ಮಂಗಳವಾರ, ಡಿಸೆಂಬರ್ 15, 2009

ಅಲ್ಲಿದೆ ನಮ್ಮನೆ ಇಲ್ಲಿ ಬಂದೇ ಸುಮ್ಮನೆ ಬೇಡ!

ಇಂದಿನ ನಮ್ಮ ಕಾರ್ಪೊರೆಟ್ ರಂಗದಲ್ಲಿ ವಿವಿಧ ಭಾಷೆಯನ್ನು ಮಾತಾನ್ನಾಡುವ, ವಿವಿಧ ಸಂಸ್ಕೃತಿಯ, ವಿವಿಧ ರಾಜ್ಯದ ಕೆಲಸಗಾರರು ನಮ್ಮ ಕನ್ನಡದ ರಾಜಾಧಾನಿಯಾದ ಬೆಂಗಳೂರಿನಲ್ಲಿ ಹಲವಾರು ಕಡೆ ಕಾರ್ಯ ನಿರ್ವಹಿಸುತ್ತಿರುವುದರಿಂದ ಇಲ್ಲಿ ಒಂದು ಮಿನಿ ಭಾರತವನ್ನೇ ಕಾಣಬಹುದಾಗಿದೆ.

ಎಲ್ಲ ಕಂಪನಿಗಳಲ್ಲಿ ಅವರದೇಯಾದ ಸಮಯದಲ್ಲಿ ಎಲ್ಲ ಉದ್ಯೋಗಿಗಳಿಗೂ ಖುಷಿ ಮತ್ತು ಸಂಭ್ರಮವನ್ನುಂಟು ಮಾಡಲು ತಿಂಗಳ ಅಥಾವ ವಾರದ ಕೊನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅಲ್ಲಿನ ಉದ್ಯೋಗಿಗಳಿಗೆ ಏರ್ಪಡಿಸುವ ಪದ್ಧತಿಯನ್ನು ಎಲ್ಲ ಕಡೆ ಕಾಣಬಹುದಾಗಿದೆ.

ಆ ಸಮಯದಲ್ಲಿ ಎಲ್ಲ ಕೆಲಸಗಾರರಿಗೂ ತಮ್ಮ ತಮ್ಮ ಸಂಸ್ಕೃತಿಯ ಮತ್ತು ತಮ್ಮ ಕ್ರೀಯಾಶೀಲವಾದ ಸೃಜನಾತ್ಮಕ ಕಲೆಗಳನ್ನು ತಮ್ಮ ಸ್ನೇಹಿತರ ಮುಂದೆ ಪ್ರದರ್ಶನವನ್ನು ಕೊಡಲು ತುಂಬ ಸಹಕಾರಿಯಾಗಿರುತ್ತದೆ ಮತ್ತು ಬಿಡುವಿಲ್ಲದ ಜಂಜಾಟದ ಬದುಕಿಗೆ ಉತ್ತೇಜನಕ ರೀತಿಯಲ್ಲಿ ಉತ್ಸಾಹವನ್ನುಂಟು ಮಾಡುತ್ತದೆ. ಇಂಥ ಕಾರ್ಯಕ್ರಮಗಳು ಇಂದಿನ ಯಾಂತ್ರಿಕ ಯುಗದ ಮೆಟ್ರೋ ಮಂದಿಗೆ ಬೇಕೆ ಬೇಕು ಬಿಡಿ.

ಆದರೆ, ಇಂಥ ಕಾರ್ಯಕ್ರಮಗಳಲ್ಲಿ ತುಂಬ ಅಭಾಸವಾದ ರೀತಿಯಲ್ಲಿ ಕೆಲವೊಮ್ಮೆ ಕೆಲವು ಕಹಿ ಘಟನೆಗಳು ನಡೆದು ಹೋಗಿ ಬಿಟ್ಟು ಹತ್ತಿರದವರೆಗೆ ತುಂಬ ನೋವಾಗುತ್ತದೆ. ಆ ಸಮಯದಲ್ಲಿ ಆ ರೀತಿ ಯಾರು ಯೋಚಿಸುವುದಿಲ್ಲ. ಆದರೆ ಅದರ ಬಗ್ಗೆ ಸ್ವಲ್ಪ ವಿಚಾರ ಮಾಡಿದರೆ ಹೌದು! ಅದು ಸತ್ಯ ಏನಿಸದೇ ಇರಲಾರದು.

ಯಾವುದೇ ಹಾಡು, ಸಂಗೀತ, ನೃತ್ಯ, ನಟನೆಯ ಕಾರ್ಯಕ್ರಮಗಳನ್ನು ಎಲ್ಲರೂ ಯಾವುದೇ ಭಾಷೆ ಮತ್ತು ಜನಗಳ ಬೇದವಿಲ್ಲದೇ ಎಲ್ಲರೂ ತಮಗೆ ತಿಳಿದಿರುವ ಕಲೆಯ ಅಭಿವ್ಯಕ್ತಿಯನ್ನು ತೋರಿಸಲು ಸುಸಮಯವಾಗಿರುತ್ತದೆ.

ಪ್ರೇಕ್ಷಕರೇನಿಸಿದ ನೋಡುಗರು ತಮಗೆ ಅರ್ಥವಾಗದ ಭಾಷೆಯಲ್ಲಿನ ಅಥಾವ ತಿಳಿಯದ ಕಲೆಯನ್ನು ಕಂಡಾಗ ಇರಿಸು ಮುರಿಸಾಗುವುದು ಸಾಮಾನ್ಯ. ಆದರೆ ಅದಕ್ಕಾಗಿ ತಮ್ಮತನವನ್ನು ಕಳೆದುಕೊಂಡು ಅತ್ಯಂತ ಅನಾಗರಿಕತೆಯನ್ನು ತೋರಿಸಿ ವೇದಿಕೆಯ ಮೇಲೆ ತಮ್ಮ ಕಲೆಯನ್ನು ಪ್ರದರ್ಶಿಸುವವರಿಗೆ ಅವಮಾನ ಮಾಡುವುದು ಎಷ್ಟು ಸರಿ!

ಇಂದಿನ ಕಾರ್ಪೊರೆಟ್ ದಿನಮಾನಗಳಲ್ಲಿ ಎಲ್ಲ ಕಡೆ ನಮ್ಮ ಭಾಷೆ ಮತ್ತು ನಮ್ಮ ಸಂಸ್ಕೃತಿಯನ್ನು ಆಚರಿಸುವವರು ಸಿಗುವುದು ಕಷ್ಟ. ಅದ್ದರಿಂದ ನಾವ್ಯಾಕೇ ಬೇರೆಯವರ, ಬೇರೆ ರಾಜ್ಯದ ಯಾವುದೇ ಸಾಂಸ್ಕೃತಿಕ ಚಟುವಟಿಕೆಗಳನ್ನು ಗೌರವದಿಂದ ನೋಡಿ ಆನಂದಿಸಲಾರೆವು ಹೀಗೆ ಮಾಡುವುದರಿಂದ ಅಷ್ಟೋಂದು ಕಷ್ಟಪಟ್ಟು ನಮಗಾಗಿ ಅಪರೂಪದ ಕಲೆಯ ವೈಭವವನ್ನು ನಮ್ಮ ಮುಂದೆ ಇಡುವವರಿಗೆ ಪ್ರೋತ್ಸಹವವನ್ನು ಉತ್ತೇಜನವನ್ನು ಕೊಟ್ಟಂತಾಗಿ ನಾವುಗಳು ಅವರ ಬಗ್ಗೆ ಮತ್ತು ಅವರ ಮಣ್ಣಿನ ಬಗ್ಗೆ ತಿಳಿಯಲು ಕುತೊಹಲದಿಂದ ಇದ್ದೇವೆ ಎಂದರೆ ಅವರಿಗೇಷ್ಟು ಆನಂದ ಮತ್ತು ಮಮತೆ ಉಂಟಾಗುವುದಿಲ್ಲ. ಇದು ಎಷ್ಟೊಂದು ಹೆಮ್ಮೆಯ ವಿಚಾರವಾಗುವುದಿಲ್ಲವೇ.

ಎಲ್ಲರಿಗೂ ತಿಳಿದಿರುವಂತೆ ನಮ್ಮ ದೇಶ ಭಾರತ ಅಂದರೆ ಬಹು ಸಂಸ್ಕೃತಿಯ ರಾಯಾಬಾರಿ. ಇಲ್ಲಿ ಒಂದು - ಒಂದೇ ಎನ್ನುವುದು ಸಮಗ್ರವಾಗಿ ನಾವೆಲ್ಲಾ ಒಂದು ಎನ್ನುವಾಗ. ನಮ್ಮ ಮಾತು, ಸಂಸ್ಕೃತಿ, ವಿಚಾರ - ಆಚರಗಳಿಗಲ್ಲಾ ಅಲ್ಲವಾ!

ಈ ಮಹನ್ ಸತ್ಯ ಗೊತ್ತಿರುವಾಗ ನಾವೇಕೆ ಪುನಃ ಕೀಳಾಗಿ ವರ್ತಿಸುವುದು. ಕಲೆಗೆ ಯಾವುದೇ ಗಡಿ ಪ್ರಾಂತ್ಯವಿಲ್ಲ ಮತ್ತು ಯಾವುದೇ ಭಾಷೆಯಿಲ್ಲ ಕಲೆಗೆ ಕಲೆಯೇ ಭಾಷೆ ಮತ್ತು ಮಾದ್ಯಮ. ಅದೇ ಗೊತ್ತು ಗುರಿಯಿಲ್ಲದ ನಮ್ಮ ಸಂಸ್ಕೃತಿಯಲ್ಲದ ರಾಕ್ ಪಾಪ್ ಸಂಗೀತ, ಡ್ಯಾನ್ಸ್ ಗಳನ್ನು ಕಣ್ಣು ಕಣ್ಣು ಬಿಟ್ಟು, ಬಾಯಿ ಬಾಯಿ ತೆರೆದು ಅಹ್ಲಾದಿಸುವುದು ನಮ್ಮ ಭಾರತೀಯರ ಅಭಿರುಚಿ ಎತ್ತ ಕಡೆ ದಾಪುಗಾಲು ಹಾಕುತ್ತಿದೆ ಎಂದು ಯೋಚಿಸುವಂತೆ ಮಾಡಿದೆ.

