ಶನಿವಾರ, ಸೆಪ್ಟೆಂಬರ್ 9, 2017

ನಾವೇ ಬದಲಿಸಬೇಕು

ಇಂದು ನಾವು ಎಂಥ ದಿನಗಳಲ್ಲಿ ಬದುಕುತ್ತಿದ್ದೇವೆ ಎಂದರೇ ಯಾವುದೇ ಭರವಸೆಯೇ ಇಲ್ಲದಂತಾಗುತ್ತದೆ.

ನಮ್ಮ ಸರ್ಕಾರ, ಸಮಾಜ, ನಾಯಕರು, ಹತ್ತಿರದವರು ಹೀಗೆ ಪ್ರತಿಯೊಂದು ವ್ಯವಸ್ಥೆಯ ವಿರುದ್ಧವಾಗಿದ್ದವೇನೋ ಅನಿಸುತ್ತದೆ.

ನ್ಯಾಯವನ್ನು ಕೇಳುವವರೆ ಇಲ್ಲ. ಜನರ ಬಗ್ಗೆ, ಅವರ ಆಸೆಗಳ ಬಗ್ಗೆ ನಗಣ್ಯ ಕನಿಕರವನ್ನು ಪ್ರದರ್ಶಿಸುವ ವಾತಾವರಣ.

ಇಲ್ಲಿ ಬದುಕ ಬೇಕೆಂದರೇ ಇವುಗಳನ್ನೆಲ್ಲಾ ಅನುಭವಿಸಿಯೇ ತೀರಬೇಕು ಎನ್ನುವ ಮಟ್ಟಿಗೆ.

ಮನುಷ್ಯ ಮನುಷ್ಯರು ಬಾಳಲು ಇಷ್ಟೆಲ್ಲಾ ತಿಕ್ಕಾಟಗಳು ಬೇಕಾ ಎನಿಸುತ್ತದೆ.

ಒಂದು ರಾಜ್ಯದಲ್ಲಿರುವವರೆಲ್ಲ ಒಂದೇ ಎಂಬ ಭಾವನೆಯನ್ನು ಮರೆತಂತೆ ಅಕ್ಕಪಕ್ಕದವರ ಮೇಲೆ ನಿತ್ಯ ಹಲ್ಲು ಮಸೆಯುವುದು.

ಪ್ರತಿಯೊಂದಕ್ಕೂ ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ.

ಸರ್ಕಾರದ ವಿರುದ್ಧ ವಿರೋಧ ಪಕ್ಷಗಳ ಅಕ್ಷೇಪ. ವಿರೋಧ ಪಕ್ಷಗಳ ಮೇಲೆ ರೂಲಿಂಗ ಪಾರ್ಟಿಯ ಪ್ರಲಾಪ. ಅವರು ಮಾಡಿದ್ದು ಇವರಿಗೆ ಸರಿ ಬರಲ್ಲ. ಇವರು ಮಾಡಿದ್ದು ಅವರಿಗೆ ಸರಿ ಬರಲ್ಲ.

ಒಬ್ಬರನ್ನೊಬ್ಬರೂ ಕೇವಲ ಹಳಿಯುವುದರಲ್ಲಿಯೇ ನಿತ್ಯ ದಿನದೂಡುತ್ತಾರೆ. ಜನ ಸಾಮನ್ಯನ ಕೂಗು ಯಾರಿಗೂ ಬೇಡವಾದ ವಿಷಯ.

ಯಾವುದೇ ಸಮಸ್ಯೆಗಳನ್ನು ಪರಿಪೂರ್ಣವಾಗಿ ಬಗೆಹರಿಸುವುದರಲ್ಲಿ ಯಾರೊಬ್ಬರೂ ಪ್ರಯತ್ನಿಸುವುದಿಲ್ಲ. ಕೇಳಿದರೇ ಪುನಃ ವೈಕ್ತಿಕವಾಗಿ ಪ್ರಶ್ನೆ ಮಾಡಿದವರ ಮೇಲೆ ಪ್ರತಿ ದಾಳಿ. ನೀನು ಅಂದು ಹಾಗೆ ಮಾಡಿದ್ದೀಯಾ. ನೀನಗೆ ಯಾವ ಅರ್ಹತೆಯಿದೆ ಪ್ರಶ್ನೇ ಕೇಳಲು? ನೀವು ಮಾಡಿದ್ದೀರಾ ನಾವು ಮಾಡುತ್ತೇವೆ. ಹಾಗೆ ಹೀಗೆ ಎಂದು ನಾವು ಮಾಡಿದ್ದೇ ಸರಿ ಎಂಬ ಧಿಮಾಕನ್ನು ಅಧಿಕಾರಶಾಹಿಯಲ್ಲಿರುವವರೆಲ್ಲ ವರ್ತಿಸುತ್ತಿದ್ದಾರೆ.

