ಮಂಗಳವಾರ, ಮೇ 25, 2010

ಜುಗಾರಿ ಕ್ರಾಸ್

ಜೂಜಾಟ ಎಂದರೆ ನಮ್ಮ ಮನಸ್ಸಿಗೆ ಪ್ರಪ್ರಥಮವಾಗಿ ಬರುವ ನೆನಪೆಂದರೇ ಪಾಂಡವರ ಕವಡೆಯಾಟ ಮತ್ತು ಅವರು ಅದರಿಂದ ೧೨ ವರ್ಷ ವನವಾಸವನ್ನು ಅನುಭವಿಸಿದ್ದು. ಮಾತು ಎಷ್ಟು ಜನ ಜನಿತವಾಗಿದೆಯೆಂದರೆ ಇಂದು ಯಾರಾದರೂ ಜೂಜಿನಲ್ಲಿ ತೊಡಗಿದ್ದರೇ ಅವರಿಗೆ ಹೇಳುವ ಮೊದಲ ಮಾತು "ನಿನಗೂ ಪಾಂಡವರ ಪಾಡು ಬರುತ್ತದೇ ಕಣೋ, ಬಿಟ್ಟು ಬಿಡು ಕೆಟ್ಟ ಆಟವನ್ನು".


ಜೂಜಾಟಗಳಲ್ಲಿ ಹಲವು ವಿಧಗಳು ನಮ್ಮ ನಾಡಿನಲ್ಲಿ ಪರಿಚಿತವಾಗಿರುವ ಹಿಂದಿನಿಂದಲೂ ಪ್ರಚಲಿತವಾಗಿರುವ ಆಟಗಳೆಂದರೆ, ಪಗಡೆಯಾಟ, ಚದುರಂಗ, ಇಸ್ಫಿಟಾಟ, ಕುದುರೆ ಓಟ, ಲಾಟರಿ, ಮಟ್ಕಾ ಇತ್ಯಾದಿ. ಆಟಗಳು ಎಲ್ಲಾ ದೇಶಗಳಲ್ಲೂ ವಿವಿಧ ರೂಪದಲ್ಲಿ ಪ್ರಸ್ತುತವಾಗಿದೆ. ಜನಗಳು ಇದ್ದಾರೆ ಎಂದರೆ ಅಲ್ಲಿ ಒಂದು ಕೆಟ್ಟ ಅಥವಾ ಅದೃಷ್ಟವಾದ ಆಟವನ್ನು ಜನಗಳು ಆಡುತ್ತಾ ತಮ್ಮ ಅದೃಷ್ಟವನ್ನು ಪರೀಕ್ಷಿಸಿಕೊಳ್ಳೂತ್ತಿರುತ್ತಾರೆ.


ಇದು ನಮ್ಮ ನಾಗರೀಕತೆಗಳ ಉಗಮದಿಂದ ಪ್ರಾರಂಭಗೊಂಡು ನೆನ್ನೇ ಮೊನ್ನೆಯವರೆಗೂ ಹಲವು ಪ್ರಕಾರಗಳಲ್ಲಿ ತಾನು ಬದಲಾವಣೆಗೊಂಡು ನಾನಾ ದೇಶಗಳಲ್ಲಿ ಜನಿಸಿ, ನಾನಾ ದೇಶಗಳಿಗೆ ಹೋಗಿ ತನ್ನ ನೆಲೆಯನ್ನು ಕಂಡು ಕೊಂಡಿದೆ.


ವಿದೇಶಗಳಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿರುವ ಜೂಜಾಟಗಳೆಂದರೆ ಕ್ಯಾಸಿನೂ, ಲಟ್ಟೋ, ಲಾಟರಿ, ಹಾರ್ಸ್ ರೇಸಿಂಗ ಇತ್ಯಾದಿ. ಪ್ರಾರಂಭದ ದಿನಗಳಲ್ಲಿ ನಮ್ಮ ನಾಗರೀಕತೆಯ ಹಾದಿಯಲ್ಲಿ ಎಲ್ಲಾ ಆಟಗಳು ಮನರಂಜನೆಗೆಂದು ಪ್ರಾರಂಭಗೊಂಡು ತಮ್ಮ ತಮ್ಮಲ್ಲಿಯೇ ಸ್ಪರ್ಧೆಗೆಂದು ಶುರುವಾಗಿ ಹೆಚ್ಚು ಮಜಾವನ್ನು ಮತ್ತು ಅದರಿಂದ ಸುಲಭವಾಗಿ ಅದೃಷ್ಟದಿಂದ ತಾವು ಹೆಚ್ಚು ಹೆಚ್ಚು ಸಂಪತ್ತನ್ನು ಗಳಿಸುವ ಆಟಗಳಾಗಿ ನಿಂತುಬಿಟ್ಟಿವೆ.


ಕೇವಲ ಮನರಂಜನೆ ಮತ್ತು ಸಮಯವನ್ನು ಕಳೆಯುವ ಆಟವಾಗಿದ್ದರೆ ನಾವುಗಳು ಇದರ ಬಗ್ಗೆ ಹೆಚ್ಚು ಗಮನ ಕೊಡುವ ಜರೂರತು ಇರಲಿಲ್ಲ. ಇದು ಇಂದು ಯಾವ ಮಟ್ಟಿಗ ಬೃಹದಾಕಾರವಾಗಿ ಬೆಳೆದಿದೆ ಎಂದರೆ ಒಂದು ರಂಗವೇ ಪ್ರತ್ಯೇಕವಾಗಿ ಸಮಾಜದಲ್ಲಿ, ಜನಗಳ ಮೇಲೆ ಮತ್ತು ದೇಶದ ಆರ್ಥಿಕತೆಯ ಮೇಲೆ ಪರಿಣಾಮ ಬೀರುವ ಮಟ್ಟಿಗೆ ತಲೆ ನೋವಾಗಿ ಎಲ್ಲಾ ಬುದ್ಧಿ ಜೀವಿಗಳು, ಆಡಳಿತಗಾರರು ಇದನ್ನು ತಡೆಯಲು ಮತ್ತು ಕಡಿಮೆ ಮಾಡಲು ನಿರಂತರ ಪರಿಶ್ರಮಿಸುತ್ತಿದ್ದಾರೆ.


ಹಾಗೆಯೇ ಮನುಷ್ಯನ ಒಂದು ಶ್ರೇಷ್ಟ ಗುಣವೆಂದರೇ ಯಾವುದನ್ನು ನಾವು ತಡೆಯುತ್ತೇವೊ ಮತ್ತು ಯಾವುದರ ವಿರುದ್ಧ ಕಾನೂನು ಕಟ್ಟಳೆಗಳು ಇರುತ್ತವೊ ಅವುಗಳನ್ನು ಯಾವಾಗಲೂ ಮುರಿಯಲು ಅಥವಾ ಅತಿಕ್ರಮಿಸಲು ನಿರಂತರ ಉತ್ಸಾಹಿಯಾಗಿರುತ್ತಾನೆ.


ನಾವು ಯೋಚಿಸಬಹುದು ಯಾಕೆ ನಮ್ಮ ಸುತ್ತಲಿನ ನಮ್ಮವರೆಯಾದ ನಮ್ಮ ಜನಗಳಲ್ಲಿ ಕೆಲವರು ಮಹಾನ್ ಜೂಜುಕೊರರಾಗಿ ಬೆಳೆದಿದ್ದಾರೆ ಎಂದು. ಅದಕ್ಕೆ ಮುಖ್ಯವಾದ ಕಾರಣ ಯಾವುದು? ಯಾರು ಅವರನ್ನು ಒಂದು ಆಟಕ್ಕೆ ಪರಿಚಯಿಸುವರು? ಇದರಿಂದ ಅವರೂಗಳಿಗೆ ಯಾವ ರೀತಿಯ ಸಂತೋಷ ಮತ್ತು ಸಂಪತ್ತು ದೂರೆಯುತ್ತದೆ? ಯಾಕೆ ಅವರುಗಳು ಇದನ್ನೇ ತಮ್ಮ ಜೀವನದ ಒಂದು ಪ್ರಮುಖವಾದ ಭಾಗ ದುಡಿಮೆಯ ಬದುಕು ಎಂದು ಅದರಲ್ಲಿಯೇ ತೊಳಲಾಡುತ್ತಾರೆ?