ನಮ್ಮ ನಮ್ಮ ಮನೆಯ ಮಾತು ಮತ್ತು ನಮ್ಮ ಮನೆಯಲ್ಲಿನ ಕಲೆಗಳನ್ನು ಪ್ರದರ್ಶಿಸುವುದೇ ಅಥಾವ ಹಾಡುವುದೇ ಅಸಹ್ಯವೇನೊ ಎಂಬ ರೀತಿಯಲ್ಲಿ ನಾವುಗಳು ಕಾಣುವುದು ಯಾವುದರ ಸಂಕೇತ?

ನಮಗೆ ತಿಳಿಯದೇ ಇದ್ದರೂ ಅದನ್ನು ವ್ಯಕ್ತಪಡಿಸುವ ಕಲೆಗಾರರಿಗೆ ಅವಕಾಶ ಮಾಡಿ ಅವರನ್ನು ಗೌರವಿಸಬೇಕು ಅದು ಬಿಟ್ಟು ತಮಗೆ ಆ ರೀತಿಯಲ್ಲಿ ಒಂದು ನಿಮಿಷ ವೇದಿಕೆಯ ಮೇಲೆ ನಿಲ್ಲಲು ಆಗದು ಅಂಥ ಸಮಯದಲ್ಲಿ ಸುಮ್ಮನೆ ವೇದಿಕೆಯ ಹಿಂದೆ ಮುಂದೆ ಕುಳಿತುಕೊಂಡೋ ನಿಂತುಕೊಂಡೋ ತಮ್ಮ ಗೆಳೆಯರು ಹಾಡುವ ಸಮಯದಲ್ಲಿ ಅಥಾವ ನೃತ್ಯ ಮಾಡುವ ಸಮಯದಲ್ಲಿ ಅಥಾವ ಮಾತನಾಡುವ ಸಮಯದ ಮದ್ಯದಲ್ಲಿಯೇ ಚಪ್ಪಾಳೆಯನ್ನು ತಟ್ಟುವುದು, ಕೊಗು ಹಾಕುವುದು ಎಲ್ಲಿನ ಸಂಸ್ಕೃತಿ?

ನಾವುಗಳು ತುಂಬ ಇಷ್ಟಪಟ್ಟು ಆಚರಿಸಲು ಮನಸ್ಸು ಮಾಡುವ ಪಾಶ್ಚಾತ್ಯ ಸಂಸ್ಕೃತಿಯಲ್ಲಿ ನಾವೇಲ್ಲಾ ತಪ್ಪದೇ ಪಾಲಿಸಬೇಕಾದ ಆಚರಣೆಯಿದೆ ಅದೇ ಬೇರೆಯವರು ಏನಾದರೂ ಮಾತನಾಡುವಾಗ ಮದ್ಯದಲ್ಲಿ ಅಸಭ್ಯವಾಗಿ ವರ್ತಿಸದೇ ಅವರು ಪೂರ್ಣವಾಗಿ ಮುಗಿಸವವರೆಗೆ ಕಾದು ಅನಂತರ ತಾವು ಮಾತನ್ನಾಡುವುದು. ಈ ರೀತಿಯ ಅಮೊಲ್ಯವಾದ ಆಚರಣೆಗಳನ್ನು ಗಾಳಿಗೆ ತೊರಿ ತಮ್ಮ ತನವನ್ನು ಮೇರೆಯಬಾರದು ಅಲ್ಲವಾ!

ಯಾವುದೇ ಒಳ್ಳೆಯದನ್ನು ಎಲ್ಲರಿಂದ ಎಲ್ಲಾ ಕಡೆಯಿಂದ ತೆಗೆದುಕೊಳ್ಳಬೇಕು ಆಗಲೇ ನಾವು ಜೀವಿಸುತ್ತಿರುವ ಸುತ್ತಲಿನ ಸಮಾಜ ಜನಾಂಗ ಶಾಂತಿ ಮತ್ತು ಸಹ ಬಾಳ್ವೆಯ ಜೀವನ ನೆಡಸಲು ಸಾಧ್ಯ. ಇಲ್ಲವಾದರೆ ತಮ್ಮ ತಮ್ಮಲ್ಲಿಯೇ ಭಿನ್ನಮತ ಮತ್ತು ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ.

ಇದು ನಾವುಗಳು ದಿನದ, ತಿಂಗಳಿನ, ವರ್ಷದ ಮತ್ತು ನಮ್ಮ ಜೀವಿತದ ಹೆಚ್ಚು ಸಮಯವನ್ನು ಕಳೆಯುವ ನಾವು ಕೆಲಸ ಮಾಡುವ ನಮ್ಮ ನಮ್ಮ ಕಂಪನಿಗಳಿಂದ ಪ್ರಾರಂಭವಾಗಲಿ ಎಂಬುದೇ ಈ ಭಾರತೀ (ಯನ) ಮನದ ಹಂಬಲ.

-ತ್ರಿಪುಟಪ್ರಿಯ

ಶನಿವಾರ, ಡಿಸೆಂಬರ್ 5, 2009

ಬಾಲ್ಕನಿಯಿಂದ ಸಹಜ ನೋಟ

ಹಿಂದಿನ ದಿನಗಳ ವಿಜಯ ಕರ್ನಾಟಕದ ಸಾಪ್ತಾಹಿಕ ಪುರವಣಿಯಲ್ಲಿ ಗಮನ ಸೆಳೆದ ನಮ್ಮೆಲ್ಲರನ್ನು ಆಶ್ಚರ್ಯವಾಗುವಂತೆ ಮಾಡಿದ ಪುಟ್ಟ ಅಂಕಣ ಬರಹಗಳಾದ "ಬಾಲ್ಕಾನಿಯಿಂದ" ಸಹಜ ಎಂಬುವ ಅರ್ದ ಮುಖವನ್ನು ಮಾತ್ರ ತನ್ನ ಛಾಯ ಚಿತ್ರದ ಮೂಲಕ ತೋರಿಸುತ್ತಾ ಎಲ್ಲಾ ಓದುಗರನ್ನು ವಿಸ್ಮಯಗೊಳಿಸಿದ ಅಪರೂಪದ ಅಂಕಣ.

ಯುವತಿಯ - ಯುವಕರ ಸಾಮಾನ್ಯ ವಯೋಸಹಜ ತಲ್ಲಣಗಳನ್ನು ತನ್ನ ಬರಹಗಳ ಮೂಲಕ ಜಗಜ್ಜಾಹೀರು ಮಾಡಿದ ಈ ಲೇಖನಗಳನ್ನು ಕಂಡಾಗ ಕೆಲವರಿಗೆ ಶಾಕ್! ಮತ್ತು ಕೆಲವರಿಗೆ ಏನ್ ಗುರು ಈ ಹುಡುಗಿ ಹೀಗೆ ಬರೆಯುವುದಾ ಎನ್ನುತ್ತಿದ್ದರು. ಆ ಎಲ್ಲಾ ಲೇಖನಗಳ ವಸ್ತು ಆಶ್ಚರ್ಯಕರ ರೀತಿಯಲ್ಲಿರುತ್ತಿದ್ದವು. ಮತ್ತು ಯಾರೊಬ್ಬರು ಬರಹಗಳಲ್ಲಿ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲದ ರೀತಿಯಲ್ಲಿ ಬರಹಗಳಲ್ಲಿ ಮೊಡಿ ತಮ್ಮ ತುಂಟತನದ ಎಲ್ಲೇಯನ್ನು ಮೀರಿದವು ಎಂದು ಭಾಸವಾಗುವಂತಿರುವಂತೆಯೇ ತನ್ನ ಸತ್ಯದ ಮರ್ಮವನ್ನು ತೋರಿ ಎಲ್ಲಾರೂ ಒಮ್ಮೆ ಚಿಂತನೆಯನ್ನು ಮಾಡುವಂತಾಗುತ್ತಿತ್ತು.

ಹುಡುಗರು ಸಹ ಪ್ರಸ್ತಾಪಿಸಲೂ ಹಿಂಜರಿಯುವಂತ ಟಾಪಿಕ್ ಗಳನ್ನು ಸಹಜರವರು ತುಂಬ ಸರಳವಾಗಿ ಸಹಜವಾಗಿ ಯುವಕರು - ಯುವತಿಯರು ಎನ್ ಜಾಯ್ ಮಾಡುತ್ತಾ ತಮ್ಮ ನಲಿವಿನ ತಮಾಷೆಯ ದಿನಗಳನ್ನು ಈ ಲೇಖನಗಳನ್ನು ಓದುವ ಮೂಲಕ ಸಂತಸಪಡುವಂತೆ ಬರೆಯುತ್ತಿದ್ದರು.