ಜನ ಮೆಚ್ಚುವ ಕೆಲಸ ಮಾಡಲಿ ಎಂದು ಪ್ರಜಾಪ್ರಭುತ್ವದಲ್ಲಿ ಜನರು ಸರ್ಕಾರವನ್ನು ಆರಿಸುವುದು. ಅದು ಬಿಟ್ಟು ಒಂದು ಜಾತಿಯವರನ್ನೇ ಒಲೈಸುವ ರೀತಿಯಲ್ಲಿ ಅವರುಗಳಿಗೆ ಮಾತ್ರ ಸರ್ಕಾರಿ ಯೋಜನೆಗಳನ್ನು ರೂಪಿಸುವುದು ಯಾವ ನ್ಯಾಯ.

ಪ್ರತಿಯೊಂದು ಪಕ್ಷಗಳ ನಾಯಕರು ಬಾಯಲ್ಲಿ ಜಾತ್ಯತೀತೆಯನ್ನು ಜಪ ಮಾಡುತ್ತಾರೆ. ಆದರೇ ಕ್ರೀಯಯಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುವುದು ಪುನಃ ಈ ಜಾತಿ ಜಗಳಗಳಲ್ಲಿ.

ಇದನ್ನು ಯಾರು ನಿರೀಕ್ಷೆ ಮಾಡಲಾರರು. ಇನ್ನೂ ಈ ದೇಶದಲ್ಲಿ ಜಾತಿಯ ಜಗ್ಗಾಟ ನಿತ್ಯ ನೂತನವಾಗಿದೆ.

ಕೆಲವು ವರುಷಗಳಲ್ಲಿ ನಡೆಯುತ್ತಿರುವ ಘಟನೆಗಳು ಪ್ರತಿಯೊಬ್ಬರನ್ನೂ ಭ್ರಾಂತಿಯಲ್ಲಿ ಕೆಡುವುತ್ತಿವೆ.

ಜನರಂದೊಕೊಂಡಂತೆ ಯಾವುಂದೂ ಘಟನೆಗಳು ಇತ್ಯಾರ್ಥವಾಗಿರುವುದನ್ನು ಇದುವರೆಗೂ ನಾವು ನೋಡಿಲ್ಲ.

ಯಾರೇ ಆದರೂ ಜೀವಗಳ ಜೊತೆಯಲ್ಲಿ ಆಟವಾಡಬಾರದು.

ಯಾರಿಗೂ ಅಧಿಕಾರ ಶಾಶ್ವತವಲ್ಲ.

ಅಧಿಕಾರಕ್ಕಾಗಿ ಜನರಲ್ಲಿಯೇ ಧಂಗೆಯೇಳುವ ರೀತಿಯಲ್ಲಿ ಹೊಡೆದು ಆಳುವ ನಾಯಕರು ನಮಗೆ ಬೇಕಾಗಿಲ್ಲ.

ವಿದ್ಯಾವಂತರು ಎನಿಸಿಕೊಂಡವರೇ ಕೊಲ್ಲು, ಕೊಚ್ಚು ಎಂಬ ಮನೋಭಾವನೆಯನ್ನು ಹೊಂದಿರುವುದು ಸಮಾಜ ಯಾವ ದಿಕ್ಕಿಗೆ ಸಾಗುತ್ತಿದೆನಿಸುತ್ತದೆ?

ಪ್ರತಿಯೊಬ್ಬರೂ ವಿಚಾರವಾದಿಗಳು ಎನಿಸಿಕೊಳ್ಳಬೇಕೆಂಬ ಧಾವಂತದಲ್ಲಿ ಸುಖ ಸುಮ್ಮನೇ ಹಿಂದು ಧಾರ್ಮಿಕ ಪದ್ಧತಿಗಳನ್ನು , ದೇವರು ದಿಂಡಿರುಗಳನ್ನು, ಜನರ ನಂಬಿಕೆ, ಆಚಾರಗಳನ್ನ್ನು ಎಕ್ಕಾ ಮೆಕ್ಕಾ ಬೈಯುವುದೇ ಪ್ರಗತಿಪರ ಸಿದ್ಧಾಂತ ಮಾಡಿಕೊಂಡಿದ್ದಾರೆ.

ತೀರಾ ಸಾಮಾನ್ಯನಿಗೂ ಮನಸ್ಸಲ್ಲಿ ಮೂಡುವ ಪ್ರಶ್ನೇ - ಅಲ್ಲಾ ಈ ಬುದ್ಧಿ ಜೀವಿಗಳು ಇಷ್ಟೇ ಸುಲಭವಾಗಿ ಹಿಂದೂಹೇತರ ಧರ್ಮ, ದೇವರುಗಳ ಬಗ್ಗೆ, ಅವರ ಆಚಾರಗಳನ್ನು ಪ್ರಶ್ನಿಸಿವವರೇ?