ಹೀಗೆ ನಾನಾ ರೀತಿಯ ಪ್ರಶ್ನಾವಳಿಯ ಸರಮಾಲೆ ನಮ್ಮ ಮನದಲ್ಲಿ ಮೂಡದೇ ಇರಲಾರದು. ಇದರ ಬಗ್ಗೆ ನಮ್ಮ ಚಿಂತಕರು ಸಮಾಜ ಪರಿಣತರೂ, ಬುದ್ಧಿ ಜೀವಿಗಳು ನಾನ ರೀತಿಯ ತಮ್ಮ ಅಧ್ಯಯನದಿಂದ ಕಂಡುಕೊಂಡ ವಿಚಾರಗಳನ್ನು ನಮ್ಮ ಮುಂದೆ ಇಟ್ಟಿರುವವರು. ಇದನ್ನು ಯಾವ ರೀತಿಯಲ್ಲಿ ಅತ್ತಿಕ್ಕಬಹುದು ಎಂಬುದನ್ನು ತಿಳಿಸಿರುವರು. ಆದರೂ ಇದಂತೂ ಕಡಿಮೆಯಾಗುತ್ತಿಲ್ಲ.


ಆಟಗಳ ಪರಿಚಯ ನಮ್ಮ ಸುತ್ತಲಿನವರಿಂದ ನಮ್ಮ ನಡುವೆ ಜೀವಿಸುವವರಿಂದ ನಮ್ಮ ಕುಟುಂಬಗಳಲ್ಲಿಯೇ ಚಿಕ್ಕದಾಗಿ ನಮ್ಮ ತರುಣರಿಗೆ ಮೊದ ಮೊದಲೂ ಕೇವಲ ​ಮನರಂಜನೆಗೆ ಎಂದು ಕಲಿಯುತ್ತಾ, ತಾವು ಬೆಳೆದಂತೆ ತಾವು ಕಲಿತಿರುವ ಆಟಗಳಲ್ಲಿ ಚಿಕ್ಕ ಚಿಕ್ಕ ಮೊತ್ತದ ಹಣವನ್ನು ತೊಡಗಿಸುತ್ತಾ ಅದರಿಂದ ಗಳಿಸುತ್ತಾ ಹೆಚ್ಚು ಹೆಚ್ಚು ಗಳಿಸಬೇಕು ಎಂತಲೂ, ಚಿಕ್ಕ ಚಿಕ್ಕ ಮೊತ್ತವನ್ನು ಕಳೆದುಕೊಂಡು ಹಣವನ್ನು ಹಿಂಪಡೆಯಬೇಕೆಂತಲೂ ಪುನಃ ಪುನಃ ತಮ್ಮ ಚಿಕ್ಕ ಚಿಕ್ಕ ಮೊತ್ತವನ್ನು ಅದರಲ್ಲಿ ತೊಡಗಿಸುತ್ತಾ ಆಟದಲ್ಲಿ ತಮ್ಮನ್ನೇ ತಾವು ಮರೆಯುತ್ತಾ ತಮ್ಮ ಸುತ್ತ ಇರುವ ಜಗತ್ತನ್ನೇ ಮರೆತು ತಮ್ಮದೆಯಾದ ಜೂಜಾಟದ ಲೋಕವನ್ನು ಸೃಷ್ಟಿ ಮಾಡಿಕೊಳ್ಳುತ್ತಾರೆ.


ಇದು ಒಂದು ರೀತಿಯ ಕೆಟ್ಟ ಚಟದಂತೆ ಒಮ್ಮೆ ಕೇವಲ ರುಚಿಗೆ ಇಷ್ಟು ಅಂತ ಪ್ರಾರಂಭಿಸಿ ಅದನ್ನು ಬಿಟ್ಟಿಲಿರಾದಷ್ಟು ಅದಕ್ಕೆ ಗುಲಾಮರಾಗುತ್ತಾರೆ. ಅದರೆ ಇದು ಯಾವುದೇ ರೀತಿಯ ನಿಮ್ಮ ದುಡಿಮೆಯ ಅಥವಾ ನಿಮ್ಮ ಬುದ್ಧಿ ಪರೀಕ್ಷಿಸುವ ಕೆಲಸವಲ್ಲಾ. ಗೆಲ್ಲುವರೂ ಗೆಲ್ಲುತ್ತಿರುತ್ತಾರೆ ಸೋಲುವವರು ಸೋಲುತ್ತಿರುತ್ತಾರೆ. ಒಬ್ಬ ಗೆಲ್ಲುವ ಸಲುವಾಗಿ ಸಾವಿರಾರು ಮಂದಿ ತಮ್ಮ ಇಡೀ ಜೀವನವನ್ನು ಪಣವಾಗಿಟ್ಟು ಹೇಗೆ ಪಾಂಡವರು ತಮ್ಮದೆಲ್ಲವನ್ನು ಕಳೆದು ಕೊಂಡು ನಿಲ್ಲುತ್ತಾರೂ ಹಾಗೆ ಅವನನ್ನು ಅವಲಂಬಿಸಿರುವ ಇಡೀ ಸಂಸಾರ ದುಃಖದ ದಿನಗಳನ್ನು ಕಳೆಯಬೇಕಾಗುತ್ತದೆ.


ಯಾರೂ ಕೇವಲ ಜೂಜಾಟದಿಂದ ಗಳಿಸಿ ಉದ್ಧಾರವಾಗಿರುವ ಒಂದೇ ಒಂದು ಉದಾಹರಣೆ ನಮ್ಮ ಮುಂದೆ ಎಲ್ಲೂ ಸಿಗುವುದಿಲ್ಲ. ಬರೀ ಕಳೆದುಕೊಂಡವರ ದೂಡ್ಡ ಪಟ್ಟಿಯೇ ಸಿಗುತ್ತದೆ ಅಷ್ಟೇ.


ಅದಕ್ಕಾಗಿಯೇ ನಮ್ಮ ದೇಶದಲ್ಲಿ ರೀತಿಯ ಕೆಟ್ಟ ಪರಿಣಾಮ ಬೀರುವ ಎಲ್ಲಾ ಆಟಗಳು ಕಾನೂನು ಚೌಕಟ್ಟಿಗೆ ಒಳಪಡಿಸಿದ್ದಾರೆ. ಹಿಂದಿನ ದಿನಗಳಲ್ಲಿ ನಮ್ಮ ಜನಗಳು ಲಾಟರಿಯಲ್ಲಿ ತಮ್ಮನ್ನು ತಾವು ಸಮರ್ಪಿಸಿಕೊಂಡು ನಾನ ರೀತಿಯ ಅನಾಹುತಗಳನ್ನು ಅನುಭವಿಸಿದ್ದರಿಂದ ನಮ್ಮ ಸರ್ಕಾರ ಅವುಗಳನ್ನು ನಿಷೇಧಿಸಿದೆ ಅಷ್ಟರ ಮಟ್ಟಿಗೆ ನಾವುಗಳು ನಿಟ್ಟುಸಿರು ಬಿಡಬಹುದು.


ಇಂದು ನಮ್ಮದು ಕಂಪ್ಯೂಟರ್ ಯುಗ. ಜೂಜಾಟಗಳು ಇಂಟರ್ ನೇಟ್ ಗೆ ದಾಳಿ ಇಟ್ಟು ಆನ್ ಲೈನ್ ಗ್ಯಾಂಬಲ್, ಗೇಮ್ ಗಳನ್ನು ನಾವು ಸಾಕಷ್ಟು ಕಾಣಬಹುದು. ಇಂದು ನಮ್ಮ ನಗರದ ಯುವಕರು ವಿಡಿಯೋ ಗೇಮ್ ಗಳನ್ನು ತುಂಬ ಖುಷಿಪಟ್ಟು ಅವುಗಳಿಲ್ಲದೇ ಬದುಕಲಾರರೇನೋ ಎಂಬರ ಮಟ್ಟಿಗೆ ಅವುಗಳಿಗೆ ಒಗ್ಗಿಬಿಟ್ಟಿದ್ದಾರೆ. ಅದರೆ ಯಾವುದೇ ರೀತಿಯ ರೀತಿಯ ಕೆಟ್ಟ ಜೂಜು ಆಟಗಳನ್ನು ಪ್ರದರ್ಶಿಸುವುದು ಕಾನೂನು ರೀತಿಯ ಆಪರಾಧ.


ನಮ್ಮ ಹತ್ತಿರದಲ್ಲಿರುವ ಸಾಕಷ್ಟು ಮಂದಿ ಇಂದಿಗೂ ಧಿಡೀರನೇ ಶ್ರೀಮಂತನಾಗುವ ಕನಸು ಕಂಡು ಕುದುರೆಯ ಬಾಲಕ್ಕೆ ತಮ್ಮದನ್ನೆಲ್ಲಾ ಸುರಿದು ತಾನು ಮತ್ತು ತನ್ನ ಇಡೀ ಕುಟುಂಬವನ್ನು ಬೀದಿಗೆ ತಂದು ನಿಲ್ಲಿಸಿದ್ದಾರೆ. ಅದರೂ ಕ್ರೀಡೆ ಇನ್ನೂ ಕಾನೂನು ಮತ್ತು ನಮ್ಮ ಜನಗಳ ಮುಂದೆ ನಿರಂತರವಾಗಿ ಸಾಗುತ್ತಲೇ ಇದೆ. ಶ್ರೀಮಂತರಿಗೆ ಇದೊಂದು ಖುಷಿಯ ಆಟವಾದರೆ ಬಡವರಿಗೆ ತಾನು ಸ್ವಲ್ಪವಾದರೂ ಬದುಕಲು ಬೇಕಾಗುವ ಸಂಪತ್ತಿನ ಆಸೆಯ ಕಿರಣ (ಕಂಟಕ)!


ಆದರೇ ನಮ್ಮ ಜನಗಳು ತಿಳಿದುಕೊಳ್ಳಬೇಕು ಕೆಲವು ಸಮಯದಲ್ಲಿ ನಾವುಗಳು ಕಷ್ಟ ಪಟ್ಟು ದುಡಿದ ನಮ್ಮ ಹಣವೇ ನಮಗೆ ದೂರೆಯಲಾರದು. ಇನ್ನು ಕೇವಲ ಅದೃಷ್ಟವೇ ದುಡಿಮೆಯ ಬೇವರಾಗಿ ಬಂದ ಸಂಪತ್ತು ಎಷ್ಟರ ಮಟ್ಟಿಗೆ ಗಟ್ಟಿಯಾಗಿ ನಿಲ್ಲುವುದು ಎಂಬುದು.


ಎಷ್ಟೇ ಬಿಗಿಯಾದ ಕಾನೂನು ಕಟ್ಟಳೆಗಳು ಇದ್ದರೂ ನಮ್ಮ ಜನ ತಮ್ಮ ಬುದ್ಧಿಯಿಂದ ಚಿಂತಿಸಿ ಯಾವುದೂ ಸರಿ ಯಾವುದು ತಪ್ಪು ಎಂದು ನಿರ್ಧರಿಸಿ ಕ್ಷಣಿಕ ಸುಖಕ್ಕಾಗಿ ರೀತಿಯ ಕೆಟ್ಟ ಚಾಳಿಗಳಿಗೆ ಬಲಿಯಾಗುವುದು ನಿಲ್ಲಬೇಕು. ನಿಜವಾಗಿಯೂ ಅವರುಗಳು ಯಾಕೆ ಇವುಗಳ ಹಿಂದೆ ಹೋಗುತ್ತಾರೆ ಎಂಬುದನ್ನು ತಿಳಿದವರೂ ತಿಳಿಸಬೇಕು ಅದರ ಬಗ್ಗೆ ಇನ್ನೂ ಹೆಚ್ಚು ಅಧ್ಯಯನದ ಅವಶ್ಯಕತೆ ಇದೆ.