ಆ ಸಮಯದಲ್ಲಿ ಕೆಲವೂಮ್ಮೆ ಈ ಬರಹಗಳನ್ನು ಮಿಸ್ ಮಾಡಿಕೊಂಡಿದ್ದುಂಟು. ಎಲ್ಲಾ ಬರಹಗಳನ್ನು ಒಟ್ಟಿಗೆ ಓದಬೇಕು ಅನಿಸಿದ್ದುಂಟು. ಈ ಎಲ್ಲಾ ಆಸೆಗಳಿಗೆ ಪೂರಕವಾಗಿ "ಸಾಹಿತ್ಯ ಭಂಡಾರ" ಪ್ರಕಾಶನದಿಂದ "ಬಾಲ್ಕಾನಿಯಿಂದ ಬಾಗ -೧ ಮತ್ತು ಬಾಗ - ೨" ಸುಂದರ ತುಂಟತನದ ಮುಖ ಪುಟದೊಂದಿಗೆ ಸಂಗ್ರಹ್ಯವಾದ ಎರಡು ಪುಟ್ಟ ಪುಸ್ತಕಗಳನ್ನು ಹೊರತಂದಿರುವುದು ನಮ್ಮಂತ ತರುಣ ಹೃದಯಗಳಿಗೆ ಕಿಚ್ಚು ಹಚ್ಚಿದಂತಾಗಿದೆ.

ಒಂದೇ ಸಿಟ್ಟಿಂಗ್ ನಲ್ಲಿ ಎರಡು ಪುಸ್ತಕಗಳು ಸಂತೋಷದಿಂದ ಓದಿಸಿಕೊಂಡುಬಿಡುತ್ತವೆ.

ಎಲ್ಲಾ ಲೇಖನಗಳು ಪ್ರತಿಯೊಬ್ಬ ೧೮ -೨೪ ತರುಣಿಯ ಯೋಚನಾ ದಾಟಿಯನ್ನು ಉಲ್ಲೇಖಿಸಿರುವಂತಿದೆ. ಆದರೆ ಯಾರೂ ಆ ರೀತಿ ಹೇಳಿಕೊಳ್ಳುವುದಿಲ್ಲ ಆದರೆ ತಮ್ಮ ಮನದ ಯಾವುದೂ ಜಾಗದಲ್ಲಿ ಒಮ್ಮೆಯಾದರೂ ಯೋಚಿಸಿರುತ್ತಾರೆ ಅದಂತು ೧೦೦% ನಿಜಾ!

ಆದರೆ ಸಹಜರವರು ತಮ್ಮ ಸ್ಕೋಟಿಯ ವೇಗದ ರೀತಿಯಲ್ಲಿ ವಿಚಾರಗಳನ್ನು ಲವ್ - ತರುಣಿಯ ಹಸಿ ಆಸೆ, ಹುಡುಗುತನ, ನಿರಾಶೆ, ಪಸ್ಟ್ ಕ್ರಶ್, ಹದಿ ಹರೆಯದ ಕಾತುರತೆ ಮತ್ತು ತನ್ನ ವಯಸ್ಸಿ ಹುಡುಗನೆಡೆಗೆ ಇರುವ ಸೆಳೆತ ಇತ್ಯಾದಿ ಇತ್ಯಾದಿ ವಿಚಾರಗಳನ್ನು ತಮ್ಮ ಪುಟ್ಟ ಪುಟ್ಟ ಬರಹಗಳಲ್ಲಿ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ.

ಹಾಗೆಯೇ ಲೇಖಕಿ ಸಹಜ ತಮ್ಮ ಗಂಭೀರವಾದ ಸಾಹಿತ್ಯ ಅಧ್ಯಯನದ ಛಾಪನ್ನು ತಮ್ಮ ಲೇಖನಗಳಲ್ಲಿ ಮೊಡಿಸಿದ್ದಾರೆ. ಅವರು ಕನ್ನಡದ ಎಲ್ಲಾ ಪ್ರಸಿದ್ಧ ಬರಹಗಾರರ ಸಾಹಿತ್ಯವನ್ನು ಓದಿದ್ದಾರೆ. ಬೈರಪ್ಪ, ಲಂಕೇಶ, ಅನಂತ ಮೊರ್ತಿ, ತೇಜಸ್ವಿ, ಬೆಳಗೆರೆಯವರಿಂದ ಪ್ರಾರಂಭಿಸಿ ಒಶೋ ರಜನಿಶರವರೆಗೆ ಸಾಹಿತ್ಯವನ್ನು ಅರಗಿಸಿಕೊಂಡಿದ್ದಾರೆ. ಅದ್ದರಿಂದಲೇ ಯಾವೂಂದು ಬರಹಗಳು ಕೇವಲ ವಯೋ ಸಹಜ ಚಿತ್ರಣಗಳಾಗದೇ ಗಟ್ಟಿ ಅನುಭವಗಳ ಮೈಲಿಗಲ್ಲುಗಳಾಗಿ ನಿಲ್ಲುತ್ತವೆ.

ಹಾಗೆಯೇ ಯಾವೊಂದು ವಿಷಯವನ್ನು ಯಾವ ಅಂಜಿಕೆಯಿಲ್ಲದೆ ಪ್ರಸ್ತಾಪಿಸಿ ಅದಕ್ಕೆ ನ್ಯಾಯ ಒದಗಿಸಿ ಅದರ ವಿಸ್ತಾರತೆಯನ್ನು ಕಟ್ಟಿ ಕೊಟ್ಟಿದ್ದಾರೆ. ರಜನೀಶರ "ಸಂಬೋಗದಿಂದ ಸಮಾಧಿಯ ಕಡೆಗೆ" ಪುಸ್ತಕದ ಬಗ್ಗೆ ಬರೆಯುತ್ತಾ, ಆ ಪುಸ್ತಕವನ್ನು ಓದಲು ಪ್ರಾರಂಭಿಸಿದಾಗ ತನ್ನ ಸುತ್ತಲಿನ ಗೆಳತಿಯರ ಪ್ರತಿಕ್ರೀಯೆ ಸಾಮಾನ್ಯವಾಗಿ ನಮ್ಮ - ನಿಮ್ಮ ವರ ಮಡಿವಂತಿಕೆಯ ರೀತಿಯಲ್ಲಿ ಸೆಕ್ಸ್ ಗುರುವಿನ ಗ್ರಂಥಾಧ್ಯನವೇ!! ಎಂದು ಅಶ್ಚರ್ಯಚಕಿತರಾಗಿದ್ದದು. ಹಾಗೆಯೇ ಲೇಖಕಿ ಆ ಪುಸ್ತಕವನ್ನು ಮತ್ತು ರಜನೀಶರ ವಿಚಾರಧಾರೆ ಯಾವ ಮಟ್ಟದ್ದು ಮತ್ತು ಅದು ಹೇಗೆ ನಮ್ಮ ಜೀವನಕ್ಕೆ ಧಾರಿ ದೀಪವಾಗಿರುವಲ್ಲಿ ಸಫಲವಾಗಿದೆ ಎಂದು ಚಿತ್ರಿಸಿರುವುದು ಅವರ ಗಟ್ಟಿ ವ್ಯಕ್ತಿತ್ವಕ್ಕೆ ಸಾಕ್ಷಿ.

ಹೀಗೆಯೇ ಲೇಖಕಿಯ ಈ ತುಂಟ ಬರಹಗಳಿಂದ ಯುವಕರಿಂದ ಯಾವ ರೀತಿಯ ಪತ್ರಗಳು - ಕರೆಗಳು ಲೇಖಕಿಯನ್ನೇ ಲೈನ್ ಹೊಡೆಯಲು ಪ್ರಾರಂಭಿಸಿರುವುದನ್ನು ಅದಕ್ಕೆಲ್ಲಾ ಯಾವ ರೀತಿಯಲ್ಲಿ ಸಹಜರವರು ಸಹಜ ರೀತಿಯಲ್ಲಿ ತಮ್ಮ ವ್ಯಕ್ತಿತ್ವದ ಮೂಲಕ ಅವರ ಆಸೆಗಳಿಗೆ ಯಾವ ರೀತಿಯಲ್ಲಿ ತಣ್ಣೀರು ಎರೆಚಿ ಬುದ್ಧಿ ಹೇಳಿರುವುದು ಮತ್ತು ಗೆಳೆತನ ಅಂದರೆ ಏನು, ಪರಿಚಯ ಅಂದರೇನು ಎಂದು ವಿಸ್ತಾರವಾಗಿ ಪ್ರಸ್ತಾಪಿಸಿದ್ದಾರೆ.

ಸಹಜ ಮತ್ತು ತನ್ನ ಹಾಸ್ಟೇಲ್ ಗೆಳತಿ "ಚವತಿ" ಯರ ಸ್ವಗತ ಸಲ್ಲಾಪ, ಸಾಹಸದ ಹಾದಿಗಳು ಪ್ರತಿಯೊಬ್ಬ ಯುವತಿಯ ಯೋಚನಾ ಲಹರಿಗೆ ಉದಾಹರಣೆಯಾಗಿದೆ.