ಇದು ಹಿಂದಿನಿಂದಲೂ ನಡೆಯುತ್ತಿರುವ ಜನರ ನಡುವಿನ ಭಿನ್ನಾಬಿಪ್ರಾಯಗಳು. ಈ ರೀತಿಯ ವಿಮರ್ಶೆ ಆರೋಗ್ಯಕರ ಸಮಾಜಕ್ಕೆ ಅತ್ಯಗತ್ಯ.

ವಿಚಾರವಂತರೂ ತಮ್ಮ ಬುದ್ಧಿವಂತಿಕೆಯಿಂದ ಜನರ ಕಷ್ಟಗಳನ್ನು ಪರಿಹರಿಸುವ ಮಾರ್ಗವನ್ನು ತೋರಿಸಬೇಕು. ಅದು ಬಿಟ್ಟು ಹಾಗೆ ಮಾಡುವವರನ್ನೇ ಪ್ರತ್ಯೇಕವಾಗಿ ಬೇರೆಯಾಗಿ ಸಮಾಜದಿಂದ ಹೊರದೂಡಬಾರದು.

ಇವರೇನೂ ಯಾವ ಬೇರೊಂದು ಲೋಕದಿಂದ ಬಂದವರೇನಲ್ಲ.

ಹಾಗೆಯೇ ಸಾಮಾನ್ಯ ಹಳ್ಳಿ ಮುಕ್ಕನಿಗೆ ಇದು ಏನೊಂದು ಸಹ ಗಮನಕ್ಕೂ ಬರಲಾರದು. ಅವನ ನಿತ್ಯ ಕಾಯಕ ಬದುಕನ್ನು ಸುತ್ತಲಿನಲ್ಲಿರುವವರನ್ನೊಡನೆ ತನ್ನ ಪಾಡಿಗೆ ತಾನು ಕಟ್ಟಿಕೊಳ್ಳುತ್ತಾ ಮುಂದಡಿಯಿಡುತ್ತಿರುತ್ತಾನೆ.

ಮನುಷ್ಯ ಮನುಷ್ಯರ ಮಧ್ಯೆ ದ್ವೇಷವನ್ನು ಪಚೋಧಿಸುವುದು. ಕಾನೂನನ್ನು ದಿಕ್ಕರಿಸುವವನ್ನು ಮೆರೆಸುವುದು. ಕೊಲ್ಲುವವನನ್ನು ಕೂರಿಸಿ ಉಪಚರಿಸುವುದು ನಿಲ್ಲಬೇಕು.

ಅವನು ಆ ಧರ್ಮದವನು. ಅವನಿಗೆ ದೊಡ್ಡವರ ಅಸರೆ ಇದೆ.ಅವನಿಗೆ ಅಧಿಕಾರ ಜೊತೆಯಿದೆ ಎಂಬ ಯಾವುದೂ ಬೇರೆ ಕಾರಣಕ್ಕೆ ವಿಭಿನ್ನವಾದ ರೀಯಾಯಿತಿ ದೂರಕಕೊಡದು.

ಒಂದೇ ನೆಲದಲ್ಲಿರುವ ಪ್ರತಿಯೊಬ್ಬರಿಗೂ ಒಂದೇ ನ್ಯಾಯವಿರಬೇಕು.

ಇಂದು ನಮ್ಮ ನಡುವೆ ಜರುಗುತಿರುವ ನಿತ್ಯ ಘಟನೆಗಳು ಒಳ್ಳೆಯವನಿಗೆ ಸೂಕ್ತ ಕಾಲವಲ್ಲ ಎಂದು ನಿರೂಪಿಸುತ್ತಿವೆ.

ಯಾರೋ ಹೆಚ್ಚು ಹಣವನ್ನು ಹೊಂದಿರುವುದನ್ನು ಸರ್ಕಾರ ಹೇಗೆ ಸಂಪಾಧಿಸಿದ್ದಿಯಾಪ್ಪ ಎಂದು ಶೋಧಿಸಿದರೇ.. ಅವನ ಹಿಂಬಾಲಕರು ಬೊಬ್ಬೇ ಹೊಡೆಯುವುದು..

ಯಾರನ್ನೋ ನೀ ತಪ್ಪು ಮಾಡಿದ್ದೀಯಾಪ್ಪಶಿಕ್ಷೇ ಅನುಭವಿಸು ಎಂದು ನ್ಯಾಯಾಂಗ ತೀರ್ಪು ನೀಡಿದರೇ.. ಇಡೀ ಪಟ್ಟಣಕ್ಕೆ ಬೆಂಕಿಯಿಡುವುದು..

