ಓದುವುದಕ್ಕಿಂತ ಬೇರೆ ಬೇರೆ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂಬ ಕ್ಷಣವಿದು.
ಉ ಫ್ ಅದೆಷ್ಟು ಬೇಗ ನಾಲಕ್ಕು ವರುಷಗಳು ಮುಗಿದು ಹೋದವು ಅನಿಸುತ್ತಿದೆ.
ನಿತ್ಯ ಮುಂಜಾನೆ ಸೋಮವಾರದಿಂದ ಶನಿವಾರದವರೆಗೂ ನಮ್ಮ ಮಗ ಕಾಲೇಜಿಗೆ ಹೋಗುತ್ತಾನೆ ಎಂದು ಬೇಗ ಎದ್ದೇಳುತ್ತಿದ್ದ ನಮ್ಮ ಅಮ್ಮ. ಮಗ ಬಿಸಿ ಬಿಸಿ ಕಾಪಿ ಕುಡಿದು ಕಾಲೇಜಿಗೆ ಹೋಗಲಿ ಅಂದು ಅಡುಗೆ ಮನೆಗೆ ಅವಸರದಲ್ಲಿ ಹೋಗುತ್ತಿದ್ದ ಆ ಕ್ಷಣಗಳು. ಅಮ್ಮ ಮಾಡುತ್ತಿದ್ದ ಆ ಪ್ರೀತಿಯ ತಿಂಡಿಗಳನ್ನು ಹೇಗೆ ಮರೆಯಲಿ. ಅವುಗಳೆಲ್ಲ ಇಂದಿಗೆ ಬಂದ್ !
ಮುಂಜಾನೆ ಚುಮು ಚುಮು ಚಳಿಯಲ್ಲಿ ಕಾಲೇಜು ಬಸ್ಸಿಗಾಗಿ ಕಾಯುತ್ತಿದ್ದ ದಿನಗಳಿಗೆ ಬಾಯ್!
ಹಾಗೆಯೆ ಕಾಲೇಜು ಬಸ್ಸಿಗಾಗಿ ಕಾಯುವಾಗ ದೂರದಲ್ಲಿ ಕಾಲೇಜು ಬಸ್ಸಿಗಾಗಿ ಕಾಯುತ್ತಿದ್ದ ಬೇರೆ ಬ್ರಾಂಚು ಹುಡುಗಿಯರ ಕಡೆ ಬೀರುತ್ತಿದ್ದ ಕಿರು ನೋಟಕ್ಕೆ, ಅದು ಇದು ಎಂದು ಸ್ನೇಹಿತರೊಂದಿಗೆ ಮಾತನ್ನಾಡುತ್ತಿದ್ದ ಗಳಿಗೆಗಳಿಗೆ ಬಾಯ್ !
ಕ್ಲಾಸ್ ರೋಮಲ್ಲಿ ನಾವುಗಳು ಪಾಠ ಕೇಳಿದರು, ಕೇಳದ್ದಿದರು ಪಾಠ ಮಾಡುವುದು ತಮ್ಮ ಕರ್ತ್ಯವ್ಯವೆಂದು ನಿತ್ಯ ಬೋಧನೆ ಮಾಡುತ್ತಿದ್ದ ಎಲ್ಲಾ ಉಪನ್ಯಾಸಕಾರಿಗಳಿಗೂ ವಂದನೆ ಗುರುವಂದನೆಗಳು.
ಹಾಗೆಯೆ ಕಾಲೇಜು ಲ್ಯಾಬ್ ಗಳಲ್ಲಿ ನಾವು ಮಾಡುತ್ತಿದ್ದ ಪ್ರಯೋಗಗಳು ಕೈ ಕೊಟ್ಟಾಗ ನಾವಿದ್ದೀವಿ ಮಕ್ಕಳ ಎಂದು ಎಲ್ಲಾ ಸಹಕಾರ ನೀಡಿ ಔಟ್ ಪುಟ್ ಬಾರಿಸಿಕೊಟ್ಟು ಲ್ಯಾಬ್ ಪಾಸು ಮಾಡಿಸುತ್ತಿದ್ದ ಎಲ್ಲಾ ಲ್ಯಾಬ್ ಅಸಿಸ್ಟಂಟ್ ಗಳಿಗೆ ಒಂದು ದೊಡ್ಡ ನಮಸ್ಕಾರಗಳು.
ನಾವುಗಳು ಈ ಲ್ಯಾಬ್ ಅಸಿಸ್ಟಂಟ್ ಗಳು ಉಪನ್ಯಾಸಕರಿಗಿಂತ ಚೂಟಿ ಎಂದು ನಮ್ಮ ನಮ್ಮಲ್ಲಿ ಮಾತನಾಡಿಕೊಳ್ಳುತ್ತಿದ್ದೆವು .
ನಾಲಕ್ಕು ವರುಷಗಳು ತಪ್ಪದೆ ನಡೆಯುತ್ತಿದ್ದ ಕಾಲೇಜು ವಾರ್ಷಿಕೋತ್ಸವ 'ಸುಪೂರ್ತಿ' ಕಾರ್ಯಕ್ರಮ ಸುಂದರ ಅತಿ ಸುಂದರ. ಎಲ್ಲ ಹುಡುಗ ಹುಡುಗಿಯರ ಬಣ್ಣ ಬಣ್ಣದ ಉಡುಪುಗಳು ಮನೆ ಹಬ್ಬದ ಸಂಭ್ರಮವನ್ನು ನೆನಪು ಮಾಡಿ ಮಾಡಿಕೊಟ್ಟು ಕಾಲೇಜು ಓದಿದ್ದು ಸಾರ್ಥಕ ಅನಿಸುವಂತೆ ಮಾಡಿತ್ತು. ಬರಿ ಒಡದು ಏನು ಪ್ರಯೋಜನ ಇಲ್ಲ ಮಗ ಇಂತ ಕಾರ್ಯಕ್ರಮಗಳೇ ಜೀವನ ಉತ್ಸಾಹಕ್ಕೆ ಟಾನಿಕ್ ಮತ್ತು ಉಪಯೋಗ ಎಂದು ತಿಳಿಸಿಕೊಟ್ಟ ಕ್ಷಣಗಳಿಗೆ ಥ್ಯಾಂಕ್ಸ್ !