ಎಲ್ಲಾ ಯುವಕ ಯುವತಿಯರಿಗೆ ಈ ರೀತಿಯ ಬರಹಗಳಿಂದ ತಾವುಗಳು ವಿಭಿನ್ನವಾಗಿ ಯೋಚಿಸಬಹುದು ಎಂಬುದನ್ನು ಕಲಿಯುವುಂತಾಗುತ್ತಾದೆ. ಮತ್ತು ಹೇಗೆ ತಮ್ಮ ಯೌವನದ ದಿನಗಳನ್ನು ಯಾವ ರೀತಿಯಲ್ಲಿ ಕ್ರೀಯಶೀಲವಾಗಿ ಅಧ್ಯಯನದ ಜೋತೆ ಜೋತೆಯಲ್ಲಿ ಹಲವಾರು ರೀತಿಯ ಚಟುವಟಿಕೆಗಳಲ್ಲಿ ತೊಡಗಿಸಬಹುದು ಎಂಬುದಕ್ಕೆ ಸಹಜ ಮತ್ತು ಚವತಿಯವರು ಮಾಡುವ ಹೊಸ ಹೊಸ ಪ್ರಯೋಗಗಳಾದ ಪ್ರವಾಸ, ಓದು, ಗೊಗಲ್ ನಲ್ಲಿ ವಿವಿಧ ರೀತಿಯ ವಿಷಯಗಳನ್ನು ತಿಳಿಯುವ ಆಟ ಇತ್ಯಾದಿ ಉತ್ತಮವಾದ ನಿದರ್ಶನಗಳನ್ನು ನೀಡಿದ್ದಾರೆ.

ಎರಡು ಪುಸ್ತಕಗಳನ್ನು ಒಂದೇ ಗುಕ್ಕಿಗೆ ಓದಿ ಹರ್ಷಿತನಾಗಿ ಪುನಃ ಈ ಲೇಖಕಿಯ ಬರಹಗಳು ಮತ್ತೋಮ್ಮೆ ಮೊಡಿ ರೋಮಾಂಚನವನ್ನುಂಟು ಮಾಡಿಸಬಾರದೇ ಎನ್ನುವಂತಾಯಿತು.

ನನ್ನ ಹರ್ಷದ ಕ್ಷಣಗಳನ್ನು ಸಹಜರಿಗೆ ತಿಳಿಯಪಡಿಸಲೇ ಎಂದು ಅದೇ ಅವರ ಹಳೆಯ ಮೈಲ್ ಐಡಿ "ಲವ್ ಸಹಜ ಅಟ್ ಜಿ ಮೈಲ್ ಡಾಟ್ ಕಾಂ" ಗೇ ಪತ್ರಿಸಿದ್ದೇನೆ. ಆದರೆ ಯಾವುದೇ ಪ್ರತಿಕ್ರೀಯೆ ಇದುವರೆಗೂ ಬಂದಿಲ್ಲ. ಅವರ ಪ್ರತಿಕ್ರೀಯೆಗಾಗಿ ಕಾಯುತ್ತಿರುವೆ. ಯಾರಿಗೆ ಗೊತ್ತು ಸಾಹಸಿ ಲೇಖಕಿ ಸಹಜ ಹೊಸ ವಿಚಾರಾನುಭವಗಳೊಂದಿಗೆ ತಮ್ಮ ಹೊಸ ಲೇಖನಗಳ ಮೂಲಕ ಹೊಸ ರೀತಿಯಲ್ಲಿ ಪ್ರತ್ಯಕ್ಷವಾದರೂ ಸರಿಯೇ! ಹಾಗೆಯೇ ಆಗಲಿ ಎಂದು ಆಶಿಸುವೆ.

-ತ್ರಿಪುಟಪ್ರಿಯ

ಸೋಮವಾರ, ನವೆಂಬರ್ 30, 2009

ಬೆಂದಕಾಳೂರಿನ ಬೆವರ ಸೆಲೆ

ಇತ್ತೀಚೆಗೆ ಆ ಫೀಲ್ ಆಗುತ್ತಿದೆ ನಾನೇಷ್ಟು ದೈಹಿಕ ಶ್ರಮವನ್ನು ಪಡುತ್ತಿದ್ದೇನೆ ಎಂದು. ಪೂರಾ ಯಾಂತ್ರಿಕ ಜೀವನದ ಚಕ್ರಕ್ಕೆ ಸಿಕ್ಕು ಕೇವಲ ಕಡಿಮೆ ದೈಹಿಕ ಶ್ರಮದ ಕೆಲಸಗಳನ್ನು ಮಾಡುತ್ತಿರುವುದರಿಂದ ಸುಸ್ತಾದ ಕೆಲಸಗಳನ್ನು ಮಾಡಿ ಮೈ ಬೆವರು ಕೀಳುವಂತೆ ಯಾವುದೇ ಚಟುವಟಿಕೆ ಅಥಾವ ಸರಿಸುಮಾರು ದೂರದ ನಡೆಯುವಿಕೆಯನ್ನೇ ಮರೆತಂತಾಗಿದೆ. ಇನ್ನೂ ಯಾವುದೇ ರೀತಿಯ ದೈಹಿಕವಾಗಿ ರಿಸ್ಕ್ ಇರುವಂತ ಮೈ ನೋವು ಮಾಡುವಂತ ಕೆಲಸಗಳನ್ನು ಅಟ್ ಲೀಸ್ಟ್ ಆಟಗಳನ್ನು ಆಡಿ ಜಮಾನವೇ ಕಳೆದಂತಾಗಿದೆಯೇನೋ. ಒಂದು ರೀತಿಯ ಮೈ ಆಲಸ್ಯವನ್ನು ನನ್ನ ದೇಹ ಪ್ರತಿಪಲಿಸುತ್ತಿರುವಂತೆ ಕಾಣುತ್ತೀದೆ.

ಕೇವಲ ಕೇವಲ ಮನಸ್ಸಿಗೆ ಸಂಬಂಧಿಸಿದ ಕಠಿಣ ಕಸರತ್ತುಗಳನ್ನು ಮಾಡುವಲ್ಲಿ ಸಮಯವನ್ನು ಕಳೆಯುತ್ತಿದ್ದೇನೆ ಅನಿಸುತ್ತಿದೆ. ಆದರೆ ಬರೀ ಮನಸ್ಸಿಗೆ ಹೆಚ್ಚು ಕೆಲಸ ಕೊಟ್ಟಾಗ ಅದು ಸಹ ಮೊಂಡಾತ ಮಾಡಿ ವಿವಿಧ ರೀತಿಯ ದೇಹ ವೈಪರಿತ್ಯಗಲನ್ನು ಅದು ತನ್ನ ಮುನಿಸಿನೋಪಾದಿಯಲ್ಲಿ ಮೈ ಮೇಲೆ ತೋರುತ್ತದೆ. ಅದಕ್ಕೆ ಸ್ವಲ್ಪ ದಪ್ಪನಾದೇನೋ ಅನಿಸುವುದು, ಕತ್ತು, ಬೆನ್ನು, ಕಾಲು ನೋವು, ಕಣ್ಣು ಸ್ಟ್ರೈನ್ ಆಗಿದೆಯೇನೋ ಎಂಬ ಫೀಲ್ ಆಗುವುದು. ಈ ರೀತಿಯ ನಾನಾ ಕಾಟಗಳನ್ನು ಮನಸ್ಸು ಮುನಿಸಿಕೊಂಡು ಅನುಭವಿಸು ಎಂದು ಅಣಿಕಿಸುತ್ತೀದೆ.

ಇದಕ್ಕೆಲ್ಲಾ ವಿರಾಮ ಕಾಣಿಸಬೇಕು ದೇಹ - ಮನಸ್ಸು ಎರಡನ್ನು ಸಮತೋಲನದಲ್ಲಿ ಕಾಣುತ್ತಿನಪ್ಪಾ ಎಂದು ಇತ್ತೀಚೆಗೆ ಮುಂಜಾನೆಯೇ ಮನಸ್ಸಿಲ್ಲದ ಮನಸ್ಸಿನಿಂದ ಎದ್ದು ಹತ್ತಿರದ ಪಾರ್ಕಿನಲ್ಲಿ ನಮ್ಮ ನಗರದ ಖಾಯಂ ಜಾಗಿಂಗ್ ಮಂದಿಯ ಜೋತೆ ನಾನು ಬಿರುಸಿನ ಹೆಜ್ಜೆ ಹಾಕುತ್ತಿದ್ದೇನೆ.

ಮಕ್ಕಳಿಂದ - ವೃದ್ಧರವರಿಗೆ ವಿವಿಧ ರೀತಿಯ ವಯೋಮಾನದ ಎಲ್ಲಾ ಆಪರ್ಟಮೆಂಟ್ ಜೀವಗಳು ಮುಂಜಾನೆಯೇ ಚುಮು ಚುಮು ಬಿಸಿಲಿನ ನಡುವೆ ಯಾವುದು ಒಂದು ಯುದ್ಧಕ್ಕೆ ತಯಾರಿ ನಡೆಸಲು ಮಾಸ್ಟ್ ಪಾರ್ಟ್ ಮಾಡುತ್ತಿದ್ದಾರೇನೋ ಅನಿಸುವಂತೆ ಹಲವಾರು ಸುತ್ತುಗಳನ್ನು ಸುಸ್ತಾಗಿ ಸುತ್ತುತ್ತಾ ಇರುತ್ತಾರೆ.

ಹೌದು! ಅತಿ ಅನುಕೂಲಕರವಾದ ನಮ್ಮ ನಗರ ಜೀವನ ಎಷ್ಟರ ಮಟ್ಟಿಗೆ ಮಂದಿಯನ್ನು ಸೋಮಾರಿಗಳನ್ನಾಗಿ ಮಾಡಿದೆಯೆಂಬುದನ್ನು, ಬೆವರಿನ ಬೆಲೆ ಏನು ಎಂಬುದನ್ನು ಕಲ್ಪಿಸಲೂ ಸಾಧ್ಯವಾಗುವುದಿಲ್ಲ. ಅದಕ್ಕೆ ಸಾಕ್ಷಿ ನಮ್ಮ ಎಲ್ಲಾ ಕೃತಕ ನಗರ ಉದ್ಯಾನ ವನಗಳಲ್ಲಿನ ನಮ್ಮ ಮುಂಜಾನೆಯ ಜನ ಜಾತ್ರೆ.

