ಭಾನುವಾರ, ನವೆಂಬರ್ 12, 2017

ಯಾಕೆ ಬರೆಯುತ್ತಿವಿ ಎಂದರೇ

ನಾವು ಯಾಕೆ ಬರೆಯುತ್ತಿವಿ ಎಂದರೇ ನಮ್ಮ ತೃಪ್ತಿಗೆ ಎನ್ನಬಹುದು. ಅದು ಬಿಟ್ಟು ಮತ್ತೊಬ್ಬರಿಗಾಗಿ ಬರೆಯುತ್ತಿದ್ದೇವೆ ಅಂದರೇ ನಮ್ಮನ್ನು ನಾವು ಕಳೆದುಕೊಂಡಂತೆಯೇ?

ಹಾಗೆಯೇ ಅನಿಸುತ್ತಿದೆ. ಬರವಣಿಗೆಯಾಗಲಿ ಇನ್ನು ಏನೇ ಆಗಲಿ ನಮಗೆ ಖುಷಿ ಕೊಟ್ಟಂತೆ ಸಾಗಬೇಕು. ಮತ್ತೊಬ್ಬರ ಖುಷಿಗಾಗಿ ಎನ್ನುವುದು ಮನದ ಮೊಲೆಯಲ್ಲಿ ಕೂತರೇ ಮುಗಿಯಿತು. ನಮ್ಮ ಯೋಚನೆ ಮತ್ತು ವರ್ತನೆಯ ದಾಟಿಯೇ ಬದಲಾಗಿಬಿಡುತ್ತದೆ.

ಆ ಹುಡುಗಿ ಹೇಳುತ್ತಿದ್ದಳು ಇಂದಿನ ಯುವಕರು ಇಷ್ಟಪಡುವಂತದ್ದನ್ನು ನೀ ಏನಾದರೂ ಬರೆಯಬೇಕು. ಬರೀ ನಿನ್ನ ವಯಸ್ಸಿನ  ನಿನ್ನ ಕಾಲದ ಕತೆಯನ್ನು ಬರೆದರೇ ಓದುವವರು ಯಾರು? ಅವನು ಹೇಳಿದ - ಅಲ್ಲಾ ನನಗೆ ತಿಳಿದಿದ್ದೂ ನನಗೆ ಗೊತ್ತಿದ್ದು ಅನುಭವಿಸಿದ್ದನ್ನು ಮಾತ್ರ ನಾ ಬರೆಯಬಲ್ಲೇ. ಕತೆಯಾಗಿ ಹೇಳಬಲ್ಲೇ! ಕೇವಲ ಯಾರಿಗೋ ಇಷ್ಟ ಆಗಲಿ ಎಂದು ಸುಳ್ಳು ಸುಳ್ಳೆ ಕತೆ ಕಟ್ಟಿ ಎಷ್ಟು ಅಂಥ ನಾ ಬರೆಯಬಲ್ಲೆ ? ಎಷ್ಟು ಅಂಥ ನಾನು ನಾನಾಗದೇ ವರ್ತಿಸಬಲ್ಲೇ?

ನಮ್ಮ ನಮ್ಮ ಅನುಭವದ ಮೊಟೆಯೇ ನಮ್ಮ ನಮ್ಮ ವ್ಯಕ್ತಿತ್ವವನ್ನು ತೋರಿಸುತ್ತದೆ. ನಾವು ನಾವಿದ್ದಾಗ ಮಾತ್ರ ನಮಗೆ ಬೆಲೆ. ನಾವು ಮತ್ಯಾರೋ ನಾವಾಗಲಾರೆವು. ಅದು ನಾಟಕ ಎಂದು ಒಂದು ನಿಮಿಷದಲ್ಲಿಯೇ ಗೊತ್ತಾಗುತ್ತದೆ.

ಈ ಹುಡುಗಿಯ ಕೋರಿಕೆಯೆಂದರೇ ಭಯಂಕರ ಸುಂದರವಾದ ಮತ್ತು ಪ್ರತಿಯೊಬ್ಬರೂ ಮನಸೋತು ಕರಗಿ ಹೋಗುವಂತಹ, ತಾನು ಇಷ್ಟ ಪಟ್ಟು ಓದುವ, ತಾನು ಹೀಗಾಗಲೇ ನೋಡಿರುವಂತ ಸಿನಿಮಾ ರೀತಿಯ ಪ್ರೇಮ ಕತೆ ಬರೀಬೇಕೆಂಬುದು.