ಇದು ಯಾವ ಜಗತ್ತು ಎಂದು ಆಶ್ಚರ್ಯಪಡಿಸಿದರೇ ಅತಿಶಯೋಕ್ತಿಯಲ್ಲ.   ಕೆಟ್ಟವನಾಗಿದ್ದರೇ ಉತ್ತಮ ಪುರಸ್ಕಾರವೆನ್ನುವಂತಾಗಿದೆ. ಒಳ್ಳೆಯದು ಯಾವುದೋ ಕಾಲಕ್ಕೆ ಕೊನೆಯಾಗಿದೆ ಎನ್ನುವುಂತಾಗಿದೆ.

ಅದಕ್ಕೆ ಹಳ್ಳಿಯ ಮುಕ್ಕ ಹೇಳುವುದು ಯಾವ ರಾಜ ಬಂದರೂ ಬೀಸೋದೂ ತಪ್ಪಲ್ಲ. ಮಾಡೋ ಕೆಲಸ ನಿಲ್ಲಲ್ಲ. ಅದು ಸತ್ಯ.

ಪ್ರತಿಯೊಬ್ಬರೂ ಆಶಿಸುವುದು  ಸರ್ಕಾರದಿಂದ ಮೊಲಭೂತ ಸೌಲಭ್ಯಗಳು ಸಿಕ್ಕಿದರೇ. ಪ್ರಕೃತಿ ಮಾತೆ ಕಾಲ ಕಾಲಕ್ಕೆ ಸರಿಯಾಗಿ ಮಳೆ ನಡೆಸಿದರೇ. ಸಾಮಾನ್ಯ ರೈತ ಏನನ್ನೂ ನಿರೀಕ್ಷಿಸುವುದಿಲ್ಲ.

ಇಂದು ಮೀಡಿಯಾ ದುನಿಯಾ! ಸುದ್ಧಿಗಾಗಿ ಕಾಯುವ ಜಮಾನ. ಚಿಕ್ಕದ್ದು ಸಿಕ್ಕಿದರೇ ಹುಲಿ ಹೋಯ್ತು ಎಂದು ಟಾಂ ಟಾಂ ಮಾಡುವರು. ಪ್ರತಿಯೊಂದನ್ನು ತಮ್ಮ ಮೂಗಿನ ನೇರಕ್ಕೆ ತಿರುಚುವರು. ಸತ್ಯಕ್ಕೆ ಗೋಲಿ ಮಾರೋ. ಸಮಸ್ತ ಸಮಾಜಕ್ಕೆ ಸುಳ್ಳನ್ನೇ ಎಂಟು ಬಾರಿ ಹೇಳಿ ಸತ್ಯವೆನಿಸುವವರು.

ಜನರನ್ನು ನಿತ್ಯ ಕೆರಳಿಸುವುದೇ  ದೊಡ್ಡ ಭಾಗ್ಯವೆನ್ನುವಂತಾಗಿದೆ. ಪ್ರತಿಯೊಂದು ಘಟನೆ ,ವ್ಯಾಜ್ಯದಿಂದ ಎಷ್ಟು ಲಾಭ ಸಿಗುತ್ತದೆ ಎಂದು ಕ್ಯಾಲ್ಯುಕೆಟರ ಇಟ್ಟುಕೊಂಡು ಕುಳಿತು ತೂಗುತ್ತಾರೆ.

ಇದು ಜನರ ನಂಬಿಕೆಗೆ ದ್ರೋಹ. ಶಾಂತಿಯ ದೋಟವನ್ನು ಮಾಡಬೇಕೆಂದು ಸ್ವಾಸ್ಥ್ಯ ಸಮಾಜವನ್ನು ಕತ್ತಲ ಕಡೆಗೆ ತೆಗೆದುಕೊಂಡು ಹೋಗುತ್ತಿರುವುದು ವಿಪಾರ್ಯಾಸ!!

ನಮ್ಮ ನಮ್ಮಲ್ಲಿ ನಾವುಗಳು ಯಾವಾಗ  ಬದಲಾಗುವೆವೋ?  ಆಗ ಎಲ್ಲ ಕಡೆ ಬದಲಾವಣೆ ಕಾಣಲು ಸಾಧ್ಯ. ಅದಕ್ಕಾಗಿ ಯಾವುದೇ ನಾಯಕನಿಗಾಗಿ ನಾವು ಕಾಯುವುದು ಬೇಕಿಲ್ಲ.

ಬನ್ನಿ ಬದಲಾವಣೆಯ ಸಿಹಿಗಾಳಿಯನ್ನು ನಮ್ಮಿಂದಲೇ ಪ್ರಾರಂಭಿಸೋಣ...