ಅದು ಅಗತ್ಯವಾಗಿ ಬೇಕೆ ಬೇಕು ದಿನಕ್ಕೆ ೨ ಕಿ.ಮೀ ನಡೆಯಬೇಕು ಆಗ ಮಾತ್ರ ನೀವು ಆರೋಗ್ಯವಾಗಿರುತ್ತೀರಿ ಎಂದು ವೈದ್ಯ ಶಾಸ್ತ್ರ ಹೇಳುತ್ತದೆ. ಈ ಯಾವುದೇ ವಿಚಾರ ನಮ್ಮ ಹಳ್ಳಿಯ ಜನಕ್ಕೆ ಗೊತ್ತಿಲ್ಲ ಬಿಡಿ. ವಾಕಿಂಗ್ ಅಂದರೆ ಏನೋ ಎಂದು ಎಕಾ ಮಕಾ ನೋಡುತ್ತಾರೆ. ಸುಮ್ಮ ಸುಮ್ಮನೆ ಸುತ್ತಲು, ನಡೆದಾಡಲು ನಮಗೇನು ಹುಚ್ಚ ಅನ್ನುತ್ತಾರೆ. ಅದು ಹಳ್ಳಿ ಜಗತ್ತು!

ಹೌದು ಅಲ್ಲಿ ಮೈ ಮುರಿಯುವಷ್ಟು ಕೆಲಸ ಮತ್ತು ಹೊಟ್ಟೆ ತುಂಬುವಷ್ಟು ಪೌಷ್ಟಿಕ ಹಿಟ್ಟು ಸಿಗುತ್ತದೆ. ಕಣ್ಣು ತುಂಬ ನಿದ್ದೆ ಬರುತ್ತದೆ. ಇದನ್ನು ಸುಖ ಎನ್ನೂಣವಾ ಅಂದರೆ ಅಲ್ಲಿಯ ಜನ ಏನು ಸುಖನೋ ಏನೋ ಮಹಾರಾಯ ನಮ್ಮ ಗೋಳು ನಮಗೆ ದಿನ ಇದ್ದುದ್ದೇ ಎಂದು ನಮ್ಮ ನಗರ ಮಂದಿಯ ಅದೃಷ್ಟವನ್ನು ಕೊಂಡಾಡುತ್ತಾರೆ. ಆದರೆ ಈ ನಗರ ಸುಖದ ನಗರ ಮಂದಿಯ ಪಡಿಪಾಟಲು ಮುಂಜಾನೆಯ ಸಮಯದಲ್ಲಿ ನಗರದ ಎಲ್ಲಾ ಉದ್ಯಾನವನಗಳನ್ನು ಕಂಡಾಗ ಹಳ್ಳಿಯವನ ಪ್ರತಿಕ್ರೀಯೇ ಏನು ಎಂಬುದೇ ನನಗೆ ನಿತ್ಯ ದೂಡ್ಡ ಪ್ರಶ್ನಾರ್ಥಾಕ ಚಿಹ್ನೆ!

ದಿನದ ಮುಕ್ಕಾಲು ಪಾಲು ಸಮಯವನ್ನು ಕೇವಲ ನಾಲ್ಕು ಗೋಡೆಗಳಲ್ಲಿ - ಮನೆ - ಆಫೀಸ್ ನಲ್ಲಿ ಕಳೆಯುವ ಮಂದಿಯ ದೇಹ ಸ್ಥಿತಿ ಎಷ್ಟರ ಮಟ್ಟಿಗೆ ಜಡವಾಗಿರುತ್ತದೆ ಅಂದರೆ ಅವರ ದೇಹದ ವಾಲ್ಯುಮ್ ನೋಡಿದರೆ ನಿರ್ದರಿಸಬಹುದು. ಇದೇನೂ ಸುಖವಾಪ್ಪಾ ಎನ್ನುವಂತಾಗುತ್ತದೆ.

ಪರಸ್ಪರರ ನಡುವಿನ ಸ್ನೇಹ ಸಂಬಂಧ, ಬಂದುತ್ವಗಳು ನಗಣ್ಯವಾಗಿ ತಾವಾಯಿತು ತಮ್ಮ ಕೆಲಸವಾಯಿತು ಎಂಬಂತೆ ದುಡಿಯುವ ಯಂತ್ರಗಳಾಗಿರುತ್ತಾರೆ. ಇದಕ್ಕೆ ಯಾವುದೇ ಬೇದ ಭಾವವಿಲ್ಲವೇನೋ ಎಂಬಂತೆ ಎಲ್ಲಾ ವಯಸ್ಸಿನವರು, ಮನಸ್ಸಿನವರು ತಮ್ಮ ತಮ್ಮ ಚಟುವಟಿಕೆಗಳಲ್ಲಿ ಲೀನವಾಗಿ ತಮ್ಮ ಮುಂದುವರಿಕೆಯೇ ಅಭಿವೃದ್ಧಿಯನ್ನು ಹೊಂದುವ ಪಾಥ್ ಟ್ರ್ಯಾಕ್ ಅಕ್ಟೀವಿಟಿ ಬಿಟ್ಟು ಬೇರೊಂದನ್ನು ಯೋಚಿಸಲಾರರು.

ಅದಕ್ಕೆ ಇರಬೇಕರ್ರಿ ಕೆಲಸ ಅಥವಾ ಯಾವುದೇ ಬದುಕು ನಿಂತ ನೀರಾಗಬಾರದು ಅದು ನಿರಂತರವಾಗಿ ಹರಿಯುವ ಝರಿಯಾಗಿರಬೇಕು ಆಗಲೇ ಅದಕ್ಕೆ ಒಳಪು ಮತ್ತು ಬಿಳುಪಿನ ಬಿಂಬವನ್ನು ಅದರಲ್ಲಿ ಕಾಣಬಹುದು.

ನಮ್ಮ ಹಳ್ಳಿಗಾಡಿನ ಜನಗಳ ಬದುಕಿನಲ್ಲಿ ಎಲ್ಲಾ ಇದೆ. ತಮ್ಮ ನೋವು, ನಲಿವು, ಸಂತಸ, ಕಾತರ, ಬಡತನ ಇತ್ಯಾದಿ ಎಲ್ಲವನ್ನು ತಾವೇ ಹಾಡುಗಳನ್ನು ಕಟ್ಟಿ ಹಾಡಿದರು. ಅದು ಒಬ್ಬರಿಂದ ಮತ್ತೋಬ್ಬರಿಗೆ ಸಂಹವನದ ಮೊಲಕ ಪ್ರಸರವಾಯಿತು ಮತ್ತು ಇಂದಿಗೂ ಅದು "ಜನಪದ"ವಾಗಿ ಜೀವಂತವಾಗಿದೆ. ಗಾದೆಗಳಾಗಿ ವೇದ ಸುಳ್ಳದರೂ ಗಾದೆ ಸುಳ್ಳಾಗದು ಎಂದು ಪ್ರತಿಬಿಂಬಿಸುತ್ತಿದೆ. ಹಲವು ಹಬ್ಬ ಆಚರಣೆಗಳಾಗಿ ನಮ್ಮ ದಿನಚರಿಯಲ್ಲಿ ಸ್ಥಾಪಿತವಾಗಿ ಇಂದಿಗೂ ಆಚರಿಸಲ್ಪಡುತ್ತವೆ. ಇಂಥ ಯಾವುದೇ ಒಂದು ಕ್ರೀಯಶೀಲವಾದ ಕೆಲಸವಲ್ಲದ ಘಳೀಗೆ ನಗರ ಬದುಕಿನಲ್ಲಿ ಬೋರ್ ಎನಿಸದಿರಲಾರದೇ? ಹೆಳಲಾರರು!

-ತಿಪುಟಪ್ರಿಯ

ಶನಿವಾರ, ನವೆಂಬರ್ 14, 2009

ಕನ್ನಡದ ರತ್ನನ ವಿಚಾರತರಂಗ

ಈ ಹಿಂಗಾರು ಮಳೆಯೇನೋ ಅಲ್ಲವೋ ಬಲ್ಲವರಿಲ್ಲ! ಚೆನೈನಲ್ಲಿ ಮಳೆಯ ಆರ್ಭಟ ಹೆಚ್ಚಾಗಿ ಬಹುಪಾಲು ಜನರ ಜೀವನ ಅಸ್ತವ್ಯಸ್ತವಾಗಿರುವಲ್ಲಿ, ಇಲ್ಲಿ ನಮ್ಮ ಊರುಗಳಲ್ಲಿ ಮೋಡ ಕವಿದ ವಾತಾವರಣವಿದ್ದು ಆಗಾಗ್ಗೆ ತುಂತುರು ಜಟಿ ಮಳೆಯ ಕಮ್ಮನೆ ಚಳಿಯ ಅನುಭವ. ಹೊರಗಡೆ ಹೋಗದಂತೆ ಮನೆಯಲ್ಲಿ ನಿಲ್ಲಿಸುವಂತೆ ಕಟ್ಟಿದಂತಾದ ವಾರಾಂತ್ಯ.
ಇಂಥ ಸಮಯದಲ್ಲಿ ಜೊತೆಗೆ ಕುಡಿಯಲು ಬಿಸಿ ಬಿಸಿಯಾದ ಕಾಫಿ ಮತ್ತು ಓದಲು ಒಂದು ಸುಂದರವಾದ ಕನ್ನಡ ಪುಸ್ತಕವೊಂದಿದ್ದರೆ ಸ್ವರ್ಗಕ್ಕೆ ಕಿಚ್ಚು ಹಚ್ಚಿದಂತಾಗುತ್ತದೆ.

ನನ್ನ ಪುಟ್ಟ ಲೈಬ್ರರಿಯಲ್ಲಿ ನೋಡಿದರೆ ಯಾವುದನ್ನು ಓದಲಿ ಯಾವುದನ್ನು ಬಿಡಲಿ ಎನ್ನುವಂತಾಯಿತು. ಎಲ್ಲಾ ಪುಸ್ತಕಗಳು ಅಕ್ಕರೆಯ ಮತ್ತು ನಾನು ಪ್ರೀತಿಪಟ್ಟು ಸಂಗ್ರಹಿಸಿರುವಂತವು. ಮತ್ತೇ ಮತ್ತೇ ಓದಬೇಕೆನಿಸುವ ಸಂಗ್ರಹ.
ಇವುಗಳೆಲ್ಲಾದರ ಮಧ್ಯದಿಂದ ನನಗೆ ಮೆಚ್ಚಿಗೆ ಸೂಸಿ ನನ್ನ ಓದು ಎನಿಸಿದಂತಾಗಿ ಕಣ್ಣಸೆಳೆದ "ವಿಚಾರಾತರಂಗ" ಜೆ.ಪಿ ರಾಜಾರತ್ನಂರವರ ಪುಸ್ತಕವನ್ನು ಎತ್ತಿಕೊಂಡೆ. ಸುಂದರವಾದ ರಾಜರತ್ನಂರವ ಮುಖಪುಟವನ್ನು ಹೊಂದಿ ಚಿಕ್ಕ ಚಿಕ್ಕ ಗದ್ಯ ಲೇಖನಗಳನ್ನೂಳಗೊಂಡ ೨೫೦ ಪುಟಗಳ ಪುಸ್ತಕ ಮನಸೊರೆಗೊಂಡಿತು.

ಸುಮಾರು ೭೦-೮೦ರ ದಶಕಗಳಲ್ಲಿ ಅಂಕಣ ಬರಹಗಳಾಗಿ ಅಂದಿನ ದಿನ ಪತ್ರಿಕೆಯಾದ ಪ್ರಜಾವಾಣಿಯಲ್ಲಿ ಪ್ರಕಟಗೊಂಡಿದ್ದ ಈ ಲೇಖನಗಳು ನಮ್ಮ ಕನ್ನಡ - ಕರ್ನಾಟಕ - ಕನ್ನಡದ ವ್ಯಕ್ತಿಗಳು - ಕನ್ನಡ ವಿಚಾರಗಳಿಗೆ ಕನ್ನಡಿಯನ್ನು ಹಿಡಿದಂತಾಗಿದೆ.
ರಾಜರತ್ನಂ ಅಂದರೆ "ರತ್ನನ ಪದಗಳ" ಜನಕ, ಕವಿ ಎಂಬುದು ಇಂದಿನ ನಮ್ಮಂತ ಪೀಳಿಗೆಗೆ ನೆನಪಿಗೆ ಬರುವುದು. ಅವರು ಈ ರೀತಿಯ ಸುಸಲಿತವಾದ ಗದ್ಯ ಲೇಖನಗಳನ್ನು ತುಂಬ ಸರಳವಾಗಿ ಮಾಸ್ತರ್ ಶೈಲಿಯಲ್ಲಿ ಪುಟ್ಟ ಮಕ್ಕಳಿಗೋ ಅರ್ಥವಾಗುವಂತೆ ನಿರೂಪಿಸಿರುವುದು ಮೆಚ್ಚ ಬೇಕಾದ ವಿಷಯ.

ವಿಷಯಗಳ ಆಯ್ಕೆಯ ಸಮಯ ತುಂಬ ಹಳೆಯ ದಿನಗಳಾದರೊ ಇಂದಿಗೊ ಪ್ರಸ್ತುತವಾಗಿರುವಂತೆ ಬಾಸವಾಗುತ್ತದೆ. ಎಲ್ಲಾ ಲೇಖನಗಳು ಲಲಿತ ಪ್ರಬಂಧಂತೆ ಸರಳ ಪದಗಳ ಜೊಡಣೆಯೊಂದಿಗೆ ರಚಿತವಾಗಿದೆ. ಹೆಚ್ಚು ಲಂಬಿತವಾಗದೆ ,ದೊಡ್ದದು ಅಂದರೆ ಮೊರು ಪುಟ ಮಾತ್ರವಾಗಿದೆ.

ಇಲ್ಲಿ ಮೊಡಿರುವ ಲೇಖನಗಳ ವಿಷಯ ವೈವಿಧ್ಯ ನಮ್ಮ ಪುರಾಣ ಇತಿಹಾಸದಿಂದ ಪ್ರಸ್ತುತ ನಮ್ಮ ಹಿರಿಯ ಕಿರಿಯ ವ್ಯಕ್ತಿಗಳವರೆಗೆ, ಕನ್ನಡ ಕಟ್ಟಾಳುಗಳ ಬಗ್ಗೆ, ಕನ್ನಡದ ಬಗ್ಗೆ ತಮ್ಮ ಉಸಿರನ್ನು ಮುಡುಪಿಟ್ಟವರ ಬಗ್ಗೆ ಅವರ ಅಭಿಮಾನದ ಬಗ್ಗೆ ತುಂಬ ನಲ್ಮೆಯಿಂದ ಬರದಿದ್ದಾರೆ.

ಕನ್ನಡದ ಆಶ್ವಿನಿ ದೇವತೆಗಳಾದ ಟಿ.ಎಸ್. ವೆಂಕಣ್ಣಯ್ಯ, ಬಿ.ಎಂ.ಶ್ರೀ ಮತ್ತು ಅ. ನಾ. ಕೃಷ್ಣರಾಯರ ಬಗ್ಗೆ ಅವರು ಬರೆದಿರುವ ಬರಹಗಳಲ್ಲಿರುವ ಕನ್ನಡ ಪ್ರೇಮವನ್ನು ಕಂಡರೆ ಇಂಥವರು ಅಂದು ಇದ್ದಿದ್ದರಾ! ಎಂದು ನಾವುಗಳು ಆಶ್ಚರ್ಯ ಪಡುವಂತಾಗುತ್ತದೆ.
ಅಂದಿನ ಬೆಂಗಳೂರು - ಮೈಸೂರು ಮಧ್ಯದಲ್ಲಿ ಜರುಗಿದ ಕನ್ನಡದ ಕೆಲಸಗಳು, ಕಾರ್ಯಕ್ರಮಗಳನ್ನು ತಮ್ಮ ಲೇಖನಿಯಿಂದ ಕಣ್ಣಿಗೆ ಕಟ್ಟುವಂತೆ ಸೆರೆ ಹಿಡಿದಿದ್ದರೆ. ರಾಜರತ್ನಂ ಸ್ವತಃ ಕನ್ನಡವನ್ನು ತಮ್ಮ ದೈನಂದಿನ ಉಸಿರಾಗಿ ಹಾಡಿ ಬೆಳಸಿದಂತ ಜೀವ. ಅವರಲ್ಲಿ ಕನ್ನಡ ಬಗ್ಗೆ ಇರುವಂತ ಕಾಳಜಿ ಮತ್ತು ಅದನ್ನು ಯಾವ ರೀತಿಯಲ್ಲಿ ಜನಸಾಮಾನ್ಯರಿಗೆ ತಲುಪಿಸಬೇಕು ಮತ್ತು ಅಂದಿನ ದಶಕಗಳಲ್ಲಿ ಹೇಗೆ ತಮ್ಮ ಕಾರ್ಯ ಕ್ಷೇತ್ರವಾದ ಶಿಕ್ಷಣ ಸಂಸ್ಥೆಗಳನ್ನು ಅನುಷ್ಠಾನದ ಕೇಂದ್ರಗಳಾಗಿ ಮಾಡಿಕೊಂಡು ಕನ್ನಡ ಎಂದರೆ ಮೂಗು ಮುರಿಯುವವರಿಗೆ ವಿಭಿನ್ನವಾದ ರೀತಿಯಲ್ಲಿ ಕನ್ನಡದಲ್ಲೂ ಎಲ್ಲವೂ ಸಾಧ್ಯ ಮತ್ತು ಕನ್ನಡಕ್ಕೆ ಬೇಕಾಗಿರುವುದು ಅದನ್ನು ಬಳಸಿ ಉಳಿಸುವ ಜನಾಂಗ ಎನ್ನುವಂತೆ ಕನ್ನಡದ ತ್ರಿ ಮೂರ್ತಿಗಳ ಆಸೆ, ಆಶಯಗಳಿಗೆ ಅನುಗುಣವಾಗಿ ರಾಜರತ್ನಂರವರು ಕಿರಿಯರಿಗೆ ಉತ್ತೇಜಕವಾದ ಸಹಾಯ ಮತ್ತು ಪ್ರೋತ್ಸಹ ನೀಡಿರುವುದು ಈ ಗ್ರಂಥದ ಮೂಲಕ ತಿಳಿಯಲ್ಪಡುತ್ತದೆ.

ಯಾವುದೇ ಲೇಖನಗಳು ತೀರ ತೆಳು ಎನಿಸದೇ ಸುಮ್ಮನೇ ಬರಹಗಳಾಗದೆ ವಿಷಯದ ಗಾಂಭಿರ್ಯದಿಂದ ಮೈಲಿಗಲ್ಲುಗಳಾಗಿ ನಿಲ್ಲುತ್ತವೆ. ಮತ್ತು ಅವುಗಳ ವ್ಯಾಪ್ತಿ ಸರ್ವಕಾಲೀಕವಾಗಿದೆ.