ಹುಚ್ಚುಕೋಡಿಯ ಕನಸು!!

ಅಂಥ ಕತೆಯನ್ನು ಹತ್ತಿರದಿಂದ ನೋಡಿರಬೇಕು. ಅಥವಾ ಅಂಥ ಪ್ರೇಮವನ್ನು ಅವನೇ ಅನುಭವಿಸಿದ್ದರೇ ಸುಲಭವಾಗಿ ಕತೆಯಾಗಿಸಬಹುದು. ಎಷ್ಟೇ ಕಲ್ಪಿಸಿಕೊಂಡರೂ ಸ್ವ ಅನುಭವವಿಲ್ಲದ ಕತೆ ಕತೆಯಲ್ಲಾ ಬಿಡಿ!

ಯಾವುದೇ ಕತೆಯನ್ನು ಎಷ್ಟಂತಾ ಕಲ್ಪಿಸಿಕೊಂಡು ಬರೆಯಲಾಗುತ್ತೇ? ಯಾರಾದರೂ ಓದಿದರೇ ಮನಕರಗುವುದು ಪಕ್ಕಾ ಸುಳ್ಳು. ಮೂಲ ಕತೆಯ ಎಳೆ ತುಂಬ ಬಲವಾಗಿದ್ದಾರೆ ಸಾಹಿತ್ಯಕ ರಸವನ್ನು ಬಳಸಿ ಮತ್ತಷ್ಟು ಸುಂದರವಾಗಿಸಬಹುದು. ಬರೀ ಪದಗಳ ಆಭರಣದಿಂದ ಉನ್ನತ ಕೃತಿಯಾಗುವುದಿಲ್ಲ ಅಲ್ಲವಾ? ಆದರೇ ಆ ಅನುಭವ ಅಂಥ ಘಟನೆಗೆ ಲೇಖಕ ಯಾವುದೋ ಸಮಯದಲ್ಲಿ ಸಾಕ್ಷಿಯಾಗಿರಬೇಕು.

ಆಗಲೇ ಗೃಹಭಂಗದಂತ ಕಾದಂಬರಿ ಸಿಗುವುದು!

ಕೇಳಿದ್ದನೆಲ್ಲಾ ಕೃತಿಯಾಗಿಸುವುದಾಗಿದ್ದಾರೇ ಕಥೆಗಳಿಗೆ, ಕಾದಂಬರಿಗಳಿಗೆ ಬೆಲೆ ಇರುತ್ತಿರಲಿಲ್ಲ ಬಿಡಿ. ಕೃತಿಯೆಂದರೇ ಅದು ಯಾವುದೋ ಒಂದು ಗೊತ್ತಿರದ ಅನುಭೂತಿಯನ್ನು ಓದುಗನಿಗೆ ಸಹೃದಯನಿಗೆ ಒದಗಿಸುವ ಆಕಾರ.

ಗಮನಿಸಿ ಹೆಚ್ಚು ಮೆಚ್ಚುಗೆಯ ಪ್ರತಿಯೊಂದು ಪುಸ್ತಕವಾಗಲಿ, ಸಿನಿಮಾವಾಗಲಿ, ಕತೆಯಾಗಲಿ ಅದರಲ್ಲಿ ಏನೋ ಒಂದು ವಿಭಿನ್ನವಾದ ಅಂಶವನ್ನು ಹೊಂದಿರುತ್ತವೆ. ಯಾವುದೋ ಒಂದು ಹೊಸ ಅಲೆಯ ಸೆಲೆ ಇರುತ್ತದೆ. ಅದು ಪ್ರತಿಯೊಬ್ಬರಿಗೂ ಅನುಭವ ಜನ್ಯವಾಗಿರುತ್ತದೆ. ಪ್ರತಿಯೊಬ್ಬನ ಹೃದಯವನ್ನು ಸೂರೆ ಮಾಡಿರುತ್ತದೆ. ಅದು ಪ್ರತಿಯೊಬ್ಬನನ್ನು ಅದೇ ಲೋಕಕ್ಕೆ ಎಳೆದುಕೊಂಡಿರುತ್ತದೆ. ಸಹೃದಯನನ್ನು ಕಥಾ ಅಂದರದೊಳಗೆ ಪಾಲು ಮಾಡಿಕೊಂಡು ಬರುವ ಪಾತ್ರಗಳನ್ನು ಕಣ್ಣಿಂದ ಮನದಿಂದ ನೋಡುವಂತೆ ಮಾಡುತ್ತದೆ.

ಈ ರೀತಿಯಲ್ಲಿ ಮನಸ್ಸನ್ನೇ ಗೆಲ್ಲುವ ಕೃತಿಯಲ್ಲಿ ಮತ್ತೇನೇನೋ ಇರುತ್ತದೆ. ಅದು ಕತೃನ ನಿಜವಾದ ತಾಕತ್ತೇ ಸರಿ. ಅಂಥ ಕೃತಿಗಳು ಬೆರಳೆಣಿಕೆಯೇ ಸರಿ. ಅದು ನವ ಮಾಸದ ಪ್ರಸವವೇ ಸರಿ.

ಅದು ಹೇಗೆ ಪುಸ್ತಕ ಲೇಖಕಕರು ಚಿಂತಿಸುತ್ತಾರೆ? ಆ ರೀತಿಯಲ್ಲಿ ಕೃತಿಗಳನ್ನು ಎಲ್ಲರೂ ಮೆಚ್ಚುವ ರೀತಿಯಲ್ಲಿ ಅದು ಹೇಗೆ ಓದಿಸುತ್ತಾರೋ.. ಅದು ಆ ಬರಹಗಾರನಿಗೆ ದೇವರು ಕೊಟ್ಟ ವರವೇ ಸರಿ.

ನಮಗೂ ಎಲ್ಲಾ ಪದಗಳು ಗೊತ್ತು. ನಾವು ಕನ್ನಡ ಮತ್ತು ಬೇರೆ ಬಾಷೇಗಳನ್ನು ಚೆನ್ನಾಗಿಯೇ ಮಾತನ್ನಾಡುತ್ತವೆ. ಆದರೇ ಪದಗಳ ಜಾದುವನ್ನು ಕವಿ, ಕಾದಂಬರಿಕಾರ ದುಡಿಸಿಕೊಳ್ಳುವಷ್ಟು ನಾವುಗಳೆಂದು ಉಪಯೋಗಿಸಲಾರೆವು.

ಲೇಖಕನ ಅನುಭವವೇ ನಮ್ಮ ಅನುಭವವಾಗಿ ಓದುತ್ತೇವೆ. ಪ್ರತಿಯೊಂದು ಸಾಲನ್ನು ನಮ್ಮದೇ ಎನ್ನುವಂತೆ ಪ್ರೀತಿಯಿಂದ ಓದುವಂತೆ ಮಾಡುವ ಕೌಶಲ್ಯ ಲೇಖಕನದ್ದಾಗಿರುತ್ತದೆ.

ಪ್ರತಿ ಪಾತ್ರವನ್ನು ಅದು ಹೇಗೆ ಒಬ್ಬನೇ ಕತೃ ರಚಿಸುತ್ತಾನೋ ದೇವರಿಗೆ ಗೊತ್ತು. ಅದಕ್ಕೆ ಹೇಳುವುದು ಅವರುಗಳೆಲ್ಲ ಸರಸ್ವತಿ ಪುತ್ರರೆಂದು.

ಹೊಸ ಹೊಸತನದ ಕತೆ ಕವನಗಳನ್ನು ಕವಿಗಳು ಅದು ಹೇಗೆ ಮನದಲ್ಲಿಯೇ ಕಟ್ಟಿ ಪದಗಳಲ್ಲಿ ಹೇಳುತ್ತಾರೆ. ಬರದಿದ್ದೆಲ್ಲಾ ಸರ್ವಾಕಲಿಕ ಸತ್ಯವಾಗಿ ಇತಿಹಾಸದಲ್ಲಿ ದಾಖಲಾಗುತ್ತದೆ.  ಪ್ರತಿ ಕೃತಿಯು ಎಂದೆಂದಿಗೂ ಎಲ್ಲಾ ಕಾಲಕ್ಕೂ ದಕ್ಕುತ್ತದೆ. ಯಾವಾಗ ಓದಿದರೂ, ಯಾವಾಗ ನೋಡಿದರು ಏನೊಂದು ಮುಕ್ಕಾಗದೆ ಹಾಗೆಯೇ ಹೊಸ ಹೊಸ ಅನುಭವವನ್ನು ಪ್ರತಿಯೊಬ್ಬರಿಗೂ ಕೊಡುತ್ತದೆ.

