ಗುರುವಾರ, ಅಕ್ಟೋಬರ್ 1, 2026

ಗಾಂಧೀಜಿ ವಿಚಾರಧಾರೆ



ಗಾಂಧಿ ಎಂಬ ಎರಡು ಅಕ್ಷರದ ಶಕ್ತಿ ಎಷ್ಟು ಎನ್ನುವುದು ಇಡೀ ಪ್ರಪಂಚಕ್ಕೆ ಗೊತ್ತು. ಆದರೆ ಇಂದು ನಮ್ಮ ಮುದ್ದು ಮಕ್ಕಳಿಗೆ ಈ ಗಾಂಧೀಜಿ ಕೇವಲ ಪುಸ್ತಕದಲ್ಲಿ ಓದುವ ಒಂದು ಪಾಠ ಮಾತ್ರವಾಗಿದೆ ಎನಿಸುತ್ತದೆ.  ಅವರಿಂದ ನಮ್ಮ ನಾಡು ಸ್ವತಂತ್ರವನ್ನು ಗಳಿಸಿತು ಎಂಬುದು ಕೇವಲ ಚರಿತ್ರೆಯ ಪಾಠ ಮಾತ್ರ ಅನಿಸುವುದಿಲ್ಲ. ಯಾಕೆಂದರೆ 1947 ಕ್ಕೂ ಮೊದಲ ನಮ್ಮ ದೇಶದ ಜೀವನ ಇಂದಿನ ಪೀಳಿಗೆಗೆ ಕೇವಲ 
ಕಥೆಯಾಗಿ ಮಾತ್ರ ಗೊತ್ತು. ಆದರೂ ಈ  ಕೃತಕ ಬುದ್ಧಿಮತ್ತೆಯ ಯುಗದ ಯುವಕರಿಗೆ ಹಿಂದಿನ ನಮ್ಮ ನಾಯಕರ ಹೋರಾಟದ ಅರಿವು ಸಾಕಷ್ಟು ತಿಳಿದಿರಬೇಕು ಅನಿಸುತ್ತದೆ.
 
ಗಾಂಧಿ ಎಂಬ ಈ ಸಾಮಾನ್ಯ ಮನುಷ್ಯ ಅದು ಹೇಗೆ ಈ ಭಾರತದ ಪ್ರತಿಯೊಬ್ಬರನ್ನು ತನ್ನ ಒಂದು ಕರೆಗೆ ಮಾತಿಗೆ ಶರಣಾಗುವಂತೆ ಮಾಡಿದ ಅಂದರೆ ನಾವ್ಯಾರು ಕಲ್ಪನೆಯನ್ನು 
ಮಾಡದಷ್ಟು  ಶಕ್ತಿ, ಯುಕ್ತಿ , ನಾಯಕ ಗುಣ ಪ್ರತಿಯೊಂದು ಅಳವಡಿಸಿಕೊಂಡ ಮಹಾತ್ಮನಾಗಿದ್ದ ಅಂದರೆ ತಪ್ಪಿಲ್ಲ.  
 
ಹರಿದು ಹಂಚಿ ಹೋಗಿದ್ದ ಜನ ಮನಗಳಿಗೆ ಒಂದು ದೊಡ್ಡ ಆಶಾ ಕಿರಣವೇ ಮಹಾತ್ಮಾ ಗಾಂಧಿ ಯಾಗಿದ್ದರು. ಫ್ರಿಡ್ಮ ಬೇಕೇ ಬೇಕು ಎಂದು ಬ್ರಿಟಿಷರನ್ನು ನಮ್ಮ ದೇಶದಿಂದ ಓಡಿಸಲು ಮುಂದಾಳತ್ವನ್ನು ಗಾಂಧಿಯವರು ವಯಿಸಿಕೊಂಡು ಇಡೀ ಭಾರತದ ಮಂದಿಗೆ ಸ್ವತ್ರಂತ್ರ ಹೋರಾಟದ ಪಾಠವನ್ನು ಮನನಾ ಮಾಡಿಕೊಟ್ಟ ಹಿರಿ ಮನುಷ್ಯ ಅಂದ್ರೆ ಕರೆ.
 
ಅಂದಿನ ದಿನ ಮಾನಕ್ಕೂ ಇಂದಿನ ದಿನಮಾನಕ್ಕೂ ಅಜಗಜಾಂತರವೇ ಸರಿ. ಅದು ಹೇಗೆ ಅವರ ಒಂದೊಂದು  ಮಾತು ಪ್ರತಿ ಹಳ್ಳಿ ಹಳ್ಳಿಗೂ ತಲುಪಿ ಪ್ರತಿಯೊಬ್ಬರ ಮನಸ್ಸನ್ನು ಗೆದ್ದಿತು?  
 