ಈ ಪುಸ್ತಕದ ಮೂಲಕ ಹತ್ತು ಹಲವು ಹೊಸ ವಿಷಯಗಳನ್ನು ಕನ್ನಡ, ನಮ್ಮ ಭಾರತೀಯ ಸಂಸ್ಕೃತಿ ಮತ್ತು ನಮ್ಮ ಮಹಾನ್ ವ್ಯಕ್ತಿಗಳ ಬಗ್ಗೆ ತಿಳಿಯುವುದರ ಮೂಲಕ ನಮ್ಮನ್ನು ನಾವೇ ಹೆಮ್ಮೆಪಟ್ಟುಕೊಳ್ಳುವಂತಾಗುತ್ತದೆ.

ಈ ರೀತಿಯ ಕನ್ನಡ ಮಾಸ್ತರ್ ನ್ನು ರತ್ನನ ಪದಗ ರೂವಾರಿಯನ್ನು, ಮಕ್ಕಳಿಗೆ ಪ್ರಿಯವಾದ ನಾಯಿ ಮರಿ ಪದ್ಯವನ್ನು ಕೊಟ್ಟ ಗಾರುಡಿಯನ್ನು ಕಂಡ ಅಂದಿನ ದಿನಮಾನದ ಸುತ್ತಲಿನವರೇ ಧನ್ಯರು. ಆದರೋ ಅಂಥವರು ಮಾಡಿದ ಸೃಷ್ಟಿಸಿದ ಇಂಥ ವಿಚಾರತರಂಗಗಳ ಸಂಪರ್ಕ ನಮ್ಮಂತವರಿಗೆ ಇಂದು ದೊರೆಯುತ್ತಿರುವುದು ಮತ್ತು ಇಂಥ ಕನ್ನಡ ನೆಲದಲ್ಲಿ ಹುಟ್ಟಿರುವ ನಮ್ಮಗಳ ಪುಣ್ಯವೇ ಸರಿ!

ಈ ರೀತಿಯ ಪುಸ್ತಕಗಳ ಅಗತ್ಯತೆ ಇಂದು ಹೆಚ್ಚು ಅವಶ್ಯಕವಾಗಿದೆ. ಕನ್ನಡದ ಸಂಸ್ಕೃತಿ, ಇತಿಹಾಸವನ್ನು ಸಾಂಸ್ಕೃತಿಕವಾಗಿ ಶ್ರೀಮಂತಗೊಳಿಸಿದ ಇಂಥ ಮಹನೀಯರ ಮಾತುಗಳು, ಕೃತಿಗಳು ಪುನಃ ಪುನಃ ನಮ್ಮಗಳ ಕಿವಿಗಳ ಮೇಲೆ ಬೀಳುವಂತಾಗಬೇಕು. ಆಗಲಾದರೂ ಕನ್ನಡವನ್ನು ಯಾವ ರೀತಿ ಬಲಿಷ್ಠಗೊಳಿಸಬಹುದು ಎಂಬ ನಮ್ಮ ಹಿರಿ ಕಿರಿ ಚಿಂತನೆಗಳಿಗೆ ಇಂದಿನ ಈ ಕನ್ನಡ ರಾಜ್ಯೋತ್ಸವ ಮಾಸದಲ್ಲಿ ದಾರಿ ದೀಪವಾಗಲಿದೆ.

!!ಸಿರಿಗನ್ನಡಂ ಗೆಲ್ಗೆ!!

-ತ್ರಿಪುಟಪ್ರಿಯ

ಭಾನುವಾರ, ಮೇ 17, 2009

ಪುನಃ ಮಹಾ ಚುನಾವಣ ಜ್ವರ ದರ್ಎಂದು ಇಳಿದು ಹೋಗಿದೆ

ಪುನಃ ಮಹಾ ಚುನಾವಣ ಜ್ವರ ದರ್ಎಂದು ಇಳಿದು ಹೋಗಿದೆ ಸತತ ಎರಡು ತಿಂಗಳ ಕಾಲ ಬಹು ಚರ್ಚಿತ ವಿಷಯವಾಗಿ ಭಾರತೀಯರ ಮಹಾ ಕನಸು, ಅಸೆ, ಕಾತುರತೆಯ ಗೂಡಾಗಿದ್ದ ಚುಣಾವಣೆ ಅಂದುಕೊಂಡಂತೆ ಕಾಂಗ್ರೆಸ್ ತನ್ನ ಎರಡನೆಯ ಇನ್ನಿಂಗ್ಸನ್ನು ಅದೇ ಹಳೆಯ ನಾಯಕರನ್ನು ಹೊಂದಿ ತಮ್ಮ ದೇಶಾಡಿಳಿತವನ್ನು ಜಾರಿಮಾಡಲು ಸಿದ್ಧವಾಗಿವೆ. ಕನ್ನಡ ಜನಕ್ಕಂತು ನಿರಾಶೆ! ಕನಸನ್ನು ನನಸು ಮಾಡುವ ಸರ್ಕಾರ ಬದಲಾವಣೆಯನ್ನು ಕಾಣುವ ಭಾವನೆಗಳಿಗೆ ಮತ್ತೆ ಐದು ವರ್ಷ ಕಾಯಬೇಕು. ಅತಿ ಹೆಚ್ಚು ಪ್ರತಿನಿದಿಗಳನ್ನು ಬಾಜಪ ಗೆ ಆರಿಸಿ ಅದ್ವಾನಿಜಿಯ ನಾಯಕತ್ವದ ಸರ್ಕಾರದ ಕನಸನ್ನು ಮೀರಿ ಯಾರು ತಿಳಿಯದ ರೀತಿಯಲ್ಲಿ ಯುಪಿಎ ತನ್ನ ಸ್ಥಾನವನ್ನು ಕಾದುಕೊಂಡು ಮತ್ತೆ ಐದು ವರ್ಷ ನಮ್ಮ ದೇಶವನ್ನು ಮುನ್ನದಿಸುವ ಆಶೆಯನ್ನು ತೋರಿಸುತ್ತಿದೆ. ಎಷ್ಥರ ಮಟ್ಟಿಗೆ ನಮ್ಮ ದೇಶದ ಹಾಗು ಹೋಗುಗಳನ್ನು ಕಾಪಾಡಿ ಜಗತ್ತಿನಲ್ಲಿ ನಮ್ಮ ದೇಶವನ್ನು ಎಲ್ಲ ರಂಗದಲ್ಲೂ ಮೊದಲೆನೆಯಾದಾಗಿಸುತ್ತದೂ ಇಲ್ಲವು ಕಾಲವೇ ನೋಡಬೇಕು. ಯುವಕರ ಅಸೆ ಏನನ್ನಾದರು ಸಾಧಿಸಬೇಕು ಅದಕ್ಕೆ ನೆರವು ನಮ್ಮ ಸರ್ಕಾರದಿಂದ ಸಿಗಬೇಕು ಎಂಬುದು ಸತ್ಯವಾಗಬೇಕು.

ಬುಧವಾರ, ಮಾರ್ಚ್ 4, 2009

'ಅವನೊಬ್ಬನಿದ್ದ ಗೋಡ್ಸೆ' ಸಕತ್ ಆಗಿದೆ

ಇತ್ತೀಚೆಗೆ ನಾನು ಓದಲು ಶುರು ಮಾಡಿರುವ ರವಿ ಬೆಳೆಗೆರೆಯವರ ಅನುವಾದಿತ ಕೃತಿ ಮನೋಹರ ಮಳಗಾವಂಕರರ 'ಅವನೊಬ್ಬನಿದ್ದ ಗೋಡ್ಸೆ' ಸಕತ್ ಆಗಿದೆ ಅಪರೂಪವಾದ ಅ ದಿನಗಳ ಪೋಟುಗಳನ್ನೂ ಇತಿಹಾಸದ ಚಿತ್ರಣದ ಜೊತೆ ಕೊಟ್ಟಿದ್ದಾರೆ. ಪುಟ ಪುಟವು ಆಕರ್ಷಕವಾಗಿ ಹಿಡಿದಿಟ್ಟು ಓದುಗರಿಗೆ ರೋಮಾಂಚನವನ್ನು ಉಂಟು ಮಾಡುತ್ತಾ ಪೂರ್ತಿಯಾಗಿ ಓದುವವರೆಗೂ ನಮ್ಮನ್ನು ಅಲ್ಲಿಯೇ ನಿಲ್ಲಿಸುತ್ತದೆ.

ನಾವು ನೀವೆಲ್ಲಾ ಓದಿರುವ ಇತಿಹಾಸ ಒಂದು ಕಡೆಯಾದರೆ ಇಲ್ಲಿ ಬೇರೆಯಾದ ಇತಿಹಾಸದ ದಿನಗಳನ್ನು ಮೆಲುಕು ಹಾಕುವ ಸಂಭ್ರಮ ಮತ್ತು ತಲ್ಲಣ ನಮ್ಮದಾಗಲಿದೆ. ೧೫ ಅಗಸ್ಟ್ ೪೭ ರ ನಂತರದ ಹಸಿ ಹಸಿ ಘಟನೆಗಳ್ಹ ಕರಾಳ ಛಾಯೆಯನ್ನು ತಮ್ಮ ದಿಟ್ಟವಾದ ಸಾಲುಗಳಲ್ಲಿ ಮನ ಮುಟ್ಟುವ ರೀತಿ ಚಿತ್ರಿಸಿರುವುದು ರವಿ ಬೆಳೆಗೆರೆಯವರ ಮಾಂತ್ರಿಕ ಬರವಣಿಗೆಯಲ್ಲಿ ವಿಭಿನ್ನವಾಗಿ ಮೊಡಿ ಬಂದಿದೆ.

ಭಾರತೀಯತೆ ಅಂದು ಹೇಗೆ ಇತ್ತು ಮತ್ತು ಅದಕ್ಕಾಗಿ ಅಂದು ಹೋರಾಡಿದ ನಮ್ಮ ಜನಗಳ ಮನ ಸ್ಥಿತಿಯನ್ನು ಗೋಡ್ಸೆ ಮತ್ತು ಅವನ ಅನುಯಾಯಿಗಳ ಮೂಲಕ ಪ್ರಕಟಿಸಿದ್ದಾರೆ. ಹಿಂದುತ್ವ ಅಂದರೆ ಏನು ಮತ್ತು ಅದು ಎಲ್ಲಿ ಎಂದು ಯಾವ ದಾರಿ ಹಿಡಿಯಿತು ಎಂಬುದನ್ನು ಮಹಾತ್ಮನ ಮರಣದಿಂದ ಭಾರತದಲ್ಲಿ ಉಂಟಾದ ಬದಲಾವಣೆ, ಚಿಂತನೆ ಎಲ್ಲವನ್ನು ಜೀವಂತವಾಗಿ ನಮ್ಮ ಮುಂದೆ ನಿಲ್ಲಿಸಿದ್ದಾರೆ.

ಪ್ರಾಥಮಿಕ ಶಾಲೆಗಳಲ್ಲಿ ನಾವುಗಳು ಪಠಿಸಿದ ಇತಿಹಾಸ ಪಾಠಕ್ಕೂ ಇಲ್ಲಿ ಇರುವ ನೈಜ ಇತಿಹಾಸಕ್ಕೂ ಎಲ್ಲಿ ಎಲ್ಲಿಯ ಸಂಬಂಧ ಎಂಬುವಂತೆ ಕಾಡುತ್ತದೆ . ಪ್ರತಿಯೊಬ್ಬರೂ ಒಮ್ಮೆ ಓದಲೇ ಬೇಕಾದ ಈ ಕೃತಿಯಾಗಿದೆ. ಮಳಗಾವಂಕರರ ಇನ್ನೂ ಈ ರೀತಿಯ ಪುಸ್ತಕಗಳು ಕನ್ನಡಕ್ಕೆ ರವಿಯವರ ಮೂಲಕ ಕನ್ನಡಕ್ಕೆ ಅರ್ಪಣೆಯಾಗಲಿ ಎಂದು ಹಾರೈಸುವೆ.

ಮಂಗಳವಾರ, ಮಾರ್ಚ್ 3, 2009

ಜನ ಸಮಾನ್ಯರಿಲ್ಲದಿದ್ದರೆ ಚಿತ್ರರಂಗ?

ಜನ ಸಾಮಾನ್ಯರಿಲ್ಲದಿದ್ದರೆ ಚಿತ್ರರಂಗ ಇಲ್ಲ ಇದು ಅಕ್ಷರಶಃ ಸತ್ಯ ಆದರೆ ನಾನು ನನ್ನ ಜೊತೆಯ ಗೆಳೆಯರು ಅಮೃತ ಮಹೋತ್ಸವ ಕಾರ್ಯ ಕ್ರಮವನ್ನು ಸವಿಯಲು ಅರಮನೆ ಮೈದಾನಕ್ಕೆ ಹೋದರೆ ಅಲ್ಲಿ ಪಾಸ್ ಇದ್ದವರಿಗೆ ಮಾತ್ರ ಪ್ರವೇಶ ಎಂಬ ಕಾನೂನು ನಮಗೆಲ್ಲಾ ಭ್ರಮನಿರಾಸನಗೊಳಿಸಿತು. ಅಪರೂಪದ ಇಂಥ ಕಾರ್ಯ ಕ್ರಮಗಳಿಗೆ ಸರ್ವರಿಗೂ ಆತ್ಮಿಯ ಪ್ರವೇಶ ಇರಬೇಕಾಗಿದ್ದು ನಿಜವಾದದ್ದು.

ಸಾಹಿತ್ಯ ಸಮ್ಮೇಳನಗಳು ಇದಕ್ಕೆ ಹೊರತಾಗಿರುವುದು ಅಭಿಮಾನದ ಸಂಗತಿ, ಅಲ್ಲಿ ಸರ್ವರೂ ಸಮಾನವಾಗಿ ಜಾತ್ರೆಯ ಸಂಭ್ರಮವನ್ನು ಅನುಬವಿಸುವ ರೀತಿ ರೂಪಿಸಿರುತ್ತಾರೆ. ಕನ್ನಡ ಚಿತ್ರರಂಗ ಸಂಪೂರ್ಣವಾಗಿ ಜನರನ್ನು, ಅಭಿಮಾನಿ ದೇವರುಗಳನ್ನು ನಿರ್ಲಕ್ಷಿಸಿದ್ದು ಬೇಸರದ ಸಂಗತಿ.

ಗುಂಪಿನಲ್ಲಿ ಬೆತ್ತದ ರುಚಿಯಾ ಬಾಗ್ಯ ದೂರೆತದ್ದೆ ಸಂಭ್ರಮ.

ಜೈ ಕನ್ನಡಾಂಬೆ!!

ಗುರುವಾರ, ಜನವರಿ 15, 2009

ಮತ್ತೇ ಜನಕ್ಕೆ ಸಂಭ್ರಮ

ಮತ್ತೇ ಜನಕ್ಕೆ ಸಂಭ್ರಮಪಡಲು ದುರ್ಗದ ಮೊದಲ ಕಾರಣವಾಗಿ ಕನ್ನಡ ಸಾಹಿತ್ಯ ಸಮ್ಮೇಳನ ಇದೇ ತಿಂಗಳ ಕೊನೆಯಲ್ಲಿ ಸಡಗರದಿಂದ ಪ್ರಾರಂಭವಾಗುತ್ತಿದೆ. ದುರ್ಗ ಇತಿಹಾಸದ ಕಾಲದಿಂದಲೂ ಹಲವಾರು ಐತಿಹಾಸಿಕ ಕಾರಣ, ಘಟನೆಗಳಿಗೆ, ವಿಚಾರಗಳಿಗೆ, ವ್ಯಕ್ತೀಗಳಿಗೆ, ವೀರ ಸಂಸ್ಕೃತಿಗೆ ಸಾಕ್ಷಿಯಾಗಿ ಪ್ರತಿಯೊಂದು ದುರ್ಗದ ಬಂಡೆ ಕಲ್ಲುಗಳು, ಮಣ್ಣು ಅದರ ಹಿರಿಮೆಯನ್ನು ಪ್ರತಿಪಲಿಸುತ್ತಿವೆ. ಈ ಎಲ್ಲಾ ಹೆಮ್ಮೆಯ ವಿಚಾರಗಳಿಗೆ ಕೀರಿಟ ಪ್ರಾಯವಾಗಿ ಈ ಕಾರ್ಯಾಕ್ರಮ ನಡೆಯುತ್ತಿರುವುದು ಕನ್ನಡಿಗರ ಕನಸಾಗಿತ್ತು ಇಂದು ಅದು ನಿಜಾವಾಗುವ ಕಾಲ ಬಂದಿದೆ. ಇದರಲ್ಲಿ ಸಂಭ್ರಮದಿಂದ ಪಾಲ್ಗೂಣ ಅಲ್ಲವಾ?

ಮಂಗಳವಾರ, ಜನವರಿ 6, 2009

ಹೊಸ ವರುಷ ಬರುವ ದಿನಗಳ ಮೇಲೆ..

ಹೊಸ ವರುಷ ಬರುವ ದಿನಗಳ ಮೇಲೆ..


ಮತ್ತೆ ಹೊಸ ಭರವಸೆ
ಮತ್ತೆ ಹೊಸ ಕಿರಣದ ಒಳಪು
ಏನೋ ಸಂಭ್ರಮ ಏನೋ ಸಡಗರ
ಬರುವ ದಿನಗಳ ಮೇಲೆ..

ಕಳೆದ ಗಳಿಗೆಗಳ ಬಗ್ಗೆ
ಕೊಂಚ ಬೇಸರ
ಕೊಂಚ ಅನಂದ
ಇದೆ ಅಲ್ಲವಾ ಜೀವನದ ನಾಡಿ
ಬರುವ ದಿನಗಳ ಮೇಲೆ..

ತಿರುಗುವ ಕಾಲದಲ್ಲಿ ನಿಲ್ಲುವರಾರು
ಬರುವ ಕಾಲದಲ್ಲಿ ಸಿಗುವವರಾರು
ಅಸೆ ಮಹದಾಸೆಯ ಆಶ ಕಿರಣ
ಬರುವ ದಿನಗಳ ಮೇಲೆ..

ಬದುಕಿನ ಬಾಳ ಮರ್ಮ ಕಾಲದ ಜೊತೆ
ಹೊಸ ಬದುಕು ಹೊಸ ಬಾಳು ಪುನಃ ಪುನಃ
ಸಾಗಬೇಕು ನಮ್ಮ ನಮ್ಮ ಗುರಿಯ ಪಯಣ
ಬರುವ ದಿನಗಳ ಮೇಲೆ..

ಹೋರಾಟ ಬಾಳಿಗಾಗಿ ಕಾಲದ ಜೊತೆ
ಹೋರಾಟ ನಲ್ಮೆಯ ಶಾಂತಿಗಾಗಿ
ಬೇಕು ನಮ್ಮ ನಮ್ಮಲ್ಲಿ ಹಕ್ಕಿ ಪಕ್ಕಿಗಳ ಕಲರವ
ಬರುವ ದಿನಗಳ ಮೇಲೆ..

ತಲಾಶ್

ತಲಾಶ್ !