ಬುಧವಾರ, ಮಾರ್ಚ್ 4, 2009

'ಅವನೊಬ್ಬನಿದ್ದ ಗೋಡ್ಸೆ' ಸಕತ್ ಆಗಿದೆ

ಇತ್ತೀಚೆಗೆ ನಾನು ಓದಲು ಶುರು ಮಾಡಿರುವ ರವಿ ಬೆಳೆಗೆರೆಯವರ ಅನುವಾದಿತ ಕೃತಿ ಮನೋಹರ ಮಳಗಾವಂಕರರ 'ಅವನೊಬ್ಬನಿದ್ದ ಗೋಡ್ಸೆ' ಸಕತ್ ಆಗಿದೆ ಅಪರೂಪವಾದ ಅ ದಿನಗಳ ಪೋಟುಗಳನ್ನೂ ಇತಿಹಾಸದ ಚಿತ್ರಣದ ಜೊತೆ ಕೊಟ್ಟಿದ್ದಾರೆ. ಪುಟ ಪುಟವು ಆಕರ್ಷಕವಾಗಿ ಹಿಡಿದಿಟ್ಟು ಓದುಗರಿಗೆ ರೋಮಾಂಚನವನ್ನು ಉಂಟು ಮಾಡುತ್ತಾ ಪೂರ್ತಿಯಾಗಿ ಓದುವವರೆಗೂ ನಮ್ಮನ್ನು ಅಲ್ಲಿಯೇ ನಿಲ್ಲಿಸುತ್ತದೆ.

ನಾವು ನೀವೆಲ್ಲಾ ಓದಿರುವ ಇತಿಹಾಸ ಒಂದು ಕಡೆಯಾದರೆ ಇಲ್ಲಿ ಬೇರೆಯಾದ ಇತಿಹಾಸದ ದಿನಗಳನ್ನು ಮೆಲುಕು ಹಾಕುವ ಸಂಭ್ರಮ ಮತ್ತು ತಲ್ಲಣ ನಮ್ಮದಾಗಲಿದೆ. ೧೫ ಅಗಸ್ಟ್ ೪೭ ರ ನಂತರದ ಹಸಿ ಹಸಿ ಘಟನೆಗಳ್ಹ ಕರಾಳ ಛಾಯೆಯನ್ನು ತಮ್ಮ ದಿಟ್ಟವಾದ ಸಾಲುಗಳಲ್ಲಿ ಮನ ಮುಟ್ಟುವ ರೀತಿ ಚಿತ್ರಿಸಿರುವುದು ರವಿ ಬೆಳೆಗೆರೆಯವರ ಮಾಂತ್ರಿಕ ಬರವಣಿಗೆಯಲ್ಲಿ ವಿಭಿನ್ನವಾಗಿ ಮೊಡಿ ಬಂದಿದೆ.

ಭಾರತೀಯತೆ ಅಂದು ಹೇಗೆ ಇತ್ತು ಮತ್ತು ಅದಕ್ಕಾಗಿ ಅಂದು ಹೋರಾಡಿದ ನಮ್ಮ ಜನಗಳ ಮನ ಸ್ಥಿತಿಯನ್ನು ಗೋಡ್ಸೆ ಮತ್ತು ಅವನ ಅನುಯಾಯಿಗಳ ಮೂಲಕ ಪ್ರಕಟಿಸಿದ್ದಾರೆ. ಹಿಂದುತ್ವ ಅಂದರೆ ಏನು ಮತ್ತು ಅದು ಎಲ್ಲಿ ಎಂದು ಯಾವ ದಾರಿ ಹಿಡಿಯಿತು ಎಂಬುದನ್ನು ಮಹಾತ್ಮನ ಮರಣದಿಂದ ಭಾರತದಲ್ಲಿ ಉಂಟಾದ ಬದಲಾವಣೆ, ಚಿಂತನೆ ಎಲ್ಲವನ್ನು ಜೀವಂತವಾಗಿ ನಮ್ಮ ಮುಂದೆ ನಿಲ್ಲಿಸಿದ್ದಾರೆ.

ಪ್ರಾಥಮಿಕ ಶಾಲೆಗಳಲ್ಲಿ ನಾವುಗಳು ಪಠಿಸಿದ ಇತಿಹಾಸ ಪಾಠಕ್ಕೂ ಇಲ್ಲಿ ಇರುವ ನೈಜ ಇತಿಹಾಸಕ್ಕೂ ಎಲ್ಲಿ ಎಲ್ಲಿಯ ಸಂಬಂಧ ಎಂಬುವಂತೆ ಕಾಡುತ್ತದೆ . ಪ್ರತಿಯೊಬ್ಬರೂ ಒಮ್ಮೆ ಓದಲೇ ಬೇಕಾದ ಈ ಕೃತಿಯಾಗಿದೆ. ಮಳಗಾವಂಕರರ ಇನ್ನೂ ಈ ರೀತಿಯ ಪುಸ್ತಕಗಳು ಕನ್ನಡಕ್ಕೆ ರವಿಯವರ ಮೂಲಕ ಕನ್ನಡಕ್ಕೆ ಅರ್ಪಣೆಯಾಗಲಿ ಎಂದು ಹಾರೈಸುವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