ಒಂದೇ ಎರಡೇ ವಿವಿಧ ಪರಿಯ ಚಳುವಳಿಗಳನ್ನು ಒಗ್ಗಟ್ಟಾಗಿ ರೂಪಿಸಿ ಆಂಗ್ಲರ ಜಂಗ ಬಲವನ್ನೇ ಅಲುಗಾಡಿಸಿದ ಗಾರುಡಿಗ ಅಂದರೆ ತಪ್ಪಿಲ್ಲ.
 
ನಮ್ಮ ನಿಮ್ಮಂತೆ ಸಾಮಾನ್ಯ ಮನುಷ್ಯ ಅಸಾಮಾನ್ಯನಾಗಿ ಸ್ವತಂತ್ರ ಚಳುವಳಿಯ ಮುಂದಾಳುವಾಗಿ ನೂರಾರು ನಾಯಕರನ್ನು ಹುಟ್ಟು ಹಾಕಿ ಭಾರತಕ್ಕೆ ನಮ್ಮದೇ ಪ್ರಜಾಪ್ರಭುತ್ವ ಸರ್ಕಾರನ್ನು ದಯಪಾಲಿಸಿದ. ನಮ್ಮ ಬದುಕನ್ನು ಹಸನು ಮಾಡಿ ಭವ್ಯ ಭಾರತದ ಪಿತಾಮ ನಾಗಿ ವಿಶ್ವವನ್ನೇ ನಿಬ್ಬೆರಗಾಗಿಸಿದ ಮಹಾನುಭಾವನೆ ಸರಿ.
 
ಅವರ ಸತ್ಯ ಶೋಧನೆ ಸರಳ ಜೀವನ ನಮಗೆಲ್ಲ ಆದರ್ಶವಾಗಬೇಕು. ಅವರ ಸತ್ಯ ವಿಚಾರ ನಮ್ಮ ಬದುಕಾಗಬೇಕು. 

ಅವರ ರಾಮ ರಾಜ್ಯದ  ಕನಸು ಇನ್ನು ನನಸಾಗಿಲ್ಲ ಎಂಬುದು ನೋವಿನ ವಿಚಾರ.  ಅಹಿಂಸೆಯ ಮೊಲಕ ಹೋರಾಟ ಮಾಡುವುದು ನಮ್ಮ ಮಂತ್ರವಾಗಬೇಕು. 
ಗಾಂಧಿ ಎಂಬ ಹೆಸರು ಕೇವಲ ರಾಜಕೀಯ ವಲಯಕ್ಕೆ ಮಾತ್ರ ಸೀಮಿತವಲ್ಲ, ಅವರ ಮಾತು ಅವರ ದೂರ ದೃಷ್ಟಿ ನಮ್ಮ ದೇಶದ, ಸರ್ಕಾರದ , ಸಮಾಜದ ನಡವಳಿಕೆಯಾಗಬೇಕಿತ್ತು.
 
ಕೇವಲ ಅವರ ಜನುಮ ದಿನದಂದು ಒಂದು ದಿನ ಅವರ ಗುಣಗಾನ ಮಾಡಿ ಪೂರ್ತಿ ಮರೆತುಬಿಡುವವರು ನಾವಾಗಿದ್ದೇವೆ ಅನಿಸುತ್ತದೆ. 

ಅವರನ್ನು ನಾವು ಇನ್ನು ಮರೆತಿಲ್ಲವೆಂದು ದೇಶದ ಪ್ರತಿ ಊರು ನಗರಗಲ್ಲಿ ಅವರ ಪ್ರತಿಮೆ , ರಸ್ತೆಗೊಂದು ಗಾಂಧಿ ಹೆಸರು ಇಟ್ಟುಬಿಟ್ಟರೆ ಸಾರ್ಥಕವಾಗುವುದಿಲ್ಲ ಅನ್ನುವುದು ಹಳೆಯ ತಲೆಗಳ ನೂವು. ಅದನ್ನು ಅಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಪ್ರಯತ್ನಿಸಬೇಕು.  

ನಮ್ಮ ಮೂಲಭೂತ ಕರ್ತವ್ಯಗಳ್ಳನ್ನು ಸರಿಯಾಗಿ ಮಾಡುವುದನ್ನು ಮೊದಲು ಕಲಿಯಬೇಕು. ಅದಕ್ಕೆ ಸಾಕ್ಷಿ ಎಂಬಂತೆ ಸರಿಯಾದ ವ್ಯಕ್ತಿಯನ್ನು ಚುನಾವಣೆಯಲ್ಲಿ ಆರಿಸುವ ಮನಸ್ಸು  ಬಂದಾಗ ಗಾಂಧಿ ಕಂಡ ಕನಸಿಗೆ ಬೆಲೆ ಬರುತ್ತದೆ ಅನಿಸುತ್ತದೆ.  ಇಲ್ಲವಾದರೆ ಈ ದೇಶದಲ್ಲಿ ಏನು ಮಾಡಿದರು ಬದುಕಬಹುದು ಎಂಬ ಉಢಾಫೆಯಲ್ಲಿ ಹತ್ತು ಹಲವು ರೀತಿಯ ಭ್ರಷ್ಟಾಚಾರ ಅನಾಚಾರದಲ್ಲಿ ದೇಶದ ಮರ್ಯಾದೆಯನ್ನು ಮಣ್ಣುಪಾಲು ಮಾಡುವವರ ಗುಂಪು ದೊಡ್ಡದಾಗುವಲ್ಲಿ ಯಾವುದೇ ಅತಿಶಯೋಕ್ತಿಯಿಲ್ಲ .
 
ಈ ವೇಗದ ಯುಗದಲ್ಲಿ ನಮ್ಮ ದೇಶದ ಚರಿತ್ರೆಯನ್ನು ಕೇವಲ ಪಠ್ಯಕ್ಕೆ ಮಾತ್ರ ಸೀಮಿತಗೊಳಿಸದೆ ಅದು ಬೇರೆ ಬೇರೆ ರೀತಿಯಲ್ಲಿ ಗಾಂಧಿ ಮತ್ತು ಅಂದಿನ ದಿನದಲ್ಲಿ ಸ್ವಾತಂತ್ರಕ್ಕಾಗಿ ಹೋರಾಡಿದ ಮಹಾನ್ ಚೇತನಗಳ ದಿಟ್ಟ ದೇಶ ಪ್ರೇಮ ಮತ್ತು ಗುಣಗಳನ್ನು ಇಂದಿನ ಈ ಡಿಜಿಟಲ್ ಮನಸ್ಸುಗಳಿಗೆ ತಿಳಿಯಪಡಿಸುವ ದಾರಿಗಳನ್ನು ಸರ್ಕಾರ ಮತ್ತು ಶಿಕ್ಷಣ ಸಂಸ್ಥೆಗಳು ಗುರುತಿಸಿಕೊಳ್ಳಬೇಕು.  ಆಗ ಮಾತ್ರ ಈ ಗಾಂಧಿಜಯಂತಿ ಆಚರಣೆಗಳಿಗೆ ಅರ್ಥ ಬರುವುದು ಅನಿಸುತ್ತದೆ. 
 ಅವರು ದಯಪಾಲಿಸಿದ ಈ ನಮ್ಮ ಸರ್ವ ಸ್ವಾತಂತ್ರ ಕ್ಕೆ ನೆಲೆ ಮತ್ತು ಬೆಲೆ ಬರುವುದು.

ಶನಿವಾರ, ಆಗಸ್ಟ್ 29, 2026

ಕಾಲೇಜು ಕ್ಷಣಗಳು..!

 ಓದುವುದಕ್ಕಿಂತ ಬೇರೆ ಬೇರೆ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂಬ ಕ್ಷಣವಿದು.

 

ಉ ಫ್  ಅದೆಷ್ಟು ಬೇಗ ನಾಲಕ್ಕು ವರುಷಗಳು ಮುಗಿದು ಹೋದವು ಅನಿಸುತ್ತಿದೆ.

 

ನಿತ್ಯ ಮುಂಜಾನೆ ಸೋಮವಾರದಿಂದ ಶನಿವಾರದವರೆಗೂ ನಮ್ಮ ಮಗ ಕಾಲೇಜಿಗೆ ಹೋಗುತ್ತಾನೆ ಎಂದು ಬೇಗ ಎದ್ದೇಳುತ್ತಿದ್ದ ನಮ್ಮ ಅಮ್ಮ.  ಮಗ ಬಿಸಿ ಬಿಸಿ ಕಾಪಿ ಕುಡಿದು ಕಾಲೇಜಿಗೆ ಹೋಗಲಿ ಅಂದು ಅಡುಗೆ ಮನೆಗೆ ಅವಸರದಲ್ಲಿ ಹೋಗುತ್ತಿದ್ದ ಆ   ಕ್ಷಣಗಳು.  ಅಮ್ಮ ಮಾಡುತ್ತಿದ್ದ ಆ ಪ್ರೀತಿಯ ತಿಂಡಿಗಳನ್ನು ಹೇಗೆ ಮರೆಯಲಿ. ಅವುಗಳೆಲ್ಲ ಇಂದಿಗೆ ಬಂದ್ !

 

ಮುಂಜಾನೆ ಚುಮು ಚುಮು ಚಳಿಯಲ್ಲಿ ಕಾಲೇಜು ಬಸ್ಸಿಗಾಗಿ ಕಾಯುತ್ತಿದ್ದ ದಿನಗಳಿಗೆ ಬಾಯ್!

 

ಹಾಗೆಯೆ ಕಾಲೇಜು ಬಸ್ಸಿಗಾಗಿ ಕಾಯುವಾಗ ದೂರದಲ್ಲಿ ಕಾಲೇಜು ಬಸ್ಸಿಗಾಗಿ ಕಾಯುತ್ತಿದ್ದ ಬೇರೆ ಬ್ರಾಂಚು ಹುಡುಗಿಯರ ಕಡೆ ಬೀರುತ್ತಿದ್ದ ಕಿರು ನೋಟಕ್ಕೆ, ಅದು ಇದು ಎಂದು ಸ್ನೇಹಿತರೊಂದಿಗೆ ಮಾತನ್ನಾಡುತ್ತಿದ್ದ ಗಳಿಗೆಗಳಿಗೆ ಬಾಯ್ !

 

ಕ್ಲಾಸ್ ರೋಮಲ್ಲಿ ನಾವುಗಳು ಪಾಠ ಕೇಳಿದರು, ಕೇಳದ್ದಿದರು ಪಾಠ   ಮಾಡುವುದು ತಮ್ಮ  ಕರ್ತ್ಯವ್ಯವೆಂದು ನಿತ್ಯ ಬೋಧನೆ ಮಾಡುತ್ತಿದ್ದ ಎಲ್ಲಾ ಉಪನ್ಯಾಸಕಾರಿಗಳಿಗೂ ವಂದನೆ ಗುರುವಂದನೆಗಳು.

 

ಹಾಗೆಯೆ ಕಾಲೇಜು ಲ್ಯಾಬ್ ಗಳಲ್ಲಿ ನಾವು ಮಾಡುತ್ತಿದ್ದ ಪ್ರಯೋಗಗಳು ಕೈ ಕೊಟ್ಟಾಗ ನಾವಿದ್ದೀವಿ ಮಕ್ಕಳ ಎಂದು ಎಲ್ಲಾ ಸಹಕಾರ ನೀಡಿ ಔಟ್ ಪುಟ್ ಬಾರಿಸಿಕೊಟ್ಟು ಲ್ಯಾಬ್ ಪಾಸು ಮಾಡಿಸುತ್ತಿದ್ದ ಎಲ್ಲಾ ಲ್ಯಾಬ್ ಅಸಿಸ್ಟಂಟ್ ಗಳಿಗೆ ಒಂದು ದೊಡ್ಡ ನಮಸ್ಕಾರಗಳು.

 

ನಾವುಗಳು ಈ ಲ್ಯಾಬ್ ಅಸಿಸ್ಟಂಟ್ ಗಳು  ಉಪನ್ಯಾಸಕರಿಗಿಂತ ಚೂಟಿ ಎಂದು ನಮ್ಮ ನಮ್ಮಲ್ಲಿ ಮಾತನಾಡಿಕೊಳ್ಳುತ್ತಿದ್ದೆವು .

 

ನಾಲಕ್ಕು ವರುಷಗಳು ತಪ್ಪದೆ ನಡೆಯುತ್ತಿದ್ದ ಕಾಲೇಜು ವಾರ್ಷಿಕೋತ್ಸವ 'ಸುಪೂರ್ತಿ'  ಕಾರ್ಯಕ್ರಮ ಸುಂದರ ಅತಿ ಸುಂದರ. ಎಲ್ಲ ಹುಡುಗ ಹುಡುಗಿಯರ ಬಣ್ಣ ಬಣ್ಣದ ಉಡುಪುಗಳು ಮನೆ ಹಬ್ಬದ ಸಂಭ್ರಮವನ್ನು ನೆನಪು ಮಾಡಿ ಮಾಡಿಕೊಟ್ಟು ಕಾಲೇಜು ಓದಿದ್ದು ಸಾರ್ಥಕ ಅನಿಸುವಂತೆ ಮಾಡಿತ್ತು.  ಬರಿ ಒಡದು ಏನು ಪ್ರಯೋಜನ ಇಲ್ಲ ಮಗ ಇಂತ ಕಾರ್ಯಕ್ರಮಗಳೇ ಜೀವನ ಉತ್ಸಾಹಕ್ಕೆ ಟಾನಿಕ್ ಮತ್ತು ಉಪಯೋಗ ಎಂದು ತಿಳಿಸಿಕೊಟ್ಟ ಕ್ಷಣಗಳಿಗೆ ಥ್ಯಾಂಕ್ಸ್ !