತ್ರ ಹಾಗೆ ತನ್ನ ಪ್ರೀತಿಯನ್ನು ತಾನೇ ಶಾಶ್ವತವಾಗಿ ರದ್ದು ಮಾಡಲ್ಲಿಕ್ಕೆ ಬರುತ್ತದೆ. ಬಾಯಿಬಿಟ್ಟು ಹೇಳದೇನೇ ಹೆಂಗಸಿಗೆ ಪ್ರೀತಿಯನ್ನು ತೀರಸ್ಕರಿಸೋಕೆ ಬರುತ್ತದೆ."

"ಗೆಳೆತನ ಕೇವಲ ಪರಸ್ಪರ ಪ್ರೀತಿ ಬೇಡುತ್ತೆ. ವಿಶ್ವಾಸ ಬೇಡುತ್ತೆ. ಆದರೆ ಕಂಪ್ಯಾನಿಯನ್ ಷಿಪ್ ಅನ್ನೋದು ಭರವಸೆ ಬೇಡುತ್ತೆ. ಕನಸು ಕೊಡು ಅನುತ್ತೆ."

"ಹುಡುಗೀರ ಮನಸ್ಸು ಯಾವಾಗ ಬೇಕಾದರೂ ಹೊಚ್ಚ ಹೊಸ ಸ್ಲೇಟಿನಂತೆ ಫಳಫಳಿಸುವುದು."

"ಪ್ರೇಮದ ತಾಕತ್ತೇ ಅಂಥದ್ದು. ಅದು ಮನುಷ್ಯನ್ನ ದೇವರನ್ನಾಗಿ ಮಾಡುತ್ತೆ."

"ಜಗತ್ತಿನ ಪ್ರತಿ ಹೆಂಗಸು ಹೀಗೆ ತನ್ನ ಹಾಗೇ ಪಕ್ಕದ ಆಕೃತಿಗಳನ್ನು ಬದಲಾಯಿಸುತ್ತಿರುತ್ತೆ. ತಬ್ಬುವ ಮನುಷ್ಯ ದೂರವಾದಾಗ, ನೋಡುವ ಮನುಷ್ಯನ ಜಾಗದಲ್ಲಿ ನಿಂತುಬಿಡುತ್ತಾನೆ." ಅದಕ್ಕೆ ಸಂಕಟವಾಗುತ್ತದೆ ಅಷ್ಟೇ. ಪ್ರೇಮವೆಂದರೆ, ಮೋಸವೆಂದರೆ, ನಿರಾಸೆಯೆಂದರೆ ಅದೆಲ್ಲದರ ಮೊತ್ತ ಕೇವಲ ಸಂಕಟ."

"ಪ್ರೀತಿಯೆಂಬುದು ಜಗತ್ತನ್ನು ಅದೇಷ್ಟು ಚಿಕ್ಕದು ಮಾಡಿಬಿಡುತ್ತದಲ್ಲಾ?"



ಆಧಾರ ಗ್ರಂಥ: ಹೇಳಿ ಹೋಗು ಕಾರಣ. ಲೇಖಕರು: ರವಿ ಬೆಳೆಗೆರೆ. ಪ್ರಕಾಶನ: ಭಾವನ ಪ್ರಕಾಶ ಬೆಂಗಳೂರು.

1 ಕಾಮೆಂಟ್‌: