ಶನಿವಾರ, ನವೆಂಬರ್ 3, 2012

ಸುಖದಸುಪ್ಪತ್ತಿಗೆ

ನಮ್ಮ ಮನಸ್ಸಿಗೆ ಮೊಟ್ಟ ಮೊದಲು ಬರುವುದು ಸುಲಭವಾದ ಯೋಚನೆ ಮತ್ತು ಸರಳ ಕೆಲಸ.


ಯಾವುದನ್ನಾದರೂ ನೋಡಿದಾಗ ಇದು ಇಷ್ಟೆ ಅಂದು ಬಿಡುತ್ತೇವೆ. ಅದು ಅತ್ಯಂತ ಸುಲಭವಾದದ್ದು ಬಿಡಿ ಅನ್ನುತ್ತೇವೆ. ಅದನ್ನು ಯಾರಾದರೂ ಬೇರೆಯವರು ಮಾಡಿಬಿಟ್ಟಿದ್ದರೇ ಮುಗಿಯಿತು ಅಪ್ಪಿ ತಪ್ಪಿಯು ಅವರ ಪರಿಶ್ರಮವನ್ನು ಒಂದೇ ಒಂದು ನಮ್ಮ ಮಾತಿನ ವಾಕ್ಯದಲ್ಲಿ ಮಣ್ಣು ಮಾಡಿಬಿಟ್ಟಿರುತ್ತೇವೆ.


ಅದೇ ನಾವುಗಳು ನಮ್ಮ ಕೈಯಾರ ಮಾಡುವ ಪ್ರತಿಯೊಂದನ್ನು ಮೆಚ್ಚಿ ಮೆಚ್ಚಿ ಒಂದು ಸುತ್ತು ಹೊಗಳಿಕೊಂಡು ಬಂದಿರುತ್ತೇವೆ.


ನಮ್ಮ ಮನೆಯ ಅಕ್ಕಪಕ್ಕ ಯಾರಾದರೊಬ್ಬ ಶ್ರೀಮಂತನಿದ್ದರೇ ಮುಗಿಯಿತು. ಅಲ್ಲ ಅವರ ಅಪ್ಪ,ಅಜ್ಜ ಮಾಡಿಟ್ಟಿದ್ದಾರೆ ಮಗಾ ಈಗ ಅನುಭವಿಸುತ್ತಿದ್ದಾನೆ ಅಂದುಬಿಡುತ್ತೇವೆ. ಅದು ನಿಜವಾ ಎಂದು ಒಂದು ಕ್ಷಣವು ಚಿಂತಿಸಿರುವುದಿಲ್ಲ.



ಯಾರದಾದರೂ ಅದ್ದೂರಿ ಮನೆಯನ್ನು ನೋಡಿಬಿಟ್ಟರೆ. ಗಮನಿಸಿ ದೇವರಾಣೆಗೂ ಅವನು ಪರಿಶ್ರಮಪಟ್ಟು ಸಂಪಾಧಿಸಿ ಕಟ್ಟಿಸಿದ್ದಾನೆ ಎಂದೂ ಯಾವತ್ತಿಗೂ ಯಾರೊಂದಿಗೂ ಹೇಳುವುದಿಲ್ಲ. ಹೇಳುವುದೆಲ್ಲಾ ಪ್ರತಿಯೊಂದು ಗೊತ್ತಿರುವವರ ರೀತಿಯಲ್ಲಿ ಎಷ್ಟು ಮುಂಡಾ ಮೋಚಿಬಿಟ್ಟಿದ್ದಾನೆ. ಅದಕ್ಕೆ ಇಂಥ ಬಂಗಲೆಯನ್ನು ಕಟ್ಟಿಸಿದ್ದಾನೆ. ನಾವು ಎಲ್ಲಿ ಕಟ್ಟಿಸಬೇಕು. ಅನ್ಯಾಯದಲ್ಲಿ ಬದುಕುವುದಕ್ಕೂ ಯೋಗ ಬೇಕು ಎಂದು ಮಾತನ್ನಾಡುತ್ತಿರುತ್ತೇವೆ.


ಯಾವುದಾದರೂ ಅತ್ಯಂತ ಉನ್ನತ ಹುದ್ದೆಯನ್ನು ಯಾರಾದರೂ ನಮಗೆ ತಿಳಿದಿರುವರು ಏರಿದರೂ, ಇದೆ ಕೊಂಕು ಅಡ್ಡ ದಾರಿಯ ದರ್ಶನ. ಇವನಿಗೆ ಎಲ್ಲಿ ಆ ಯೋಗ್ಯತೆ? ಯಾರದೋ ಶಿಪಾರಸ್ಸಿನಿಂದ ಈ ಹುದ್ದೆಯಲ್ಲಿ ಇದ್ದಾನೆ. ಇವನ ಮಾವಾ ಕಾಸಾ ಸಿ.ಎಂ. ಸೆಕ್ರೇಟ್ರಿ ಅಂತೆ ಕಂತೆಗಳನ್ನು ಸರಾಗವಾಗಿ ಹರಿಬಿಟ್ಟಿರುತ್ತೇವೆ.


ನಾವುಗಳು ಎಂದಿಗೂ ಅವನ ನಿತ್ಯದ ಕಷ್ಟ ನಷ್ಟಗಳನ್ನು ಒಂದು ಚೂರು ಗಮನಿಸುವುದಿಲ್ಲ ಮತ್ತು ಯೋಚಿಸುವುದಿಲ್ಲ.


ಮೊಟ್ಟ ಮೊದಲಿಗೆ ಬರುವುದು ಅಡ್ಡ ದಾರಿಯಲ್ಲಿಯೇ ಇವನು ಹೋಗಿ ಹೀಗೆಲ್ಲಾ ಇರುವುದು ಎಂಬ ಒಂದೇ ಲೈನ್ ಉತ್ತರವನ್ನು ಗೊತ್ತೂ ಮಾಡಿಕೊಂಡುಬಿಟ್ಟಿರುತ್ತೇವೆ.


ಯಾರಾದರೂ ಪರೀಕ್ಷೆಯಲ್ಲಿ ಪರಿಶ್ರಮದಿಂದ ಉನ್ನತ ಅಂಕಗಳನ್ನು ಪಡೆದಿದ್ದರೆ ಮೊದಲು ಯೋಚಿಸುವುದು ಅದೇ ಕಳ್ಳ ದಾರಿಯನ್ನು, ಏನೋ ಪ್ರಶ್ನೆ ಪತ್ರಿಕೆ ಮೊದಲೇ ಸಿಕ್ಕಿರಬೇಕು. ಅದು ಹೇಗೆ ನೂರಕ್ಕೆ ನೂರು ಅಂಕಗಳು ಬಂದಿದ್ದಾವೆ. ಎಂದು ಹುಬ್ಬೇರಿಸುತ್ತೇವೆ.


ಹೀಗೆ ಪ್ರತಿಯೊಂದು ಸಾಧನೆಯನ್ನು ನಾವುಗಳು ಗುರುತಿಸುವುದು ಕೇವಲ ಅನ್ಯಾಯದ ದಾರಿಯಲ್ಲಿ ಮಾತ್ರ ಎಂಬ ಸತ್ಯವನ್ನು ನಮ್ಮ ಮನಸ್ಸು ನಂಬಿದ್ದಾದರೂ ಎಲ್ಲಿ?


ಯಾಕೆ ನ್ಯಾಯಕ್ಕೆ ಮತ್ತು ಸತ್ಯವಾದ ದಾರಿಯಲ್ಲಿ ಈ ಎಲ್ಲಾ ಜಯಗಳು ಸಿಗಲಾರವೇನೋ?


ಯಾರಾದರೂ ಸತ್ಯ ಮತ್ತು ಸರಳವಾದ ದಾರಿಯಲ್ಲಿ ನಡೆಯುತ್ತಿರುತ್ತಾನೆ ಎಂದರೇ ಅವನು ಶ್ರೀಮಂತನಾಗಿರಲಾರ, ಅವನು ಉನ್ನತ ಹುದ್ದೆಯಲ್ಲಿ ಇರಲಾರ, ಅವನನ್ನು ಜಗತ್ತು ಗಮನಿಸಲಾರದು, ಅವನನ್ನು ಲೋಕಮಾನ್ಯ ಮಾಡಲಾರದು. ಎಂಬ ಸತ್ಯಗಳನ್ನು ನಮ್ಮ ತಲೆಗೆ ತುಂಬಿದವರಾದರೂ ಯಾರು?


ಅಂದರೇ ನೀ ಮುಂದುವರೆಯಬೇಕು ಎಂದರೇ ಯಾರನ್ನಾದರೂ ತುಳಿಯಲೇಬೇಕು ಎಂಬ ನೀತಿಯನ್ನು ಇಂದಿನ ಮುಂದಿನ ಮಕ್ಕಳ ಮೆದುಳಿಗೆ ತುರುಕಿರುವರು ಯಾರು?


ಇದೆ ನಮ್ಮ ನೀತಿಯನ್ನಾಗಿ ಮಾಡಿರುವುವರಾದರೂ ಯಾರು? ಏನಾದರೂ ಸಾಧಿಸಲು ಹಣ,ಅಧಿಕಾರ,ಪರಿಚಯ,ಗಾಡ್ ಪಾದರ್ ಗಳು ಇರಲೇಬೇಕು ಎಂಬಂತಾಗಿರುವುದಾದರೂ ಯಾಕೆ?


ಯಾರಾದರೂ ಐ.ಪಿ.ಎಸ್, ಐ.ಎ.ಎಸ್, ಕೆ.ಎ.ಎಸ್ ಎಕ್ಸಾಮ್ ತೆಗೆದುಕೊಳ್ಳುತ್ತಿದ್ದೇನೆ ಅಂದರೇ ಅವನನ್ನು ಏನೋ ಐಬೂ ಇರುವನನ್ನು ನೋಡುವಂತೆ ನೋಡುವುದಾದರೂ ಯಾಕೆ?


ಅಂದರೇ ಸಾಮಾನ್ಯ ವ್ಯಕ್ತಿ ಅಸಾಮಾನ್ಯನಾಗಲಾರನೇ?


ಈ ವ್ಯವಸ್ಥೆಯನ್ನು ನಾವುಗಳು ನಮಗಾಗಿ ಮಾಡಿಕೊಂಡಿದ್ದೇವೆ. ಆದರೇ ಅದೆ ವ್ಯವಸ್ಥೆಯನ್ನು ಯಾರೂ ನಂಬುವ ಸ್ಥಿತಿಯಲ್ಲಿ ಇಲ್ಲದವರಾಗಿದ್ದೇವೆ.. ಪ್ರತಿಯೊಬ್ಬರೂ ಮುಖವಾಡವನ್ನು ಧರಿಸಿರುವವರಂತೆ ಕಾಣಿಸುತ್ತಿದ್ದಾರೆ. ಯಾರನ್ನೂ ನೂರಕ್ಕೆ ನೂರು ನಂಬದಂತಾಗಿದೆ.


ಏನಾದರೂ ಸತ್ಯ, ನಿಷ್ಠೆ,ಧರ್ಮ, ಕರ್ಮ ಎಂದು ಮಾತನಾಡಿದರೇ ಸುತ್ತಲಿನವರು ವಿಚಿತ್ರವಾಗಿ ಕಾಣುತ್ತಾರೆ. ಅಂಥವರನ್ನು ಸಾಮಾನ್ಯ ಜನಗಳಿಂದ ಬೇರೆಯವರನ್ನಾಗಿಯೇ ಕಾಣುತ್ತಾರೆ. ಅಂದರೇ ನ್ಯಾಯ ನೀತಿಗಳಿಗೆ ಇಂದಿನ ಕಾಲದಲ್ಲಿ ಬೆಲೆಯೇ ಇಲ್ಲವೇ?


ಸತ್ಯ ಹೇಳಿಕೊಂಡ ಹರಿಶ್ಚಂದ್ರ ಏನಾದ ಎಂಬ ಮಾತನ್ನೇ ನೀತಿಗೆ ನಿಯತ್ತಿಗೆ ಉದಾಹರಣೆ ಕೊಡುತ್ತಿರುವ ನೋಟ ಯಾವುದರ ದಿಕ್ಸೂಚಿ?


ಕೇವಲ ಹಣವೇ ಮುಖ್ಯವಾಗುತ್ತಿರುವ ಪ್ರಸ್ತುತ ಸಮಾಜದಲ್ಲಿ ನೀತಿ, ನಿಯತ್ತಿಗೆ ಕಿಂಚಿತ್ತು ಬೆಲೆಯೇ ಕೊಡದವರಾಗಿದ್ದಾರೆ.


ಕೇವಲ ಎಷ್ಟು ವೇಗವಾಗಿ ಸಂಪತ್ತನ್ನು ಸಂಪಾಧಿಸುವುದು. ಎಷ್ಟು ವೇಗವಾಗಿ ಇರುವ ಜೀವನವನ್ನು ಸಾಕಷ್ಟು ರಿಚ್ ಆಗಿ ಅನುಭವಿಸುವುದೇ ಜೀವನದ ಧ್ಯೇಯವಾಗಿಸಿಕೊಳ್ಳುತ್ತಿರುವುದು ಯಾಕೇ?


ನಾವು ಇಂದು ಲೋಕಪ್ರಸಿದ್ಧ ವ್ಯಕ್ತಿಗಳು ಎನ್ನುವವರ ನಿತ್ಯ ಲೋಕ ಪ್ರಸಿದ್ಧ ನಡತೆಗಳೇ ಈ ರೀತಿಯಲ್ಲಿ ಯೋಚಿಸುವಂತೆ ಮಾಡಿರಬಹುದು(!)?. ಈ ಉದಾಹರಣೆಗಳೇ ಸತ್ಯಕ್ಕೆ ಬೆಲೆ ಇಲ್ಲ ಎನ್ನುವಂತಾಗಿರಬಹುದು.


ವ್ಯಾಪಾರಂ ದ್ರೋಹ ಚಿಂತನಂ ಅನ್ನುವಂತೆ ಮೋಸ ಮಾಡುವುದೇ ನಮ್ಮ ಏಳ್ಗೆಗೆ ದಾರಿ ಅನ್ನುವಂತಾಗಿರುವುದು. ಎಲ್ಲದನ್ನು ವ್ಯಾಪಾರ-ಬ್ಯುಸಿನೆಸ್ ದೃಷ್ಟಿಯಲ್ಲಿ ನೋಡಿದಾಗ ಈ ರೀತಿಯ ಕ್ಲೀಷೆಯನ್ನು ನಮ್ಮ ಜೀವನದಲ್ಲಿ ಕಾಣಬಹುದಾಗಿದೆ ಅನಿಸುತ್ತದೆ.


ಪ್ರತಿಯೊಂದನ್ನು ಹಣ ಮಾಡುವ ಕಣ್ಣಿನಲ್ಲಿ ನೋಡಿದಾಗ ಸಂಬಂಧಗಳ ಪರದೆಗಳು ಅತಿ ತೆಳುವಾಗುತ್ತಾ ತೆಳುವಾಗುತ್ತಾ ಪ್ರತಿಯೊಬ್ಬರೂ ಅವರವರ ವೈಕ್ತಿಕ ಪ್ರತಿಷ್ಠೆಗಾಗಿ ಹೋರಾಡುವಂತಾಗುತ್ತದೆ. ಆಗ ಪಕ್ಕದಲ್ಲಿ ಇರುವ ಹತ್ತಿರದವರನ್ನು ಗಮನಿಸದವರಾಗುತ್ತೆವೆ.


ಅತ್ಯಂತ ಸುಖದ ಸುಪ್ಪತಿಗೆಯ ಶ್ರೀಮಂತ ಆರಮನೆಯಲ್ಲಿ ಎಲ್ಲವೂ ಇದೆ. ಆದರೇ ಅದು ಕೇವಲ ನಾಲ್ಕು ಗೋಡೆಗಳ ಮಧ್ಯದಲ್ಲಿ ಮಾತ್ರ. ಅಲ್ಲಿರುವುದೆಲ್ಲಾ ಶ್ರೀಮಂತಿಕೆಯ ಮನುಷ್ಯ ಜನ್ಯ ವಸ್ತುಗಳು. ಆ ಸಮಯಕ್ಕೆ ಅದೇ ಅವನಿಗೆಲ್ಲಾ. ಆದರೇ ಆ ರೀತಿಯ ನಾಲ್ಕುಗೋಡೆಯ ವೈಭೋಗದ ಜಗತ್ತು ನಾಲ್ಕು ಗೋಡೆಯ ಸೆರೆಮನೆಗೂ ಸಮ ಎಂದು ಮುಂದೊಮ್ಮೆ ಅಲ್ಲಿರುವ ವ್ಯಕ್ತಿಗಳಿಗೆ ಅನಿಸಬಹುದಲ್ಲ?

ಮನುಷ್ಯ ಯಾವತ್ತಿಗೂ ಸುಖದ ಬೆನ್ನು ಹತ್ತುತ್ತಿರುತ್ತಾನೆ.

ಅವನ ಒಂದೇ ಒಂದು ಕನಸು ನಾನು ಮತ್ತು ನನ್ನ ಪರಿವಾರ  ಚೆನ್ನಾಗಿರಬೇಕು. ಅದಷ್ಟು ಬೇಗೆ ಹೆಚ್ಚು ಸಂಪಾಧಿಸಬೇಕು. ಮುಂದೆ ಭವಿಷ್ಯತ್ ನಲ್ಲಿ ಯಾವೊಂದು ಕಷ್ಟವಿಲ್ಲದ ಜೀವನವನ್ನು ನಾನು ನಡೆಸಬೇಕು ಮತ್ತು  ನನ್ನ ಮುಂದಿನ ಪೀಳಿಗೆಯು ನಡೆಸಬೇಕು.

ಈ ರೀತಿಯ ಒಂದು ಕನಸೇ ಇರಬೇಕು ಅವನ ಎಲ್ಲಾ ಜೈವಿಕ ಜೀವನ ದಿನಚರಿಗೆ. ಅದಕ್ಕಾಗಿ ಅವನು ಮಾಡುವ ಕೆಲಸ, ದಾರಿ, ಯಾವ್ಯಾವ ರೀತಿಯಲ್ಲಿ ಇರುತ್ತವೋ ಎಲ್ಲವನ್ನು ಅವನ ಬುದ್ಧಿಮತ್ತೆಯೊಂದಿಗೆ ಅನ್ವೇಷಿಸಿಬಿಡುತ್ತಾನೆ.



ಅದರಲ್ಲಿ ಅವನು ಜಯಶಾಲಿಯಾದರೂ ಆಗಬಹುದು. ಆಗದೇಯು ಇರಬಹುದು.

ಆ ಒಂದು ತುಡಿತವೇ ಇಂದಿನ ಈ ನಾಗರೀಕ ಸಮಾಜದ ಜೀವನ ಬಡಿದಾಟದ ಬಹು ಮುಖ್ಯ ಹೋರಾಟದ ಒಂದೇ ಒಂದು ಅಂಶವಾಗಿದೆ.


ಅದಷ್ಟು ಸುಖವಾಗಿ ಬದುಕಬೇಕು ಎಂಬುದೇ ಜಗತ್ತಿನ ಪ್ರತಿಯೊಬ್ಬ ಕಟ್ಟ ಕಡೆಯ ವ್ಯಕ್ತಿಯ ಮುಖ್ಯ ಹೋರಾಟ! ಎಂದು ನಿಮಗ ಅನಿಸುವುದಿಲ್ಲವೇ?

ಭಾನುವಾರ, ಅಕ್ಟೋಬರ್ 21, 2012

ಎಲ್ಲಿಂದ ಬಂದೆ?

ಕನಸು ಮನಸ್ಸಿನಲ್ಲೂ ನೆನಸಿರಲಿಲ್ಲ. ಹೊಸ ಜಾಗ ಹೊಸ ನೋಟದಲ್ಲಿ ಬರೀ ಅಚ್ಚರಿಗಳ ಸಂತೆಯಲ್ಲಿ ಅಂದು ನಿಂತಿದ್ದೆ. ಪ್ರತಿಯೊಂದು ನೋಟವು ನವತರುಣಿಯನ್ನು ಕಂಡು ನನ್ನನ್ನು ನಾನು ಮರೆತಂತ ಅನುಭವ. ಕೊಂಚ ಭಯ ಕೊಂಚ ಸಂಕೋಚಬರಿತ ವಾತವರಣವೇ ಆಗಿತ್ತು.


ಇದಕ್ಕೆ ಮೊದಲು ಇಲ್ಲಿಯ ಜಾಗವನ್ನು ಎಂದು ನೋಡಿರಲಿಲ್ಲ. ಯಾರ ಜೊತೆಯಲ್ಲೂ ಮಾತನಾಡುವುದು ಇರಲಿ. ಪ್ರತಿಯೊಂದು ಮೊಕ ಸಂಭಾಷಣೆ. ಯಾಕೆಂದರೇ ನಾನು ಮಾತನಾಡುವ ಭಾಷೆಗೆ ನನ್ನಾಣೆ ಯಾರೊಬ್ಬರೂ ಪ್ರತಿಕ್ರಿಯಿಸುವುದಿಲ್ಲ.


ಇಂಥ ನಗರದಲ್ಲಿ ಅದು ಎಲ್ಲಿಂದ ನೀ ಅವತರಿಸಿ ನನ್ನ ಬಳಿ ಬಂದೆ?


ನನ್ನ ಕಸಿವಿಸಿಯಲ್ಲಿ ಆ ಕಪ್ಪು ರೋಡಿನಲ್ಲಿನ ಸಿ.ಟಿ ಬಸ್ ನಲ್ಲಿ ನಾನು ಸುಲ್ತಾನ್ ಪೇಟೆ ಎಂದು ಕಂಡಕ್ಟರನ್ನು ಕೇಳುತ್ತಾ ಕೇಳುತ್ತಿದ್ದರೇ.. ಆ ಕಂಡಕ್ಟರ್ ನನ್ನನ್ನು ನನಗೆ ಅರ್ಥವಾಗದ ಭಾಷೆಯಲ್ಲಿ ಎಲ್ಲಿಗೆ ಎಲ್ಲಿಗೆ ಟಿಕೇಟ್ ಬೇಕು ಎಂದು ಎರಡೇರಡು ಬಾರಿ ಕೇಳುತ್ತಿರುವಾಗ.. ನನಗೆ ಸಹಾಯ ಮಾಡಲು ಬಂದಂತೆ ತುಮ್ ಕಿದರ್ ಜಾನಾ ಚಾ ಥೀ?


ಎಂದಾಗ ಅಯ್ಯೋ ನಾನು ನನ್ನನ್ನು ಮರೆತುಬಿಟ್ಟೆ!


ನಾನು ಏನೊಂದು ಉತ್ತರವನ್ನು ಕೊಡುವ ಮೋಡಿನಲ್ಲಿಯೇ ಆಗ ಇರಲಿಲ್ಲ.


ಯಾಕೆಂದರೇ ಈ ಕಂಡಕ್ಟರ್ ಏನೇನು ಹೇಳುತ್ತಿದ್ದಾನೆ.. ಈ ಸುಂದರ ಪುತ್ಥಳಿಯ ಬಾಯಿಯಲ್ಲಿ ಹಿಂದಿ ಭಾಷೆ. ನನಗೆ ನಾನೇ ಕನಸೋ ನನಸೋ ಅನಿಸಿಬಿಟ್ಟಿತು.


ಪಕ್ಕದಲ್ಲಿ ನಿಂತಿರುವವನು ಕಂಡಕ್ಟರ್ ಬಾಷೆಯಲ್ಲಿ ನನ್ನನ್ನು ಮೈ ಮುಟ್ಟಿ ಎಚ್ಚರಿಸಿದಾಗ ತಡವರಿಸಿ ಸುಲ್ತಾನ್ ಪೇ..ಟೆ ಎಂದಾಗ.. "ನೀನು ಅಂಥ ಏರಿಯಾ ನೇ ಇಲ್ಲಿ ಇಲ್ಲ. ಸೈದಾಪೇಟೆ ಗೆ ತಾನೆ ಹೋಗಬೇಕಾಗಿರುವುದು?" ಎಂದಾಗ ಹುಂ ಎನ್ನದೇ ಬೇರೆ ದಾರಿಯೇ ಇರಲಿಲ್ಲ.


ನನ್ನ ಬಾಯಿಯಲ್ಲಿ ಇಲ್ಲದ ಊರು ಬಂದಿತ್ತು. ನಾನು ಅದು ಹೇಗೋ ಅಂದು ದಾರಿಯಲ್ಲಿ ಹೋಗುತ್ತಿರುವ ಬಸ್ ಬೋರ್ಡನಲ್ಲಿ ಹಾಗೆ ಓದಿಕೊಂಡಿದ್ದು ಹಾಗೆಯೇ ತಪ್ಪಾಗಿ ಉತ್ತರಿಸಿದ್ದೆ.


ಕಂಡಕ್ಟರ್ ನಗುತ್ತಾ ಒಂಬತ್ತು ರೂಪಾಯಿಯ ಚೀಟಿ ಹರಿದು ಒಂದು ರೂಪಾಯಿಯ ಜೊತೆ ಹಿಂದುರುಗಿಸಿದ. ಆ ಎರಡನ್ನು ಜೇಬಲ್ಲಿ ಸೇರಿಸುವಾಗ ನಾನು ನೋಡುತ್ತಿದ್ದದ್ದು ನಿನ್ನನ್ನೇ..


ಅಲ್ಲಾ ಇಲ್ಲಿ ಇಂಥ ಸಾದ ಸೀದಾ ಸರಳ ಸುಂದರಿಯರು ಇರುವರಲ್ಲಾ ಅನಿಸಿತು.


ನಾನು ಅಂತೂ ಗೊತ್ತಿರುವ ಒಂದು ಭಾಷೆಯಲ್ಲಿ ಮಾತನಾಡುವವರು ಸಿಕ್ಕಿದರಲ್ಲ ಎಂದು.. ಹುಡುಗಿ ಚೆನ್ನಾಗಿದ್ದಾಳೆ.. ನೋಡಿದರೇ ನನ್ನ ರೀತಿಯಲ್ಲಿಯೇ ಬೇರೆ ಊರಿಂದ ಬಂದು ಇಲ್ಲಿರಬೇಕು.. ಎಂದುಕೊಂಡು ಹಾಗೆಯೇ ಅವಳ ಚಿಕ್ಕ ಪರಿಚಯ ಮಾಡಿಕೊಂಡಿದ್ದೂ..


ಈ ಹುಡುಗಿಯು ಸಹ ನಾನು ಕೇಳಿದ ಜಾಗಕ್ಕೆ ಹೋಗುತ್ತಿದ್ದಾಳೆ. ನಾನು ನನ್ನ ಭಾಷೆಯ ಕಷ್ಟವನ್ನು ಇಲ್ಲಿ ಜೀವಿಸಬೇಕಾದ ಅನಿವಾರ್ಯತೆಯನ್ನು ಹೇಳಿಕೊಂಡು ಹಗುರಾದೇ.


ನಿಂತುಕೊಂಡೇ ಇದ್ದಾಗ ನಾನು ಇಳಿಯುವ ಜಾಗ ಬಂದಿತು. ಅವಳು ಸಹ ಅಲ್ಲಿಯೆ ಇಳಿದಳು. ನಾನು ಇಳಿದೆ. ನಾನು ಅಲ್ಲಿಂದ ಮುಂದೆ ಕಿಲಪಾಕ್ ಗಾರ್ಡನ್ ಕಡೆ ಹೋಗುವ ೪೭ ಎ ಮತ್ತೊಂದು ಬಸ್ ಗಾಗಿ ಕಾಯುವೆ ಎಂದಾಗ.


ಅವಳು ನಾನು ಬೆಂಗಳೂರಿನಲ್ಲಿ ಇರುವುದು. ಇಲ್ಲಿ ನನಗೆ ಎಂ. ಎನ್. ಸಿ ಯಲ್ಲಿ ಕೆಲಸ ಸಿಕ್ಕಿರುವುದರಿಂದ ಇಲ್ಲಿ ವಾಸ ಮಾಡುತ್ತಿದ್ದೇನೆ. ಎಂದು ಹುಡುಗಿ ಹೇಳಿಕೊಂಡಿತು. ಪರವಾಗಿಲ್ಲ. ಎಷ್ಟೊಂದು ಭಾಷೆಯನ್ನು ಕಲಿತಿರುವಿರಲ್ಲಾ? ಎಂದಾಗ.. ಅವಳು ನಕ್ಕ ನೋಟ ನಿಜವಾಗಿಯೂ ಇವಳು ತುಂಬ ಮುಗ್ಧವಾದ ಹುಡುಗಿ. ರೂಪಕ್ಕೆ ತಕ್ಕಂತ ಮಾತು. ಮಾತಿಗೆ ತಕ್ಕಂತ ಗಂಭೀರತೆ. ಗಂಭೀರತೆಗೆ ತಕ್ಕಂತಹ ಧೀರಿಸು. ನೋಡಿದ ತಕ್ಷಣ ಗೌರವವನ್ನು ಕೊಡುವಂತ ವ್ಯಕ್ತಿತ್ವ. ಈ ರೀತಿಯ ಹುಡುಗಿಯರು ಅಪರೂಪಕ್ಕೆ ಸಿಗುತ್ತಿರುತ್ತಾರೆ. ಕೈ ಎತ್ತಿ ಮುಗಿಯಬೇಕು.


ನನಗೆ ಮೊದಲು ಮೋಡಿ ಮಾಡಿದ್ದು. ಆ ಹಸಿರು ಚೋಡಿದಾರದಲ್ಲಿದ್ದದ್ದು. ಹಾಗೆಯೇ ಹಣೆಗೆ ಇದೇಯೋ ಇಲ್ಲವೊ ಎಂಬಂತೆ ಚಿಕ್ಕ ಬಿಂದಿ. ತಲೆಗೆ ಚಿಕ್ಕ ಎರಳು ಬಿಳಿ ಹೂ. ಕೈಯಲ್ಲಿ ಮೂರೇ ಮೂರು ಹಸಿರು ಬಳೆಗಳು. ಬೆರಳಲ್ಲಿ ಒಂದು ಚಿಕ್ಕ ವಜ್ರದ ಉಂಗುರ. ಅಲ್ಲಾ? ಈ ಕಾಲದಲ್ಲೂ ಈ ಮೆಟ್ರೋ ನಗರದಲ್ಲಿ ಎಮ್. ಎನ್. ಸಿ ಯಲ್ಲಿ ಕೆಲಸ ಮಾಡುವ ಹುಡುಗಿಯಾಗಿ ಭಾರತೀಯ ಸಂಸ್ಕೃತಿಯನ್ನು ಪ್ರತಿಪಾಧಿಸುವ ನಾರಿಮಣಿಯಾಗಿ ನಿದರ್ಶನವಾಗಿದ್ದಾಳಲ್ಲ ಅನಿಸಿತು.


ಹುಡುಗಿ ಆ ಸುಮಧುರ ಕಂಠದಿಂದ "ಬೆಂಗಳೂರಿನಲ್ಲಿ ನಾನು ಹುಟ್ಟಿದ್ದು, ಬೆಳದದ್ದು. ನನ್ನ ಓಣಿಯಲ್ಲಿನ ಮನೆಯವರಲ್ಲಿ ತಮಿಳು ಬ್ರಾಹ್ಮಣರ ಮನೆಯು ಇತ್ತು. ಅಲ್ಲಿಯೇ ನನಗೆ ತಮಿಳಿನ ಓ ನಾಮ ಸಿಕ್ಕಿದ್ದು. ಹಿಂದಿ,ಇಂಗ್ಲಿಷ್ ಶಾಲೆಯಲ್ಲಿ ದೊರೆಯಿತು. ಆದ್ದರಿಂದ ಸುಮಾರಾಗಿ ಮ್ಯಾನೇಜ್ ಮಾಡುವಷ್ಟು, ತೆಲಗು,ತಮಿಳು,ಹಿಂದಿ ಭಾಷೆಗಳು ಕನ್ನಡ ಮತ್ತು ಇಂಗ್ಲೀಷ್ ಜೊತೆಯಲ್ಲಿ ಸಿಕ್ಕಿದೆ.


ನನಗೆ ತುಂಬ ಖುಷಿಯಾಯಿತು. ಆದರೂ ನೀವು ನಿಮ್ಮ ಮನೆಯವರನ್ನೇಲ್ಲಾ ಬಿಟ್ಟು ಇಲ್ಲಿದ್ದೀರಲ್ಲಾ? ಬೆಂಗಳೂರಿನಲ್ಲಿ ಟ್ರೈ ಮಾಡಿದ್ದರೇ ಅಲ್ಲಿಯೇ ಕೆಲಸ ಮಾಡಬಹುದಾಗಿತ್ತು ಅಂದೇ? ಹೌದು. ಆದರೂ ನನಗೆ ಒಂದು ಕನಸಿದೆ ಭಾರತದ ಎಲ್ಲಾ ಮುಖ್ಯ ರಾಜ್ಯಗಳಲ್ಲೂ ಕೆಲಸ ಮಾಡಬೇಕು. ಒಂದೆರಡು ವರುಷ ಕೆಲಸ ಮಾಡುತ್ತಾ ಅಲ್ಲಿನ ಜನ, ಆಚಾರ, ವಿಚಾರ, ಸಂಸ್ಕೃತಿಯನ್ನು ಅರಿಯಬೇಕು ಎಂಬುದು. ಎಂದು ಉತ್ತರಿಸಿದಾಗ ನನಗೆ ನಾನೇ ಅಚ್ಚರಿಗೊಂಡೆ.



ಈಗ ಎಲ್ಲಿಗೆ ಹೋಗುತ್ತಿದ್ದೀರಾ ಎಂದಾಗ ಹುಡುಗಿ ನಾನು ಇಲ್ಲಿಯೇ ಅಣ್ಣ ಸ್ಕೋಯರ್ ಬಳಿ ಇಂದು ಒಂದು ತಮಿಳು ಸಂಸ್ಕೃತಿ ಸಾಹಿತ್ಯ ಪ್ರತಿಕ್ಷ ಸಮ್ಮೇಳನಕ್ಕೆ ಹೋಗುತ್ತಿದ್ದೇನೆ. ಎಂದಾಗ ಅಲ್ಲಾ ಎಲ್ಲಿಯಾ ಐ.ಟಿ? ಎಲ್ಲಿಯ ಸಾಹಿತ್ಯ? ಇಂದು ಇನ್ನೂ ಈ ರೀತಿಯ ಯೋಚಿಸುವ ಹುಡುಗಿಯರು ಇದ್ದಾರಲ್ಲಾ ಅನಿಸಿತು.


ವಿಕೇಂಡ್ ಸಿಕ್ಕಿದರೇ ಸಾಕು ಯಾವುದಾದರೂ ಶಾಪಿಂಗ್ ಮಾಲ್ ಗೆ ದಾಳಿ ಇಟ್ಟು. ಪೋರಂ ಮಾಲ್ ನಲ್ಲಿ ಸುತ್ತಾಡಿ. ಪಿ.ವಿ.ಆರ್ ನಲ್ಲಿ ಇಂಗ್ಲೀಷ್ ಮೋವಿ ನೋಡುವ ತರುಣ ತರುಣಿಯರ ಯುಗದಲ್ಲೂ ನಮ್ಮ ಭಾರತೀಯ ಸಂಸ್ಕೃತಿ ಮತ್ತು ಸಾಹಿತ್ಯವನ್ನು ಇಷ್ಟಪಟ್ಟು ಸವಿಯುವರು ಇದ್ದಾರಲ್ಲಾ. ಬೇಷ್ ಅನಿಸಿತು.


ನಾನು ನನ್ನ ಬಗ್ಗೆ ಅದು ಇದು ಹೇಳಿಕೊಂಡೆ. ಹುಡುಗಿಯು ಸಹ ತುಂಬ ಕುತೂಹಲದಿಂದ ನನ್ನನ್ನೇ ದಿಟ್ಟಿಸುತ್ತಾ ನಾನು ಹೇಳುವುದನ್ನು ಕಿವಿಯಾಗಿ ಕೇಳಿತು. ನನಗೋ ಇವಳ ಜೊತೆಯಲ್ಲಿಯೇ ಇದ್ದರೇ ಸಾಕು ಅನಿಸುತ್ತಿತ್ತು. ಕಿಲಾಪಾಕ್ ಗೇ ಗೋಲಿ ಮಾರೋ ಅನ್ನಿಸಿತು. ಆದರೇ ಮೊದಲ ಬೇಟಿಯಲ್ಲಿಯೇ ಆ ರೀತಿಯ ಸಲುಗೆಯನ್ನು ತೆಗೆದುಕೊಳ್ಳುವುದು ಬೇಡ ಅನಿಸಿತು.


ಅವಳು ಕೇಳಿದಳು "ನೋಡಿ ನಿಮಗೆ ಇಂಟರಸ್ಟ್ ಇದ್ದರೇ ಈ ಸಮ್ಮೇಳನ್ನಕ್ಕೆ ಜೊತೆಯಲ್ಲಿಯೇ ಹೋಗಿಬರೋಣ" ಅಂದಳು. ನಾನೇ ಇಲ್ಲಾರೀ ನನ್ನ ಸ್ನೇಹಿತರ ಮನೆಗೆ ಬರುತ್ತೇನೆ ಎಂದು ಹೇಳಿದ್ದೇನೆ. ಆದ್ದರಿಂದ ಅಲ್ಲಿಗೆ ಹೋಗಲೆ ಬೇಕು. ಅವರುಗಳು ಕಾಯುತ್ತಿರುತ್ತಾರೆ ಅಂದೇ. ಓ ಹಾಗದರೇ ಯು ಕ್ಯಾನ್ ಕ್ಯಾರಿ ಆನ್. ಮುಂದಿನ ವಿಕೇಂಡ್ ನೀವು ಪ್ರೀ ಇದ್ದರೇ ಮತ್ತೇ ಸಿಗೋಣ. ನಾನು ಇರುವುದು ಅಲ್ಲಿಯೇ ರಾಮಪುರಂ ಬಸ್ ಸ್ಟಾಪ್ ಹಿಂದಿನ ರೋಡ್ ನಲ್ಲಿರುವ ಲೇಡಿಸ್ ಪಿ.ಜಿ ಯಲ್ಲಿ. ಅಂದಳು.


ಅಲ್ಲಾ ಇವಳನ್ನು ಪುನಃ ಹೇಗೆ ಹಿಡಿಯಲಿ. ಪೋನ್ ನಂಬರನ್ನು ನಾನೇ ಬಾಯಿ ಬಿಟ್ಟು ಕೇಳುವುದು ಅಸಭ್ಯತೆ ಅನಿಸಿತು. ಹೋಗಲಿ ಅವಳಾದರು ಕೊಡಬಾರದ ಅಂತಾ ಯೋಚಿಸುವಾಗ.. "ನಿಮ್ಮ ಪೋನ್ ನಂಬರ್ ಹೇಳಿ" ಎಂದಾಗ. ನಾನು ತಡವರಿಸುತ್ತಾ ನನ್ನ ಇಲ್ಲಿನ ನಂಬರನ್ನು ಮೋಬೈಲ್ ತೆಗೆದುಕೊಂಡು ನೋಡಿಕೊಂಡು ಕೊಟ್ಟೆನು. ಅವಳು ಮೀಸ್ ಕಾಲ್ ಕೊಟ್ಟಳು.

ನಾನು ನನ್ನ ಬಸ್ ಗಾಗಿ ಕಾಯುತ್ತಿದ್ದಂತೆಯೇ ಅವಳು ಹೋಗುವ ಬಸ್ ಬಂದಿತು. ಅವಳು ಅದರಲ್ಲಿ ಹತ್ತಿಕೊಂಡು ಬಾಯ್ ಎಂದು ಟಾಟ ಮಾಡುತ್ತಾ.. ಹಿಂದಿನ ಡೋರ್ ನಲ್ಲಿ ಹತ್ತಿ ಹೋರಟು ಹೋದಳು.

ಬೀರು ಬಿಸಿಲಿನ ಬೇಗೆ ಈಗ ಪ್ರಾರಂಭವಾಯಿತು. ಅವಳು ಇದ್ದಷ್ಟು ಹೊತ್ತೂ ಏನೊಂದು ಅನಿಸಿದ್ದಿಲ್ಲ. ಅವಳನ್ನು ನೋಡುತ್ತಾ. ಅವಳು ಮಾತನ್ನಾಡುತ್ತಿದ್ದ ಮಾತನ್ನು ಕೇಳುತ್ತಾ. ನನ್ನನ್ನೇ ನಾನು ಮರೆತುಬಿಟ್ಟಿದ್ದೇ. ಮರಳುಗಾಡಿನಲ್ಲಿ ಓಯಾಸಿಸ್ ಕಂಡುಷ್ಟು ಖುಷಿಯಲ್ಲಿದ್ದೇ.


ಪುನಃ ಈ ಹುಡುಗಿಯನ್ನು ಕಾಣಬೇಕೆಂದರೇ ಒಂದು ವಾರ ಕಾಯಬೇಕಲ್ಲ? ಅನಿಸಿತು.


ಹುಡುಗಿಯನ್ನು ನೋಡಿದರೇ ಎಂಗೇಜ್ ಆಗಿರುವಂತೆ ಇಲ್ಲ ಅನಿಸುತ್ತದೆ. ಇದ್ದಿದ್ದರೇ ಅವಳ ಬಾಯ್ ಪ್ರೇಂಡೂ ಸಹ ಜತೆಯಲ್ಲಿಯೇ ಬರಬೇಕಾಗಿತ್ತು.


ಅವಳ ಸರಳ ನಡೆನುಡಿಯನ್ನು ಗಮನಿಸದರೇ ಒಳ್ಳೆಯವಳು ನಂಬುವಂತವಳು ಅನಿಸುತ್ತಿದೆ. ಹೀಗೆ ಹೀಗೆ ಏನೇನೋ ಹಗಲು ಕನಸನ್ನು ಕಾಣುತ್ತಾ ನಿಂತಿದ್ದಾಗ. ೪೭ ಎ ಬಸ್ ದೂಳೆಬ್ಬಿಸುತ್ತಾ ನಾನು ನಿಂತಲ್ಲಿಗೆ ಬಂದಿತು.

ಅವಳ ಗುಂಗಿನಲ್ಲಿಯೇ ನಾನು ಬಸ್ ಹತ್ತಿ ಕಂಡಕ್ಟರ್ ಗೆ ೧೦ರ ನೋಟನ್ನು ಕೊಟ್ಟು ನಾನು ಹೋಗಬೇಕಾಗಿರುವ ಸ್ಥಳಕ್ಕೆ ಚೀಟಿಯನ್ನು ತೆಗೆದುಕೊಂಡು ಹಿಂದಿನ ಮೊಲೆಯ ಸೀಟಿನಲ್ಲಿ ಕುಳಿತುಕೊಂಡೆ. ಮನವೆಲ್ಲಾ ಅವಳ ಬಗ್ಗೆಯೇ ಯೋಚಿಸುತ್ತಿತ್ತು....?
 

ಶನಿವಾರ, ಅಕ್ಟೋಬರ್ 13, 2012

ಅತಿಥಿ ದೇವೋಭವ

ಅತಿಥಿ ದೇವೋಭವ ಎಂಬುದು ನಮ್ಮ ಸಂಸ್ಕೃತಿ. ನಾವುಗಳು ಯಾರಾದರೂ ಹೊಸಬರು/ಪರಿಚಿತರು ನಮ್ಮ ನಮ್ಮ ಮನೆಗಳಿಗೆ ಬೇಟಿ ಕೊಟ್ಟರೆ ಎಷ್ಟೊಂದು ಪ್ರೀತಿಯಿಂದ ನೋಡಿಕೊಳ್ಳುತ್ತೇವೆ ಎಂದರೇ ನಮ್ಮ ಮನೆ ದೇವರನ್ನು ಎಷ್ಟು ಭಯ ಭಕ್ತಿ ಮತ್ತು ಪ್ರೀತಿಯಿಂದ ಉಪಚರಿಸುತ್ತೇವೋ ಅದೇ ರೀತಿಯಲ್ಲಿ ಅತಿಥಿಗಳನ್ನು ಕಾಣುತ್ತೇವೆ.




ತಕ್ಷಣ ಮನೆಯ ಬಾಗಿಲಿಗೆ ಬಂದಾಗ ಮೊದಲು ಮಾಡುವ ಕೆಲಸ ಎಂದರೇ ನಗು ನಗುತ ಒಳಗಡೆಗೆ ಕರೆಯುತ್ತೇವೆ. ಮನೆಯಲ್ಲಿ ಯಾರದಾರೂ ಕುಳಿತುಕೊಂಡಿದ್ದರೆ ಪ್ರತಿಯೊಬ್ಬರೂ ಎದ್ದು ಒಳಗಡೆ ಬರುತ್ತಿರುವ ವ್ಯಕ್ತಿಯನ್ನು ಸ್ವಾಗತಿಸುತ್ತೇವೆ. ಅದು ಅವರಿಗೆ ಕೊಡುವ ಮನೆಯ ಮೊದಲ ಗೌರವ. ಇದನ್ನು ಯಾರು ಸಹ ಹೇಳಿಕೊಟ್ಟ ಪಾಠವೆನಲ್ಲಾ. ನಮ್ಮ ಸಂಸ್ಕೃತಿಯೇ ಹಾಗೆ ಮಾಡಬೇಕು ಎಂಬುದನ್ನು ಮನನ ಮಾಡಿರುತ್ತದೆ.



ಬಂದವರನ್ನು ಉನ್ನತವಾದ ಆಸನದಲ್ಲಿ ಕೂರಿಸುತ್ತೇವೆ. ನಾವುಗಳು ಅವರು ಕೂರುವವರೆಗೂ ನಿಂತೆ ಇರುತ್ತೇವೆ. ಅವರು ಕೂತ ಅನಂತರ ಕೂರುತ್ತೇವೆ. ಮನೆಯಲ್ಲಿರುವವರ ಪರಿಚಯವನ್ನು ನಗು ನಗು ಮುಖದೊಡನೆ ಮಾಡಿಕೊಡುತ್ತೇವೆ. ಇದರಿಂದ ಹೊಸಬರಿಗೆ/ಪರಿಚಯದವರಿಗೆ ಮನೆಯವರ ಬಗ್ಗೆ ಪರಸ್ಪರ ವಿಶ್ವಾಸ ಬರುತ್ತದೆ. ಅದು ಇದು ಮಾತನ್ನಾಡಲು ಪ್ರಾರಂಭ ಮಾಡುವ ಮೊದಲು ನೀರನ್ನು ಕುಡಿಯಲು ಕೊಡುತ್ತೇವೆ. ಇದಂತು ಒಂದು ಮಾದರಿಯ ಉಪಚಾರ.



ಉತ್ತರ ಕರ್ನಾಟಕದ ಕಡೇ ನೀರಿನ ಜೊತೆಯಲ್ಲಿ ಬೆಲ್ಲವನ್ನು ಕೊಡುವುದು ವಾಡಿಕೆ.



ಅನಂತರ ಅಡಿಗೆಯ ಮನೆಯಿಂದ ಕಾಫಿ, ಟೀ ಇತ್ಯಾದಿ ಸಿಹಿ ಪಾನಿಯಗಳು ಅತಿಥಿಗೆ ಬರುತ್ತವೆ. ಅವನ್ನು ಅವರು ಸೇವಿಸುತ್ತಾರೆ. ಆನಂತರ ದಿನದ ಸಮಯಕ್ಕೆ ಅನ್ವಯಿಸಿ ತಿಂಡಿ,ಊಟ ಇತ್ಯಾದಿ.



ಮಕ್ಕಳಿದ್ದರೇ ಅವರುಗಳು ಇಂಥ ಅತಿಥಿ ಬರುವುದನ್ನೇ ಕಾಯುತ್ತಿರುತ್ತಾರೆ. ಯಾಕೆಂದರೇ ಆಗ ಯಾವ ರೀತಿಯಲ್ಲೂ ಮನೆಯವರು ಇವರ ಮೇಲೆ ಮುನಿಸು ಮಾಡುವುದಿಲ್ಲ. ಅತಿಥಿಗಳಿಗೆ ಸಿಗುವ ಎಲ್ಲಾ ಉಪಚಾರ ಇವರಿಗೂ ಅನಾಯಸವಾಗಿ ಬರುತ್ತದೆ. ಆದ್ದರಿಂದ ತುಂಬ ಖುಷಿ.



ಗೊತ್ತಾ..ನಾವು ಹಳ್ಳಿಯಲ್ಲಿರುವಾಗ ಅದು ನಿಜವಾ ಇಂದಿಗೂ ಗೊತ್ತಿಲ್ಲಾ. ಸಾಂಬರ್ ಕಾಗೆ ಎಂಬ ಕಾಗೆಯಂತಿರುವ ಒಂದು ಪಕ್ಷಿ. ಸ್ವಲ್ಪ ಕಾಫಿ ಬಣ್ಣವನ್ನು ಹೊಂದಿರುವ ಸೇಮ್ ಕಾಗೆಯಂತಿರುವ ಪಕ್ಷಿ ದರ್ಶನವಾದರೇ ಯಾರಾದರೂ ನೆಂಟರು ಮನೆಗೆ ಬೇಟಿಕೊಡುತ್ತಾರೆ. ಎಂದು ನಮ್ಮ ನಮ್ಮಲ್ಲಿಯೇ ಶಕುನವನ್ನು ಗಟ್ಟಿ ಮಾಡಿಕೊಳ್ಳುತ್ತಿದ್ದೇವು.



ಇದೆ ರೀತಿಯಲ್ಲಿ ಮತ್ತೊಂದು ಶಕುನವೆಂದರೇ. ಅಡಿಗೆ ಮಾಡುವ ಒಲೆ ಹರಿಸಿದರೆ ನೆಂಟರು ಮನೆಗೆ ಬರುತ್ತಾರೆ. ಹಳ್ಳಿಯಲ್ಲಿ ಇಂದಿಗೂ ಬಹುತೆಕ ಮಂದಿ ಸೌದೆ ಒಲೆಯನ್ನೆ ಬಳಸುವುದು. ಈ ಸೌದೆ ಒಲೆ ಗಾಳಿ ಅಥವಾ ಸೌದೆಯಲ್ಲಿನ ಟೊಳ್ಳು ಇತ್ಯಾದಿಗಳಿಂದ ಒಂದು ರೀತಿಯಲ್ಲಿ ಶಬ್ಧ ಮಾಡಿಕೊಂಡು ಒಲೆ ಉರಿಯುತ್ತದೆ. ಇದನ್ನು ಒಲೆ ಹರಿಸುತ್ತಿದೆ ಎಂದು ಹಳ್ಳಿಯವರು ಕರೆಯುವುದು. ಒಲೆ ಏನಾದರೂ ಹರಿಸಿದರೇ ಖಂಡಿತವಾಗಿ ಮನೆಗೆ ಯಾರಾದರೂ ಅತಿಥಿಗಳು ಆಗಮಿಸುತ್ತಾರೆ ಎನ್ನುತ್ತಿದ್ದರು.



ಒಮ್ಮೊಮ್ಮೆ ನಿಜವಾಗುತ್ತಿತ್ತು. ಆದ್ದರಿಂದ ಈ ಎರಡು ಶಕುನಗಳನ್ನು ನಾವುಗಳೂ ಬಾಲ್ಯದಲ್ಲಿ ಗಟ್ಟಿ ಮಾಡಿಕೊಂಡು ಖುಷಿಪಡುತ್ತಿದ್ದೇವು.



ಇಂದು ನಗರ ಜೀವನದಲ್ಲಿ ಈ ಎಲ್ಲಾ ಕೇವಲ ಕತೆ ಸಿನಿಮಾಗಳಲ್ಲಿ ನೋಡುವಂತಾಗಿದೆ. ಗ್ಯಾಸ್ ಒಲೆಗಳು ಅವುಗಳನ್ನು ಮೊಲೆಗುಂಪು ಮಾಡಿಬಿಟ್ಟಿದೆ.



ಅತಿಥಿಗಳೆಂದರೆ ಪರಸ್ಥಳದಿಂದ ಬರುತ್ತಿದ್ದರು. ಅವರು ಬಂದರೇ ಸುಖಸುಮ್ಮನೇ ಬರೀ ಕೈಯಲ್ಲಿ ಎಂದು ಬರುತ್ತಿರಲಿಲ್ಲ. ಅವರು ಮಕ್ಕಳಿಗಾಗಿಯೇ ಎಂಬಂತೆ ಏನಾದರೂ ತಿಂಡಿ ತಿನಿಸುಗಳನ್ನು ತರುತ್ತಿದ್ದರು. ಆದ್ದರಿಂದ ನಮಗೋ ಅವರ ಬಗ್ಗೆ ಎಲ್ಲಿಲ್ಲದ ಕಾಳಜಿ. ಅವರು ಇರುವಷ್ಟು ದಿನ ನಮಗೇ ನಾವೇ ರಾಜರು.



ನನಗೆನಿಸುತ್ತದೆ ಅಂದಿನಿಂದ ನಮ್ಮಗಳಿಗೆ ಗೊತ್ತಾಗದ ರೀತಿಯಲ್ಲಿ ನಮ್ಮ ನಮ್ಮ ಮನೆಯವರುಗಳು ಅತಿಥಿಗಳ ಉಪಚಾರವನ್ನು ತಿಳಿಸಿಕೊಟ್ಟಿರುತ್ತಾರೆ. ಹಿರಿಯರನ್ನು ನಾವುಗಳು ಗಮನಿಸಿರುತ್ತಿರುತ್ತೇವೆ. ಅವರು ಮಾಡುವ ಉಪಚಾರವನ್ನು ನಾವುಗಳೂ ಸಹ ಮುಂದುವರಿಸಿಕೊಂಡು ಮುಂದಿನ ಪೀಳಿಗೆಗೆ ಅಸ್ತಂತರಿಸುತ್ತಿದ್ದೇವೆ.



ನಾವುಗಳೂ ಸಹ ಬೇರೆ ಯಾರಾದರೂ ಮನೆಗೆ ಪರ ಊರಿಗೆ ಹೋದಾಗ ಇದೆ ರೀತಿಯಲ್ಲಿ ನಮಗೂ ಅತಿಥ್ಯ ಸತ್ಕಾರ ಸಿಕ್ಕಿರುತ್ತದೆ. ಆದರ ಋಣವನ್ನು ಅವರುಗಳು ನಮ್ಮ ಮನೆಗಳಿಗೆ ಬಂದಾಗ ತೀರಿಸಿಕೊಳ್ಳುತ್ತಿದ್ದೇವು.



ನಾವುಗಳು ಮಾಡುವ ಅತಿಥಿ ಸತ್ಕಾರದ ಮೇಲೆ ನಮ್ಮ ನಡಾವಳಿಯನ್ನು ನಿರ್ಧರಿಸುವಂತಿರುತ್ತದೆ ಅಲ್ಲವಾ?



ಇದಕ್ಕೆ ಇರಬೇಕು. ಇದಕ್ಕೆ ಹೊಂದಿಕೊಂಡಂತೆ ಹತ್ತು ಹಲವಾರು ಗಾದೆಗಳನ್ನು ನಮ್ಮ ಜನಪದ ರಚಿಸಿಬಿಟ್ಟಿದ್ದಾರೆ.



"ಬಡವರ ಮನೆ ಊಟ ಚೆನ್ನ. ಶಾನಭೋಗರ ಮನೆ ಬಡಿವರ ಚೆನ್ನ."



"ಅನ್ನ ಇಟ್ಟ ಮನೆ ಎಂದು ಕೆಡುವುದಿಲ್ಲ"



ಮತ್ತೂ ನಮ್ಮ ಕತೆ,ಪುರಾಣಗಳಲ್ಲಿ ದೇವರು ಒಮ್ಮೊಮ್ಮೆ ಅತಿಥಿಗಳ ರೂಪದಲ್ಲಿ ಜನ ಸಾಮಾನ್ಯರ ಮನೆಗಳಿಗೆ ಬೇಟಿಕೊಡುವುದು. ಅರಿಯದ ಮನುಷ್ಯ ಅವನನ್ನು ಬೇರೆಯಾಗಿ ಅಸಡ್ಡೆಯಾಗಿ ಕಾಣುವುದು. ಅದಕ್ಕಾಗಿ ಕಷ್ಟಪಡುವುದು. ದೇವರು ಮುನಿಸಿಕೊಳ್ಳುವುದು.. ಹೀಗೆ ನಾನ ರೀತಿಯ ನಿದರ್ಶನಗಳಿಂದ ನಮ್ಮಗಳಿಗೆ ಅತಿಥಿ ಎಂದರೇ ಸಾಕ್ಷತ್ ದೇವರು ಎಂಬಂತಾಗಿದೆ.



ಆದರೇ ಗೊತ್ತಿರುವವರು ಬಂದರೇ ಮಾತ್ರ ನಾವು ಒಂದು ಸ್ವಲ್ಪ ಹೆಚ್ಚಾಗಿ ಆಧಾರಿಸುತ್ತೇವೆ. ಗೊತ್ತಿಲ್ಲದವರು ಯಾರಾದರೂ ಬಂದರೇ ಇಂದಿನ ಜಮಾನದಲ್ಲಿ ಯಾರನ್ನು ನಂಬುವುದು? ಯಾರನ್ನು ಬಿಡುವುದು ಎಂಬಂತಾಗಿದೆ ಇದು ಸಿಟಿ ಲೈಫ್!



ಅದು ಸರಿ ಎಲ್ಲರನ್ನೂ ಅತಿಥಿ ಎಂದುಕೊಂಡು ಆಧರಿಸುತ್ತಾ ಕೂರುವ ಸಮಯಾವಕಾಶ ನಮ್ಮಗಳ ಬಳಿ ಇರಲಾರದು... ಇದು ವಾಸ್ತವ.



ಆದರೂ ಈ ರೀತಿಯ ಒಂದು ನಡಾವಳಿ ನಮ್ಮ ಭಾರತದಲ್ಲಿ ಮಾತ್ರ ಯಾರೊಬ್ಬರೂ ಭಾರ ಎಂದು ಎಂದಿಗೂ ಅಂದುಕೊಳ್ಳುವುದಿಲ್ಲ.



ಇದು ಒಂದು ನಮ್ಮ ನಮ್ಮ ಬಂದುಗಳು,ಹತ್ತಿರದವರ ನಡುವೆ ಸ್ನೇಹ ಸಂಬಂಧವನ್ನು ಇನ್ನು ಗಟ್ಟಿಯಾಗಿ ಬೆಸೆಯುವ ಒಂದು ಸದಾವಕಾಶ. ಪರಸ್ಪರ ಒಬ್ಬರನ್ನೊಬ್ಬರೂ ಅರಿಯಲು, ನಾವುಗಳೆಲ್ಲಾ ಒಂದೇ ಎಂಬುದನ್ನು ನಮ್ಮಲ್ಲಿ ಮತ್ತು ನಮ್ಮ ಮುಂದಿನ ಪೀಳಿಗೆಗೆ ಮುನ್ನಡಿಸಿಕೊಂಡು ಹೋಗಲು ಸರಿಯಾದ ದಾರಿ ಮಾಡಿಕೊಟ್ಟಂತೆ.



ನನಗಂತೂ ಈ ರೀತಿಯ ಅತಿಥಿ ಸತ್ಕಾರವನ್ನು ಕೆಲವರಿಂದ ಪಡೆದು ತುಂಬ ಸಂತೋಷಗೊಂಡಿದ್ದೇನೆ. ನನಗೆ ನಾನೇ ವಿಸ್ಮಯಗೊಂಡಿದ್ದೇನೆ. ನನ್ನ ಸ್ನೇಹಿತನ ಮನೆಗೆ ಬೇಟಿಕೊಟ್ಟಾಗ ಸ್ನೇಹಿತನ ತಂದೆ ತಾಯಿ,ಅವರ ಮಡದಿಯವರ ಅತಿಥ್ಯವನ್ನು ಕಂಡು ಬೆಂಗಳೂರಿನಲ್ಲೂ ಇಂಥವರು ಈಗಲೂ ಇದ್ದಾರೆಯೇ ಎಂದು ಮೂಕನಾಗಿದ್ದೇನೆ. ಒಂದಿಷ್ಟು ಬೇಸರವಿಲ್ಲದೆ ನಮಗೋಸ್ಕರ ವಿವಿಧ ಬಗೆಯ ತಿಂಡಿ ತಿನಿಸುಗಳನ್ನು ಮಾಡಿ ನಮ್ಮ ಬಾಯಿಯನ್ನು ಸಕ್ಕರೆ ಮಾಡುವ ಅವರ ಬದುಕು ಎಂದು ಹಾಲು ಸಕ್ಕರೆಯಾಗಿರಲಿ ಎಂಬುದೇ ನನ್ನ ಆಸೆ.



ಇತ್ತೀಚೆಗೆ ನಾನು ಬೇರೊಂದು ರಾಜ್ಯಕ್ಕೆ ಬೇಟಿಕೊಟ್ಟಾಗ ನನ್ನ ಸ್ನೇಹಿತರ ಮನೆಯವರು ನನ್ನನ್ನು ಸತ್ಕರಿಸಿದ್ದನ್ನು ನೆನಸಿಕೊಂಡರೇ.... ಅಲ್ಲಾ ಈ ರೀತಿಯ ಒಂದು ನಡಾವಳಿ ಭಾಷೆ/ರಾಜ್ಯ/ಸಂಸ್ಕೃತಿಯ ಗಡಿಯನ್ನು ಮೀರಿ ನಿಂತಿದೆಯೆಲ್ಲಾ ಎಂದು ಅಚ್ಚರಿಗೊಂಡಿದ್ದೇನೆ. ಯಾರಾದರೂ ಬಂದರೇ ಯಾಕಾದರೂ ಬರುವರೋ ಎಂಬ ದುಬಾರಿ ಯುಗದಲ್ಲಿ ಯಾವ ಯಾವ ರೀತಿಯಲ್ಲಿ ಅತಿಥಿಯನ್ನು ಅವನ ಮನೆಯೇ ಎಂಬ ಫೀಲ್ ಬರುವ ಮಟ್ಟಿಗೆ ಸಂಬಳಿಸುವವರು ಇರುವುದರಿಂದಲೇ ನಮ್ಮ ಭಾರತೀಯ ಸಂಸ್ಕೃತಿಯನ್ನು ಐರೋಪ್ಯ ದೇಶಗಳು ನೋಡಿ/ಅನುಭವಿಸಿ ಅಳವಡಿಸಿಕೊಳ್ಳಲು ಇಂದು ತವಕಗೊಂಡಿರುವುದು.



ನಮ್ಮ ನಮ್ಮ ಮನೆಯ ಈ ಸಂಸ್ಕೃತಿಗೆ ನಾವುಗಳು ಹೆಮ್ಮೆಪಡಬೇಕು!!

ಶುಕ್ರವಾರ, ಅಕ್ಟೋಬರ್ 5, 2012

ಅಷ್ಟಕ್ಕೂ ಈ ಪ್ರೀತಿಯಲ್ಲಿ ಏನಿದೆ?

ಇಲ್ಲ ಈ ಕಥೆಯನ್ನು ಅವನ ಬಾಯಿಂದಲೇ ಕೇಳಿದ್ದರೆ ಚೆನ್ನಾಗಿರುತ್ತಿತ್ತು.


ನನಗೋ ತುಂಬ ಕುತೂಹಲ ಯಾರಾದರೂ ಲವ್, ಪ್ರೇಮ ಎಂಬುವುದರಲ್ಲಿ ಸಿಲುಕಿರುವವರನ್ನು ಕಂಡರೇ ತುಂಬ ಅಕ್ಕರೆ. ಪರವಾಗಿಲ್ಲ ಲವ್ ನಲ್ಲಿ ಬಿದ್ದುಬಿಟ್ಟಿದ್ದನಲ್ಲಾ/ಬಿದ್ದಿದ್ದಳಲ್ಲಾ ಎಂದು ಅವರನ್ನು ದೇವರನ್ನು ನೋಡುವ ರೀತಿಯಲ್ಲಿಯೇ ಭಯ ಭಕ್ತಿಯಿಂದ ಗಮನಿಸುತ್ತಿರುತ್ತೇನೆ.


ಯಾರಾದರೂ ಸ್ನೇಹಿತರು ಲವ್ ನಲ್ಲಿ ಬಿದ್ದಿದ್ದಾನೆ ಎಂದ ತಕ್ಷಣ ಅವನ ಪ್ರತಿಯೊಂದು ಚಹರೆ, ಮಾತು, ಕಥೆಯನ್ನು ಹತ್ತಿರದಿಂದ ನೋಡುತ್ತಿರುತ್ತೇನೆ. ಲವ್ ನಲ್ಲಿ ಬಿದ್ದ ಹುಡುಗರ, ಹುಡುಗಿಯರ ಬಗ್ಗೆ ಸಿನಿಮಾ, ಕಥೆಯಲ್ಲಿ ನೋಡಿ ಓದಿದ ರೀತಿಯಲ್ಲಿ ಏನಾದರೂ ಈ ಮೇಟಿರಿಯಲ್ ವರ್ತಿಸುತ್ತಿದೀಯೇ ಎಂದು ಪರೀಕ್ಷಿಸುತ್ತೇನೆ.


ಹುಡುಗಿಯರು ಸಹಜವಾಗಿ ತಮ್ಮ ಪ್ರೇಮದ ಬಗ್ಗೆ ಏನಂದರೂ ಸುಖ ಸುಮ್ಮನೆ ತಮ್ಮ ಸ್ನೇಹಿತರ ಬಳಿ ಬಾಯಿಬಿಡುವುದಿಲ್ಲ.


ಗೊತ್ತಿಲ್ಲಾ ಹುಡುಗರು ತಮ್ಮ ಮೊದಲ, ಎರಡನೇಯ ಪ್ರತಿಯೊಂದು ಪ್ರೇಮದ ಗುಟ್ಟನ್ನು ಜಗತ್ತಿಗೆ ತಿಳಿಯಪಡಿಸಲು ಕಾತುರರಾಗಿರುತ್ತಾರೆ. ಯಾರಾದರೂ ಕೇಳುಗರು ಸಿಕ್ಕಿದರೇ ಇಂಚು ಇಂಚು ಕಥೆಯನ್ನು ಮನನವಾಗುವಂತೆ ತೆರೆದಿಟ್ಟುಬಿಡುತ್ತಾರೆ. ಆದರೇ ಹುಡುಗಿಯರು ಅವರ ಯಾವುದೇ ಒಂದು ಪ್ರೇಮದ ಗುಟ್ಟನ್ನು ನನ್ನಾಣೆ ಯಾವ ಕಾರಣಕ್ಕೂ ತಿಳಿಯಪಡಿಸುವುದಿಲ್ಲ. ಅವರು ಅಷ್ಟರ ಮಟ್ಟಿಗೆ ಅವರ ಎದೆಯ ಗೊಡಿನಲ್ಲಿ ಬೆಚ್ಚಗೆ ಬಚ್ಚಿಟ್ಟು ಕಾಪಡಿಕೊಳ್ಳುತ್ತಾರೆ? (ಅಥವಾ ಹೆದರಿಕೆಯ??)


ನನಗಂತೂ ಗೊತ್ತಿಲ್ಲಾ. ಯಾರಾದರೂ ಕಾಸ ದೋಸ್ತ್ ಗಳ ಬಳಿ ಹುಡುಗಿಯರು ಸಹ ತಮ್ಮ ಪ್ರೇಮವನ್ನು ಜಗಜ್ಜಾಹೀರು ಮಾಡಿರಬಹುದೇನೋ? ಇದುವರೆಗೂ ಅಂಥ ಗೆಳೆತಿಯರು ನನ್ನ ಬಳಿ ತಮ್ಮ ಪ್ರೇಮಾನುರಾಗವನ್ನು ಹರಿದುಬಿಟ್ಟಿಲ್ಲ.


ಆದರೇ ಹುಡುಗಿಯರ ನಡವಳಿಕೆಯಿಂದ ನನಗೆ ಏನೂ ಪ್ರತಿಯೊಬ್ಬರಿಗೂ ಗೊತ್ತಾಗೇ ಗೊತ್ತಾಗಿರುತ್ತದೆ. ಈ ಹುಡುಗಿಗೆ ಒಬ್ಬ ಬಾಯ್ ಪ್ರೇಂಡ್ ಇದ್ದಾನೆ ಎಂಬುದು. ಆದರೆ ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೇ ಯಾರಿಗೂ ಗೊತ್ತಾಗುವುದಿಲ್ಲ ಎಂಬ ರೀತಿಯಲ್ಲಿ ಗುಸು ಗುಸಾ, ಪಿಸ ಪಿಸ,ಟಪ ಟಪಾ ಮಾತು-ಮೇಸೆಜ್ ಮಾಡುವುದು ಮೊದಲ ಮುನ್ನೂಚನೆಯಲ್ಲಿ ಜಗತ್ತಿಗೆ ಸಾರಿರುತ್ತಾರೆ. ಆ ಸಮಯಕ್ಕೆ ನಾವುಗಳು ನಿರ್ಧರಿಸಬಹುದು.ಈ ಹುಡುಗಿ ಹಾದಿ ಬಿಟ್ಟಿದ್ದಾಳೆ ಎಂದು. ಗಮನಿಸಿ ಹುಡುಗಿಯರು ಬಾಯ್ ಪ್ರೇಂಡ್ ಹೊಂದಿದ್ದರೇ ಮುಗಿದೇ ಹೋಯ್ತು. ಇಡೀ ಪ್ರಪಂಚವನ್ನೇ ಮರೆತುಬಿಡುತ್ತಾರೆ. ಅವಳಿಗೆ ಅವನ ಗೆಳೆಯನೇ ಸಾಕ್ಷತ್ ದೇವರು. ಅವನ ಬಿಟ್ಟು ಬೇರೆಯವರು ಕವಡೆ ಕಾಸಿಗೂ ಕಿಮ್ಮತ್ತು ಬರುವುದಿಲ್ಲ. ಅವನ ಜಪಾನೇ ನಿತ್ಯ. ಅವನನ್ನು ಗೋಳು ಹೋಯ್ದುಕೊಳ್ಳುವುದೇ ಅವರ ಮುಖ್ಯ ಕಾರ್ಯಕ್ರಮವಾಗಿರುತ್ತದೆ. ಮುಂಜಾನೆಯಿಂದ ರಾತ್ರಿ ರಾತ್ರಿ ದೆವ್ವಗಳು ಬರುವ ವೇಳೆಯವರೆಗೂ ಅವನ ಗೆಳೆಯನನ್ನು ಮೇಸೆಜ್,ಪೋನ್ ಹೀಗೆ ಬಿಡುವುದಿಲ್ಲ. ಹುಡುಗನ ಪಾಡು ದೇವರಿಗೆ ಪ್ರೀತಿ. ಅಷ್ಟರ ಮಟ್ಟಿಗೆ ಹುಡುಗಿ ಹುಡುಗನ ಬಗ್ಗೆ ಕೇರ್ ತೆಗೆದುಕೊಳ್ಳುತ್ತಾಳೆ?


ಹುಡುಗರು ಹುಡುಗಿಯರಿಗಾಗಿ ತಮ್ಮ ತಮ್ಮ (ಮೊದಲ?) ಪ್ರೇಮಕ್ಕಾಗಿ ಹೇಗೆಲ್ಲಾ ಕಷ್ಟಪಡುತ್ತಾರೆ ಎಂದರೇ.. ದೇವರಾಣೆ ಪ್ರೀತಿ ಎಂಬ ಈ ಎರಡು ಅಕ್ಷರಕ್ಕೆ ಇಷ್ಟೊಂದು ಶಕ್ತಿಯನ್ನು ಎಲ್ಲಿಂದ ಯಾರು ಕೊಟ್ಟರು ಗುರು?


ಪ್ರೇಮಿಗಳನ್ನು ಈ ಪ್ರೀತಿ ಏನನ್ನೆಲ್ಲಾ ಮಾಡಿಸುತ್ತದೆ? ಒಂದು ಅಕ್ಷರವನ್ನು ಬರೆಯದ ಹುಡುಗ ತನ್ನ ನೆಚ್ಚಿನ ಹುಡುಗಿಗಾಗಿ ಪ್ರೇಮ ಪತ್ರವನ್ನು ಬರೆಯಲು ಶುರು ಮಾಡುತ್ತಾನೆ. ಜೀವನದಲ್ಲಿ ಒಂದೇ ಒಂದು ಸಾಲು ಪದ್ಯವನ್ನು ಓದದವನು ಹುಡುಗಿಗಾಗಿ ತಾನೇ ಕಷ್ಟಪಟ್ಟು ಪ್ರೇಮ ಕವನವನ್ನು ಗೀಚಲು ಪೆನ್ನು ಹಿಡಿಯುತ್ತಾನೆ. ಅವಳಿಗಾಗಿ ಯಾವ ತ್ಯಾಗಕ್ಕಾದರೂ ಸಿದ್ಧನಾಗುತ್ತಾನಲ್ಲ. ಅಬ್ಬಾ?


ಅಲ್ಲಾ ಹುಡುಗಿಯರು ಇದೆ ರೀತಿಯಲ್ಲಿ ತಮ್ಮ ಮುಂದಿನ ಜೀವನ ಪಯಣವನ್ನು ಹೊಸ ಹುಡುಗನೊಂದಿಗೆ ಕಟ್ಟಿಕೊಳ್ಳಲು ತವಕಿಸುವ ಪರಿಯನ್ನು ಹೇಗೆ,ಎಲ್ಲಿ ಕಲಿತರು?


ಯಾವ ಗುರು ಮಾರ್ಗದರ್ಶನವಿಲ್ಲದೆ ಕಲಿಯುವ ಏಕೈಕ ವಿಧ್ಯೆ ಅಂದರೇ "ಪ್ರೇಮ" ಮಾತ್ರ!


ವಯೋಸಹಜವಾಗಿ ಪ್ರತಿಯೊಬ್ಬ ತರುಣ ತರುಣಿಯರಲ್ಲಿ ಮೊದ ಮೊದಲು ಆಕರ್ಷಣೆಯೆಂದೂ ಪ್ರಾರಂಭವಾಗಿ ಅದು ನಿಜವಾದ ಪ್ರೇಮ ಎಂದು ತಮ್ಮಲ್ಲಿಯೇ ಕಂಡುಕೊಂಡು ಎರಡು ದೇಹ ಒಂದೇ ಹೃದಯ ಎಂಬವಷ್ಟರ ಮಟ್ಟಿಗೆ ಒಬ್ಬರನ್ನೂ ಒಬ್ಬರೂ ಬಿಡಲಾರದ ಮಟ್ಟಿಗೆ ಉಸಿರಲ್ಲಿ ಉಸಿರಾಗಿ ಬೆರತುಹೋಗಿಬಿಡುತ್ತಾರೆ.


ಎಂದೂ ಸಹ ಒಬ್ಬರ ಮುಖವನ್ನೊಬ್ಬರೂ ಯಾವತ್ತಿಗೂ ಕಂಡಿರಿದವರು.. ಅದು ಯಾವ ಮಾಯದಲ್ಲೋ ಸ್ನೇಹ, ಪರಿಚಯವೆಂದು ಶುರುವಾಗಿ ಪ್ರೇಮದ ಘಟ್ಟಕ್ಕೆ ಬಂದು ಒಬ್ಬರಿಗೊಬ್ಬರೂ ಸುಂದರ ಗೀತೆಯಾಗಿ ಮೀಡಿಯುತ್ತರಲ್ಲಾ?


ಪ್ರೀತಿ ಎಂದರೇ ಹೀಗೇನಾ ಎಂದು ತಮ್ಮನ್ನು ತಾವೇ.. ತಮ್ಮ ಪ್ರೀತಿಯ ಭಾಷೆಯಲ್ಲಿ ಕೇಳಿಕೊಳ್ಳುತ್ತಾರಲ್ಲಾ?


ನಿಜವಾಗಿಯೋ ಅಲ್ಲಿ ಹುಡುಗ ಒಂದು ರೀತಿಯಲ್ಲಿ .. ಇಲ್ಲಿ ಹುಡುಗಿ ಒಂದು ರೀತಿಯಲ್ಲಿ..


ನಾವೇ ಸಾಕಷ್ಟು ಭಾರಿ ಈ ಇಬ್ಬರೂ ಜೊಡಿಯನ್ನು ಕಂಡು ಮಾತನ್ನಾಡಿರುತ್ತೇವೆ.. "ಅಲ್ಲಾ ಪ್ರೇಮಕ್ಕೆ ಕುರುಡು ಎಂಬುದು ಇವರನ್ನು ಕಂಡೇ ಹೇಳಿರಬೇಕು. ನೋಡಿ ಆ ಹುಡುಗಿಯನ್ನು ಕೈ ತೊಳೆದುಕೊಂಡು ಮುಟ್ಟಬೇಕು. ಇವನೋ ಕಪ್ಪು ಕರಿಯ.. ಅದು ಹೇಗೆ ಇಬ್ಬರಲ್ಲಿ ಆ ಪ್ರೇಮ ರಸ ತೊಟ್ಟಿಕ್ಕಿತೂ?"


ಹೀಗೆ ಜಾತಿ, ಮತ, ಚಹರೆ, ಗುಣಾವಾಗುಣ,ಅಂತಸ್ತುಗಳನ್ನೆಲ್ಲಾ ಮೀರಿ ಹುಟ್ಟುವ ಆ ಪ್ರೀತಿಗೆ ನನ್ನಲ್ಲಿ ನಾನೇ ಅಚ್ಚರಿಪಟ್ಟಿದ್ದೇನೆ. ಪ್ರೀತಿಯನ್ನು ಮಾಡುವವರೂ ನಿಜಕ್ಕೂ ದೇವರಿಗೆ ಸಮನಾದವರು ಅನಿಸುತ್ತದೆ. ಆ ಒಂದು ಭಾವನೇ ನಿಜವಾಗಿಯೋ ಅತಿ ಉನ್ನತವಾದ ಭಕ್ತಿಯೇ ಸರಿ.


ರಾಧೆಗೆ ಕೃಷ್ಣನಲ್ಲಿ ಹುಟ್ಟಿದ ಭಕ್ತಿಯ ರೀತಿಯಲ್ಲಿ. ಈ ಪ್ರೇಮಿಗಳಿಗೆ ಅದೇ ಒಂದು ಭಕ್ತಿರಸ. ಅದಕ್ಕಾಗಿ ತನ್ಮಯತೆಯಲ್ಲಿ ಅದು ಹೇಗೆಲ್ಲಾ ಪರಿತಪಿಸುವರಲ್ಲಾ? ಆ ಒಂದು ನಿಲುವು. ಆ ಒಂದು ಅರ್ಪಣೆ ಪ್ರಾರ್ಥನೆಗೆ ಸಮ ಅನಿಸುತ್ತದೆ.


ಆದರೇ ಎಲ್ಲಾ ಪ್ರೀತಿಗಳು ಗೆಲುವಾಗುವುದಿಲ್ಲ. ಪ್ರೀತಿ ಮಾಡುವುವರೆಲ್ಲಾ ಒಂದಲ್ಲಾ ಒಂದು ರೀತಿಯಲ್ಲಿ ಸುತ್ತಲಿನ ಸಮಾಜ, ತಮ್ಮದೆಯಾದ ಕುಟುಂಬದಿಂದ ತೀರಾಸ್ಕರಕ್ಕೆ ಗುರಿಯಾಗಿಬಿಡುತ್ತಾರೆ. ಜಗತ್ತೇ ಈ ಇಬ್ಬರೂ ಪ್ರೇಮಿಗಳ ವಿರುದ್ಧ ನಿಂತಂತೆ ಬಾಸವಾಗುತ್ತದೆ. ಪ್ರೀತಿ ಎಂಬ ಒಂದೇ ಒಂದು ವಿಷಯಕ್ಕಾಗಿ ಪ್ರತಿಯೊಬ್ಬರನ್ನೂ ಎದುರು ಹಾಕಿಕೊಂಡು ನಿಲ್ಲಬೇಕಾಗುತ್ತದೆ. ನಿಂತವರು ಗೆಲ್ಲುತ್ತಾರೆ. ಇಲ್ಲವಾದರೇ ಅದಕ್ಕೆ ಎಳ್ಳು ನೀರು ಬಿಟ್ಟು ನಿತ್ಯ ಕೊರಗುತ್ತಲೇ ತಮ್ಮ ಮುಂದಿನ ಜೀವನವನ್ನು ದೂಡುತ್ತಾರೆ.


ಪ್ರತಿಯೊಬ್ಬ ಪ್ರೇಮಿಗಳು ಶಾಶ್ವತವಾಗಿ ಒಂದಾಗಿರಲಿ ಎಂಬ ಶಾಸನವಿದ್ದರೇ ಎಷ್ಟು ಚೆಂದ?


"ಗೊತ್ತಿಲ್ಲಾ ಯಾವುದೋ ಮಾಯೆಯಲ್ಲಿ ಅವಳನ್ನು ನಾನು ಇಷ್ಟಪಟ್ಟೆ. ಅವಳಲ್ಲಿ ಏನೋ ಒಂದು ಗುಣ ನನ್ನನ್ನೂ ಹುಚ್ಚನನ್ನಾಗಿ ಮಾಡಿದೆ. ಅದು ಏನೂ ಎಂದು ನಾನು ಪದಗಳಲ್ಲಿ ಹೇಳಲಾರೇ" ಎಂದು ಚಟಪಟಿಸುವ ಹುಡುಗನ ಪ್ರೀತಿಗೆ ಬೆಲೆಯನ್ನು ಯಾರಾದರೂ ಕಟ್ಟಲು ಸಾಧ್ಯವೇ?


"ಇಲ್ಲಾರೀ ಅವನನ್ನು ಕಂಡರೇ ನನಗೆ ಇಷ್ಟ ಅಷ್ಟೇ. ಅವನಿಲ್ಲದ ಜೀವನವನ್ನು ನಾನು ಕನಸಲ್ಲೂ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ನನಗೆ ಅವನು ಏನದರೂ ಆಗಿರಲಿ ನನಗೆ ಅವನು ಮಾತ್ರ ಬೇಕು." ಎಂದು ಹಂಬಲಿಸುವ ಸಾವಿರಾರು ಪ್ರೀತಿಯ ಹುಡುಗಿಯರನ್ನು ನಾವುಗಳು ಏನೆಂದು ಕರೆಯಲಿ.


ಅಲ್ಲಾ ಅಷ್ಟಕ್ಕೂ ಈ ಪ್ರೀತಿಯಲ್ಲಿ ಏನಿದೆ?


ಎಷ್ಟೆಲ್ಲಾ ಪುರಾಣ, ಕಥೆ, ಕಾವ್ಯ, ಕವನ, ಸಿನಿಮಾಗಳು ಬಂದವು. ಅವುಗಳಲ್ಲಿ ಪ್ರೀತಿಯ ಬಗ್ಗೆ ಹೇಗೆಲ್ಲಾ ವ್ಯಾಖ್ಯಾನ ಮಾಡಿದರೂ ಇದರ ಮರ್ಮವನ್ನು ಇನ್ನೂ ಈ ಹುಲು ಮಾನವ ಬಿಡಿಸಲಾರದಷ್ಟು ದಡ್ಡನಾಗಿರುವನೂ ಅನಿಸುತ್ತದೆ. ಈ ಒಂದು ದೌರ್ಬಲ್ಯವೇ ಮತ್ತೇ ಮತ್ತೇ ಪ್ರತಿಯೊಬ್ಬರೂ ಒಂದಲ್ಲಾ ಒಂದು ರೀತಿಯಲ್ಲಿ ತಮ್ಮ ತಮ್ಮಲ್ಲಿಯೇ ಘಟಿಸುವ ಪ್ರೇಮಕ್ಕೆ ಸಿಲುಕುತ್ತಿರುತ್ತಾರೆ....

Oh Sorry! ಗೆಳೆಯನ ಕತೆಯನ್ನೆ ಬರೆಯಲಿಲ್ಲ! ಎಂದಾದರೂ ಒಮ್ಮೆ ಬರೆಯೋಣ..................!

ಅಲ್ಲಾ ಪ್ರೇಮ ಎಂದರೇ ಇಷ್ಟೇನಾ?

ಬುಧವಾರ, ಅಕ್ಟೋಬರ್ 3, 2012

ಎಲ್ಲಾ ಇದ್ದೂ ಏನನ್ನೋ

ಮೆಟ್ರೋಪಾಲಿಟನ್ ನಗರಗಳ ಒಂದು ಜಾಯಮನವೆಂದರೇ ತಮ್ಮತನವನ್ನು ಮರೆತು ಕೇವಲ ಕೃತಕವಾದ ಬದುಕನ್ನು ಬದುಕುವುದು.




ನೀವು ಗಮನಿಸಿ ನೀವು ಯಾವುದೇ ಮೆಟ್ರೋ ನಗರಗಳಿಗೆ ಬೇಟಿ ಕೊಟ್ಟರು ಅವುಗಳ ಮೊದಲ ನೋಟ ಒಂದೇ ರೀತಿ ಇರುತ್ತದೆ. ಅದರಲ್ಲಿ ಅಕ್ಷರಶಃ ವ್ಯತ್ಯಾಸವಿರುವುದಿಲ್ಲ.



ಅದೇ ಯಾವುದಾದರೂ ಒಂದು ಚಿಕ್ಕ ನಮ್ಮ ಪಟ್ಟಣಗಳಿಗೆ ಮೊದಲ ಕಾಲೂರಿದರೇ ನಿಮಗೆ ಒಂದು ವ್ಯತ್ಯಾಸ ಸಿಕ್ಕೇ ಸಿಕ್ಕಿರುತ್ತದೆ. ಅದೇ ಅಲ್ಲಿನ ನೈಸರ್ಗಿಕ ಗುಣ.



ದೊಡ್ಡ ದೊಡ್ಡ ನಗರಗಳ ಹಣೆಬರಹವೇ ಹೀಗೆ. ಜನರಿಂದ ಹಿಡಿದು ಪ್ರತಿಯೊಂದು ಯಾವುದೋ ಒಂದು ಯಂತ್ರಕ್ಕೆ ಕೀಲಿ ಕೊಟ್ಟಂತೆ ತಮ್ಮ ಪಾಡಿಗೆ ತಾವುಗಳು ಜೀವಂತ ಚಲಿಸುತ್ತಿರುವಂತೆ ಭಾಸವಾಗುತ್ತಿರುತ್ತದೆ. ಪ್ರತಿಯೊಂದು ಮತ್ತೊಂದರ ಪೊಟೋ ಕಾಪಿಯಂತೆ ಕಾಣಿಸುತ್ತದೆ.



ಆ ನಗರದ ನೈಜತೆಯನ್ನು ಗಮನಿಸಬೇಕೆಂದರೇ ಪುನಃ ಯಾವುದಾದರೂ ಹಳೆಯ ಸಿಟಿ ಮಧ್ಯದ ಗಲ್ಲಿಗಳಿಗೆ ಬೇಟಿ ಕೊಟ್ಟುಕೊಂಡು, ಹೌದು ನಾನು ಇರುವುದು ಚೆನೈ,ಬೆಂಗಳೂರು ಎಂದು ಮನನ ಮಾಡಿಕೊಳ್ಳಬೇಕಾಗುತ್ತದೆ.



ಇಲ್ಲವಾದರೇ ನಾವಿರುವುದು ಹೆಸರೇ ಇಲ್ಲದ ಒಂದು ಕೆಲಸ ಮಾಡುವ ನಗರ ಅನಿಸಿಬಿಡುತ್ತದೆ.



ಎಲ್ಲಿ ನೋಡಿದರೂ ವಾಹನಗಳು, ಸೂಟೂಬೂಟು ಹಾಕಿಕೊಂಡ ತರುಣರ ಮೆರವಣಿಗೆ,ಜನವೋ ಜನ ಯಾವುದೋ ಅಧಮ್ಯವಾದದ್ದನ್ನು ತಮ್ಮದಾಗಿಸಿಕೊಳ್ಳಲು ಎಲ್ಲಿಗೂ ಹೋಗುತ್ತಿದ್ದಾರೆಂಬ ಭಾವನೆಯನ್ನು ಭರಿಸುತ್ತಾರೆ. ಮಾತು ಕತೆಯೆಲ್ಲಾ ಬೇರೆ ಅದೇ ಹಿಂದಿ ಅಥವಾ ಇಂಗ್ಲೀಷ್. ದೊಡ್ಡ ದೊಡ್ಡ ಮಿಂಚುವ ಗಗನಚುಂಬಿ ಕಟ್ಟಡಗಳು ಅದರ ಮಹಾದ್ವಾರದ ಮುಂದೆ ಅದೇ ಸೆಕ್ಯೂರಿಟಿ ಜನಗಳು ಮತ್ತು ಅವರ ಪರೀಕ್ಷೆ. ವೇಗವಾಗಿ ನುಗ್ಗುವ ಎರಡು ಚಕ್ರದ ಬೈಕುಗಳು, ಕಪ್ಪು ಗ್ಲಾಸ್ ಏರಿಸಿಕೊಂಡು ಸೂಯ್ ಎಂದು ದುಳೆಬ್ಬಿಸುವ ಕಾರುಗಳು. ಇದೆಲ್ಲಾ ಐ.ಟಿ ಬಿ.ಟಿ ಪರಿಣಾಮ ಮಾರಾಯ್ರೆ ಎಂದು ಮೂಗು ಎಳೆಯಬೇಡಿ.



ಜಗತ್ತು ಬದಲಾಗುತ್ತಿರುವ ಪರಿ ಇದು. ಸಾಕಾಷ್ಟು ಉದ್ಯೋಗಾವಾಕಾಶಗಳನ್ನು ಈ ಒಂದು ರಂಗ ನಮ್ಮ ತರುಣರಿಗೆ ಕೊಟ್ಟಿದೆ. ಅಷ್ಟರ ಮಟ್ಟಿಗೆ ನಮ್ಮ ನೆಲದ ನಿಜವಾದ ಜೀವಂತ ಜೀವನ ಸೆಲೆಯನ್ನು ಅದು ತನ್ನಲ್ಲಿ ಸೇರಿಸಿಕೊಂಡಿದೆ.



ನೀ ಬದುಕಬೇಕೆಂದರೇ ಅದರಂತೆಯೇ ನೀನು ಕೋಲು ಹಾಕಬೇಕು.



ಆದ್ದರಿಂದ ಹೊಸ ಜಾಗ, ಹೊಸ ಊರುಗಳಿಗೆ, ಹೊಸ ನಗರಗಳಿಗೆ ಬಂದಾಗ ಆಗುವ ಪುಳಕ ನನ್ನಾಣೆ ನಮ್ಮಲ್ಲಿ ಏನೂ ಮಾಡಿದರೂ ಆಗುವುದಿಲ್ಲ.



ಏ ಇದು ಮತ್ತೊಂದು ಬೆಂಗಳೂರು ಅನಿಸುತ್ತದೆ. ಇದೆ ಭಾವನೇ ನೂಯಾರ್ಕ್ ನೋಡಿದಾಗಲೂ ಅನಿಸುತ್ತದೆಯೆಂದರೇ ನಾವು ನೋಡುತ್ತಿರುವುದೆಲ್ಲಾ ಕೇವಲ ಜೆರಾಕ್ಸ್ ಮಾತ್ರ.



ಹೌದು! ಮನುಷ್ಯ ಏನೇ ಮಾಡಿದರೂ ಪ್ರಕೃತಿಯ ಮುಂದೆ ಅದು ಹೇಗೆ ವಿಭಿನ್ನವಾಗಿ ಮತ್ತು ಅಷ್ಟೇ ಅದ್ಬುತವಾಗಿರಲು ಸಾಧ್ಯ? ಅದು ಮತ್ತೊಂದರ ಕನಸು.. ಮತ್ತೊಂದರ ಯೋಚನೆಯೇ ಆಗಿರಲೇ ಬೇಕು.



ನೀವು ಗಮನಿಸಿರಬಹುದು ಇದು ನಗರ, ಪಟ್ಟಣಗಳು, ಕಟ್ಟಡಗಳು, ಕಪ್ಪು ರಸ್ತೆಗಳನ್ನು ಬಿಡಿ ವ್ಯಕ್ತಿ ವ್ಯಕ್ತಿಗಳಿಗೂ ಒಂದೇ ಹೊಲಿಕೆ ಅನಿಸುತ್ತದೆ. ಎಲ್ಲಿಯೇ ನೋಡಿ ಪ್ರತಿಯೊಬ್ಬರೂ ಅದು ಏನೋ ಎಲೆಕ್ಟ್ರಾನಿಕ್ಸ್ ಗ್ಯಾಜೆಟ್ ಕಿವಿಯಲ್ಲಿ ಕೈಯಲ್ಲಿ ಸಿಗಿಸಿಕೊಂಡು ಅವರದೇಯಾದ ಲೋಕದಲ್ಲಿ ಮುಳುಗಿರುತ್ತಾರೆ. ಅವರ ಪ್ರತಿ ವರ್ತನೆ ಒಂದೇ ರೀತಿಯಿರುತ್ತದೆ. ಇಲ್ಲಿಯು ಸೇಮ್ ಟೂ ಸೇಮ್ ಹೊಲಿಕೆ.. ಕಣ್ಣಬಿಟ್ಟ ಕಡೆ ಅದೇ ಪುನಾರವರ್ತಿತ ನೋಟಗಳು. ವ್ಯಕ್ತಿಯ ಗುಣಗಳು ಮಾತ್ರ ಬದಲಾಗದಿದ್ದರೇ ಸಾಕು ಅಲ್ಲವಾ?



ಇನ್ನೂ ಯಾವುದೇ ನಗರಗಳಿಗೆ ಹೊಸದಾಗಿ ಹೆಜ್ಜೆ ಇಟ್ಟಾಗ ಪ್ರತಿಯೊಬ್ಬರಿಗೂ ಮೊದಲು ಬರುವ ಯೋಚನೆ ಇಲ್ಲಿಯ ಆಟೋ, ಟ್ಯಾಕ್ಸಿಗಳು ನಮ್ಮನ್ನು ಹೊಸಬರು ಎಂದುಕೊಂಡು ಸುಲಿಯುತ್ತಾರೆ..! ಹೌದು ಇದು ಇದ್ದುದ್ದೇ ಆ ಮೊಲಕ ನಾವುಗಳು ಮುಂದೆ ಆ ಊರಿನಲ್ಲಿ ಹೇಗೆಲ್ಲಾ ಸರಿಯಾಗಿ ಬದುಕಬೇಕು ಎಂಬ ಪಾಠವನ್ನು ಅವರು ಕಲಿಸುತ್ತಾರೆ. ಅದಕ್ಕಾಗಿ ಹೇಳಿ ಮತ್ತೆ ಆ ಎಲ್ಲಾ ಬಾಯಿಗೆ ಬಂದಂತೆ ಕೇಳುವ ಮಂದಿಗೆ ಒಂದು ಜೈ!!



ಗಮನಿಸಿ ನಮಗೆ ನಮ್ಮ ಸ್ವಂತ ಊರು ಕೊಟ್ಟಷ್ಟು ಅಚ್ಚರಿಗಳನ್ನು ಯಾವಾ ಸ್ವರ್ಗಸಮನಾದ ನಾಡು ಕೊಟ್ಟಿರುವುದಿಲ್ಲ.



ನೀವು ಅನ್ನಬಹುದು ಏಯ್ ನೀ ನಿನ್ನ ಊರಿನಲ್ಲಿಯೇ ಹುಟ್ಟಿ ಬೆಳದಿದ್ದೀಯ ಇನ್ನೂ ಏನೂ ಇದೆ ಅಲ್ಲಿ ಮಣ್ಣಂಗಟ್ಟಿ?



ಆದರೇ ಆ ಜನ್ಮ ಭೂಮಿ ಕೊಡುವ ನೆಮ್ಮದಿಯನ್ನು ಯಾವ ಲಕ್ಷದ ನಗರವು ನಮ್ಮಗಳಿಗೆ ಎಂದು ಕೊಡುವುದಿಲ್ಲ. ಅ ನಿನ್ನ ಚಿಕ್ಕ ಮೊಲೆಯ ಪುಟ್ಟ ಊರು ನಿತ್ಯ ಹೊಸ ಹೊಸ ಆಶ್ಚರ್ಯಗಳಿಗೆ ತೆರೆದುಕೊಳ್ಳುತ್ತಿರುತ್ತದೆ. ಎತ್ತಾ ನೋಡಿದರೂ ಏನೋ ಆಹ್ಲಾದ. ಎತ್ತಾ ತಿರುಗಿದರು ಏನೋ ಒಂದು ಸಂತೋಷ. ಊರೇ ನಾವಾಗಿರುತ್ತೇವೆ ನಾವೇ ಊರಾಗಿರುತ್ತದೆ.



ಅದರ ಪ್ರತಿಯೊಂದು ಚಿಕ್ಕ ಗಲ್ಲಿಯು, ಅಲ್ಲಿರುವ ವಾಸನೆ ಭರಿತ ಹರಿಯುವ ಚರಂಡಿಗಳು, ತಿಪ್ಪೆಗುಂಡಿಗಳು, ಊರ ಹೊರಬಾಗದಲ್ಲಿರುವ ಹಸಿರು ಮರಗಳು, ಅಲ್ಲಿ ಚಿಲಿಪಿಲಿಗುಟ್ಟುವ ಹಕ್ಕಿ ಪಕ್ಷಿಗಳು, ಹಣ್ಣು ಹಣ್ಣು ಮುದುಕರು, ನಿತ್ಯ ಅಚ್ಚರಿಯನ್ನುಂಟು ಮಾಡುವ ಹೊಸ ಹೊಸ ಹುಡುಗಿಯರ ಮುಖಗಳು, ಅದೇ ಗಲ್ಲಿಯಲ್ಲಿ ಎಂದೋ ಮುಖತೊಳೆದಂತೆ ಕಾಣುವ ಚಿಟಿಪಿಟಿಯೆಂದು ಆಟವಾಡುವ ಆ ಮಕ್ಕಳು ಪ್ರತಿಯೊಬ್ಬರೂ ನಮ್ಮವರೇ ಎಂಬ ಭಾವನೆಯೇ ನಮ್ಮನ್ನು ತುಂಬ ನೆಮ್ಮದಿಯಾಗಿ ಸಂತೋಷವಾಗಿ ಇಟ್ಟಿರುತ್ತದೆ.



ಈ ಯಾವುದೇ ಒಂದು ಚಿಕ್ಕ ಭಾವನೇ ನಾವು ಕಾಣುವ ನಮ್ಮ ಹೈಟೆಕ್ ಸಿಟಿಗಳಲ್ಲಿ ಲಕ್ಷ ಕೊಟ್ಟರೂ ಸಿಗಲಾರದು. ಎಲ್ಲಾ ಇದ್ದೂ ಏನನ್ನೋ ಕಳೆದುಕೊಂಡ ಭಾವನೆ ನಿತ್ಯ ಕಾಡುತ್ತಿರುತ್ತದೆ. ಅದಕ್ಕೆ ಅನಿಸುತ್ತದೆ ಸ್ವಲ್ಪ ದಿನಗಳಲ್ಲಿಯೇ ಈ ಎಲ್ಲಾ
ಐಷಾರಮ್ಯ ಜೀವನ ಮಹಾ ಬೋರ್ ಅನಿಸುತ್ತದೆ..!!



ನಿಮಗೋ?

ಮಂಗಳವಾರ, ಸೆಪ್ಟೆಂಬರ್ 25, 2012

ಬಾಯಿ ಚಪಲ


ಮನುಷ್ಯನಿಗೆ ಮಾತ್ರ ಗೊತ್ತಿರುವ ಒಂದೇ ಒಂದು ವಿದ್ಯೆ ಅಂದರೆ ಅದು ಬೇರೆಯವರನ್ನು ಹಾಡಿಕೊಳ್ಳುವುದು.

ಯಾವೊಂದು ಪ್ರಾಣಿಯು ತನ್ನ ಜೊತೆಯವರ ಬಗ್ಗೆ ಕೆಟ್ಟದಾಗಿ ಹಾಡಿಕೊಳ್ಳುವುದಿಲ್ಲ.

ಅಂಥ ಸಂದರ್ಭ ಬಂದರೇ ಎದುಬದುರಾಗಿ ಕಾದಾಡುತ್ತವೆ ಮಾತ್ರ. ಆದರೆ ಈ ಮನುಷ್ಯ ಪ್ರಾಣಿ ಎದುರಿಗೆ ಹೊರಾಡದೆ ಬೆನ್ನಿನ ಹಿಂದೆಯೇ ತನ್ನ ಶತ್ರು ಮಿತ್ರರ ಬಗ್ಗೆ ಮಾತನಾಡುವುದು, ಹೀಯಾಳಿಸುವುದು, ಕೆಟ್ಟದಾಗಿ ನಡೆಸಿಕೊಳ್ಳುವುದನ್ನು ನಾವು ಕಾಣಬಹುದು.

ಇದಕ್ಕೆ ಕಾರಣ ಮನುಷ್ಯ ಬೇರೆಯವರಿಗಿಂತ ತುಂಬ ಬುದ್ಧಿವಂತನಿರಬಹುದೇನೋ. ಇವನು ಯೋಚಿಸುವಷ್ಟು ಬೇರೆ ಯಾವ ಜೀವಿಯು ಯೋಚಿಸಲಾರದು ಅಲ್ಲವಾ?

ನಮ್ಮ ನಮ್ಮ ಜೊತೆಯಲ್ಲಿಯೇ ಬದುಕುವವರ ಬಗ್ಗೆ ಕಥೆ ಕಟ್ಟಿ ಮಾತನಾಡುವುದು ಎಷ್ಟೊಂದು ಕೆಟ್ಟತನವೆಂದರೇ.. ಹೀಗೆ ಅವರಿವರ ಬಾಯಿ ಮಾತಿಗೆ ಬಲಿಪಶುವಾದ ವ್ಯಕ್ತಿಗಳ ಮನೊಸ್ಥಿತಿ ದೇವರಿಗೆ ಪ್ರೀತಿ.

ಯಾರಾದರೂ ಹೊಸಬರು ನಮ್ಮ ನಮ್ಮ ಅಕ್ಕಪಕ್ಕ ಸೇರಿಕೊಂಡರುಅಂದರೇ ಮುಗಿಯಿತು. ಸುಖಾ ಸುಮ್ಮನೇ ಅವರ ವೈಕ್ತಿಕ ವಿಷಯಗಳನ್ನು, ಅವರ ಗತ ಸ್ಥಳ, ವ್ಯಕ್ತಿ, ಕುಟುಂಬ ಇತ್ಯಾದಿ ಪ್ರತಿಯೊಂದನ್ನು ಒಂದು ಕಿವಿಯಿಂದ ಇನ್ನೊಂದು ಕಿವಿಗೆ ವರ್ಗಾವಣೆ ಮಾಡಿಕೊಂಡು ಎಷ್ಟರ ಮಟ್ಟಿಗೆ ವಿಷಯಗಳನ್ನು ಕಲೆ ಹಾಕಿರುತ್ತಾವೆ ಎಂದರೇ ಯಾವುದೇ ನ್ಯೂಸ್ ಎಜೆನ್ಸಿಗೂ ಸಾಧ್ಯವಾಗುವುದಿಲ್ಲ. ಅಷ್ಟೊಂದು ಮಾಹಿತಿಗಳನ್ನು ಕೇವಲ ಅವರಿವರ ಬಾಯಿಯಿಂದಲೇ ಸಂಪಾಧಿಸಿಬಿಟ್ಟಿರುತ್ತಾರೆ.

ಇದು ಇನ್ನೂ ಯಾವುದಾದರೂ ಹೊಸ ಹುಡುಗಿ ಎಲ್ಲಿಯೇ ಆಗಲಿ ಒಂದು ಚಿಕ್ಕ ಗುಂಪು,ಜಾಗ,ಕೆಲಸ ಮಾಡುವ ಆಫೀಸ್ ಇಂಥ ಕಡೆ ಸೇರಿದರೆಂದರೇ ಮುಗಿದೇ ಹೊಯಿತು. ಪ್ರತಿಯೊಂದನ್ನೂ ಪೊಲೀಸ್ ತನಿಖೆಯ ರೀತಿಯಲ್ಲಿ ಹೌದಾ? ಗೊತ್ತಾ? ಹೀಗಂತೇ! ಕಾಲ ಕೆಟ್ಟು ಹೋಯಿತು. ಅವರೀವರ ಮಾತು ಯಾಕೆ ಬಿಡಿ! ಯಾವ ಹುತ್ತದಲ್ಲಿ ಯಾವ ಹಾವು ಇರುತ್ತೋ.. ಹೀಗೆ ಪ್ರತಿಯೊಬ್ಬರೂ ಆ ಹೊಸ ವ್ಯಕ್ತಿಯ ಬಗ್ಗೆ ಮಾತನಾಡಲು ಶುರು ಮಾಡುತ್ತಾರೆ.

ಇದು ಯಾಕೆ?

ನನಗೆ ಅನಿಸುತ್ತದೆ ಇದೊಂದು ಸಾಂಕ್ರಮಿಕ ರೋಗದ ರೀತಿಯಲ್ಲಿ ಪ್ರತಿಯೊಬ್ಬರಲ್ಲೂ ಗೊತ್ತೋ ಗೊತ್ತಿಲ್ಲದೋ ಘಟಿಸುತ್ತಿರುತ್ತದೆ. ಆ ಸಮಯಕ್ಕೆ ಒಂದು ಚಿಕ್ಕ ಟೈಂಪಾಸ್ ಅಥವಾ ಬಾಯಿ ಚಪಲದಿಂದ ಏನೋ ಒಂದು ಮಾತು ಬೇಕು. ಅದೇ ಇದಾಗಿರುತ್ತದೆ.

ಒಮ್ಮೊಮ್ಮೆ ಈ ಚಿಕ್ಕ ಚಿಕ್ಕ ಮಾತುಗಳು ತುಂಬಾನೇ ಅತಿರೇಕಕ್ಕೆ ಹೋಗಿಬಿಡುವುದು ಉಂಟು. ಈ ಮಾತುಗಳೇ ವ್ಯಕ್ತಿ ವ್ಯಕ್ತಿಗಳ ಅವಮಾನಕ್ಕೋ ಅಥವಾ ಜೀವಕ್ಕೂ ಅಪಾಯವಾಗುವ ಸಂದರ್ಭಗಳು ಬರುವುದುಂಟು.

ಮುಖ್ಯವಾಗಿ ಈ ಮಸಾಲೆ ಮಾತುಗಳು ಮಾತನಾಡುವುದಕ್ಕೆ ಮತ್ತು ಕೇಳುವುದಕ್ಕೆ ತುಂಬಾನೆ ಖುಷಿಯಾಗುತ್ತಿರುತ್ತದೆ. ಯಾಕೆಂದರೇ ಇದು ನಮ್ಮಗಳಿಗೆ ಸಂಬಂಧಿಸಿದ ಮಾತಾಗಿರುವುದಿಲ್ಲವಲ್ಲಾ? ಅದು ಬೇರೆಯವರದಾಗಿರುತ್ತದೆ. ಒಮ್ಮೊಮ್ಮೆ ನಮ್ಮಗಳಿಗೆ ತುಂಬಾನೆ ಕುತೂಹಲವಿರುತ್ತದೆ. ಆ ಅಪರಿಚಿತ ವ್ಯಕ್ತಿಯ ಬಗ್ಗೆ ಏನಾದರೂ ತಿಳಿದುಕೊಳ್ಳಬೇಕು. ಚಿಕ್ಕ ಚಿಕ್ಕ ವಿಷಯಗಳನ್ನು ಈ ರೀತಿಯ ಲೂಸ್ ಟಾಕ್ ಮೂಲಕ ವಿಷಯ ಸಂಪಾಧನೆಯನ್ನು ಮಾಡಿಕೊಳ್ಳುವುದಕ್ಕೊಸ್ಕರ ಕೇಳುಗರು ಮಾತನಾಡುವವರನ್ನು ಪ್ರೋತ್ಸಾಹಿಸುತ್ತಾರೆ. ಕೇಳುಗರ ಆಸೆಯೆ ಮಾತನಾಡುವವರನ್ನು ಉತ್ತೇಜಿಸುತ್ತದೆ. ಹಾಗೆ ಹೀಗೆ ಎನ್ನುತ್ತಾ ವ್ಯಕ್ತಿಯ ತುಂಬ ಗೌಪ್ಯ ವಿಷಯಗಳ ಬಗ್ಗೆ, ಆ ವ್ಯಕ್ತಿಗೆ ಇಷ್ಟವಿರದ ವಿಷಯಗಳ ಬಗ್ಗೆ ಹಿಂದೆ ಮುಂದೆ ಮಾತನಾಡಿಕೊಳ್ಳುವುದಕ್ಕೆ ಶುರು ಮಾಡಿರುತ್ತೇವೆ.

ಈ ಮಾತುಗಳು ಅತಿ ಹೆಚ್ಚಾಗಿ ಆಗುವುದು ಎಂದರೇ ತುಂಬಾನೇ ಸುಂದರವಾಗಿರುವ ಹುಡುಗಿಯರು ಕಣ್ಣಿಗೆ ಬಿದ್ದರೇ ಮುಗಿಯಿತು ಹುಡುಗಾಟದ ಮಾತುಕತೆ ಗಾಳಿ ಸುದ್ಧಿಯಾಗಿ ಏನೇನೂ ರೀತಿಯಲ್ಲಿ ಎಲ್ಲಾರ ಬಾಯಿಯಲ್ಲಿ ಹರಿದಾಡಿ, ಸಾವಿರ ಸಲ ಹೇಳಿದ ಸುಳ್ಳು ನಿಜವಾಗುವ ರೀತಿಯಲ್ಲಿ ಒಂದು ಕಡೆಯಿಂದ ಆ ಹುಡುಗಿಯ ಬಗ್ಗೆ ಒಂದು ವಿಚಿತ್ರವಾದ ಇಮೇಜ್ ಬಿಲ್ಡ್ ಮಾಡಿಬಿಟ್ಟಿರುತ್ತಾರೆ.

ಅದು ನಿಜವಾ, ಸುಳ್ಳಾ? ಸತ್ಯವಾಗಿ ಮಾತನಾಡುವವ ಯಾರೊಬ್ಬರಿಗೂ ಗೊತ್ತಿರುವುದಿಲ್ಲ. ಎಲ್ಲರೂ ಹುಬ್ಬೇರುವಂತೆ ಕೇಳುತ್ತಾ ಕೇಳುತ್ತಾ ಇದ್ದರೂ ಇರಬಹುದು ಎಂದುಕೊಂಡಿರುತ್ತಾರೆ. ಯಾಕೆಂದರೇ ಆ ಹುಡುಗಿಯನ್ನು ಮುಖಾತಃ ಈ ಕೇಳುಗರು ಎಂದು ಮಾತನಾಡಿಸಿರುವುದಿಲ್ಲ. ಅವಳ/ನ ಪರಿಚಯವು ಇರುವುದಿಲ್ಲ. ಕೇವಲ ದೂರದಿಂದ ನೋಡುತ್ತಾ ನೋಡುತ್ತಲೆ ಈ ಗೆಳೆಯರ ಮಾತುಗಳನ್ನು ಆ ವ್ಯಕ್ತಿಯ ಜೊತೆಗೆ ಪೋಣಿಸಿಕೊಂಡಿರುತ್ತಾರೆ .

ಈ ರೀತಿಯ  ಮಾತುಗಳು ಆ ಹುಡುಗಿಯ ಕಿವಿಗೆ ಏನಾದರೂ ಬಿದ್ದರೇ ದೇವರೇ ಕಾಪಾಡಬೇಕು.


ಅವರ ಪಾಡಿಗೆ ಅವರಿದ್ದರೂ ಈ ರೀತಿಯ ಮಾತುಗಳು ಪ್ರತಿಯೊಬ್ಬರ ಮೇಲು ಕೇಲವು ಸಮಯ ಬಂದೇ ಬಂದಿರುತ್ತವೆ. ಒಬ್ಬೊಬ್ಬರೂ ತುಂಬಾ ಸಿರೀಯಸ್ ಆಗಿ ತೆಗೆದುಕೊಂಡಿರುತ್ತಾರೆ ಮತ್ತೊಬ್ಬರೂ ಕಿವಿಯ ಮೇಲೆ ಹಾಕಿಕೊಳ್ಳದೆ ಸುಮ್ಮನೇ ಇಗ್ನೊರ್ ಮಾಡಿಬಿಡುತ್ತಾರೆ. ಅದರೇ ಪ್ರತಿಯೊಬ್ಬರೂ ಅದೇ ರೀತಿಯಲ್ಲಿ ಇರುತ್ತಾರೆ ಎಂದುಕೊಳ್ಳಬಾರದು.

ಮನುಷ್ಯನಿಗೆ ಸಮಾಜಿಕ ವಿಷಯಗಳಿಗಿಂತ ಈ ರೀತಿಯ ವ್ಯಕ್ತಿಯ ವೈಕ್ತಿಕ ವಿಷಯಗಳೇ ತುಂಬಾನೇ ರಸವತ್ತಾಗಿರುತ್ತವೆ.

ನೀವುಗಳು ಗಮನಿಸಿರಬಹುದು ಕೇಲವೊಂದು ಪತ್ರಿಕೆಗಳು ಪ್ರಸಿದ್ಧ ವ್ಯಕ್ತಿಗಳ ವೈಕ್ತಿಕ ವಿಷಯಗಳನ್ನು, ನಾಲ್ಕು ಗೋಡೆಯ ಮಧ್ಯದಲ್ಲಿನ ವಿಷಯಗಳನ್ನು ಸಾರ್ವಜನಿಕರಿಗೆ ಸುದ್ಧಿ ಮತ್ತು ವರದಿಯಾಗಿ ಮಸಾಲೆ ಭರಿತವಾಗಿ ಊಣಬಡಿಸುತ್ತವೆ. ಇಲ್ಲಿ ಇರುವುದು ಕೇವಲ ಅದೇ ಹುಡುಗಾಟದ ಬೇರೊಬ್ಬರ ಬಗ್ಗೆ ತಲೆ ಕೆಡಿಸಿಕೊಳ್ಳುವ ಮನಸ್ಸು ಮಾತ್ರ. ಈ ರೀತಿಯಲ್ಲಿ ತಮ್ಮ ಪತ್ರಿಕೆಯ ಪ್ರಸಾರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಹಪಾಪಿ.

ಇಂಥ ಗೀಳನ್ನು ಚಿಕ್ಕದಾಗಿದ್ದಲೇ ಚಿವುಟಿಯಾಕಬೇಕು. ಸುಮ್ಮನೇ ಬೇರೆಯವನ್ನು ಹಾಡಿಕೊಳ್ಳುವುದು. ಅವರ ಹಿಂದೆ ಮುಂದೆ ಬಾಯಿಗೆ ಬಂದಂತೆ ಗುಸು ಗುಸು ಪಿಸ ಪಿಸ ಎನ್ನದೇ ಇರುವ ಯಥಾಸ್ಥಿತಿಯನ್ನು ಅರ್ಥ ಮಾಡಿಕೊಂಡು ಆ ವ್ಯಕ್ತಿಯ ಒಳ್ಳೆಯತನಗಳನ್ನು ಅರಿಯುವಂತಾಗಿರಬೇಕು. ಪ್ರತಿಯೊಬ್ಬರೂ ಒಂದೊಂದು ರೀತಿಯಲ್ಲಿ ವಿಭಿನ್ನವಾಗಿರುತ್ತಾರೆ. ಕೇಲವೊಂದು ಸಮಯದಲ್ಲಿ ಯಾವುದೋ ಕೆಟ್ಟ ಗಳಿಗೆಯಲ್ಲಿ ಕೆಲವೊಂದು ಚಿಕ್ಕ ತಪ್ಪುಗಳು ಜರುಗಿದ್ದರೂ ಅವನ್ನೇ ದೊಡ್ಡದು ಮಾಡಿಕೊಂಡು ಆ ವ್ಯಕ್ತಿಯ ಬಗ್ಗೆ ಸುದ್ಧಿ ಮಾಡಬಾರದು.

ಇಂದು ನಾವು ಬೇರೊಬ್ಬರ ಬಗ್ಗೆ ಮಾತನಾಡುವ ಮಾತು ನಮ್ಮ ಬಗ್ಗೆ ಮತ್ತೊಬ್ಬರ ಮಾತಾಗಬಾರದು ಅಲ್ಲವಾ?

ಗುರುವಾರ, ಸೆಪ್ಟೆಂಬರ್ 20, 2012

ಇದು ಆಗೋ ಮಾತಲ್ಲಾ


ನಮ್ಮಿಂದ ಏನೂ  ಮಾಡಲು ಸಾಧ್ಯವಾಗದ ಅಸಹಾಯಕತೆಯ ಸಮಯದಲ್ಲಿಯೇ ಅನಿಸುತ್ತದೆ. ನಾವುಗಳು ನಮ್ಮ ಸುತ್ತಲಿನವರ ಜೊತೆಯಲ್ಲಿ ಆ ವಿಷಯದ ಬಗ್ಗೆ ತುಂಬಾನೆ ಹೆಚ್ಚು ಮಾತನ್ನಾಡುತ್ತೇವೆ. ಆ ಸಮಯಕ್ಕೆ ನಾವುಗಳು ಏನನ್ನೂ ಮಾಡದವರಾಗಿರುತ್ತೇವೆ. ಅದರ ನಿಜ ರೂಪವೇ ನಮ್ಮಿಂದ ಹೀಗೆ ಪುಂಕಾನು ಪುಂಕವಾಗಿ ಬರುವ ಮಾತುಗಳು.

ಏನಾದರೂ ಆಗಿರಬಹುದು. ನಮ್ಮಿಂದ ಆಗುವಂತಹ ನಮಗೆ ನಿಲುಕುವ ಕಾರ್ಯಗಳ ಬಗ್ಗೆ  ಹೆಚ್ಚಿಗೆ ಬೇರೊಬ್ಬರ ಜೊತೆಯಲ್ಲಿ ಯಾವತ್ತಿಗೂ ಹೇಳಿಕೊಂಡಿರುವುದೇ ಇಲ್ಲ. ಅಂಥ ಒಂದು ಕಾರ್ಯಗಳನ್ನು ಮೂಕವಾಗಿ ಮುಗಿಸಿರುತ್ತೇವೆ. ಯಾಕೆಂದರೇ ಅಲ್ಲಿ ಮಾತಿಗಿಂತ ಮಾಡುವ ಕೆಲಸ ಮುಖ್ಯವಾಗಿರುತ್ತದೆ.

ಆದಕ್ಕೆ ಇರಬೇಕು ನಮ್ಮಿಂದ ಬದಲಾಯಿಸಲಾರದಂತಹ ವ್ಯವಸ್ಥೆಯ ಬಗ್ಗೆ ನಾವುಗಳು ಕೊಡುವ ಲೆಕ್ಚರ್ ಗಳ ಬಗ್ಗೆ ಲೆಕ್ಕಾನೆ ಇರುವುದಿಲ್ಲ.

ಯಾರಾದರೂ ನಾವಾಡುವ ಮಾತುಗಳನ್ನು ಕೇಳಿಸಿಕೊಂಡುಬಿಟ್ಟರೆ ನಿಜವಾಗಿಯೂ ನಂಬಿಬಿಡುತ್ತಾರೆ. ಅದು ಕೇವಲ ಮಾತು ಎಂಬುದನ್ನು ದೇವರಾಣೆಗೂ ಯಾರೂ ನಂಬುವುದಿಲ್ಲ. ಆದರೇ ಅದೇ ಮಾತುಗಳು ಸುಮಾರು ದಿನಗಳಾದ ಮೇಲೆ ಪುನಾರವರ್ತನೆಗೊಂಡರೇ ಕೇಳುಗರು ಮೂಗು ಮುರಿಯುತ್ತಾರೆ!

ಇದಕ್ಕೆ ಪೂರಕವಾಗಿ ಯಾರದರೂ ನಮಗೆ ಸರಿ ಹೊಂದುವ ಮಿತ್ರಮಂಡಳಿ ಸಿಕ್ಕಿಬಿಟ್ಟರೆ ಮುಗಿಯೇ ಹೊಯ್ತು. ನಾವಾಡುವ ಪ್ರತಿ ಮಾತಿಗೆ ಒಂದು ಚೂರು ಪ್ರೋತ್ಸಾಹ ಸಿಕ್ಕಿದರೇ ಕೇಳುವುದೇ ಬೇಡ.

ಹಳ್ಳಿಯಿಂದ ದಿಲ್ಲಿಯವರೆಗೆ ಚಿಕ್ಕ ವಿಷಯದಿಂದ ದೊಡ್ಡ ದೊಡ್ಡ ವಿಷಯಗಳ ಬಗ್ಗೆ ಎಲ್ಲ ಗೊತ್ತಿರುವ ಙ್ಞಾನವನ್ನು ಉಪಯೋಗಿಸಿಕೊಂಡು ಜಾಡಿಸಿಬಿಟ್ಟಿರುತ್ತೇವೆ.

ಏಯ್ ನಾನು ಆ ಜಾಗದಲ್ಲಿರಬೇಕಾಗಿತ್ತು. ನಾನು ಹೀಗೆ ಮಾಡುತ್ತಿದ್ದೆ. ಆ ಕೆಲಸ ಹೇಗೆ ಇರಬೇಕಾಗಿತ್ತು ಎಂಬುದನ್ನು ತೋರಿಸುತ್ತಿದ್ದೆ. ಈಗ ಇರುವ ಈ ಜನಗಳು ಬರಿ ವೇಸ್ಟ್ ಏನ್ ಮಾಡುವುದು ಹಲ್ಲು ಇದ್ದವರಿಗೆ ಕಡಲೆ ಇಲ್ಲ, ಕಡಲೆ ಇದ್ದವರಿಗೆ ಹಲ್ಲು ಇಲ್ಲ!

ನಮ್ಮ ದೇಶಕ್ಕೆ ಭವಿಷ್ಯವಿಲ್ಲ ಕಣ್ರೀ. ನಮ್ಮ ರಾಜಕೀಯ ಎಂದೆಂದಿಗೂ ಬದಲಾಗುವುದಿಲ್ಲ. ಈ ನನ್ನ ಮಕ್ಕಳು ನಮ್ಮ ದೇಶವನ್ನು ಕೊಳ್ಳೆ ಹೊಡೆಯಲೆಂದೇ ಅಧಿಕಾರ ಹಿಡಿದಿದ್ದಾರೆ... ಯಾವಾ ಅಣ್ಣಾ ಹಜಾರೆ ಬಂದರೂ ಇವರುಗಳು ಮಾಡುತ್ತಿರುವ ಭ್ರಷ್ಟಾಚಾರವನ್ನು ಎಂದಿಗೂ ನಿಲ್ಲಿಸಲು ಸಾಧ್ಯವಿಲ್ಲ.

ನಮ್ಮ ದೇಶದ ಅಧಿಕಾರ ನವ ಯುವಕರ ಕೈಗೆ ಸಿಗಬೇಕು. ಆಗ ನೋಡಿ ಏನೇನ್ ಮಾಡುತ್ತಾರೆ. ಆ ಸಮಯ ಬರಬೇಕು. ಕಟ್ಟ ಕಡೆಯ ಸಾಮಾನ್ಯ ಮನುಷ್ಯನ ಕಣ್ಣೀರನ್ನು ಒರೆಸುವ ಕೈ ಬರಬೇಕು. ಆಗ ಮಾತ್ರ ನಾವು ಮುಂದುವರೆಯಲು ಸಾಧ್ಯ ಇತ್ಯಾದಿ ಇತ್ಯಾದಿ ದೇಶಾಭಿಮಾನದ ಮಾತುಗಳು.

ಇದರಲ್ಲಿ ಒಂದೇರಡು ಸತ್ಯವಾದ ಮಾತುಗಳಾಗಿರಬಹುದು. ಯಾಕೆಂದರೇ ಅವನು ನಿತ್ಯ ನೋಡುವ ಸಮಾಜದಿಂದ ಅದನ್ನು ಹಸಿ ಹಸಿಯಾಗಿ ತೆಗೆದುಕೊಂಡಿರುತ್ತಾನೆ. ಅದನ್ನು ಆ ರೀತಿಯಲ್ಲಿ ತನ್ನ ಬಾಯಿಂದ ಕಾರಿಕೊಳ್ಳದೇ ಬೇರೆ ದಾರಿಯೇ ಇಲ್ಲ. ಯಾಕೆಂದರೇ ಈ ವ್ಯಕ್ತಿ ಅಷ್ಟರ ಮಟ್ಟಿಗೆ ಅಸಹಾಯಕ.

ತನ್ನಿಂದ ವ್ಯವಸ್ಥೆಯನ್ನು ಬದಲಾಯಿಸಲಾಗದು ಎಂಬ ಒಂದು ಚಿಕ್ಕ ನೆರಳು ಅವನ ಜೊತೆಯಲ್ಲಿ ಅಂಟಿಕೊಂಡುಬಿಟ್ಟಿರುತ್ತದೆ. ಆ ಒಂದು ಸತ್ಯವನ್ನು ಜೀರ್ಣಿಸಿಕೊಳ್ಳಲಾರದ ಮಟ್ಟಿಗೆ ಈ ರೀತಿಯ ಆದರ್ಶದ ಮತ್ತು ಧೈರ್ಯದ ಮಾತು ತನ್ನ ಜೊತೆಯವರ ಜೊತೆಯಲ್ಲಿ ಹೇಳಿಕೊಂಡಿರುತ್ತಾನೆ.

ಇವನಿಗಂತೂ ಮುಂಜಾನೆ ಎದ್ದರೇ ಯಾವೊಂದು ಚಿಕ್ಕ ಅಧಿಕಾರವು ಸಿಗಲಾರದು. ಅಷ್ಟರ ಮಟ್ಟಿಗೆ ಆ ಒಂದು ಸತ್ಯ ತನಗೆ ತಾನೆ ಕಾಣುತ್ತಿರುತ್ತದೆ.

ನನಗೆ ಎನಿಸುತ್ತದೆ ಮದ್ಯಮ ವರ್ಗದ ಜನರಲ್ಲಿ ಈ ರೀತಿಯಾಗಿ ಸಮಾಜದ ಬಗ್ಗೆ ಸಮಯ ಸಿಕ್ಕಾಗಲೆಲ್ಲ ತನ್ನ ಕನಸನ್ನು ಬಿತ್ತರಿಸುತ್ತಿರುತ್ತಾನೆ. ಇದೆ ಅವನಿಗೆ ಒಂದು ನೆಮ್ಮದಿ. ಅಷ್ಟರಮಟ್ಟಿಗೆ ಏನಾದರೂ ಮಾಡಲೇಬೇಕು ಎಂಬ ಕಾತುರತೆಯನ್ನು ತನ್ನ ತಲೆಯ ತುಂಬ ತುಂಬಿಕೊಂಡಿರುತ್ತಾನೆ.

ಇದಕ್ಕೆ ಪೂರಕವಾಗಿ ಅವನು ಓದುವ ಕಥೆಯ ಕಥಾ ವ್ಯಕ್ತಿಗಳು, ನೋಡುವ ಸಿನಿಮಾದ ನಾಯಕನ ನಡಾವಳಿ ಈ ಎಲ್ಲಾ ಕಲ್ಪನೆಯ ಪ್ಯಾಂಟಸಿ ತುಂಬ ಮೆಚ್ಚುಗೆಯಾಗುತ್ತಿರುತ್ತದೆ. ತನ್ನಿಂದ ಮಾಡಲಾರದ ಕೆಲಸಗಳು. ಆ ಧೈರ್ಯ, ವ್ಯವಸ್ಥೆಯ ವಿರುದ್ಧ ಎದ್ದು ನಿಲ್ಲುವ ಗಡಸುತನ ಪ್ರತಿಯೊಂದನ್ನು ತಾನೇ ಮಾಡುತ್ತಿದ್ದೇನೆ ಎಂಬ ರೀತಿಯಲ್ಲಿ ಖುಷಿಪಡುತ್ತಾನೆ.

ಈ ರೀತಿಯ ಭಾವನೆಯ ತಳಮಳವನ್ನು ಪ್ರತಿಯೊಬ್ಬರೂ ಒಂದೊಂದು ರೀತಿಯಲ್ಲಿ ತಮ್ಮ ತರುಣಾವಸ್ಥೆಯಲ್ಲಿ ಅನುಭವಿಸಿಯೇ ಇರುತ್ತಾರೆ.

ನನಗೆ ಅನಿಸುತ್ತದೆ ಅಷ್ಟರ ಮಟ್ಟಿಗೆ ಪ್ರತಿಯೊಬ್ಬರಿಗೂ ಒಂದು ರೀತಿಯಲ್ಲಿ ಅ ಸಂಸ್ಕಾರವಾಗಿರುತ್ತದೆ. ಒಳ್ಳೆಯತನ ಎಂಬುವುದು ನಮ್ಮ ಸಂಸ್ಕೃತಿಯಲ್ಲಿಯೇ ನಮಗೆ ಗೊತ್ತಾಗದ ರೀತಿಯಲ್ಲಿ ಎಲ್ಲರಲ್ಲೂ ನಿಂತಿರುತ್ತದೆ. ಅದರ ಪರಿಣಾಮವೇ ತನ್ನ ಬಗ್ಗೆ ಅಲ್ಲದೆ ಬೇರೆಯವರ ಬಗ್ಗೆ, ತನ್ನ ಸುತ್ತಲಿನವರ ಬಗ್ಗೆ, ವ್ಯವಸ್ಥೆಯ ಬಗ್ಗೆ, ತಾನಿರುವ ದೇಶ, ರಾಜಕೀಯ, ಸರ್ಕಾರ ಮತ್ತು ಅಧಿಕಾರದ ಬಗ್ಗೆ ತಾನು ಕಂಡೊಂಡ ಒಳ್ಳೆಯತನವನ್ನು ಆಶಿಸುತ್ತಾನೆ.

ಈ ಸಂವೇದನೆ ಪ್ರತಿಯೊಬ್ಬರಲ್ಲೂ ಉದ್ಬವಿಸಿಸುತ್ತಿರುತ್ತದೆ. ಆಗ ತನಗೆ ಅನಿಸಿದ್ದನ್ನು ಹೇಳಿಕೊಳ್ಳುತ್ತಾ ಹೇಳಿಕೊಳ್ಳುತ್ತಾ ಸಮಾಧಾನಪಟ್ಟುಕೊಳ್ಳುತ್ತಾನೆ. ಅಲ್ಲಿ ಇರುವುದು ಬರೀ ಒಳ್ಳೆಯದು ಮಾತ್ರ. ಯಾವೊಂದು ಲಾಭ, ಲೋಭವಿರುವುದಿಲ್ಲ.

ಇದು ಸ್ತ್ರೀ ಸಾಮಾನ್ಯನ ಹಗಲು ಕನಸು! ಇದೂ ಎಂದಿಗೂ ಜಾರಿಬರಲಾರದಂತಹದ್ದು.


ಎಂದೋ ಓದಿದ ಆದರ್ಶ, ಎಲೋ ನೋಡಿದ ವ್ಯವಸ್ಥೆಯ ಕಲ್ಪನೆಯ ಕೂಸೆ ಇದು. ಇದರ ಹಿಡೇರಿಕೆಗಾಗಿ ನಿತ್ಯ ತನ್ನಲ್ಲಿಯೇ ತಾನು ಕೊರಗುತ್ತಿರುತ್ತಾನೆ.

ಗಮನಿಸಿ ಎಲ್ಲಾ ಮುಗಿದ ಮುದುಕರ ಮಾತುಗಳನ್ನಾ.. ಅವರು ಎಂದಿಗೂ ಇಂದಿನ ಪ್ರಸ್ತುತ ವ್ಯವಸ್ಥೆಯನ್ನು ಹಾಡಿ ಹೊಗಳುವುದಿಲ್ಲ. ಅವರನ್ನು ಕೇಳಿ ಆದರ್ಶ, ಒಳ್ಳೆಯತನ,ಬದಲಾವಣೆ ಎಂದರೇ ಅವರ ಅನುಭವದಲ್ಲಿ ಕಂಡುಕೊಂಡ ಪುರಾಣವನ್ನೇ ಬೆಚ್ಚಿಬೀಳುವಂತೆ ತೆರೆದಿಡುತ್ತಾರೆ. ಹಾಗೆಯೇ ನಮ್ಮಂತಹ ಹಗಲು ಕನಸಿನ ಹೋರಾಟವನ್ನು ಕಂಡು ಬಚ್ಚು ಬಾಯಿಯಲ್ಲಿ ನಕ್ಕುಬಿಡುತ್ತಾರೆ.

ಇದು ಆಗದು ಹೋಗದು ಬಿಡಾಪ್ಪಾ ಅಂದುಬಿಡುತ್ತಾರೆ. ಆದರೇ ನಮ್ಮ ಯುವ ಬಿಸಿ ರಕ್ತ ಕೇಳಬೇಕಲ್ಲಾ.. ಕಲ್ಲನ್ನೇ ಕುಟ್ಟಿ ಪುಡಿ ಮಾಡುವಷ್ಟು ಉತ್ಸಾಹದ ಮೂಟೆ.

ಇಂಥ ಆಸೆಯ ಮಾತುಗಳು ಕಾರ್ಯ ರೂಪಕ್ಕೆ ತರುವ ಪ್ರಯತ್ನವಾಗಬೇಕು. ಕನಸು ಕೇವಲ ಕನಸಾಗಬಾರದು. ನಿತ್ಯ ಮಾತನಾಡುವ ಟಾಪಿಕ್ ಗಳು ಕೇವಲ ಒಂದು ವಾದವಾಗಬಾರದು.

ಬದಲಾವಣೆಗೆ ಹೊಂದಿಕೊಳ್ಳುವ ಮುನ್ಸೂಚನೆ ಇದೇ ಆಗಿರಬಹುದಲ್ಲಾ?

ಮಂಗಳವಾರ, ಸೆಪ್ಟೆಂಬರ್ 11, 2012

ನೀ ನನ್ನ ಉಸಿರು!


ಹೊವಂತೆ ನೀನು ನಗುತಿರಬೇಕು..

ಹೌದು! ನೀನು ನನ್ನ ಜೊತೆಯಿರುವಷ್ಟೂ ದಿನ ನಗು ನಗುತಾ ಸಂತೋಷವಾಗಿರಬೇಕು. ಇದೆ ನನ್ನ ಮಹದಾಸೆ. ನನಗೆ ಗೊತ್ತೂ ನೀನು ಯಾವತ್ತೂ ಮೊಗಿಗೆ ಕವಣೆ ಕಟ್ಟಿಕೊಂಡು ಕೆಲಸ ಕೆಲಸ ಎಂದು ನಿನ್ನ ಮನೆಯವರಿಗಾಗಿ ದುಡಿದು ಅವರನ್ನು ಒಂದು ದಡ ಸೇರಿಸಬೇಕು ಎಂಬುದು ನಿನ್ನ  ಕನಸು. ನಾನು ನೀನು ಸೇರಿದ ಮೇಲೆ ಆ ನಿನ್ನದೆಯಾದ ನಿನ್ನ ಮನೆ ನನ್ನದು ಆಗುತ್ತದೆ. ನನ್ನ ಕಣ್ಣಾಸರೆಯಲ್ಲಿ ನಿಮ್ಮ ಕುಟುಂಬವನ್ನು ಇಬ್ಬರೂ ಒಟ್ಟಿಗೆ ನೋಡಿಕೊಳ್ಳೋಣ.

ಉಸಿರು ಉಸಿರು ಬೇರತ ಪ್ರೇಮಕ್ಕೆ ಎಲ್ಲೆ ಎಲ್ಲಿಯದೂ..?

ನಿನ್ನ ಆ ಸುದೀರ್ಘವಾದ ಪತ್ರವನ್ನು ಮತ್ತೇ ಮತ್ತೇ ಅದನ್ನೇ ಓದಿದೆ. ಎಷ್ಟು ಬಾರಿ ಓದಿದರೂ ಏನೋ ಒಂದನ್ನು ಮೀಸ್ ಮಾಡಿಕೊಳ್ಳುತ್ತಿದ್ದೇನೆ ಅನಿಸಿಬಿಟ್ಟಿತು.

ಅದು ನೀನೇ. ನೀನ್ನ ಹೆಗಲಿಗೆ ಹೆಗಲು ತಾಗಿಸಿಕೊಂಡು ಹೀಗೆ ಕುಳಿತಿರಬೇಕು ಎಂದು ಅನಿಸುತ್ತಿದೆ.

ಅಲ್ಲಾ ಕಣೇ ಇಷ್ಟರ ಮಟ್ಟಿಗೆ ನನ್ನನ್ನು ನೀನು ಅರ್ಥ ಮಾಡಿಕೊಂಡಿರುವೆಯಲ್ಲಾ ನನಗೆ ಆಶ್ಚರ್ಯವಾಗುತ್ತಿದೆ! ನೀ ನನ್ನ ಜೀವನದ ಜೊತೆಗಾತಿಯೆಂದು ಅಂದು ತೀರ್ಮಾನಿಸಿ ನಿನ್ನ ಸ್ನೇಹವನ್ನು ಸಂಪಾದಿಸಿದ್ದು ಜಗತ್ತಿನ ಯಾವ ಸಂಪತ್ತಿಗೂ ಕಮ್ಮಿ ಇಲ್ಲ ಬಿಡು!

ಗೆಳತಿ ಇದೆ ಅನಿಸುತ್ತದೆ ಪ್ರೇಮಾನುರಾಗ! ಇದೆ ಪ್ರೀತಿಯ ತುಡಿತ! ನಾನು ನೀನಾಗಿ, ನೀನು ನಾನಾಗಿ ಭಾವಿಸುವ ಸುಂದರ ಅನುಭವವೇ ಈ ಪ್ರೇಮ!

ನನಗಂತೂ ನಿನ್ನ ಮುಖವೇ ನಿತ್ಯ ಕಣ್ಣ ಮುಂದೆ ಬರುತ್ತಿದೆ. ಅಲ್ಲ ಕಣೇ ಆ ನಿನ್ನ ಮುಗ್ಧವಾದ ಮುಖದಲ್ಲಿ ಏನನ್ನೋ ಹುಡುಕುವ ಆ ನಿನ್ನ ಎರಡು ಕಣ್ಣುಗಳು.. ಆಸೆಯ ಅವಕಾಶವನ್ನೇ ಹರಸುವ ಆ ನಿನ್ನ ತುಟಿಗಳು.. ಇವುಗಳೇ ಅನಿಸುತ್ತದೆ ಈ ಹುಡುಗಿಯನ್ನು ನಂಬಬಹುದು ಎಂಬ ನನ್ನ ನಿರ್ಧಾರವನ್ನು ಅಂದು ಗಟ್ಟಿ ಮಾಡಿದ್ದು.

ಗೊತ್ತಾ ನನಗಂತೂ ನೀ ಸಿಗುವವರೆಗೂ ಅತ್ಯಂತ ಆತ್ಮೀಯರು ಎಂಬ ಗೆಳತಿಯರು ಯಾರೂ ಇರಲಿಲ್ಲ. ಎಲ್ಲಾ ಹಾಯ್, ಬಾಯ್ ಸ್ನೇಹಿತಿಯರೆ...

ಬಡ್ಡಿ ಮಗಂದು ಈ ಬದುಕು ಅಂಥ ಅವಕಾಶವನ್ನೇ ನನಗೆ ಕೊಡಲ್ಲಿಲ್ಲ!

ಸಿನಿಮಾ ಮತ್ತು ಗೆಳೆಯರಲ್ಲಿ ಸಂಭವಿಸುತ್ತಿದ್ದ ಈ ಪ್ರೀತಿ ಪ್ರೇಮ ಪ್ರಕರಣಗಳನ್ನು ಕೇಳಿ ಕೇಳಿ ನನ್ನಲ್ಲಿ ನಾನೇ ನಗುತ್ತಿದ್ದೆ. ಅಲ್ಲಾ ಈ ಎರಡುವರೆ ಅಕ್ಷರಗಳಲ್ಲಿ ಅಂಥಾ ಶಕ್ತಿಯಾದರೂ ಏನಿದೆ? ಯಾಕೆ ಈ ಜಗತ್ತು ಈ ಎರಡುವರೆ ಅಕ್ಷರಗಳ ಸುತ್ತಾನೇ ಗಿರುಕಿ ಹೊಡೆಯುತ್ತಿದೆ ಅನಿಸುತ್ತಿತ್ತು. ಅಲ್ಲಾ ಎಷ್ಟೊಂದು ಪರಿ ಅವರ ಆ ತಳಮಳ? ಅದಕ್ಕಾಗಿಯೇ ನಾವು ಜೀವಿಸಿದ್ದೀವಿ ಎಂಬಂತೆ ಕಾಲೇಜು ಪಾಠಗಳಿಗೆ ಗೋಲಿ ಮಾರ್ ಹೊಡೆದು ತಪಸ್ಸಿನೋಪಾದಿಯಲ್ಲಿ ಕ್ಷಣ ಕ್ಷಣವೂ ನನ್ನ ಗೆಳೆಯರು ಅವರ ಪ್ರೀಯತಮೆಗಾಗಿ ಬಿಟ್ಟ ಕಣ್ಣನ್ನು ಬಿಟ್ಟುಕೊಂಡು ಕಾಯುತ್ತಿದ್ದರು. ಆ ದಿನಗಳನ್ನು ನೆನಸಿಕೊಂಡು ಇಂದು ನನಗೆ ನಾನೇ ಖುಷಿಪಟ್ಟಿದ್ದೇನೆ.

ಹೌದಲ್ಲವಾ?  ನಿನ್ನ ಜೊತೆಯಲ್ಲಿದ್ದಾಗ ನನಗೆ ಈ ಅನುಭವವೇ ಆಗಿರಲಿಲ್ಲ. ಎಂದರೇ ಅರ್ಧ ಸತ್ಯ ಮಾತ್ರ. ನೀನು ನಿತ್ಯ ನನಗೆ ಸಿಗುತ್ತಿದ್ದೆ, ನಿತ್ಯ ಮಾತನಾಡುತ್ತಿದ್ದೆ. ಆ ರೀತಿಯಲ್ಲಿ ಏನೂ ವಿಶೇಷವಾದ ವಿರಹದ ಭಾವನೆ ಎಂದೂ ಉಂಟಾಗಿರಲಿಲ್ಲ.

ನೀನು ಅಲ್ಲಿಗೆ ಹೋದ ಮೂರು ದಿನಗಳು ಅಕ್ಷರಶಃ ನಾ ಹುಚ್ಚನಾಗಿಬಿಟ್ಟಿದ್ದೇ. ಯಾವ ರೀತಿಯಲ್ಲಿ ನಿನ್ನನ್ನು ಸಂಪರ್ಕಿಸಬೇಕು ಎಂದು ಅರಿಯದವನಾಗಿದ್ದೇ. ಎಲ್ಲಾ ದಾರಿಗಳು ಬಂದ್. ನಿನ್ನ ಹೆತ್ತವರನ್ನು ವಿಚಾರಿಸೋಣವೇ ಎಂದರೇ.. ಅವರಿಗೆ ಚಿಕ್ಕದಾದ ಅನುಮಾನವನ್ನುಂಟು ಮಾಡುವುದು ಯಾಕೆ ಎಂಬ ಭಯ.. ಕೊನೆಗೆ ನಾ ಈ ಪೇಸ್ ಬುಕ್ ಮೊರೆಹೋಗಿದ್ದು.

ನನಗೆ ಅನಿಸುತ್ತದೆ. ಇದೀಗ ನೀ ನಿನ್ನ-ನನ್ನ ಮುಂದಿನ ಪ್ರೀತಿಯ ದಾರಿಯ ಬಗ್ಗೆ ತುಂಬ ನಿಚ್ಚಳವಾಗಿ ಯೋಚಿಸಿರುವುದು. ಅದಕ್ಕೇ ಕಣೇ ನಾನು ನಿನ್ನನ್ನು ನಿತ್ಯ ಹೇಳುತ್ತಿದ್ದದ್ದು. ನೀ ತುಂಬ ಸುಂದರಿ ಮತ್ತು ಬುದ್ಧಿವಂತೆ ಎಂದು. ನನಗೆ ಗೊತ್ತೂ ತುಂಬ ಉತ್ತಮವಾದ ಜೀವನದ ನಿರ್ಧಾರಗಳನ್ನು ಸಮರ್ಥವಾಗಿ ನೀ ತೆಗೆದುಕೊಳ್ಳುವುವೆ.

ಇದುವರೆಗೂ ಇಷ್ಟೊಂದು ದಿಟ್ಟವಾಗಿ ಮತ್ತು ನೀ ವಾಪಸ್ಸ್ ಬಂದ ನಂತರ ಮುಂದೆ ಏನೇನೂ ಮಾಡಬೇಕು? ಹೀಗೆ ನೀ ಚಿಂತಿಸಿದ ಪರಿಯನ್ನು ಕಂಡು ಈ ನಿನ್ನ ಅದೇ ಪೋಲಿ  ಫುಲ್ ಖುಶ್!


ನಮ್ಮನ್ನು ನಾವು ಕಾಣುವುದು ನಮ್ಮ ಪ್ರೀತಿಪಾತ್ರರ ಹೃದಯದಲ್ಲಿ ಅನಿಸುವಂತೆ ನಾನು ಈ ರೀತಿ ನಿನ್ನ ಹೃದಯ ಸಾಮ್ರಾಜ್ಯದಲ್ಲಿ ಸ್ಥಾಪಿತವಾಗಿರುವುದು ನನ್ನ ಸೌಭಾಗ್ಯವೇ ಸರಿ! ನೀ ಕೇವಲ ನನ್ನ ಬಗ್ಗೆ ಮಾತ್ರ ಯೋಚಿಸಿರದೇ ನನ್ನ ಅಮ್ಮ ಮತ್ತು ನನ್ನ ಪ್ರೀತಿಯ ತಂಗಿಯ ಬಗ್ಗೆ ಈ ರೀತಿಯೆಲ್ಲಾ ಕಾಳಜಿಯನ್ನು ಹೊಂದಿರುವೆಯೆಲ್ಲಾ ಎಂದು ಮನಸ್ಸಿಗೆ ತುಂಬಾನೆ ಸಮಾಧಾನವಾಯಿತು.

ಈ ನಿನ್ನ ಮನದಾಳದ ನುಡಿಗಳನ್ನೇ ನನ್ನ ಕುಟುಂಬದವರ ಜೊತೆಯಲ್ಲಿ ನಿನ್ನ ನನ್ನ ಮದುವೆಯ ಮಾತುಗತೆಗೆ ಸೇತುವೆಯಾಗಿ ಬಳಸಬೇಕೆಂದುಕೊಂದಿದ್ದೇನೆ.

ಇದು ಎಲ್ಲಾ ಆಕಸ್ಮಿಕ ಅನಿಸುತ್ತದೆ. ನನಗೆ ಇಂದು ನೆನಸಿಕೊಂಡರೇ ಮೂರುವರೆ ವರುಷಗಳನ್ನು ಮೂರು ಕ್ಷಣಗಳೋಪಾದಿಯಲ್ಲಿ ಕರಗಿಬಿಟ್ಟಿದೆ. ಎಂದೂ ಎಂದು ನನಗೆ ಗೊತ್ತಿಲ್ಲಾ! ನಿನ್ನನ್ನು ಅಂದು ನಾನು ತುಂಬಾನೆ ಇಷ್ಟಪಟ್ಟ ದಿನ. ಆ ನಿನ್ನ ಗತ ದಿನಗಳ ಬಗ್ಗೆ ನೀ ನನ್ನೊಂದಿಗೆ ಹಾಕಿಕೊಂಡ   ಆ ಚಿಕ್ಕ ಮೆಲುಕು ನನಗೆ ತುಂಬ ಹಿಡಿಸಿತು. ಹೆಣ್ಣು ಹುಟ್ಟು ಪ್ರೇಮಮಹಿ ಎಂಬುವುದನ್ನಾ ನೀನು ನಿರೂಪಿಸಿದ್ದ ದಿನ.

ನೀನೇ ಹೇಳಿದ್ದು ಅನಿಸುತ್ತದೆ. ನಿನ್ನ ಪಿ.ಯು ಕಾಲೇಜಿನ ದಿನಗಳಲ್ಲಿ ನೀ ಮೊದಲ ಬಾರಿ ಈ ಪ್ರೇಮ ಎಂಬುದಕ್ಕೆ ಸಿಲುಕಿದ್ದು.. ಅದು ನನಗೆ ಅನಿಸಿದ್ದು ಕೇವಲ ನಿನ್ನ ಕ್ರಶ್.. ಇದ್ದರೂ ಇರಬಹುದು..ಅಂತಾ. ನನಗಂತೂ ಆ ನಿನ್ನ ಮಾಜೀ ಪ್ರಿಯಕರನಿಗೆ ಅದು ಕೇವಲ ಕ್ರಶ್ ಮಾತ್ರ. ಇದು ಎಲ್ಲಾ ಹುಡುಗ ಹುಡುಗಿಯರಿಗೂ ಜೀವನದಲ್ಲಿ ಒಂದಲ್ಲಾ ಒಂದು ಬಾರಿ ಘಟಿಸುವ ಸಾಮಾನ್ಯ ಘಟನೆ. ಅಲ್ಲವಾ?

ನೀ ಅವನನ್ನು ಎರಡುವರೇ ವರುಷ ಎಷ್ಟೊಂದು ಅಕ್ಕರಯಿಂದ ಪ್ರೀತಿಸುತ್ತಿದ್ದೆ ಎಂಬುದು ನಿನ್ನ ಮಾತುಗಳಿಂದಲೇ ಗೊತ್ತಾಗುತ್ತಿತ್ತು. ನೀ ಯಾವುದನ್ನೂ ತೀರ ಸರಳವಾಗಿ ತೆಗೆದುಕೊಳ್ಳದ ಹುಡುಗಿ ಎಂಬುದು ಅವನನ್ನು ಇಂದಿಗೂ ಗೌರವಿಸುವ ನಿನ್ನ ನುಡಿಗಳಿಂದ ತಿಳಿಯುತ್ತಿತ್ತು. ಅಲ್ಲಾ ಇದನ್ನೆಲ್ಲಾ ಇವಳು ನನ್ನ ಜೊತೆಯಲ್ಲಿ ಏಕೆ ಹೇಳುತ್ತಿದ್ದಾಳೆ ಎಂದು ನನಗೆ ನಿಜವಾಗಿಯೂ ಶಾಕ್ ಆಯ್ತು!

ನೀ ಹೇಳಿದ್ದೆಲ್ಲಾ ಅವನನ್ನು ನೀನು ಎಷ್ಟೊಂದು ಹಚ್ಚಿಕೊಂಡಿದ್ದೇ ಎಂಬುದನ್ನು.. ಕಾಲೇಜು ದಿನಗಳು ಅದು ಹೇಗೂ ಕಳೆದು ಹೋಗಿದ್ದವೂ ಎಂದೂ.. ಅಲ್ಲವಾ ಆ ಪ್ರೀತಿಯ ಜಾದುವೇ ಹಾಗೇ..

ಆ ರೀತಿಯಲ್ಲಿ ಇದ್ದಂತಹ ಅವನ ನಿನ್ನ ಪ್ರೇಮದ ಸೆಲೆ ಮಂಜಿನೋಪಾದಿಯಲ್ಲಿ ಕರಗಿಹೋಗಿದ್ದು ಒಂದು ವಿಧಿಯ ಒಂದು ಆಟವೇ ಸರಿ!  ನೀನೆ ಹೇಳಿದ್ದೇ. ಪ್ರೀತಿಗೆ ಕಣ್ಣಿಲ್ಲಾ ಎಂದು. ಪ್ರೀತಿ ಮಾಡುವ ಯಾರೊಬ್ಬರೂ ಪ್ರೀತಿ ಮಾಡುವುದಕ್ಕೂ ಮುನ್ನಾ ಯಾವ ಜಾತಿ? ಯಾರ ಮನೆಯವಾ? ಎಷ್ಟು ಸಂಪಾಧಿಸುವವ? ಏನೂ ಓದಿದವವ? ಅಪ್ಪ ಅಮ್ಮ ಒಪ್ಪುವವರಾ? ಹೀಗೆ ಪ್ರಶ್ನೆಗಳಿಗೆ ಉತ್ತರಗಳನ್ನು ದೂರಕಿಸಿಕೊಂಡು ಪ್ರೀತಿಸಲು ಶುರು ಮಾಡುವುದಿಲ್ಲ. ಅದು ಕೇವಲ ಒಂದು ಆಕಸ್ಮಿಕವಾದ ಹೃದಯದ ಸೆಳೆತ.

ಇಂದಿಗೂ ಅದರ ಬಗ್ಗೆ ಇರುವ ಈ ಚಿಕ್ಕದಾದ ನೋವೇ ಇಂದು ಈ ರೀತಿಯ ಒಂದು ಮೇಚ್ಯೂರ್ ಆದ ಜೀವನದ ನಿರ್ಧಾರಗಳನ್ನು ತೆಗೆದುಕೊಳ್ಳಲು ನಿನಗೆ ಸಾಧ್ಯಮಾಡಿರುವುದು. ಜೀವನದಲ್ಲಿ ಬರುವ ಎಲ್ಲಾ ಸೋಲು, ಗೆಲುವುಗಳು ದೇವರು ನಮಗೆ ಕಲಿಸುವ ಪಾಠಗಳು.

ಕೇವಲ ಒಂದು ಜಾತಿಯ ವಿಷಯಕ್ಕಾಗಿ ಅವನು ಕೊನೆಗೆ ಅವರ ಅಪ್ಪ ಅಮ್ಮನ ದಾರಿ ಹಿಡಿದಿದ್ದೂ ನನಗಂತೂ ತುಂಬಾನೆ ಬೇಸರವಾಯಿತು. ಅಂದು ನಾನು ಈ ಮಾತಿಗೆ ನಿನ್ನ ಜೊತೆಯಲ್ಲಿ ಏನೊಂದು ಪ್ರತಿಕ್ರಿಯಿಸಿರಲಿಲ್ಲ. ಗೊತ್ತೂ ನಿನಗೆ ಎಷ್ಟರ ಮಟ್ಟಿಗೆ ನೋವಾಗಿತ್ತೂ ಎಂದು. ನೀನ್ನ ಪ್ರೀತಿಯ ಕಲ್ಪನೆ ಸತ್ಯವಾಗಿ ಹಾಲಿನ ರೂಪದಷ್ಟೇ ನಿಷ್ಕಲ್ಮಶ!

ಆದರೇ ಯಾರೂ ಕೇಳಬೇಕು?

ನಮ್ಮಲ್ಲಿ ಇಂದು ಪ್ರೀತಿ ಮಾಡುವ ಪ್ರತಿಯೊಬ್ಬರಿಗೂ ಇರುವ ಭಯವೆಂದರೇ ಅದು ಒಂದೇ! ಹೆತ್ತವರೂ ಎಂದಿಗೂ ತಮ್ಮ ಸಂತೋಷದ ಬೆಂಬಲವನ್ನು ಪ್ರೀತಿಗೆ ಕೊಡುವುದಿಲ್ಲ. ಅವರಿಗೆ ಅವರದೆಯಾದ ಜಾತಿ, ಅಂತಸ್ತು ಇತ್ಯಾದಿಯಾದ ಕ್ಷುಲ್ಲಕ ಕಾರಣಗಳು. ಇದರಿಂದ ಎಷ್ಟೊಂದು ಪ್ರೀತಿಸುವ ಜೀವಗಳು ಯಾವ ಯಾವ ರೀತಿಯಲ್ಲಿ ನೋಂದು ಬೆಂದು ತಮ್ಮನ್ನೇ ತಾವು ಅಂತ್ಯ ಮಾಡಿಕೊಳ್ಳುತ್ತಿದ್ದಾವೆ. ಇನ್ನಾದರೂ ನಮ್ಮ ಹಿರಿಯರಿಗೆ ಬುದ್ಧಿ ಮಾತ್ರ ಈ ವಿಷಯದಲ್ಲಿ ಬರುವುದಿಲ್ಲ!

ನನಗೆ ಆ ನಿನ್ನ ಕಥೆಯನ್ನು ಕೇಳಿ ತುಂಬಾನೇ ಹೆಮ್ಮೆ ಏನಿಸಿತು. ಅದು ಏನೂ ತಪ್ಪಾದ ಹೆಜ್ಜೆ ಎಂದು ನನಗಂತೂ ಇಂದಿಗೂ ಅನಿಸಿಲ್ಲ!

ಅಲ್ಲಾ ಪ್ರೀತಿ ಮಾಡುವುದು ಅಷ್ಟೊಂದು ಕಠಿಣವಾದ ನಡೆಯೇ? ಎಂದಿಗೂ ಇಲ್ಲ.

ನನಗೆ ಅನಿಸುತ್ತದೆ ಈ ಘಟನೆ ನಿನ್ನ ಜೀವನದ ದಿಕ್ಕನ್ನೇ ಬದಲಿಸಿದೆ ಎಂಬುದು. ಇದೂ ಸರಾಗವಾಗಿ ನಡೆದು ಹೋಗಿಬಿಟ್ಟಿದ್ದರೇ.. ಜೀವನ ಇಷ್ಟೊಂದು ಸುಲಭವೆಂದು ನಿನಗನಿಸುತ್ತಿತ್ತೇನೋ.. ಆದರೂ ಇಷ್ಟೆಲ್ಲಾ ನೋವನ್ನೆ ನಿನ್ನ ಛಲವಾಗಿ ತೆಗೆದುಕೊಂಡು ನಿನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿ ಇಂದು ವಿದೇಶದಲ್ಲಿ ನೀ ಇರುವುದೇ ಸಾಕ್ಷಿ! ಇನ್ನೇನೂ ಬೇಕು?

ಬಾಯ್ ಪ್ರೇಂಡ್ ಹತ್ತಿರ ಯಾವುದನ್ನೂ ಹೈಡ್ ಮಾಡಿರಬಾರದಂತೆ! ಅದಕ್ಕೆ ಸಾಕ್ಷಿ ಎನ್ನುವಂತೆ ಈ ನಿನ್ನ ಗತ ಪ್ರೇಮವನ್ನು ನನ್ನ ಜೊತೆಯಲ್ಲಿ ಹಂಚಿಕೊಂಡಿದ್ದು ನಿನ್ನನ್ನು ನಾನು ಇನ್ನೂ ಹೆಚ್ಚು ಹೆಚ್ಚು ಪ್ರೀತಿಸುವಂತೆ ಮಾಡಿತು. ನಿನಗೆ ಪ್ರೀತಿಯೆಂದರೇ ಏನು? ಅದರ ಮಹತ್ವವೆಂದರೇ ಏನು? ಸಂಬಂಧಗಳ ಬಗ್ಗೆ ನಿನ್ನಲ್ಲಿರುವ ಆದರ್ಶಗಳೇನು? ಹೀಗೆ ನೀನಗೆ ನನಗಿಂತ ತುಂಬ ಅರಿವು ಇರುವ ಹುಡುಗಿ ಎಂದು ನನಗೆ ಅನಿಸಿಬಿಟ್ಟಿತೂ.. ಅದೇ ಕಾರಣಕ್ಕೆ ಅನಿಸುತ್ತದೆ.. ಈ ನಿನ್ನ ಪ್ರೇಮ ಕಥೆಯೇ ಈ ನಮ್ಮ ಪ್ರೇಮಕ್ಕೆ ಮುನ್ನುಡಿಯಾಗಿದ್ದು.

ಪ್ರೀತಿ ಮಾಡುವುದು ಏನೂ ಕಷ್ಟವಲ್ಲಾ. ಅದನ್ನು ದಕ್ಕಿಸಿಕೊಂಡು ಮದುವೆಯೆಂಬ ಬಂಧನದಲ್ಲಿ ಸಿಲುಕಿಸುವುದು ಇದೆಯೆಲ್ಲಾ ಅದು ನಿಜವಾದ ಪ್ರೇಮಿಗಳಿಗೆ ನಿಜವಾದ ಪಬ್ಲಿಕ್ ಎಕ್ಸಾಮ್! ಅದರಲ್ಲಿ ಪಾಸ್ ಆಗಿ ಜಗತ್ತಿಗೆ ತೋರಿಸಬೇಕು. ಹೇಗೆಲ್ಲಾ ಚೆನ್ನಾಗಿ ಬಾಳಬಹುದು ಎಂಬುದನ್ನೂ ತೋರಿಸಿದರೇ ಹೆತ್ತವರಿಗೆ ಯಾವ ಭಯವಿರುತ್ತೇ? ನೀನೇ ಹೇಳು.

ನಿನಗೆ ಅನ್ನಿಸಿಬಿಟ್ಟಿರಬೇಕು.. ಯಾಕೋ ಈಗ  ಇವನೂ ಫುಲ್ ವೇದಾಂತಿಯಾಗಿಬಿಟ್ಟಿದ್ದಾನೆ!

ಇಲ್ಲಮ್ಮಾ ಇದು ನನ್ನ ಮನದಾಳದ ಮಾತುಗಳು. ಯಾಕೋ ಈ ನಿನ್ನ ಪ್ರೀತಿಯ ಸಾಲುಗಳನ್ನು ನೋಡುತ್ತಾ ನೋಡುತ್ತಾ ಇದು ಎಲ್ಲಾ ಇಂದು ನೆನಪಾಯಿತು.

ಎಲ್ಲಾ ಹೋಗಲಿ.. ಇನ್ನೇನೂ ಮುಂದಿನ ತಿಂಗಳು ವಾಪಸ್ಸು ನೀ ಬರುತ್ತಿದ್ದಿಯಲ್ಲಾ.. ನನಗೆ ಅಲ್ಲಿಂದ ಏನೂ ಉಡುಗೊರೆಯನ್ನು ತರುವೇ?  ಅದಂತೂ ನನ್ನ ಕನಸು ಮನಸಿನಲ್ಲೂ ಯೋಚಿಸಿರಬಾರದು ಅಂಥ ಉಡುಗೊರೆಯನ್ನು ನೀ ತರಬೇಕು...!

ನನಗೆ ನೀನಗಿಂತ ಬೆಲೆಬಾಳುವಂತಹ ವಸ್ತು ಯಾವುದು ಇಲ್ಲ ಕಣೇ! ನೀ ಕ್ಷೇಮವಾಗಿ ವಾಪಸ್ ಬಂದರೆ ಅದೇ ನನಗೆ ಮಿಲಿಯನ್ ಡಾಲರ್!!


ಮಂಗಳವಾರ, ಸೆಪ್ಟೆಂಬರ್ 4, 2012

ಹೃದಯದ ಮಾತು!


ಕಣ್ಣಾಲಿಗಳು ತುಂಬಿ ಬಿಟ್ಟಿತು ಕಣೋ. ಪೇಸ್ ಬುಕ್ ನಲ್ಲಿನ ಆ ನಿನ್ನ ಮೇಸೆಜ್ "ಡಾರ್ಲಿಂಗ್ ನಿನ್ನನ್ನು ನಾನು ತುಂಬಾನೆ ಮೀಸ್ ಮಾಡಿಕೊಳ್ಳುತ್ತಿದ್ದೇನೆ. ಯಾವಾಗ ನಿನ್ನ ನಾನು ನೋಡುತ್ತೀನೋ." ಇಲ್ಲಿವರೆಗೂ ನೀ ಒಂದು ಮೇಸೆಜ್ ನ್ನು ಪೇಸ್ ಬುಕ್ ನಲ್ಲಿ ಹಾಕಿರುವುದನ್ನು ನೋಡಿದ್ದಿಲ್ಲ! ನೀ ಯಾವಾಗಲೂ ಹೇಳುತ್ತಿದ್ದೇ " ಐ ಹೇಟ್ ಪೇಸ್ ಬುಕ್"

ಇಲ್ಲಂತೂ ಮೊದಲ ಮೂರು ದಿನ ನನ್ನ ಕ್ಷಣ ಕ್ಷಣವು ನನ್ನ ಮನೆಯವರ ನೆನಪು ಕಾಡಿತು. ನನ್ನ ಅಕ್ಕ,ತಮ್ಮ, ಅಮ್ಮ ನ ನೆನಪು ತುಂಬನೇ ಬಾಧಿಸಿತು.

ಇದೆ ಮೊದಲ ಸಲ ನಾನು ನನ್ನ ಮನೆಯಿಂದ ಹೊರಗಡೆ ಬಂದು ಬೇರೆಯಾಗಿ ಇರುವುದು. ಹುಟ್ಟಿದಂದಿನಿಂದ ೨೧ ವರುಷಗಳು ನನ್ನವರನ್ನು ನಾನು ಒಂದು ದಿನವೋ ಬಿಟ್ಟಿಲ್ಲ ಕಣೋ! ಹಾಸಿಗೆಯ ಮೇಲೆ ಅಮ್ಮನ ತೋಳಿನಲ್ಲಿ ನನ್ನ ತೆಲೆಯಿಟ್ಟು ಮಲಗುವುದನ್ನೂ ಈವಾಗ ಮೀಸ್ ಮಾಡಿಕೊಳ್ಳುತ್ತಿದ್ದೇನೆ.

ಗೊತ್ತಾ ನನ್ನ ಅಮ್ಮ ಒಂದು ದಿನವೋ ನನ್ನ ಮುಖವನ್ನು ಕಾಣದಿದ್ದರೇ ಸಾಕು ದಿಗಿಲುಗೊಳ್ಳೂತ್ತಾರೆ. ಅದು ಹೇಗೆ ಅವರು ಸೈರಿಸಿಕೊಂಡಿದ್ದಾರೋ ಆ ದೇವರೇ ಬಲ್ಲ!

ಅಲ್ಲಾ ಕಣೋ ನೀನು ಹೇಗೆ ಇಷ್ಟರ ಮಟ್ಟಿಗೆ ನಿನ್ನ ಮನಸ್ಸನ್ನು ಚಿಕ್ಕದಾಗಿ ಮಾಡಿಕೊಂಡುಬಿಟ್ಟೆ. ಅಮ್ಮನ ವಿಷಯ ಬಿಡು ಅವರು ತುಂಬ ಹಳಬರು ಸ್ವಲ್ಪಕ್ಕೂ ಧಾವಂತಪಟ್ಟುಕೊಳ್ಳುತ್ತಾರೆ. ನೀನಗೆ ಗೊತ್ತೂ ಇದು ಕೇವಲ ನಾಲ್ಕು ತಿಂಗಳ ನನ್ನ ನಿನ್ನ ಅತಿ ದೂರ.ಕೆಲಸ ಮುಗಿಸಿದ ಬಳಿಕ ವಾಪಾಸ್ಸು ಬರಲೇಬೇಕು. ಮತ್ತೆ ಅದೇ ನನ್ನ ನಿನ್ನ ಬೇಟಿ,ಸನಿಹ, ನನ್ನ ನಿನ್ನ ಮಾತು ಮಾತು, ಅಕ್ಕರೆಯ ಪುನರ್ ಮಿಲನ!

ಆದರೂ ಅದು ಯಾಕೇ ಇಷ್ಟು ಬೇಜಾರಾಗಿದ್ದೀಯೋ? ಪ್ಲೀಜ್ ಆ ರೀತಿಯಲ್ಲಿ ಎಲ್ಲಾ ಮಾತನಾಡಬೇಡ. ನನಗೆ ಗೊತ್ತು ನಿನಗೆ ಎಷ್ಟರ ಮಟ್ಟಿಗೆ ನೋವಾಗಿರುತ್ತದೆ ಎಂದು. ಅಂದು ಈ ಅಫರ್ ಬಂದಿದೆ ಎಂದಾಗ ನೀನೇ ಹೇಳಿದ್ದೇ "ಚೆನ್ನಾಗಿದೆ ಕಣೇ, ಈ ಅವಕಾಶ ಉಪಯೋಗಿಸಿಕೊ ನೀನು ಹೋಗುತ್ತಿರುವುದು ಸ್ವರ್ಗದ ಸೀಮೆಯಂತಿರುವ ಹಾಲೆಂಡ್. ಜೀವನದಲ್ಲಿ ಒಂದು ಬದಲಾವಣೆ ಬೇಕು. ನೀನಗೂ ಹೊರದೇಶ ಸುತ್ತಬೇಕು ಎಂಬ ಆಸೆ ತಾನೇ ನಾಲ್ಕು ತಿಂಗಳು ಮಸ್ತಿಯಾಗಿ ಎಂಜಾಯ್ ಮಾಡಿ ಬಾ".

ಅದರೇ ನೀನು ಇಷ್ಟರ ಮಟ್ಟಿಗೆ ಅಳ್ಳೆದೆಯವನು ಎಂದು ಇಂದೇ ನನಗೆ ಗೊತ್ತಾಗಿದ್ದು.

ನನಗೂ ಮೊದಲ ಎರಡು ದಿನ ನಿಜವಾಗಿಯೋ ಯಾಕಾದರೂ ಈ ಲೋಕಕ್ಕೆ ಬಂದೇನೋ ಎನಿಸಿತು. ಯಾರನ್ನೂ ಮಾತನಾಡಿಸುವ ಸ್ಥಿತಿಯಲ್ಲಿ ಇರಲಿಲ್ಲ. ಯಾರ ಜೊತೆಯಲ್ಲೂ ಪೋನ್, ಮೇಸೆಜ್, ಚಾಟ್ ಎನೊಂದು ಸಿಗಲಿಲ್ಲ.

ಇಂದು ಮೊರನೆಯ ದಿನ ಹೀಗೆಯೆ ಈ  ನಿನ್ನ ಮೇಸೆಜ್ ನೋಡಿದಾಗ ನನಗಂತೂ ನಿನ್ನನ್ನು ತುಂಬನೇ ಮೀಸ್ ಮಾಡಿಕೊಳ್ಳುತ್ತಿದ್ದೇನೆ ಅನಿಸಿತ್ತಿದೆ.

ಇನ್ನೂ ನಾಲ್ಕು ತಿಂಗಳು ಹೇಗೆ ನೀ ಇಲ್ಲದ ಈ ದಿನಗಳನ್ನೂ ದೂಡುವುದೋ ಇಲ್ಲಿ ಅನಿಸುತ್ತಿದೆ.

ಕೇವಲ ಎರಡು ಗಂಟೆಗೂ ಮುನ್ನಾ ಅಮ್ಮ, ಅಪ್ಪ, ಅಕ್ಕ ಮತ್ತು ಮುದ್ದು ತಮ್ಮನೊಡನೆ ಮಾತನಾಡಿದೆ. ಅಮ್ಮನೋ ದೋ ಎಂದು ಅತ್ತೇ ಬಿಟ್ಟಳು ಕಣೋ. ಯಾಕೋ ಇಲ್ಲಿಗೆ ಬಂದು ತಪ್ಪು ಮಾಡಿದೆ ಅನಿಸುತ್ತಿದೆ. ಅವರ ಜೊತೆಯಲ್ಲಿರುವ ಕ್ಷಣಗಳು ನಾವು ಯಾವ ಸ್ವರ್ಗದ ಸೀಮೆಗೆ ಹೋದರೂ ಸಿಗಲಾರದು ಕಣೋ. ನಮ್ಮ ಪ್ರೀತಿ ಪಾತ್ರರ ಜೊತೆಯಲ್ಲಿ ಕಳೆಯುವ ಪ್ರತಿಕ್ಷಣವು ಸರ್ಗಮಯ ಸಮಯ! ಏನೂ ಮಾಡುವುದು ನಾನು ಪುನಃ ನಾಲ್ಕು ತಿಂಗಳು ಕಾಯಲೇ ಬೇಕು.

ಈ ಜಾಗ ಎಷ್ಟು ಸಂಪತ್ತು ಭರಿತವಾಗಿದೆ ಗೊತ್ತಾ? ಎಷ್ಟೊಂದು ನೀಟಾಗಿ ಪ್ರತಿಯೊಂದು ಜಾಗವನ್ನು ಅವುಗಳ ಸೌಂದರ್ಯಕ್ಕೆ ಮುಕ್ಕಾಗದ ರೀತಿಯಲ್ಲಿ ಕಾಪಿಟ್ಟುಕೊಂಡಿದ್ದಾರೆ ಕಣೋ! ನೀ ನನ್ನ ಜೊತೆಯಲ್ಲಿ ಇದ್ದರೇ ನಿಜವಾಗಿಯೂ ಸ್ವರ್ಗಕ್ಕೆ ಕಿಚ್ಚು ಹಚ್ಚಬಹುದಾಗಿತ್ತು.

ನಿನ್ನ ಪರಿಚಯವಾದ ಮೂರು ವರುಷಗಳ ನಂತರ ಇದೆ ಮೊದಲ ಸಲ ಅನಿಸುತ್ತದೆ ಅತ್ಯಂತ ದೀರ್ಘವಾದ ದೂರದ ಜೀವನ. ನೀನೋ ನನ್ನ ಬಿಟ್ಟಿಲಾರದವನಂತೆ ನಾನು ಬದಲಾಯಿಸಿದ ಮೂರೂ ಕಂಪನಿಗಳಿಗೂ ನನ್ನ ಹಿಂದೆಯೇ ಬಂದ್ಯಾಲಾ? ಅದೇ ಕಣೋ ನನ್ನನ್ನು ನೀನ್ನನ್ನು ಇನ್ನೂ ಹೆಚ್ಚು ಹೆಚ್ಚು ಪ್ರೀತಿಸುವಂತೆ ಮಾಡಿದ್ದು. ನನ್ನ ಕಂಡರೇ ನೀನಗೆ ಅದು ಎಷ್ಟು ಇಷ್ಟಾ? ಎಷ್ಟು ಕೇರಿಂಗ ನೇಚರ್? ನೀ ನನಗೆ ನಿತ್ಯ ನನ್ನ ಮಾರ್ಗದರ್ಶಕ ಮತ್ತು ವಿಮರ್ಶಕ!

ನನಗಂತೂ ಇಷ್ಟರ ಮಟ್ಟಿಗೆ ನಾನು ನನ್ನ ಜೀವನವನ್ನು ಸಾಗಿಸುವುವೆನೂ ಎಂಬ ಕನಸು ಸಹ ಇರಲಿಲ್ಲ. ಎಲ್ಲಿಯಾ ಆ ಚಿಕ್ಕ ಹಳ್ಳಿಯ ಈ ಹುಡುಗಿ? ಇಂದು ಹೊರದೇಶದ ಬೇರೆ ದೇಶದ ಕಂಪನಿಯ ಬೇರೆ ದೇಶದ ಜನಗಳ ಜೊತೆಯಲ್ಲಿ ಕೆಲಸ ಮಾಡುತ್ತಿದ್ದೇನೆ ಅಂದರೇ ಇದೊಂದು ಸಂಪೂರ್ಣ ಕನಸು ಅನಿಸುತ್ತಿದೆ. ಅದಕ್ಕೆ ಕಾರಣ ನೀ ಅಂದರೇ ಅತಿಶಯೋಕ್ತಿಯಲ್ಲ.

ನೆನಪಿದೆಯಾ? ನಾನು ನಿಮ್ಮ ಕಂಪನಿಯ ಸಂದರ್ಶನಕ್ಕೆ ಬಂದಿದ್ದು. ಅದರಲ್ಲಿ ಆಯ್ಕೆಯಾದ ನಂತರ ನಿನ್ನ ಟೀಂ ಗೆ ನಾ ಬಂದಿದ್ದು. ನೀನೆ ನನ್ನ ಸೀನಿಯರ್ ಆಗಿದ್ದು. ನೀ ನನ್ನ ಪತಿಯೊಂದು ತಪ್ಪು ಮತ್ತು ಕಲಿಕೆಗಳನ್ನು ಎಷ್ಟೊಂದು ತಾಳ್ಮೆಯಿಂದ ತಿದ್ದಿ ಮುನ್ನುಗ್ಗುವಂತೆ ಮಾಡಿದ್ದೂ!


ಅಂದೇ ನಾನು ನಿರ್ಧರಿಸಿದ್ದೇ! ಆ ದೇವರೇ ಈ ಕಪ್ಪು ತುಂಟನನ್ನು ನನ್ನ ಜೋಡಿಗಾಗಿ ಕಳಿಸಿದ್ದಾನೆ ಎಂದು. ಗೊತ್ತಾ? ಮೊದಲ ದಿನದ ಆಫೀಸ್ ಸಡಗರದ ಮಾತುಗಳ ತುಂಬ ನಿನ್ನದೇ ಹೆಸರು. ಅಮ್ಮನಿಗೆ ಮೊದಲ ದಿನವೇ ನಿನ್ನ ಬಗ್ಗೆ ಹೇಳಿದ್ದೇ!

ನಮ್ಮಿಬ್ಬರ ನಡುವೆ ಅದು ಹೇಗೆ ಸ್ನೇಹ ಪ್ರೀತಿಯಾಗಿ ಪರಿವರ್ತನೆಯಾಯಿತೋ? ನನಗಂತೋ ಇಂದಿಗೂ ಅದರ ನೆನಪು ಎಷ್ಟು ಪ್ರಯತ್ನಿಸಿದರೂ ತಿಳಿಯದಾಗಿದೆ. ಆ ಒಂದು ಹೊರತೆ, ಅದು ಹೇಗೆ? ಯಾವ ಸಮಯದಲ್ಲಿ ಉಕ್ಕಿತೋ? ಗೊತ್ತಾಗುತ್ತಿಲ್ಲ.

ನೀನೋ ನಿನ್ನಲ್ಲಿಯೇ ನನ್ನನ್ನೂ ಪ್ರೀತಿಸತೊಡಗಿದೆ. ನಾನು ನಿನ್ನನ್ನೂ ನನ್ನ ಉಸಿರಾಗಿಸಿಕೊಂಡೆ. ನಾನು ನಿನ್ನ ಪ್ರೀತಿಸುವುದು ನಿನಗೆ ಗೊತ್ತಾಗಿತ್ತು. ನೀ ನನ್ನ ಪ್ರೀತಿಸುವುದು ನನಗಂತೂ ಮೊದಲ ದಿನವೇ ಗೊತ್ತಾಗಿತ್ತು. ಆದರೂ ನಾನು ನಿನಗೆ ನಿಜವಾಗಿಯೋ ಸರಿ ಹೊಂದುವನೇನೋ? ನೀನೇ ಹೇಳಬೇಕು..

ಅಂದು ನೀ ನನ್ನನ್ನು ಕಳಿಸಲು ಏರ್ ಪೋರ್ಟ್ ಬಳಿ ಬಂದಾಗ ಅಮ್ಮ ನಿನ್ನ ಕಡೆನೇ ತುಂಬ ತುಂಬ ನೋಡುತ್ತಿದ್ದರು ಕಣೋ. ಅಮ್ಮನ ಬಳಿ ನಾನೇನೂ ನಿನ್ನನ್ನು ಪ್ರೀತಿಸುತ್ತಿದ್ದೇನೆ ಎಂದು ಇದುವರೆಗೂ ಹೇಳಿಲ್ಲ! ಆದರೇ ಕಣ್ಣರಿಯದಿದ್ದರೂ ಕರಳು ಅರಿಯುತ್ತದಂತೆ ಅಲ್ಲವಾ? ಅಮ್ಮನಿಗೆ ನನ್ನ ಪ್ರತಿ ಹೆಜ್ಜೆ ಗೊತ್ತಾಗೇ ಗೊತ್ತಾಗಿರುತ್ತದೆ. ಅವಳಿಗೂ ನನ್ನ ಚಿಕ್ಕ ಸುಳಿವು ಸಿಕ್ಕಿದ್ದರೂ ಸಿಕ್ಕಿರಬಹುದು. ಅದಕ್ಕೆ ಇರಬೇಕು ಅಂದು ನಿನ್ನನ್ನು ತುಂಬ ಮಮತೆಯಿಂದ ಗಮನಿಸುತ್ತಿದ್ದೀರಬೇಕು.

ನೀನೋ ಅಂದು ಏನೋ ಆಕಾಶವೇ ಕೆಳಗೆ ಬಿದ್ದಿರುವಂತೆ ಮುಖ ಮಾಡಿಕೊಂಡಿದ್ದೇ. ನನಗೋ ಏನೂ ಹೇಳಬೇಕೆಂಬುದೇ ತಿಳಿಯದ ಕಸಿವಿಸಿ.

ಇಲ್ಲಿಯ ಊಟ ನೋಟ ಎಲ್ಲಾ ದೇವರಿಗೆ ಪ್ರೀತಿ ಕಣೋ.. ಇನ್ನೂ ನೂರ ಇಪ್ಪತ್ತು  ದಿನಗಳು ಅಂದರೇ ನನಗೆ ಭಯವಾಗುತ್ತಿದೆ!

ಈ ವೀಕೆಂಡ್ ಅದು ಯಾವುದೋ ಪಾಲ್ಸ್ ಅಂತೆ ಅಲ್ಲಿಗೆ ಇಲ್ಲಿನ ನನ್ನ ಸ್ನೇಹಿತರ ಜೊತೆಯಲ್ಲಿ ಹೋಗುತ್ತಿದ್ದೇನೆ. ನೀ ಇಲ್ಲದ ಭಾವವೇ ನನ್ನ ಎಲ್ಲಾ ಸಡಗರಗಳನ್ನು ಒಂದು ಕ್ಷಣ ಮಂಕಾಗಿಸುತ್ತದೆ.

ನೀ ಆ ನಿನ್ನ ಪಟಾಲಂ ಜೊತೆಯಲ್ಲಿ ಸೇರಿಬಿಡಬೇಡ.. ನನಗೆ ಗೊತ್ತೂ ಅವರ ವೀಕೆಂಡ್ ಮಸ್ತಿ.. ಯಾವುದನ್ನೂ ಅತಿಯಾಗಿ ಮಾಡಬೇಡ.. ನಾನು ಇಲ್ಲದ ಮೊದಲ ಅನುಭವವನ್ನು ಅದು ಹೇಗೆ ಅನುಭವಿಸುವೆಯೋ ಹುಚ್ಚಪ್ಪ?

ನಾನಂತೋ ನಿನ್ನ ಜೊತೆಯಲ್ಲಿ ಕಳೆದ ಮೂರುವರೆ ವರುಷಗಳ ಪ್ರತಿಯೊಂದು ಸವಿ ಕ್ಷಣಗಳ ಮೆಲುಕು ಹಾಕಬೇಕೆಂದು ಕೊಂಡಿದ್ದೇನೆ. ಅದೇ ಸ್ವಲ್ಪ ನನಗೆ ನೀ ನನ್ನ ಜೊತೆಯಲ್ಲಿಯೇ ಇಲ್ಲಿಯೇ ಹತ್ತಿರದಲ್ಲಿ ಇರುವೆ ಎಂಬ ಭಾವವನ್ನು ಕೊಡುತ್ತದೆ.

ಅಲ್ಲಾ ಕಣೋ ಈ ಪ್ರೇಮಿಗಳಿಗೆ ಈ ರೀತಿಯಲ್ಲಿ ಆ ದೇವರು ಪರೀಕ್ಷೆಯನ್ನು ಯಾಕಾದರೂ ಕೊಡುತ್ತಾನೋ ಎಂದು ನನಗೆ ಅನಿಸುತ್ತದೆ. ಈ ಮೊಲಕ ಅವನೂ ನಮ್ಮ ನಮ್ಮ ನಿಜವಾದ ಪ್ರೀತಿಯ ತೂಕವನ್ನು ಮಾಡುತ್ತಾನೇನೋ ಅಲ್ಲವಾ?

ಸಮಯ ಸಿಕ್ಕಿದರೇ ಇಲ್ಲಿಂದಲೇ ಅಮ್ಮನೊಡನೆ ನಿನ್ನ ಬಗ್ಗೆ ಹೇಳಿಬಿಡಬೇಕು ಅನಿಸಿದೆ. ಅವರಿಗೋ ಯಾವಾಗ ಇವಳೂ ವಾಪಸ್ಸ್ ಬಂದು ಮದುವೆಯ ಖೆಡ್ಡಕ್ಕೆ ಬೀಳುವವಳೋ ಅನಿಸಿರಬೇಕು.

ನೀ ನೋಡಿರಲಿಲ್ಲ, ಇಲ್ಲಿಗೆ ನಾ ಬಂದಿರುವುದು ಅಪ್ಪನಿಗೆ ಸುತಾರಾಂ ಇಷ್ಟವಿಲ್ಲ.

ಅವರೇಳಿದ್ದು ಒಂದೇ ಮಾತು "ಹುಡುಗಿಯರಿಗೆಲ್ಲಾ ಯಾಕೆ ಈ ಕೆಲಸ, ವಿದೇಶ ಸುತ್ತಾಟ?"

ಏನ್ ಮಾಡುವುದೂ? ಅವರಂತೂ ನಾ ವಾಪಸ್ಸಾಗುವುದನ್ನೇ ಕಾಯುತ್ತಿರುತ್ತಾರೆ... ಗೊತ್ತಿಲ್ಲಾ ಮುಂದಿನ ವರುಷದ ಹೊತ್ತಿಗೆ ನಾ ನಿನ್ನ ಮನೆಗೆ ಬಂದಿರುತ್ತೇನೆ.

ಆ ಕನಸೇ ಎಷ್ಟೊಂದು ಸುಖ ಕೊಡುತ್ತಿದೆ. ಆಫೀಸ್ ಕೆಲಸವಿಲ್ಲದೆ ಕೇವಲ ಮನೆಯಲ್ಲಿಯೇ ಇರುವುದು. ನಿನ್ನ ಬೇಕು ಬೇಡಗಳನ್ನು ನೋಡಿಕೊಳ್ಳುವುದು. ನಿನ್ನ ಅಮ್ಮನನ್ನು ನನ್ನ ಅಮ್ಮನಂತೆ ಕಾಣುವುದು. ಆ ನಿನ್ನ ಮುದ್ದಿನ ಪುಟ್ಟ ತಂಗಿಯನ್ನು ನನ್ನ ಮುದ್ದಿನ ಮಗಳಾಗಿ ಆರೈಕೆ ಮಾಡುವುದು. ನೀ ಮುಂಜಾನೆ ಆಫೀಸ್ ಗೆ ಹೋಗುವುದು.. ಸಂಜೆ ನೀ ಬರುವ ವೇಳೆಗೆ ಎಲ್ಲಾ ರುಚಿಯಾದ ಅಡಿಗೆಗಳನ್ನು ಮಾಡಿಕೊಂಡು ಸಿನಿಮಾದಲ್ಲಿ ತೋರಿಸುವ ಟೀಪಿಕಲ್ ಅರ್ಧಾಂಗಿಯಾಗಿ ನಿನ್ನ ದಾರಿಯನ್ನೇ ಕಾಯುತ್ತಿರುವುದು!!

ಇಷ್ಟೆ ಕಣೋ ನನ್ನ ಮಹದಾಸೆ. ಯಾರಿಗೇ ಬೇಕು ಈ ಕೆಲಸ. ಅವರಿಗೆ ಇವರಿಗೆ ಸಮಾಧಾನ ಮಾಡುವುದು.. ಆ ಮೀಟಿಂಗ್, ಆ ಕಾಲ್ಸ್? ನಿನ್ನಂತವನಿಗೆ ಸರಿ ಇವುಗಳೆಲ್ಲಾ.

ಹೇ! ಏನಿದು ಈ ಹುಚ್ಚಿಯ ಕನಸು ಎನ್ನಬೇಡ, ನನ್ನ ಹೃದಯದ ಮಾತುಗಳಿವು!

ಸೋಮವಾರ, ಸೆಪ್ಟೆಂಬರ್ 3, 2012

ಗುರು ಬಲ!


ಅಕ್ಷರ ಕಲಿಸಿದಾತ ಗುರುವು! ಅವನಿಂದ ನಾವುಗಳೂ ಅರಿವು ಎಂಬುದರ ಬಾಗಿಲನ್ನು ತಟ್ಟುವುದು. ವಿದ್ಯೆಯನ್ನು ಕಲಿಸುವವನೇ ಗುರು. ಗುರುವೇ ಅಧಿಪತಿ. ಅವನಿಲ್ಲದೇ ಏನೊಂದು ಬೆಳೆಯದು. ಅವನೇ ನಮಗೆಲ್ಲಾರಿಗೂ ಮಾರ್ಗದರ್ಶಕ!

ಇಂದು ನಮ್ಮಲ್ಲಿರುವ ಲಕ್ಷೋಪಲಕ್ಷ ಶಿಕ್ಷಣ ಸಂಸ್ಥೆಗಳು ಅಲ್ಲಿರುವ ಶಿಕ್ಷಕರು, ಪ್ರೋಪೆಸರ್ ಳೆಲ್ಲಾ ಗುರುವಿನ ಸ್ಥಾನವನ್ನು ಅಲಂಕರಿಸಿ ಶಿಷ್ಯರ ಏಳ್ಗೆಯೊಂದೆ ತಮ್ಮ ಕಾಯಕವನ್ನಾಗಿ ಮಾಡಿಕೊಂಡು ನಮ್ಮ ಯುವ ಪೀಳಿಗೆಯನ್ನು ಸರಿಯಾದ ಅಕ್ಷರಸ್ಥರನ್ನಾಗಿ ಮಾಡುತ್ತಿದ್ದಾರೆ. ಅವರೆಲ್ಲರಿಗೂ ನಮ್ಮ ನಾಗರೀಕ ಸಮಾಜ ಎಂದೆಂದೂ ಚಿರಋಣಿಯಾಗಿರಬೇಕಾಗಿದೆ.

ನಮ್ಮ ಬದುಕಿನ ಈ ದಾರಿಯಲ್ಲಿ ನಮ್ಮ ನಮ್ಮ ಜೀವನದಲ್ಲಿ ಒಂದೊಂದು ಚಿಕ್ಕ ಪ್ರಶ್ನೆ ಮತ್ತು ಜಟಿಲವಾದ ಸಮಸ್ಯೆಗಳಿಗೆ ಉತ್ತರವನ್ನು ಕಂಡುಕೊಳ್ಳುವಂತೆ ಮಾಡುವಲ್ಲಿ ನಮ್ಮೊಂದಿಗೆ ಹಲವಾರು ಗುರುಗಳ ಸ್ಥಾನದಲ್ಲಿ ನಿಂತು  ನಿತ್ಯ ಅಸರೆಯಾಗಿರುತ್ತಾರೆ.

ಅವರುಗಳು ನಮ್ಮ ಹೆತ್ತವರಾಗಿರಬಹುದು,ಸಂಬಂಧಿಕರು,ಸ್ನೇಹಿತರು, ನೆರೆಹೊರೆಯವರು, ಸಹ ಉದ್ಯೋಗಿಗಳು, ಓದುವ ಅಮೊಲ್ಯ ಪುಸ್ತಕಗಳು, ಪತ್ರಿಕೆಗಳು, ಇಂಟರ್ ನೇಟ್ ಇವರೆಲ್ಲಾ ಸಮಯಕ್ಕೆ ಸರಿಯಾಗಿ ನಮ್ಮನ್ನು ತಿದ್ದಿತೀಡಿ ನಮ್ಮ ಕಷ್ಟಗಳನ್ನು ಅವರ ಅನುಭವವೆಂಬ ಮೊಸೆಯಿಂದ ಬಗೆಹರಿಸಿರುತ್ತಾರೆ.

ಹೀಗೆ ಏನಾದರೂ ಒಂದು ಗೊತ್ತಿಲ್ಲದ ವಿಷಯ ಸಂಗತಿಗಳ ಅರಿವನ್ನುಂಟು ಮಾಡುವುದರಲ್ಲಿ ಈ ರೀತಿಯ ಎಲ್ಲರ ಸಹಾಯ ಹಸ್ತ ದೊಡ್ಡದಾಗಿರುತ್ತದೆ. ಅಂಥವರೆಲ್ಲಾ ನಮ್ಮೆಲ್ಲರಿಗೆ ಎಂದಿಗೂ ಗುರುಗಳೇ ಸರಿ. ನಮಗೆ ತಿಳಿಯದನ್ನು ತಿಳಿಸುವವರೆಲ್ಲಾ ನಮಗೆ ಗುರುಗಳೇ!

ಗುರುಗಳೆಂದರೇ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ತನ್ನ  ಶಿಷ್ಯನ ಉದ್ಧಾರ ಮಾತ್ರವಾಗಿರುತ್ತದೆ.

ನಮಗೆ ಗುರುಗಳು ಎಂದರೇ ಅವರು ನಮಗಿಂತಹ ದೊಡ್ಡವರಾಗಿರಬೇಕು ಎಂಬ ಕಲ್ಪನೆಯಿರುತ್ತದೆ. ಹಾಗೇನೂ ಇಲ್ಲಾ ಒಮ್ಮೊಮ್ಮೆ ನಮಗಿಂತ ಕಿರಿಯರಿಂದ ಜೀವನದ ಅತಿ ದೊಡ್ಡ ಪಾಠವನ್ನೇ ಕಲಿತುಕೊಂಡಿರುತ್ತೇವೆ. ಅಲ್ಲಿ ದೊಡ್ಡವರು, ಚಿಕ್ಕವರು ಹೀಗೆ ಯಾವುದೇ ವಯಸ್ಸಿನ ಬೇದ ಭಾವವಿಲ್ಲ. ಅಲ್ಲಿ ಅವರು ಎಷ್ಟು ಙ್ಞಾನವನ್ನು ತಿಳಿದುಕೊಂಡಿರುತ್ತಾರೆ ಮತ್ತು ನಾವು ಅವರಿಂದ ಕಲಿಯುವ ಪಾಠವೇ ಪ್ರಾಮುಖ್ಯವಾಗಿರುತ್ತದೆ.

ಶಾಲಾ ದಿನಗಳಲ್ಲಿ ನಾವುಗಳು ನಮ್ಮ ತರಗತಿಗಳಲ್ಲಿ ನಮಗೆ ಪಾಠವನ್ನು ಕಲಿಸುತ್ತಿದ್ದ ನಮ್ಮ ಗುರುಗಳ ಮಹತ್ವವನ್ನು ಅರಿಯದವಾರಗಿರುತ್ತೇವೆ. ಅವರನ್ನು ನಾವು ಏನೋ ಕಂಡು ಭಯಬೀಳುವಂತೆ ಅವರನ್ನು ನೋಡಿದರೇ ಮಾರು ದೂರದಿಂದಲೇ ಎಸ್ಕೇಪ್ ಆಗಿಬಿಡುತ್ತಿದ್ದೇವು. ಅವರ ಕಣ್ಣಿಗೆ ಬೀಳಲು ಎದುರುತ್ತಿದ್ದೇವು. ಅದು ಕಷ್ಟಪಟ್ಟು ತರಗತಿಗಳಲ್ಲಿ ಬೇರೆ ದಾರಿ ಇಲ್ಲದೇ ಗಟ್ಟಿ ಎದೆ ಮಾಡಿಕೊಂಡು ಕುಳಿತುಕೊಳ್ಳುತ್ತಿದ್ದೇವು. ಅವರುಗಳ ಪ್ರೀತಿಯ ಏಟುಗಳು, ಬೈಗುಳಗಳು ನಾವುಗಳು ಇಂದೂ ಸಹ ಮರೆಯಲು ಸಾಧ್ಯವೇ ಇಲ್ಲಾ.

ಅದೇ ರೀತಿಯಲ್ಲಿ ಯಾಕೋ ನಮ್ಮನ್ನು ಅತಿ ಮಧುರವಾಗಿ ಮಾತನಾಡಿಸುತ್ತಿದ್ದಾ ಒಬ್ಬರೂ ಇಬ್ಬರೂ ಮೇಡಂ ಗಳನ್ನು ನಮ್ಮ ನೆನಪಿನಿಂದ ಮರೆಯದವರಾಗಿರುತ್ತೇವೆ.

ಮೊಗಿನ ಮೇಲೆಯೇ ಸಿಟ್ಟನ್ನು ಇಟ್ಟುಕೊಂಡು ಕಪ್ಪನೇ ರೂಲರ್ ಹಿಡಿದುಕೊಂಡು ಬಂದು ಯಾವುದೋ ಪಾಠವನ್ನು ಬರೆದುಕೊಂಡು ಬಂದಿರದ ಕಾರಣಕ್ಕೆ ಕೆಂಪನೆ ಬಾಸುಂಡೆ ಬರುವಂತೆ ಭಾರಿಸಿದ್ದ ಆ ಹೆಡ್ ಮೇಸ್ಟರ್ ಮುಖವನ್ನು ನೆನಸಿಕೊಂಡರೆ ಈಗಲೂ ಬೆವರುತ್ತೇವೆ.

ಒಬ್ಬೊಬ್ಬರದೂ ಒಂದೊಂದು ಸ್ಟೈಲ್ ಆದ ಭೋಧನೆ ಇರುತ್ತದೆ.

ಗುರುಗಳೆಂದರೇ ಅವರು ಸಹ ನಮ್ಮಂತೆಯೇ ಮನುಷ್ಯರಲ್ಲವೇ ಎಂದು ನೆನಸಿಕೊಂಡರೇ ನಗು ಬರುತ್ತದೆ.

ಆದರೇ ಆ ಬಾಲ್ಯದ ದಿನಗಳಲ್ಲಿ ಅವರುಗಳು ನಮಗೆ ಯಾವುದೋ ಲೋಕದಿಂದ ನಮ್ಮನ್ನು ಶಿಕ್ಷಿಸಲೆಂದೇ ಆ ದೇವರು ಕಳಿಸಿದ ಶಾಲೆಯ ಪೊಲೀಸ್ ರು ಎಂಬಂತೆ ಭಯಬೀಳುತ್ತಿದ್ದೇವು. ಯಾಕೆಂದರೇ ನಮಗೆ ನಮ್ಮ ತುಂಟಾಟ ಆಟೋಪಾಠಗಳಿಗಿಂತ ಪಾಠಗಳೆಂದರೇ ಕಹಿ ಗುಳಿಗೆಯೇ ಸರಿ! ಅದನ್ನು ನುಂಗುವುದಕ್ಕೆ ನಮಗೆ ಸಾಧ್ಯವೇ ಆಗುತ್ತಿರಲಿಲ್ಲ.

ದಂಡಿಸುವವರೂ ಬದುಕಲು ಕಲಿಸುತ್ತಾರೆ ಎಂಬಂತೆ ಅಂದಿನ ಆ ಕಹಿ ಏಟುಗಳು ಇಂದು ನೆನಸಿಕೊಂಡರೇ ತುಂಬ ಸಿಹಿಯಾಗಿ ಈಗ ಮೀಸ್ ಮಾಡಿಕೊಂಡಂತಾಗಿದೆ.

ವಿದ್ಯಾರ್ಥಿ ಜೀವನ ಎಂದರೇ ಬಂಗಾರದ ಜೀವನ ಎಂದು ಇಂದು ಗೊತ್ತಾಗಿದೆ. ಆ ದಿನಗಳು ಮತ್ತೆ ನಮ್ಮ ಜೀವನದಲ್ಲಿ ಮರಳಿ ಬರಲಾರದಂತಹ ಚಿನ್ನದ ಸಿಹಿ ದಿನಗಳು ಅಷ್ಟೇ.


ನಮ್ಮಗಳಿಗೆ ಪಾಠ ಹೇಳಿಕೊಟ್ಟ ಎಲ್ಲಾ ಶಿಕ್ಷಕರು ಇಂದಿನ ಸಮಯಕ್ಕೆ ನಿವೃತ್ತಿಯನ್ನು ಹೊಂದಿರಬಹುದು. ಅವರುಗಳು ಇಂದು ಎಲ್ಲಿ ಇರಬಹುದೋ ಗೊತ್ತಿಲ್ಲ! ಶಾಲೆಯನ್ನು ಬಿಟ್ಟು ಬಂದ ಮೇಲೆ ಅತ್ತ ಕಡೆ ಪುನಃ ಹೋಗಿಲ್ಲ! ಆದರೇ ನಮ್ಮನ್ನು ನಿತ್ಯ ಕಾಡುವವ ಗುರುಗಳು ಅವರೇ ಅವರುಗಳು ಕಲಿಸಿದ ಒಂದೊಂದು ಪಾಠವೂ ಇಂದು ಅಲ್ಲಾಲ್ಲಿ ನೆನಪಾಗುತ್ತಿರುತ್ತದೆ.


ಎಲ್ಲಾ ಹಳೆಯ ಶಿಕ್ಷಕರುಗಳಿಗೂ ವರುಷ ವರುಷ ಹೊಸ ಹೊಸ ಹುಡುಗರ ದರ್ಶನವಾಗುತ್ತಿರುತ್ತದೆ. ಅವರಲ್ಲಿಯೇ ಅವರುಗಳು ದೇಶದ ಭವಿಷ್ಯವನ್ನು ಕಾಣುತ್ತಿರುತ್ತಾರೆ! ಶಿಕ್ಷಕ ವೃತ್ತಿ ಜಗತ್ತಿನಲ್ಲಿಯೇ ಅತಿ ಶ್ರೇಷ್ಠವಾದ ವೃತ್ತಿ! ಅದಕ್ಕೆ ಎಂದೂ ಯಾರು ಯಾವ ಬೆಲೆಯನ್ನು ಕಟ್ಟಲಾರರು.

ನಮ್ಮ ದೇಶದ ಸಂಸ್ಕೃತಿಯಲ್ಲಿ ಗುರುವಿನ ಸ್ಥಾನದ ಪ್ರತಿಯೊಬ್ಬರಿಗೂ ತುಂಬಾ ಗೌರವವಿದೆ.

ಅಂದು ನಮ್ಮ ಹೆತ್ತವರು ನಮ್ಮ ಶಿಕ್ಷಕರು ನಮಗೆ ಶಿಕ್ಷಿಸಿದರೇ ತಲೆನೇ ಕೆಡಿಸಿಕೊಳ್ಳುತ್ತಿರಲಿಲ್ಲ. ನಾವೇನಾದರೂ ಮನೆಯಲ್ಲಿ ಗುರುಗಳ ಮೇಲೆ ಕಂಪ್ಲೇಂಟ್ ಕೊಟ್ಟರೆ ನಾಳೆ ಶಾಲೆಗೆ ಬಂದು ವಿಚಾರಿಸಿಕೊಳ್ಳುತ್ತೇನೆ ಎಂದು ಹೇಳುತ್ತಿದ್ದರು. ನಾಳೆ ಶಾಲೆಗೆ ಬಂದು ಎಲ್ಲಾ ಶಿಕ್ಷಕರ ಮುಂದೆ ಇವರು ಹೇಳುತ್ತಿದ್ದಾ ಡೈಲಾಗ್ ಕೇಳಿ ಯಾಕಾದರೂ ನಾವುಗಳು ಕಂಪ್ಲೇಂಟ್ ಮಾಡಿದೆವೆಂದು ಅನಿಸುತ್ತಿತ್ತು. ಅಷ್ಟರ ಮಟ್ಟಿಗೆ ನಮ್ಮ ಸಮಾಜ ಶಾಲಾ ಶಿಕ್ಷಕರೆಂದರೇ ಅಕ್ಷರಸಹ ಮಕ್ಕಳನ್ನು ಸರಿಯಾದ ದಾರಿಯಲ್ಲಿ ಸಾಗಿಸುವ ಜವಾಬ್ದಾರಿಯುತ ನಾವಿಕರು ಎನ್ನುವಷ್ಟರ ಮಟ್ಟಿಗೆ ಅವರನ್ನು ಗೌರವಿಸುತ್ತಿದ್ದರು.

ಅವರುಗಳು ಏನೇ ದಂಡಿಸಿದರೂ ಅವರು ನಮ್ಮ ಎದುರಿಗೆ ಹೇಳುತ್ತಿದ್ದದೂ "ಇನ್ನೂ ಹೆಚ್ಚು ದಂಡಿಸಬೇಕು". ಸಾಣೆ ಹಿಡಿದಷ್ಟು ವಜ್ರ ಹೊಳಪು ಬರುತ್ತದೆ ಎಂದು ಗುರುಗಳಿಗೆ ಪ್ರೋತ್ಸಾಹಿಸುತ್ತಿದ್ದರು.

ಹಳ್ಳಿಗಳಲ್ಲಿ ಶಿಕ್ಷಕರೆಂದರೇ ಆ ಊರಿನ ಒಂದು ಆದರ್ಶ ಎಂಬಂತೆ ಅವರನ್ನು ನೋಡುತ್ತಿದ್ದರು. ಪ್ರತಿಯೊಬ್ಬರೂ ಅವರನ್ನು ನಮಗಿಂತ ಹೆಚ್ಚು ಅರಿವಿರುವ ವ್ಯಕ್ತಿಗಳು ಎಂಬಂತೆ ಕಾಣುತ್ತಿದ್ದರು. ಯಾವುದೇ ಸಮಸ್ಯೆಗೆ ಅವರಿಂದ ಪರಿಹಾರ ಸಿಗುವುದು ಎಂದುಕೊಂಡಿರುವರು.

ನಾವುಗಳು ಇಂದು ಯಾವುದಾದರೂ ಒಳ್ಳೆಯ ಸ್ಥಾನ ಮಾನದಲ್ಲಿದ್ದೇವೆ ಎಂದರೇ ಅದು ನಮ್ಮ ಗುರುಗಳ ಒಂದು ದೊಡ್ಡ ತರಬೇತಿಯ ಪ್ರತಿಫಲ.

ಆದ್ದರಿಂದ ನಮ್ಮ ಸಮಾಜ ಏನಾದರೂ ಹೊಸ ಭರವಸೆಯನ್ನು ಸಮಾಜದಲ್ಲಿ ಎಂದೆಂದೂ ಕಾಣಬೇಕೆಂದರೇ ಅದಕ್ಕೆ ಬೆಂಬಲವಾಗಿ ನಮ್ಮ ನಾಡಿನ ಅತಿ ದೊಡ್ಡ ಶಿಕ್ಷಕ ಸಮೊಹವೇ ಕಾರಣ.

ನಮ್ಮನ್ನು ಒಬ್ಬ ಚಿಂತನಶೀಲ,ಉತ್ತಮ ನಾಗರೀಕನಾಗಿ ಬಾಳುವಂತೆ ಮಾಡಿರುವುದರಲ್ಲಿ ಪ್ರತಿ ಶಿಕ್ಷಕರ ಕಾಣಿಕೆ ಅತಿ ದೊಡ್ಡದು.

ಪ್ರತಿಯೊಬ್ಬರೂ ತಾವುಗಳು ಬಾಲ್ಯದಲ್ಲಿ ಕಲಿತ ಶಾಲೆಯ ಶಿಕ್ಷಕರನ್ನು ಇಂದು ತುಂಬಾನೆ ಮೀಸ್ ಮಾಡಿಕೊಳ್ಳುತ್ತಿದ್ದಾರೆ ಎಂದರೇ ಅದು ಅತಿಶಯೋಕ್ತಿಯಲ್ಲ!

ನೀವುಗಳು ಏನಾಂತೀರಾ?

 ಹೇಳಿ "ಶಿಕ್ಷಕರ ಶುಭಾಶಯಗಳನ್ನು"

ಗುರುವಾರ, ಆಗಸ್ಟ್ 30, 2012

Costly Feelings!!


ಭಾವನೆಗಳ ದರ್ಶನಕ್ಕೆ ಅವಕಾಶವೇ ಇಲ್ಲ! ಇಂದು ನಾವುಗಳು ಒಂದು ಕ್ಷಣ ಒಬ್ಬರನ್ನು ಕಂಡು ನಗಲಾರದಷ್ಟು ಕಂಜೂಸ್ ಆಗಿಬಿಟ್ಟಿದ್ದೇವೆ.

ಮಾತೇ ಮಾಣಿಕ್ಯವಾಗಿದೆ. ನಗಬೇಕು ಎಂದರೇ ನಗೆ ಹಬ್ಬದಂತಹ ಕಾರ್ಯಕ್ರಮಗಳೇ ಬೇಕು. ಸಹಜ ನಗುವೇ ಮಾಯವಾಗಿಬಿಟ್ಟಿದೆ.

ಹುಟ್ಟಿದ ಕಂದಮ್ಮಗಳಿಗೆ ಅಳು  ನಗು ವೇ ಸುತ್ತಲಿನವರ ಜೊತೆಯೊಂದಿಗಿನ ಸಂವಹನ ಮಾಧ್ಯಮವಾಗಿರುತ್ತದೆ. ಆದರ ನಗು ಸುತ್ತಲಿನವರನ್ನು ಖುಷಿಪಡಿಸುತ್ತದೆ. ಅದರ ಅಳು ಮಗುವಿಗೆ ಏನೋ ತೊಂದರೆ ಇದೆ ಮತ್ತು ಅದಕ್ಕೆ ಏನೋ ಬೇಕಾಗಿದೆ ಎಂಬ ಸನ್ನೆಗಳಾಗಿ ಹೆತ್ತವರಿಗೆ ಗೊತ್ತಾಗುತ್ತದೆ.

ಹೀಗೆ ಮೊದಲ ಮೊಲಭೂತ ಭಾವನೆಗಳಿಗೆ ಕಡಿವಾಣವಾಕುವ ರೀತಿಯಲ್ಲಿ ನಾವುಗಳೆಲ್ಲಾ ತುಂಬ ಗಂಭೀರವಾಗುತ್ತಿದ್ದೇವೆ. ಇಂದು ತುಂಬ ಸೀರಿಯಸ್ ಆಗಿ ಎಲ್ಲಾ ಕಡೆ ವರ್ತಿಸುವ ರೀವಾಜನ್ನು ಅಘೋಷಿತವಾಗಿ ಜಾರಿ ಮಾಡಿಕೊಂಡುಬಿಟ್ಟಿದ್ದೇವೆ.

ಎಲ್ಲೇಲ್ಲೂ ನಿಶಬ್ಧ. ಶ್!

ಬೇರೆಯವರ ಜೊತೆಯಲ್ಲಿ ನಾಲ್ಕು ಮಾತನಾಡುವುದು ದುಬಾರಿಯ ವಿಷಯವಾಗಿದೆ. "ಅಲ್ಲಾ ಮಾತಾಡಿದರೂ ಸಿಗುವ ಲಾಭವೇನೂ?" ಎಂದು ಕೇಳುವಂತಾಗಿದೆ. ಪರಿಚಿತರು ಅಪರಿಚಿತರು ಎಂಬ ಬೇದವೇ ಇಲ್ಲದೇ ಈ ಒಂದು ಸ್ಥಿತಿ ನಮ್ಮ ಹೈಟೆಕ್ ಸಮಾಜಕ್ಕೆ ಬಂದು ಒದಗಿದೆ.

ನನಗೆ ಅನಿಸುತ್ತಿದೆ ಇದಕ್ಕೆಲ್ಲಾ ಕಾರಣ ಡಿಜಿಟಲ್ ಜಮಾನ!

ಇಂದು ನಮ್ಮೊಂದಿಗೆ ಈ ಡಿಜಿಟಲ್ ವಸ್ತುಗಳು ಎಷ್ಟರ ಮಟ್ಟಿಗೆ ಹಾಸುಹೊಕ್ಕಾಗಿವೆ ಅಂದರೇ ಅವುಗಳಿಲ್ಲದ ಮಾನವನ ಜೀವನವನ್ನು ಕಲ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.

ನಿತ್ಯ ಪ್ರತಿ ಕ್ಷಣವೋ ಮನುಷ್ಯನ ಓಡನಾಡಿ ಡಿಜಿಟಲ್ ವಸ್ತುಗಳೆ ಆಗಿಬಿಟ್ಟಿವೆ. ಅವುಗಳ ಜೊತೆಯಲ್ಲಿ ಕಳೆಯುವ, ಸ್ವರ್ಶಿಸುವ, ಮಾತನಾಡುವ, ಪ್ರೀತಿಸುವ ಕ್ಷಣಗಳು ಯಾವ ಜೀವಂತ ಮನುಷ್ಯರೊಂದಿಗೂ ಇಲ್ಲಾ!

ಅಲ್ಲಾ ಇಷ್ಟರ ಮಟ್ಟಿಗೆ ನಮಗೆ ಏನೊಂದು ಬೇಕಾಗಿಲ್ಲಾ.

ಒಂದು ಲ್ಯಾಪ್ ಟಾಪ್, ಒಂದು ಮೊಬೈಲ್, ಒಂದು ಐಪ್ಯಾಡ್, ಒಂದು ಟಿ.ವಿ, ಇಂಟರ್ ನೇಟ್ ಸಿಕ್ಕಿದರೇ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಮಾನವ ಅನ್ನುವಂತಾಗಿದೆ.

ಪ್ರತಿಯೊಬ್ಬರೂ ಅವುಗಳ ಜೊತೆಯಲ್ಲಿದ್ದಾಗ ಇಡೀ ಜಗತ್ತನ್ನೇ ಮರೆಯುವಷ್ಟರ ಮಟ್ಟಿಗೆ ಅವುಗಳ ಅವಶ್ಯಕತೆ ಮತ್ತು ಅನಿವಾರ್ಯತೆಯನ್ನು ಕಂಡುಕೊಂಡುಬಿಟ್ಟಿದ್ದಾನೆ.

ಯಾವುದೇ ನೋಟ, ಸ್ಪರ್ಶ,ಭಾವನೆ, ಮಾತು ಏನೊಂದು ಇಲ್ಲದೆ ತನ್ನಲ್ಲಿ ಉಂಟಾಗುವ ಎಲ್ಲಾ ತುಮುಲಗಳನ್ನು, ಆನಂದ, ಖುಷಿಯ ಕ್ಷಣಗಳನ್ನು ತನ್ನ ತುದಿ ಬೆರಳುಗಳಲ್ಲಿ ಎಲ್ಲಾ ನಿಶಬ್ಧವಾಗಿ ಮತ್ತೊಬ್ಬರಿಗೆ ತಲುಪಿಸುವಂತಾಗಿದ್ದಾನೆ. ಮಾತಿಗೆ ಪೂರ್ತಿ ಬರವಾಗಿದೆ ಅನಿಸುತ್ತಿದೆ.

ಯಾರನ್ನಾದರೂ ಮಾತನಾಡಿಸುವುದೇ ತುಂಬ ಕಷ್ಟಕರವಾಗಿದೆ. ಯಾರನ್ನಾದರೂ ನಗಿಸುವುದು, ಅಳಿಸಬೇಕೆಂದರೇ ಪುನಃ ಡಿಜಿಟಲ್ ಮೊರೆ ಹೋಗಬೇಕಾಗಿದೆ. ಇಲ್ಲವೆಂದರೇ ಬೇರೆಯವರ ಜೊತೆಗಿನ ಪೂರ್ತಿ ಕಮ್ಯುನಿಕೇಶನ್ ಕಟ್!

ನಿತ್ಯ ನಮ್ಮನ್ನು ನಾವುಗಳು ಕನ್ನಡಿಯಲ್ಲಿ ನೋಡಿಕೊಳ್ಳದಿದ್ದರೂ ಪೇಸ್ ಬುಕ್ ನಲ್ಲಿ ತಪ್ಪದೇ ಲಾಗಿನ್ ಆಗಿ ನಮ್ಮನ್ನು ನಾವುಗಳು ಸಮಾಧಾನ ಮಾಡಿಕೊಳ್ಳುವುಂತಾಗಿದೆ. ಅಲ್ಲಿ ಒಬ್ಬರನ್ನೊಬ್ಬರೂ ಕೇವಲ ಬೆರಳ ತುದಿಯಿಂದ ನಮ್ಮ ಮನಸ್ಸಿನ ಭಾವನೆಗಳ ಜಲಪಾತವನ್ನು ಹರಿಯಬಿಡಬಹುದಾಗಿದೆ. ನಮ್ಮ ಅನಿಸಿಕೆ ಅಭಿಪ್ರಾಯಗಳಿಗೆ ಅದೇ ಒಂದು ವೇದಿಕೆಯಾಗಿದೆ.


ಏನಾದರೂ ನಮ್ಮಲ್ಲಿ ಘಟಿಸಿದ್ದರೇ.. ಏನಾದರೂ ವಿಶೇಷತೆಯಿದ್ದರೇ.. ಯಾರನ್ನಾದರೂ ಏನಾದರೂ ಕೇಳಬೇಕೆಂದರೇ.. ಯಾರನ್ನಾದರೂ ಏನಾದರೂ ತಮಾಷೆ ಮಾಡಬೇಕೆಂದರೇ.. ಪೇಸ ಬುಕ್ ವಾಲ್ ಮೇಲೆ ನಿಮ್ಮ ಅಭಿಪ್ರಾಯಗಳನ್ನು, ಪೋಟೋಗಳನ್ನು, ವಿಡಿಯೋಗಳನ್ನು ಅಪ್ ಲೋಡ್ ಮಾಡಿ ನಿಮ್ಮ ಸ್ನೇಹಿತರ ಪ್ರತಿಕ್ರಿಯೆಗೆ ಕಾದು ಕುಳಿತಿರಬೇಕಾದ ಅನಿವಾರ್ಯತೆಯನ್ನು ನಾವುಗಳು ಇಂದು ಮಾಡಿಕೊಂಡಿದ್ದೇವೆ.

ಅಲ್ಲಿಯೇ ನಮ್ಮ ನಮ್ಮ ಹೊರ ಪ್ರಪಂಚ ತೆರೆದುಕೊಳ್ಳುವುದು. ಅಲ್ಲಿರುವ ಸಾವಿರಾರು ಸ್ನೇಹಿತರನ್ನು ಕೇವಲ ಅವರುಗಳು ಅಪ್ ಲೋಡ್ ಮಾಡಿರುವ ಪೋಟೋಗಳು, ಅವರು ಟೈಪಿಸಿರುವ ಅಕ್ಷರಗಳಿಂದ ನಾವುಗಳು ನಗಬೇಕು, ಅಳಬೇಕು. ಅವರ ವಾಲ್ ನ್ನು ಅರ್ಥಮಾಡಿಕೊಂಡು ನಮ್ಮ ಭಾವನ ಪ್ರಪಂಚದ ಫೀಲಿಂಗ್ ನ್ನು ಹರಿಯಬಿಡಬೇಕು.

ಉಫ್!

ಮೊನ್ನೇ ನನ್ನ ಸ್ನೇಹಿತ ಪೇಸ್ ಬುಕ್ ನಲ್ಲಿ ತನ್ನ ಹೆಂಡತಿ ಮಾಡಿದ ಹೊಸ ತಿನಿಸಿನ ಪೋಟೋ ಮತ್ತು ಅದರ ಗುಣಗಾನ ಮಾಡಿದ್ದ. ಅವನ  ಜೊತೆಯಲ್ಲಿ ಬಾಯಿ ತುಂಬ ನಾಲ್ಕು ಮಾತನಾಡಿ ಎಷ್ಟೊ ವರುಷಗಳಾಗಿವೆ. ಆದರೂ ಅವನು ನನ್ನ ಕಣ್ಣಳತೆಯಲ್ಲಿಯೇ ಇದ್ದಾನೆ. ಅವನ ಪ್ರತಿ ಚಲನೆಯು ನನಗೆ ನಿತ್ಯ ಫೇಸ್ ಬುಕ್ ಮೊಲಕ ತಿಳಿಯುತ್ತಿರುತ್ತದೆ. ಆ ಅಡಿಗೆಯ ಭಾವಚಿತ್ರ ನೋಡಿ ಬಾಯಿಯಲ್ಲಿಯೇ ನೀರೂರಿತು. ಆದರೇ ಅದನ್ನು ಹೇಗೆ ವ್ಯಕ್ತಪಡಿಸುವುದು. ತಮಾಷೇಗಾಗಿ ಅಲ್ಲಪ್ಪಾ ಹೇಗೆ ರುಚಿ ನೋಡುವುದು ಎಂದು ಕಾಮೇಂಟ್ ಹಾಕಿದೆ. ಆಗ ಅವನು ಹೇಳಿದ ಮನೆಗೆ ಬಾ ರುಚಿ ನೋಡುವಂತೆ! ಅಲ್ಲಾ ನಾನು ಹೋಗುವವರೆಗೂ ಆ ತಿನಿಸು ಇರುವುದೇ? ಆ ತಿನಿಸು ಇದ್ದರೂ ಅದೇ ಬಿಸಿ, ಬಿಸಿ ತಾಜಾತನವನ್ನು ಅದು ಉಳಿಸಿಕೊಂಡಿರುವುದೇ? ಉಳಿಸಿಕೊಂಡರೂ ಆ ಕ್ಷಣಕ್ಕೆ ಉದ್ಬವಿಸಿದ ಆ ನನ್ನ ಭಾವನೆಗಳನ್ನು ಪುನಃ ಹೇಗೆ ತರುವುದು!!

ಉಫ್! ನೆನಸಿಕೊಂಡರೇ ಎಷ್ಟೊಂದು ವಿಚಿತ್ರ ಅನಿಸುತ್ತದೆ.

ನಮ್ಮ ನಿತ್ಯ ಜೀವನದ ನೋವು ನಲಿವುಗಳನ್ನು ಕೇವಲ ದೃಶ್ಯ ಮತ್ತು ಶ್ರವಣ ಮಾಧ್ಯಮದ ಮೊಲಕವೇ ಹಿಡಿದಿಟ್ಟುಕೊಂಡು ಹರಿಯಬಿಡಬೇಕಾಗಿದೆ.

ಪ್ರತಿಯೊಂದನ್ನೂ ಮತ್ತೊಬ್ಬರಿಗೆ ನೇರ ನೇರ ತಲುಪಿಸುವುದಕ್ಕೆ ಇಂದು ಎಷ್ಟೇ ತಂತ್ರಙ್ಞಾನ ಮುಂದುವರಿದಿದ್ದರೂ ಮನುಷ್ಯ ಮನುಷ್ಯನ ಮಧ್ಯೆ ಈ ಡಿಜಿಟಲ್ ಮ್ಯಾನ್ ನಿಂತುಬಿಟ್ಟಿದ್ದಾನೆ ಅನಿಸುತ್ತದೆ.

ಪೋನ್ ನಲ್ಲಿ ಏನೇ ಸುಂದರವಾಗಿ ನಮ್ಮ ಫೀಲಿಂಗ್ ಗಳನ್ನು ವ್ಯಕ್ತಪಡಿಸಿದರೂ ನಮ್ಮಲ್ಲಿ ಆ ಭಾವನೆಗಳನ್ನು ವ್ಯಕ್ತಪಡಿಸುವಾಗ ನಮ್ಮ ಇಡೀ ದೇಹ, ನಮ್ಮ ಅಂಗಾಂಗಳ ಚಲನೆ, ಕಣ್ಣಿನ ಹೊಳಪು, ದ್ವನಿಯ ಜೊತೆಯಲ್ಲಿ ಏರಿಳಿತವಾಗುವ ನಮ್ಮ ಮುಖದ ಚಹರೆ ಈ ಯಾವೊಂದರ ಕಲ್ಪನೆಯಿಲ್ಲದೆ ಕೇವಲ ಕೀರಲು ದ್ವನಿಯಿಂದ ನಮ್ಮ ಖುಷಿ, ದುಃಖದ ಕ್ಷಣಗಳನ್ನು ವ್ಯಕ್ತಪಡಿಸುವ ಸ್ಥಿತಿಗೆ ಇಂದು ನಾವುಗಳು ಬಂದಿದ್ದೇವೆ.

ಎಷ್ಟೊಂದು ಸುಲಭವಾಗಿ ನಮ್ಮ ನಮ್ಮ ಭಾವನೆಗಳನ್ನು ಈ ಮೇಲ್, ಚಾಟ್ ಗಳಲ್ಲಿ ವ್ಯಕ್ತಪಡಿಸುವಂತೆ ಇಂದು ಎದುರಿನಲ್ಲಿ ನಮ್ಮ ಪ್ರೀತಿ ಪಾತ್ರರರು ಬಂದರೇ ಒಂದು ಮಾತು ಬಾಯಿಯಿಂದ ಹೊರಡುವುದು ಕಷ್ಟವಾಗಿದೆ. ಈ ಮೇಲ್ ಗಳಲ್ಲಿ ಟೈಪಿಸುವ ನೂರಾರು ಪದಗಳು, ಮೊಬೈಲ್ ನಲ್ಲಿ ಟೈಪಿಸು ನೂರಾರು ಎಸ್.ಎಂ.ಎಸ್ ಭಾವನೆಗಳು ವ್ಯಕ್ತಿ ಪ್ರತ್ಯಕ್ಷವಾದಗ ಮೂಕವಾಗಿಬಿಡುತ್ತೇವೆ.

ಈ ಮೇಲ್, ಚಾಟ್, ಪೇಸ್ ಬುಕ್, ವಿಡಿಯೋ ನಲ್ಲಿ ನೋಡಿ ಆನಂದಪಡುವ ಕ್ಷಣಗಳು ಎದುರು ಬದಿರು ನಿಂತಾಗ ಪುಲ್ ಸೈಲೆಂಟಾಗಿ ಅಪರಿಚಿತರಂತೆ ಕಕ್ಕಾಬಿಕ್ಕಿಯಾಗಿ ನಿಂತುಬಿಡುತ್ತೇವಲ್ಲಾ ಯಾಕೇ?

ಅಲ್ಲಾ ನಾವುಗಳು ನಮ್ಮ ಜೀವನವನ್ನು ಯಾವ ಕಡೆ ತೆಗೆದುಕೊಂಡು ಹೋಗುತ್ತಿದ್ದೇವೆ?

ಮಾನವನ ಸಹಜತೆಯೇ ಇಂದು ಅಸಹಜತೆಯಾಗಿ ಪರಿಣಮಿಸಿದೆ. ಮಾತಿಗೆ ಕಡಿವಾಣ ಪೂರ್ತಿಯಾಗಿಬಿಟ್ಟಿದೆ.

ಭಾವನೆಯೆಂದರೇ ಅದು ಬೆರಳ ತುದಿಯ ಮೇಲಿನ ಮೇಸೆಜ್ ಗಳಾಗಿರಬೇಕು ಎಂಬುವಂತಾಗಿದೆ ಎಂದು ನಿಮಗೆ ಅನಿಸುತ್ತಿಲ್ಲವಾ?

ಎಷ್ಟೇ ಮುಂದುವರಿದಿದ್ದರೂ ಮಾನವ ಎಂದೆಂದಿಗೂ ಸಂಘ ಜೀವಿ. ಅವನಿಗೆ ಅವನ ನೋವು ನಲಿವು ಭಾವನೆಯ ಆರಾಧಕರು ಅತಿ ಹತ್ತಿರದಲ್ಲಿಯೇ ಸ್ವೀಕರಿಸುವಂತಿರಬೇಕು.

ಯಾವುದೇ ಒಂದು ಫೀಲಿಂಗ್ ನ್ನು ಹಿಡಿದು ಹಿಡಿದು ಸ್ಟಾಕ್ ಮಾಡಿ ಅನಂತರ ಹರಿಯಬಿಡುವಂತಾಗದಿರಲಿ. ಅದು ನಮ್ಮ ಜೊತೆಯಲ್ಲಿರುವ ಹೆತ್ತವರು, ಪ್ರೀತಿ ಪಾತ್ರರು, ಸ್ನೇಹಿತರು, ನೆರೆಹೊರೆಯವರ ಜೊತೆಯಲ್ಲಿ ಅದೇ ಲೈವ್ ರೀಯಲ್ ಆಗಿ ಹರಿಯುವಂತಿರಬೇಕು.

ಎಂದೋ ಬಂದ ನಗು, ಅಳುವನ್ನು ಇಂದು ಪ್ಲೇ ಮಾಡುವಂತಾಗಬಾರದು ಅಲ್ಲವಾ?


ಗುರುವಾರ, ಆಗಸ್ಟ್ 23, 2012

ನಮ್ಮ ಗೆಲುವಿಗೆ ಚಪ್ಪಾಳೆ!!

ಕರ್ನಾಟಕಕ್ಕೆ ಹೊಸದಾಗಿ ಒಂದು ಸುತ್ತು ಮಳೆಯಾಗಿ ಬರಗಾಲ, ಬರಗಾಲ ಎಂದು ಆಕಾಶವನ್ನು ನೋಡುತ್ತಿದ್ದ ಕನ್ನಡ ಮನಗಳಿಗೆ ಪ್ರಕೃತಿ ಕೊಂಚ ತಂಪನ್ನು ಎರೆದಿದೆ.


ಹಳ್ಳಿಯ ರೈತಾಪಿ ಜನಗಳಿಗೆ ಮಳೆಯೇ ಷೇರು, ಸನಸೇಕ್ಸ್. ಆದರ ಮೇಲೆ ಅವರ ವರುಷದ ಗಳಿಕೆ ನಿರ್ಧಾರವಾಗುತ್ತದೆ. ಹಳ್ಳಿಯ ರೈತ ಚೆನ್ನಾಗಿದ್ದರೆ ದಿಲ್ಲಿಯ ದೊರೆ ಸುಖವಾಗಿರಬಹುದು. ಅವನು ನಿಟ್ಟುಸಿರಿಟ್ಟರೆ ದೇಶವೆ ಒಂದು ಕ್ಷಣ ನಡುಗಿಬಿಡುತ್ತದೆ. ನಮ್ಮದು ರೈತಾಪಿ ದೇಶ ಅವರ ಸುಖವೇ ದೇಶದ ಸುಖ. ಅವರನ್ನು ಬಿಟ್ಟು ನಾವುಗಳು ನಮ್ಮ ಭಾರತವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ.


ಪ್ರಚಲಿತ ರಾಜಕೀಯದ ಗೊಂದಲಗಳಲ್ಲಿ ಕೇಂದ್ರ ಸರ್ಕಾರಕ್ಕೆ ಕಲ್ಲಿದ್ದಲಿನ ಕಪ್ಪು ಮೆತ್ತಿಕೊಂಡಿದೆ. ಕಲ್ಲಿದ್ದಲು ಮತ್ತು ಇಂದನ ಖಾತೆಯನ್ನು ಮಾನ್ಯ ಪ್ರಧಾನ ಮಂತ್ರಿಗಳೆ ನೋಡಿಕೊಳ್ಳುತ್ತಿದ್ದಾರೆ. ಅವರು ಇದ್ದರೂ ಈ ರೀತಿಯ ಬೃಹದಾಕಾರವಾದ ಭ್ರಷ್ಟಾಚಾರ ನೆಡೆದಿದೆ ಎಂದರೇ.. ಭಾರತೀಯರಿಗೆ ನಿತ್ಯ ಒಂದಲ್ಲಾ ಒಂದು ಭ್ರಷ್ಟಾಚಾರದ ಸುದ್ಧಿಗಳ ಸುರಿಮಳೆ. ೨ಜಿ ನಂತರದ ಬಹು ದೊಡ್ಡ ಆಕ್ರಮ ಇದಾಗಿದೆ.


ಆದರೇ ಕೇಳುವವರು ಯಾರು? ನಮ್ಮ ಪ್ರಜಾಡಳಿತದಲ್ಲಿ ಕೇವಲ ಐದು ವರುಷಕ್ಕೆ ಒಮ್ಮೆ ಮಾತ್ರ ನೆಚ್ಚಿನ ಸರ್ಕಾರವನ್ನು ಆರಿಸುವ ಅವಕಾಶ. ಬದಲಾಯಿಸುವ ಅವಕಾಶ ಇದೀಯಾ? ಅಲ್ಲಿಯವರೆಗೂ ಅವರು ಏನೇನೋ ನಾಟಕ ಮಾಡಿದರೂ ಮೂಕ ಪ್ರೇಕ್ಷಕನಾಗಿ ನೋಡುವುದೊಂದೆ ಮತದಾರನ ಕಾಯಕ.


ಬದಲಾವಣೆಯ ಒಂದು ಸಣ್ಣ ಗಾಳಿ ಎಲ್ಲಿಯೂ ಕಾಣುತ್ತಿಲ್ಲಾ! ಅಷ್ಟರ ಮಟ್ಟಿಗೆ ನಿರಾಶದಾಯಕ ವಾತವಾರಣ ಇದಾಗಿದೆ.


ಸಾಮಾನ್ಯ ಜನಗಳ ನಿತ್ಯ ಜೀವನದ ವೆಚ್ಚ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ! ಪ್ರತಿಯೊಂದು ಸಾಮಗ್ರಿಗಳು ಗಗನ ಕುಸುಮದ ರೀತಿಯಲ್ಲಿ ದುಬಾರಿ ಬೆಲೆಗೆ ಏರಿಬಿಟ್ಟಿವೆ. ಆದರೆ ಅದೆ ರೀತಿಯಲ್ಲಿ ಅವನ ಆದಾಯ ಸಿಗುತ್ತಿಲ್ಲ! ಇದೆ ಅತಿ ದೊಡ್ಡ ವಿಪರ್ಯಾಸ.


ಬೆಂಗಳೂರಿಗೆ ಬಂದರೆ. ಎಲ್ಲೆಲ್ಲೂ ವಾಸನೆಯದೆ ಮಾತು!


ಬೆಂಗಳೂರು ಇಂದು ಮತ್ತೊಂದು ಅಪಖ್ಯಾತಿಗೆ ಗುರಿಯಾಗುತ್ತಿದೆ. ಉಧ್ಯಾನ ನಗರಿ, ಶಾಂತಿಯ ಸ್ವಚ್ಛ ನಗರ, ಐಟಿ, ಬಿಟಿಯ ನಗರ ಎಂಬ ಬಿರುದುಗಳೆಲ್ಲಾ ಮಣ್ಣುಪಾಲು ಮಾಡುವ ರೀತಿಯಲ್ಲಿ ಡರ್ಟಿ ಗಾರ್ಬೆಜ್ ಸಿಟಿಯಾಗುತ್ತಿದೆ. ಎಲ್ಲೆಲ್ಲಿ ನೋಡಿದರೂ, ವಾರವಾದರೂ ವಿಲೇವರಿಯಾಗದ ರಾಶಿ, ರಾಶಿ, ಗುಪ್ಪೆಯ ಕಸ, ಕಸ ಮತ್ತು ಕಸ. ಪ್ರತಿಯೊಬ್ಬರೂ ಮೂಗುಮುಚ್ಚಿಕೊಂಡು ರಸ್ತೆಗಳಲ್ಲಿ ನಡೆದಾಡುವಂತಹ ಪರಿಸ್ಥಿತಿ ಬಂದುಬಿಟ್ಟಿದೆ.


ಜನಗಳು ಸಹ ಬೇಕಾಬಿಟ್ಟಿಯಾಗಿ ನಿತ್ಯ ಟನ್ ಗಳಟ್ಟಲೆ ಕಸವನ್ನು ಉತ್ವಾದಿಸುವುದಕ್ಕೆ ಸ್ವಯಂ ಕಡಿವಾಣ ಹಾಕಿಕೊಳ್ಳಬೇಕು.


ಅಲ್ಲಾ ನಗರದ ಇಷ್ಟೊಂದು ವೇಸ್ಟ್ ಎಲ್ಲಿಗೆ ಹಾಕಬೇಕು? ನೀವೆ ಹೇಳಿ?


ನಿತ್ಯ ದೊರೆಯುವ ಈ ಗಾರ್ಬೇಜ್ ನ್ನು ನಗರದಿಂದ ದೊರಕ್ಕೆ ತೆಗೆದುಕೊಂಡು ಹೋದರೂ ಅದು ಪುನಃ ನಮ್ಮ ರಾಜ್ಯದ ಯಾವುದೋ ಒಂದು ಹಳ್ಳಿಯ ಹೊಲ, ಜಾಗ, ನೀರು ಇರುವ ಜಾಗಕ್ಕೆ ಹಾಕಬೇಕಲ್ಲವಾ? ನಮ್ಮ ನಗರಗಳು ಮಾತ್ರ ಸುಂದರ ಮತ್ತು ಆರೋಗ್ಯಕರವಾಗಿದ್ದರೇ ಸಾಕೇ? ಅಕ್ಕ ಪಕ್ಕದ ಹಳ್ಳಿಯ ಜನಗಳೇನೂ ಪಾಪ ಮಾಡಿದ್ದಾರೆ. ನಗರದ ಮಂದಿ ಉತ್ಪಾದಿಸುವ ಈ ಕಸವನ್ನು ಮತ್ತು ಕಸದ ವಾಸನೆಯನ್ನು ಕುಡಿಯಲು. ಆದ್ದರಿಂದ ಬೆಂಗಳೂರಿನ ಜನಗಳು ಇನ್ನಾದರೂ ಕಸವನ್ನು ಮಾಡುವ ಮೊದಲು ನೂರು ಬಾರಿ ಯೋಚಿಸುವುದು ಇಂದಿನ ತುರ್ತು ಕೆಲಸವಾಗಿದೆ.


ಇದು ವರ್ತಮಾನದ ಒಂದು ರೌಂಡ್ ಸಮಾಚಾರ!


ಗೆಳೆಯರ ಲೋಕದಲ್ಲಿ ವಿಶೇಷವಾದ ಘಟನೆಗಳು ಜರುಗುತ್ತಿವೆ. ಅವರುಗಳು ಅಗಾಧವಾದ ಸಾಧನೆಗಳನ್ನು ಮಾಡಲೇಬೇಕು ಎಂಬ ಒತ್ತಡದಲ್ಲಿ ವಿಭಿನ್ನವಾದ ಚಿಕ್ಕ ಚಿಕ್ಕ ಸಾಧನೆಗಳನ್ನು ಅವರುಗಳು ಕೆಲಸ ಮಾಡುತ್ತಿರುವ ಸಂಸ್ಥೆಗಳಲ್ಲಿ, ಓದುತ್ತಿರುವ ಕಾಲೇಜುಗಳಲ್ಲಿ, ಇರುವ ಊರುಗಳಲ್ಲಿ ಮಾಡುತ್ತಿದ್ದಾರೆ.


ಯಾಕೆಂದರೇ ಈ ಜೀವನ ಅನ್ನುವುದು ನಿಂತ ನೀರಾಗಬಾರದು. ಏನಾದರೂ ಒಂದು ಹೊಸತನಕ್ಕೆ ಸದಾ ನಮ್ಮನ್ನು ನಾವುಗಳು ತೆರೆದುಕೊಳ್ಳಬೇಕು.


ಹಾಗೆಯೇ ಸುಮಾರು ಸ್ನೇಹಿತರು ಹೊಸ ಹೊಸ ಕೆಲಸಗಳನ್ನು ಹುಡುಕಿಕೊಂಡು ಬೇರೆ ಬೇರೆ ಹೊಸ ಕಂಪನಿಗಳಿಗೆ ಹೋಗಿದ್ದಾರೆ. ಅಲ್ಲಿ ಪುನಃ ಹೊಸ ಕೆಲಸ, ಹೊಸ ಜನ, ಹೊಸ ವಾತವರಣವನ್ನು ಕಂಡು ಅಚ್ಚರಿಪಟ್ಟಿದ್ದಾರೆ. ಇನ್ನೊಂದಷ್ಟು ಮಂದಿ ಹೊರದೇಶಗಳಿಗೆ ತಮ್ಮ ಸಂಸ್ಥೆಗಳಿಂದ, ಓದುತ್ತಿರುವ ಕಾಲೇಜುಗಳಿಂದ ಹೋಗಿ ಹೊಸ ಅನುಭವವನ್ನು ಪಡೆದುಕೊಂಡು ಬಂದಿದ್ದಾರೆ. ಮತ್ತೊಂದಷ್ಟು ಸ್ನೇಹಿತರು ಹೊಸ ಕೆಲಸ, ಹೊಸ ಓದನ್ನು ಹುಡುಕುತ್ತಿದ್ದಾರೆ.


ನಮ್ಮಂತಹ ಸಾಮಾನ್ಯ ಜನಗಳಿಗೆ ಈ ರೀತಿಯ ಚಿಕ್ಕ ಚಿಕ್ಕ ಸಾಹಸಗಳೆ ಜೀವನದ ಮೈಲುಗಲ್ಲುಗಳು.


ನಾವುಗಳು ನಮ್ಮ ಸವೆದ ಹೆಜ್ಜೆಗಳನ್ನು ಗಮನಿಸಿದರೇ ನಾವುಗಳು ಈಗ ಇಲ್ಲಿದ್ದೇವಲ್ಲಾ ಎಂಬ ಹೆಮ್ಮೆಯನ್ನು ಮನದಲ್ಲಿ ಮೊಡಿಸಿರುತ್ತದೆ.


ಹೆತ್ತವರಿಗೆ ಇದೆ ನಾವುಗಳು ಕೊಡುವ ಒಂದು ಲೈಫ್ ಟೈಂ ಸಂತೋಷ ಅನಿಸುತ್ತದೆ. ನಮ್ಮಗಳ ಏಳ್ಗೆಯೇ ಅವರ ಗೌರವವಾಗಿರುತ್ತದೆ.


ಅಂತೂ ಈ ಸವಿ ಸವಿ ಬಾಳಿನಲ್ಲಿ ನಿತ್ಯ ಸ್ನೇಹಮಯವಾದ ವಾತಾವರಣವೇ ಬದುಕಿಗೊಂದು ಭರವಸೆಯನ್ನು ಕೊಡುತ್ತದೆ.




ನಮ್ಮ ಗೆಲುವಿಗೆ ನಮ್ಮ ಜೊತೆಯವರ ಚಪ್ಪಾಳೆಯೇ ಸ್ಫೂರ್ತಿ! ಅಷ್ಟರ ಮಟ್ಟಿಗೆ ನಾವೆಲ್ಲಾ ಧನ್ಯರು.


ಏನಾಂತೀರಾ?

Pictures Rights@ Hema Bharadwaj,Ramya Rao and Sagar Krishna 

ಬುಧವಾರ, ಆಗಸ್ಟ್ 15, 2012

ಈ ಪ್ರೀತಿಯ ಹೊಳೆ


ಹಾಯ್ ನಿರ್ಮಲಾ,

ಇಂದಿಗೆ ಒಂದು ವರುಷವಾಯಿತು ನನ್ನ ನಿನ್ನ ಮಧ್ಯೆ ಹುಟ್ಟಿಕೊಂಡ ಈ ಸ್ನೇಹ, ಪ್ರೇಮ ಮತ್ತು ಪ್ರೀತಿಗೆ!

ಅಬ್ಬಾ ಎಷ್ಟು ಬೇಗ ಮೊದಲ ವರ್ಷಾಚಾರಣೆಯ ಹೊಸ್ತಿಲಲ್ಲಿ ನಾವಿಬ್ಬರು ನಿಂತು ಬಿಟ್ಟಿದ್ದೇವೆ. ಇಂದು ಸಹ ನೀನು ನನಗೆ ನಿನ್ನೆ ಮೊನ್ನೆ ಪರಿಚಯವಾದಂತಿದೆ.

ಅದಕ್ಕೆ ಇರಬೇಕು ಕಣ್ಣಿಗಿಂತ ಹೃದಯಕ್ಕೆ ಇಷ್ಟವಾದವರ ಜೊತೆಯಲ್ಲಿ ಕಳೆಯುವ ಕ್ಷಣಗಳು ಕೇವಲ ಕ್ಷಣಗಳು ಮಾತ್ರ!

ಅಂದು  ಸ್ವಾತಂತ್ರ್ಯ ದಿನಾಚಾರಣೆ. ನನಗೋ ನಮ್ಮ ಭಾರತ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ಆಚರಣೆಯ ಉತ್ಸವಗಳ ಸಂಭ್ರಮವನ್ನು ಕಣ್ಣುತುಂಬಿಕೊಳ್ಳಲು ತುಂಬ ಆಸೆಯಾಗಿತ್ತು. ಅದಕ್ಕಾಗಿಯೇ ಅಂದು ಮುಂಜಾನೆ ಬಹು ಬೇಗ ಎದ್ದು ರೇಡಿಯಾಗಿ ನಿತ್ಯ ನಾನು ಕಾಲೇಜಿಗೆ ಹೋಗಲು ನಾನು ಹಿಡಿಯುವ ಬಸ್ಸು ಬರುವ ಜಾಗದಲ್ಲಿ ನಿಂತು ಎಂ.ಜಿ ರೋಡ್ ಕಡೆಗೆ ಹೋಗುವ ಬಸ್ಸು ಬರುವ ದಾರಿಯನ್ನೆ ನೋಡುತ್ತಾ ಸುಮಾರು ಅರ್ಧ ಗಂಟೆಯಿಂದ ಕಾಯುತ್ತಿದ್ದೆ.

ಗೊತ್ತಾ ನಮಗೆ ಬೇಕಾದ ಸಮಯಕ್ಕೆ ಯಾವ ಬಸ್ಸುಗಳು ಬರುವುದಿಲ್ಲ. ನಮಗೆ ಬೇಕಿಲ್ಲದಿರುವಾಗ ಹಿಂದೆ ಮುಂದೆ ಬಸ್ಸುಗಳ ಸಾಲೇ ಸಾಲೂ! ಇದೇ ಜೀವನದ ಮರ್ಮ ಅನಿಸುತ್ತದೆ. ಇದು ಪ್ರತಿಯೊಂದಕ್ಕೂ ಅನ್ವಯವಾಗುತ್ತದೆ.

ಹಾಗೆ ಕಾದು ಕಾದು ನಿರಾಶನಾಗಿರುವಾಗ. ಗೊತ್ತಿಲ್ಲ ಅಂದು ಆ ಮುಂಜಾನೆಯ ವಾತವರಣವೇ ಹಾಗೆ ಇತ್ತೇನೋ. ಎತ್ತಾ ಕಡೆ ನೋಡಿದರೂ ಚಿಕ್ಕ ಚಿಕ್ಕ ಶಾಲಾ ಮಕ್ಕಳ ಶಾಲಾ ಸಮವಸ್ತ್ರ ಮತ್ತು ಕೈಯಲ್ಲಿ ಕೆಸರಿ,ಬಿಳಿ,ಹಸಿರು ದ್ವಜದ ಬ್ಯಾಂಡ್, ಬಾವುಟ. ಆ ಮಕ್ಕಳ ಹೆಜ್ಜೆ,ನಗು,ಉತ್ಸಾಹವನ್ನು ಕಂಡು ಭಾರತಾಂಬೆಗೆ ಅಲ್ಲಿಯೇ ಒಂದು ನಮನ ಸಲ್ಲಿಸಿದೆ.

ನಮ್ಮ ದೇಶದ ಸ್ವಾತಂತ್ರ್ಯದ ಹಿರಿಮೆಯನ್ನು ನೋಡಬೇಕೆಂದರೇ ಅದು ಆಗಸ್ಟ ೧೫ ಮಾತ್ರ! ಅದು ನಮ್ಮೆಲ್ಲರ ಪಾಲಿಗೆ ಬಿಡುಗಡೆಯ ದಿನವೇ ಸರಿ.

ಹೀಗಿರುವಾಗಲೇ ಒಂದರೆಕ್ಷಣ ನನಗೆ ನನ್ನಲ್ಲಿಯೇ ಏನೋ ಆದಂತೆ ಅನಿಸಿಬಿಟ್ಟಿತು.

ಹಾಗೆಯೇ ಮುಂಜಾನೆಯ ನಿದ್ದೆಯಿಂದ ಎದ್ದು ಯಾವುದೋ ಘಮದ ಪರಿಮಳವೇ ನನ್ನ ಮೂಗಿಗೆ ತಲುಪಿದಂತಾಯಿತು. ಹಾಗೆಯೇ ಸುಮ್ಮನೇ ನಾನು ಯಾಕಿರಬಹುದು? ಏನಿರಬಹುದು? ಎಂದುಕೊಂಡು ನಾನು ನಿಂತು ಕೊಂಡಿದ್ದ ಆ ಅರಳಿ ಮರದಿಂದ ಬಲಕ್ಕೆ ತಿರುಗಿದರೇ..

ನಾನು ಹಾಗೆಯೇ ಸ್ಥಬ್ಧ!

ಅಲ್ಲಾ ದೇವರೇ ಇಂಥ ಶುಭ ದಿನದಂದೂ ಈ ರೀತಿಯಲ್ಲಿ ಈ ಹುಡುಗಿಯನ್ನು ನನ್ನ ಕಣ್ಣಿಗೆ ನೀ ಹೀಗೆ ಬೀಳಿಸಬಹುದೇ? ಅನಿಸಿತು.

ಈ ಪರಿಮಳ ಈ ಹುಡುಗಿ ಹಾಕಿಕೊಂಡಿರುವ ಪರಪ್ಯೂಮ್ ದೇ  ಅನಿಸಿತು.

ಅಲ್ಲಾ ನೀನು ಅದು ಹೇಗೆ ಅಂಥ ಟೇಸ್ಟ್ ಇರುವ ಪರಪ್ಯೂಮ್ ಖರೀದಿಸುತ್ತಿಯಾ?

ಅದಕ್ಕೂ ಒಂದು ಅಸಕ್ತಿ ಬೇಕು ಅನಿಸುತ್ತದೆ. ಅದರಲ್ಲಿಯೇ ಏನೂ ಒಂದು ಅಹ್ಲಾದ. ಹುಡುಗಿಯ ಬಗ್ಗೆ ಈ ಸುಮಧುರ ಸುಗಂಧದ ಪರಿಮಳವೇ ಮುನ್ನುಡಿಯಾಗಿತ್ತು.

ಹುಡುಗಿಯರಿಗೆ ಇಂಥ ಒಳ್ಳೆಯ ಟೇಸ್ಟ್ ಇರುತ್ತೇ ಎಂದು ಕೇಳಿದ್ದೆ. ಆದರೇ ನೀನು ಅಂದು ಅದನ್ನು ನಿಜ ಮಾಡಿದ್ದೆ.

ಇಷ್ಟು ದಿನವೂ ನೀನು ಇದೆ ಏರಿಯಾದಲ್ಲಿಯೆ ಇದ್ದೀಯಾ! ಎಂದು ನನಗೆ ನಾನೇ ತಬ್ಬಿಬ್ಬು ಆಗಿಬಿಟ್ಟಿದ್ದೇ.!

ಯಾಕೆಂದರೇ ನಾನು ಅಷ್ಟು ಬೇಗ ಯಾವಾತ್ತೂ ಎದ್ದಿಲ್ಲಾ! ಅಷ್ಟು ಬೇಗ ಎದ್ದು ಬಸ್ ನಿಲ್ಧಾಣಕ್ಕೆ ಯಾಕೇ ಬರಬೇಕು ಅಲ್ಲವಾ?

ನನ್ನ ಮನದಲ್ಲಿಯೇ ಆ ದೇವರಿಗೆ ಒಂದು ಚಿಕ್ಕ ನಮಸ್ಕಾರವನ್ನು ಹಾಕಿಬಿಟ್ಟೆ!

ನೀನು ಇನ್ನೂ ಇನ್ನೂ ಹತ್ತಿರಕ್ಕೆ ಬಂದಂತೆ ನನ್ನ ಎದೆಯ ಢವ  ಢವ  ಜಾಸ್ತಿಯಾಗಿಬಿಟ್ಟಿತು.

ಇದುವರೆಗೂ ಹಾಗೆ ನನಗೆ ಎಂದೂ ಸಹ ಈ ರೀತಿಯಲ್ಲಿ ಅನಿಸಿರಲಿಲ್ಲ.

ನಾನು ಓದುವ ಕಾಲೇಜಿನಲ್ಲಿ ಮಾಮೊಲಿಯಾಗಿ ಸುಮಾರು ಹುಡುಗಿಯರು ಇದ್ದಾರೆ. ಎಂದೂ ಅವರನ್ನು ನೋಡಿದಾಗ ಹೀಗೆ ಆದ ಅಂದಿನ ಅನುಭವವಾಗಿರಲಿಲ್ಲ.

ನನಗೆ ನಾನೇ ಮನದಲ್ಲಿ ಸಮಾಧಾನ ಮಾಡಿಕೊಂಡು ನಿನ್ನ ಆ ಸುಂದರ ಮುಖಾರವಿಂಧವನ್ನು ನನ್ನ ಕಣ್ಣಲ್ಲಿ ತುಂಬಿಸಿಕೊಳ್ಳಬೇಕು ಎಂದು ಕಣ್ಣುರೆಪ್ಪೆ ಬಡಿಯದೇ ನಿನ್ನನ್ನೇ ನೋಡುತ್ತಾ ಇರುವಾಗ.. ನೀನು ಏನಕ್ಕೋ ಹಾಗೆಯೇ ಹಿಂದಕ್ಕೆ ತಿರುಗಿ ನೋಡಿದಾಗ ಅಬ್ಬಾ ಏನೂ ಆ ನಿನ್ನ ಕಪ್ಪು ಕೊದಲು? ಹಾಗೆಯೇ ಪೂರ್ಣವಾಗಿ ನಿನ್ನ ಹಿಂಬದಿಯನ್ನು ಅವರಿಸಿಕೊಂಡುಬಿಟ್ಟಿವೆ. ತಲೆಗೆ ಚಿಕ್ಕದಾದ ಮಲ್ಲಿಗೆಯ ಹೊವನ್ನು ಇಟ್ಟುಕೊಂಡಿರುವುದು ಇನ್ನೂ ಹೆಚ್ಚು ಅಲಂಕಾರವಾಗಿ ನಿನ್ನನ್ನು ನನಗೆ ತೋರಿಸಿತು.

ನನಗೆ ನಾನೇ ತುಂಬ ವ್ಯಥೆಪಟ್ಟುಕೊಂಡೆ..

ಅಲ್ಲಾ ಇಲ್ಲಿಯೇ ಹತ್ತು ವರುಷದಿಂದ ವಾಸ ಮಾಡುತ್ತಿದ್ದೇನೆ. ನನಗೆ  ಒಂದು ದಿನವಾದರೂ ಇವಳ ದರ್ಶನ ಆಗಿಲ್ಲವಲ್ಲಾ?

ಇರಲಿ ಬಿಡು. ಇಂದು ನಾನು ತುಂಬಾ ಲಕ್ಕಿ! ಎಂದು ಕೊಳ್ಳುತ್ತಾ ಇರುವಾಗಲೇ..

ನೀನು ನನ್ನನ್ನು ಕುರಿತು "ರೀ ಎಂ.ಜಿ ರೋಡ್ ಕಡೆ ಹೋಗುವ ಬಸ್ಸು ಈಗ ತಾನೇ ಹೋಯ್ತು ಅನಿಸುತ್ತದೆ. ಮುಂದೆ ಎಷ್ಟೋತ್ತಿಗೆ ಇನ್ನೊಂದು ಬಸ್?" ಎಂದು ಕೇಳಿದಾಗಲೇ ನಾನು ಈ ಪ್ರಪಂಚಕ್ಕೆ ವಾಪಾಸ್ಸು ಬಂದಿದ್ದು.

ನಾನು "ಹೌದಾ! ಈಗ ಹೋಯ್ತಾ" ಎಂದು ಉದ್ಗಾರವನ್ನು ಸಣ್ಣದಾಗಿ ತೆಗೆದುಕೊಂಡು. ಬಸ್ ಕಳೆದುಕೊಂಡರು ತೊಂದರೆ ಇಲ್ಲಾ ಎಂದು. "ಇನ್ನೂ ೧೫- ೨೦ ನಿಮಿಷದ ನಂತರ ಮತ್ತೊಂದು ಬಸ್ ಇದೆ" ಎಂದೆ.

ಅಗ ನೀನು ಆ ನಿನ್ನ ಹಸಿರು ಚೂಡಿದಾರದ ಉದ್ದನೇಯ ವೇಲ್ ನ್ನು ಹಾಗೆಯೇ ತೀಡಿ ಮುಂದಕ್ಕೆ ಹೆಗಲ ಮೇಲೆ ಎಳೆದುಕೊಂಡಾಗ  ನಾನು ಅಯ್ಯೋ ಇಂದು ಏನೇ ಆಗಲಿ ನಿನ್ನನ್ನು ಪುಲ್ ಪರಿಚಯ ಮಾಡಿಕೊಳ್ಳಬೇಕು ಎನಿಸಿ. ಮಾತಿಗೆ ನಿನ್ನನ್ನಾ. "ನೀವು ಎಂ.ಜಿ ರೋಡ್ ನಲ್ಲಿ ನಡೆಯುವ ಸ್ವಾತಂತ್ರ್ಯೋತ್ಸವಕ್ಕೆ ಹೋಗುತ್ತಾ ಇದ್ದೀರಾ?" ಎಂದು ಕೇಳಿಬಿಟ್ಟೆ.

ಆಗ ನೋಡಬೇಕಾಗಿತ್ತು ನಿನ್ನ ಮುಖವನ್ನು. ಏನೂ ಇವನು ಹುಟ್ಟು ತರಲೆ ಥರಾ ಏನೇನೋ ಕೇಳುತ್ತಿದ್ದಾನೆ ಎಂದು ಕೊಂಡು ನನ್ನನ್ನೆ ದಿಟ್ಟಿಸಿ ನೋಡಿದಾಂಗೆ ಇತ್ತು. ಗೊತ್ತಾ ಆ ನಿನ್ನ ಕಣ್ಣುಗಳು ಆ ಸಮಯದಲ್ಲಿ ಎಷ್ಟೊಂದು ಸುಂದರವಾಗಿ ನನಗೆ ಕಂಡಿದ್ದವು. ಏನೂ ಸುಂದರ ಕಣ್ಣುಗಳೂ ನಿನ್ನವು ನಿರ್ಮಲಾ. ಎರಡು ಚಿಕ್ಕ ಸುಂದರ ಬೆಳ್ಳಿ ಮೀನಿನಂತೆ. ಆದರಲ್ಲಿಯೇ ಏನೋ ಬಿಡಿಸಲಾರದ ಆಕರ್ಷಣೆ ಇದೆ ಅನಿಸುತ್ತದೆ.

"ಹೌದು!" ಎಂದು ಒಂದೇ ಮಾತಿನ ಉತ್ತರ ನನ್ನನ್ನು ತುಂಬಾನೇ ನಿರಾಸೆಯನ್ನುಂಟು ಮಾಡಿತು.

ನೀನೋ ಹಾಗೊಮ್ಮೆ ಇಗೊಮ್ಮೆ ಅತ್ತಾ ಇತ್ತಾ ನೋಡುತ್ತಿದ್ದೇ. ಅದೇ ಸಮಯಕ್ಕೆ ಅನಿಸುತ್ತದೆ. ಒಂದು ಪೋನ್ ಕಾಲು ನಿನ್ನ ಮೊಬೈಲ್ ಗೆ ಬಂತು. ನೀನು ಏನೇನೋ ಗುಸ-ಗುಸ, ಪಿಸ-ಪಿಸ ಎಂದು ಮಾತಾಡಿದ ನಂತರ ಹೆಗಲಿನಲ್ಲಿದ್ದ ಆ ಕಪ್ಪನೆಯ ವೇನಿಟಿ ಬ್ಯಾಗ್ ನಲ್ಲಿ ತುರುಕಿದೆ.

ಮತ್ತೆ ನನ್ನನ್ನೊಮ್ಮೆ ನೋಡಿದೆ. ನಾನೋ ಹಂಬಲದ ಕಣ್ಣುಗಳಿಂದ ನಿನ್ನನ್ನೇ ದಿಟ್ಟಿಸಿದೆ. ಪುನಃ ಬಸ್ ಬರುವ ಎಡಗಡೆಯ ದಾರಿಯನ್ನು ನೀ ನೋಡುತ್ತಿದ್ದೆ. ನಾನು ಆ ದಾರಿಯನ್ನು ನೋಡುವ ರೀತಿಯಲ್ಲಿ ನಿನ್ನನ್ನೇ ಗಮನಿಸುತ್ತಿದ್ದೆ.

ಮನಸ್ಸಿನಲ್ಲಿಯೇ ಆ ದೇವರಿಗೆ ಆಗಲೇ ನಾನು ನನ್ನ ಹತ್ತು ಅರ್ಜಿಗಳನ್ನು ಹಾಕಿಬಿಟ್ಟಿದ್ದೆ.

ಮೊದಲನೇಯದು ಬಸ್ ಆದಷ್ಟು ಸ್ವಲ್ಪ ಲೇಟಾಗಿ ಬರಲಿ ಎಂದು.

ಪುನಃ ನಾನೇ ಹೇಳಿದೆ "ನಾನು ಎಂ.ಜಿ ರೋಡ್ ನಲ್ಲಿರುವ ಆ ಸ್ವಾತಂತ್ರ್ಯ ಸಮಾರಂಭಕ್ಕೆ ಹೋಗುತ್ತಿರುವುದು".

ಆಗ ನೀನು "ಓ!" ಅಂದು ಹಾಗೆಯೇ ವಿರುದ್ಧವಾಗಿ ಮುಖ ತಿರುಗಿಸಿದೆ.

ಅಲ್ಲಾ ಹುಡುಗರಿಗೆ ಇಷ್ಟೊಂದು ಕಷ್ಟವನ್ನು ಈ ಹುಡುಗಿಯರು ಯಾಕೆ ಕೊಡುತ್ತಾರೋ ಆ ದೇವರೇ ಬಲ್ಲ!

ಅದು ಹೊಸದಾಗಿ  ಒಬ್ಬರನ್ನೊಬ್ಬರೂ ಪರಿಚಯ ಮಾಡಿಕೊಳ್ಳುವವರೆಗೆ?

ನಮ್ಮ ಕಣ್ಣುಗಳನ್ನು, ನಮ್ಮ ಮನಸ್ಸನ್ನು ಅರಿಯುವ ಕಣ್ಣುಗಳೂ ಹುಡುಗಿಯರಾದ ನಿಮ್ಮಲ್ಲಿ ಇಲ್ಲವೇನ್ರಿ?

ಎಂಥವರನ್ನು ಒಂದು ಕ್ಷಣದಲ್ಲಿ ಅಳೆಯುವ ಆ ನಿಮ್ಮ ಬುದ್ಧಿ ನಿಮ್ಮನ್ನು ಇಷ್ಟಪಡುವ ನಮ್ಮಂಥ ಪ್ರೇಮಿಗಳ ಹೃದಯದ ಮಾತನ್ನು ಕೇಳಿಸಿಕೊಳ್ಳದಷ್ಟು ಕೀವುಡಾ?

ಮತ್ತೇ ನೀವೇ "ಯಾಕೋ ಈ ಬಸ್ ತುಂಬಾ ಹೊತ್ತಾಗುತ್ತಿದೆ ಕಣ್ರೀ.. ಬರುತ್ತೋ ಇಲ್ಲವೋ ಏನೋ ಗೊತ್ತಿಲ್ಲಾ?" ಎಂದು ನನ್ನನ್ನು ಕೇಳಿದಾಗ ನನಗೆ ಒಂದು ಚಿಕ್ಕ ಭರವಸೆಯ ಕಿರಣ ಇಣುಕಿದಂತಾಯಿತು.

ಪರವಾಗಿಲ್ಲ ಈ ಹುಡುಗಿ ನನ್ನನ್ನು ಚಿಕ್ಕದಾಗಿ ವಿಶ್ವಾಸದಿಂದ ಕಾಣುತ್ತಿದ್ದಾಳೆ ಎಂದುಕೊಂಡು ನನಗೆ ನಾನೇ ಸಮಾಧಾನ ಮಾಡಿಕೊಂಡೇ.

ಅಂದು ನಾನು ತುಂಬ ಸಭ್ಯ ರೀತಿಯಲ್ಲಿ  ಡ್ರೇಸ್ ಹಾಕಿಕೊಂಡಿದ್ದೇ. ಪುಲ್ ವೈಟ್ ಅಂಡ್ ವೈಟ್ ಬಿಳಿ ಕುರ್ತಾ ಮತ್ತು ಪೈಜಾಮ್. ನೋಡಿದರೇ ಮರಿ ಪುಡಾರಿ ಕಂಡಂತೆ ಕಾಣುತ್ತಿದ್ದೆ. ಅಲ್ಲವಾ?

ನನ್ನ ಪಟಾಲಂ ಅಂದು ನನ್ನ ಜೊತೆಯಲ್ಲಿ ಎಂ.ಜಿ ರೋಡ್ ಪ್ರೋಗ್ರಾಂ ಗೆ ಬರಲ್ಲೊಲ್ಲದೆ ಇದ್ದಿದ್ದು ನನಗೆ ಹಾಲು ಕುಡಿದಷ್ಟು ಆನಂದವಾಗಿತ್ತು. ಅವರಿಗೆಲ್ಲಾ ಹತ್ತು ದೊಡ್ಡ ಥ್ಯಾಂಕ್ಸ್ ನ್ನು ಮನಸ್ಸಿನಲ್ಲಿಯೇ ಅರ್ಪಿಸಿದ್ದೆ.

ಆಗ ನಾನೇ ಒಂದು ದಿಟ್ಟ ನಿರ್ಧಾರ ತೆಗೆದುಕೊಳ್ಳುವ ಸಮಯಕ್ಕೆ ಬಂದೆ.

"ರೀ ನಿಮಗೇನೂ ಅಭ್ಯಂತಾರ ಇಲ್ಲಾ ಅಂದ್ರೇ, ನಾವ್ಯಾಕೆ ಒಂದು ಆಟೋದಲ್ಲಿ ಈಗಲೇ ಅಲ್ಲಿಗೆ ಹೋಗಬಾರದು? ಬೇಗ ಹೋದರೇ ಸಮಾರಂಭ ಶುರುವಾಗುವುದಕ್ಕೆ ಮುನ್ನಾ  ಸರಿಯಾಗಿ ಅಲ್ಲಿರಬಹುದು" ಅಂದಾಗಾ.. ನೀನು ಸ್ವಲ್ಪ ಯೋಚಿಸಿ ಆಯ್ತು ಎಂದು ಒಪ್ಪಿಕೊಂಡಿದ್ದು. ನಾನು ಬಹುಬೇಗ ಒಂದು ಆಟೋ ಗೊತ್ತು ಮಾಡಿಕೊಂಡು ಹೋರಟಿದ್ದು. ಆಗಲೇ ಮೈಸೂರು ರೋಡ್ ಪ್ಲೈ ಒವರ್ ಮೇಲೆ ನಮ್ಮ ಆಟೋ ಕೊಯ್ಯೋ ಮರ್ರೋ ಎಂದು ಕೊಂಡು ಸಾಗುತ್ತಿದ್ದದ್ದು.. ಇಂದು ನೆನಸಿಕೊಂಡರೇ ಎಲ್ಲಾ ವಿಚಿತ್ರ ಅನಿಸುತ್ತದೆ.

ನೀವೆ ನಿಮ್ಮ ಪರಿಚಯ ಹೇಳಿಕೊಂಡಿದ್ದು. ಅದೇ ಸಮಯ ಅನಿಸುತ್ತದೆ. ೮.೪೨ ಗಂಟೆ. ಆಗಲೆ ನಿರ್ಮಲಾ ಎಂಬ ಮೂರು ಅಕ್ಷರದ ಆ ಪ್ರೀತಿಯ ಹೆಸರು ನನ್ನ ಹೃದಯದಲ್ಲಿ ಸ್ಥಾಪಿತವಾಗಿದ್ದು.

ಆಮೇಲೆ ನೀನು ಬಹುಬೇಗ ನನ್ನನ್ನು ಸ್ನೇಹಿತನ ರೀತಿಯಲ್ಲಿ ಕಂಡಿದ್ದು. ನನ್ನ ಬಗ್ಗೆ ನಾನು,ನಿನ್ನ ಬಗ್ಗೆ ಎಲ್ಲಾ ಎಲ್ಲಾ  ಪರಿಚಯ ಮಾಡಿಕೊಂಡಿದ್ದು.

ನೀನು ನನ್ನ ಕಾಲೇಜು ಪಕ್ಕದ "ರಾಣಿ" ಕಾಲೇಜು ಹುಡುಗಿ ಎಂದು ತಿಳಿದಾಗಾಂತೂ ನನ್ನ ಮನಸ್ಸಿನಲ್ಲಿಯೇ ನನ್ನನ್ನೇ ನಾನು ತುಂಬಾನೇ ಬೈದುಕೊಂಡೆ...

ಅಲ್ಲಾ ಪಕ್ಕದಲ್ಲಿಯೇ ಇದ್ದರೂ ಇಂಥ ಹೃದಯ ತುಂಬುವ ಹುಡುಗಿಯನ್ನು ನನ್ನ ಈ ಎರಡು ವರುಷದ ಕಾಲೇಜಿನ ದಿನಗಳಲ್ಲಿ ಕಾಣಲಾರದೇ ಹೋದೇನೇ? ಎಂದು ಕೊಂಡಾಗ "ಯಾವುದಕ್ಕೂ ಅದೃಷ್ಟ ಬೇಕು ಮಗಾ!" ಎಂದು ನನ್ನದೇ ಮನಸ್ಸು ನನ್ನ ನೋಂದ ಮನವನ್ನು ಸಂತಯಿಸಿತು.

ಅಂದಿನಿಂದ ಶುರುವಾಯಿತು ಅನಿಸುತ್ತದೆ. ನಂತರದ ನನ್ನ ಕಾಲೇಜು ಆರಂಭವಾಗುತ್ತಿದ್ದು ನಿನ್ನ ಕಾಲೇಜು ಟೈಂ ಟೇಬಲ್ ಜೊತೆಯಲ್ಲಿ. ಮುಂಜಾನೇಯೇ ನಿನ್ನ ಜೊತೆಯಲ್ಲಿ ಕಾಲೇಜಿಗೆ ನನ್ನ ಪಯಣ.

ನನ್ನ ಕಾಲೇಜು ಪ್ರಾರಂಭವಾಗುವುದು ಇನ್ನೂ ನಾಲ್ಕು ಘಂಟೆಯಾದರೂ ನಿನ್ನ ಜೊತೆಯಲ್ಲಿ ನಾನು ಇರಬೇಕು, ನಿನ್ನ ಜೊತೆಯಲ್ಲಿ ಮಾತನ್ನಾಡಬೇಕು, ನಿನ್ನ ಜೊತೆಯಲ್ಲಿ ನನ್ನ ಮನದ ಹಂಬಲವನ್ನು ಹೇಳಿಕೊಳ್ಳಬೇಕು! ಹೀಗೆ ಯಾವಾಗಲೂ ನಿನ್ನದೇ ಧ್ಯಾನ..

ನಿನಗೆ ಗೊತ್ತಾ ನನ್ನ ಎಲ್ಲಾ ಸ್ನೇಹಿತರನ್ನು ಈ ಒಂದು ವರುಷದಲ್ಲಿ ಪೂರ್ಣವಾಗಿ ಮರೆತೆ ಬಿಟ್ಟಿದ್ದೇನೆ. ಅವರಿಗೂ ಗೊತ್ತೂ ಈ ಪ್ರೇಮಿಗಳ ಬಾಳು.

ಅಲ್ಲಾ ಈ ಒಂದು ಸಂಬಂಧ ಎಂಥವರನ್ನು ಇಷ್ಟು ಸ್ವಾರ್ಥಿಗಳನ್ನಾಗಿ ಮಾಡಿಬಿಟ್ಟು ಬಿಡುತ್ತದೆಯೇ?

ನಮ್ಮ ಪರಿಧಿಯಲ್ಲಿ ನಾವಿಬ್ಬರಲ್ಲಾದೆ ಮತ್ತ್ಯಾರನ್ನೂ ಸೇರಿಸಿಕೊಳ್ಳುವುದಿಲ್ಲ. ನಾವುಗಳೇನೇ ಮಾಡಿದರೂ ಎಲ್ಲದೂ ಈ ಪ್ರೇಮ,ಪ್ರೀತಿಯ ಪೋಷಣೆಗಾಗಿ ಮಾತ್ರ.

ನೀ ಇಷ್ಟಪಡುವ ಹಾಡನ್ನು, ನೀ ಇಷ್ಟಪಡುವ ಪುಸ್ತಕವನ್ನು, ನೀ ಇಷ್ಟಪಡುವ ತಿನಿಸನ್ನು ನಾನು ಹೇಗೇಗೋ ಒಂದಿಸಿಕೊಂಡು ಅವುಗಳು ನೀನಗೆ ಸಮಯಕ್ಕೆ ಸರಿಯಾಗಿ ದೊರೆಯುವಂತೆ ಮಾಡುತ್ತಿದ್ದೆ.

ಅದರಲ್ಲಿಯೇ ಏನೋ ಆನಂದ ನನ್ನ ಪಾಲಿಗೆ ಸಿಗುತ್ತಿತ್ತು.

ನಾನು ನೀನು ಜೊತೆಯಲ್ಲಿ ಕೊನೆಯೆಂದರೂ ೧೦೦ ದೇಶಗಳನ್ನು ನಮ್ಮ ಜೀವನದಲ್ಲಿ ಸುತ್ತಿಬಿಡೋಣ ಎಂದು ಮಾಡಿಕೊಂಡ ಸಂಕಲ್ಪವನ್ನು ನೆನಸಿಕೊಂಡರೇ ಈ ಪ್ರೇಮಿಗಳಿಗೆ ನಿಜವಾಗಿಯೂ ಈ ರೀತಿಯ ಹುಚ್ಚು ಹುಚ್ಚು ಕನಸುಗಳಾ ಅಂಥಾ ನಾನೇ ಒಮ್ಮೊಮ್ಮೆ ಆಶ್ಚರ್ಯಪಟ್ಟಿದ್ದೀನಿ.

ಹೌದು! ಈ ಲವ್ ಎಂಬ ನಾಲ್ಕು ಅಕ್ಷರದಲ್ಲಿರುವ ಆ ಜಾದೂ ನಮ್ಮಂಥ ಯುವ ಜೋಡಿಗಳಿಗೆ ಏನನ್ನಾದರೂ ಸಾಧಿಸುವ ಒಂದು ದೈರ್ಯ ಮತ್ತು ಸ್ಥೈರ್ಯವನ್ನು ಕೊಟ್ಟೆ ಕೊಟ್ಟಿರುತ್ತದೆ.

ಗೊತ್ತಾ ನಾನು ನೀನು ಸೇರಿ ಅಂದು ಜನವರಿ ೨೬ ರಂದು ಎಸ್. ಎಲ್. ಬೈರಪ್ಪನವರ "ದಾಟು" ಕಾದಂಬರಿಯನ್ನು ಹೇಗೆ ಒಂದೇ ಪಟ್ಟಿಗೆ ಮುಂಜಾನೆಯಿಂದ ಮುಂದಿನ ಮುಂಜಾನೆಯವರೆಗೂ ಬಿಡದೇ ಓದಿ ಮುಗಿಸಿದ್ದು. ಆಗ ನೀನೆ ಸತ್ಯ ನಾನೇ ಶ್ರೀನಿವಾಸನಾಗಿದ್ದು. ನಾವುಗಳು ಸಹ ಈ ರೀತಿಯಲ್ಲಿಯೇ ಈ ನಮ್ಮ ಪ್ರೇಮವನ್ನು ಮದುವೆಯೆಂಬ ಬಂಧನದಲ್ಲಿ ಇಟ್ಟು ಎಲ್ಲಾ ಜಾತಿ, ಮತಗಳಾಚೆಗೆ ತೆಗೆದುಕೊಂಡು ಹೋಗೋಣ ಎಂಬ ಅಣೆ ಮಾಡಿದ್ದೂ.

ನೆನಸಿಕೊಂಡರೇ ಈ ಒಂದು ವರುಷದಲ್ಲಿ ಎನೆಲ್ಲಾ ದೊಡ್ಡ ದೊಡ್ಡ ಹೆಜ್ಜೆಗಳನ್ನು ನಾನು ನನ್ನ ಇಪ್ಪತ್ತು ವರುಷಗಳಲ್ಲಿ ತೆಗೆದುಕೊಳ್ಳಲಾಗದೆ ನೀನ್ನಿಂದಾಗಿ ಇಂದು ತೆಗೆದುಕೊಳ್ಳುವ  ಸ್ಫೂರ್ತಿಯಾಗಿ ನೀನು ಈ ನನ್ನ ಬಾಳಿಗೆ ಬಂದೆ ಅನಿಸುತ್ತದೆ.

ಅಬ್ಬಾ! ಬಿಡು ಇದು ಕೇವಲ ನನ್ನ ನಿನ್ನ ವರುಷದ ಪ್ರೀತಿಯ ಒಂದು ಕಿರು ಹಿನ್ನೋಟ ಮಾತ್ರ.

ಈ ರೀತಿಯಲ್ಲಿ ಇದು ನಿನ್ನ ನನ್ನ ಸವಿ ಘಳಿಗೆಗಳ ದಾಖಲಾತಿ ಮಾತ್ರ.

ನೀನು ಮುಂಜಾನೆ ಅದೇ ಆ ನಿನ್ನ ಹೆಸರನ್ನು ಮೊದಲು ನನ್ನ ಕಿವಿಗೆ ಹಾಕಿದ ಜಾಗವಾದ ಮೈಸೂರು ಪ್ಲೈ ಓವರ್ ನ ಆ ಜಾಗಕ್ಕೆ ಬರುತ್ತಿಯಲ್ಲಾ?

ಅದೇ ೮.೪೨ಕ್ಕೆ ಸರಿಯಾಗಿ?

ನಾನು ಅಲ್ಲಿಯೇ ನಿನಗಾಗಿ ಕಾಯುತ್ತಿರುತ್ತೇನೆ. ಅಲ್ಲಿಂದಲೇ ಮೋವಿಲ್ಯಾಂಡ್ ಗೆ ಹೋಗಿ ಮೊದಲ ಸಲ ಸಿನಿಮಾ ನೋಡಿಕೊಂಡು ಬರೋಣ..


ಹೀಗೆಯೇ ನಿತ್ಯನೊತನವಾಗಿ ಈ ಪ್ರೀತಿಯ ಹೊಳೆ ನಮ್ಮಿಬ್ಬರ ಮಧ್ಯೆ ಮೈಸೂರು ರಸ್ತೆಯಲ್ಲಿ ಚಲಿಸುವ ವಾಹನಗಳೋಪಾದಿಯಲ್ಲಿ ಸದಾ ಹರಿಯುತ್ತಿರಲಿ!

ಬುಧವಾರ, ಆಗಸ್ಟ್ 8, 2012

ಏಳಿ ಏದ್ದೇಳಿ


ಪುನಃ ಮತ್ತೊಂದು ಸ್ವಾತ್ರಂತ್ರ್ಯ ದಿನಾಚಾರಣೆಯ ಹೊಸ್ತಿಲಲ್ಲಿ ನಾವೆಲ್ಲಾ ನಿಂತಿದ್ದೇವೆ. ಅಂದು ನಮ್ಮ ದೇಶದ ಸ್ವಾತ್ರಂತ್ರ್ಯಕ್ಕಾಗಿ ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರು ತಮ್ಮ ತನು,ಮನ,ಧನಗೊಡಗೂಡಿ ತಮ್ಮ ತಮ್ಮ ಪ್ರಾಣವನ್ನೇ ದೇಶಕ್ಕಾಗಿ ಕೊಟ್ಟಿದ್ದಾರೆ.

ಅವರೆನ್ನೆಲ್ಲಾ ಒಮ್ಮೆ ನೆನಪು ಮಾಡಿಕೊಳ್ಳುವ ದಿನವೇ ಆಗಸ್ಟ್ ೧೫.

ಅಂದು ಅವರುಗಳು ಹೋರಾಡಿದ ಪ್ರತಿ ಫಲವೇ ನಾವುಗಳು ಇಂದು ಬೆಚ್ಚಗೆ ಈ ದೇಶದಲ್ಲಿ ಸರ್ವ ಸ್ವತಂತ್ರವಾಗಿ, ನಿರಾಳವಾಗಿ ನಾವೇ ನಾವಾಗಿ ಬದುಕುತ್ತಿರುವುದು. ಪರಕೀಯರ ೨೦೦ ವರುಷದ ಆಳ್ವಿಕೆಯಿಂದ ಬಿಡುಗಡೆ ಪಡೆದ ದಿನವನ್ನು ಕಲ್ಪಿಸಿಕೊಳ್ಳಲು ಎಷ್ಟೊಂದು ಸಂತೋಷವಾಗುತ್ತದೆ.

ನಮ್ಮನ್ನು ನಾವುಗಳೇ ಆಳಿಕೊಳ್ಳುವುದು. ನಮ್ಮ ಸರ್ಕಾರವನ್ನು ನಾವೇ ಆರಿಸಿಕೊಳ್ಳುವುದು. ನಮ್ಮ ಕಾನೂನುಗಳನ್ನು ನಾವೇ ರೂಪಿಸಿಕೊಳ್ಳುವುದು. ನಮ್ಮ ಅಭಿವೃದ್ಧಿಯ ನಕ್ಷೆಯನ್ನು ನಾವೇ ಬರೆದುಕೊಳ್ಳುವುದು. ಈ ಎಲ್ಲಾ ಅನುಕೂಲಗಳು ಸ್ವಾತ್ರಂತ್ರ್ಯ ದೊರಕಿದ ನಂತರ ನಮ್ಮಗಳಿಗೆ ಪರಿಪೂರ್ಣವಾಗಿ ಸಿಕ್ಕಿದ್ದು.

ಅದಕ್ಕಾಗಿ ಅದೆಷ್ಟು ಬೆವರನ್ನು ಗಾಂಧಿಜೀಯರೊಡಗೂಡಿ ನೂರಾರು ಮಹಾನ್ ನೇತಾರರು, ನಾಯಕರುಗಳು ದೇಶದ ಉದ್ದಾಗಲಕ್ಕೂ ಸುತ್ತಾಡಿ ನಮ್ಮ ನಮ್ಮ ಜನಗಳ ಜನ ಮನವನ್ನು ಬಡಿದೆಬ್ಬಿಸಿ ದೇಶ ಸೇವೆ ಎಂದರೇ ಏನು? ಸತ್ಯಾಗ್ರಹ ಎಂದರೇ ಏನೂ? ಅಹಿಂಸೆಯ ಮೂಲಕವೇ ಹೇಗೆ ಬ್ರೀಟಿಷರನ್ನು ಹಿಮ್ಮೆಟ್ಟಿಸಬಹುದು? ಎಂಬುದನ್ನು ತಮ್ಮ ಸತ್ಯ ಮತ್ತು ತ್ಯಾಗದ ಮೂಲಕ ಮನನ ಮಾಡಿಕೊಂಡು ಭಾರತದ ಪ್ರತಿಯೊಬ್ಬ ಪ್ರಜೆಯನ್ನು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಮಾಡಿದ್ದರು.

ಅದು ಅಷ್ಟು ಸುಲಭದ ಕೆಲಸವಲ್ಲ ಎಂಬುದು ನಮ್ಮಗಳಿಗೆ ಇತ್ತೀಚೆಗೆ ಅಣ್ಣಾ ಹಜಾರೆಯವರ ಭ್ರಷ್ಟಾಚಾರ ಹೋರಾಟದಿಂದ ಮತ್ತಷ್ಟು ಸರಿಯಾಗಿ ಮನನವಾಗಿದೆ.

ಕಳೆದ ವರುಷದ ಇದೆ ಸಮಯದಲ್ಲಿ ಅಣ್ಣಾ ಹಜಾರೆ ಪ್ರಾರಂಭಿಸಿದ ಭ್ರಷ್ಟಾಚಾರ ಅಭಿಯಾನದ ಕಾವು ಹೇಗಿತ್ತು? ಕಾಲಕ್ರಮೇಣ ಅದರ ಬಿಸಿ ಹೇಗೆ ಕಡಿಮೆಯಾಯಿತು? ಅದನ್ನು ಹೇಗೆ ಎಲ್ಲಾ ರೀತಿಯಲ್ಲೂ ತಣ್ಣಗೆ ಮಾಡಲೂ ಭಾರತಾದ್ಯಾಂತ ಒಂದು ಸಮೊಹವೇ ಕಂಕಣ ಬದ್ಧರಾಗಿ ನಿಂತಿದ್ದು. ಹಾಗೆಯೇ ಇವರುಗಳು ಈ ಹೋರಾಟವನ್ನು ಕಳೆದ ವಾರದಲ್ಲಿ ಪರಿಪೂರ್ಣವಾಗಿ ವಿಫಲಗೊಳ್ಳುವಂತೆ ಮಾಡಿರುವುದನ್ನು ಕಂಡರೇ ನಮ್ಮ ದೇಶ ಮತ್ತು ನಮ್ಮ ಜನ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಮಹತ್ವವನ್ನು ಸರಿಯಾಗಿ ಅರ್ಥ ಮಾಡಿಕೊಂಡೇ ಇಲ್ಲಾವೇನೋ ಅನಿಸುತ್ತದೆ.

ಇಂದು ಎಷ್ಟರ ಮಟ್ಟಿಗೆ ಕ್ಲೀಷೆಯಾಗಿ ರಾಜಕೀಯ, ಸರ್ಕಾರ, ಯೋಜನೆಗಳು, ಕಾನೂನುಗಳು, ಅಧಿಕಾರ ವರ್ಗ ಇತ್ಯಾದಿಗಳು ಸಾಮಾನ್ಯ ಜನರ ಕಣ್ಣಿಗೆ ಬೀಳುತ್ತಿದ್ದಾವೆ ಎಂದರೇ ಅದರಲ್ಲಿ ಕೊಂಚ ಮಟ್ಟಿಗೂ ಭರವಸೆಯ ಕಿರಣವನ್ನು ಕಾಣದಂತಾಗಿದೆ.

ಜನಗಳು ಸಹ ಒಳ್ಳೆಯ ಹೋರಾಟಕ್ಕೆ ಬೆಂಬಲವನ್ನು ಎಷ್ಟರ ಮಟ್ಟಿಗೆ ಕೊಡುವವರು ಎಂಬುದು ಅಣ್ಣ ಹಜಾರೆಯ ಹೋರಾಟ ಹಳ್ಳ ಹಿಡಿದ್ದದ್ದೇ ಸಾಕ್ಷಿ. ಯಾಕೋ ಇದನ್ನೆಲ್ಲಾ ಅರ್ಥ ಮಾಡಿಕೊಳ್ಳುವಷ್ಟರ ಮಟ್ಟಿಗೆ ನಾವುಗಳು ಅಸಮರ್ಥರೇನೋ ಅನಿಸುತ್ತದೆ.

ದೇಶವನ್ನು ಇಂದು ಅತ್ಯಂತ ನಿಷ್ಕೃಷ್ಟವಾಗಿ ಪೀಡಿಸುತ್ತಿರುವ ಅತ್ಯಂತ ದೊಡ್ಡ ರೋಗವೆಂದರೇ ಭ್ರಷ್ಟಾಚಾರ/ಲಂಚಗುಳಿತನ. ಅದು ಎಷ್ಟರ ಮಟ್ಟಿಗೆ ಸರ್ವ ವ್ಯಾಪಿಯಾಗಿ ವ್ಯಾಪಿಸಿದೆ ಎಂದರೇ.. ಅದೇ ನಮ್ಮ ದೇಶದ ಪ್ರಗತಿಗೆ ದೈತ್ಯಾಕಾರವಾಗಿ ಅಡ್ಡಗಾಲಾಗಿ ನಿಂತಿದೆ. ಇದನ್ನು ಬೇರು ಸಮೆತ ಕಿತ್ತು ಹಾಕದವರೆಗೆ ದೇಶಕ್ಕೆ ದೇಶದ ಜನಕ್ಕೆ ಮುಕ್ತಿಯೇ ಇಲ್ಲ ಎಂಬುದು ಪ್ರತಿಯೊಬ್ಬರಿಗೂ ತಿಳಿದಿರುವ ವಿಷಯ.

ಆದರೂ ಯಾಕೋ ನಮ್ಮ ಜನಗಳಿಂದ ದೊಡ್ಡ ಮಟ್ಟದ ಹೋರಾಟದ ಕೊರತೆ ಎದ್ದು ಕಾಣುತ್ತಿದೆ. ಅಂದು ೧೯೪೫ ಕ್ಕೂ ಮುನ್ನಾ ಇದ್ದಂತಹ ದೇಶಾಭಿಮಾನದ ಕಿಚ್ಚು ಸಾಮಾನ್ಯ ಜನಗಳ ಒಡಲಲ್ಲಿ ಇಂದು ಇಲ್ಲವಾಗಿದೆಯೇನೋ ಅನಿಸುತ್ತಿದೆ.

ಸ್ವಾಮಿ ವಿವೇಕಾನಂದರು ಅಂದು ಹೇಳಿದ "ಏಳಿ ಏದ್ದೇಳಿ ಗುರಿ ಮುಟ್ಟುವವರೆಗೂ ನಿಲ್ಲದಿರಿ" ಎಂಬ ಮಾತನ್ನು ಹೇಳುವ ಒಬ್ಬ ಗಟ್ಟಿ ನಾಯಕನ ಅವಶ್ಯಕತೆ ಇಂದು ನಮಗೆ ಹೆಚ್ಚಾಗಿ ಇರುವಂತಿದೆ.

ಇಂದು ಯಾವ ಸತ್ಯಾಗ್ರಹ, ಉಪವಾಸಕ್ಕೂ ಜನಗಳು, ಜನ ನಾಯಕರುಗಳು, ಸರ್ಕಾರಗಳು ಕವಡೆ ಕಾಸಿನ ಕಿಮ್ಮತ್ತನ್ನು ಕೊಡದಾರದ ಮಟ್ಟಿಗೆ ಜಡವಾಗಿ ಬಿಟ್ಟಿವೆ. ಉಪವಾಸ ಮಾಡುತ್ತಿದ್ದಾರೆ ಎಂದರೇ ಸರ್ಕಾರದಲ್ಲಿ ಅತ್ಯುನ್ನತ ಅಧಿಕಾರವನ್ನು ಹೊಂದಿರುವ ಮಂದಿಯ ಉಡಾಪೆಯ ಮಾತುಗಳನ್ನು ಕೇಳಿದರೇ..! ಅಂದು ಬ್ರೀಟಿಷ ಸರ್ಕಾರವೇ ಪರವಾಗಿಲ್ಲ ಅನಿಸುತ್ತದೆ. ಗಾಂಧಿಜೀ ಮತ್ತು ಅವರ ಅನುಯಾಯಿಗಳು ಉಪವಾಸ ಸತ್ಯಾಗ್ರಾಹ ಮಾಡಿದರೇ ಇಡೀ ಬ್ರೀಟಿಷ್ ಸರ್ಕಾರವೇ ನಡುಗುತ್ತಿತ್ತು. ಆದಷ್ಟು ಬೇಗ ಈ ನಾಯಕರುಗಳು ಉಪವಾಸ ಮಾಡುವುದನ್ನು ನಿಲ್ಲಿಸಲು ಬೇಕಾದಂತಹ ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳುತ್ತಿದ್ದರು.

ಆದರೇ ಇಂದು ಗಮನಿಸಿ ಅಣ್ಣಾ ಮತ್ತು ಅವರ ಟೀಂ ಎಷ್ಟು ಬಾರಿ ಉಪವಾಸ ಮಾಡಿತು. ಇದಕ್ಕೆ ಏನೊಂದು ಪ್ರತಿಕ್ರಿಯೇಯನ್ನು ನೀಡದೆ ಇರುವುದರಿಂದ ಉಪವಾಸ ಮಾಡುವವರೇ (ಅಣ್ಣಾ ಮತ್ತು ಅವರ ಟೀಂ) ಸ್ವತಃ ಉಪವಾಸ ನಿಲ್ಲಿಸಿ ಇಡೀ ಹೋರಾಟದ ಸಂಘಟನೆಯನ್ನು ವಿಸರ್ಜಿಸುವ ಮಟ್ಟಿಗೆ ತಮ್ಮ ನೋವಿನ ಹೆಜ್ಜೆಯನ್ನು ಇಡಬೇಕಾಯಿತು.

ಇದು ಅತ್ಯಂತಹ ದುರಾದೃಷ್ಟಕರ ಸಂಗತಿ.

ಯಾವೊಂದು ಅನಿಷ್ಟವನ್ನು ದೇಶದಿಂದ ತೊಲಗಿಸಬೇಕಾಗಿತ್ತೊ ಅದು ಇನ್ನೂ ಪುಷ್ಟಕರವಾಗಿ ನಮ್ಮ ನೆಲದಲ್ಲಿ ಬೇಳೆಯುತ್ತಿದೆ. ಅದಕ್ಕೆ ನೀರು,ಗೊಬ್ಬರವನ್ನು ಆಯಾ ಆಯಾಕಟ್ಟಿನ ಜಾಗದಲ್ಲಿರುವ ಮಹನೀಯರುಗಳೂ ಹಾಕುತ್ತಿದ್ದಾರೆ. ಇದಕ್ಕೆ ಕೊನೆಯೆಂಬುದು ಮರುಭೂಮಿಯಲ್ಲಿ ನೀರನ್ನು ಕಂಡಂತಹ ಕನಸಾಗಿದೆ.

ಇಂದು ಯವೊಬ್ಬನೂ ಕನಸು ಮನಸಿನಲ್ಲೂ ಭಾರತದ ಶಾಸಕಾಂಗಕ್ಕೆ ಸಾಮಾನ್ಯ ಪ್ರಜೆಯಾಗಿ ಚುನಾವಣೆಗೆ ನಿಂತು ಗೆಲ್ಲಲಾರದ ಸ್ಥಿತಿಯನ್ನು ತಲುಪಿದ್ದಾನೆ. ಹೆಚ್ಚು ಹಣವಂತನಿಗೆ ಮಾತ್ರ ಬಹುಮತ, ಅವನೇ ಮಂತ್ರಿ, ಮುಖ್ಯಮಂತ್ರಿ ಮಾತ್ರ, ಆವನೇ ಅಧಿಕಾರಿ!

ಗಮನಿಸಿ ರಾಜ್ಯದಲ್ಲಿ ಭೀಕರ ಬರಗಾಲವಿದ್ದರೂ ತಮ್ಮ ಕಾಲದಲ್ಲಿ ಯಾವ್ಯಾವ ದೇಶ ಸುತ್ತಬೇಕಾಗಿತ್ತೋ ಅವುಗಳನ್ನು ಈಗಲೇ ತಿರುಗಾಡಿ ಬಿಡಬೇಕು ಎಂದು ತುದಿಗಾಲಲ್ಲಿ ನಿಂತುಕೊಂಡು ವಿದೇಶ ಪ್ರವಾಸಕ್ಕೆ ಸಜ್ಜಾಗುತ್ತಾರೆ.

ಜನರುಗಳು ಜನಪ್ರತಿನಿಧಿಗಳನ್ನು ಆರಿಸಿಕಳಿಸುವುದು ಇವರುಗಳು ನಮ್ಮ ಪ್ರತಿನಿಧಿಯಾಗಿ ನಮ್ಮಗಳಿಗೆ ನೆರವಾಗಿರಲಿ ಎಂಬ ಆಶಯದಿಂದ. ಅದರೇ ಅದು ಯಾವುದು ಈ ನಾಯಕರುಗಳಿಗೆ ನೆನಪಿರುವುದಿಲ್ಲ. ಕೇವಲ ತಮ್ಮ ತಮ್ಮ ಏಳ್ಗೆಯನ್ನು ಕಾಣುವುದೇ ಅವರ ಒಂದು ಅಂಶದ ಬಹು ಮುಖ್ಯ ಯೋಜನೆಯಾಗಿದೆ.

ಮೊದಲು ಬೇರು ಮಟ್ಟದಿಂದ  ಈ ಭ್ರಷ್ಟಾಚಾರ ನಿಲ್ಲುವಂತಾಗಬೇಕು.

ಮತದಾನ ಮಾಡುವ ಮತದಾರ ತನಗೆ ಒಳ್ಳೆಯವನು ಅನಿಸಿದವನಿಗೆ ಯಾವುದೇ ಆಸೆ ಅಮೀಷಕ್ಕೆ ಬಲಿಯಾಗದೇ ಸೂಕ್ತ ವ್ಯಕ್ತಿಯನ್ನು ಆರಿಸಬೇಕು. ಆಗ ಮಾತ್ರ ಅವನಿಗೆ ಅವನ್ನನ್ನು ಅಧಿಕಾರದಲ್ಲಿ ಇದ್ದಾಗ ಪ್ರಶ್ನೆ ಮಾಡುವ ಅಧಿಕಾರವಿರುತ್ತದೆ. ಅದು ಬಿಟ್ಟು ತಾನೇ ಅವನು ಕೊಡುವ ಅವನ ಎಂಜಲನ್ನು ಮತದಾನ ಮಾಡುವ ಸಮಯದಲ್ಲಿ ತಿಂದರೇ ಕೇಳಲು ಯಾವ ಬಾಯಿಯಿರುತ್ತದೆ. ಅಲ್ಲವಾ?

ಯಾವುದೇ ಸರ್ಕಾರಿ ಕೆಲಸಗಳು ಸರಿಯಾಗಿ ಆಗಬೇಕು ಎಂದರೇ ಮಾಮೂಲಿ ಕೊಡಲೇಬೇಕು ಎಂಬವಷ್ಟರ ಮಟ್ಟಿಗೆ ಪ್ರತಿಯೊಬ್ಬರೂ ತಿಳಿದುಕೊಂಡಿರುವಂತೆ ಮಾಡಿರುವುದರ ಪರಿ ಏನೂ?

ಯಾಕೇ ಇಂದು ಪ್ರತಿಯೊಬ್ಬ ರಾಜಕಾರಣಿಯನ್ನು ಅನುಮಾನದ ದೃಷ್ಟಿಯಲ್ಲಿ ನೋಡುವಂತಾಗಿರುವುದು ಯಾವ ಕಾರಣಕ್ಕೆ?

ಒಮ್ಮೆ ಎಂ.ಎಲ್.ಎ ಅಥವಾ ಎಮ್.ಪಿ ಆದರೇ ಮುಗಿಯಿತು ಅವನ ಜೀವನದಲ್ಲಿ ಸೇಟ್ಲ್ ಆದಂತೆ ಎಂಬುವಷ್ಟರ ಮಟ್ಟಿಗೆ ಈ ಅಧಿಕಾರಿಗಳಿಗೆ, ಉಳ್ಳವರಿಗೆ ಇದು ಪ್ಯಾಶ್ ನ್ ಆಗಿಬಿಟ್ಟಿದೆ?

ನಿಜವಾಗಿಯೂ ಈ ಮಂದಿಗೆ ಜನಸೇವೆಯೇ ಅಧ್ಯ ಕರ್ತವ್ಯವಾಗಿದೆಯೇ? ಯೋಚಿಸಿ!

ಇಂದು ನಡೆಯುತ್ತಿರುವ ಈ ನಾಯಕ ಮಣಿಗಳ ದರ್ಬಾರನ್ನು ಹಿಂದೆ ನಮ್ಮ ನಾಡಿಗೆ ಸ್ವಾತಂತ್ರ್ಯ ತಂದುಕೊಟ್ಟ ಮಂದಿ ಏನಾದರೂ ನೋಡಿಬಿಟ್ಟಿದ್ದರೇ ನಿಜವಾಗಿಯೂ ಅವರು ಎಷ್ಟರ ಮಟ್ಟಿಗೆ ದಿಗ್ಬ್ರಮೆಗೆ ಒಳಗಾಗುತ್ತಿದ್ದರೂ ಆ ಭಾರತಾಂಭೇಯೆ ಬಲ್ಲಳು.

ಎಲ್ಲಾದರಲ್ಲೂ ಸ್ವಾರ್ಥ,ಸ್ವಜನಪಾತ,ಸ್ವಜಾತಿಯೇ ತುಂಬಿ ತುಳುಕುತ್ತಿದೆ. ಪ್ರತಿಯೊಂದು ಚುನಾವಣೆಯು ಈ ಮೂರು ಅಂಶಗಳ ಮೇಲೆಯೇ ನಡೆಯುತ್ತಿದೆ. ಮಾತಿಗೆ ದೇಶ ಸೇವೆ, ದೇಶ ಅಭಿವೃದ್ಧಿ.

ತಾವು ಮಾಡುವ ಎಲ್ಲಾ ಪಾಪಗಳ ರಕ್ಷಣೆಗಾಗಿ ನಿತ್ಯ ನಿರಂತರ ಒಳ್ಳೆ ಒಳ್ಳೆಯ ಹುದ್ದೆ, ಅಧಿಕಾರದಲ್ಲಿ ಇರಬೇಕು. ಅದೇ ಅವರ ಮುಖ್ಯ ಯೋಜನೆ. ತಾನಾದ ಮೇಲೆ ತನ್ನ ಮಕ್ಕಳು, ಮೊಮ್ಮಕ್ಕಳು ಹೀಗೆ ನಿತ್ಯ ವಂಶಪಾರಂಪರ್ಯವಾಗಿ ರಾಜ ಸಿಂಹಾಸಾನದ ಮೇಲೆ ವಿರಾಜಾಮಾನವಾಗಿ ಪಳ ಪಳ ನಿತ್ಯ ಹೊಳೆಯತ್ತಿರಬೇಕು.

ಬಡವರು ನಿತ್ಯ ಬಡತನದಲ್ಲಿ ಅಭಿವೃದ್ಧಿಯನ್ನುಂದುತಿರಬೇಕು. ಶ್ರೀಮಂತರು ನಿತ್ಯ ಶ್ರೀಮಂತರಾಗುತ್ತಿರಬೇಕು. ಇದೇ ಇವರು ಹೇಳುವ ಸಮಾಜವಾದ ಮತ್ತು ಸಹ ಬಾಳ್ವೇ!!

ಇನ್ನಾದರೂ ಕೂಂಚ ಬದಲಾವಣೆಯನ್ನು ನಮ್ಮ ಈ ಭೂಮಿ ಕಾಣಬೇಕಾಗಿದೆ. ಕಪ್ಪು ಹಣ, ಭ್ರಷ್ಟಾಚಾರ, ಅನೀತಿ ಶಾಶ್ವತವಾಗಿ ತೊಲಗಿ ಸ್ವಚ್ಛ ಸಮಾಜದ ಉಗಮವಾಗಬೇಕು.

ಇದು ನನಸಾಗಬೇಕೆಂದರೇ ಪ್ರತಿಯೊಬ್ಬ ಭಾರತೀಯ ಪ್ರಜೆಯ ಸ್ವಚ್ಛವಾದ, ಶುದ್ಧ ಚುನಾವಣಾ ಮತದಾನವಾಗಬೇಕು. ಅದು ಕೇವಲ ಒಬ್ಬ ಪ್ರಭಾವಶಾಲಿ,ಹಣವುಳ್ಳವನು,ಸ್ವಜಾತಿಯವನು ಇತ್ಯಾದಿಯನ್ನು ಅವಲಂಬಿಸದೇ ನಿಜವಾದ ಸಮಾಜ ಪ್ರೇಮ, ದೇಶ ಪ್ರೇಮವನ್ನು ಹೊಂದಿರುವ ವಿದ್ಯಾವಂತ ಸರಳ ಭರವಸೆಯ ವ್ಯಕ್ತಿಯ ಆಯ್ಕೆ ಮಾಡುವುದರಲ್ಲಿದೆ.

ಭಾನುವಾರ, ಆಗಸ್ಟ್ 5, 2012

ಸ್ನೇಹ ಸಂಬಂಧ!


ಸ್ನೇಹಿತರ ದಿನ. ಹತ್ತು ಹಲವಾರು ರೀತಿಯಲ್ಲಿ ತಮಗೆ ಪ್ರೀತಿ ಪಾತ್ರರಾದ ಸ್ನೇಹಿತರೊಡಗೂಡಿ ಸಂಭ್ರಮಿಸುತ್ತಾರೆ.

ಈ ಮೇಲ್, ಫೇಸ್ ಬುಕ್ ನಲ್ಲಿ ಹತ್ತು ಹಲವಾರು ಸುಂದರ ಚಿತ್ರಗಳಿರುವ ಶುಭಾಶಯ ಪತ್ರಗಳ ವಿನಿಮಯ. ಮೊಬೈಲ್ ಗಳಲ್ಲಿ ಮುಂಜಾನೆಯಿಂದಲೇ ಅವೇ ಪಾರ್ ವರ್ಡ್ ಆದ ಸ್ನೇಹಕ್ಕೆ ಸಂಬಂಧಿಸಿದ ಸುಂದರ ನುಡಿಮುತ್ತುಗಳ ಓಡಾಟ.

ಇದು ನಮ್ಮ ಪ್ರೇಂಡ್ಸ್ ಡೇ ಆಚರಣೆಯ ನೋಟ.

ಹೊರದೇಶದ ಜನಗಳು ಪ್ರತಿಯೊಂದಕ್ಕೂ ಒಂದು ದಿನವನ್ನು ಗುರುತು ಮಾಡಿ ಇಟ್ಟು ಬಿಟ್ಟಿದ್ದಾರೆ. ಯಾಕೆಂದರೇ ವರುಷದ ಬ್ಯುಸಿ ದಿನಗಳಲ್ಲಿ ಎಲ್ಲದನ್ನೂ, ಎಲ್ಲರನ್ನೂ ಸಾವಾಕಾಶವಾಗಿ ಕಾಣುವುದಕ್ಕೆ ಆಗುವುದಿಲ್ಲ ಎಂಬ ಭಯವಿರಬೇಕು.(?)

ಆದರೇ ಸಂಬಂಧಗಳಿಗೂ ಒಂದೊಂದು ದಿನವನ್ನು ಗುರುತಿಸಿರುವುದು ತುಂಬ ವಿಪರ್ಯಾಸ!(?) ಹಾಗೆಯೇ ಇಂದು ಅದು ನಮಗೆ ಬೇಕೇನೋ ಅನಿಸುತ್ತದೆ. ಆಟ್ ಲಿಸ್ಟ್ ಆ ದಿನಗಳಂದಾದರೂ ನಮ್ಮ ನಮ್ಮ ಪ್ರೀತಿಯ ಸಂಬಂಧಗಳನ್ನು ನವೀಕರಿಸಿಕೊಂಡಂತಾಗುತ್ತದೆ!

ನಮ್ಮ ಈ ದೇಶದ ಮಣ್ಣಿನಲ್ಲಿ ಈ ರೀತಿಯಲ್ಲಿ ಸಂಬಂಧಗಳಿಗಾಗಿ ಹಬ್ಬಗಳು ಹಿಂದಿನಿಂದ ಎಂದೂ ರೂಡಿಯಲ್ಲಿ ಬಂದಿಲ್ಲಾ ಅನಿಸುತ್ತದೆ. ಯಾಕೆಂದರೇ ನಮ್ಮಗಳಿಗೆ ನಿತ್ಯ ನಮ್ಮ ನಮ್ಮ ಸಂಬಂಧಗಳ ಹಬ್ಬದಲ್ಲಿಯೇ ಮುಳುಗಿರುತ್ತೆವೆ. ಎಲ್ಲರೂ ನಮ್ಮ ಸುತ್ತಲಲ್ಲೇ, ಎಲ್ಲರನ್ನೂ ಗಂಟು ಹಾಕಿಕೊಂಡು ತುಂಬ ಒಡನಾಡಿಯಾಗಿ ಒಬ್ಬರನ್ನೊಬ್ಬರೂ ಬಿಟ್ಟು ಇರದಾರದಂತಹ ನಾವೆಲ್ಲಾ ಒಂದೇ ಎಂಬ ಸುಂದರ ಭಾವನೆಯ ನಿತ್ಯ ಮೆರವಣಿಗೆಯಾಗಿರುತ್ತಿತ್ತು. ಇದಕ್ಕೆ ಉದಾಹರಣೆಯೆಂದರೇ ನಮ್ಮ ಹಳ್ಳಿಗಳಲ್ಲಿ ಇರುತ್ತಿದ್ದ ಭವ್ಯವಾದ ದೊಡ್ಡ ದೊಡ್ಡ ಅವಿಭಕ್ತ ಕುಟುಂಬಗಳು.

ಆ ಕುಟುಂಬವೋ ಇಡೀ ಊರನ್ನೇ ತನ್ನವರನ್ನಾಗಿ ಮಾಡಿಕೊಂಡಿರುತ್ತಿತ್ತು. ಊರಲ್ಲಿ ಇರುವವರೆಲ್ಲರೂ ಪರಿಚಿತರೇ ಮತ್ತು ಸ್ನೇಹಿತರೇ. ಇದು ಸಾಲದು ಎಂಬಂತೆ ಅಕ್ಕ ಪಕ್ಕದ ಊರಿನ ಮುಖ್ಯ ಮುಖ್ಯ ಜನಗಳು ಇಡೀ ಊರಿಗೆ ಅವರಿವರಿಗೆಲ್ಲಾ ಪರಿಚಿತರಾಗಿ ಅವರೆಲ್ಲಾ ನಮ್ಮವರೇ ಎಂಬಂತೆ ಆಧರಿಸುತ್ತಿದ್ದರು.

ಸಂಬಂಧಗಳ ಸರಪಣಿ ಆ ರೀತಿಯಲ್ಲಿ ಜೋಡಣೆಯಾಗಿರುತ್ತಿತ್ತು.

ಇದನ್ನೂ ಬೇರೊಂದು ರೀತಿಯಲ್ಲಿ ನೋಡುವ, ನಿರೀಕ್ಷಿಸುವ, ಅಳೆಯುವ ಸಮಯವೇ ಇರುತ್ತಿರಲ್ಲಿಲ್ಲ. ಹಾಗೆಯೇ ಆ ರೀತಿಯ ಋಣಾತ್ಮಕವಾದ ಮನಸ್ಸೆ ಬರುತ್ತಿರಲಿಲ್ಲ.

ಅಲ್ಲಿ ಇದ್ದಿದ್ದು ಒಬ್ಬರನ್ನೊಬ್ಬರೂ ಕಾಳಜಿಯಿಂದ ಕಾಣುವ ನಿಷ್ಕಲ್ಮಶವಾದ ಹೃದಯ ಮಾತ್ರ.

ಇದು ಇಂದು ಎಲ್ಲಿ ಕಾಣಬೇಕು ಗುರೂ ಅನ್ನುತ್ತೀರಾ!

ನಾವು ಬದುಕುತ್ತಿರುವ ಕಾಲವೇ, ಜನವೇ ನಮ್ಮನ್ನು ದಿಕ್ಕು ತಪ್ಪಿಸಿದೀಯಾ ಎನ್ನುವಂತಾಗಿದೆ. ಯಾವುದಕ್ಕೂ ಸಮಯವಿಲ್ಲ. ಪ್ರತಿಯೊಂದು ಸಮಯ ವ್ಯರ್ಥ ಅನಿಸುತ್ತಿದೆ. ಒಂದು ಕ್ಷಣದ ನಗುವನ್ನು ಪರಿಚತರಿಗೆ/ಅಪರಿಚಿತರಿಗೆ ನೀಡುವುದಕ್ಕೂ ಕಂಜೂಸ್ ಮಾಡುತ್ತಿದ್ದೇವೆ.

ಈ ರೀತಿಯಲ್ಲಿ ಇರಬೇಕಾದರೇ ಮನುಷ್ಯ ಮನುಷ್ಯನ ನಡುವೆ ಇರಬೇಕಾದಂತಹ ಸಹಜವಾದ ಸರಳ ಆ ಒಂದು ಹೊಂದಾಣಿಕೆಯ ಸ್ನೇಹ ಸೆಲೆ ಎಲ್ಲಿಯೋ ಬತ್ತಿ ಹೋಗಿಬಿಟ್ಟಿದೆ ಅನಿಸುತ್ತದೆ.

ಪ್ರತಿಯೊಂದನ್ನೂ ಪ್ರಶ್ನಿಸಿ, ಎರಡು ಮೂರು ಬಾರಿ ಪರೀಕ್ಷಿಸಿ ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ನಾವುಗಳು ಇಂದು ಇದ್ದೇವೆ.

ಯಾರನ್ನೂ, ಯಾವುದನ್ನೂ ಥಟ್ ಅಂದುಕೊಂಡು ಸಹಜವಾದ ಬಂಧನವನ್ನು, ಭಾವನೆಗಳನ್ನು ವ್ಯಕ್ತಪಡಿಸಲಾರದಷ್ಟು ಕಠಿಣ ಮನಸ್ಥಿತಿಯವರಾಗಿದ್ದೇವೆ.

ಅಲ್ಲವಾ?

ಎಂಥವರನ್ನೂ ಅನುಮಾನದ ಮೂಲಕ ನೋಡುವ ಕಣ್ಣುಗಳನ್ನು, ಜಾಣ್ಮೆಯನ್ನು ನಾವುಗಳು ಸಂಪಾಧಿಸಿರುವುದೇ ನಮಗೆ ಹೆಮ್ಮೆಯ ವಿಷಯವಾಗಿದೆ. ಪ್ರತಿಯೊಂದು ಸಂಬಂಧವನ್ನು, ವಿಶ್ವಾಸವನ್ನು, ಲಾಭ-ನಷ್ಟಗಳ ಮೇಲೆ ನಿಲ್ಲಿಸಲು ತಯಾರಿ ನಡೆಸುತ್ತಿದ್ದೇವೆ. ಈ ಸಮಯವನ್ನು ಇದಕ್ಕಾಗಿ/ಇವ(ನಿ)ಳಿಗಾಗಿ ಇಷ್ಟು ಕೊಟ್ಟಿದ್ದೇವೆ. ಮುಂದೆ ಅದೆಷ್ಟು ಲಾಭ ಬರುತ್ತದೆ? ಎಂದು ಮುಖಾಕ್ಕೆ ಹೊಡೆದ ರೀತಿಯಲ್ಲಿ ಕೇಳುತ್ತಿದ್ದೇವೆ.

ಇಲ್ಲವೆಂದರೇ ಸ್ನೇಹದ ಬೆಲೆ ಏನು? ಎನ್ನುತ್ತಿದ್ದೇವೆ.

ನಿನ್ನ ಸ್ನೇಹಿತರು ನಿನಗೆ ಉಪಕಾರಿಯಾಗಿರಬೇಕು. ಅವರಿಂದ ನೀನಗೆ ಲಾಭವಿರಬೇಕು. ಸುಖಸುಮ್ಮನೇ ಬಾಯಿಯಲ್ಲಿ ಮಾತು ಸುರಿಸಿದರೇ ಏನೂ ಉಪಯೋಗ ಗುರೂ! ಅನ್ನುತ್ತಿದ್ದೇವೆ. ಈ ರೀತಿಯಲ್ಲಿ ಪ್ರತಿಯೂಬ್ಬರನ್ನೂ ಮೊದ ಮೊದಲೇ ಆ ರೀತಿಯ ಸಂಕಲನ, ವ್ಯವಕಲನದ ಲೆಕ್ಕಾಚಾರದಲ್ಲಿ ನಮ್ಮವರನ್ನಾಗಿಸಿಕೊಳ್ಳುತ್ತಿದ್ದರೇ.. ಯಾವ ಸಂಬಂಧಗಳಾದರೂ ಶಾಶ್ವತವಾಗಿ ಉಳಿಯಲು ಹೇಗೆ ಸಾಧ್ಯ?

ಅಲ್ಲಿ ಸುಂದರ ಮದುವೆಯ ಸಂಜೆಯ ಅರತಕ್ಷತೆ. ನಾಳೆ ಮುಂಜಾನೆ ಎರಡು ಹೊಸ ಜೋಡಿಗಳು ಸಪ್ತಪದಿ ತುಳಿಯುವವರಿದ್ದಾರೆ.

ಅರತಕ್ಷತೆಯಲ್ಲಿ ಭಾವಿ ವದುವರರಿಗೆ ಶುಭಕೋರಲು ಬಂದಂತಹ ದಂಪತಿಗಳ ಮಾತು " ನಾನು ಈ ನನ್ನ ಸ್ನೇಹಿತನಿಗೆ ಹೇಳುತ್ತಿದ್ದೇನೆ. ನಿನ್ನ ಮಗಳನ್ನು ಪೂರ್ತಿ ಓದಿಸಿ ಅವಳ ಕಾಲ ಮೇಲೆ ಅವಳನ್ನು ನಿಲ್ಲುವಂತೆ ಮೊದಲು ಮಾಡು. ಈ ಮದುವೆಯಾಗುವ ಗಂಡುಗಳು ಎಲ್ಲಿಯವರೆಗೆ ಜೊತೆಯಲ್ಲಿ ಇರುತ್ತಾರೋ ಗೊತ್ತಿಲ್ಲಾ. ಯಾವಾಗ ಬೇಕಾದರೂ ಕೈ ಬಿಡಬಹುದು."

ನನಗೆ ತುಂಬ ಆಶ್ಚರ್ಯವಾಯಿತು. ಮದುವೆಯ ಹಾಲ್ ನಲ್ಲಿ ಈ ರೀತಿಯ ಋಣಾತ್ಮಕವಾದ ಭಾವನೆಯ ಬೀಜ!

ಸಂಬಂಧಗಳು ಅಷ್ಟರ ಮಟ್ಟಿಗೆ ಶೀಥಿಲವಾಗಿಬಿಟ್ಟಿದ್ದಾವೇಯೇ ಅಥವಾ ನಾವು ನಿತ್ಯ ನೋಡುವ ಈ ಸಿನಿಮಾ, ಟಿ.ವಿ ಈ ದೃಶ್ಯ ಮಾಧ್ಯಮಗಳಲ್ಲಿ ಬರುವ ಕಥೆಗಳು ನಮ್ಮ ಜನಗಳ ಮನಸ್ಸನ್ನು ಈ ರೀತಿಯಲ್ಲಿ ಯೋಚಿಸಲು ಪ್ರೇರಪಿಸುತ್ತಿದ್ದಾವೆಯೇ?

ಯಾಕೆ ಇಂದು ಮದುವೆ ಎಂಬ ಬ್ರಹ್ಮ ಮಾಡಿದ ಗಂಟು/ಬಂಧನ ಯಾವಾಗ ಬೇಕಾದರು ಹರಿದುಕೊಳ್ಳುವಂತಹದ್ದು ಎಂಬ ರೀತಿಯಲ್ಲಿ ನಮ್ಮ ಯುವಪೀಳಿಗೆಗೆ ನಾವು ತೋರಿಸಿಕೊಡುತ್ತಿದ್ದೇವೆ?

ಪುರಾಣದ ರಾಮ-ಸೀತೆ, ನಳ-ದಮಯಂತಿಯರು ಜೀವನದಲ್ಲಿ ಏನೇ ಕಷ್ಟಕೋಟಲೆಗಳು ಬಂದರು ಎಂದಿಗೂ ಒಬ್ಬರನ್ನೊಬ್ಬರೂ ಬೇರೆಯಾಗದೇ ಹೋರಾಡಿದ ಗಟ್ಟಿ ಬಂಧನದ ಸಂಬಂಧದ ಕಥೆಗಳ್ಯಾಕೆ ನಮ್ಮ ಯುವಕ ಯುವತಿಯರ ಮನಸ್ಸಿನಲ್ಲಿ ಇಂದು ನಿಂತಿಲ್ಲಾ?

ಇಂದು ತುಂಬ ಚಿಕ್ಕ ಚಿಕ್ಕ ವ್ಯತ್ಯಾಸಕ್ಕೆ ಡೈವರ್ಸ್ ಮೊರೆ ಹೋಗುತ್ತಿರುವುದು. ಇದು ಏನನ್ನು ಸೂಚಿಸುತ್ತದೆ.

ಸ್ನೇಹವೆಂದರೇ ಎಲ್ಲಾ ಸಂಬಂಧಕ್ಕೂ ಮೀಗಿಲಾಗಿದ್ದು ಎನ್ನುವುದಕ್ಕೆ ಆದರ್ಶವಾದ  ಶ್ರೀ ಕೃಷ್ಣ-ಸುಧಾಮ, ದುರ್ಯೋಧನ-ಕರ್ಣರ ಕಥೆಗಳೆಲ್ಲಾ ಇಂದು ಸುಳ್ಳು ಎನ್ನುವಷ್ಟರ ಮಟ್ಟಿಗೆ ನಮ್ಮ ನಮ್ಮ ಯುವ ಮನಸ್ಸುಗಳನ್ನು ಟ್ಯೂನ್ ಮಾಡಿಕೊಂಡಿರುವಿವೆಲ್ಲಾ ಯಾಕೆ?

ಯಾವುದೂ ಶಾಶ್ವತವಲ್ಲಾ ಎಂಬ ವ್ಯರಾಗ್ಯ ಭಾವನೆಯನ್ನು ನೈಸರ್ಗಿಕವಾಗಿರುವ ಮಾನವ ಸಂಬಂಧಗಳಿಗೆ, ಭಾವನೆಗಳಿಗೆ ತಳುಕು ಹಾಕುವ ಮನಸ್ಸನ್ನು ವೇಗದ ಯುಗದಲ್ಲಿ ನಾವು ಯಾಕೇ ಮಾಡುತ್ತಿದ್ದೇವೆ?

ಇದಕ್ಕೆಲ್ಲಾ ಉತ್ತರ ನಮ್ಮ ನಮ್ಮಲ್ಲಿಯೇ ಉಂಟು.

ಒಂದು ಸುಂದರವಾದ ಆರೋಗ್ಯಕರವಾದ ವ್ಯಕ್ತಿ ವ್ಯಕ್ತಿ ಸಮಷ್ಠಿಯ ತಂತುವಿನ ಕೊಂಡಿಗಳ ನಡುವಿನ ಬಂಧನವನ್ನು ನಿರಂತರವಾಗಿ ಹಾಗೆಯೇ ಇರುವಂತೆ ಮಾಡುವ ಕೆಲಸವನ್ನು ಪ್ರತಿಯೊಬ್ಬರೂ ಮಾಡಬೇಕಾಗಿರುವುದು ಅಧ್ಯ ಕರ್ತವ್ಯ!

ಬುಧವಾರ, ಜುಲೈ 25, 2012

ನನ್ನೂರು ನನ್ನ ಜನ


ಹುಟ್ಟೂರು ಅಂದರೇ ಅದು ನಮ್ಮದೇ ಊರು ಎಂಬ ಅಭಿಮಾನ. ಅಲ್ಲಿ ನಾವು ಹೇಗೆ ಇದ್ದರೂ ಇರಬಹುದು. ನಮಗೆ ಉಸಿರು ಕೊಟ್ಟ ಜಾಗ. ನಾವು ಬೆಳೆಯಲು ಕಾರಣವಾದ ಪರಿಸರವನ್ನು ನೀಡಿದ ಸ್ಥಳ. ಅಲ್ಲಿ ಏನೇಲ್ಲಾ ತನಗಳನ್ನು ಮಾಡಿರುತ್ತೇವೋ ಗೊತ್ತಿಲ್ಲ!

ನಮ್ಮನ್ನು ಒಂದು ಮರ್ಯಾದೆಯ ಸ್ಥಿತಿಗೆ ತಂದಿರುವ ತಾಣ ಅದು.ಅದೆ ನಮಗೆ ಕರ್ಮ ಭೂಮಿ. ಅಲ್ಲಿಂದಲೇ ನಮ್ಮ ಎಲ್ಲಾ ತಪ್ಪು ಒಪ್ಪುಗಳನ್ನು ಕಲಿತುಕೊಂಡಿರುತ್ತೇವೆ. ನಾವು ಮನುಷರು ಎಂದು ಹೇಳಿದ್ದೇ ಆ ನಮ್ಮ ಹುಟ್ಟಿದ ಭೂಮಿ.

ಜಗತ್ತಿನ ಯಾವೊಂದು ಜಾಗದಲ್ಲೂ ಸಿಗದ ನೆಮ್ಮದಿ ಸ್ವಾತಂತ್ರ್ಯ ನಮ್ಮ ಊರಿಗೆ ನಾವು ಬಂದಾಗ ಸಿಗುತ್ತದೆ. ಸುಖದ ಸುಪ್ಪತ್ತಿಗೆಯ ಮೇಲೆ ನಿತ್ಯ ಇದ್ದಾಗಲೂ ಇಲ್ಲದ ನೆಮ್ಮದಿಯ ರಾತ್ರಿಯ ನಿದ್ದೆ ಇಲ್ಲಿಯ ಒಂದು ಚಿಕ್ಕ ಹಳೆ ಚಾಪೆಯ ಮೇಲೆ ದೂರಕುತ್ತದೆ.

ಹಲವು ದಿನಗಳನ್ನು ದೂರದಲ್ಲಿ ಕಳೆದು ತನ್ನ ಊರಿಗೆ ವಾಪಾಸ್ಸಾಗುವಾಗ ಸಿಗುವ ಮನಸ್ಸಿನ ಆನಂದವನ್ನು ವರ್ಣಿಸಲು ಸಾಧ್ಯವಿಲ್ಲ ಬಿಡಿ. ಅದೇ ಮನುಷ್ಯನ ಸಂತೋಷದ ಉತ್ಕೃಷ್ಟ ಸಮಯ ಅನಿಸುತ್ತದೆ.

ಯಾವೊಂದು ಕಟ್ಟುಪಾಡುಗಳಿಲ್ಲದೆ ಎಲ್ಲಿ ಬೇಕೆಂದರಲ್ಲಿ ಧಾರಾಳವಾಗಿ, ನಿರಾಂತಕವಾಗಿ ಅಡ್ಡಾಡುವ ಜಾಗವೆಂದರೇ ನಮ್ಮೊರೂ ಮಾತ್ರ. ಅಲ್ಲಿ ಸಿಗುವ ಪ್ರತಿಯೊಬ್ಬರೂ ನಮ್ಮವರೇ. ಅವರಿಗೆ ನಾನು ಗೊತ್ತೂ ನನಗೆ ಅವರು ಗೊತ್ತೂ. ಯಾವೊದೇ ಸಂಕೋಚವಿಲ್ಲದೇ ಮಾಮೊಲಿ ಮನುಷ್ಯನಾಗಿ ವರ್ತಿಸುವೆವು.


ಯಾವುದೇ ಕೃತಕವಾದ ಮುಖವಾಡಗಳನ್ನು ನಮ್ಮ ಮುಖದ ಮೇಲೆ ನಾವು ಇಟ್ಟುಕೊಳ್ಳುವ ಅವಶ್ಯಕತೆಯಿಲ್ಲ.

ದಾರಿಯಲ್ಲಿ ಸಿಗುವ ನನ್ನೂರಿನ ಜನಗಳ ನೈಸರ್ಗಿಕವಾದ ಆ ನಗುವಿನ ಮುಂದೆ ಎಲ್ಲಾದನ್ನೂ ನಿವಾಳಿಸಿ ಹಾಕಬೇಕು.

ಅವರು ಕೇಳುವ ಕುಶಲೋಪಾಚಾರ ದೇವರೆ ನನ್ನ ಬಳಿ ಬಂದು ವಿಚಾರಿಸಿದಂತೆ!

ನಾನು ನಾನಾಗಿ ನನಗೆ ತಿಳಿದ ರೀತಿಯಲ್ಲಿ ಸಾಮಾನ್ಯನಾಗಿ ಅಡ್ಡಾಡಬಹುದು.

ಈ ರೀತಿಯ ಭಾವನೆಯನ್ನು ಪರಸ್ಥಳದಲ್ಲಿ ಕಾಣುವುದು ಅಸಾಧ್ಯ. ನಮಗೆ ಇಷ್ಟವಿಲ್ಲದಿದ್ದರೂ ಹತ್ತು ಹಲವಾರು ಮುಖವಾಡಗಳನ್ನು ಧರಿಸಿ ಬೇರೆಯವರಿಗಾಗಿ ಬದುಕನ್ನು ದೂಡಬೇಕಾದ ಸ್ಥಿತಿ.

ಅದಕ್ಕೆ ಇರಬೇಕು. ಹೊಸ ಸ್ಥಳಗಳಲ್ಲಿ ನಮ್ಮದಲ್ಲದ ಜಾಗಗಳಲ್ಲಿ ಏನೋ ಒಂದು ರೀತಿಯ ಆತಂಕದ ಕ್ಷಣಗಳು, ಭಯ ಮಿಶ್ರಿತವಾದ ನೋಟಗಳನ್ನು ಕಣ್ಣಿನಲ್ಲಿ ನಿತ್ಯ ಕಟ್ಟಿಕೊಂಡಿರಬೇಕಾಗುತ್ತದೆ. ಮನೆಯಿಂದ ಒಂದು ಹೆಜ್ಜೆ ಹೊರ ಇಡಬೇಕಾದರೂ ಹತ್ತು ಹಲವು ಬಾರಿ ಮುಂಜಾಗರುಕತೆಯಂತೆ ನನ್ನನ್ನೇ ನಾನು ಪರೀಕ್ಷಿಸಿಕೊಂಡು ಎಲ್ಲಾ ಸರಿ ಇದ್ದಂಗೆ ಇದೆ ಎಂದು ಕೊಂಡು ಬರುವುದು.

ಕೆಲವೇ ಪರಿಚಿತ ಮುಖಗಳ ಜೊತೆಯಲ್ಲಿ ಅಸಂಖ್ಯವಾದ ಅಪರಿಚತ ಜನಗಳ ನಡುವೆ ನನ್ನ ಬದುಕು ಜೀವನವನ್ನು ಸಾಗಿಸಬೇಕಾದ ಅನಿವಾರ್ಯತೆಯೇ ಈ ಪಟ್ಟಣ ಜೀವನ.

ಎಷ್ಟೊಂದು ಜನರಿದ್ದಾರೆ. ಜನರೇ ಜನರೂ ಪ್ರತಿಯೊಬ್ಬರೂ ಎಲ್ಲಾ ಜಾಗದಲ್ಲೂ ಜೊತೆಯಲ್ಲಿಯೇ ಸಾಗುತ್ತಾರೆ. ಅದರೇ ಯಾರೊಬ್ಬರೂ ನನ್ನನ್ನು "ನೀನೂ ಯಾರು?" ಎಂದು ಕ್ಯಾರೇ ಅನ್ನುವುದಿಲ್ಲ. ಎಲ್ಲರೂ ಅವರವರ ಪಾಡಿಗೆ ಅವರದೇಯಾದ ಲೋಕದಲ್ಲಿ ದೂರದಲ್ಲಿ ನಿಲ್ಲುತ್ತಾರೆ.

ನನಗೆ ಅನಿಸುತ್ತದೆ ಇದೆ ಭಾವನೆ ಅವರುಗಳಿಗೆಲ್ಲಾರಿಗೂ ನಿತ್ಯ ಆಗುತ್ತಿರಲೇ ಬೇಕು.

ನಿಜ! ಅವರು ನನ್ನಂತೆಯೇ ಮನುಷರಲ್ಲವಾ?

ಎಷ್ಟೊಂದು ವಿಪರ್ಯಾಸ ಎಲ್ಲಾ ಇದ್ದು ಏನೂ ಇಲ್ಲದ ಜೀವನ.

ನನ್ನೂರು ಅದಕ್ಕೆ ನನಗೆ ಹೆಚ್ಚು ಇಷ್ಟವಾಗುವುದು. ಪರ ಊರಿನಿಂದ ನನ್ನೂರುಕಡೆಗೆ ಮುಖ ಮಾಡಿದ ಕ್ಷಣದಿಂದ ನನ್ನ ಮನೋಲೋಕವೇ ಹಾರುವ ಹಕ್ಕಿಯಾಗಿ ಬಿಡುತ್ತದೆ. ಸರ್ವ ಸ್ವತಂತ್ರದ ಲತೆಯಾಗಿ ಎಲ್ಲೆಲ್ಲೂ ಹರಿದುಬಿಡುತ್ತದೆ. ಅತಿ ಹೆಚ್ಚು ಆನಂದಮಯವಾದ ಕ್ಷಣ ಇದಾಗಿರುತ್ತದೆ ಅನಿಸುತ್ತದೆ.

ಬಿಗಿಯಾದ ಒಂದು ವಾತವರಣದಿಂದ ತಿಳಿಯಾದ ತಣ್ಣನೆಯ ಹಚ್ಚ ಹಸಿರಿನ ಸಾಮಾನ್ಯವಾದ ನಿಶಬ್ಧವಾದ ಸುಂದರ ಸ್ವರ್ಗದಂತಹ ತಾಣಕ್ಕೆ ಹೋದ ಅನುಭವ.

ಅಲ್ಲಿ ನಾನು ಕಾಲೂರುವ ಭೂ ಮಣ್ಣಿನ ಸ್ಪರ್ಷದಿಂದ ಪ್ರಾರಂಭಿಸಿ ನಾನು ನೋಡುವ ಪ್ರತಿಯೊಂದು ನೋಟವು ನನ್ನದೆ ಅನಿಸುವ ಫಿಲಿಂಗೇ ನನ್ನ ಮನೋ ಲಹರಿಗೆ ಉತ್ತೇಜನ ನೀಡುತ್ತದೆ.

ಅದೇ ನಾ ಓಡಾಡಿದ ಕೇರಿ, ಮುರುಕಲು ಗುಡಿಸಲುಗಳು, ಹಳೆಯ ಮನೆಗಳು, ಮನೆಯ ಮುಂದೆ ಹರಿಯುವ ಕಪ್ಪನೆಯ ಚರಂಡಿ, ದಾರಿಯಲ್ಲಿ ಎದುರಾಗುವ ಅವರಿವರ ಎಮ್ಮೆ,ಎತ್ತು,ಧನ ಕರುಗಳು, ಭೀದಿ ನಾಯಿಗಳು, ಹಳ್ಳಿಯಲ್ಲಿನ ಹಣ್ಣು ಹಣ್ಣು ಮುದುಕರು,ಅಜ್ಜಿಯರುಗಳು, ಕಮ್ಮನೇ ಸಗಣಿ ಮಣ್ಣಿನ ವಾಸನೆಗಳು. ಅವರಿವರು ಆಡುವ ಸುಮ್ಮನೇ ಸಣ್ಣ ಸಣ್ಣ ಜಗಳಗಳು. ಇತ್ಯಾದಿ ಇತ್ಯಾದಿ ನಾನು ನಿಜವಾಗಿಯೋ ಈ ಲೋಕದಲ್ಲಿಯೇ ಇದ್ದೇನೆ ಎಂಬ ಅರಿವನ್ನುಂಟು ಮಾಡುತ್ತವೆ.

ರಾತ್ರಿಯೋ ಹಳ್ಳಿಗೆ ಹಳ್ಳಿಯೇ ನಿರವ ಮೌನದ ಕತ್ತಲಲ್ಲಿ ಕರಗಿ ಲೀನವಾದಂತೆ ಕಾಣಿಸುತ್ತದೆ. ಆಕಾಶವನ್ನು ದಿಟ್ಟಿಸಿದರೇ ಪ್ರತಿಯೊಂದು ನಕ್ಷತ್ರಗಳ ಮಿಳುಕು! ಅವುಗಳೆಲ್ಲಾ ನಮ್ಮ ಊರಿಗೆ ಮಾತ್ರ ಸೇರಿದವರು ಮತ್ತು ನನ್ನವರೇ ಅನಿಸುತ್ತದೆ.

ಯಾವೊಂದು ಕೃತಕವಾದ ಯಂತ್ರ ಮಂತ್ರದ ಹಾವಳಿಯಿಲ್ಲದೇ ಕೇವಲ ಊರು ನಾಯಿಗಳು,ಧನ ಕರುಗಳ ದ್ವನಿ ಮತ್ತು ನಮ್ಮ ಹಳ್ಳಿಗರ ಒಂದೇರಡು ಮಾತುಕತೆಗಳು ಅಷ್ಟೊಂದು ದೂರದಿಂದಲೂ ನನ್ನ ಕಿವಿಯ ಮೇಲೆ ಬೀಳುತ್ತಿರುತ್ತದೆ. ಅದೇ ಸಂಜೆಯ ನನ್ನ ಸವಿ ನಿದ್ದೆಗೆ ಸಿಹಿಯಾದ ಜೋಗುಳ

ಊರು ಚಿಕ್ಕದಾದರಂತೂ ಮುಗಿಯಿತು. ಸುತ್ತಾ ಹೊಲ, ಕಾಡುಗಳಿಂದ ಮುತ್ತಿಕೊಂಡು ಒಂದು ಹೊಳೆಯುವ ದ್ವಿಪವಾಗಿ ನನ್ನೂರು ಕಾಣುವುದೋ ಏನೋ!


ಮಳೆ,ಬೆಳೆಯ ಸಮಯದಲ್ಲಿ ಒಂದು ಸಲ ಹೊಚ್ಚ ಹೊಸದಾಗಿ ಇಡೀ ಊರೇ ತನ್ನನ್ನು ತಾನು ತೊಳೆದುಕೊಂಡ ಅನುಭವ. ಊರಿಗೆ ಹೊಂದಿಕೊಂಡು ಹರಿಯುವ ಹಳ್ಳವೇ ನಮ್ಮೊರ ಗಂಗಾಮಾತೆಯಾಗಿ ನಮ್ಮನ್ನೂ ಪೊರೆಯುವವಳು ಅನಿಸುತ್ತದೆ. ನಮ್ಮ ಎಲ್ಲಾ ಕೆಟ್ಟದ್ದನ್ನೂ ವರುಷಕ್ಕೆ ಒಮ್ಮೆ ಪರಿಪೂರ್ಣವಾಗಿ ತೊಳೆಯಲು ಬರುವ ದೇವತೆ ಅನಿಸುತ್ತದೆ.

ಹಬ್ಬ ಹರಿದಿನಗಳು ಕೇವಲ ನಮ್ಮ ಮನೆಯ ಹಬ್ಬವಾಗಿರುವುದಿಲ್ಲ. ಅದು ಊರು ಹಬ್ಬವಾಗಿರುತ್ತದೆ. ಅವರಿವರ ಮನೆಯಲ್ಲಿ ಮಾಡುವ ಪ್ರತಿಯೊಂದು ಸಿಹಿ ತಿಂಡಿಗಳ ವಿಚಾರ ಪ್ರತಿಯೊಬ್ಬರಿಗೂ ತಿಳಿದಿರುತ್ತದೆ. ನಮ್ಮ ಮನೆಯಲ್ಲಿಯೇ ನಾವುಗಳು ಉಣ್ಣಬೇಕು ಎಂದು ಏನೂ ಇಲ್ಲಾ. ಪ್ರತಿಯೊಬ್ಬರದು ನಮ್ಮ ಮನೆಯೇ. ಆ ಮೂಲಿ ಮನೆ, ಈ ಕೊನೆ ಮನೆ, ಈ ಮಧ್ಯ ಮನೆ, ಈ ಎತ್ತರದ ಮನೆ, ಆ ದೊಡ್ಡ ಮನೆ,ಈ ಕೆಳಗಿನ ಮನೆ ಹೀಗೆ ಎಲ್ಲಾ ನನ್ನದೇ ಅನಿಸುವಂತೆ ಹೊಂದಿಕೊಂಡು ಸವಿಯುವ ರುಚಿಯಾದ ಊಟ-ನೋಟ.

ಇದೇ ಹೊಸ ಸ್ಥಳಗಳಿಗೂ ನಾನು ಹುಟ್ಟಿದ ಊರಿಗೂ ಇರುವ ಅಜಗಜಾಂತರವಾದ ವ್ಯತ್ಯಾಸ. ಇಲ್ಲಿ ನಾನು ನಾನೇ. ನಾನು ನಾನು ಮಾತ್ರ. ಕಷ್ಟಕ್ಕೂ ಸುಖಕ್ಕೂ ನಾನೇ ವಾರಸುಧಾರ. ನನಗೆ ನಾನೇ ಒಬ್ಬನೇ ಯಜಮಾನ!

ಪ್ರತಿಯೊಬ್ಬರೂ ಹುಟ್ಟಿದ ಊರಿಗೆ ಕೊಡುವ ಒಂದು ಉನ್ನತ ಸ್ಥಾನವನ್ನು ಬೇರೆ ಯಾವ ಊರು, ಸ್ಥಳಕ್ಕೆ ಕೊಡಲಾರರು.

ಅಲ್ಲಿ ಮಾತ್ರ ನಮ್ಮನ್ನು ನಾವು ಹೆಚ್ಚು ಹೆಚ್ಚು ಪರಿಪೂರ್ಣವಾಗಿ ನೋಡಿಕೊಳ್ಳಲು ಮಾತ್ರ ಸಾಧ್ಯ.

ನನಗೆ ಅನಿಸುತ್ತದೆ. ಇಂದಿನ ಈ ಯಾಂತ್ರಿಕ ಯುಗದ ಕಾರಣ ನಮ್ಮ ಅನೇಕ ಹಿರಿಯರು ತಮ್ಮ ಮಕ್ಕಳು ಮರಿಗಳ ಕೆಲಸ ಕಾರ್ಯಗಳ ನಿಮಿತ್ತಾ ತಮ್ಮ ಉಸಿರಾಗಿ ತಮ್ಮನ್ನೂ ಪೊರೆದ ಹುಟ್ಟಿದ ಊರುಗಳನ್ನು ಬಿಟ್ಟು ವಲಸೆಯೋಪಾದಿಯಲ್ಲಿ ನಗರವಾಸಿಗಳಾಗಿ ತಮ್ಮ ಮಕ್ಕಳ ಜೊತೆಯಲ್ಲಿ ತಮ್ಮ ಅಂತಿಮ ಕ್ಷಣಗಳನ್ನು ಕಳೆಯವಾಗ... ಆ ತಮ್ಮ ಬಾಲ್ಯವನ್ನು, ತಮ್ಮನ್ನು ತಿದ್ದಿ ತೀಡಿದ ಆ ತನ್ನೂರನ್ನೂ ತುಂಬಾನೆ ಮೀಸ್ ಮಾಡಿಕೊಂಡು ಕೂರಗುತ್ತಿರುವವರು ಎಂದು ನನಗೆ ಅನಿಸುತ್ತದೆ.

ಯಾಕೆಂದರೇ ಇಲ್ಲಿ ನಿತ್ಯ ಮುಂಜಾನೆ, ಸಂಜೆ ನಗರದ ಪಾರ್ಕಗಳಲ್ಲಿ ಕಾಣುವ ಈ ನನ್ನ ವಯಸ್ಸಾದ ಹಿರಿಯರ ಬಾಡಿದ ಮುಖಗಳನ್ನು ನೋಡಿದರೇ ಹಾಗೆ ಅನಿಸುತ್ತದೆ!


ನೀವು ಏನ್ ಹೇಳ್ತಿರಾ?