ಇಂಥ ಕೃತಿಗಳೇ ಎವರ್ ಗ್ರೀನ್ ಎಂದು ಕರೆಯುವುದು.

ಮನುಷ್ಯ ಬುದ್ಧಿವಂತನಾಗಿದ್ದಿನಿಂದ ತನಗೆ ಅನಿಸಿದ ಘಟನೆ, ನೋಟಗಳನ್ನು ಬೇರೆಯದೇ ರೀತಿಯಲ್ಲಿ ವಿಶ್ಲೇಷಕ ದೃಷ್ಟಿಯಲ್ಲಿ ತನ್ನ ನೋಟದಲ್ಲಿ ಚಿತ್ರಿಸುವುದರಿಂದಲೇ ಓದುಗನಿಗೆ ದಟ್ಟವಾಗಿ ಕಾಡುವುದು. ನಮ್ಮಂಥಹ ಸಾಮಾನ್ಯರುಗಳು ನಿತ್ಯ ನೂರು ಘಟನೆಗಳನ್ನು ನೋಡಿರುತ್ತೇವೆ. ನಾವುಗಳು ನಿತ್ಯ ನೂರು ಲವ್ ಸ್ಟೋರಿಗಳನ್ನು ಕೇಳಿರುತ್ತೇವೆ. ಆದರೇ ಅದೇ ನಾವುಗಳು ಹೇಳಿದರೇ ಯಾರು ಕೇಳುತ್ತಾರೆ. ನಾವು ಹೇಳಿದರೇ ಅದು ಹೇಳಿಕೆಯಾಗುತ್ತದೆ ಅಷ್ಟೇ.

ಆದರೇ ಅದೇ ಕವಿ, ಕಾದಂಬರಿಕಾರ, ಕಥೆಗಾರ, ಸಿನಿಮಾ ನಿರ್ದೇಶಕನ ಮನದ ಮೊಸೆಯಲ್ಲಿ ಕೇವಲ ಕತೆಯಾಗದೇ ಅದೇ ಒಂದು ಕೃತಿಯಾಗಿ ದಿವ್ಯ ದರ್ಶನವನ್ನು ನೀಡುತ್ತದೆ.

ಓದುವ ನೋಡುವ ಮನಸುಗಳಿಗೆ ಮನಸೋರೆಯಾಗುವುದೇ ಸರಿ. ಅದಕ್ಕೆ ಎಂಥೆಂತ ಕೃತಿಗಳು ಇಂದು ಮುಂದು ಅಚ್ಚಳಿಗಯದೇ ಎಂದೆಂದೂ ಉಳಿಯುವುದು.

ಈ ಕೃತಿಗಳು ನಮ್ಮ ಬಾಳಿಗೆ ದಿವ್ಯ ಜ್ಯೋತಿಯಾಗಿ ಹೊಸ ಕಿರಣವಾಗಿ ನಿತ್ಯ ಕಾಡುತ್ತವೆ. ಅವರ ಅನುಭವವನ್ನು ನಮ್ಮದಾಗಿಸಿಕೊಳ್ಳುವ ಮನಸ್ಸು ಮಾತ್ರ ಇದ್ದಾರೆ ಸಾಕು. ನಾವು ಕಂಡ ಘಟನೆಗಳು ಅನುಭವಗಳನ್ನು ಆ ಲೇಖಕನ ಭಾಷೇಯಲ್ಲಿ ಓದಿದರಂತೂ ಕೇಳುವುದೇ ಬೇಡ ಪರಮಾನಂದವಾಗಿಬಿಡುತ್ತದೆ.

ಆದಕ್ಕೆ ನಾವು ನೋಡಿದ ಎಷ್ಟೋ ಸಿನಿಮಾ ಓದಿದ ಎಷ್ಟೊ ಕವನಗಳು, ಕತೆ-ಕಾದಂಬರಿಗಳು ದಿ ಬೇಸ್ಟ್ ಎಂದು ಜೀವಮಾನದಲ್ಲಿ ಯಾವಾಗಲೂ ಮರೆಯದಂತೆ ಮನದಲ್ಲಿ ಉಳಿದುಬಿಡುತ್ತವೆ.

ನೋಡಬೇಕು. ಆ ಗೆಳೆಯ ಆ ಹುಡುಗಿಯ ಕೋರಿಕೆಯನ್ನು ಅದು ಯಾವಾಗ ಈಡೇರಿಸುತ್ತಾನೋ...!